ಕೋವಿಡ್‌ ಸಮಯದಲ್ಲಿ ಮಾನಸಿಕ ಆರೋಗ್ಯ

10 ಅಕ್ಟೋಬರ್‌ ವಿಶ್ವ ಮಾನಸಿಕ ಆರೋಗ್ಯ ದಿನ

Team Udayavani, Oct 10, 2021, 6:45 AM IST

ಕೋವಿಡ್‌ ಸಮಯದಲ್ಲಿ ಮಾನಸಿಕ ಆರೋಗ್ಯ

ತನ್ನ ಹೆತ್ತವರು ತನಗೆ ಸ್ನೇಹಿತರ ಜತೆಗೆ ಆಟವಾಡಲು ಬಿಡುತ್ತಿಲ್ಲ ಎಂದು 14 ವರ್ಷದ ವಯಸ್ಸಿನ ಅನಯ್‌ಗೆ ಸಿಟ್ಟು. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಅತ್ಯಗತ್ಯ ಕಾರಣವಿಲ್ಲದೆ ಹೊರಗೆ ಹೋಗುವುದು ಸುರಕ್ಷಿತವಲ್ಲ ಎಂಬುದು ಅವನ ಹೆತ್ತವರ ವಾದ. ಅನಯ್‌ ಮತ್ತೆ ಮತ್ತೆ ಒತ್ತಾಯಿಸಿದಾಗ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಅವನಮ್ಮ ಹಠಮಾರಿ ಹುಡುಗನಾಗಿರುವುದಕ್ಕೆ ಮತ್ತು ತಾಯ್ತಂದೆ ಅನುಭವಿಸುತ್ತಿರುವ ಒತ್ತಡವನ್ನು ಅರ್ಥ ಮಾಡಿಕೊಳ್ಳದೆ ಇರುವುದಕ್ಕೆ ಅವನ ಮೇಲೆ ಕೂಗಾಡುತ್ತಾರೆ. ಆಕೆಗೆ ವರ್ಕ್‌ ಫ್ರಮ್ ಹೋಮ್‌ ಮತ್ತು ಮನೆಯ ಕೆಲಸಗಳನ್ನು ಏಕಕಾಲಕ್ಕೆ ನಿಭಾಯಿಸಿ ಸಾಕಾಗಿ ಹೋಗಿದೆ. ತಾನು ಉದ್ಯೋಗ ಕಳೆದುಕೊಂಡಿದ್ದು, ಹೊಸ ಉದ್ಯೋಗ ಹುಡುಕುವುದಕ್ಕೆ ಗಮನ ಹರಿಸಬೇಕಾದ ಕಾರಣ ಮನೆಯ ಯಾವುದೇ ಕೆಲಸಗಳಲ್ಲಿ ತಾನು ಪಾಲ್ಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಅನಯ್‌ನ ತಂದೆ. ಅಪ್ಪ-ಅಮ್ಮನ ಜಗಳ ನೋಡಿ ಅನಯ್‌ ಮೌನವಾಗುತ್ತಾನೆ ಮತ್ತು ಮನೆಯ ಮೂಲೆಯಲ್ಲಿ ಮೊಬೈಲ್‌ ಹಿಡಿದುಕೊಂಡು ಮಂಕಾಗಿ ಕುಳಿತುಕೊಳ್ಳುತ್ತಾನೆ.
ಇದು ಅನೇಕ ಮನೆಗಳಲ್ಲಿ ಈಗ ಸಾಮಾನ್ಯವಾಗಿ ಕಂಡು ಬರುವ ಸನ್ನಿವೇಶ.

ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಕಳೆದು ಒಂದೂವರೆ ವರ್ಷದಲ್ಲಿ ನಮ್ಮ ದೈನಿಕ ಬದುಕಿನಲ್ಲಿ ದೊಡ್ಡ ಮತ್ತು ಸಣ್ಣದಾದ ಹಲವು ಬದಲಾವಣೆಗಳು ಉಂಟಾಗಿವೆ. ಇತರ ಯಾವುದೇ ಅನುಭವಗಳ ಹಾಗೆ ಕೋವಿಡ್‌ ಸಾಂಕ್ರಾಮಿಕವನ್ನು ತುಂಬಾ ಭಿನ್ನವಾಗಿ ನಾವು ಅನುಭವಿಸಿದ್ದೇವೆ. ಕೆಲವರು ಕೋವಿಡ್‌ನಿಂದ ತುಂಬಾ ಮತ್ತು ಅತೀ ಹತ್ತಿರದ ಪರಿಣಾಮವನ್ನು ಅನುಭವಿಸಿರಬಹುದು; ಇನ್ನು ಕೆಲವರು ಸಣ್ಣ ಪ್ರಮಾಣದಲ್ಲಿ ಅನುಭವಿಸಿರಬಹುದು. ಆದರೆ ಅದರಿಂದ ಯಾವುದೇ ಪರಿಣಾಮ ನಮ್ಮನ್ನು ತಟ್ಟಲಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕೋವಿಡ್‌-19 ನಮ್ಮೆಲ್ಲರ ಮೇಲೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಪರಿಣಾಮ ಬೀರಿದೆ. ಮಾನಸಿಕ ಆರೋಗ್ಯ ವಿಚಾರಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಯಾವಾಗಲೂ ಬಹಳ ಮುಖ್ಯವಾದದ್ದು, ಈ ಸಾಂಕ್ರಾಮಿಕದ ಹಾವಳಿಯ ಕಾಲದಲ್ಲಂತೂ ಅದು ಇನ್ನೂ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಂಡಿದೆ.

ಮಕ್ಕಳು ಮತ್ತು ಹದಿಹರಯದವರು
ಸಾಂಕ್ರಾಮಿಕವು ಆರಂಭವಾದ ಬಳಿಕ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮಕ್ಕಳು ಬಹುತೇಕ ಮನೆಗಳಲ್ಲಿ ಬಂಧಿಗಳಂತಾಗಿದ್ದಾರೆ. ತರಗತಿಗಳು ಆನ್‌ಲೈನ್‌ ಆಗಿವೆ; ಹೊರಗೆ ಹೋಗಿ ಆಟವಾಡಲು ಅನುಮತಿ ಸಿಗದೆ ಇರುವುದರಿಂದ ಗೆಳೆಯ ಗೆಳತಿಯರ ಜತೆಗೂಡಿ ಬೆರೆ
ಯಲು ಅವಕಾಶ ಸಿಗದೆ ಅವರ ಸ್ಥಿತಿ ದಯನೀಯವಾಗಿದೆ. ಮನೆಯಲ್ಲಿ ದೊಡ್ಡವರು ಒತ್ತಡಕ್ಕೆ ಒಳಗಾಗಿರುವುದನ್ನು ಕಾಣುತ್ತ ಅವರೂ ಆ ಆತಂಕದಲ್ಲಿ ಸ್ವಲ್ಪಭಾಗವನ್ನು ಸ್ವೀಕರಿಸುತ್ತಾರೆ ಮತ್ತು ಅದನ್ನು ಹೇಗೆ ನಿಭಾಯಿಸುವುದು ಎಂಬುದು ತಿಳಿಯದೆ ಕಳೆದುಹೋಗುತ್ತಾರೆ. ಪರೀಕ್ಷೆಗಳ ದಿನಾಂಕ ಆಗಾಗ ಬದಲಾಗುವ ಕಾರಣ ತಮ್ಮ ಪರೀಕ್ಷೆಗೆ ಸತತವಾಗಿ ತಯಾರಿ ನಡೆಸುತ್ತಿರುತ್ತ ಮುಂದಿನ ಕಾಲೇಜು ಕೋರ್ಸ್‌ಗಳಿಗೆ ಪ್ರವೇಶಾತಿಯ ಬಗ್ಗೆ ಕೂಡ ಖಚಿತತೆ ಇಲ್ಲದೆ ಹದಿಹರಯದವರು ಒತ್ತಡಕ್ಕೆ ಒಳಗಾಗಿದ್ದಾರೆ.

ವಯಸ್ಕರು
ಬಹುತೇಕ ಎಲ್ಲ ಕುಟುಂಬಗಳಲ್ಲಿ ವಯಸ್ಕರು ಅತ್ಯಂತ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ. ಮನೆಯ ಕೆಲಸಕಾರ್ಯಗಳನ್ನು ನಿಭಾಯಿಸುವುದು, ಉದ್ಯೋಗ ನಿರ್ವಹಣೆ, ತಮ್ಮನ್ನು ಅವಲಂಬಿಸಿರುವ ಮಕ್ಕಳು, ವಯೋವೃದ್ಧ ಹೆತ್ತವರನ್ನು ನೋಡಿಕೊಳ್ಳುವುದು ಇತ್ಯಾದಿಗಳ ನಡುವೆ ತಮ್ಮ ಆರೋಗ್ಯ ಮತ್ತು ಕ್ಷೇಮವನ್ನು ಕಾಯ್ದುಕೊಳ್ಳುವ ಹೊರೆ ಇದಕ್ಕೆ ಕಾರಣ. ಮನೆಯಿಂದಲೇ ಕೆಲಸ ಮಾಡುವುದರಿಂದ (ವರ್ಕ್‌ ಫ್ರಂ ಹೋಮ್‌) ಪ್ರಯಾಣಿಸುವ ಅಪಾಯ ಕಡಿಮೆಯಾಗಿದೆಯಾದರೂ ಕೌಟುಂಬಿಕ ಮತ್ತು ಔದ್ಯೋಗಿ ಹೊಣೆಗಳೆರಡನ್ನೂ ಏಕಕಾಲದಲ್ಲಿ ನಿಭಾಯಿಸಬೇಕಾಗಿರುವುದು ಹೆಚ್ಚು ಕಠಿನ ಪರಿಸ್ಥಿತಿಯನ್ನು ತಂದಿರಿಸಿದೆ.

ಇದನ್ನೂ ಓದಿ:ಶೀಘ್ರವೇ ಸಿದ್ದು-ಎಂ.ಬಿ.ಪಾಟೀಲ ಬಿಜೆಪಿ ಸೇರ್ಪಡೆ: ಕಟೀಲ್‌

ಉದ್ಯೋಗ ಮತ್ತು ಕೌಟುಂಬಿಕ ಕೆಲಸ ಕಾರ್ಯಗಳ ನಡುವೆ ಸ್ಪಷ್ಟ ಗಡಿರೇಖೆ ಇಲ್ಲದೆ ಮತ್ತು ಉದ್ಯೋಗ ಮತ್ತು ಕೌಟುಂಬಿಕ ಜೀವನಗಳ ನಡುವೆ ಸಮತೋಲನ ಸಾಧಿಸುವುದು ತಿಳಿಯದೆ ಹಾಗೂ ಸತತವಾಗಿ “ಆನ್‌’ ಆಗಿರಬೇಕಾದುದು ಅಥವಾ ಸದಾ ಸಂಪರ್ಕಕ್ಕೆ ಸಿಗಬೇಕಾದ ಅನಿವಾರ್ಯಗಳು ಜನರ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಪ್ರಯಾಣಕ್ಕೆ ಇರುವ ನಿರ್ಬಂಧಗಳಿಂದಾಗಿ ಅತ್ಯಗತ್ಯವಾಗಿ ಬೇಕಾದ ವಿರಾಮ-ವಿಶ್ರಾಂತಿಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ; ರಜೆಗಳಿಲ್ಲದೆ ಸತತವಾಗಿ ಕೆಲಸ ಮಾಡುತ್ತಿರಬೇಕಾದ ಪರಿಸ್ಥಿತಿಯಿದೆ. ಬಹುತೇಕ ಜನರ ದೈನಿಕ ರೂಢಿಗತ ಚಟುವಟಿಕೆಗಳಲ್ಲಿ ಗಮನಾರ್ಹ ಬದಲಾವಣೆ ಆಗಿದ್ದು, ಅವರ ನಿದ್ದೆ-ಎಚ್ಚರದ ಚಕ್ರದ ಮೇಲೂ ಪರಿಣಾಮ ಬೀರಿದೆ. ಹೊರಗೆ ಉದ್ಯೋಗ ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕಾಗಿಲ್ಲ ಎಂದರೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕಾಗಿಲ್ಲ ಎಂದೂ ಅರ್ಥ. ಇದರಿಂದಾಗಿ ಸ್ನಾನ-ಶೌಚದಂತಹ ಸ್ವಯಂ ಆರೈಕೆಯ ಕೆಲಸಗಳು, ಅಡುಗೆ, ಊಟ ಉಪಾಹಾರಗಳು ಮತ್ತು ಇತರ ದೈನಿಕ ಚಟುವಟಿಕೆಗಳು ಕೂಡ ಅನಿಯಮಿತವಾಗಿ ಹೊತ್ತುಗೊತ್ತಿಲ್ಲದೆ ನಡೆಯುವಂತಾಗಿದೆ. ದೈನಿಕ ಚಟುವಟಿಕೆಗಳಲ್ಲಿ ಆಗಿರುವ ಈ ಪರಿವರ್ತನೆಗಳಿಂದಾಗಿ ತಾವು ಕೆಲಸಕಾರ್ಯಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಭಾವನೆ ಉಂಟಾಗುತ್ತದೆ ಮತ್ತು ಇದರಿಂದಾಗಿ ಜನರು ತಪ್ಪಿತಸ್ಥ ಭಾವನೆ ಹೊಂದುವುದು ಅಥವಾ ತಾವು ಅಸಮರ್ಥರು ಎಂಬ ಭಾವನೆಗೆ ತುತ್ತಾಗುವುದು ಸಾಧ್ಯ.

ವಿಶೇಷವಾಗಿ ಮಹಿಳೆಯರು ಈ ಸಾಂಕ್ರಾಮಿಕ ಕಾಲದಲ್ಲಿ ಅತೀ ಹೆಚ್ಚು ಒತ್ತಡಕ್ಕೆ ಒಳಗಾಗಿರುವುದಕ್ಕೆ ಹಲವಾರು ಕಾರಣಗಳಿವೆ. ಮನೆಯ ಎಲ್ಲರೂ ಮನೆಯಲ್ಲಿಯೇ ಇದ್ದರೆ ಮನೆಯ ಮಹಿಳೆ ಅವರಿಗಾಗಿ ತಿಂಡಿತಿನಿಸು – ಊಟ ಉಪಾಹಾರಗಳನ್ನು ತಯಾರಿಸಿಕೊಡಬೇಕಾಗುತ್ತದೆ. ಇದರಿಂದಾಗಿ ಆಕೆ ಅಡುಗೆ ಮನೆಯಲ್ಲಿ ವ್ಯಯಿಸಬೇಕಾದ ಸಮಯ-ಶ್ರಮ ಹೆಚ್ಚುತ್ತದೆ. ಮನೆಯ ಕಿರಿಯ ಮಕ್ಕಳಿಗೆ ಆನ್‌ಲೈನ್‌ ಪಾಠ ಪ್ರವಚನಗಳಲ್ಲಿ ಸಹಾಯ ಮಾಡುತ್ತ “ಶಿಕ್ಷಕಿ’ಯಾಗಬೇಕಾದ ಹೆಚ್ಚುವರಿ ಹೊರೆಯೂ ಆಕೆಯ ಮೇಲೆ ಬಿದ್ದಿದೆ. ಇದರ ಜತೆಗೆ ಮನೆಗೆಲಸದ ಹೆಂಗಸಿನ ಸಹಾಯವೂ ಇಲ್ಲದೆ ಮನೆ ಗುಡಿಸಿ ಒರೆಸುವುದು, ಬಟ್ಟೆ ತೊಳೆಯುವುದು, ಅಡುಗೆ ಮಾಡಿಕೊಳ್ಳುವುದು ಇತ್ಯಾದಿ ಕೆಲಸಕಾರ್ಯಗಳು ಆಕೆಯ ಮೇಲೆಯೇ ಬಿದ್ದಿವೆ. ಇವೆಲ್ಲವುಗಳ ನಡುವೆ ಆಕೆಗೆ “ಸ್ವಂತಕ್ಕಾಗಿ’ ಕೆಲವು ನಿಮಿಷಗಳಷ್ಟು ಸಮಯವೂ ಸಿಗುವುದಿಲ್ಲ. ಮಧ್ಯಾಹ್ನ ಊಟವಾದ ಬಳಿಕ ಒಂದಷ್ಟು ಹೊತ್ತು ವಿಶ್ರಾಂತಿ ಪಡೆಯುವ ಅವಕಾಶ ಅಥವಾ ಬೆಳಗ್ಗೆ ಎಲ್ಲರೂ ಶಾಲೆಕಾಲೇಜು- ಉದ್ಯೋಗಕ್ಕೆ ಹೋದ ಬಳಿಕ ಸಂಜೆ ಅವರೆಲ್ಲ ಹಿಂದಿರುಗುವ ನಡುವಣ ಅವಧಿಯಲ್ಲಿ ಇಡೀ ಮನೆಯಲ್ಲಿ ತಾನೊಬ್ಬಳೇ ಇರುವ ಅವಕಾಶ ಗೃಹಿಣಿಯರ ಕೈತಪ್ಪಿಹೋಗಿದೆ. ಈ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಒಂದಿಷ್ಟು ಹೊತ್ತು ಕೂಡ ವಿಶ್ರಮಿಸಲು ಸಮಯ ಇಲ್ಲದೆ ಮಹಿಳೆಯರು ಸೋತು ಸುಣ್ಣವಾಗಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗ ಮತ್ತು ಮನೆಗೆಲಸ – ಎರಡನ್ನೂ ಏಕಕಾಲದಲ್ಲಿ ನಿಭಾಯಿಸಬೇಕಾದ ಹೊರೆ ಬಿದ್ದಿದೆ. ಮೇಲೆ ಹೇಳಿದ ಎಲ್ಲ ಕೆಲಸಕಾರ್ಯಗಳ ಜತೆಗೆ ಮೀಟಿಂಗ್‌ಗಳಲ್ಲಿ ಭಾಗವಹಿಸುವುದು, ಡೆಡ್‌ಲೈನ್‌ಗಳನ್ನು ಪೂರೈಸುವುದು, ಪ್ರೊಜೆಕ್ಟ್ಗಳನ್ನು ಪೂರ್ಣಗೊಳಿಸುವುದು ಮತ್ತಿತರ ಎಲ್ಲವೂ ಆಕೆಯನ್ನು ಹೈರಾಣುಗೊಳಿಸಿವೆ.

ಸಾಂಕ್ರಾಮಿಕ ನಮ್ಮ ಮಾನಸಿಕ ಆರೋಗ್ಯದ ಮೇಲೆ ಯಾಕೆ ಪರಿಣಾಮ ಬೀರುತ್ತಿದೆ?
ಕೋವಿಡ್‌ ಸಾಂಕ್ರಾಮಿಕ ಹೇಗೆ ಮತ್ತು ಯಾಕೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಕೋವಿಡ್‌ಗೆ ಸಂಬಂಧಿಸಿರುವ ಅನಿಶ್ಚಿತತೆ ಬಹಳ ಸಾಮಾನ್ಯವಾದ ಕಾರಣ. ಕೊರೊನಾ ಹಾವಳಿಯ ಅಲೆಗಳ ಬಗ್ಗೆ, ಅದು ಯಾರನ್ನು ಹೆಚ್ಚು ಕಾಡಲಿದೆ ಎನ್ನುವ ಬಗ್ಗೆ, ಲಾಕ್‌ಡೌನ್‌ ಹೇರಿಕೆಯಾಗುವ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ; ಇದರಿಂದಾಗಿ ಜನರಲ್ಲಿ ಆತಂಕ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಜನರು ತಮ್ಮ ಆರೋಗ್ಯದ ಬಗ್ಗೆ, ಆರ್ಥಿಕ ಸ್ಥಿತಿಗತಿಯ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ, ಆಪೆ¤àಷ್ಟರನ್ನು ಅಥವಾ ಉದ್ಯೋಗವನ್ನು ಕಳೆದುಕೊಳ್ಳುವ ಬಗ್ಗೆ ಜನರು ಆತಂಕಗೊಳ್ಳುತ್ತಾರೆ. ಈ ಸಾಂಕ್ರಾಮಿಕವು ಯಾವಾಗ ಕೊನೆಗೊಳ್ಳುತ್ತದೆ ಅಥವಾ ಅದಕ್ಕೊಂದು ಖಚಿತ ಪರಿಹಾರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೆ ಇರುವುದರಿಂದ ಭವಿಷ್ಯವು ಅತ್ಯಂತ ಅನೂಹ್ಯವಾಗಿದೆ ಮತ್ತು ಅನಿಶ್ಚಿತವಾಗಿದೆ. ಇದರ ಜತೆಗೆ ವಿವಿಧ ವಯೋಮಾನ ಜನಸಮೂಹಗಳಲ್ಲಿ ಅವರಿಗೆ ಹತಾಶೆ, ಅಸಹಾಯಕತೆಗಳನ್ನು ಉಂಟುಮಾಡುವ ನಿರ್ದಿಷ್ಟ ಅಂಶಗಳಿರುತ್ತವೆ.

ಕೋವಿಡ್‌ ನಿಭಾವಣೆ
ಮೇಲೆ ಹೇಳಲಾದ ಎಲ್ಲವೂ ಸಾಲದು ಎನ್ನುವಂತೆ ಕೆಲವು ಕುಟುಂಬಗಳಿಗೆ ಕೋವಿಡ್‌ ಸಾಂಕ್ರಾಮಿಕ ವನ್ನು ನೇರವಾಗಿ ಎದುರಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಕೋವಿಡ್‌ಗೆ ತುತ್ತಾದವರು ತೀವ್ರ ದಣಿವು, ನಿಶ್ಶಕ್ತಿ ಮತ್ತು ತಮ್ಮ ದೈನಿಕ ಕೆಲಸಕಾರ್ಯಗಳನ್ನು ಕೂಡ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ಅನುಭವಿಸಿದ್ದಾರೆ. ಗುಣ ಹೊಂದುತ್ತೇವೆಯೇ ಇಲ್ಲವೇ, ಯಾವಾಗ ಗುಣ ಹೊಂದುತ್ತೇವೆ; ಆಸ್ಪತ್ರೆಗೆ ದಾಖಲಾಗಿದ್ದರೆ ಯಾವಾಗ ಗುಣಮುಖರಾಗಿ ಮನೆಯ ಪರಿಸರಕ್ಕೆ ವಾಪಸಾಗುತ್ತೇವೆ ಎಂಬ ಗೊಂದಲ ಕಾಡುತ್ತಿರುತ್ತದೆ. ಕೋವಿಡ್‌ ಇತರ ಅನಾರೋಗ್ಯಗಳಂತೆ ಅಲ್ಲದೆ ಇರುವುದರಿಂದ ಇತರರ ಒಡನಾಟದಿಂದ ದೂರ ಇರಬೇಕಾದ ಅನಿವಾರ್ಯ, ಕುಟುಂಬಸ್ಥರನ್ನು ಮುಟ್ಟಿ ಮಾತನಾಡಿಸಲು ಅವಕಾಶ ಇಲ್ಲ ಎಂಬ ಪರಿಸ್ಥಿತಿ ತುಂಬಾ ಹತಾಶೆಗೆ ಕಾರಣವಾಗುತ್ತದೆ. ಕೋವಿಡ್‌ಗೆ ತುತ್ತಾದವರ ಆರೈಕೆ ಮಾಡುವ ಮನೆಮಂದಿಯೂ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿಕೊಂಡು ಆತ ಅಥವಾ ಆಕೆಯ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಒಳಗಾಗುತ್ತಾರೆ. ಇತರರು ಕೂಡ ಕೊರೊನಾಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳುವುದು, ಆಗಾಗ ಶುಚಿಗೊಳಿಸುವುದು, ಪದೇಪದೆ ಸ್ಯಾನಿಟೈಸರ್‌ ಬಳಸಬೇಕಾಗಿರುವುದು, ಆಗಾಗ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು ಇತ್ಯಾದಿಗಳಿಂದ ದೈಹಿಕವಾಗಿಯೂ ದಣಿವಾಗುತ್ತದೆ. ಇದರ ಜತೆಗೆ ಕೋವಿಡ್‌ನಿಂದ ಸಾವನ್ನಪ್ಪಿದ್ದರೆ ಯಾ ಕೋವಿಡ್‌ನಿಂದ ಆಸುಪಾಸಿನ ಯಾರಾದರೂ ಮೃತಪಟ್ಟ ಸುದ್ದಿಗಳನ್ನು ಕೇಳುವುದು ಅಥವಾ ಮಾಧ್ಯಮಗಳಲ್ಲಿ ಕೋವಿಡ್‌ನಿಂದಾದ ಮರಣಗಳ ಸುದ್ದಿಗಳನ್ನು ಓದುವುದು-ನೋಡುವುದರಿಂದ ತೀವ್ರವಾದ ಆತಂಕ, ಒತ್ತಡ, ಭಯ ಸೃಷ್ಟಿಯಾಗುತ್ತದೆ.

-ಡಾ| ವಿನೀತಾ ಎ. ಆಚಾರ್ಯ
ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಹೆಡ್‌
ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.