Glucometer ಬಳಸಿ ಮನೆಯಲ್ಲಿಯೇ ರಕ್ತದ ಗ್ಲುಕೋಸ್‌ ಮಾಪನ


Team Udayavani, Nov 5, 2023, 11:50 AM IST

3-glucometer

ಪ್ರತೀ ವರ್ಷ ನವೆಂಬರ್‌ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಾರೆ. ಜೀವನಶೈಲಿಗೆ ಸಂಬಂಧಿಸಿದ ಈ ಕಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವ ಪ್ರಮುಖ ಅಭಿಯಾನ ಸ್ವರೂಪದ ದಿನಾಚರಣೆ ಇದು. ಈ ದಿನಾಚರಣೆಯ ಪ್ರಧಾನ ಧ್ಯೇಯವು ಮಧುಮೇಹದ ಬಗ್ಗೆ ಮಾಹಿತಿ, ಜ್ಞಾನ ವಿಸ್ತರಣೆಯತ್ತ ಕೇಂದ್ರೀಕರಿಸಿದೆ. ಇದರಲ್ಲಿ ಒಂದು ಮಧುಮೇಹದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು. ಈ ಹಿನ್ನೆಲೆಯಲ್ಲಿ ಗ್ಲುಕೊಮೀಟರನ್ನು ಸಮರ್ಪಕವಾಗಿ ಉಪಯೋಗಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರಕ್ರಿಯೆ

1. ಟೆಸ್ಟ್‌ ಸ್ಟ್ರಿಪ್‌ ಅಳವಡಿಕೆ: ಬಾಟಲಿಯಿಂದ ಟೆಸ್ಟ್‌ ಸ್ಟ್ರಿಪ್‌ನ್ನು ಹೊರತೆಗೆಯಿರಿ. ಇತರ ಟೆಸ್ಟ್‌ ಸ್ಟ್ರಿಪ್‌ಗಳಿಗೆ ತೇವಾಂಶ ಸೇರಿಕೊಳ್ಳುವುದನ್ನು ತಡೆಯಲು ಬಾಟಲಿಯನ್ನು ಕೂಡಲೇ ಮುಚ್ಚಳ ಮುಚ್ಚಿ. ಇನ್ನು ಟೆಸ್ಟ್‌ ಸ್ಟ್ರಿಪ್‌ನ್ನು ಅಳವಡಿಸಿ.

  1. ಕೋಡ್‌ ನಂಬರ್‌ ತಾಳೆ ನೋಡಿ: ಗ್ಲುಕೊಮೀಟರ್‌ ಸ್ವಯಂಚಾಲಿತವಾಗಿ ಆನ್‌ ಆಗಿ ಕೋಡ್‌ ನಂಬರ್‌ ಪ್ರದರ್ಶಿಸುತ್ತದೆ. ಗ್ಲುಕೊಮೀಟರ್‌ ನಲ್ಲಿ ಕಾಣಿಸುತ್ತಿರುವ ಕೋಡ್‌ ನಂಬರ್‌ ಮತ್ತು ಟೆಸ್ಟ್‌ ಸ್ಟ್ರಿಪ್‌ ವಯಲ್‌ನಲ್ಲಿ ಇರುವ ಕೋಡ್‌ ನಂಬರ್‌ ಒಂದೇ ಆಗಿದೆಯೇ ಎಂದು ಗಮನಿಸಿ. ಅವೆರಡೂ ತಾಳೆಯಾಗದೆ ಇದ್ದಲ್ಲಿ ಮೀಟರನ್ನು ಸರಿಯಾಗಿ ಕೋಡ್‌ ಮಾಡಿ. ಅಥವಾ ಕೆಲವು ಗ್ಲುಕೊಮೀಟರ್‌ಗಳಲ್ಲಿ ಟೆಸ್ಟ್‌ ಸ್ಟ್ರಿಪ್‌ ಅಳವಡಿಸಿದ ಬಳಿಕ ರಕ್ತದ ಸಂಕೇತ ಪ್ರದರ್ಶಿಸಲ್ಪಡುತ್ತದೆ.
  2. ರಕ್ತದ ಮಾದರಿ ಅಳವಡಿಸಿ: 3 ಸೆಕೆಂಡ್‌ ಗಳ ಕಾಲ ಕೋಡ್‌ ಪ್ರದರ್ಶನವಾದ ಬಳಿಕ ರಕ್ತದ ಸಂಕೇತ ಕಾಣಿಸುತ್ತದೆ. ರಕ್ತವನ್ನು ಪಡೆಯಲು ನಿರ್ಧಾರವಾದ ಸ್ಥಳದಲ್ಲಿ ಚುಚ್ಚಿ (ಮಧ್ಯ ಮತ್ತು ಉಂಗುರ ಬೆರಳು ಅತ್ಯುತ್ತಮ).
  3. ರಕ್ತದ ಬಿಂದು ಇರುವ ನಿಮ್ಮ ಬೆರಳಿನ ತುದಿಯನ್ನು ಗ್ಲುಕೊಮೀಟರ್‌ ಸ್ಟ್ರಿಪ್‌ಗೆ ಸ್ಪರ್ಶಿಸಿ.
  4. ಟೆಸ್ಟ್‌ ಸ್ಟ್ರಿಪ್‌ನ ಮಾಪನ ಭಾಗವು ಸ್ವಯಂಚಾಲಿತವಾಗಿ ನಿಮ್ಮ ಬೆರಳಿನಲ್ಲಿ ಇರುವ ರಕ್ತ ಬಿಂದುವನ್ನು ಹೀರಿಕೊಳ್ಳುತ್ತದೆ. ಗ್ಲುಕೋಮೀಟರ್‌ನ ಕನ್‌ಫ‌ರ್ಮೇಶನ್‌ ವಿಂಡೋ ಭರ್ತಿಯಾಗಿ “ಬೀಪ್‌’ ಸದ್ದು ಬರುವವರೆಗೂ ನಿಮ್ಮ ಬೆರಳು ಸ್ಥಿರವಾಗಿರಬೇಕು.

ಫ‌ಲಿತಾಂಶ

“ಬೀಪ್‌’ ಸದ್ದು ಬಂದ ಬಳಿಕ ಸ್ವಯಂ ಚಾಲಿತವಾಗಿ ರಕ್ತಪರೀಕ್ಷೆ ನಡೆಯುತ್ತದೆ, ಡಿಸ್‌ಪ್ಲೇಯಲ್ಲಿ 5ರಿಂದ 1ರ ವರೆಗೆ ಕೌಂಟ್‌ ಡೌನ್‌ ನಡೆಯುತ್ತದೆ. ಬಳಿಕ ಡೆಸಿಲೀಟರ್‌ ರಕ್ತದಲ್ಲಿ ಮಿಲಿಗ್ರಾಂ ಗ್ಲುಕೋಸ್‌ (ಎಂಜಿ/ ಡಿಎಲ್‌) ಮಾದರಿಯಲ್ಲಿ ಫ‌ಲಿತಾಂಶ ಕಂಡುಬರುತ್ತದೆ.

  1. ಪರೀಕ್ಷೆಗೊಳಪಟ್ಟ ಸ್ಟ್ರಿಪ್‌ನ್ನು ತೆಗೆದುಹಾಕಿ: ಗ್ಲುಕೊಮೀಟರ್‌ನಿಂದ ಟೆಸ್ಟ್‌ ಸ್ಟ್ರಿಪ್‌ನ್ನು ತೆಗೆಯಿರಿ. ಟೆಸ್ಟ್‌ ಸ್ಟ್ರಿಪ್‌ ತೆಗೆದು ಕೂಡಲೇ ಗ್ಲುಕೊಮೀಟರ್‌ “ಆಫ್’ ಆಗುತ್ತದೆ.

ನಾವು ಗಮನದಲ್ಲಿ ಇರಿಸಿಕೊಳ್ಳಬೇಕಾದ ವಿಚಾರಗಳು

ಮಿತಿಗಳು ­

ರಕ್ತನಾಳದಿಂದ ಪಡೆದ ತಾಜಾ ಪೂರ್ಣ ರಕ್ತವನ್ನು ಮಾತ್ರ ಪರೀಕ್ಷೆಗೆ ಉಪಯೋಗಿಸಬೇಕು. ಪ್ಲಾಸ್ಮಾ ಅಥವಾ ಸೀರಂ ಉಪಯೋಗಿಸಬಾರದು. ­

ಟೆಸ್ಟ್‌ ಸ್ಟ್ರಿಪ್‌ಗಳು ಒಂದು ಬಾರಿಯ ಬಳಕೆಗೆ ಮಾತ್ರ. ಮರುಬಳಕೆ ಮಾಡಬಾರದು. ­

ನಿರ್ಜಲೀಕರಣ ಸ್ಥಿತಿಯಿದ್ದರೆ ಪರೀಕ್ಷೆಯ ಫ‌ಲಿತಾಂಶ ಕಡಿಮೆ ಬರಬಹುದು. ­ ನವಜಾತ ಶಿಶುಗಳಿಗೆ ಉಪಯೋಗಿಸಬಾರದು. ­

ಆಘಾತಕ್ಕೀಡಾದ ಸಂದರ್ಭದಲ್ಲಿ, ಹೈಪೊಟೆನ್ಸಿವ್‌ ವ್ಯಕ್ತಿಗಳಲ್ಲಿ, ಹೈಪರೊಸೊ¾ಲಾರ್‌ ಸ್ಥಿತಿಯಲ್ಲಿ, ಕೀಟೋಸಿಸ್‌ ಇದ್ದಾಗ ಅಥವಾ ಇಲ್ಲದೆ ಇದ್ದಾಗ ಫ‌ಲಿತಾಂಶಗಳು ಏರುಪೇರಾಗಬಹುದು.

ನಿಯಮಿತ ಅವಧಿಗಳಲ್ಲಿ ನಿಮ್ಮ ವೈದ್ಯರ ಸಲಹೆಯಂತೆ ಪ್ರಯೋಗಾಲಯಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

ಪರೀಕ್ಷಾ ಫ‌ಲಿತಾಂಶಗಳ ವ್ಯಾಖ್ಯಾನ

ರಕ್ತದಲ್ಲಿ ಸಹಜ ಗ್ಲುಕೋಸ್‌ ಮಟ್ಟ ಹೀಗಿರುತ್ತದೆ: ­

ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿ ಗ್ಲುಕೋಸ್‌ (8-10 ತಾಸು ಖಾಲಿಹೊಟ್ಟೆಯಲ್ಲಿದ್ದು): 70-100 ಎಂಜಿ/ ಡಿಎಲ್‌ ­

ಆಹಾರ ತೆಗೆದುಕೊಂಡ ಬಳಿಕ ರಕ್ತದಲ್ಲಿ ಗ್ಲುಕೋಸ್‌ (ಆಹಾರ ಸೇವನೆಯ 2 ತಾಸು ಬಳಿಕ): 100-140 ಎಂಜಿ/ಡಿಎಲ್‌ ­

ರ್‍ಯಾಂಡಮ್‌ ಆಗಿ ರಕ್ತದಲ್ಲಿ ಗ್ಲುಕೋಸ್‌ (ಯಾವುದೇ ಸಮಯದಲ್ಲಿ ಮತ್ತು ಆಹಾರ ಸೇವನೆಯನ್ನು ಗಣೆಗೆ ತೆಗೆದುಕೊಳ್ಳದೆ): 70-140 ಎಂಜಿ/ಡಿಎಲ್‌

ಗಮನಿಸಿ ­

ಗ್ಲುಕೊಮೀಟರನ್ನು ರಕ್ತದ ಗ್ಲುಕೋಸ್‌ ಮಟ್ಟ ಅಳೆಯಲು ಮಾತ್ರ ಉಪಯೋಗಿಸಬೇಕು ಮತ್ತು ರಕ್ತನಾಳದಿಂದ ಪಡೆದ ತಾಜಾ ರಕ್ತದ ಮಾದರಿಯ ಪರೀಕ್ಷೆಗಷ್ಟೇ ಬಳಸಬೇಕು. ­

ಮಧುಮೇಹ ಕಾಯಿಲೆ ಪತ್ತೆ ಅಥವಾ ನವಜಾತ ಶಿಶುಗಳ ರಕ್ತ ಪರೀಕ್ಷೆಗೆ ಉಪಯೋಗಿಸ ಬಾರದು. ­

ರಕ್ತದ ಗ್ಲುಕೋಸ್‌ ಮಟ್ಟ ಪರೀಕ್ಷೆಗಿಂತ ಹೊರತಾದ ಯಾವುದೇ ಪರೀಕ್ಷೆಗಳಿಗೆ ಗ್ಲುಕೊಮೀಟರ್‌ ಉಪಯೋಗಿಸಬಾರದು. ­

6 ತಿಂಗಳಿಗೆ ಒಮ್ಮೆ ಮನೆಯಲ್ಲಿ ಉಪಯೋಗಿಸುವ ಗ್ಲುಕೊಮೀಟರ್‌ನಿಂದ ಪಡೆದ ಫ‌ಲಿತಾಂಶ ಮತ್ತು ಆಸ್ಪತ್ರೆಗಳಲ್ಲಿ ಉಪಯೋಗಿಸುವ ಕ್ಯಾಲಿಬರೇಟೆಡ್‌ ಗ್ಲುಕೊಮೀಟರ್‌ನ ಫ‌ಲಿತಾಂಶಗಳನ್ನು ತಾಳೆ ನೋಡುವುದು ಉತ್ತಮ.

-ಮೊನಾಲಿಸಾ ಬಿಸ್ವಾಸ್‌,

ಪಿಎಚ್‌ಡಿ ಸ್ಕಾಲರ್‌, ಬಯೋಕೆಮೆಸ್ಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

-ಡಾ| ವಿಜೇತಾ ಶೆಣೈ ಬೆಳ್ಳೆ

ಅಸೋಸಿಯೇಟ್‌ ಪ್ರೊಫೆಸರ್‌, ಲ್ಯಾಬ್‌

ಇನ್‌ ಚಾರ್ಜ್‌, ಬಯೋಕೆಮೆಸ್ಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

 

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.