ಆರೋಗ್ಯಯುತ ಯಕೃತ್ತಿನ ಪ್ರಯೋಜನ

ಹೊಸ ವರ್ಷಕ್ಕೆ ಯಕೃತ್‌ ಆರೋಗ್ಯವರ್ಧಕ ನಿರ್ಣಯಗಳು

Team Udayavani, Jan 15, 2023, 3:51 PM IST

9–liver-problem

ಹಳೆಯ ವರ್ಷ ಕೊನೆಯಾಗಿ, ಹೊಸ ವರ್ಷ ಆರಂಭವಾಗುವ ಸಂದರ್ಭಗಳಲ್ಲಿ ಪಾರ್ಟಿಗಳ ಮೋಜು ಮಸ್ತಿಗಳಲ್ಲಿ ನಾವು ಹೆಚ್ಚು ತೊಡಗಿಸಿಕೊಳ್ಳುವುದು ವಾಡಿಕೆ. ಆದರೆ ಇದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದನ್ನು ನಾವು ಅಷ್ಟಾಗಿ ಲಕ್ಷಿಸುವುದಿಲ್ಲ. ಹೊಸ ವರ್ಷ 2023 ಇದೀಗ ತಾನೇ ಆರಂಭವಾಗಿದೆ. ಹೊಸ ವರ್ಷದಲ್ಲಿ ಹೊಸ ನಿರ್ಣಯಗಳನ್ನು ತೆಗೆದುಕೊಂಡು ಜಾರಿಗೊಳಿಸುವ ಪರಿಪಾಠ ನಮ್ಮಲ್ಲಿದೆ. ಯಕೃತ್‌ ನಮ್ಮ ದೇಹದಲ್ಲಿ ಇರುವ ಒಂದು ಪ್ರಾಮುಖ್ಯವಾದ ಅಂಗವಾಗಿದ್ದರೂ ಆರೋಗ್ಯದ ವಿಚಾರವನ್ನು ಗಣನೆಗೆ ತೆಗೆದುಕೊಂಡರೆ ಅದು ಸಾಮಾನ್ಯವಾಗಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದೂ ಆಗಿದೆ. ಈ ವರ್ಷ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿರ್ಣಯಗಳನ್ನು ನಾವು ತೆಗೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಯಕೃತ್‌ ಯಾಕೆ ಅಷ್ಟು ಪ್ರಾಮುಖ್ಯ?

ಯಕೃತ್‌ ನಮ್ಮ ದೇಹದಲ್ಲಿ ಇರುವ ಅತೀ ದೊಡ್ಡ ಘನ ಅಂಗವಾಗಿದೆ. ನಮ್ಮ ದೇಹದ ಹಲವಾರು ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯುವಲ್ಲಿ ಅದರ ಪಾತ್ರ ಪ್ರಧಾನವಾಗಿದೆ. ನಾವು ಸಜೀವವಾಗಿರಲು ಅಗತ್ಯವಾದ ಸುಮಾರು 500ಕ್ಕೂ ಹೆಚ್ಚು ಕ್ರಿಯೆಗಳನ್ನು ಯಕೃತ್‌ ನಡೆಸಿಕೊಡುತ್ತದೆ. ನಮ್ಮ ರಕ್ತದಲ್ಲಿ ಇರುವ ಅಪಾಯಕಾರಿ ವಿಷಾಂಶಗಳನ್ನು ಹೊರಹಾಕುವುದು, ಪೌಷ್ಟಿಕಾಂಶಗಳು ಮತ್ತು ಔಷಧಗಳನ್ನು ಚಯಾಪಚಯ ಕ್ರಿಯೆಗೊಳಪಡಿಸುವುದು, ಪ್ರೊಟೀನ್‌ಗಳ ಸಂಶ್ಲೇಷಣೆ, ಪಿತ್ಥರಸವನ್ನು ಉತ್ಪಾದಿಸುವುದು ಇತ್ಯಾದಿಗಳು ಯಕೃತ್ತಿನ ಪ್ರಮುಖ ಕಾರ್ಯಗಳಲ್ಲಿ ಕೆಲವು. ಜಾಗತಿಕವಾಗಿ ಪ್ರತೀ ವರ್ಷ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ 20 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತೀಯರ ವಿಚಾರದಲ್ಲಿ ಹೇಳುವುದಾದರೆ, ಪ್ರತೀ ಐವರಲ್ಲಿ ಒಬ್ಬರು ಯಕೃತ್ತಿನ ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಬಹುತೇಕ ಯಕೃತ್‌ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.

ಯಕೃತ್‌ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ­

ಅತಿಯಾದ ಮದ್ಯಪಾನ ತ್ಯಜಿಸಿ

ಮಹಿಳೆಯರು ದಿನಕ್ಕೆ ಒಂದು ಅಳತೆ ಮತ್ತು ಪುರುಷರು ದಿನಕ್ಕೆ ಎರಡು ಅಳತೆಗಳಿಗಿಂತ ಹೆಚ್ಚು ಮದ್ಯಪಾನ ಮಾಡಬಾರದು. ನೀವು ಈಗಾಗಲೇ ಯಕೃತ್‌ ಸಂಬಂಧಿ ಕಾಯಿಲೆಯನ್ನು ಹೊಂದಿದ್ದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳಿತು. ­

ಆರೋಗ್ಯಪೂರ್ಣ ದೇಹತೂಕವನ್ನು ಕಾಯ್ದುಕೊಳ್ಳಿ

ಅತಿಯಾದ ದೇಹತೂಕ ಹೊಂದುವುದನ್ನು ಮತ್ತು ನಿಮ್ಮ ಹೊಟ್ಟೆ, ಸೊಂಟದ ಸುತ್ತ ಬೊಜ್ಜು ಶೇಖರಗೊಳ್ಳುವುದನ್ನು ತಡೆಯಿರಿ. ಆರೋಗ್ಯಪೂರ್ಣ ಆಹಾರ ಸೇವನೆ, ನಿಯಮಿತ ವ್ಯಾಯಾಮದ ಮೂಲಕ ನಾನ್‌-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌ ಉಂಟಾಗದಂತೆ ರಕ್ಷಿಸಿಕೊಳ್ಳಿ, 18-23 ಕೆಜಿ/ಸೆಂ. ಮೀ.2 ಬಿಎಂಐ ಕಾಪಾಡಿಕೊಳ್ಳಿರಿ. ­

ಆರೋಗ್ಯಪೂರ್ಣ ಮತ್ತು ಸಮತೋಲಿತ ಆಹಾರ

ಹೆಚ್ಚು ಕೊಬ್ಬಿನಂಶ ಇರುವ ಅತಿಯಾದ ಕ್ಯಾಲೊರಿ ಹೊಂದಿರುವ ಆಹಾರವಸ್ತುಗಳು (ಎಣ್ಣೆ/ತುಪ್ಪ/ವನಸ್ಪತಿ), ಸಕ್ಕರೆ ಮತ್ತು ಮೈದಾದಂತಹ ಸಂಸ್ಕರಿತ ಕಾಬೊìಹೈಡ್ರೇಟ್‌ ಗಳನ್ನು ಹೆಚ್ಚು ಸೇವಿಸಬೇಡಿ. ತರಕಾರಿ ಮತ್ತು ಹಣ್ಣುಹಂಪಲುಗಳಂತಹ ನಾರಿನಂಶ ಅಧಿಕವಿರುವ ಆಹಾರಗಳನ್ನು ಹೆಚ್ಚು ಸೇವಿಸಿ. ಮಟನ್‌, ಬೀಫ್, ಪೋರ್ಕ್‌ ಇತ್ಯಾದಿ ಕೆಂಪು ಮಾಂಸಗಳಿಗೆ ಬದಲಾಗಿ ಮೀನು, ಚಿಕನ್‌ನಂತಹ ಬಿಳಿ ಮಾಂಸ ಹೆಚ್ಚು ಉಪಯೋಗಿಸಿ.

­ಅಪಾಯ ಹೆಚ್ಚಿಸಿಕೊಳ್ಳುವ ನಡವಳಿಕೆಯನ್ನು ತ್ಯಜಿಸಿ

ಒಬ್ಬರಿಗಿಂತ ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ಅಪಾಯ ಹೆಚ್ಚಿಸಿಕೊಳ್ಳುವ ನಡವಳಿಕೆ ಬೇಡ. ಹಾಗೆಯೇ ಮಾದಕದ್ರವ್ಯ ವ್ಯಸನಕ್ಕೂ ಬಲಿಯಾಗಬೇಡಿ. ಇದರಿಂದ ವೈರಲ್‌ ಹೆಪಟೈಟಿಸ್‌ ಬಿ ಮತ್ತು ಸಿ ಸೋಂಕು ತಗಲುವುದು ತಪ್ಪುತ್ತದೆ.

­ಲಸಿಕೆ

ಹೆಪಟೈಟಿಸ್‌ ಬಿ ಮತ್ತು ಹೆಪಟೈಟಿಸ್‌ ಎ ವಿರುದ್ಧ ಪರಿಣಾಮಕಾರಿ ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಹಾಕಿಸಿಕೊಳ್ಳಿ.

­ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ

ಶೌಚಾಲಯ ಬಳಕೆಯ ಬಳಿಕ, ಆಹಾರ ಸೇವನೆ ಅಥವಾ ಆಹಾರ ತಯಾರಿಗೆ ಮುನ್ನ ಮತ್ತು ಬಳಿಕ ಕೈಗಳನ್ನು ಸಾಬೂನು ಉಪಯೋಗಿಸಿ ಶುಚಿಗೊಳಿಸಿಕೊಳ್ಳುವುದು, ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸುವುದು, ಚೆನ್ನಾಗಿ ಕುದಿದು ಆರಿಸಿದ ನೀರನ್ನು ಕುಡಿಯುವುದು ಇತ್ಯಾದಿ ವೈಯಕ್ತಿಕ ನೈರ್ಮಲ್ಯ ಕ್ರಮಗಳಿಂದ ಹೆಪಟೈಟಿಸ್‌ ಎ ಮತ್ತು ಇ ಸೋಂಕುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಗಡ್ಡ ತೆಗೆಯುವ ರೇಜರ್‌, ಹಲ್ಲುಜ್ಜುವ ಬ್ರಶ್‌, ಚುಚ್ಚುಮದ್ದಿನ ಸೂಜಿಗಳು ಇತ್ಯಾದಿ ವೈಯಕ್ತಿಕ ಸಲಕರಣೆಗಳನ್ನು ಇತರರ ಜತೆಗೆ ಹಂಚಿಕೊಳ್ಳದೆ ಇರುವ ಮೂಲಕ ಹೆಪಟೈಟಿಸ್‌ ಬಿ ಮತ್ತು ಸಿಗಳಿಂದ ರಕ್ಷಣೆ ಪಡೆಯಬಹುದು.

­ವೈದ್ಯರನ್ನು ಸಂಪರ್ಕಿಸಿ

ಅತಿಯಾದ ಮದ್ಯಸೇವನೆ, ಯಕೃತ್‌ ಕಾಯಿಲೆಯ ಕೌಟುಂಬಿಕ ಇತಿಹಾಸ, ಅತಿಯಾದ ದೇಹತೂಕ, ಮಧುಮೇಹ, ಹೆಪಟೈಟಿಸ್‌ ಬಿ/ಸಿ ಸೋಂಕು ಇತ್ಯಾದಿ ಅಪಾಯಾಂಶಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ವೈದ್ಯಕೀಯ ಆರೈಕೆ ಪಡೆಯಿರಿ.

ನಮ್ಮ ಜೀವನಶೈಲಿಯಲ್ಲಿ ಯಕೃತ್ತಿನ ಆರೋಗ್ಯಕ್ಕೆ ಪೂರಕವಾದ ಆರೋಗ್ಯಪೂರ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಜೀವನವನ್ನು ನಮ್ಮದಾಗಿಸಿಕೊಳ್ಳುವ ಶಪಥವನ್ನು ಹೊಸ ವರ್ಷದಲ್ಲಿ ನಡೆಸೋಣ. ಇದರಿಂದ ಸಮಾಜದಲ್ಲಿ ಯಕೃತ್‌ ಕಾಯಿಲೆಗಳ ಒಟ್ಟು ಹೊರೆ ಕಡಿಮೆಯಾಗುವುದಕ್ಕೆ ಸಹಾಯವಾಗಲಿದೆ. ನಮ್ಮ ದೈನಿಕ ಜೀವನದಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಕೂಡ ಭವಿಷ್ಯದಲ್ಲಿ ಯಕೃತ್ತನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ.

ಡಾ| ಅನುರಾಗ್‌ ಶೆಟ್ಟಿ,

ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.