ಕ್ಷಯ ರೋಗದ ಪತ್ತೆ ಮಾಡುವಿಕೆ ಮತ್ತು ಚಿಕಿತ್ಸೆಯ ಹೊಸ ಮಾರ್ಗದರ್ಶಿ
Team Udayavani, Apr 1, 2018, 6:15 AM IST
ಹಿಂದಿನ ವಾರದಿಂದ- ಕ್ಷಯ ರೋಗದ ಚಿಕಿತ್ಸೆಯ ಬಗೆಗಳು
1. CBNAAT (GENE X PERT) ಫಲಿತಾಂಶದಲ್ಲಿ ಕಫ ಅಥವಾ ದೇಹದ ಇತರ ಯಾವುದೇ ಮಾದರಿಯಲ್ಲಿ ಸೂಕ್ಷ್ಮಾಣುಗಳು ಇವೆ ಮತ್ತು RIFAMPICIN SENSITIVE ಅಂತಿದ್ದರೆ ಆ ರೋಗಿಗೆ CATEGORY I (ONE) ಚಿಕಿತ್ಸೆ (2 ತಿಂಗಳು ದಿನಂಪ್ರತಿ HREZ ಮಾತ್ರೆಗಳು ಅನಂತರ 4 ತಿಂಗಳು ದಿನಂಪ್ರತಿ HRE ಮಾತ್ರೆಗಳು) ಪ್ರಾರಂಭಿಸುವುದು.
ಕಫ ಪರೀಕ್ಷೆ ಆಧಾರದ ಮೇಲೆ ಈ ಮೊದಲೇ ಈ ಚಿಕಿತ್ಸೆ ಆರಂಭಿಸಿದ್ದರೆ ಅದನ್ನೇ 6 ತಿಂಗಳ ಕೊನೆಗೆ ಹಾಗೂ 6 ತಿಂಗಳ ಕೂಸಿಗೆ MICROSCOPY ಮೂಲಕ ಕಫ ಪರೀಕ್ಷೆ ಮಾಡಿಸಿ ಅದರಲ್ಲಿ ಸೂಕ್ಷ್ಮಾಣುಗಳು ಇಲ್ಲ ಎಂಬ ಫಲಿತಾಂಶ ಬಂದಲ್ಲಿ ರೋಗಿಯು ಕ್ಷಯ ರೋಗ ಮುಕ್ತ ಎಂದು ಪರಿಗಣಿಸಿ ಆರು ತಿಂಗಳ ಕೊನೆಗೆ ಚಿಕಿತ್ಸೆಯಿಂದ ಬಿಡುಗಡೆಗೊಳಿಸುವುದು.
2. CBNAAT ಫಲಿತಾಂಶ RIFAMPICIN RESISTANCE ಎಂದು ಕಂಡುಬಂದರೆ ಆ ರೋಗಿಯು DRUG RESISTANT TUBERCULOSIS ನಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸಬೇಕಾಗುವುದು. ಅಲ್ಲದೆ ಅವರಿಗೆ ಕೂಡಲೇ ಸಾಂಪ್ರದಾಯಿಕವಾಗಿ ನೀಡುವ ಕಡಿಮೆ ಸಮಯದ (9-11 ತಿಂಗಳು) ಚಿಕಿತ್ಸೆ ತಾತ್ಕಾಲಿಕವಾಗಿ ಪ್ರಾರಂಭಿಸಬೇಕು. RIFAMPICINE RESISTANCE ಫಲಿತಾಂಶ ಬಂದ ಕೂಡಲೇ CBNAAT ಪ್ರಯೋಗಾಲಯದಿಂದ ಈ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಈಖಖ DST-CULTURE ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಂತಹ ಪ್ರಯೋಗಾಲಯಗಳು ನಮ್ಮ ರಾಜ್ಯದಲ್ಲಿ ಕೇವಲ ಬೆಂಗಳೂರು ಹುಬ್ಬಳ್ಳಿ ರಾಯಚೂರಿನಲ್ಲಿವೆ. ಅಲ್ಲಿ ಆ ರೋಗಿಯು ಮಾದರಿಯನ್ನು ಕ್ಷಯರೋಗದ Second Line ಔಷಧಗಳನ್ನು Line Probeassay ಮೂಲಕ ಔಷಧ Sensitivity ಪತ್ತೆ ಹಚ್ಚಿ ಆ ರೋಗಿಗೆ ಸೂಕ್ತವಾದ DR-TB ಚಿಕಿತ್ಸಾ Regemen ಸೂಚಿಸಲಾಗುತ್ತದೆ.
ಅದರಂತೆ ರೋಗಿಗೆ ಒಂದು ವರ್ಷದಿಂದ 2 ವರ್ಷಕ್ಕೂ ಅಧಿಕವಾದ ದೀರ್ಘಕಾಲೀನ ಚಿಕಿತ್ಸೆ ಪಡೆಯಬೇಕಾಗಬಹುದು.
ರೋಗಿಯು ಈ ಚಿಕಿತ್ಸೆಯನ್ನು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ/ಸ್ಥಾಪಿಸುತ್ತಿರುವ DR-TB CENTRE ಗಳಲ್ಲಿ ಉಚಿತವಾಗಿ ಪಡೆಯಬಹುದು.
ಈ ಎಲ್ಲಾ ಪರೀಕ್ಷೆಗಳು, ಚಿಕಿತ್ಸೆಗಳು ಯಾವುದೇ ರೋಗಿಗೆ ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನದೊಂದಿಗೆ ಚಿಕಿತ್ಸಾ ಕೇಂದ್ರಗಳಿಗೆ ಪ್ರಯಾಣಿಸಲು ಪ್ರಯಾಣ ಭತ್ತೆಯನ್ನು ಸಹ ನೀಡಲಾಗುತ್ತದೆ.
ಯಾವುದೇ ಖಾಸಗೀ ವೈದ್ಯರುಗಳು ಕೂಡ ತಮ್ಮ ರೋಗಿಗಳಿಗಾಗಿ ಈ Diagnostic Servicesಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದ್ದು ಸಂಬಂಧಪಟ್ಟ ಔಷಧಗಳನ್ನು ಸಹ ಉಚಿತವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ಪಡೆದುಕೊಂಡು ತಮ್ಮ ಆಸ್ಪತ್ರೆಗಳಲ್ಲಿ ಸಹ ಸೂಕ್ತ ಕಾಯಿಲೆ ಹರಡುವ ನಿರೋಧಕ ಕ್ರಮಗಳನ್ನು ಅನುಸರಿಸಿ ನೀಡಬಹುದಾಗಿದೆ. ಚಿಕಿತ್ಸೆ ನೀಡುವ ಪ್ರತೀ ಖಾಸಗಿ ವೈದ್ಯರಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗ ಪ್ರತೀ ವೈದ್ಯರು (ಖಾಸಗಿ ಮತ್ತು ಸರಕಾರಿ) ಕ್ಷಯ ರೋಗವನ್ನು ಪತ್ತೆ ಹಚ್ಚಿದ ಕೂಡಲೇ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ TB Notification-Resporting Format ಮೂಲಕ ನೀಡುವುದು ಅಗತ್ಯವಾಗಿದೆ. Computer ಅಥವಾ Smart Phone ಇರುವವರು.NIKSHAY ಎಂಬ Software ಉಪಯೋಗಿಸಿ ಆ ಮೂಲಕ Notification ಮಾಡಬಹುದಾಗಿದೆ. ಹೀಗೆ ಮಾಡಿದ ಪ್ರತೀ ರೋಗಿಯ ಮಾಹಿತಿಗೆ ಸರಕಾರದಿಂದ ಪ್ರೋತ್ಸಾಹ ಧನ ಮತ್ತು ಆ ರೋಗಿಯ ಚಿಕಿತ್ಸೆಗೆ ಉಚಿತ ಔಷಧ ಸಹ ಇಲಾಖೆಯಿಂದ ನೀಡಲಾಗುವುದು. ವೈದ್ಯರು ಇಲಾಖೆಗೆ ಹೀಗೆ Notification ಮಾಡಿದ ನಂತರ ಇಲಾಖೆಯ ಕಾರ್ಯಕರ್ತರು ರೋಗಿ ನಿಗದಿತ ಸಮಯದವರೆಗೆ ಈ ಚಿಕಿತ್ಸೆ ಪಡೆದುಕೊಂಡು ರೋಗದಿಂದ ಗುಣಮುಖರಾಗುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ.
ರೋಗ ಚಿಕಿತ್ಸೆ ಪತ್ತೆ ಹಚ್ಚಲು
ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಆಯಾ ಜಿಲ್ಲೆಯಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ PPM COORDINATOR, ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರು ಹಾಗೂ ಕ್ಷಯ ರೋಗ ಆರೋಗ್ಯ ವೀಕ್ಷಕರಿಂದ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.