![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 8, 2020, 12:52 PM IST
ಉತ್ಕಟಾಸನಕ್ಕೆ ಗರುಡಾಸನವೆಂಬಇನ್ನೊಂದು ಹೆಸರೂ ಇದೆ. ಇದು ನೋಡಲು ಸುಲಭವಾಗಿಕಂಡುಬಂದರೂ, ವಾಸ್ತವಹಾಗಿಲ್ಲ. ಉತ್ಕಟ ಎಂದರೆ ಕುರ್ಚಿ ಎಂದರ್ಥವಿದೆ. ಕುರ್ಚಿಯ ರೀತಿಯಲ್ಲಿಕೂರುವ ಈ ಭಂಗಿಗೆ ಉತ್ಕಟಾಸನ ಎಂದು ಕರೆಯುತ್ತಾರೆ.
ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಎರಡೂ ಕೈಗಳನ್ನೂ ನಿಧಾನವಾಗಿ ಮೇಲಕ್ಕೆತ್ತಿ.ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ. ಈಗ ದೀರ್ಘವಾಗಿ ಉಸಿರಾಡುತ್ತಾ ಎರಡೂ ಕೈಗಳನ್ನು ಸಂಪೂರ್ಣ ಮೇಲಕ್ಕೆತ್ತಿ. ಹೀಗೆ ಮಾಡುವಾಗ ಎರಡೂ ಕೈಗಳು ನಮಸ್ಕರಿಸುವ ಭಂಗಿಯಲ್ಲಿರಲಿ. ಈಗ ನಿಧಾನವಾಗಿ ಉಸಿರನ್ನು ತೆಗೆದುಕೊಂಡು, ಉಸಿರನ್ನು ಹೊರ ಹಾಕುತ್ತಾ ಮಂಡಿಗಳನ್ನು ಬಗ್ಗಿಸಿ ನಿಧಾನವಾಗಿ ಕುರ್ಚಿಯ ಭಂಗಿಯಲ್ಲಿ ನಿಲ್ಲಿ. ಹೀಗೆ ನಿಂತಾಗ ಬೆನ್ನು ನೇರವಾಗಿರಲಿ. ದೃಷ್ಟಿಯೂ ನೇರವಾಗಿರಲಿ. ಈ ಭಂಗಿಯಲ್ಲಿಯೇ ಐದು ನಿಮಿಷ ನಿಲ್ಲಿ. ಈ ಸಮಯದಲ್ಲಿ ದೀರ್ಘವಾಗಿ ಉಸಿರಾಡುತ್ತಿರಬೇಕು. ಉಸಿರನ್ನು ತೆಗೆದುಕೊಳ್ಳುವುದು ಮತ್ತು ಬಿಡುವುದು ನಿರಂತರವಾಗಿ ಆಗುತ್ತಿರಬೇಕು.
ಮೊದಲೇ ಹೇಳಿದಂತೆ ಈ ಆಸನ ಮಾಡುವಾಗಕಷ್ಟ ಅನ್ನಿಸಬಹುದು. ಉತ್ಕಟಾಸನ ಮಾಡುವಾಗ ಬ್ಯಾಲೆನ್ಸ್ ಸಿಗದಿದ್ದರೆ ಬಿದ್ದು ಬಿಡುವ ಅಪಾಯವಿರುತ್ತದೆ. ಹಾಗಾಗಿ, ಪ್ರಾರಂಭದಲ್ಲಿ ಗೋಡೆಯ ಬಳಿ ಅಭ್ಯಾಸಮಾಡುವುದು ಜಾಣತನ. ಉತ್ಕಟಾಸನ ಮಾಡುವುದರಿಂದಕಾಲುಗಳಲ್ಲಿನ ಅನೇಕ ದೋಷಗಳು ದೂರವಾಗುವುವು. ಬೆನ್ನು ನೋವುಮಾಯವಾಗುವುದು.ಕಾಲುಗಳು ಬಲಿಷ್ಠಗೊಳ್ಳುವವು. ಹೊಟ್ಟೆಯಲ್ಲಿನ ಮತ್ತು ತೊಡೆಗಳಲ್ಲಿರುವ ಕೊಬ್ಬಿನಂಶ ಕರಗುವುದು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.