ಕೋವಿಡ್‌ -19 ಸಾಂಕ್ರಾಮಿಕ ಕಾಲದಲ್ಲಿ ಆಡಿಯಾಲಜಿ ಮತ್ತು ಸ್ಪೀಚ್‌ ಥೆರಪಿ


Team Udayavani, Sep 13, 2020, 7:38 PM IST

ಕೋವಿಡ್‌ -19 ಸಾಂಕ್ರಾಮಿಕ ಕಾಲದಲ್ಲಿ ಆಡಿಯಾಲಜಿ ಮತ್ತು ಸ್ಪೀಚ್‌ ಥೆರಪಿ

ಸಾಂದರ್ಭಿಕ ಚಿತ್ರ

ಕೋವಿಡ್‌-19 ಸಾಂಕ್ರಾಮಿಕವು ಊಹನಾತೀತವಾದುದಾಗಿದ್ದು, ಜಾಗತಿಕವಾಗಿ ಮನುಷ್ಯ ಕುಲಕ್ಕೆ ಅಭೂತಪೂರ್ವ ಅನಾನುಕೂಲವನ್ನು ಉಂಟುಮಾಡಿದೆ. ಅದು ಜಗತ್ತಿನಲ್ಲಿಡೀ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿದ್ದು, ನಮ್ಮೆಲ್ಲರ ವೈಯಕ್ತಿಕ, ಸಾಮಾಜಿಕ ಮತ್ತು ಔದ್ಯೋಗಿಕ ಚಟುವಟಿಕೆ, ವ್ಯವಹಾರಗಳ ಸ್ವರೂಪವನ್ನು ಬದಲಾಯಿಸಿದೆ.

ನಮ್ಮ ವರ್ತಮಾನ ಮತ್ತು ಭವಿಷ್ಯದ ಮೇಲೆ ಅದು ಉಂಟುಮಾಡಿರುವ ಪರಿಣಾಮಗಳನ್ನು ಅರಗಿಸಿಕೊಳ್ಳಲು ನಾವು ಹೆಣಗಾಡುತ್ತಿದ್ದೇವೆ. ಕೋವಿಡ್‌-19 ಪ್ರಸರಣವನ್ನು ತಡೆಯುವುದಕ್ಕಾಗಿ ನಮ್ಮ ಜೀವನ ಶೈಲಿ ಮತ್ತು ಕೆಲಸದ ವಿಧಿವಿಧಾನಗಳಲ್ಲಿ ಅನೇಕ ಬದಲಾವಣೆಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಲಾಗಿದೆ. ಅವುಗಳೆಂದರೆ, ಸಾಮಾಜಿಕವಾಗಿ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಕೈಕುಲುಕುವುದಕ್ಕೆ ವಿದಾಯ, ಮಾಸ್ಕ್ ಧಾರಣೆ ಮತ್ತು ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು. ಕೋವಿಡ್‌ -19 ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಸೀಮಿತ ಸಂಖ್ಯೆಯ ಸಿಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದು, ಅತ್ಯಗತ್ಯ ಸೇವೆಗಳನ್ನು ಮಾತ್ರ ಒದಗಿಸಬೇಕು ಎಂಬುದಾಗಿ ಭಾರತ ಸರಕಾರ ಸುತ್ತೋಲೆ ಹೊರಡಿಸಿದೆ. ಆರೋಗ್ಯ ಸೇವಾ ಸಿಬಂದಿ ವಿಭಾಗಗಳ ಪೈಕಿ ಒಂದಾಗಿರುವ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಗಳು ತಾವು ಒದಗಿಸುವ ಆರೋಗ್ಯ ಸೇವೆಯ ಸ್ವಭಾವದಿಂದಾಗಿ ಅಗತ್ಯೇತರ ಆರೋಗ್ಯ ಸೇವೆಗಳ ಯಾದಿಯಲ್ಲಿ ಸೇರುತ್ತಾರೆ. ಆದ್ದರಿಂದ ಕೋವಿಡ್‌-19 ಪರಿಸ್ಥಿತಿಯಲ್ಲಿ ಆಡಿಯಾಲಜಿಸ್ಟ್‌ ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌ ಗಳು ಒದಗಿಸುವ ಎಲ್ಲ ಸೇವೆಗಳನ್ನು ಮುಂದೂಡಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮತ್ತು ಅದಾದ ಬಳಿಕವೂ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಗೆ ಸಂಬಂಧಪಟ್ಟ ಎಲ್ಲ ಸೇವೆಗಳು ಸ್ಥಗಿತಗೊಂಡದ್ದರಿಂದ ಸ್ಪೀಚ್‌ ಥೆರಪಿ ಇಲ್ಲದೆ ತಮ್ಮ ಮಕ್ಕಳ ಪ್ರಗತಿ ಕುಂಠಿತಗೊಂಡಿದೆ ಎಂಬುದು ಅವುಗಳ ಅಗತ್ಯವಿದ್ದ ಮಕ್ಕಳ ಹೆತ್ತವರು/ ಪಾಲಕರ ನೋವಾಗಿದೆ. ಇನ್ನೊಂದೆಡೆ ಶ್ರವಣ ಸಾಧನಗಳಿಗೆ ಸಂಬಂಧಿಸಿದ ಪ್ರೊಗ್ರಾಮಿಂಗ್‌, ಸಮಸ್ಯೆ ಪರಿಹಾರ ಇತ್ಯಾದಿಗಳು ಸ್ಥಗಿತಗೊಂಡಿವೆ ಎಂಬುದು ಶ್ರವಣ ಸಾಧನ ಉಪಯೋಗಿಸುವವರ ನೋವು. ಕೋವಿಡ್‌ ಅವಧಿಯು ಸ್ಪೀಚ್‌ ಮತ್ತು ಹಿಯರಿಂಗ್‌ಗೆ ಸಂಬಂಧಿಸಿದ ವಿಚಾರಗಳಲ್ಲಿ ತಮ್ಮ ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸಲು ಈ ವೃತ್ತಿಪರರಿಗೆ ಅಡ್ಡಿಯನ್ನುಂಟು ಮಾಡಿದೆ. ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಸಂವಹನವು ಅತ್ಯಂತ ಅಗತ್ಯವಾಗಿದೆ. ವ್ಯಕ್ತಿಗೆ ಕೇಳಿಸುವುದಿಲ್ಲವಾದರೆ ಆತ ಅಥವಾ ಆಕೆ ಆಯಾ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ, ಇತರರ ಜತೆಗೆ,ಕುಟುಂಬ ಮತ್ತು ಸಮಾಜದಲ್ಲಿ ವ್ಯವಹರಿಸಲು ತೊಂದರೆಯಾಗುತ್ತದೆ. ಕೋವಿಡ್‌-19ಕಾಲಘಟ್ಟದಲ್ಲಿ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗದ ಸೇವೆಯು ಅಗತ್ಯೇತರವರ್ಗದಲ್ಲಿ ಬರುತ್ತದೆಯಾದರೂ ದೀರ್ಘ‌ಕಾಲಿಕವಾದ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಬೇಕಾದ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಚಿಕಿತ್ಸೆಯನ್ನು ತಮ್ಮ  ಗ್ರಾಹಕರಿಗೆ ಒದಗಿಸುವ ಸವಾಲನ್ನು ಉತ್ತರಿಸುವುದು ಕೂಡ ಅಷ್ಟೇ ಮುಖ್ಯವಾದುದಾಗಿದೆ.

ಸಂವಹನ ವೈಕಲ್ಯ ಹೊಂದಿರುವ ಮಕ್ಕಳು ಮತ್ತು ವಯಸ್ಕರಿಗೆ ಮುಖಾಮುಖೀಯಾಗಿ ಕೋವಿಡ್‌ ಕಾಲದಲ್ಲಿ ಸ್ಪೀಚ್‌ ಥೆರಪಿ ಒದಗಿಸುವುದು ಸ್ಥಗಿತಗೊಂಡಿರುವುದು ಅವರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂಬ ಕಳವಳ ಅಂತಹ ಮಕ್ಕಳು ಮತ್ತು ವಯಸ್ಕರ ಪಾಲಕರು/ಆರೈಕೆದಾರರು ಮತ್ತು ಸ್ವತಃ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳಲ್ಲಿದೆ. ಸಂವಹನ ಸಮಸ್ಯೆಗಳ ನಿರಂತರ ವಿಶ್ಲೇಷಣೆ ಮತ್ತು ನಿರ್ವಹಣೆ ನಡೆಸಬೇಕಾಗಿರುವುದರಿಂದ ಈವೃತ್ತಿಪರರಿಗೆ ಇದೊಂದು ವಿಶಿಷ್ಟ ಸವಾಲಾಗಿದೆ.

ಆದ್ದರಿಂದ ಈ ವೃತ್ತಿಪರರು ಹೇಗೆ ತಯಾರಿ ಮಾಡಿಕೊಳ್ಳಬೇಕು, ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಸ್ವಯಂ ಮತ್ತು ಗ್ರಾಹಕರ ಸುರಕ್ಷೆಯನ್ನು ಖಾತರಿಪಡಿಸಿಕೊಳ್ಳುವುದು ಹೇಗೆ, ಚಿಕಿತ್ಸೆ/ ನಿರ್ವಹಣೆಯನ್ನು ಬೇಗನೆ ಆರಂಭಿಸಬಹುದೇ, ಕೊರೊನಾ ಕಾಲದಲ್ಲಿ ಜನ್ಮಜಾತ ಶ್ರವಣ ಸಮಸ್ಯೆಯೊಂದಿಗೆ ಜನಿಸಿದ ಶಿಶುಗಳು ತಪ್ಪಿಹೋಗುವ ಸಾಧ್ಯತೆ ಇದೆಯೇ, ರೋಗಿಗಳ ಭವಿಷ್ಯದ ಸಂವಹನ ಸಾಮರ್ಥ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದಾದ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಶೀಘ್ರವಾಗಿ ಚಿಕಿತ್ಸೆ ಆರಂಭಿಸುವ ಸದವಕಾಶ ಕೋವಿಡ್‌ದಿಂದಾಗಿ ಕೈತಪ್ಪುತ್ತಿದೆಯೇ ಎಂಬೆಲ್ಲ ಪ್ರಶ್ನೆಗಳು ಈ ವೃತ್ತಿಪರರನ್ನು ಕಾಡುತ್ತಿವೆ.

ಕೋವಿಡ್‌ಹಾವಳಿಯಿಂದ ಆಡಿಯಾಲಜಿಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಗೆ ಉಂಟಾಗಿರುವ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಾವು ಒದಗಿಸುವ ಚಿಕಿತ್ಸೆಯಲ್ಲಿ ನಿರಂತರತೆಯನ್ನು ಸಾಧಿಸಲು ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌ ಗಳು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗಿದೆ. ಟೆಲಿ ಥೆರಪಿ ಒಂದು ಪರ್ಯಾಯ ಆಯ್ಕೆಯಾಗಿದ್ದು, ಪಾಶ್ಚಾತ್ಯ ದೇಶಗಳಲ್ಲಿ ಯಶಸ್ವಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಮತ್ತು ನಮ್ಮ ದೇಶದ ಕೆಲವು ಭಾಗಗಳಲ್ಲಿ ಕೋವಿಡ್‌ ಸಾಂಕ್ರಾಮಿಕ ಹಬ್ಬುವುದಕ್ಕೆ ಮುನ್ನವೇ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು.

ಟೆಲಿ ಪ್ರ್ಯಾಕ್ಟೀಸ್‌ :  ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ಮತ್ತು ಆಡಿಯಾಲಜಿ ವಿಭಾಗದ ವೃತ್ತಿಪರ ಸೇವೆಗಳನ್ನುರೋಗಿಗಳು/ ಗ್ರಾಹಕರಿಗೆ ಒದಗಿಸಲು ಟೆಲಿಕಮ್ಯುನಿಕೇಶನ್‌ ತಂತ್ರಜ್ಞಾನವನ್ನು ಬಳಸಿಕೊಳ್ಳುವುದೇ ಟೆಲಿಪ್ರ್ಯಾಕ್ಟೀಸ್‌. ರೋಗಿ/ ಗ್ರಾಹಕರನ್ನು ಈ ವೃತ್ತಿಪರಿಣಿತರೊಂದಿಗೆ ಅಥವಾ ಈ ವೃತ್ತಿಪರಿಣಿತರನ್ನು ವೃತ್ತಿಪರಿಣಿತರೊಂದಿಗೆ ಟೆಲಿಕಮ್ಯುನಿಕೇಶನ್‌ ತಂತ್ರಜ್ಞಾನದ ಮೂಲಕ ಸಂಪರ್ಕಿಸಿ ವಿಶ್ಲೇಷಣೆ, ಚಿಕಿತ್ಸೆ ಮತ್ತು/ ಅಥವಾ ಸಮಾಲೋಚನೆಯನ್ನು ಒದಗಿಸುವುದನ್ನು ಇದರಲ್ಲಿ ಅನುಸರಿಸಲಾಗುತ್ತದೆ. ಟೆಲಿ ಪ್ರ್ಯಾಕ್ಟೀಸ್‌ ಜತೆಗೆ ಟೆಲಿ ಆಡಿಯಾಲಜಿ, ಟೆಲಿ ಸ್ಪೀಚ್‌ ಮತ್ತು ಸ್ಪೀಚ್‌ ಟೆಲಿ ಥೆರಪಿಯಂಥವುಗಳನ್ನೂ ಒದಗಿಸುತ್ತಾರೆ. ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ (ಎಸ್‌ಎಲ್‌ಪಿ)ಗಳು ಒದಗಿಸುವ ಸೇವೆಯನ್ನು ಸ್ಥೂಲವಾಗಿ ಟೆಲಿ ರಿಹ್ಯಾಬಿಲಿಟೇಶನ್‌ ಎಂಬ ವಿಶಾಲ ವ್ಯಾಪ್ತಿಯಲ್ಲಿ ಗುರುತಿಸಲಾಗುತ್ತದೆ (ಅಮೆರಿಕನ್‌ ಟೆಲಿಮೆಡಿಸಿನ್‌ ಅಸೋಸಿಯೇಶನ್‌, 2010). ಟೆಲಿ ಪುನರ್ವಸತಿ ವಿಧಾನಗಳು ಕೋವಿಡ್‌-19 ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತವೆ.

ಇಲ್ಲಿ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಥೆರಪಿಸ್ಟ್‌ಗಳು ಎಷ್ಟು ಪರಿಣಾಮಕಾರಿಯಾಗಿ ಟೆಲಿ ಪ್ರ್ಯಾಕ್ಟೀಸ್‌ ಅಥವಾ ಟೆಲಿ ಪುನರ್ವಸತಿ ಸೇವೆಯನ್ನು ಅಳವಡಿಸಿಕೊಂಡಿದ್ದಾರೆ? ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಯನ್ನು ಪರೋಕ್ಷವಾಗಿ ಅಂದರೆ, ಟೆಲಿ ವಿಧಾನದ ಮೂಲಕ ಒದಗಿಸುವ ಆಯ್ಕೆಯನ್ನು ಅನೇಕ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳು ಪರಿಗಣಿಸಿದ್ದರಾದರೂ ಕೋವಿಡ್‌-19 ಸಾಂಕ್ರಾಮಿಕ ಕಾಣಿಸಿಕೊಳ್ಳುವುದಕ್ಕೆ ಮುನ್ನ ಇದನ್ನು ನಿಜವಾಗಿ ಅಳವಡಿಸಿಕೊಂಡವರು ಕೆಲವೇ ಮಂದಿ. ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿದ ಆ್ಯಪ್‌ ಮೂಲಕ ಶ್ರವಣ ಸಾಧನವನ್ನು ದೂರದಿಂದಲೇ ಪ್ರೋಗ್ರಾಮ್‌ ಮಾಡುವುದರಿಂದ ಆರಂಭಿಸಿ ರೋಗಿ ಮತ್ತು ಸೇವಾ ಪೂರೈಕೆದಾರರು ದೂರದಲ್ಲಿಯೇ ಇದ್ದು ಸಮಗ್ರ ಟೆಲಿ ವಿಶ್ಲೇಷಣೆ ನಡೆಸುವುದರ ವರೆಗೆ ಟೆಲಿ ಆಡಿಯಾಲಜಿ ಎಂಬುದು ಇಂದು ಲಭ್ಯವಿರುವ ಅನೇಕ ರೂಪಗಳನ್ನು ಒಳಗೊಂಡಿದೆ.

ಟೆಲಿ ಸ್ಪೀಚ್‌ನಲ್ಲಿ ಕೆಲವು ಸಂವಾದಾತ್ಮಕ ಚಟುವಟಿಕೆಗಳು ಒಳಗೊಳ್ಳುತ್ತವೆ. ಇದರ ಮೂಲಕ ಮನೆಯಲ್ಲಿಯೇ ಅಥವಾ ಕ್ಲಿನಿಕ್‌ನಿಂದ ದೂರದಲ್ಲಿದ್ದು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ. ಟೆಲಿ ಸ್ಪೀಚ್‌ ಅನ್ನು ಅನೇಕ ಸಂವಹನ ವೈಕಲ್ಯಗಳ ಚಿಕಿತ್ಸೆಗಾಗಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಹಿರಿಯರ ನ್ಯೂರೊಜೆನಿಕ್‌ ಸ್ಪೀಚ್‌ ಮತ್ತು ಲ್ಯಾಂಗ್ವೇಜ್‌ ಸಮಸ್ಯೆಗಳು (ಅಫೇಸಿಯಾ, ಡಿಸಾರ್ಥಿಯಾ ಮತ್ತು ಗ್ರಹಣಾತ್ಮಕ ಸಂವಹನ ಸಮಸ್ಯೆಗಳು), ತೊದಲು, ಧ್ವನಿ ಸಮಸ್ಯೆಗಳು, ಮಕ್ಕಳಲ್ಲಿ ಸ್ಪೀಚ್‌ ಮತ್ತು ಲ್ಯಾಂಗ್ವೇಜ್‌ ಸಮಸ್ಯೆಗಳು, ಲ್ಯಾರಿಂಗೆಕ್ಟೊಮಿ ಮತ್ತು ನುಂಗುವ ತೊಂದರೆಗಳಂತಹ ಸಮಸ್ಯೆಗಳ ಚಿಕಿತ್ಸೆಯಲ್ಲಿ ಅನೇಕ ದೃಶ್ಯ ಆಧಾರಿತ ಆ್ಯಪ್ಲಿಕೇಶನ್‌ಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಮೋಟಾರ್‌ ಸ್ಪೀಚ್‌ ಸಮಸ್ಯೆಗಳನ್ನು ಹೊಂದಿರುವ ಹಿರಿಯರಲ್ಲಿ ಇಂಟರ್‌ನೆಟ್‌ಮೂಲಕ ಲಭ್ಯವಿರುವ ತಂತ್ರಜ್ಞಾನಗಳು ಮತ್ತು ವಿಶ್ಲೇಷಣಾ ಮಾನದಂಡಗಳನ್ನು ತುಸು ಪರಿಷ್ಕರಿಸಿಕೊಂಡು ಉಪಯೋಗಿಸುವುದು ಸಾಧ್ಯವಿದೆ ಎಂಬುದನ್ನು ಟೆಲಿ ಪ್ರ್ಯಾಕ್ಟೀಸ್‌/ ಟೆಲಿ ಪುನರ್ವಸತಿಯ ಮೂಲಕ ಸೇವೆಗಳನ್ನು ಒದಗಿಸುವ ಪರಿಣಾಮಕಾರಿತನದ ಕುರಿತಾದ ಅಧ್ಯಯನಗಳು ತೋರಿಸಿಕೊಟ್ಟಿವೆ. ತೊದಲುವಿಕೆ ಮತ್ತು ಧ್ವನಿಯ ಸಮಸ್ಯೆಗಳ ಕುರಿತು ಆಸ್ಟ್ರೇಲಿಯಾದಲ್ಲಿ ನಡೆಸಲಾದ ಅಧ್ಯಯನ ಕೂಡ ಉತ್ತಮ ಗ್ರಾಹಕ ಸಂತೃಪ್ತಿಯ ಜತೆಗೆ ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿ ವೃತ್ತಿಪರಿಣಿತರು ತಮ್ಮ ಗುರಿಗಳನ್ನು ಚೆನ್ನಾಗಿ ಸಾಧಿಸಬಹುದು ಎಂದು ತೋರಿಸಿಕೊಟ್ಟಿವೆ.

ನುಂಗುವ ಸಮಸ್ಯೆಗೆ ಸಂಬಂಧಿಸಿ ಲಭ್ಯವಿರುವ ಕೆಲವು ಪ್ರಕಟಿತ ವರದಿಗಳ ಪ್ರಕಾರ ನುಂಗುವ ಥೆರಪಿಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೇಲೆ ಟೆಲಿ ಮನೆ ಆರೈಕೆ ಯೋಜನೆಯ ಪ್ರಕಾರ ಚಿಕಿತ್ಸಕರು ರೋಗಿಯ ಮೇಲೆ ನಿಗಾ ಇರಿಸಬಹುದುಮತ್ತು ಚಿಕಿತ್ಸೆಯ ಮುಂದುವರಿಕೆಯನ್ನು ಖಾತರಿ ಪಡಿಸಬಹುದು. ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಒದಗಿಸಲಾದ ಇಂಟರ್‌ನೆಟ್‌ ಆಧರಿತ ವಿಶ್ಲೇಷಣ ಸೂತ್ರಗಳು ಮಕ್ಕಳ ಸ್ಪೀಚ್‌ ಮತ್ತು ಲ್ಯಾಂಗ್ವೇಜ್‌ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚಿಕಿತ್ಸಾತ್ಮಕ ದರ್ಜೆಯದಾಗಿವೆ ಎಂಬುದಾಗಿ ಆಸ್ಟ್ರೇಲಿಯಾದಲ್ಲಿ ನಡೆಸಲಾದ ಪೈಲಟ್‌ ಅಧ್ಯಯನವೊಂದು ಸಾಬೀತುಪಡಿಸಿದೆ.

ಇಂಗ್ಲಂಡ್‌ನ‌ಲ್ಲಿ ಎಸ್‌ಎಲ್‌ಪಿಗಳು ದೂರ/ ಮನೆ/ ನರ್ಸರಿ ಕೇಂದ್ರಗಳಲ್ಲಿ ಒದಗಿಸಿದ ಸಂವಾದಾತ್ಮಕ ಆಡಿಯೋವಿಶ್ಯುವಲ್‌ ಆಧರಿತ ಸೇವೆಗಳಲ್ಲಿ ಹೆತ್ತವರು ತಮ್ಮ ಮಕ್ಕಳ ಚಿಕಿತ್ಸಾ ಯೋಜನೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿದ್ದು, ತಮ್ಮ ಮಕ್ಕಳ ಸಂವಹನ ಅಭಿವೃದ್ಧಿಯ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ಶಕ್ತವಾಗಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಸಂವಹನ ಪರಿಸರದಬಗ್ಗೆ ತಡೆರಹಿತವಾಗಿ ಅರಿತುಕೊಳ್ಳಲು ಎಸ್‌ ಎಲ್‌ಪಿಗಳು ಸಮರ್ಥರಾಗಿದ್ದಾರೆ ಮತ್ತು ಹೆತ್ತವರಿಗೆ ಮಾರ್ಗದರ್ಶನ ಮಾಡಲು ಶಕ್ತರಾಗಿದ್ದಾರೆ. ಟೆಲಿ ಪುನರ್ವಸತಿಯ ಬಗ್ಗೆ ಹೆತ್ತವರು ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಲಭಿಸಿದೆ. ಟೆಲಿ ಪ್ರ್ಯಾಕ್ಟೀಸ್‌ ಉತ್ತಮ ಪ್ರಯೋಜನಗಳನ್ನು ಹೊಂದಿದ್ದರೂ ಮುಖತಃ ಒದಗಿಸುವ ಚಿಕಿತ್ಸೆಗಿಂತ ಇದು ಕೆಲವು ಅಡ್ಡಿಗಳನ್ನು ಹೊಂದಿರುವುದು ನಿಜ. ಕೋವಿಡ್‌ – 19 ಹಾವಳಿಯ ಈ ಸಂದರ್ಭದಲ್ಲಿ ಟೆಲಿ ಪುನರ್ವಸತಿ ಅಳವಡಿಕೆಯಿಂದ ಉಂಟಾಗುವ ಎಲ್ಲ ಪ್ರಯೋಜನಗಳನ್ನು ಪರಿಗಣಿಸುವುದು ವಿಹಿತವಾಗಿದೆ.

ನಮ್ಮ ದೇಶದಲ್ಲಿ ಟೆಲಿ ಪ್ರ್ಯಾಕ್ಟೀಸ್‌ ಅಥವಾ ಟೆಲಿಪುನರ್ವಸತಿ ಸೇವೆಗಳು ಬಾಲ್ಯಾವಸ್ಥೆಯಲ್ಲಿ ಇವೆಯಾದರೂ ರೋಗಿಗಳ/ ಆರೈಕೆದಾರರ ಅಗತ್ಯಗಳಿಗೆ ತಕ್ಕಂತೆ ಮರುವಿನ್ಯಾಸಗೊಳಿಸಿ ದೀರ್ಘ‌ಕಾಲಿಕವಾಗಿ ಮತ್ತು ತೀವ್ರವಾಗಿ ಮನೆಯಲ್ಲಿಯೇ ಒದಗಿಸುವುದರಿಂದ ಆಗುವ ಪ್ರಯೋಜನಗಳನ್ನು ಅಲ್ಲಗಳೆಯಲಾಗದು. ಕೋವಿಡ್‌ -19 ಸ್ಥಿತಿಯಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿ ಮತ್ತು ಮುಂದುವರಿದ ಕನಿಷ್ಠ ಆರು ತಿಂಗಳುಗಳ ಕಾಲ ಆಡಿಯಾಲಜಿಸ್ಟ್‌ಗಳು ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳಿಗೆ ಸೇವೆ ಒದಗಿಸುವಲ್ಲಿ ಉಂಟಾಗಿರುವ ಅಡ್ಡಿ ಮಾತ್ರವಲ್ಲದೆ ದೈಹಿಕ ದೂರ ಕಾಪಾಡಿಕೊಳ್ಳುವ ಅಗತ್ಯ, ವಿಶೇಷ ತಜ್ಞರ ಕೊರತೆ, ಸಂಚಾರಕ್ಕೆ ನಿರ್ಬಂಧ ಮೊದಲಾದ ಅಡಚಣೆಗಳಿಂದ ಪಾರಾಗುವುದಕ್ಕೆ ಈ ವಿಧಾನವು ಅತ್ಯಂತ ಉಪಯುಕ್ತವಾಗಿದೆ. ಆದ್ದರಿಂದ ಈ ದಿನಗಳಲ್ಲಿ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರ ಬದಲಾಗಿ ಟೆಲಿ ಪ್ರ್ಯಾಕ್ಟೀಸ್‌ ನಡೆಸುವುದು ಉಪಯುಕ್ತವಾಗಿದೆ. ಈ ಸೇವಾ ಪೂರೈಕೆದಾರರು ಇದುವರೆಗೆ ತಮ್ಮ ಗ್ರಾಹಕರು/ ರೋಗಿಗಳು ಸಾಧಿಸಿದ ಚಿಕಿತ್ಸಾ ಪ್ರಗತಿಯ ಮೇಲೆ ನಿಗಾ ಇರಿಸಿ ಮುಂದುವರಿಸಲು ಇದರಿಂದ ಸಾಧ್ಯವಾಗಲಿದೆ. ಅಂತಿಮವಾಗಿ, ಈ ವೃತ್ತಿಪರರು ಸದ್ಯದ ಕೋವಿಡ್‌-19 ಪರಿಸ್ಥಿತಿಯಲ್ಲಿ ತಮ್ಮ ಗ್ರಾಹಕರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬೇಕಾಗಿದೆ.

ಮನೆಯಲ್ಲಿ ಸಂವಹನಪೂರಕ ವಾತಾವರಣ :  ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್ ರಿಂದ ಶೀಘ್ರ ಚಿಕಿತ್ಸೆ ಪಡೆಯುತ್ತಿದ್ದ 0-3 ವಯಸ್ಸಿನ ಮಕ್ಕಳಿಗೆ ಕೋವಿಡ್‌-19 ಕಾರಣ ದೇಶದಲ್ಲಿ ಹೇರಿಕೆಯಾಗಿರುವ ಲಾಕ್‌ಡೌನ್‌/ ನಿರ್ಬಂಧಗಳಿಂದಾಗಿ ಚಿಕಿತ್ಸೆಗೆ ಅಡ್ಡಿಯಾಗಿದ್ದು, ಇದು ಅವರ ಹೆತ್ತವರಿಗೆ ಆತಂಕ ಉಂಟು ಮಾಡಿದೆ. ಜತೆಗೆ, ಬೆಳವಣಿಗೆಗೆ ಸಂಬಂದಪಟ್ಟ ವೈಕಲ್ಯಗಳನ್ನು ಹೊಂದಿರುವ ಅಂದರೆ, ವರ್ತನಾತ್ಮಕ ಮತ್ತು ಇತರ ಸಮಸ್ಯೆಗಳನ್ನು ಹೊಂದಿರುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ಅನಿವಾರ್ಯವಾದಸಂದರ್ಭದಲ್ಲಿ ಮಗುವಿನ ತಾಯಿಯು ಚಿಕಿತ್ಸಕರ ಮಾರ್ಗದರ್ಶನದಡಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಬೇಕಾಗಿದೆ ಎಂಬುದನ್ನು ಮಗುವಿನ ಹೆತ್ತವರು ಅರಿತುಕೊಳ್ಳಬೇಕಾಗಿದೆ. ಸಂವಹನವನ್ನು ಪ್ರಚೋದಿಸುವ ನಿಜ ಬದುಕಿನ ಕೆಲವು ಅಂಶಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಸಂವಹನ ಪ್ರೇರಣೆ ಒದಗಿಸುವುದಕ್ಕೆ ಇದು ಒತ್ತು ನೀಡುತ್ತದೆ. ಇದು ಮಗುವಿನ ಭಾಷೆ ಮತ್ತು ಮಾತಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಲಾಕ್‌ಡೌನ್‌ಗೆ ಪೂರ್ವದ ಚಟುವಟಿಕೆಗಳನ್ನು ಹೆತ್ತವರು ಮುಂದುವರಿಸಬೇಕಾಗಿದೆ. ಇಲ್ಲಿ ತಾಯಂದಿರಿಗೆ ಕೆಲವು ಸಲಹೆಗಳಿವೆ: ಮಗುವಿನ ದೈನಿಕ ಚಟುವಟಿಕೆಗಳನ್ನು ಗಮನಿಸಿ, ಸತತವಾಗಿ ಮಾರ್ಗದರ್ಶನ ಒದಗಿಸಿ,ಮಗುವಿಗೆ ಸರಿಯಾಗಿ ವಿವರಣೆಗಳನ್ನು ನೀಡಿ, ಮಗುವಿನ ಜತೆಗೆ ಹೆಚ್ಚು ಸಮಯವನ್ನು ಕಳೆಯಿರಿ, ಮಗುವಿನ ಬೆಳವಣಿಗೆಗೆ ಅಗತ್ಯವಾದ ಮತ್ತು ಪ್ರಯೋಜನಕಾರಿಯಾದ ಚಟುವಟಿಕೆಗಳನ್ನು ಮಗುವಿಗೆ ಒದಗಿಸಿ.

 

ಡಾ| ವೀಣಾ ಕೆ.ಡಿ.

ಅಸೋಸಿಯೇಟ್‌ ಪ್ರೊಫೆಸರ್‌

ಡಾ| ಬಿ. ರಾಜಶೇಖರ್‌

ಮಾಜಿ ಡೀನ್‌ ಮತ್ತು ಪ್ರೊಫೆಸರ್‌

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ,

ಎಂಸಿಎಚ್‌ಪಿ, ಮಣಿಪಾಲ

ಟಾಪ್ ನ್ಯೂಸ್

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.