ಸ್ವಲೀನತೆ (ಆಟಿಸಂ) ಒಂದು ವಂಶವಾಹಿ ಸಮಸ್ಯೆ


Team Udayavani, Dec 27, 2020, 12:33 PM IST

ಸ್ವಲೀನತೆ (ಆಟಿಸಂ) ಒಂದು ವಂಶವಾಹಿ ಸಮಸ್ಯೆ

ಜೆನೆಟಿಕ್ಸ್‌ ಅಥವಾ ವಂಶವಾಹಿ ಅಧ್ಯಯನ ಎಂದರೆ ವಂಶವಾಹಿಗಳು, ವಂಶಪಾರಂಪರ್ಯ, ಸಜೀವಿಗಳಲ್ಲಿ ವೈವಿಧ್ಯ, ಹೆತ್ತವರಿಂದ ಮಕ್ಕಳಿಗೆ ಗುಣಗಳು ಬಳುವಳಿಯಾಗಿ ಹರಿದು ಬರುವುದು ಇತ್ಯಾದಿಗಳ ಅಧ್ಯಯನಗಳನ್ನು ಒಳಗೊಂಡಿರುವ ಜೀವಶಾಸ್ತ್ರದ ಒಂದು ವಿಭಾಗ. ವಂಶವಾಹಿಗಳ ಮಾಲೆಕ್ಯುಲಾರ್‌ ಸಂರಚನೆ, ಕಾರ್ಯಚಟುವಟಿಕೆ, ಅಂಗಾಂಶ ಅಥವಾ ಅಂಗ ವ್ಯವಸ್ಥೆಯ ಸಂದರ್ಭದಲ್ಲಿ ವಂಶವಾಹಿಗಳ ಗುಣಸ್ವಭಾವ, ವಂಶವಾಹಿಗಳ ಹಂಚಿಕೆ ಹಾಗೂ ಅವುಗಳ ಸಂಖ್ಯೆಯಲ್ಲಿ ಬದಲಾವಣೆ ಮತ್ತು ಏರಿಳಿತ ಉಂಟಾಗುವುದರ ಅಧ್ಯಯನವೂ ಇದರಲ್ಲಿ ಸೇರಿದೆ.  ವಂಶವಾಹಿ ಕಾಯಿಲೆ ಅಥವಾ ಸಮಸ್ಯೆ ಎಂದರೆ, ವ್ಯಕ್ತಿಯೊಬ್ಬನ ಡಿಎನ್‌ಎಯಲ್ಲಿ ಉಂಟಾಗುವ ಬದಲಾವಣೆಗಳ ಪರಿಣಾಮಗಳು ಅಥವಾ ರೂಪಾಂತರ.

ವಂಶವಾಹಿ ಸಮಸ್ಯೆಗಳ ವಿಧಗಳು :

  • ಒಂದು ವಂಶವಾಹಿಯಲ್ಲಿ ರೂಪಾಂತರದಿಂದ ಉಂಟಾಗುವ ಸಮಸ್ಯೆಗಳನ್ನು ಏಕವಂಶವಾಹೀಯ ಸಮಸ್ಯೆಗಳು ಅಥವಾ ಮೊನೊಜೆನೆಟಿಕ್‌ ಡಿಸಾರ್ಡರ್‌ಗಳು ಎನ್ನುತ್ತಾರೆ.
  • ವಂಶವಾಹಿಗಳಲ್ಲಿ ಬಳುವಳಿಯಾಗಿ ಬಂದ ಸಣ್ಣ ಪ್ರಮಾಣದ, ಸಂಯೋಜಿತ ವ್ಯತ್ಯಯಗಳು ಬಹು ಅಂಶೀಯ ಬಳುವಳಿ ಸಮಸ್ಯೆಗಳು ಅಥವಾ ಮಲ್ಟಿಫ್ಯಾಕ್ಟೋರಿಯಲ್‌ ಇನ್‌ಹೆರಿಟೆನ್ಸ್‌ ಡಿಸಾರ್ಡರ್‌ಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಇವುಗಳ ಜತೆಗೆ ನೈಸರ್ಗಿಕ ಕಾರಣಗಳೂ ಇರುತ್ತವೆ.
  • ವರ್ಣತಂತುಗಳು ಅಥವಾ ಕ್ರೊಮೊಸೋಮ್‌ಗಳಲ್ಲಿ ಇರುವ ವಂಶವಾಹಿಗಳ ಕೊರತೆ ಅಥವಾ ಹೆಚ್ಚಳದಿಂದ ಅಥವಾ ವರ್ಣತಂತುಗಳಲ್ಲಿ ಸಂರಚನಾತ್ಮಕ ಬದಲಾವಣೆಗಳಿಂದ ವರ್ಣತಂತು ಸಮಸ್ಯೆಗಳು ಅಥವಾ ಕ್ರೊಮೊಸೋಮ್‌ ಡಿಸಾರ್ಡರ್‌ಗಳು ಕಾಣಿಸಿಕೊಳ್ಳುತ್ತವೆ.

ಸ್ವಲೀನತೆ ಅಥವಾ ಆಟಿಸಂ :

ಸಾಮಾಜಿಕವಾಗಿ ತೊಡಗಿಕೊಳ್ಳದಿರು ವುದು, ಶಾಬ್ದಿಕ ಮತ್ತು ಶಬ್ಧೆàತರ ಸಂವಹನಗಳಲ್ಲಿ ವೈಕಲ್ಯಗಳಿಂದೊಡಗೂಡಿದ ನರಗಳ ಬೆಳವಣಿಗೆಗೆ ಸಂಬಂಧಿಸಿದ ಅನಾರೋಗ್ಯವೇ ಸ್ವಲೀನತೆ. ಇದರ ಜತೆಗೆ ನಿರ್ಬಂಧಿತ, ಪುನರಾವರ್ತಿತ ಅಥವಾ ಒಂದೇ ರೀತಿಯ ನಡವಳಿಕೆಯೂ ಸೇರಿರುತ್ತದೆ. ಆಟಿಸಂ ಅಥವಾ ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ (ಎಎಸ್‌ಡಿ)ಗಳು ಸಾಮಾಜಿಕವಾಗಿ ತೊಡಗಿಕೊಳ್ಳದಿರುವುದು, ಶಾಬ್ದಿಕ ಮತ್ತು ಶಬ್ಧೆತರ ಸಂವಹನಗಳಲ್ಲಿ ತೊಂದರೆ, ಪುನರಾವರ್ತಿತ ನಡವಳಿಕೆಗಳು ಅಥವಾ ಚಟುವಟಿಕೆಗಳು ಮತ್ತು ಆಸಕ್ತಿಗಳ ತೀವ್ರ ಸೀಮಿತತೆಯ ಗುಣಲಕ್ಷಣಗಳನ್ನು ಒಳಗೊಂಡಿರುವ ರೋಗ ಲಕ್ಷಣಗಳ ಸಮೂಹವಾಗಿದೆ.

ಸಂಭವನೀಯತೆ :

  • 68ರಲ್ಲಿ ಒಂದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
  • ಆಟಿಸಂಗೆ ಗುರಿಯಾಗುವವರಲ್ಲಿ  ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ 5 ಪಟ್ಟು ಅಧಿಕ.

ಕಾರಣಗಳು :

ವಂಶವಾಹಿಗಳು ಮತ್ತು ಪಾರಿಸರಿಕ ಕಾರಣಗಳು ಸಂಯೋಜಿತವಾಗಿ ಮೆದುಳಿನ ಅವಧಿಪೂರ್ವ ಬೆಳವಣಿಗೆಯನ್ನು ಪ್ರಚೋದಿಸುವ ಮೂಲಕ ಸ್ವಲೀನತೆಗೆ ಸಂಭಾವ್ಯ ಕಾರಣಗಳು ಎನಿಸಿಕೊಳ್ಳುತ್ತವೆ.

ಕೆಲವು ಸಾಮಾನ್ಯ ಗುಣಲಕ್ಷಣಗಳೆಂದರೆ:

  1. ಸಾಮಾಜಿಕ ಸಂವಹನದಲ್ಲಿ ವೈಕಲ್ಯ
  2. ಹೆಸರು ಕರೆಯುವಾಗ ಪ್ರತಿಕ್ರಿಯಿಸಲು ವೈಫ‌ಲ್ಯ
  3. ಇತರರ ಜತೆಗೆ ದೃಷ್ಟಿ ಸಂಪರ್ಕ ಹೊಂದುವುದನ್ನು ತಪ್ಪಿಸಿಕೊಳ್ಳುವುದು
  4. ಆಲೋಚನೆ ಅಥವಾ ಭಾವನೆಗಳನ್ನು ಶಬ್ಧೆàತರ ಸಂವಹನದಲ್ಲಿ ವ್ಯಕ್ತಪಡಿಸಲು ಕಷ್ಟವಾಗುವುದು
  5. ತೂಗುವುದು, ತಿರುಗುವುದು, ಸುತ್ತುವುದು ಅಥವಾ ನೆಗೆಯುವಂತಹ ಕ್ರಿಯೆಗಳಲ್ಲಿ ಪದೇಪದೆ ಸತತವಾಗಿ ತೊಡಗಿಕೊಳ್ಳುವುದು
  6. ಬೆರಳು ಕಚ್ಚುವುದು ಅಥವಾ ತಲೆಯನ್ನು ಜಜ್ಜಿಕೊಳ್ಳುವಂತಹ ಸ್ವಯಂ ಹಾನಿಕಾರಕ ವರ್ತನೆಗಳು
  7. ಮೌಖೀಕ ಐಕ್ಯು ಪರೀಕ್ಷೆಯಲ್ಲಿ ವ್ಯಾಖ್ಯಾನಿಸಲಾದಂತೆ ಬುದ್ಧಿಮಾಂದ್ಯ
  8. ತೀವ್ರ ತರಹದ ಪ್ರಕರಣಗಳಲ್ಲಿ ಮೂಛೆì
  9. ತಲೆಯ ಗಾತ್ರ ಸಣ್ಣದಾಗಿರುವುದು (ಮೈಕ್ರೊಸೆಫಾಲಿ), ತಮ್ಮ ಹೆತ್ತವರ ದೈಹಿಕ ಗುಣಲಕ್ಷಣಗಳನ್ನು ಹೋಲದ ವೈಕಲ್ಯ (ಕೆಲವೊಮ್ಮೆ ಡಿಸ್ಮಾರ್ಫಿಕ್‌ ಫೀಚರ್ ಎನ್ನುತ್ತಾರೆ) ಅಥವಾ ಮೆದುಳಿನ ಸಂರಚನಾತ್ಮಕ ವಿರೂಪಗಳ ಸಹಿತ ದೈಹಿಕ ಬೆಳವಣಿಗೆಯ ಆರಂಭ ಕಾಲದಲ್ಲಿ ತಲೆದೋರುವ ದೈಹಿಕ ವಿರೂಪಗಳು

ರೋಗ ಪತ್ತೆ :

ಸ್ವಲೀನತೆಯು ತೀವ್ರತೆ ಮತ್ತು ಲಕ್ಷಣಗಳಲ್ಲಿ ತುಂಬಾ ವೈವಿಧ್ಯವನ್ನು ಹೊಂದಿರುತ್ತದೆ ಮತ್ತು ಲಘು ಪ್ರಮಾಣದಲ್ಲಿ ಸ್ವಲೀನತೆ ಪೀಡಿತ ಮಕ್ಕಳಲ್ಲಿ ಅಥವಾ ಹೆಚ್ಚು ಎದ್ದುಕಾಣುವ ಅಂಗವೈಕಲ್ಯ ಇರುವವರಲ್ಲಿ ಅದು ಗಮನಕ್ಕೆ ಬಾರದೆಯೇ ಹೋಗಬಹುದು.

  1. ಬೆಳವಣಿಗೆಗೆ ಸಂಬಂಧಿಸಿದ ವಿಶ್ಲೇಷಣೆ

ಬೇಗನೆ ಕಂಡುಬರುವ ಲಕ್ಷಣಗಳು :

  • 1 ವರ್ಷ ವಯಸ್ಸಿನೊಳಗೆ ತೊದಲು ಮಾತು ಅಥವಾ ಬೆರಳು ತೋರಿಸುವುದು ಇಲ್ಲದಿರುವುದು
  • 16 ತಿಂಗಳೊಳಗೆ ಒಂದು ಪದ ಆಡುವುದು ಅಥವಾ 2 ವರ್ಷದ ಒಳಗೆ 2 ಪದಗಳನ್ನು ಆಡದಿರುವುದು
  • ಹೆಸರು ಕರೆದಾಗ ಪ್ರತಿಕ್ರಿಯಿಸದಿರುವುದು
  • ಭಾಷೆ ಮತ್ತು ಸಾಮಾಜಿಕ ಕೌಶಲ ನಷ್ಟ
  • ಕಡಿಮೆ ಪ್ರಮಾಣದ ದೃಷ್ಟಿ ಸಂಪರ್ಕ
  • ಆಟಿಕೆಗಳು ಅಥವಾ ವಸ್ತುಗಳನ್ನು ಅತಿಯಾಗಿ/ ಕ್ರಮವಾಗಿ ಜೋಡಿಸಿಕೊಳ್ಳುವುದು
  • ನಗು ಇಲ್ಲದಿರುವುದು ಅಥವಾ ಸಾಮಾಜಿಕ ಪ್ರತಿಸ್ಪಂದನೆಯ ಕೊರತೆ

ವಿಳಂಬವಾಗಿ ಕಂಡುಬರುವ ಲಕ್ಷಣಗಳು :

  • ಸಮಾನ ವಯಸ್ಕರ ಜತೆಗೆ ಗೆಳೆತನ ಬೆಳೆಸಿಕೊಳ್ಳುವ ಸಾಮರ್ಥ್ಯದ ಕೊರತೆ
  • ಇತರರ ಜತೆಗೆ ಸಂಭಾಷಣೆ ಆರಂಭಿಸುವ ಅಥವಾ ಮುಂದುವರಿಸುವ ಸಾಮರ್ಥ್ಯದ ಕೊರತೆ
  • ಕಲ್ಪನಾತ್ಮಕ ಮತ್ತು ಸಾಮಾಜಿಕ ವರ್ತನೆಯ ಕೊರತೆ ಅಥವಾ ವೈಕಲ್ಯ
  • ಭಾಷೆಯ ಪುನರಾವರ್ತನಾತ್ಮಕ, ಏಕತಾನತೆಯ ಅಥವಾ ಅಸಹಜ ಬಳಕೆ
  • ತೀವ್ರತೆ ಮತ್ತು ಗಮನದಲ್ಲಿ ಅಸಹಜವಾಗಿ ರುವ, ಸೀಮಿತ ಜಾಯಮಾನದ ಆಸಕ್ತಿಗಳು
  • ಕೆಲವು ವಸ್ತುಗಳು ಅಥವಾ ವಿಷಯಗಳ ಬಗ್ಗೆ ಪೂರ್ವಗ್ರಹ
  • ಕೆಲವು ದೈನಿಕ ಕಾರ್ಯಗಳು ಅಥವಾ ರೂಢಿಗಳ ಬಗ್ಗೆ ಸಡಿಲವಾಗದ ವ್ಯಾಮೋಹ
  1. ಒಂದು ಮಗುವಿನ ಬೆಳವಣಿಗೆ ಮತ್ತು ವರ್ತನೆಗಳ ಬಗ್ಗೆ ಮಾಹಿತಿ ಕಲೆಹಾಕುವುದಕ್ಕಾಗಿ ಪ್ರಶ್ನಾವಳಿ ಅಥವಾ ಇತರ ಪರೀಕ್ಷಕ ಮಾರ್ಗೋಪಾಯಗಳು
  2. ನರಶಾಸ್ತ್ರೀಯ ವಿಶ್ಲೇಷಣೆ ಮತ್ತು ಆಳವಾದ ಗ್ರಹಣಾತ್ಮಕ ಮತ್ತು ಭಾಷಿಕ ತಪಾಸಣೆ
  3. ವಂಶವಾಹಿ ವೈದ್ಯಕೀಯ ವಿಶ್ಲೇಷಣೆಗಳು

ಚಿಕಿತ್ಸೆ :

  • ಸ್ವಲೀನತೆ ಗುಣವಾಗುವುದಿಲ್ಲ. ನಿರ್ದಿಷ್ಟ ಲಕ್ಷಣಗಳನ್ನು ಆಧರಿಸಿ, ಅವುಗಳನ್ನು ಉಪ ಶಮನಗೊಳಿಸುವ ಉದ್ದೇಶದಿಂದ ಚಿಕಿತ್ಸೆಗಳು ಮತ್ತು ವರ್ತನಾತ್ಮಕ ಚಿಕಿತ್ಸೆಗಳನ್ನು ವಿನ್ಯಾಸ ಮಾಡಲಾಗುತ್ತದೆ. ಇದರಿಂದ ಗಮನಾರ್ಹ ಬದಲಾವಣೆ ಉಂಟಾಗುವುದಕ್ಕೆ ಸಾಧ್ಯವಿದೆ.
  • ಮಾದರಿ ಚಿಕಿತ್ಸಾ ಯೋಜನೆಯು ಚಿಕಿತ್ಸೆಗಳು ಮತ್ತು ಆಯಾ ಮಗುವಿನ ವ್ಯಕ್ತಿಗತ ಅಗತ್ಯಗಳನ್ನು ಆಧರಿಸಿ ಸಂಯೋಜನೆಗೊಂಡಿರುತ್ತದೆ.

ಶೈಕ್ಷಣಿಕ/ ವರ್ತನಾತ್ಮಕ ಚಿಕಿತ್ಸೆಗಳು :

  • ಅನ್ವಯಿಕ ವರ್ತನಾತ್ಮಕ ವಿಶ್ಲೇಷಣೆಯಂತಹ ಅತ್ಯುನ್ನತ ವಿನ್ಯಾಸಾತ್ಮಕ ಮತ್ತು ತೀವ್ರವಾದ ಕೌಶಲ ಆಧರಿತ ತರಬೇತಿ ತರಗತಿಗಳು ಮಕ್ಕಳು ಸಾಮಾಜಿಕ ಮತ್ತು ಭಾಷಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೆ ಪೂರಕವಾಗುವಂತೆ ರೂಪಿಸಲ್ಪಟ್ಟಿರುತ್ತವೆ.
  • ರೋಗಿ ಮಗು ಮತ್ತು ಹೆತ್ತವರು ಹಾಗೂ ಸಹೋದರ ಸಹೋದರಿಯರಿಗೆ ಆಪ್ತ ಸಮಾಲೋಚನೆ ಒದಗಿಸುವುದರಿಂದ ಸ್ವಲೀನತೆಯ ಸಮಸ್ಯೆ ಹೊಂದಿರುವ ಮಗುವಿನ ಜತೆಗೆ ಬದುಕುವ ನಿರ್ದಿಷ್ಟ ಸವಾಲುಗಳನ್ನು ಎದುರಿಸಲು ಸಹಾಯವಾಗುತ್ತದೆ.

ಅಪಾಯಾಂಶಗಳು :

  • ಗರ್ಭ ಧಾರಣೆಯ ಸಂದರ್ಭದಲ್ಲಿ ಹೆತ್ತವರ (ಇಬ್ಬರದೂ) ವಯಸ್ಸು ಹೆಚ್ಚಾಗಿರುವುದು.
  • ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯ ಅನಾರೋಗ್ಯಗಳು
  • ಪ್ರಸವಕಾಲದಲ್ಲಿ ಕಷ್ಟವಾಗುವುದು, ವಿಶೇಷವಾಗಿ ಮಗುವಿನ ಮೆದುಳಿಗೆ ಆಮ್ಲಜನಕ ಸರಬರಾಜು ಕೊರತೆಗೆ ಕಾರಣವಾಗುವಂಥವು.

ಸ್ವಲೀನತೆಯ ಲಕ್ಷಣಗಳು :

ಸಾಮಾನ್ಯವಾಗಿ ಮಗುವಿಗೆ 3 ವರ್ಷ ವಯಸ್ಸಾಗುವುದಕ್ಕೆ ಮುನ್ನವೇ ಸ್ವಲೀನತೆ ಬೆಳವಣಿಗೆಯಾಗುತ್ತದೆ ಮತ್ತು ಪ್ರತೀ ಮಗುವನ್ನೂ ವಿಭಿನ್ನವಾಗಿ ಮತ್ತು ವಿಭಿನ್ನ ಪ್ರಮಾಣಗಳಲ್ಲಿ ಬಾಧಿಸುತ್ತದೆ. ತುಲನಾತ್ಮಕವಾಗಿ ಲಘುವಾದ ಸಾಮಾಜಿಕ ಮತ್ತು ಸಂವಹನಾತ್ಮಕ ವೈಕಲ್ಯಗಳಿಂದ ತೊಡಗಿ ಜೀವನ ಪರ್ಯಂತ ಹೆತ್ತವರು, ಶಾಲೆ ಮತ್ತು ಸಾಮಾಜಿಕ ನೆರವು ಅಗತ್ಯವಾಗುವ ತೀವ್ರತರಹದ ವೈಕಲ್ಯಗಳ ವರೆಗೆ ಇರುತ್ತದೆ.

ಔಷಧಗಳು :

  • ಆತಂಕ, ಖನ್ನತೆ ಅಥವಾ ಒಬ್‌ಸೆಸಿವ್‌ ಕಂಪಲ್ಶನ್‌ ಡಿಸಾರ್ಡರ್‌ನಂತಹ ನಿರ್ದಿಷ್ಟ ಸ್ವಲೀನತೆ ಸಂಬಂಧಿ ತೊಂದರೆಗಳಿಗೆ ಔಷಧಗಳು.

ಅಭಿವೃದ್ಧಿಗೆ ಸಂಬಂಧಿಸಿದ ಚಿಕಿತ್ಸೆಗಳು :

  • ಇತರರ ಜತೆಗೆ ಧನಾತ್ಮಕ, ಅರ್ಥವತ್ತಾದ ಸಂಬಂಧವನ್ನು ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿ.
  • ಪ್ರತೀ ದಿನ ಸಂರಚನಾತ್ಮಕ ವ್ಯವಸ್ಥೆಯ ಮೂಲಕ ಸಾಮಾಜಿಕ ಮತ್ತು ಸಂವಹನ ಕೌಶಲಗಳನ್ನು ಬೆಳೆಸುವುದು.

ಸಂಯೋಜಿತ ಚಿಕಿತ್ಸೆಗಳು :

  • ವರ್ತನಾತ್ಮಕ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಧಾನಗಳನ್ನು ಸಂಯೋಜಿಸುವುದು.

ಕುಟುಂಬ ಆಧರಿತ ಚಿಕಿತ್ಸೆಗಳು :

  • ಚಿಕಿತ್ಸೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಅವುಗಳನ್ನು ಜಾರಿಗೊಳಿಸುವಲ್ಲಿ ಹೆತ್ತವರು ನಿರ್ಣಯಾತ್ಮಕ ನಿಲುವು ತೆಗೆದುಕೊಳ್ಳುತ್ತಾರೆ.
  • ಕುಟುಂಬ ಸದಸ್ಯರಿಗೆ ಮಾರ್ಗದರ್ಶನ, ತರಬೇತಿ, ಮಾಹಿತಿ ಮತ್ತು ಬೆಂಬಲವನ್ನು ಒದಗಿಸುವುದು.

ಚಿಕಿತ್ಸೆ ಆಧರಿತ ವಿಧಾನಗಳು :

  • ನಿರ್ದಿಷ್ಟ ಸಮಸ್ಯೆಗಳನ್ನು ಗುರಿ ಮಾಡಿದ ನಿರ್ದಿಷ್ಟ ವಿಧಾನಗಳು

ಸ್ವಲೀನತೆಯ ಜತೆಗೆ ಜೀವಿಸುವುದು :

ಸ್ವಲೀನತೆಯನ್ನು ಹೊಂದಿರುವ ಮಗುವನ್ನು ಬೆಳೆಸುವುದು ಹೆತ್ತವರು ಹಾಗೂ ಕುಟುಂಬದ ಇತರ ಸದಸ್ಯರ ಮೇಲೆ ಸ್ವಲ್ಪ ಹೆಚ್ಚೇ ಎನ್ನಿಸುವಂತಹ ಜವಾಬ್ದಾರಿಗಳನ್ನು ಹೊರಿಸುತ್ತದೆ. ಸ್ವಲೀನತೆಯನ್ನು ಹೊಂದಿರುವ ಮಗುವಿಗಾಗಿ ಗರಿಷ್ಠ ಪ್ರಯತ್ನಗಳನ್ನು ನಡೆಸಿದರೂ ಕುಟುಂಬದ ಬೇಡಿಕೆಗಳಿಗೆ ಸ್ಪಂದಿಸುವ ಸವಾಲನ್ನು ಹೆತ್ತವರು ಎದುರಿಸುತ್ತಾರೆ. ವ್ಯಕ್ತಿಗತವಾಗಿ ತಮ್ಮ ಜೀವನ “ಹಿಡಿದಿಟ್ಟ’ ಸ್ಥಿತಿಯಲ್ಲಿದ್ದರೂ ಪರಸ್ಪರ ಅರ್ಥ ಮಾಡಿಕೊಂಡು ಇತರ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಪ್ರಯತ್ನಗಳನ್ನು ಕೆಲವು ಹೆತ್ತವರು ನಡೆಸುತ್ತಾರೆ. ಇದರ ಪರಿಣಾಮವಾಗಿ ಸ್ವಲೀನತೆಯನ್ನು ಹೊಂದಿರುವ ಮಗು ಮತ್ತು ಇತರ ಮಕ್ಕಳ ಬೇಡಿಕೆಗಳ ನಡುವೆ ಸದಾ ಸಂಘರ್ಷ ಏರ್ಪಡುತ್ತದೆ.

ಹೆತ್ತವರಿಗೆ ಒತ್ತಡ ಮೂಲಗಳು :

  • ಮಗುವಿನ ಸ್ವಲೀನತೆಯ ವರ್ತನೆ
  • ದೈಹಿಕವಾದ ಹೊರೆ ಮತ್ತು ಭಾವನಾತ್ಮಕ ಹೊರೆ
  • ಭವಿಷ್ಯದ ಆರೈಕೆಯ ಬಗ್ಗೆ ಚಿಂತೆ
  • ಸಮಾಜದಿಂದ ಪ್ರತ್ಯೇಕಗೊಂಡ ಭಾವನೆ
  • ದುಃಖ
  • ಆರ್ಥಿಕ ಹೊರೆ
  • ಸ್ವಂತಕ್ಕೆ ಮತ್ತು ಕುಟುಂಬದ ಇತರರ ಸದಸ್ಯರಿಗೆ ಸಮಯದ ಕೊರತೆ

ಸಹೋದರ – ಸಹೋದರಿಯರಿಗೆ ಒತ್ತಡದ ಮೂಲಗಳು :

  • ಸಮಾನ ವಯಸ್ಕರ ನಡುವೆ ಮುಜುಗರ
  • ಸ್ವಲೀನತೆಯ ಸಮಸ್ಯೆ ಹೊಂದಿರುವ ತನ್ನ ಸಹೋದರ/ ಸಹೋದರಿಗೆ ಹೆತ್ತವರು ನೀಡುವ ಸಮಯ, ಆರೈಕೆ, ಗಮನದ ಬಗ್ಗೆ ಅಸೂಯೆ
  • ಸಹೋದರ/ಸಹೋದರಿಯಿಂದ ಪ್ರತಿಸ್ಪಂದನೆ ಪಡೆಯಲು ಸಾಧ್ಯವಾಗದ ಬಗ್ಗೆ ಹತಾಶೆ
  • ಆಕ್ರಮಣಕಾರಿ ವರ್ತನೆಗೆ ಗುರಿ
  • ಸಹೋದರ/ ಸಹೋದರಿಯ ಕೊರತೆಗಳನ್ನು ತುಂಬುವ ಪ್ರಯತ್ನ
  • ಹೆತ್ತವರ ಒತ್ತಡ ಮತ್ತು ದುಃಖದ ಬಗ್ಗೆ ಕಳವಳ
  • ಭವಿಷ್ಯದ ಆರೈಕೆಯಲ್ಲಿ ತಮ್ಮ ಪಾತ್ರದ ಬಗ್ಗೆ ಕಳವಳ

ಕುಟುಂಬಕ್ಕೆ ಸಹಾಯವಾಗುವಂತಹ ಕಾರ್ಯತಂತ್ರಗಳು :

  • ಮಗುವಿನ ವೈಯಕ್ತಿಕ ಸ್ಥಿತಿಗತಿ ಮತ್ತು ಬೇಡಿಕೆಗಳ ಬಗ್ಗೆ ಅರಿತುಕೊಂಡಿರಿ
  • ವಾಸ್ತವಿಕ ಗುರಿಗಳು ಮತ್ತು ಸಮರ್ಪಕವಾದ ಹೊಣೆಗಾರಿಕೆಗಳನ್ನು ಇರಿಸಿಕೊಳ್ಳಿ
  • ಧನಾತ್ಮಕ ಚಿಂತನೆ ಮತ್ತು ಸ್ವಗತ
  • ದೊಡ್ಡ ಹೊಣೆಗಳನ್ನು ಸಣ್ಣ ಸಣ್ಣವಾಗಿ ವಿಭಾಗಿಸಿಕೊಳ್ಳಿ
  • ಏಕಾಂಗಿಯಾಗಿ, ಪ್ರತ್ಯೇಕವಾಗಿ ಇರುವ ಬದಲು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಿ
  • ನಿಮ್ಮನ್ನು ಹುರಿದುಂಬಿಸುವ, ಒತ್ತಡ ಕಡಿಮೆ ಮಾಡುವ ವ್ಯಾಯಾಮ, ಸಿನೆಮಾ ವೀಕ್ಷಣೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ
  • ವಿಶ್ರಾಮದಾಯಕ ಮತ್ತು ಉಸಿರಾಟ ಕಾರ್ಯತಂತ್ರಗಳು
  • ನಿಮ್ಮ ಮನೋಭಾವ ಕಾಲಕ್ರಮೇಣ ಸರಿಹೋಗುವುದನ್ನು ನಿರೀಕ್ಷಿಸಿ
  • ಒತ್ತಡ ಕಡಿಮೆಯಾಗುವ ತನಕ ಪ್ರಮುಖ ನಿರ್ಧಾರಗಳನ್ನು ಮುಂದೂಡಿ
  • ಕೌಟುಂಬಿಕ ಸಂಪ್ರದಾಯಗಳನ್ನು ಪಾಲಿಸಿ
  • ನಿಮ್ಮ ಸಂಗಾತಿ, ಕುಟುಂಬ ಮತ್ತು ಗೆಳೆಯ-ಗೆಳತಿಯರಿಂದ ಸಹಾಯವನ್ನು ಸ್ವೀಕರಿಸಿ.

 

ಸ್ವಲೀನತೆ ಹೊಂದಿರುವ ಮಗುವಿಗೆ ಸಹಾಯ :

  • ಆಕೆ/ ಆತ ಮಗು ಎಂಬುದನ್ನು ನೆನಪಿಡಿ
  • ಆತ/ಆಕೆಯ ಇಂದ್ರಿಯಗಳು ಸಹಜವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಿ
  • ನಾನು ಮಾಡುವುದಿಲ್ಲ’ ಮತ್ತು “ನನ್ನಿಂದ ಆಗುವುದಿಲ್ಲ’ ಎಂಬುದರ ನಡುವೆ ವ್ಯತ್ಯಾಸ ಅರಿತುಕೊಳ್ಳಿ
  • ಭಾಷೆಯನ್ನು ಅಕ್ಷರಶಃ ವ್ಯಾಖ್ಯಾನಿಸಿ
  • ಆತ/ ಆಕೆ ಸಂವಹನ ನಡೆಸುವ ಎಲ್ಲ ವಿಧಾನಗಳನ್ನು ಆಲಿಸಿ/ ಅನುಭವಿಸಿ
  • ಆತ/ ಆಕೆಗೆ ದೃಶ್ಯ ಸಂಬಂಧಿ ಸಾಮರ್ಥ್ಯ ಇದೆ ಎಂಬುದನ್ನು ತಿಳಿಯಿರಿ
  • ಆತ/ಆಕೆಗೆ ಏನು ಸಾಧ್ಯವಿಲ್ಲ ಎಂಬುದಕ್ಕಿಂತ ಆತ/ ಆಕೆಗೆ ಯಾವುದು ಸಾಧ್ಯ ಎಂಬುದರ ಮೇಲೆ ಹೆಚ್ಚು ಗಮನ ಕೊಡಿ
  • ಸಾಮಾಜಿಕ ಸಂವಹನ, ಚಟುವಟಿಕೆಗಳಲ್ಲಿ ಸಹಾಯ ಮಾಡಿ
  • ಸ್ವಲೀನತೆಯ ಲಕ್ಷಣಗಳು ಯಾವುದರಿಂದ ತಗ್ಗುತ್ತವೆ ಎಂಬುದನ್ನು ಗುರುತಿಸಿಕೊಳ್ಳಿ
  • ಯಾವ ನಿರ್ಬಂಧ/ ಶರತ್ತುಗಳೂ ಇಲ್ಲದೆ ಮಗುವನ್ನು ಪ್ರೀತಿಸಿ

 

 

ಸುನೀತಾ ಸೊಲೊಮನ್‌ ನಗೆಲ್ಲಿ

ಪಿಎಚ್‌ಡಿ ರಿಸರ್ಚ್‌ ಸ್ಕಾಲರ್‌,

ಮಣಿಪಾಲ ನರ್ಸಿಂಗ್‌ ಕಾಲೇಜು,

ಮಾಹೆ, ಮಣಿಪಾಲ

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.