ದೇಹ ಕರಗಿಸಿಕೊಳ್ಳಬಲ್ಲ ಹೃದಯ ಸ್ಟೆಂಟ್‌ಗಳು
Team Udayavani, May 20, 2018, 6:00 AM IST
ಜಾಗತಿಕವಾಗಿ ಮರಣಕ್ಕೆ ಅತಿ ಮುಖ್ಯ ಕಾರಣಗಳಲ್ಲಿ ಹೃದ್ರೋಗ ಒಂದು. ಹೃದಯ ಸಮಸ್ಯೆಗಳಿಗೆ ಸಂಬಂಧಿಸಿ ವೈದ್ಯಕೀಯವಾಗಿ ನಡೆಸಲಾಗುವ ಚಿಕಿತ್ಸೆಗಳಲ್ಲಿ ಬಹಳ ಸಾಮಾನ್ಯವಾದದ್ದು ಪರ್ಕಟೇನಿಯಸ್ ಕೊರೊನರಿ ಇಂಟರ್‌ವೆನ್ಶನ್ (ಪಿಸಿಐ), ಇದರಲ್ಲಿ ಹೃದಯಕ್ಕೆ ರಕ್ತವನ್ನು ಒದಗಿಸುವ (ಕೊರೊನರಿ ರಕ್ತನಾಳಗಳು) ರಕ್ತನಾಳಗಳಲ್ಲಿ ತಡೆ ಹೊಂದಿರುವ ಅಥವಾ ಹಾನಿಗೊಂಡಿರುವವುಗಳನ್ನು ತೆರೆಯಲಾಗುತ್ತದೆ. ಪಿಸಿಐ ಚಿಕಿತ್ಸಾ ವಿಧಾನವು 1977ರಲ್ಲಿ ಬಳಕೆಗೆ ಬಂದ ಬಳಿಕ ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಚಿಕಿತ್ಸೆಗೆ ಪರ್ಯಾಯವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಇದು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ರಕ್ತನಾಳಗಳಲ್ಲಿ ಆಯಾ ಸಂದರ್ಭದ ತಡೆಯನ್ನು ತಡೆ (ಕೊರೊನರಿ ಆರ್ಟೀರಿಯಲ್ ಬ್ಲಾಕೇಜ್)ಯನ್ನು ಶೇ.90ರಿಂದ ಶೇ. 90ರಷ್ಟು ನಿವಾರಿಸುತ್ತದೆ. ಪಿಸಿಐಯ ಹೆಚ್ಚು ಶಾಶ್ವತವಾದ ಸ್ವರೂಪವು ಕೊರೊನರಿ ಸ್ಟೆಂಟಿಂಗ್ ಆಗಿದೆ. ಕೊಳವೆಯಾಕಾರದ ಕಿರಿದಾದ ಲೋಹದ ವಸ್ತುವನ್ನು ರಕ್ತನಾಳದ ಒಳಗೆ ಇರಿಸುವುದು ಸ್ಟೆಂಟಿಂಗ್‌ನಲ್ಲಿ ಒಳಗೊಂಡಿದೆ.
ಅಪಧಮನಿಯು ಮತ್ತೆ ಅಡಚಣೆಗೊಳ್ಳುವುದನ್ನು ತಪ್ಪಿಸಲು ಆ್ಯಂಜಿಯೊಪ್ಲಾಸ್ಟಿಯ ಬಳಿಕ ಸ್ಟೆಂಟಿಂಗ್ ನಡೆಸಬಹುದು ಅಥವಾ ಅಪಧಮನಿಯನ್ನು ತೆರೆದು ಸ್ಟೆಂಟ್ ಸ್ಥಾಪಿಸುವ ಮೂಲಕ ಒಂದೇ ಹಂತದಲ್ಲಿ ಸ್ಟೆಂಟಿಂಗ್ ನಡೆಸಬಹುದು. ಬಲೂನ್ ಆ್ಯಂಜಿಯೊಪ್ಲಾಸ್ಟಿಯನ್ನಷ್ಟೇ ನಡೆಸುವ ರೋಗಿಗಳ ಪೈಕಿ ಶೇ. 5ರಷ್ಟು ಮಂದಿಯಲ್ಲಿ ಉಂಟಾಗುವ, ರಕ್ತನಾಳವು ಹಠಾತ್ತಾಗಿ ಮುಚ್ಚಿಕೊಳ್ಳುವ ಅಬ್ರಪ್ಟ್ ಒಕ್ಲೂಶನ್ ಸಮಸ್ಯೆಯನ್ನು ಕೊರೊನರಿ ಸ್ಟೆಂಟ್‌ಗಳು ಬಹುತೇಕ ಸಂಪೂರ್ಣವಾಗಿ ನಿವಾರಿಸಿವೆ. ರೆಸ್ಟೆನೊಸಿಸ್ ಅಥವಾ ಚಿಕಿತ್ಸೆಯ ಬಳಿಕ ರಕ್ತನಾಳ ಮತ್ತೆ ಸಂಕುಚಿಸುವ ಸಮಸ್ಯೆಯನ್ನು ಕೊರೊನರಿ ಸ್ಟೆಂಟ್‌ಗಳು ಶೇ. 50ಕ್ಕಿಂತಲೂ ಹೆಚ್ಚು ನಿವಾರಿಸಿವೆ.
ಆದರ್ಶ ಸ್ಟೆಂಟ್
ಲೋಹ ಮತ್ತು ಪಾಲಿಮರ್ ಲೇಪಿತ ಸ್ಟೆಂಟ್‌ಗಳಿಗೆ ಸಂಬಂಧಿಸಿದ ಗಮನಾರ್ಹ ಕ್ಲಿಷ್ಟತೆಗಳು ಹೃದಯವನ್ನು ಸುತ್ತುವರಿದಿರುವ ಪರಿಧಮನಿಗಳ (ಕೊರೊನರಿ ಆರ್ಟರಿಗಳು) ಅಡಚಣೆಯನ್ನು ನಿವಾರಿಸುವ ಸ್ಟೆಂಟಿಂಗ್ ಚಿಕಿತ್ಸೆಯಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅನಿವಾರ್ಯವಾಗಿಸಿವೆ. ತನ್ನ ಉದ್ದೇಶಿತ ಕೆಲಸವನ್ನು ಪೂರೈಸಿ ಅದೃಶ್ಯವಾಗುವಂಥದ್ದು ಒಂದು ಆದರ್ಶ ಸ್ಟೆಂಟ್ ಆಗಿರುತ್ತದೆ. ಇಷ್ಟಲ್ಲದೆ, ಅಂಥ ಆದರ್ಶ ಸ್ಟೆಂಟ್ ರಕ್ತನಾಳದಲ್ಲಿ ಅಸಹಿಷ್ಣುತೆಗೆ ಕಾರಣವಾಗದಂತಿರಲು ದೇಹ-ಜೀವ ಸಹಿಷ್ಣು ವಸ್ತುವಿನಿಂದ ಮಾಡಲ್ಪಟ್ಟದ್ದಾಗಿರಬೇಕು ಹಾಗೂ ಸ್ಟೆಂಟ್ ಸ್ಥಾಪನೆಯ ಸಮಯದಲ್ಲಿ ಉಂಟಾಗಬಹುದಾದ ಗಾಯಕ್ಕೆ ರಕ್ತನಾಳದ ಪ್ರತಿಸ್ಪಂದನೆಯಿಂದಾಗಿ ಅದು ಕುಸಿದು ಹೋಗದಷ್ಟು ಬಲಯುತವಾದದ್ದೂ ಆಗಿರಬೇಕು. ಸ್ಟೆಂಟ್ ತನ್ನ ಉದ್ದೇಶಿತ ಕಾರ್ಯವನ್ನು ಪೂರೈಸಿ ಅದೃಶ್ಯವಾದ ಬಳಿಕ ವಿಳಂಬಿತ ಥ್ರೊಂಬೋಸಿಸ್ ಅಥವಾ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಕಡಿಮೆ, ಜತೆಗೆ ಅಂಥ ಅದೃಶ್ಯವಾಗಬಲ್ಲ ಸ್ಟೆಂಟ್ ಸಿಟಿ ಅಥವಾ ಎಂಆರ್‌ಐ ವಿಶ್ಲೇಷಣೆಗಳ ಸಂದರ್ಭದಲ್ಲಿ ಅಡಚಣೆ ಉಂಟು ಮಾಡುವುದಿಲ್ಲ. ಅಂತಹ ಆದರ್ಶ ಸ್ಟೆಂಟ್ ಒಂದರ ಅಗತ್ಯಗಳನ್ನು ಕರಗಿ ದೇಹದಲ್ಲಿ ಐಕ್ಯವಾಗಬಲ್ಲ ಅಥವಾ ದೇಹ ಅರಗಿಸಿಕೊಳ್ಳಬಲ್ಲ ಒಂದು ಸಾವಯವ ಸ್ಟೆಂಟ್ ಪೂರೈಸಬಹುದಾಗಿದೆ.
ರಕ್ತನಾಳದಲ್ಲಿ ಚಿಕಿತ್ಸೆಗೊಳಪಡಿಸಿದ ಸ್ಥಳದಿಂದ ಸ್ಟೆಂಟ್ ಅದೃಶ್ಯವಾಗುವುದರಿಂದ ಪ್ರಯೋಜನಗಳು ಹಲವಾರಿವೆ: ಸ್ಟೆಂಟ್ ಅಳವಡಿಸಿದ ಬಳಿಕ ಹೃದಯಾಘಾತ ಉಂಟಾಗುವ ಸಾಧ್ಯತೆ ಇಲ್ಲವಾಗುವುದು ಅಥವಾ ಕಡಿಮೆಯಾಗುವುದು, ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐ ಸ್ಕ್ಯಾನ್‌ಗಳ ಸಂದರ್ಭದಲ್ಲಿ ಉತ್ತಮ ಚಿತ್ರಣ ಲಭಿಸುವುದು, ಅದೇ ಸ್ಥಳಕ್ಕೆ ಅಗತ್ಯ ಬಿದ್ದರೆ ಪುನರಪಿ ಚಿಕಿತ್ಸೆ ನೀಡುವ ಸಾಧ್ಯತೆ (ಶಸ್ತ್ರಚಿಕಿತ್ಸೆ ಅಥವಾ ಪರ್ಕಟೇನಿಯಸ್) ಉತ್ತಮವಾಗುವುದು, ವಾಸೊಮೋಶನ್ ಪುನರ್‌ಸ್ಥಾಪನೆ, ಸ್ಟ್ರಟ್ಸ್‌ಗಳಿಂದ ರಕ್ತನಾಳ ಇನ್ನೊಂದು ಶಾಖೆಯಾಗಿ ಬೆಳೆಯುವುದು ಕಡಿಮೆಯಾಗುವುದು ಹಾಗೂ ಸ್ಟ್ರಟ್ ಗಾಯದಿಂದಾಗಿ ರೆಸ್ಟೆನೋಸಿಸ್ ಉಂಟಾಗದೆ ಇರುವುದು – ಹೀಗೆ ಹಲವಾರಿವೆ. ಮಕ್ಕಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೂ ದೈಹಿಕವಾಗಿ ಹೀರಿಕೆಯಾಗಿ ಅಥವಾ ಕರಗಿ ಅದೃಶ್ಯವಾಗಬಲ್ಲ ಸ್ಟೆಂಟ್‌ಗಳು ಪ್ರಾಮುಖ್ಯ ಪಾತ್ರ ನಿರ್ವಹಿಸಬಲ್ಲವು – ಅಂಥವುಗಳನ್ನು ಅಳವಡಿಸಿದರೆ ರಕ್ತನಾಳಗಳ ಬೆಳವಣಿಗೆ ಅಬಾಧಿತವಾಗಿರುತ್ತದೆಯಲ್ಲದೆ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕಬೇಕಾಗಿ ಬರುವುದಿಲ್ಲ.
ದೇಹದಲ್ಲಿ ಕರಗಿ ಐಕ್ಯವಾಗಬಲ್ಲ ಸ್ಟೆಂಟ್‌ಗಳ ವೈದ್ಯಕೀಯ ಪ್ರಯೋಜನಗಳ ಜತೆಗೆ, ಇಂತಹ ಸ್ಟೆಂಟ್‌ಗಳು ರೋಗಿಗಳು ಆದ್ಯತೆ ನೀಡುವಂಥವೂ ಆಗಿರುತ್ತವೆ. ಖಾಯಂ ಇಂಪ್ಲಾಂಟ್‌ಗಿಂತ ಪರಿಣಾಮಕಾರಿಯಾದ ತಾತ್ಕಾಲಿಕ ಇಂಪ್ಲಾಂಟ್ ಉತ್ತಮ ಎಂಬುದಾಗಿ ರೋಗಿಗಳು ಅಭಿಪ್ರಾಯ ಹೊಂದಿದ್ದಾರೆ. ಇಷ್ಟಲ್ಲದೆ, ಕರಗಿ ಅದೃಶ್ಯವಾಗಬಲ್ಲ ಸ್ಟೆಂಟ್ ಹಿಂದೆ ಅಡಚಣೆ ಹೊಂದಿದ್ದ ರಕ್ತನಾಳವು ಸಹಜ ರಕ್ತನಾಳವು ನಿಭಾಯಿಸಬೇಕಾದ ಒತ್ತಡಗಳನ್ನು ತಾಳಿಕೊಳ್ಳಬಲ್ಲಂತಹ
“ಆರೋಗ್ಯವಂತ’ ಸ್ಥಿತಿಗೆ ಮರಳುವುದನ್ನು ಸಾಧ್ಯವಾಗಿಸಬಲ್ಲುದು. ಕರಗಿ ಐಕ್ಯವಾಗಬಲ್ಲ ಆದರ್ಶ ಸ್ಟೆಂಟ್‌ಗಳ ಬಗೆಗಿನ ಊಹೆ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಮುಂದುವರಿಸುವುದಾದಲ್ಲಿ, ಅಂತಹ ಸ್ಟೆಂಟ್‌ಗಳು ಅಪಧಮನಿಗಳಲ್ಲಿ ಭವಿಷ್ಯದಲ್ಲಿ ಕರಣೆಗಟ್ಟುವಿಕೆಯನ್ನು ತಡೆದು, ಪಿಸಿಐ ನಡೆಸುವ ಅಗತ್ಯ ಉಂಟಾಗುವುದಕ್ಕೆ ಬದಲಾಗಿ ಸ್ಟೆಂಟ್ ಪೂರ್ಣವಾಗಿ ಅದೃಶ್ಯವಾಗುವ ಹೊತ್ತಿಗೆ ಕರಣೆಗಟ್ಟಿರುವುದು ಕೂಡ ಪೂರ್ಣವಾಗಿ ಮಾಯವಾಗಿರುತ್ತದೆ.
ಕರಗಿಹೋಗಬಲ್ಲ ಸ್ಟೆಂಟ್‌ನ ವಿವಿಧ ಮಾಡೆಲ್‌ಗಳು
– ಪಾಲಿಮರಿಕ್ ಸ್ಟೆಂಟ್‌ಗಳು: ಮನುಷ್ಯರಲ್ಲಿ ಅಳವಡಿಸಲಾದ ಮೊತ್ತಮೊದಲ ಜೈವಿಕವಾಗಿ ಕರಗಿ ಅದೃಶ್ಯವಾಗಬಲ್ಲ ಸ್ಟೆಂಟ್ ಇಗಾಕಿ-ತಮಾಯಿ ಸ್ಟೆಂಟ್
– ಬಿವಿಎಸ್ ಎವೆರೊಲಿಮಸ್ – ಎಲ್ಯೂಟಿಂಗ್ ಬಯೊ -ಅಬಾÕರ್ಬೆಬಲ್ ಪಿಎಲ್‌ಎಲ್‌ಎ ಸ್ಟೆಂಟ್: ಲೋಹೀಯ ಡಿಇಎಸ್ ಇಂಪ್ಲಾಂಟೇಶನ್‌ಗೆ ಸಮಾನವಾದ ವೈದ್ಯಕೀಯ ಮತ್ತು ಇಮೇಜಿಂಗ್ ಫಲಿತಾಂಶಗಳನ್ನು ನೀಡಿದ ಮೊದಲ ಬಯೋ ಅಬಾÕಬೇìಬಲ್ ಸ್ಟೆಂಟ್.
– ಬಯೋ ಅಬಾÕಬೇìಬಲ್ ತೆರಾಪ್ಯುಟಿಕ್ಸ್ ಅಭಿವೃದ್ಧಿಪಡಿಸಿದ ದಿ ಪಾಲಿಮರಿಕ್ ಸ್ಟೆಂಟ್: ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಔಷಧಿಯಾದ ಸಿರೋಲಿಮಸ್ ಲೇಪಿತವಾಗಿದೆ.
– ಬಯೋ ಅಬಾÕಬೇìಬಲ್ ಸ್ಟೆಂಟ್ ಬಗ್ಗೆ ದಿ ರೇವಾ ಎಂಡೊವಾಸ್ಕಾಲಾರ್ ಅಧ್ಯಯನ (ಆರ್-ಎಸ್‌ಒಆರ್‌ಬಿ) : ಇದು ಜೀವಕೋಶ ವಿದಳನವನ್ನು ತಡೆಯುವ ಔಷಧವಾಗಿದೆ.
– ಮೆಟಲ್ ಅಲಾಯಿ ಬಯೋ ಅಬ್‌ಸಾರ್ಬೇಬಲ್ ಸ್ಟೆಂಟ್ಸ್: ಇದು ಶಾಶ್ವತ ಮೆಟಾಲಿಕ್ ಸ್ಟೆಂಟ್‌ಗಳಿಗೆ ಸಮಾನವಾಗಿವೆ. ಇದರ ಪ್ರಯೋಗಕ್ಕೆ ಈ ವರೆಗೆ 2 ಮೆಟಲ್ ಅಲಾಯಿಗಳನ್ನು ಪ್ರಸ್ತಾವಿಸಲಾಗಿದೆ. ಅವೆಂದರೆ ಕಬ್ಬಿಣ ಮತ್ತು ಮೆಗ್ನಿàಶಿಯಂ.ಇದರಿಂದ ನಾವು ತಿಳಿದುಕೊಳ್ಳಬಹುದೇನೆಂದರೆ, ಬಯೋ ಅಬಾÕಬೇìಬಲ್ ಸ್ಟೆಂಟ್‌ಗಳನ್ನು ಶಾಶ್ವತ ಕೊರೊನರಿ ಸ್ಟೆಂಟ್‌ಗಳಿಗೆ ಪರ್ಯಾಯವಾಗಿ ಪರಿಗಣಿಸಬಹುದಾಗಿದೆ.
– ಡಾ| ನರಸಿಂಹ ಪೈ,
ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.