ಭಾಗ್ಯನಗರದಲ್ಲಿ ಯಕ್ಷಗಾನದ ಕಂಪು


Team Udayavani, Nov 22, 2019, 4:00 AM IST

pp-11

ಭಾಗ್ಯನಗರದ ಪ್ರಥಮ ಮೇಳ ಯಕ್ಷ ನಾಟ್ಯ ರಂಗದವರು ಇತ್ತೀಚೆಗೆ ಕುಶ-ಲವ ಎಂಬ ಆಖ್ಯಾನವನ್ನು ಪ್ರದರ್ಶಿಸಿದರು. ಶ್ರೀ ರಾಮಚಂದ್ರನ ಅಶ್ವಮೇಧ ಯಾಗದ ದಿಗ್ವಿಜಯದಲ್ಲಿ ಅಶ್ವದ ಬೆಂಗಾವಲಿಗನಾಗಿ ಶತ್ರುಘ್ನನ ಜೊತೆಯಲ್ಲಿ ಹೊರಟು ನಿಂತವನು ಲಕ್ಷ್ಮಣನ ಮಗನಾದ ಚಂದ್ರಕೇತು.ಮಹರ್ಷಿ ವಾಲ್ಮೀಕಿಯ ಆಶ್ರಮದ ಬಳಿ ಬಂದ ಅಶ್ವವನ್ನು , ಲವನು ಕಟ್ಟಿ ಹಾಕಿ ಶತ್ರುಘ್ನನಲ್ಲಿ ಯುದ್ಧವನ್ನು ಸಾರುತ್ತಾನೆ.ಶತ್ರುಘ್ನನು ಲವನನ್ನು ಸೋಲಿಸಿ ಬಂಧಿಯನ್ನಾಗಿಸಿ ತನ್ನ ರಥದಲ್ಲಿ ಕರೆದೊಯ್ಯುತ್ತಾನೆ. ಮಾತೆ ಸೀತೆಯ ಅಳುವನ್ನು ಕಂಡ ಕುಶನು ತಮ್ಮನಾದ ಲವನನ್ನು ಬಿಡಿಸಿಕೊಂಡು ಬರಲು ಮುಂದಾಗುತ್ತಾನೆ.ಕುಶನು ಶತ್ರುಘ್ನನ ಸೇನೆಯನ್ನು ಸದೆಬಡಿಯುತ್ತಾನೆ.ಕುಶ-ಲವರು ಒಂದಾಗಿ ಲಕ್ಷ್ಮಣನನ್ನು ಸೋಲಿಸುತ್ತಾರೆ. ತನ್ನವರೆಲ್ಲರೂ ಸೋತು ಹೋದ ವಾರ್ತೆಯನ್ನು ಕೇಳಿ ಅಶ್ವಮೇಧ ಯಾಗದ ದೀಕ್ಷೆಯಲ್ಲಿ ಕುಳಿತ ಶ್ರೀ ರಾಮನು ತಾನೇ ಸ್ವತಃ ವಾಲ್ಮೀಕಿ ಆಶ್ರಮದ ಕಡೆಗೆ ನಡೆಯುತ್ತಾನೆ. ಯುದ್ಧದಲ್ಲಿ ಸೋತು ಧರೆಗುರುಳಿದ ತನ್ನ ತಮ್ಮಂದಿರನ್ನು ಕಂಡು ಮಮ್ಮಲ ಮರುಗುತ್ತಾನೆ.ಕುಶ-ಲವರ ಸಾಹಸದ ಪರಿಗೆ ಅಚ್ಚರಿ ಪಡುತ್ತಾನೆ.ಬಾಲಕರಿಂದ ರಾಮಾಯಣದ ಕಥೆಯನ್ನು ಕೇಳಿ ಆನಂದಿಸುತ್ತಾನೆ.ಹಯವನ್ನು ಮರಳಿ ಕೊಡಲೊಪ್ಪದ ಕುಶ-ಲವರಲ್ಲಿ ಯುದ್ಧಕ್ಕೆ ಮುಂದಾದಾಗ ವಾಲ್ಮೀಕಿ ಮಹರ್ಷಿ ತಡೆದು ಕುಶ-ಲವರು ರಾಮ-ಸೀತೆಯರ ಪುತ್ರರು ಎಂಬುದನ್ನು ಅರುಹಿ, ಮುಂದೊಂದು ದಿನ ತಾನೇ ಮಕ್ಕಳನ್ನು , ಸೀತೆಯನ್ನು ಅಯೋಧ್ಯೆಗೆ ಕರೆತರುವುದಾಗಿ ಹೇಳಿ ಕಥಾಭಾಗಕ್ಕೆ ಮಂಗಳವನ್ನು ಹಾಡುತ್ತಾರೆ.

ಸಾಂಪ್ರದಾಯಿಕವಾಗಿ ಶತ್ರುಘ್ನ , ಚಂದ್ರಕೇತು ಮುಂತಾದವರ ತೆರೆ ಕುಣಿತದಿಂದ ಪ್ರಸಂಗ ಪ್ರಾರಂಭ.ಲವಲವಿಕೆಯ ಲವನಾಗಿ ವಿನಯಾ ಅನಂತಕೃಷ್ಣ ಚುರುಕಿನ ನಾಟ್ಯ,ಮಂಡಿ,ಗಿರಕಿಗಳಿಂದ ವೃತ್ತಿಪರ ಕಲಾವಿದರಿಗೆ ಸರಿಸಾಟಿಯಾಗಿ ಅಭಿನಯಿಸಿದರು.ಕುಶನಾಗಿ ಕೌಶಲ್ಯವನ್ನು ಮೆರೆದವರು ಸುವರ್ಣ ಬದ್ರಿಪ್ರಸಾದ್‌ .ಬಡಗಿನ ಸಂಪ್ರದಾಯ ಬದ್ಧವಾದ ನಾಟ್ಯಗಳಿಂದ ಬೆರಗು ಮೂಡಿಸಿದರು. ಶತ್ರುಘ್ನನಾಗಿ ಗಾಂಭೀರ್ಯದ ನಡೆ-ನುಡಿ,ಗತ್ತುಗಾರಿಕೆಯಿಂದ ಮೆರೆದವರು ಜ್ಯೋತಿ ಸುನೀಲ…. ಲಕ್ಷ್ಮಣನಾಗಿ ಲಕ್ಷಣವಾಗಿ ಕಾಣಿಸಿಕೊಂಡವರು ಮಂಜುಳಾ ಭಟ್‌.ರಾಮನಾಗಿ ರಮಾ ಗೋಪಾಲಕೃಷ್ಣ ಕ್ರೋಧ,ಶಾಂತ,ಕರುಣ ರಸವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.ಸೀತೆಯಾಗಿ ಸುಮತಿ ನಿರಂಜನ್‌ ಉತ್ತಮವಾಗಿ ಅಭಿನಯಿಸಿದರು.ಆಂಗಿಕ ಅಭಿನಯ,ಆಹಾರ್ಯದಿಂದ ಹಾಸ್ಯ ರಸವನ್ನು ಉಣಬಡಿಸಿದವರು ಮಮತಾ ರಘುಪತಿ. ಮುನಿ ವಾಲ್ಮೀಕಿಯಾಗಿ ರಘುಪತಿ ಭಟ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಯಕ್ಷಗಾನವೇ ನರನಾಡಿಗಳಲ್ಲಿ ಹರಿಯುತ್ತಿದೆ.ಒಂದು ಅವಕಾಶಕ್ಕಾಗಿಯೇ ಕಾಯುತ್ತಿದ್ದೆವು ಎಂದು ತೋರ್ಪಡಿಸಿಕೊಟ್ಟದ್ದು ಚಂದ್ರಕೇತುವಾಗಿ ಅಭಿನಯಿಸಿದ ಪ್ರಣವ್‌ ಬೆಳ್ಮಣ್ಣು ಮತ್ತು ಕುಮಾರಿ ನೇಹಾರ ಅಭಿನಯ. ಲವನ ಸಹಪಾಠಿಗಳಾಗಿ ಕೌಸ್ತುಭ ಬೆಳ್ಮಣ್ಣು ಮತ್ತು ಆದಿ ಶಂಕರ ತಾವು ಉದಯೋನ್ಮುಖ ಕಲಾವಿದರೆಂಬುದನ್ನು ಶ್ರುತ ಪಡಿಸಿದರು.ಅಶ್ವವಾಗಿ ಸಹಕರಿಸಿದವರು ಮಾ| ಅಕ್ಷತ್‌ ಮತ್ತು ಡಾ| ಮಹದೇವ್‌ ಭಟ್‌. ಮದ್ದಲೆಗಾರರಾದ ಸಕ್ಕಟ್ಟು ರಾಘವೇಂದ್ರ ಭಟ್‌ ಶಿಬಿರಾರ್ಥಿಗಳಿಗೆ ಒಂದು ವಾರದ ಕಾಲ ಪ್ರಸಂಗದ ನಡೆಯನ್ನು ಹೇಳಿಕೊಟ್ಟರು.ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕರೆದೊಯ್ದವರು ಭಾಗವತರಾದ ಉದಯ ಕುಮಾರ್‌ ಹೊಸಾಳ.ಉದಯ ಕುಮಾರ್‌ ಐರೋಡಿ ಚೆಂಡೆಯಲ್ಲಿ ಸಹಕರಿಸಿದರು.

ರಮಾದೇವಿ ಹೈದರಾಬಾದ್‌

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.