Arthroscopic surgery ಹಾಗೆಂದರೇನು?
Team Udayavani, May 7, 2023, 3:30 PM IST
ಆರ್ಥ್ರೋಸ್ಕೊಪಿ ಎಂಬುದಾಗಿಯೂ ಕರೆಯಲ್ಪಡುವ ಆರ್ಥ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಎಂದರೆ ಎಲುಬು ಸಂಧಿಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಅತ್ಯಂತ ಕನಿಷ್ಠ ಗಾಯ ಮಾಡುವ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವ ಒಂದು ವಿಧಾನ. ಈ ಚಿಕಿತ್ಸಾ ಪ್ರಕ್ರಿಯೆಯಲ್ಲಿ ದೊಡ್ಡ ಗಾಯವನ್ನು ಮಾಡದೆಯೇ ಸಂಧಿಯ ಒಳಭಾಗವನ್ನು ವೀಕ್ಷಿಸುವುದಕ್ಕಾಗಿ ಆರ್ಥ್ರೋಸ್ಕೊಪಿ ಎಂದು ಕರೆಯಲಾಗುವ, ಪುಟ್ಟ ದೀಪ ಮತ್ತು ಕೆಮರಾ ಜೋಡಿಸಿರುವ ಸಣ್ಣ ಕೊಳವೆಯನ್ನು ಉಪಯೋಗಿಸಲಾಗುತ್ತದೆ. ಇದನ್ನು ಮೊಣಕಾಲು, ಭುಜ, ಸೊಂಟ, ಹಿಮ್ಮಡಿ, ಮೊಣಕೈ ಮತ್ತು ಮಣಿಕಟ್ಟುಗಳಂತಹ ಸಂಧಿಗಳಲ್ಲಿ ಉಂಟಾಗಿರುವ ಗಾಯ, ಕಾರ್ಟಿಲೇಜ್ ಹರಿಯುವಿಕೆ, ಲಿಗಮೆಂಟ್‌ಗೆ ಆಗಿರುವ ಹಾನಿ, ಉರಿಯೂತ ಮತ್ತು ಅಸ್ಥಿರತೆಯಂತಹ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಸಂಧಿಯ ಡಿಬ್ರಿಜ್‌ಮೆಂಟ್, ಲಿಗಮೆಂಟ್ ಪುನಾರಚನೆ, ಮೆನಿಸ್ಕಸ್ ದುರಸ್ತಿ ಮತ್ತು ಸಿನೊವೆಕ್ಟಮಿಯಂತಹ ಸಂಧಿ ಶಸ್ತ್ರಚಿಕಿತ್ಸೆಗಳಿಗೂ ಆರ್ಥ್ರೋಸ್ಕೊಪಿಯನ್ನು ಉಪಯೋಗಿಸಲಾಗುತ್ತದೆ.
ಈ ಚಿಕಿತ್ಸಾ ಪ್ರಕ್ರಿಯೆಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಕರು ಸಂಧಿಯ ಬಳಿ ಸಣ್ಣ ರಂಧ್ರವೊಂದನ್ನು ಮಾಡುತ್ತಾರೆ, ಅದರ ಮೂಲಕ ಆರ್ಥ್ರೋಸ್ಕೋಪ್ ಉಪಕರಣವನ್ನು ಒಳಕಳುಹಿಸಿ ಮಾನಿಟರ್ ಮೇಲೆ ಸಂಧಿಯ ಒಳಭಾಗವನ್ನು ವೀಕ್ಷಿಸುತ್ತಾರೆ. ಆಥ್ರೊìಸ್ಕೋಪ್ ಒದಗಿಸುವ ರಿಯಲ್ ಟೈಮ್ ಚಿತ್ರಗಳಿಂದಾಗಿ ಸಮಸ್ಯೆಯನ್ನು ನಿಖರವಾಗಿ ಪತ್ತೆ ಹಚ್ಚಲು ಮಾತ್ರವಲ್ಲದೆ ಶಸ್ತ್ರಚಿಕಿತ್ಸಾ ಉಪಕರಣಗಳ ಮೂಲಕ ಅಗತ್ಯ ದುರಸ್ತಿ ಮತ್ತು ಚಿಕಿತ್ಸೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಇನ್ನೊಂದು ಸಣ್ಣ ರಂಧ್ರದ ಮೂಲಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಕಳುಹಿಸಿ ಸಂಧಿಯ ಒಳಗಿನ ಅಂಗಾಂಶಗಳನ್ನು ಚುಟುಕಾಗಿಸಲು, ತೆಗೆದುಹಾಕಲು, ದುರಸ್ತಿ ಮಾಡಲು ಅಥವಾ ಪುನಾರಚಿಸಲು ಸಾಧ್ಯವಾಗುತ್ತದೆ.
ಆಥ್ರೊಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಗಮನಾರ್ಹ ಪ್ರಯೋಜನ ಎಂದರೆ ಸಾಂಪ್ರದಾಯಿಕ, ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಇದರಲ್ಲಿ ಉಂಟಾಗುವ ಗಾಯ ಅತ್ಯಂತ ಸಣ್ಣದು. ಇದರಿಂದಾಗಿ ನೋವು ಕಡಿಮೆ, ಗಾಯದ ಗುರುತು ಉಳಿಯುವುದು ಅತ್ಯಲ್ಪ, ಗುಣವಾಗುವುದು ಬೇಗ. ಇದನ್ನು ಸಾಮಾನ್ಯವಾಗಿ ಹೊರರೋಗಿಯಾಗಿ ದಾಖಲಿಸಿ ನಡೆಸಲಾಗುತ್ತದೆ, ಇದರಿಂದಾಗಿ ರೋಗಿ ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ಮನೆಗೆ ವಾಪಸಾಗಲು ಸಾಧ್ಯವಾಗುತ್ತದೆ. ಇತರ ವೈದ್ಯಕೀಯ ದರ್ಶಿಕೆ ವಿಧಾನಗಳಿಗೆ ಹೋಲಿಸಿದರೆ ಅಥ್ರೊಸ್ಕೊಪಿಯು ಸಂಧಿಯ ಹೆಚ್ಚು ನಿಖರವಾದ ಮತ್ತು ವಿವರವಾದ ಚಿತ್ರಣವನ್ನು ಒದಗಿಸುತ್ತದೆ; ಇದರಿಂದಾಗಿ ನಿಖರವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಸಾಧ್ಯವಾಗುತ್ತದೆ.
ಆದರೆ, ಎಲ್ಲ ಶಸ್ತ್ರಚಿಕಿತ್ಸಾ ವಿಧಾನಗಳಂತೆ ಆಥ್ರೊìಸ್ಕೊಪಿಯಲ್ಲಿಯೂ ಕೆಲವು ಅಪಾಯ ಸಾಧ್ಯತೆಗಳು ಇವೆ. ಸೋಂಕು, ರಕ್ತಸ್ರಾವ, ನರ ಅಥವಾ ರಕ್ತನಾಳಕ್ಕೆ ಹಾನಿ ಮತ್ತು ಅರವಳಿಕೆಯಿಂದ ಅಡ್ಡ ಪರಿಣಾಮಗಳು ಇದರಲ್ಲಿ ಸೇರಿವೆ. ಶಸ್ತ್ರಚಿಕಿತ್ಸೆಯ ವಿಧ ಮತ್ತು ಸಂಕೀರ್ಣತೆ ಹಾಗೂ ರೋಗಿಯ ಸ್ಥಿತಿ ಮತ್ತು ಶಸ್ತ್ರಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಅವಲಂಬಿಸಿ ಚೇತರಿಸಿಕೊಳ್ಳುವ ಸಮಯ ಮತ್ತು ಫಲಿತಾಂಶ ಬದಲಾಗಬಹುದಾಗಿದೆ.
ಸಂಧಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವ ಕಡಿಮೆ ಗಾಯ ಮತ್ತು ನೋವಿನ ಚಿಕಿತ್ಸಾ ವಿಧಾನವಾಗಿ ಉಪಯೋಗಕ್ಕೆ ಬರುವ ಮೂಲಕ ಆರ್ಥ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆಯು ಮೂಳೆ ಚಿಕಿತ್ಸಾ ವಿಭಾಗದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದೆ. ಸಂಧಿಗಳಿಗೆ ಸಂಬಂಧಿಸಿದ ಗಾಯಗಳು ಮತ್ತು ಸಮಸ್ಯೆಗಳನ್ನು ನಿರ್ವಹಿಸಲು ಇದನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ರೋಗಿಗಳು ಬೇಗನೆ ಗುಣ ಹೊಂದಿ, ಸಂಧಿಗಳ ಕಾರ್ಯಕ್ಷಮತೆ ಉತ್ತಮಗೊಂಡು ತಮ್ಮ ದೈನಿಕ ಚಟುವಟಿಕೆಗಳನ್ನು ಚೆನ್ನಾಗಿ ನಡೆಸುವುದು ಸಾಧ್ಯವಾಗುತ್ತಿದೆ.
ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಇರುವ ಆಥೊìಪೆಡಿಕ್ ವಿಭಾಗವು ಅನುಭವಿ ಮತ್ತು ನಿಪುಣ ಆಥೊìಪೆಡಿಕ್ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಆಥ್ರೊìಸ್ಕೊಪಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಗತ್ಯವಾದ ಗುಣಮಟ್ಟದ ಉಪಕರಣಗಳನ್ನು ಹೊಂದಿದೆ.
-ಡಾ| ಆತ್ಮಾನಂದ ಎಸ್. ಹೆಗ್ಡೆ
ಪ್ರೊಫೆಸರ್ ಮತ್ತು ಯೂನಿಟ್ ಮುಖ್ಯಸ್ಥರು, ಆರ್ಥ್ರೋಪೆಡಿಕ್ ವಿಭಾಗ
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.