ಶ್ರವಣ ಸಮಸ್ಯೆಯ ನಿವಾರಣೆಗೆ ಒಂದು ಭರವಸೆದಾಯಕ ತಂತ್ರಜ್ಞಾನ
Team Udayavani, Jul 11, 2021, 5:39 PM IST
ಸೆನ್ಸೊನ್ಯೂರಲ್ ಶ್ರವಣ ಶಕ್ತಿ ನಷ್ಟವಾಗಿದ್ದು, ಕೇಳಿಸುವುದು ತೀರಾ ಕಡಿಮೆ ಇರುವ ಸಂದರ್ಭಗಳಲ್ಲಿ ಶ್ರವಣ ಸಾಧನವು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಶ್ರವಣ ಸಾಧನದಿಂದ ಹೆಚ್ಚು ಪ್ರಯೋಜನವಾಗದವರಿಗೆ ಕೊಕ್ಲಿಯರ್ ಇಂಪ್ಲಾಂಟ್ ಎನ್ನುವ ಹೊಸ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ. ಕೊಕ್ಲಿಯಾದ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಇದನ್ನು ಶಸ್ತ್ರಕ್ರಿಯೆಯ ಮೂಲಕ ಕೊಕ್ಲಿಯಾದ ಒಳಭಾಗದಲ್ಲಿ ಇರಿಸಲಾಗುತ್ತದೆ. ಇದರ ಬಾಹ್ಯ ಭಾಗವಾಗಿರುವ ಸ್ಪೀಚ್ ಪ್ರೊಸೆಸರನ್ನು ಕಿವಿಯ ಹೊರಭಾಗದಲ್ಲಿ ಇರಿಸಲಾಗುತ್ತದೆ.
ಇದು ಕಿವಿಯ ಒಳಗೆ ಇರಿಸಲಾದ ಭಾಗದ ಜತೆಗೆ ವೈರ್‌ಲೆಸ್ ಸಂಪರ್ಕ ಹೊಂದಿದ್ದು, ಕೊಕ್ಲಿಯಾದ ಒಳಗೆ ಇರಿಸಲಾಗಿರುವ ಭಾಗದಲ್ಲಿರುವ ಎಲೆಕ್ಟ್ರೋಡ್‌ಗಳ ಗುತ್ಛಕ್ಕೆ ಸೂಚನೆಗಳನ್ನು ಒದಗಿಸುತ್ತದೆ. ಭಾಷಿಕ ತರಬೇತಿಯನ್ನು ಪಡೆದ ಬಳಿಕ ಕೊಕ್ಲಿಯಾರ್ ಇಂಪ್ಲಾಂಟ್‌ಗೆ ಒಳಗಾದವರಿಗೆ ಇದು ಉತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದಾಗಿ ಸಂಶೋಧಕರು ಹೇಳಿದ್ದಾರೆ. ಭಾಷಿಕ ತರಬೇತಿಯನ್ನು ಪಡೆಯದವರಲ್ಲಿ ಇದರ ಪ್ರಯೋಜನಗಳು ವ್ಯತ್ಯಾಸವಾಗುತ್ತವೆ. ಭಾಷೆಯನ್ನು ಕಲಿಯುವ ವಯಸ್ಸಿಗೆ ಮುನ್ನ ಕೊಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಆಡಿಟರಿ ವರ್ಬಲ್ ಚಿಕಿತ್ಸೆಯನ್ನು ಪಡೆದುಕೊಂಡವರು ಇದರಿಂದ ಉತ್ತಮ ಪ್ರಯೋಜನಗಳನ್ನು ಪಡೆದುಕೊಂಡಿರುವುದು ವರದಿಯಾಗಿದೆ. ಆದರೆ ಭಾಷೆ ಕಲಿಯುವ ವಯಸ್ಸನ್ನು ದಾಟಿದವರಿಗೆ ಕೊಕ್ಲಿಯಾರ್ ಇಂಪ್ಲಾಂಟ್‌ನ ಪ್ರಯೋಜನಗಳು ಸೀಮಿತವಾಗಿರುತ್ತವೆ.
ಕೊಕ್ಲಿಯಾರ್ ಇಂಪ್ಲಾಂಟ್‌ಗೆ ಒಳಗಾದ ಎಲ್ಲರಿಗೂ ಒಂದೇ ರೀತಿಯ ಪ್ರಯೋಜನಗಳಾಗುತ್ತವೆ ಎಂದು ಹೇಳಲಾಗದು, ಆದರೆ ಮಾತು ಮತ್ತು ಭಾಷಿಕ ಸಾಮರ್ಥ್ಯ ಹಾಗೂ ಮಾತಿನ ಗ್ರಹಿಕೆಯ ಸಾಮರ್ಥ್ಯ ಇದ್ದರೆ ಪ್ರಯೋಜನ ಅಧಿಕ ಎನ್ನುವುದು ಸಾಬೀತಾಗಿದೆ. ಸಾಮಾನ್ಯವಾಗಿ ಕೊಕ್ಲಿಯಾರ್ ಇಂಪ್ಲಾಂಟ್ ಮಾಡಿಸಿಕೊಂಡಿರುವ ಮಕ್ಕಳ ಹೆತ್ತವರು ಅಥವಾ ಕೊಕ್ಲಿಯಾರ್ ಇಂಪ್ಲಾಂಟ್‌ಗೆ ಒಳಗಾದ ಯಾರೇ ಆಗಲಿ; ಅದರ ಕಾರ್ಯನಿರ್ವಹಣೆ ಮತ್ತು ಉಪಯೋಗಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೊಂದಿರುತ್ತಾರೆ. ಕೆಲವು ಸಾಮಾನ್ಯ ಪ್ರಶ್ನೆಗಳು ಮತ್ತು ಅವುಗಳನ್ನು ಪರಿಹರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಕೊಕ್ಲಿಯಾರ್ ಇಂಪ್ಲಾಂಟ್ ಒಂದು ಬಾರಿಯ ಹೂಡಿಕೆಯೇ?
ಅಲ್ಲ. ಕೊಕ್ಲಿಯಾರ್ ಇಂಪ್ಲಾಂಟ್‌ಗಳನ್ನು ಆಗಾಗ ನಿರ್ವಹಣೆಗೆ ಒಳಪಡಿಸುತ್ತಿರಬೇಕು. ಸಾಮಾನ್ಯವಾಗಿ ವಾರಂಟಿ ಅವಧಿಯಲ್ಲಿ ಅಥವಾ ಮೊದಲ ಮೂರು ವರ್ಷಗಳ ಅವಧಿಯಲ್ಲಿ ನಿರ್ವಹಣ ವೆಚ್ಚಗಳು ಕಡಿಮೆಯಿರುತ್ತವೆ. ಆ ಬಳಿಕ ನಿರ್ವಹಣೆ ಮತ್ತು ಅಪ್‌ಗೆÅàಡೇಶನ್‌ಗೆ ಸಾಕಷ್ಟು ಮೊತ್ತವನ್ನು ವ್ಯಯಿಸಬೇಕಾಗುತ್ತದೆ.
ಕೊಕ್ಲಿಯಾರ್ ಇಂಪ್ಲಾಂಟ್ ಒಂದು ಬಾರಿಯ ಹೂಡಿಕೆಯೇ?
ಅಲ್ಲ. ಕೊಕ್ಲಿಯಾರ್ ಇಂಪ್ಲಾಂಟ್‌ಗಳನ್ನು ಆಗಾಗ ನಿರ್ವಹಣೆಗೆ ಒಳಪಡಿಸುತ್ತಿರಬೇಕು. ಸಾಮಾನ್ಯವಾಗಿ ವಾರಂಟಿ ಅವಧಿಯಲ್ಲಿ ಅಥವಾ ಮೊದಲ ಮೂರು ವರ್ಷಗಳ ಅವಧಿಯಲ್ಲಿ ನಿರ್ವಹಣ ವೆಚ್ಚಗಳು ಕಡಿಮೆಯಿರುತ್ತವೆ. ಆ ಬಳಿಕ ನಿರ್ವಹಣೆ ಮತ್ತು ಅಪ್‌ಗೆÅàಡೇಶನ್‌ಗೆ ಸಾಕಷ್ಟು ಮೊತ್ತವನ್ನು ವ್ಯಯಿಸಬೇಕಾಗುತ್ತದೆ.
ಕೊಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗು ಮಾತನಾಡುವ, ಕೇಳುವ ಶಕ್ತಿಯನ್ನು ಹೊಂದುತ್ತದೆಯೇ?
ಇಲ್ಲ. ಕೊಕ್ಲಿಯಾರ್ ಇಂಪ್ಲಾಂಟ್‌ನ ಸ್ವಿಚ್ ಆನ್ ಮಾಡಿದಾಗ ಅದು ಕೇಳುವಿಕೆಯ ದ್ವಾರವನ್ನು ತೆರೆಯುತ್ತದೆ. ಇದರರ್ಥವೆಂದರೆ, ನೀವು ಮಾತನಾಡಿದ್ದು ಮಗುವಿಗೆ ಕೇಳುತ್ತದೆ. ಆದರೆ ಅದುವರೆಗೆ ಮಗುವಿಗೆ ಆಗಿರುವ ಕೇಳುವಿಕೆಯ ನಷ್ಟವನ್ನು ತರಬೇತಿಯ ಮೂಲಕ ಭರ್ತಿ ಮಾಡಿಕೊಡಬೇಕಿರುತ್ತದೆ. ಆದ್ದರಿಂದ ನಿಮ್ಮ ಮಗು ಕೇಳಿಸಿಕೊಳ್ಳಲು ಮತ್ತು ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ಪ್ರತಿಕ್ರಿಯೆಯಾಗಿ ತಾನು ಮಾತನಾಡಲು ಮಾತು ಮತ್ತು ಭಾಷಿಕ ತರಬೇತಿಯನ್ನು ಪಡೆಯಬೇಕಿರುತ್ತದೆ. ಜನ್ಮಜಾತವಾಗಿ ಬಂದಿರುವ ಶ್ರವಣ ಶಕ್ತಿಗೂ ಕೃತಕವಾಗಿ ಅಳವಡಿಸಲ್ಪಡುವ ಕೊಕ್ಲಿಯಾರ್ ಇಂಪ್ಲಾಂಟ್‌ಗೂ ವ್ಯತ್ಯಾಸ ಇರುವುದರಿಂದ ಕೊಕ್ಲಿಯಾರ್ ಇಂಪ್ಲಾಂಟ್ ಮಾಡಿಸಿಕೊಂಡ ವಯಸ್ಕರಿಗೂ ಸ್ವಲ್ಪ ಪ್ರಮಾಣದ ಕೇಳಿಸುವಿಕೆಯ ತರಬೇತಿಯ ಅಗತ್ಯ ಇರುತ್ತದೆ.
ಕೊಕ್ಲಿಯಾರ್ ಇಂಪ್ಲಾಂಟ್ಗಳು ಶ್ರವಣ ಶಕ್ತಿಯನ್ನು ಪೂರ್ಣವಾಗಿ ಪುನರ್ಸ್ಥಾಪಿಸಬಲ್ಲವೇ?
ಇಲ್ಲ. ಸದ್ದುಗಳು ಸರಿಯಾಗಿ ಕೇಳಿಸುವಂತಹ ಸನ್ನಿವೇಶಗಳಲ್ಲಿ ನಿಮ್ಮ ಮಗುವಿಗೆ ಇತರ ಸಾಮಾನ್ಯ ಮಕ್ಕಳಂತೆ ಆಲಿಸಲು ಸಾಧ್ಯವಾಗಬಹುದು. ಆದರೆ ಸದ್ದುಗದ್ದಲ ಇರುವಂತಹ ಸನ್ನಿವೇಶಗಳಲ್ಲಿ ಹಾಗಾಗಲಾರದು. ಕೇಳಿಸುವಿಕೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅನೇಕ ಅಂಶಗಳಿವೆ.
ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಿಕೊಳ್ಳಲು ಎಷ್ಟು ವಯಸ್ಸಾಗಿರಬೇಕು?
2000ನೇ ಇಸವಿಯ ಬಳಿಕ 12 ತಿಂಗಳು ವಯಸ್ಸಿಗಿಂತ ಮೇಲ್ಪಟ್ಟ ಅರ್ಹ ಮಕ್ಕಳಿಗೆ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಲು ಎಫ್ಡಿಎಯು ಅನುಮತಿ ನೀಡಿದೆ. ಕಿವುಡರಾಗಿದ್ದು, ತೀವ್ರ ಶ್ರವಣಸಾಮರ್ಥ್ಯ ನಷ್ಟ ಹೊಂದಿರುವ ಸಣ್ಣ ವಯಸ್ಸಿನ ಮಕ್ಕಳಿಗೆ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸಿದರೆ ಅವರು ಎಳೆಯವರಾಗಿದ್ದಾಗಲೇ ಸದ್ದುಗಳಿಗೆ ತೆರೆದುಕೊಳ್ಳುತ್ತಾರೆ ಮತ್ತು ಇದರಿಂದಾಗಿ ಸರಿಯಾದ ವಯಸ್ಸಿನಲ್ಲಿ ಭಾಷೆ ಮತ್ತು ಮಾತಿನ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಕೊಕ್ಲಿಯಾರ್ ಇಂಪ್ಲಾಂಟ್ ಬಳಕೆಯನ್ನು ನಿಲ್ಲಿಸಿದ ಬಳಿಕ ನನ್ನ ಮಗು ಶ್ರವಣ ಸಾಧನವನ್ನು ಉಪಯೋಗಿಸುವುದಕ್ಕೆ ಸಾಧ್ಯವಾಗಬಹುದೇ?
ಇಲ್ಲ. ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಯ ಪ್ರಕ್ರಿಯೆಯಲ್ಲಿ ಕೊಕ್ಲಿಯಾರ್ ಸಂರಚನೆ ಬದಲಾಗುತ್ತದೆ. ಕೊಕ್ಲಿಯಾರ್ ಇಂಪ್ಲಾಂಟನ್ನು ಒಂದು ಕಿವಿಯಲ್ಲಿ ಮಾತ್ರ ಅಳವಡಿಸಿದ್ದರೆ ಇನ್ನೊಂದು ಕಿವಿಗೆ ಶ್ರವಣ ಸಾಧನವನ್ನು ಉಪಯೋಗಿಸಬಹುದು.
ಶ್ರವಣ ಸಾಧನದಿಂದ ಪ್ರಯೋಜನವಾಗದ ಎಲ್ಲರಿಗೂ ಕೊಕ್ಲಿಯಾರ್ ಇಂಪ್ಲಾಂಟ್‌ನಿಂದ ಪ್ರಯೋಜನವಾಗುತ್ತದೆಯೇ?
ಇಲ್ಲ. ಕೊಕ್ಲಿಯಾ ಸ್ಥಳದಿಂದಾಚೆಗೆ ಶ್ರವಣ ಶಕ್ತಿ ನಷ್ಟವಾದ ಸ್ಥಳ ಇರುವವರಿಗೆ ಕೊಕ್ಲಿಯಾರ್ ಇಂಪ್ಲಾಂಟ್‌ನಿಂದ ಪ್ರಯೋಜನವಾಗುವುದಿಲ್ಲ. ಜತೆಗೆ ಕೊಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ನಿರ್ಧಾರದ ಮೇಲೆ ಪರಿಣಾಮ ಬೀರುವ ಇತರ ಸಮಸ್ಯೆಗಳೂ ಇರಬಹುದು.
ನನ್ನ ಮಗು ಜೀವಮಾನ ಪರ್ಯಂತ ಕೊಕ್ಲಿಯಾರ್ ಇಂಪ್ಲಾಂಟ್ ಉಪಯೋಗಿಸಬೇಕೇ?
ಹೌದು, ಸದ್ಯದ ಮಟ್ಟಿಗೆ ಕೊಕ್ಲಿಯಾರ್ ಇಂಪ್ಲಾಂಟನ್ನು ಜೀವಮಾನ ಪರ್ಯಂತ ಉಪಯೋಗಿಸಬೇಕಾಗಿರುತ್ತದೆ.
ಕೊಕ್ಲಿಯಾರ್ ಅಳವಡಿಕೆಗೆ ಸ್ಕೀಮ್ ಇದೆಯೇ?
ಕೆಲವು ಸ್ಕೀಮ್‌ಗಳಿದ್ದು, ಇವುಗಳಡಿ ಉಚಿತವಾಗಿ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆ ಮತ್ತು ಪುನರ್ವಸತಿಗೆ ಸರಕಾರವು ಸಹಾಯ ನೀಡುತ್ತದೆ. ಕೆಲವು ಷರತ್ತುಗಳಿವೆ.
ಕೇಂದ್ರ ಸರಕಾರದ
ಎಐಡಿಐಪಿ ಯೋಜನೆ
ರಾಜ್ಯ ಸರಕಾರದ
ಆರ್‌ಬಿಎಸ್‌ಕೆ ಯೋಜನೆ
ಎಲ್ಲೆಲ್ಲಿ ಕೊಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ?
ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯನ್ನು ಎಐಡಿಐಪಿ ಯೋಜನೆಯಡಿ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಯ ಕೇಂದ್ರವಾಗಿ ಗುರುತಿಸಲಾಗಿದೆ.
ರಾಜೇಶ್ ರಂಜನ್
ಅಸಿಸ್ಟೆಂಟ್ ಪ್ರೊಫೆಸರ್ – ಆಯ್ಕೆ ಶ್ರೇಣಿ
ಆಡಿಯಾಲಜಿ ಮತ್ತು ಎಸ್ಎಲ್ಪಿ ವಿಭಾಗ
ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.