73ರಲ್ಲಿ ಗೆಜ್ಜೆಕಟ್ಟಿದ ಸಾವಿತ್ರಿ
Team Udayavani, May 25, 2018, 6:00 AM IST
ಸಾವಿತ್ರಿ ಎಸ್ . ರಾವ್ ಇವರು ಸುರತ್ಕಲ್‌ನಲ್ಲಿ ಜನಿಸಿ, ಕೂಡು ಕುಟುಂಬದಲ್ಲಿ ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನಾಡಿ ಬೆಳೆದು, ಮಂಗಳೂರಿನ ಉರ್ವದ ಕಲ್ಲಾವು ಕುಟುಂಬಕ್ಕೆ ಸೊಸೆಯಾಗಿ, ಶ್ರೀನಿವಾಸ ರಾವ್ ಅವರ ಮಡದಿಯಾಗಿ ಬಂದು ಮೇ 13ಕ್ಕೆ 50 ವರ್ಷ ತುಂಬಿತು. ಈ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ದುಡಿದು, ಮಕ್ಕಳ ಅಪಾರ ಪ್ರೀತಿಯನ್ನು ಗಳಿಸಿದ ಅವರು ರಾಜ್ಯ ಪ್ರಶಸ್ತಿಯನ್ನು ಪಡೆದರು. ಮಕ್ಕಳ ಸಾಹಿತಿಯಾಗಿ ಹಲವಾರು ಕಥೆ ಕವನಗಳನ್ನು ಬರೆದರು. ತೋಟದ ಆರೈಕೆ, ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸುವುದು, ಕಥಾ,ಕವನದ ಕಮ್ಮಟಗಳನ್ನು ನಡೆಸುವುದೇ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡವರು. ಸ್ವಯಂ ನಿವೃತ್ತಿಯನ್ನು ಪಡೆದು ಇಂತಹ ಹಲವಾರು ಪ್ರವೃತ್ತಿಗಳಿಗೆ ಸಮಯವನ್ನು ಮುಡಿಪಾಗಿಟ್ಟರು. ತನ್ನ 66ನೇ ವಯಸ್ಸಿನಲ್ಲಿ ಇವೆಲ್ಲವನ್ನು ಮೀರಿಸಿದ ಹೊಸ ಪ್ರಯೋಗವೊಂದನ್ನು ಮಾಡಿದರು ಹಾಗು ಯಶಸ್ವಿಯೂ ಆದರು. ಅದೇ ಯಕ್ಷಲೋಕಕ್ಕೆ ಪದಾರ್ಪಣೆ.
ಇಂದು ಅವರಿಗೆ 73ರ ಹರೆಯ. ನವತರುಣ-ತರುಣಿಯರು ನಾಚುವಂತೆ ಅವರು ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿ ಕುಣಿದು ಕಲಾಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಬಲ್ಲರು. ಇಳಿ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಮಿಂಚುವ ಕನಸು ಕೂಡಾ ಕಂಡವರಲ್ಲ. ಆದರೆ ಅವರ ಉತ್ಸಾಹ, ಕಲಿಯುವ ಮನಸ್ಸು, ಉತ್ತಮ ಆರೋಗ್ಯ ಸಾಧನೆಯ ಗುಟ್ಟು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರೂ ಆದ ಪತಿಯ ನಿರಂತರ ಸಹಕಾರ ಮತ್ತು ಬೆಂಬಲ, ಯಕ್ಷಗುರು ಸುಮಂಗಲ ರತ್ನಾಕರ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅವರ ಸಾಧನೆಯ ಹಾದಿಯ ಮೆಟ್ಟಿಲುಗಳಾದವು.
50ನೇ ವಿವಾಹ ವಾರ್ಷಿಕೋತ್ಸವದಂದು ಯಕ್ಷಗಾನದ 100ನೇ ಪ್ರದರ್ಶನವನ್ನು ನಗರದ ಪುರಭವನದಲ್ಲಿ ಏರ್ಪಡಿಸಿದ್ದರು. ಸುಮಂಗಲ ರತ್ನಾಕರ ಅವರ ನೇತೃತ್ವದಲ್ಲಿ ದಂಪತಿಯನ್ನು ಸಮ್ಮಾನಿಸಲಾಯಿತು.ಅನಂತರ ನಡೆದ “ನರಕಾಸುರ ವಧೆ’ ಪ್ರದರ್ಶನದಲ್ಲಿ ಸಾವಿತ್ರಿಯವರು ದೇವೇಂದ್ರನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಇವರ ಈ ಜೀವನೋತ್ಸಾಹ ಸರ್ವರಿಗೂ ಆದರ್ಶ. ಮಧ್ಯ ವಯಸ್ಸಿನಲ್ಲೇ ಎಲ್ಲ ಮುಗಿಯಿತೆಂದುಕೊಂಡು ನೀರಸ ಬಾಳು ಬಾಳುವವರಿಗೊಂದು ದಾರಿದೀಪ, ಸ್ಫೂರ್ತಿ.
ಯಕ್ಷಪ್ರಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.