ಯಕ್ಷನಿಧಿಯ ಸತ್ವ ಪರೀಕ್ಷೆ – ಪುಷ್ಪ ವಿಲಾಸ – ಅಭಿಮನ್ಯು ಕಾಳಗ
ಯಕ್ಷಗಾನ ವಿದ್ಯಾರ್ಥಿಗಳ ಪ್ರಸ್ತುತಿ
Team Udayavani, Jul 19, 2019, 5:00 AM IST
ಕ್ಷತ್ರಿಯ ಧರ್ಮಕ್ಕನುಸಾರವಾಗಿ ಗಯನನ್ನು ಉಳಿಸಲು ಕೃಷ್ಣನಲ್ಲೇ ಯುದ್ಧ ಮಾಡುತ್ತಾನೆ. ಕೃಷ್ಣನು ಮಾಡಿದ ಸತ್ವ ಪರೀಕ್ಷೆಯಲ್ಲಿ ಅರ್ಜುನನು ತೇರ್ಗಡೆಯಾಗುತ್ತಾನೆ. ಈ ಕಥಾಹಂದರದ ಪ್ರಸಂಗವನ್ನು ಎರಡು ತಾಸುಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ನಿರ್ವಹಿಸಿದರು.
ಮೂಡಬಿದಿರೆಯ ಯಕ್ಷನಿಧಿ ಸಂಸ್ಥೆ ತನ್ನ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 100ಕ್ಕೂ ಮಿಕ್ಕಿದ ಮಕ್ಕಳೇ ಪ್ರಸ್ತುತ ಪಡಿಸಿದ ಯಕ್ಷಗಾನ ಸತ್ವ ಪರೀಕ್ಷೆ – ಪುಷ್ಪವಿಲಾಸ – ಅಭಿಮನ್ಯು ಕಾಳಗ ಯಶಸ್ವಿಯಾಯಿತು. ಚುರುಕಿನ ಸಾಂಪ್ರದಾಯಿಕ ಹೆಜ್ಜೆ , ಹದವರಿತ ಮಾತು ಹಾಗೂ ಭಾವಾಭಿನಯದ ಮೂಲಕ ಮಕ್ಕಳು ಚೆನ್ನಾಗಿ ನಿರ್ವಹಿಸಿದರು.
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾಮರ್ಥ್ಯ ಎಷ್ಟು ಎಂಬುದನ್ನು ಸ್ವತಃ ಪರೀಕ್ಷಿಸಲು ಶ್ರೀಕೃಷ್ಣನು ಹೂಡಿದ ನಾಟಕವೇ ಸತ್ವಪರೀಕ್ಷೆ . ಗಯನ ಹಯದ ಬೆವರು ತನ್ನ ಅಘದಲ್ಲಿ ಬಿತ್ತು ಎಂದು ತಿಳಿದ ಕೃಷ್ಣನು ಗಯನನ್ನು ಎಂಟು ದಿನದೊಳಗೆ ಕೊಲ್ಲುತ್ತೇನೆ ಎಂಬ ಶಪಥ ಮಾಡುತ್ತಾನೆ . ನಾರದರಿಂದ ವಿಷಯ ತಿಳಿದ ಗಯನು ಅರ್ಜುನನಲ್ಲಿ ಪ್ರಾಣಭಿಕ್ಷೆ ಕೇಳಿದಾಗ , ವಿಷಯ ಅರಿಯದ ಅರ್ಜುನನು,ಗಯನಿಗೆ ಪ್ರಾಣಭಿಕ್ಷೆಯ ಅಭಯ ನೀಡುತ್ತಾನೆ .
ಕ್ಷತ್ರಿಯ ಧರ್ಮಕ್ಕನುಸಾರವಾಗಿ ಗಯನನ್ನು ಉಳಿಸಲು ಕೃಷ್ಣನಲ್ಲೇ ಯುದ್ಧ ಮಾಡುತ್ತಾನೆ. ಕೃಷ್ಣನು ಮಾಡಿದ ಸತ್ವಪರೀಕ್ಷೆಯಲ್ಲಿ ಅರ್ಜುನನು ತೇರ್ಗಡೆಯಾಗುತ್ತಾನೆ. ಈ ಕಥಾಹಂದರದ ಪ್ರಸಂಗವನ್ನು ಎರಡು ತಾಸುಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ನಿರ್ವಹಿಸಿದರು .
ಕೃಷ್ಣನಾಗಿ ತ್ರಿತಾ ಶೆಟ್ಟಿ ಹಾವಭಾವ , ನಾಟ್ಯ , ಸಂಭಾಷಣೆಗಳಲ್ಲಿ ಪ್ರಬುದ್ಧತೆ ತೋರಿದರು. ಅರ್ಜುನನಾಗಿ ಆದರ್ಶ ಅವರದು ಉತ್ತಮ ನಿರ್ವಹಣೆ. ಕ್ಷತ್ರಿಯ ಧರ್ಮವನ್ನು ಪಾಲಿಸುವಲ್ಲಿಯ ಕಠಿನತೆ , ತನ್ನ ದೇವನಾದ ಕೃಷ್ಣನನ್ನು ಯುದ್ಧದಲ್ಲಿ ಎದುರಿಸಬೇಕಾದ ಸಂದಿಗ್ಧತೆಯ ಅರ್ಜುನನ ಮಾನಸಿಕ ತುಮುಲವನ್ನು ಸಮರ್ಥವಾಗಿ ಬಿಂಬಿಸಿದರು. ಸುಭದ್ರೆಯಾಗಿ ಕು|ಪ್ರೇಮಾ ಬಂಗೇರ ನಿರ್ವಹಣೆ ವೃತ್ತಿಪರರ ಮಟ್ಟದಲ್ಲಿತ್ತು. ಅರ್ಜನ -ಸುಭದ್ರೆಯರ ಸಂಭಾಷಣೆ ಭಾವಪೂರ್ಣವಾಗಿತ್ತು . ಭೀಮನಾಗಿ ಸಂಚಿತಾ ರಾವ್ , ಬಲರಾಮನಾಗಿ ಪ್ರತಿಭಾ ಸುವರ್ಣ ಕಥೆಗೆ ಪೂರಕವಾಗಿ ಅಭಿನಯಿಸಿ ಮನ ಗೆದ್ದರು . ರುಕ್ಮಿಣಿಯಾಗಿ ಪ್ರಕೃತಿ ಮಾರೂರು ,ಮಕರಂದನಾಗಿ ಸಂತೋಷ್ ಇರುವೈಲು , ದೂತಿಯಾಗಿ ಹರ್ಷಿತಾ ಶೆಟ್ಟಿ ಉತ್ತಮ ಹಾಸ್ಯದ ಮೂಲಕ ಮಿಂಚಿದರು .
ಕೃಷ್ಣನು ಸತ್ಯಭಾಮೆಗಾಗಿ ಸ್ವರ್ಗಲೋಕದಿಂದ ಪಾರಿಜಾತ ವೃಕ್ಷವನ್ನು ತರುವ ಕಥಾವಸ್ತುವೇ “ಪುಷ್ಪ ವಿಲಾಸ’ . ಕೃಷ್ಣನಾಗಿ ಪಂಚಮಿ ಮಾರೂರುರವರ ಪ್ರಸ್ತುತಿ ಅತ್ಯುತ್ತಮವಾಗಿತ್ತು . ನಾಟ್ಯ , ಆಂಗಿಕ ಚಲನೆ , ಮಾತುಗಾರಿಕೆಯಲ್ಲಿ ಸಮನ್ವಯತೆಯೊಂದಿಗೆ ನೀಡಿದ ಕೃಷ್ಣನ ಚಿತ್ರಣ ಆಕರ್ಷಿಸಿತು . ಸತ್ಯಭಾಮೆಯ ಹಠ , ಅಹಂಕಾರವನ್ನು ಚೈತ್ರಾ ಜಿ.ಬಂಗೇರ ಚಿತ್ರಿಸಿದರು.ನರಕಾಸುರನ ಪಾತ್ರದಲ್ಲಿ ರಂಜಿತ್ ಶೆಟ್ಟಿ ಪರಂಪರೆಯ ಬಣ್ಣದ ವೇಷದಲ್ಲಿ ಮಿಂಚಿದರು .
ಮೂರನೇ ಪ್ರಸಂಗ “ಅಭಿಮನ್ಯು ಕಾಳಗ’.ಕುಣಿತವೇ ಪ್ರಧಾನ ಆಗಿರುವ ಈ ಪ್ರಸಂಗ ಹವ್ಯಾಸಿಗಳಿಗೆ ಕಬ್ಬಿಣದ ಕಡಲೆಕಾಯಿಯೇ ಹೌದು. ಆದರೂ ಯಕ್ಷನಿಧಿಯ ವಿದ್ಯಾರ್ಥಿಗಳು ಈ ಪ್ರಸಂಗವನ್ನು ಅಂದವಾಗಿ ಪ್ರಸ್ತುತಗೊಳಿಸಿದರು . ಮುಖ್ಯ ಪಾತ್ರ ಅಭಿಮನ್ಯು ಮೂವರು ಕಲಾವಿದರಿಂದ ಪ್ರಸ್ತುತವಾಯಿತು .ಮೊದಲ ಅಭಿಮನ್ಯುವಾಗಿ ಜಿತೇಶ್ ಉತ್ತಮ ನಾಟ್ಯ , ದಿಗಿಣಗಳಿಂದ ಮಿಂಚಿದರು . ಪ್ರತೀ ಪದ್ಯಕ್ಕೂ 50ರ ಮೇಲೆ ದಿಗಿಣ ತೆಗೆದು ಕರತಾಡನ ಗಿಟ್ಟಿಸಿದರು . ಸುಭದ್ರೆಯೊಡನೆ ಸಂಭಾಷಣೆಯ ಅಭಿಮನ್ಯು ಆಗಿ ಕೇಂದ್ರದ ಗುರುಗಳಾದ ಶಿವಕುಮಾರರೇ ಕಾಣಿಸಿಕೊಂಡರು . ಸುಭದ್ರೆಯಾಗಿ ಪವನ್ ಕುಮಾರ್ ಪ್ರಸ್ತುತಿ ಭಾವನಾತ್ಮಕವಾಗಿ ಮೂಡಿಬಂತು .
ಕೊನೆಯ ಅಭಿಮನ್ಯು ಆಗಿ ಅಮೃತ್ ಪುತ್ತಿಗೆ ನಾಟ್ಯ , ಹಾವಭಾವ , ವೀರರಸಗಳಿಗೆ ನೀಡಿದ ಕುಣಿತಗಳಿಂದ ಮಿಂಚಿದರು . ಕೈ ಕಡಿದ ಸನ್ನಿವೇಶದಲ್ಲಿ ಕೈಯನ್ನು ಹಿಂದಕ್ಕೆ ಹಿಡಿದು 70ಕ್ಕೂ ಹೆಚ್ಚು ದಿಗಿಣ ತೆಗೆದು , ತಾನೂ ವೃತ್ತಿಪರರಿಗೆ ಕಡಿಮೆಯಲ್ಲ ಎಂದು ನಿರೂಪಿಸಿದರು . ದ್ರೋಣನಾಗಿ ಸಂದೀಪ್ ಪುತ್ತಿಗೆ , ಕೌರವನಾಗಿ ಪ್ರದೀಪ ಆಚಾರ್ಯರು, ದುಶ್ಯಾಸನನಾಗಿ ಪ್ರತೀಕ್ ಸಾಲಿಯಾನ್ ಉತ್ತಮವಾಗಿ ನಿರ್ವಹಿಸಿದರು.
ಭಾಗವತಿಕೆಯಲ್ಲಿ ಪುಣಿಚಿತ್ತಾಯ, ಶ್ರೀನಿವಾಸ ಬಳ್ಳಮಂಜ, ಶಿವಪ್ರಸಾದ್ ಎಡಪದವು, ಚೆಂಡೆ ಮದ್ದಲೆಯಲ್ಲಿ ನೇರೋಳು, ಪಡ್ರೆದ್ವಯರು, ಆನಂದ ಗುಡಿಗಾರ್ , ಸವಿನಯರ ನಿರ್ವಹಣೆ ಅತ್ಯುತ್ತಮವಾಗಿತ್ತು .
ಯಕ್ಷನಿಧಿಯ ವಿದ್ಯಾರ್ಥಿಗಳು ನೀಡುವ ಪ್ರಸ್ತುತಿ ವೃತ್ತಿಪರ ಕಲಾವಿದರ ಮಟ್ಟದಲ್ಲೇ ಇದೆ ಎಂಬುದು ಉಲ್ಲೇಖನೀಯ .
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.