ಕೋವಿಡ್‌-19 ತೃತೀಯ ಅಲೆ:  ಮಕ್ಕಳ ಮೇಲೆ ಪರಿಣಾಮ  ಬೀರಲಿದೆಯೇ?


Team Udayavani, Jul 4, 2021, 12:02 PM IST

Arogyavani

ಇದು ಅನೇಕ ಹೆತ್ತವರು ಪ್ರಸ್ತುತ ಕೇಳುತ್ತಿರುವ ಪ್ರಶ್ನೆ. ಅನೇಕ ಮಾಧ್ಯಮಗಳು ವರದಿ ಮಾಡುತ್ತಿರುವಂತೆ, ಕೋವಿಡ್‌-19 ತೃತೀಯ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ತೀವ್ರ ತರಹದ ಉಸಿರಾಟದ ತೊಂದರೆಯಿಂದಾಗಿ ಕೊರೊನಾ ವೈರಸ್‌ ಕಾಯಿಲೆ (ಕೋವಿಡ್‌-19)ಯ ದ್ವಿತೀಯ ರೂಪಾಂತರಿಯ ಸೋಂಕು ಇತ್ತೀಚೆಗಿನ ಸಮಯದಲ್ಲಿ ಕಂಡುಬಂದ ಅತೀ ದೊಡ್ಡ ಸಾರ್ವಜನಿಕ ಆರೋಗ್ಯ ಅಪಾಯವಾಗಿ ಪರಿಣಮಿಸಿದೆ. ಆದರೆ ವಯಸ್ಕರು, ಹಿರಿಯರು ಈ ಕಾಯಿಲೆಯಿಂದಾಗಿ ಗಂಭೀರ ಅಸ್ವಾಸ್ಥ್ಯಗಳನ್ನು ಎದುರಿಸುತ್ತಿದ್ದಾರಾದರೆ, ಇದುವರೆಗೆ ಮಕ್ಕಳು ಇದರಿಂದ ತೀವ್ರ ತರಹದ ಅಪಾಯಕ್ಕೆ ಸಿಲುಕಿಲ್ಲ.

ಮೂರನೇ ಅಲೆ ಮಕ್ಕಳನ್ನು ಅಪಾಯಕ್ಕೀಡು ಮಾಡಲಿದೆಯೇ? ಪ್ರಾಯಃ ಇಲ್ಲ!

ಓರ್ವ ಮಕ್ಕಳ ಆರೋಗ್ಯ ತಜ್ಞನಾಗಿ ಹೆತ್ತವರಿಗೆ ನನ್ನ ಪ್ರಾಮಾಣಿಕ ಸಲಹೆ ಏನೆಂದರೆ, ಗಾಬರಿ ಬೇಡ, ಪ್ರಾಯಃ ಮಕ್ಕಳು ಕೊರೊನಾ ಕಾಯಿಲೆಯ ಮೂರನೇ ಅಲೆಯಲ್ಲಿಯೂ ಸುರಕ್ಷಿತರಾಗಿ ಇರಲಿದ್ದಾರೆ.

ಕೋವಿಡ್‌-19 ಮತ್ತು ಅದರ ರೂಪಾಂತರಿಗಳು ಹಿರಿಯರು ಮತ್ತು ಮಧ್ಯವಯಸ್ಕರಲ್ಲಿ ವಿವಿಧ ರೀತಿಯ ಅಸ್ವಾಸ್ಥ್ಯಗಳನ್ನು ಉಂಟುಮಾಡುತ್ತ ತೀವ್ರ ತರಹದ ಅಪಾಯಗಳನ್ನು ಉಂಟುಮಾಡಿದ್ದರೂ ಇದುವರೆಗೆ ಮಕ್ಕಳಲ್ಲಿ ಗಂಭೀರ ತೊಂದರೆಗಳಿಗೆ ಕಾರಣವಾಗಿಲ್ಲ.

ಕೆಲವು ಮಾಧ್ಯಮಗಳು ಕೋವಿಡ್‌-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿದೆ ಎನ್ನುತ್ತಿವೆಯಾದರೂ ಪ್ರಸ್ತುತ ಲಭ್ಯವಿರುವ ವೈಜ್ಞಾನಿಕ ಸಾಕ್ಷ್ಯಾಧಾರಗಳು ಅದು ಮಕ್ಕಳನ್ನು ಹೆಚ್ಚು ಬಾಧಿಸದು ಎಂದು ಸಾಬೀತುಪಡಿಸುತ್ತವೆ.

ರೋಗ ಪ್ರತಿರೋಧಕ ಶಕ್ತಿಯು ಅದರ ಸಂರಚನೆ ಮತ್ತು ಕ್ರಿಯಾತ್ಮಕ ಪ್ರತಿಸ್ಪಂದನೆಯ ವಿಚಾರದಲ್ಲಿ ಮಕ್ಕಳು ಮತ್ತು ಹಿರಿಯರಲ್ಲಿ ಬೇರೆ ಬೇರೆಯಾಗಿರುತ್ತದೆ.

ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯಗಳಿಗೆ ಕಾರಣವಾಗುವ ವೈರಾಣುಗಳ ಮೇಲೆ ನಡೆಸಲಾದ ಅಧ್ಯಯನಗಳು ಹೇಳುವುದೇನೆಂದರೆ, ಕೊರೊನಾ ವೈರಸ್‌ ಗುಂಪಿನ ಸಾರ್ ಕೊವ್‌-1 (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಕೊರೊನಾ ವೈರಸ್‌), ಮರ್-ಕೊವ್‌ (ಮಿಡ್ಲ್ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಕೊರೊನಾ ವೈರಸ್‌) ಮತ್ತು ಸಾರ್ ಕೊವ್‌-2 (ಕೋವಿಡ್‌-19)ಗಳು ಇನ್‌ಫ‌ುÉಯೆಂಜಾ ಮತ್ತು ಆರ್‌ಎಸ್‌ವಿ (ರೆಸ್ಪಿರೇಟರಿ ಸಿನ್ಸಿಶಿಯಲ್‌ ವೈರಸ್‌)ಗಳಿಗೆ ಹೋಲಿಸಿದರೆ ಮಕ್ಕಳಿಗೆ ಕಡಿಮೆ ಅಪಾಯವನ್ನು ಉಂಟುಮಾಡುತ್ತವೆ.

ಕೋವಿಡ್‌-19 ವೈರಾಣುಗಳು ಮೂಗು ಮತ್ತು ಬಾಯಿಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಆದರೆ ಈ ವೈರಾಣುಗಳು ದೇಹವನ್ನು ಪ್ರವೇಶಿಸಿ ಶ್ವಾಸಕೋಶಗಳಿಗೆ ಹಾನಿ ಉಂಟುಮಾಡದಂತೆ ತಡೆಯುವ ರಕ್ಷಣಾತ್ಮಕ ವ್ಯವಸ್ಥೆ ಮಕ್ಕಳಲ್ಲಿ ಇರುತ್ತದೆ.

ಪೋಲಿಯೋ, ಸಿತಾಳೆ ಸಿಡುಬು, ದಡಾರ, ರುಬೆಲ್ಲಾ, ಇನ್‌ಫ‌ುÉಯೆಂಜಾದಂತಹ ಮಕ್ಕಳಿಗೆ ನೀಡುವ ವಿವಿಧ ಸಜೀವ ಲಸಿಕೆಗಳು ಮತ್ತು ಮಕ್ಕಳು ಆಗಾಗ ವಿವಿಧ ವೈರಲ್‌ ಸೋಂಕುಗಳಿಗೆ ತುತ್ತಾಗುವುದು ಅವರಲ್ಲಿ ಸಾರ್-ಕೊವ್‌ -2 ವೈರಾಣುವಿನ ವಿರುದ್ಧ ಒಂದು ಪ್ರಾಮುಖ್ಯ ರಕ್ಷಣಾತ್ಮಕ ವ್ಯವಸ್ಥೆಗೆ ಕಾರಣವಾಗಬಲ್ಲುದು.

ಬಿಸಿಜಿ ಲಸಿಕೆಯು ಹಿರಿಯರಲ್ಲಿ ಕಡಿಮೆ ವೈರಾಣು ಸೋಂಕುಗಳು, ಶ್ವಾಸಾಂಗದ ಮೇಲ್ಭಾಗದ ಸೋಂಕುಗಳು (ಯುಆರ್‌ಐ)ಗಳಿಗೆ ಕಾರಣವಾಗುವುದಕ್ಕೆ ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮರಣ ಪ್ರಮಾಣ ಕಡಿಮೆಯಾಗಲು ಕಾರಣವಾಗುವುದಕ್ಕೆ ಸಂಬಂಧಿಸಿದೆ ಎನ್ನಲಾಗುತ್ತದೆ. ಆದರೆ ಬಿಸಿಜಿ ಲಸಿಕೆ ಒದಗಿಸುವ ರಕ್ಷಣಾತ್ಮಕ ಪರಿಣಾಮವು ಒಂದೆರಡು ವರ್ಷಗಳಿಗಿಂತ ಹೆಚ್ಚು ಕಾಲ ಇರಲಾರದು.

ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಶ್ವಾಸಾಂಗದ ಮೇಲ್ಭಾಗದ ಸೋಂಕು (ಯುಆರ್‌ಐ)ಗಳಿಗೆ ಸಾಮಾನ್ಯ ಕಾರಣವಾದರೂ ಇತರ ಕೊರೊನಾ ವೈರಸ್‌ ಸೋಂಕುಗಳ ವಿರುದ್ಧ ಮಕ್ಕಳ ದೇಹದಲ್ಲಿ ಉತ್ಪನ್ನವಾಗಿರುವ ಪ್ರತಿಕಾಯಗಳು ಸಾರ್-ಕೊವ್‌-2 ವಿರುದ್ಧ ರಕ್ಷಣೆ ಒದಗಿಸಬಲ್ಲವು.

ಮಕ್ಕಳ ಶ್ವಾಸಕೋಶ (ಪಿಡಿಯಾಟ್ರಿಕ್‌ ಅಲ್ವೆಯೊಲಾರ್‌ ಎಪಿಥೇಲಿಯಂ)ದ ಅತ್ಯುತ್ತಮ ಪುನರುತ್ಥಾನಾತ್ಮಕ ಸಾಮರ್ಥ್ಯವು ಹಿರಿಯರಿಗೆ ಹೋಲಿಸಿದರೆ ಮಕ್ಕಳು ಕೋವಿಡ್‌-19 ಸೋಂಕಿನಿಂದ ಹೆಚ್ಚು ಗಂಭೀರ ಪರಿಣಾಮಗಳಿಗೆ ಒಳಗಾಗದೆ ಇರುವುದು ಮತ್ತು ಬೇಗನೆ ಚೇತರಿಸಿಕೊಳ್ಳುವುದನ್ನು ಹೆಚ್ಚು ಚೆನ್ನಾಗಿ ವಿವರಿಸಬಲ್ಲುದು.

ಅಲ್ಲದೆ ಇತರ ಅಪಾಯ ಕಾರಣಗಳಾದ ಬೊಜ್ಜು, ಧೂಮಪಾನದಂತಹವು ಮಕ್ಕಳಲ್ಲಿ ಕಡಿಮೆ ಕಂಡುಬರುತ್ತವೆ.

ಶಾಲೆಗಳು ಮತ್ತು ಡೇ ಕೇರ್‌ ಸೆಂಟರ್‌ಗಳನ್ನು ಬೇಗನೆ ಮುಚ್ಚುವಂತಹ ಕ್ರಮಗಳ ಮೂಲಕ ಮಕ್ಕಳಲ್ಲಿ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ಕೋವಿಡ್‌-19 ಸೋಂಕಿನ ಮೊದಲ ಎರಡು ಅಲೆಗಳ ಸಂದರ್ಭದಲ್ಲಿ ಕೆಲವು ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಆರೈಕೆ ಪಡೆದಿದ್ದರು. ಸಾವನ್ನಪ್ಪಿದವರ ಪ್ರಮಾಣದ ದೃಷ್ಟಿಯಲ್ಲಿ ಹೇಳುವುದಾದರೆ ಮೃತ ಹಿರಿಯರ ಪ್ರಮಾಣವು ಶೇ. 2.27 ಆಗಿದ್ದರೆ ಮಕ್ಕಳ ಸಂಖ್ಯೆ ಶೇ. 0.1 ಆಗಿದೆ.

ಮಕ್ಕಳಲ್ಲಿ ಶ್ವಾಸಾಂಗದ ಮೇಲ್ಭಾಗದಲ್ಲಿ ಪ್ರತಿರೋಧವು ಬಲವಾಗಿರುವುದರಿಂದ ಅಲ್ವೆಯೋಲಿಗಿಂತ ಹೆಚ್ಚಾಗಿ ಟ್ರೇಕಿಯೊ ಬ್ರಾಂಕಿಯಲ್‌ ಪ್ರದೇಶದಲ್ಲಿಯೇ ವೈರಾಣುಗಳಿರುವ ಹನಿಬಿಂದುಗಳ ಶೇಖರಣೆ ಇರು ತ್ತದೆ. ಇದರಿಂದಾಗಿ ಮಕ್ಕಳಲ್ಲಿ ಸಾರ್-ಕೊವ್‌-2 ಸಾಂಕ್ರಾಮಿಕವು ಬ್ರಾಂಕಿಯೊ ಲೈಟಿಸ್‌ ಸೋಂಕನ್ನು ಉಂಟುಮಾಡಬಹುದೇ ವಿನಾ ಶ್ವಾಸಕೋಶವನ್ನು ಪ್ರವೇಶಿಸಿ ಅಲ್ಲಿ ನ್ಯುಮೋನಿ ಯಾದಂತಹ ಗಂಭೀರ ತೊಂದರೆ ಗಳನ್ನು ಉಂಟುಮಾಡುವ ಸಾಧ್ಯತೆಗಳು ಕಡಿಮೆ.

ಕೋವಿಡ್‌-19ನ ಸಾಮಾನ್ಯ ಲಕ್ಷಣಗಳ ದೃಷ್ಟಿಯಿಂದ ಹೇಳುವುದಾದರೆ, ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಅವು ಕಾಣಿಸಿಕೊಳ್ಳುವುದು ಕಡಿಮೆ. ಅಂದರೆ ಮಕ್ಕಳಲ್ಲಿ ಅದು ಲಕ್ಷಣರಹಿತ ಸೋಂಕನ್ನು ಉಂಟು ಮಾಡುತ್ತದೆ. ಮಕ್ಕಳಲ್ಲಿ ಸೋಂಕಿನಿಂದಾಗಿ ಜ್ವರವಿರುವ ಅವಧಿ 3 ದಿನಗಳಾದರೆ, ಹಿರಿಯರಲ್ಲಿ ಇದು 10 ದಿನಗಳು. ಅಂದರೆ ಮಕ್ಕಳಲ್ಲಿ ಅದು ಕಿರು ಅವಧಿಯ ಮತ್ತು ಕಡಿಮೆ ತೀವ್ರತೆಯ ಅನಾರೋಗ್ಯವನ್ನು ಉಂಟುಮಾಡುತ್ತದೆ.

ಮಕ್ಕಳಲ್ಲಿ ಕಂಡುಬರುವ ಬಹುತೇಕ ಸೋಂಕುಗಳು ಮನೆಯಲ್ಲಿ ಸೋಂಕಿಗೀಡಾದ ಕುಟುಂಬ ಸದಸ್ಯರಿಂದ ಹರಡಿರುತ್ತದೆ. ಮನೆಯಲ್ಲಿ ಸೋಂಕುಪೀಡಿತರ ಸಂಪರ್ಕದಿಂದ ಉಂಟಾಗುವ ಸೋಂಕಿನ ಬಗ್ಗೆ ನಡೆಸಲಾದ ಅಧ್ಯಯನಗಳ ಪ್ರಕಾರ, ಸೋಂಕುಗಳ ತೀವ್ರತೆಗಳು ಮಕ್ಕಳಿಗೆ ಹಿರಿಯರಿಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದ್ದು, ವಯಸ್ಸು ಹೆಚ್ಚಿದಂತೆ ತೀವ್ರತೆಯೂ ಅಧಿಕಗೊಳ್ಳುವುದು ಕಾಣಿಸಿದೆ.
ಈ ಎಲ್ಲ ವೈಜ್ಞಾನಿಕ ಸಾಕ್ಷ್ಯಾಧಾರಗಳ ಪ್ರಕಾರ, ಕೊರೊನಾ ಸೋಂಕು ಹಿರಿಯರು ಮತ್ತು ವಯಸ್ಕರಿಗಿಂತ ಒಟ್ಟಾರೆಯಾಗಿ ಮಕ್ಕಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
ಸೋಂಕಿಗೆ ತುತ್ತಾದರೂ ಬಹುತೇಕ ಮಕ್ಕಳು ಫ‌ೂÉವಿನಂತಹ ಆರಂಭಿಕ ಅನಾರೋಗ್ಯಗಳನ್ನು ಅನುಭವಿಸಿ ಚೇತರಿಸಿಕೊಳ್ಳುತ್ತಾರೆಯೇ ವಿನಾ ಗಂಭೀರತೆಯ ಹಂತಕ್ಕೆ ಹೋಗುವುದಿಲ್ಲ.

ಯಾವ ಮಕ್ಕಳಿಗೆ ಅಪಾಯ ಹೆಚ್ಚು?

ಕೆಳಗೆ ವಿವರಿಸಿರುವ ಸಣ್ಣ ಗುಂಪಿನ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಸಾಂಕ್ರಾಮಿಕವು ಹಿಂದೆ ಸರಿಯುವ ತನಕ ಈ ಮಕ್ಕಳ ಹೆತ್ತವರು ಅವರನ್ನು ಅಪಾರ ಕಾಳಜಿ, ಮುಂಜಾಗರೂಕತೆಗಳಿಂದ ಕಾಪಾಡಬೇಕು.
 ಅವಧಿಪೂರ್ವ ಹೆರಿಗೆಯಾಗಿರುವ ಶಿಶುಗಳು (ಒಂದು ವರ್ಷಕ್ಕಿಂತ ಸಣ್ಣವರು), ಜತೆಗೆ ಹೃದ್ರೋಗ ಹೊಂದಿರುವವರು, ಆಗಾಗ ಕಾಣಿಸಿಕೊಳ್ಳುವ ಅನಿಯಂತ್ರಿತ ದಮ್ಮು ಹೊಂದಿರುವ ಮಕ್ಕಳು.
 ನ್ಯುರೊಲಾಜಿಕಲ್‌ ಕಾಯಿಲೆಗಳು, ಕಿಡ್ನಿ ಕಾಯಿಲೆಗಳು, ಅಸ್ತಮಾ, ವಂಶವಾಹಿ ಸಮಸ್ಯೆಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯಗಳಿರುವ ಮಕ್ಕಳು.
 ರೋಗ ಪ್ರತಿರೋಧಕ ಶಕ್ತಿ ಕುಂದಿಸುವ ಔಷಧಗಳನ್ನು ತೆಗೆದುಕೊಳ್ಳುತ್ತಿರುವ ಮಕ್ಕಳು.
 ಮಕ್ಕಳಿಗೆ ಪರೋಕ್ಷ ಧೂಮಪಾನ (ಮನೆಯಲ್ಲಿ ಹೆತ್ತವರು ಅಥವಾ ಇತರ ಕುಟುಂಬ ಸದಸ್ಯರು ಧೂಮಪಾನಿಗಳಾಗಿದ್ದಲ್ಲಿ ಅದರ ಹೊಗೆಗೆ ಒಡ್ಡಿಕೊಳ್ಳುವುದು) ವೂ ಒಂದು ಅಪಾಯಾಂಶವಾಗುವ ಸಾಧ್ಯತೆ ಇದೆ.

ನಮ್ಮ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳಬೇಕು?
 ಮಕ್ಕಳು ಮತ್ತು ಹಿರಿಯರಿಗೆ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದೊಂದೇ ಕಾಯಿಲೆಯ ಎದುರು ಪ್ರಧಾನವಾದ ರಕ್ಷಣೆ.
 ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸದ್ಯ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೆಲವು ಲಸಿಕೆಗಳನ್ನು ನೀಡುವುದಕ್ಕೆ ಅನುಮತಿ ದೊರಕಿದ್ದು, ಪ್ರಯೋಗ ನಡೆಯುತ್ತಿದೆ. ಸದ್ಯವೇ ಈ ವಯಸ್ಸಿನ ಮಕ್ಕಳಿಗೂ ಲಸಿಕೆ ದೊರಕುವ ವಿಶ್ವಾಸ ನಮ್ಮದು.
 ಸರಿಯಾದ ವಿಧಾನದಲ್ಲಿ ಮಾಸ್ಕ್ ಧಾರಣೆ, ಆಗಾಗ ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೌಟುಂಬಿಕ ಸಮಾರಂಭಗಳ ಸಹಿತ ಎಲ್ಲ ವಿಧವಾದ ಜನದಟ್ಟಣೆ ಉಂಟಾಗುವ ಸಭೆ ಸಮಾರಂಭಗಳಿಂದ ದೂರ ಉಳಿಯುವುದು ಸದ್ಯಕ್ಕಿರುವ ರಕ್ಷಣಾತ್ಮಕ ಕ್ರಮಗಳಾಗಿದ್ದು, ಇವುಗಳನ್ನು ನಮ್ಮ ಮಕ್ಕಳ ಕ್ಷೇಮಕ್ಕಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕು.
 ನಿಗದಿತ ವೇಳಾಪಟ್ಟಿಯ ಪ್ರಕಾರ ನಮ್ಮ ಮಕ್ಕಳಿಗೆ ಇತರ ನಿಗದಿತ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿಯು ದಕ್ಷವಾಗಿರುತ್ತದೆ. ಯಾವುದೇ ಕಾರಣಕ್ಕೂ ಲಸಿಕೆ ತಪ್ಪಿಸಬೇಡಿ, ವಿಳಂಬಿಸಬೇಡಿ.
 ಮಕ್ಕಳಿಗೆ ಸ್ವಯಂ ಔಷಧ ಮಾಡಿಕೊಳ್ಳುವುದು ಬೇಡ. ಸಾಮಾನ್ಯ ರೋಗ ಲಕ್ಷಣಗಳಿದ್ದರೂ ವೈದ್ಯರನ್ನು ಕಂಡು ಅವರ ಸಲಹೆಯಂತೆಯೇ ನಡೆಯಿರಿ.
 ನಮ್ಮ ಆರೋಗ್ಯ ಸೇವಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕದ ಸ್ವರೂಪ ಬದಲಾಗುತ್ತಿರುವುದನ್ನು ಮತ್ತು ಅದರಿಂದ ಮಕ್ಕಳಿಗೆ ಉಂಟಾಗಬಲ್ಲ ಕಾಯಿಲೆಗಳ ಸ್ವರೂಪಗಳೂ ಬದಲಾಗುವುದನ್ನು ಗಮನಿಸಿಕೊಳ್ಳುತ್ತಿರಬೇಕು.
ನಾವು ಈ ಸಾಂಕ್ರಾಮಿಕದ ವಿರುದ್ಧ ಜ್ಞಾನದಿಂದ ಹೋರಾಡಬೇಕು, ಭಯ ಪಟ್ಟು ಅಲ್ಲ.

 

ಡಾ| (ಮೇ) ರಾಜೇಶ್ಎಸ್‌.ಎಂ.

ಪ್ರೊಫೆಸರ್ಮತ್ತು ಯುನಿಟ್ಹೆಡ್

ಪೀಡಿಯಾಟ್ರಿಕ್ಸ್ವಿಭಾಗ,

ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.