ನಿಯಮ ಪಾಲನೆ ಮಹತ್ವ ಸಾರಿದ ಯಮದಂಡ


Team Udayavani, Aug 30, 2019, 5:00 AM IST

f-10

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮರಣಾ ನಂತರ ಯಮಲೋಕದಲ್ಲೂ ಕಠಿಣ ದಂಡನೆಗೆ ಒಳಗಾಗಬೇಕಾಗುತ್ತದೆ. ಇದು ಸ್ವಾತಂತ್ರ್ಯ ದಿನಾಚರಣೆಯಂದು ಉಡುಪಿಯ ಪುರಭವನದಲ್ಲಿ, ರಸ್ತೆ ಸುರಕ್ಷತೆಯ ಅರಿವಿಗಾಗಿ ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ “ಯಮದಂಡ’ ಯಕ್ಷಗಾನದ ತಿರುಳು.

ಯಮಲೋಕಕ್ಕೆ ಆಗಮಿಸಿದ ಜೀವಾತ್ಮಗಳ ಪಾಪ ಪುಣ್ಯಗಳ ಪರಿಶೀಲನೆ ನಡೆಸುತ್ತಿರುವ ಯಮ, ಮನುಷ್ಯ ಆತ್ಮವೊಂದು ಬಂದ ಸಂದರ್ಭದಲ್ಲಿ ಆತನ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ನೀಡುವಂತೆ ಚಿತ್ರಗುಪ್ತನಲ್ಲಿ ಕೇಳುತ್ತಾನೆ. ಭೂಲೋಕದಲ್ಲಿನ ಧನಿಕನೋರ್ವನ ಏಕೈಕ ಪುತ್ರ, ಶಾಲಾ ವಿದ್ಯಾರ್ಥಿ, ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿದ್ದ ಈತ ವಾಹನ ಚಾಲನೆಯ ಪರವಾನಗಿ ಪಡೆಯದೇ ಹೆಲ್ಮೆಟ್‌ ಧರಿಸದೆ ಅತಿ ವೇಗದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ದಾರಿಯಲ್ಲಿ ಹೋಗುತ್ತಿದ್ದ ನಿರಪರಾಧಿ ಬಾಲಕನಿಗೆ ಢಿಕ್ಕಿ ಹೊಡೆದು ಅವನ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೆ ಅದೇ ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಈತನೂ ಮೃತಪಟ್ಟಿದ್ದಾನೆ ಎಂದು ವಿವರಿಸುತ್ತಾನೆ.

ಕೂಡಲೇ ರೋಷಗೊಂಡ ಯಮ ಇತ್ತೀಚೆಗೆ ಯಮಲೋಕಕ್ಕೆ ಭೂಲೋಕದಿಂದ ಅಪಘಾತಗಳಿಂದ ಮೃತಪಟ್ಟ ಪ್ರೇತಾತ್ಮಗಳೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಭೂ ಲೋಕದಲ್ಲಿರುವ ಜನರಿಗೆ ಸಂಚಾರಿ ನಿಯಮಗಳ ಅರಿವಿಲ್ಲವೆ , ಸರಕಾರದ ಅಧಿಕಾರಿಗಳು ನಿಯಮಗಳನ್ನು ರೂಪಿಸಿಲ್ಲವೆ, ನಿಯಮ ಉಲ್ಲಂ ಸುವವರಿಗೆ ದಂಡ ವಿಧಿಸುತ್ತಿಲ್ಲವೆ, ಏನು ನಡೆಯುತ್ತಿದೆ ಭೂ ಲೋಕದಲ್ಲಿ ಎಂದು ಪ್ರಶ್ನಿಸುತ್ತಾನೆ.

ಭೂ ಲೋಕದಲ್ಲಿ ವಾಹನ ಚಾಲನೆಯ ಪರವಾನಗಿ ಪಡೆಯದೇ ಇರುವುದಕ್ಕೆ, ಹೆಲ್ಮೆಟ್‌ ಧರಿಸದೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದಕ್ಕೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದಕ್ಕೆ, ಅಪಘಾತದಿಂದ ಮತ್ತೂಬ್ಬರ ಪ್ರಾಣ ಹಾನಿ ಮಾಡಿದ್ದಕ್ಕೆ ಇರುವ ದಂಡ ಮತ್ತು ಶಿಕ್ಷೆಗಳ ಬಗ್ಗೆ ವಿವರಿಸುತ್ತಾನೆ ಕಿಂಕರ.

ಭೂಲೋಕದ ಆಡಳಿತ ವ್ಯವಸ್ಥೆಯಲ್ಲಿ ಇಷ್ಟೆಲ್ಲಾ ಕ್ರಮ ನಿಯಮಗಳಿದ್ದರೂ, ಧನ ಬಲ ಹಾಗೂ ಅಹಂಕಾರದಿಂದ ನಿಯಮ ಪಾಲಿಸದ ಈತ ಪಾಪಿಯೇ ಸರಿ. ಅಪಘಾತ ಮಾಡಿ ಲೋಕದಲ್ಲಿ ಇನ್ನೂ ಬಾಳಿ ಬೆಳಗಬೇಕಾದ ಬಾಲಕನ ಹತ್ಯೆಗೆ ಕಾರಣನಾದ ಈತನನ್ನು ಕುಂಭಿಪಾಕ ನರಕಕ್ಕೆ ತಳ್ಳಿ ಆದೇಶಿಸುತ್ತಾನೆ ಯಮ.

ಅನಂತರ ಬಂದ ಮತ್ತೂಂದು ಆತ್ಮದ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ಪರಿಶೀಲಿಸುವ ಯಮ, ಭೂ ಲೋಕದಲ್ಲಿ ದುರುಳನಾಗಿ ಕಾಲ ಕಳೆದು, ನಾಲ್ಕು ಚಕ್ರದ ವಾಹನ ಹೊಂದಿದ್ದ ಈತ, ವಾಹನದ ಅವಧಿ ನವೀಕರಿಸದೆ, ವಾಹನಕ್ಕೆ ವಿಮೆ ಮಾಡಿಸದೆ,ವಾಹನ ಚಾಲನೆ ಸಮಯದಲ್ಲಿ ಸೀಟ್‌ ಬೆಲ್ಟ್ ಹಾಕದೆ, ಪಾನಮತ್ತನಾಗಿ ವಾಹನ ಚಲಾಯಿಸಿ, ವಿದ್ಯುತ್‌ ಕಂಬಕ್ಕೆ ಗುದ್ದಿ ಆ ಕಂಬ ಪಕ್ಕದ ಮನೆ ಮೇಲೆ ಬಿದ್ದು, ಆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣನಾಗಿ, ಅಲ್ಲಿಂದ ತಲೆ ಮರೆಸಿಕೊಂಡು ಜೀವನೋಪಾಯಕ್ಕೆ ಕಳ್ಳತನ, ದರೋಡೆ ಮಾಡುತ್ತಿದ್ದು, ಒಮ್ಮೆ ಅತಿಯಾಗಿ ಕುಡಿದು ರಸ್ತೆಯಲ್ಲಿ ನಡೆಯುವಾಗ, ಆಯ ತಪ್ಪಿ ವಾಹನದ ಕೆಳಗೆ ಬಿದ್ದು ಸಾವನಪ್ಪಿರುವುದನ್ನು ತಿಳಿದ ಯಮ ಕೆಡಕು ಎಂಬ ಎಚ್ಚರಿಕೆ ನುಡಿಯನ್ನು ಲೆಕ್ಕಿಸದೆ ಪಾನಮತ್ತನಾಗಿ ವಾಹನಘಾತದಿಂದ ಹತ್ತಾರು ಜನರನ್ನು ಬಲಿ ಪಡೆದ ಈತ ನಿಜವಾಗಿ ಪಾಪಿ ಈತನನ್ನು “ಕ್ರಿಮಿ ಭೋಜನ’ ನರಕಕ್ಕೆ ತಳ್ಳುವಂತೆ ಆದೇಶಿಸುತ್ತಾನೆ.

ಭೂ ಲೋಕದಲ್ಲಿ ಇಷ್ಟೊಂದು ರಸ್ತೆ ನಿಯಮಗಳು, ದಂಡ, ಶಿಕ್ಷೆ ಇದ್ದರೂ , ಜನರಿಗೆ ಇದರ ಬಗ್ಗೆ ಅರಿವು ಇದೆಯಾ, ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರಾ ಎಂದು ಪ್ರಶ್ನಿಸುತ್ತಾನೆ.

ಭೂ ಲೋಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಡೆ ಸೂಚನಾ ಫ‌ಲಕಗಳನ್ನು ಅಳವಡಿಸಿದ್ದಾರೆ, ಶಾಲಾ ಮಕ್ಕಳಿಗೆ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ, ಉಡುಪಿ ಎಂಬ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳ ಗೋಡೆಗಳ ಮೇಲೆ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಗಿದೆ, ಕಲಾಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ, ಆರಕ್ಷಕ ಇಲಾಖೆಯವರು ಕಿರುಚಿತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಸಂಚಾರ ನಿಯಮಗಳ ಉಲ್ಲಂಘನೆಗೆ ಅತೀ ಹೆಚ್ಚಿನ ದಂಡ ಮತ್ತು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿದೆ ಚಿತ್ರಗುಪ್ತ ವಿವರಿಸುತ್ತಾನೆ.

ಹಾಗಾದರೆ ಇನ್ನು ಮುಂದಾದರೂ ರಸ್ತೆ ಅಪಘಾತಗಳಿಂದ ಮೃತಪಟ್ಟು ಯಮಲೋಕ್ಕೆ ಬರುವ ಪ್ರೇತಾತ್ಮಗಳ ಸಂಖ್ಯೆ ಕಡಿಮೆಯಾಗಲಿ ಎಂದು ಯಮ ಹಾರೈಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಕಲಾಪೀಠ ಕೋಟ ಇವರು ಪ್ರಸ್ತುತ ಪಡಿಸಿದ ಈ “ಯಮದಂಡ’ವನ್ನು ಕೆ.ನರಸಿಂಹ ತುಂಗ ನಿರ್ದೇಶಿಸಿದ್ದು, ಪರಿಕಲ್ಪನೆ ಹಾಗೂ ಪ್ರಸಂಗ ರಚನೆ ನಾಗೇಶ್‌ ಶಾನುಬೋಗ್‌ (ನಿವೃತ್ತ ಶಿಕ್ಷಣಾಧಿಕಾರಿ), ಮೊಗೆಬೆಟ್ಟು ಇವರದ್ದು. ಯಮನ ಪಾತ್ರಧಾರಿಯಾಗಿ ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಅಸ್ಫಕ್‌ ಅಭಿನಯಿಸಿದ್ದು, ಯಮ ರೋಷಗೊಳ್ಳುವ ಸನ್ನಿವೇಶದಲ್ಲಿ ಅವರ ಅಭಿನಯ ಮೆಚ್ಚುಗೆ ಗಳಿಸಿತು. ಚಿತ್ರಗುಪ್ತನಾಗಿ ನರಸಿಂಹ ತುಂಗ ನವಿರಾದ ಹಾಸ್ಯದ ಮೂಲಕ ಮೆರಗು ತಂದರು.

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.