ಎದೆಹಾಲೂಡುವ ತಾಯಂದಿರಿಗೆ ಪಥ್ಯಾಹಾರ
Team Udayavani, Mar 11, 2018, 6:00 AM IST
ಹಿಂದಿನ ವಾರದಿಂದ- ಸೋಡಾ ಪಾನೀಯಗಳು
ಬೇಡವೇ ಬೇಡ
ಕೃತಕ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಮಾತ್ರ ಹೊಂದಿರುವ ಸೋಡಾ ಪಾನೀಯಗಳನ್ನು ನಿಮ್ಮ ದಾಹ ತಣಿಸಲು ನೆಚ್ಚಿಕೊಳ್ಳುವುದು ಬೇಡ. ಪೊಟ್ಟಣೀಕೃತ ಜ್ಯೂಸ್‌ಗಳು ದೇಹತೂಕವನ್ನೂ ಹೆಚ್ಚಿಸುತ್ತವೆ. ಆದ್ದರಿಂದ ಇವುಗಳ ಬದಲಾಗಿ ಮನೆಯಲ್ಲಿಯೇ ತಾಜಾ ಹಣ್ಣಿನ ರಸವನ್ನು ತಯಾರಿಸಿ ಕುಡಿಯುವುದು ಉತ್ತಮ.
ಸಿಗರೇಟುಗಳು
ಸಿಗರೇಟು, ಬೀಡಿ ಇತ್ಯಾದಿ ಧೂಮಪಾನ ಶಿಶುವಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಹೀಗಾಗಿ ಅವುಗಳನ್ನು ವರ್ಜಿಸಬೇಕು.
ಮದ್ಯ
ಮದ್ಯವು ನಿಕೊಟಿನ್ ಮತ್ತು ಇತರ ವಿಷಕಾರಕಗಳನ್ನು ಹೊಂದಿರುತ್ತದೆ. ಇವುಗಳು ಶಿಶುವಿನ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ನೀವು ಎದೆಹಾಲೂಡುತ್ತಿರುವ ಸಮಯದಲ್ಲಿ ಮದ್ಯಪಾನವನ್ನು ತ್ಯಜಿಸಲೇ ಬೇಕು. ಮದ್ಯವು ರಕ್ತದ ಮೂಲಕ ನಿಮ್ಮ ಎದೆಹಾಲಿನ ರವಾನೆಯಾಗಿ ಮಗುವಿನ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು.
40 ದಿನಗಳ ಬಳಿಕ ಮಗುವಿಗೆ
6 ತಿಂಗಳಾಗುವ ವರೆಗೆ
– ನಿಮ್ಮ ಮಗುವಿನ ಮೊದಲ 40ದಿನಗಳ ಸೂಕ್ಷ್ಮ ಆರೈಕೆಯ ಅವಧಿಯ ಬಳಿಕ ಮಗು ಎದೆಹಾಲಿನ ಮೂಲಕ ಹೊಸ ರುಚಿಗಳನ್ನು ಆಸ್ವಾದಿಸಲು ಸಿದ್ಧವಾಗುತ್ತದೆ.
– ನಿಮ್ಮ ಈ ಹಿಂದಿನ ಆಹಾರಾಭ್ಯಾಸವನ್ನು ಕೆಲವು ಹೊಸ ಸೇರ್ಪಡೆಗಳ ಜತೆಗೆ ಮುಂದುವರಿಸಬೇಕು.
– ಮಗು ದಿನವೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳೆಯುತ್ತಿರುವುದರಿಂದ ಆರು ತಿಂಗಳ ಸಂಪೂರ್ಣ ಎದೆಹಾಲೂಡುವಿಕೆಯ ಅವಧಿಯಲ್ಲಿ ನೀವು ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
– ನೀವು ನಿಧಾನವಾಗಿ ಹೊಸ ತರಕಾರಿಗಳನ್ನು, ಹಣ್ಣುಗಳನ್ನು, ಕೋಳಿ – ಮಟನ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಅತಿಯಾದ ಮಸಾಲೆ, ಎಣ್ಣೆಪದಾರ್ಥ, ಜಂಕ್ ಆಹಾರಗಳು ಬೇಡ.
– ದಿನದಲ್ಲಿ ಒಂದಕ್ಕಿಂತ ಹೆಚ್ಚು ಹೊಸ ಆಹಾರವಸ್ತುಗಳನ್ನು ಸೇರಿಸಿಕೊಳ್ಳುವುದು ಬೇಡ, ಏಕೆಂದರೆ ನಿಮ್ಮ ಮಗುವಿಗೆ ಅದು ಒಗ್ಗುತ್ತದೆಯೋ ಇಲ್ಲವೋ ಎಂಬುದನ್ನು ಗಮನಿಸಿ ಮುಂದುವರಿಯಬೇಕು (ಹೊಸ ಆಹಾರದಿಂದ ಮಗುವಿಗೆ ಹೊಟ್ಟೆನೋವು ಉಂಟಾಗಿಲ್ಲ, ಮಲವಿಸರ್ಜನೆ ಸರಿಯಾಗಿದೆ – ಹೀಗೆ)
– ಮಗುವಿಗೆ 5 ತಿಂಗಳು ವಯಸ್ಸಾದಾಗ ನೀವು ಎಲ್ಲ ಬಗೆಯ ಬೀನ್ಸ್ ಗಳನ್ನು, ಬಟಾಟೆ, ಸಿಟ್ರಿಕ್ ಹಣ್ಣುಗಳು, ಪೂರ್ಣವಾಗಿ ಹುದುಗು ಬರಿಸಿದ ಹಿಟ್ಟಿನಿಂದ ತಯಾರಿಸಿದ ಇಡ್ಲಿ/ದೋಸೆ, ನೀರುಳ್ಳಿ ಮತ್ತು ಸಾಧಾರಣ ಪ್ರಮಾಣದಲ್ಲಿ ಮಸಾಲೆ, ಮೆಣಸನ್ನೂ ಸೇವಿಸಬಹುದು. ಮೆಣಸಿನ ಬದಲಾಗಿ ಸ್ವಲ್ಪ ಪ್ರಮಾಣ ದಲ್ಲಿ ಕಾಳುಮೆಣಸನ್ನು ಉಪಯೋಗಿಸಬಹುದು. ಮಗುವಿಗೆ 6 ತಿಂಗಳು ಆದಾಗ ನೀವು ಘನ ಆಹಾರವನ್ನು ಪರಿಚಯಿಸಲಾರಂಭಿಸುತ್ತೀರಿ; ಹೀಗಾಗಿ ಎದೆಹಾಲಿನ ಮೂಲಕ ಎಲ್ಲ ಬಗೆಯ ಆಹಾರ ವಸ್ತುಗಳನ್ನು ಪಡೆಯುತ್ತಾ ಮಗು ವಿನ ಜೀರ್ಣಾಂಗವ್ಯೂಹವು ನೇರವಾಗಿ ಘನ ಆಹಾರಗಳನ್ನು ಸ್ವೀಕರಿಸಲು ಸನ್ನದ್ಧವಾಗುತ್ತದೆ.
– ಮಗುವಿಗೆ ಸಂಪೂರ್ಣವಾಗಿ ಎದೆಹಾಲೂಡುವುದು ನಿಮ್ಮ ದೇಹತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ನೆನಪಿರಲಿ.
7 ತಿಂಗಳುಗಳಿಂದ 2 ವರ್ಷಗಳು
ಈಗ ನೀವು ನಿಮ್ಮ ಸಹಜ ಆದರೆ ಆರೋಗ್ಯಕರವಾದ ಆಹಾರಾಭ್ಯಾಸವನ್ನು ಪಾಲಿಸಬಹುದು (ನೀವು ಗರ್ಭ ಧರಿಸಿದ್ದಾಗ ಪಾಲಿಸುತ್ತಿದ್ದ ಆಹಾರ ಶೈಲಿಯನ್ನು ಅನುಸರಿಸಬೇಕು).
ನೀವು ಮಗುವಿಗೆ ಘನ ಆಹಾರವನ್ನು ಆರಂಭಿಸಿದ ಬಳಿಕವೂ ಕನಿಷ್ಠ ಒಂದು ತಿಂಗಳ ಕಾಲ ಈ ಹಿಂದಿನಂತೆಯೇ ಎದೆ ಹಾಲು ಉಣಿಸಬೇಕಾಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವ ಆಹಾರ ಶೈಲಿ ಅನುಸರಿಸುವ ತರಾತುರಿ ಬೇಡ, ನಿಮಗೆ ಈಗಲೂ ಶಕ್ತಿ ಮತ್ತು ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ.
ಮಗುವಿಗೆ 7-8 ತಿಂಗಳು ವಯಸ್ಸಾದಾಗ ನೀವು ಮಗುವಿನ ಆಹಾರಾಭ್ಯಾಸವನ್ನು ಇನ್ನಷ್ಟು ಘನ ಆಹಾರಗಳನ್ನು ಸೇರಿಸಿಕೊಂದು ಎದೆಹಾಲನ್ನು ಕಡಿಮೆ ಮಾಡುವ ಮೂಲಕ ಬದಲಾಯಿಸಬಹುದು.
ನಿಮ್ಮ ಮಗು ತುಪ್ಪದಂತಹ
ಶಕ್ತಿ/ ಕೊಬ್ಬುಭರಿತ
ಆಹಾರಗಳನ್ನು ನೇರವಾಗಿ ಪಡೆಯುತ್ತಿರುವ ಕಾರಣ ಅವುಗಳನ್ನು ನೀವು ನಿಮ್ಮ ಆಹಾರದಲ್ಲಿ ಕಡಿಮೆ ಮಾಡಬಹುದು.
ಮೊದಲ 40 ದಿನಗಳ ಎದೆಹಾಲೂಡುವಿಕೆ: ಆಹಾರ ಯೋಜನೆ ಮೊದಲ ನಲುವತ್ತು ದಿನಗಳು ನಿಮಗೆ ಮತ್ತು ನಿಮ್ಮ ಮಗುವಿನ ಪಾಲಿಗೆ ಬಹಳ ಮಹತ್ವಪೂರ್ಣವಾದ ಅವಧಿ. ಈ ಅವಧಿಯಲ್ಲಿ ನಿಮ್ಮ ದೇಹದಲ್ಲಿ ಆಗುವ ಹಾರ್ಮೋನ್ ಸಂಬಂಧಿ ಮತ್ತು ದೈಹಿಕ ಬದಲಾವಣೆಗಳು ನಿಮ್ಮ ಅನುಭವಕ್ಕೆ ಬರುತ್ತವೆ. ನಿಮ್ಮ ದೇಹವು ಮಾಯುತ್ತದೆ, ಸಾಮರ್ಥ್ಯವನ್ನು ಮರಳಿ ಪಡೆಯುತ್ತದೆ, ಹಾಲನ್ನು ಉತ್ಪಾದಿಸುತ್ತದೆ.
ಮುಂಬರುವ ನಾಲ್ಕು ವಾರಗಳಿಗೆ ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ನೀವು ಪೌಷ್ಟಿಕಾಂಶಗಳನ್ನು ಸಮೃದ್ಧವಾಗಿರುವ ಆಹಾರವಸ್ತುಗಳು ಮಾತ್ರವಲ್ಲದೆ ಸುಲಭವಾಗಿ ಜೀರ್ಣವಾಗಬಲ್ಲಂತಹ ಆಹಾರಗಳನ್ನೂ ಆರಿಸಿಕೊಳ್ಳಬೇಕು. ಬೇರೆಬೇರೆಯವರು ನಿಮಗೆ ಆಹಾರಕ್ಕೆ ಸಂಬಂಧಿಸಿ ಭಿನ್ನಭಿನ್ನವಾದ ಅಭಿಪ್ರಾಯಗಳನ್ನು ನೀಡಬಹುದು. ನಿಮ್ಮ ತಾಯಿ ಅಥವಾ ಅಜ್ಜಿ ಆಯ್ದ ಕೆಲವೇ ಆಹಾರವಸ್ತುಗಳನ್ನು ತಿನ್ನಲು ಸೂಚಿಸಬಹುದು; ವೈದ್ಯರು ಬಹುತೇಕ ಆರೋಗ್ಯಕರವಾದ ಎಲ್ಲವನ್ನೂ ಸೇವಿಸಬಹುದು ಎನ್ನಬಹುದು. ಹೀಗಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ಎರಡನ್ನೂ ಯೋಗ್ಯ ರೀತಿಯಲ್ಲಿ ಸಂಯೋಜಿಸಿಕೊಂಡು ಅತ್ಯುತ್ತಮವಾದ ಆಹಾರ ಯೋಜನೆಯನ್ನು ಹೇಗೆ ರೂಪಿಸಬಹುದು ಎಂದು ನೋಡೋಣ.
1. ಸಾಂಪ್ರದಾಯಿಕವಾದ ಎಲ್ಲ ಸ್ತನ್ಯವರ್ಧಕ ಆಹಾರಗಳನ್ನೂ ನಿಮ್ಮ ಯಾದಿಯಲ್ಲಿ ಸೇರಿಸಿಕೊಳ್ಳಿ.
2. ಸಾಂಪ್ರದಾಯಿಕವಲ್ಲದ, ಆದರೂ ಆರೋಗ್ಯಕರವಾದ ಆಹಾರಗಳನ್ನು ಸೇರಿಸಿಕೊಂಡು ನಿಮ್ಮ ಆಹಾರ ಯಾದಿಯನ್ನು ವಿಸ್ತರಿಸಿ. ಉದಾಹರಣೆಗೆ, ಮೊಸರು ಅಥವಾ ಇಡ್ಲಿ ಮತ್ತು ದೋಸೆಯಂತಹ ಹುದುಗು ಬರಿಸಿದ ಆಹಾರವಸ್ತುಗಳು. ಆದರೆ ಅವು ಹುಳಿಬಂದಿರಬಾರದು; ಕಿರು ಅವಧಿಯಲ್ಲಿ ಹುದುಗು ಬರಿಸಿದ್ದನ್ನು ಸೇವಿಸಿ.
3. ಖೀರು, ಗಂಜಿ, ಅಂಬಲಿಯಂತಹ ಎಲ್ಲ ದ್ರವಾಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ; ಇವು ಸುಲಭವಾಗಿ ಜೀರ್ಣಗೊಳ್ಳುತ್ತವೆ. ಆದರೆ ನಿಮ್ಮ ಆಹಾರವನ್ನು ಇಷ್ಟಕ್ಕೇ ಮಿತಗೊಳಿಸಬೇಡಿ, ಸಹಜ ಆರೋಗ್ಯಕರ ಭೋಜನಗಳನ್ನೂ ಸೇರಿಸಿಕೊಳ್ಳಿ (ಉದಾ.: ಚಪಾತಿ, ಅನ್ನ-ದಾಲ್, ಸಲಾಡ್‌ಗಳು)
4. ನೀವು ಎರಡು ದೇಹಗಳ ಪೌಷ್ಟಿಕಾಂಶ ಅಗತ್ಯಗಳನ್ನು ಪೂರೈಸಬೇಕಾಗಿರುವುದರಿಂದ ಪೌಷ್ಟಿಕಾಂಶ ಸಮೃದ್ಧ ಆಹಾರವಸ್ತುಗಳನ್ನು ಆಯ್ದುಕೊಳ್ಳಿರಿ.
5. ಸಾಂಪ್ರದಾಯಿಕವಾಗಿ ಎದೆಹಾಲೂಡುವ ತಾಯಂದಿರ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಪ್ಪ ಮತ್ತು ಬೀಜಗಳು ಸೇರಿರುತ್ತವೆ, ಆದರೆ ಅವುಗಳನ್ನು ಅತಿಯಾಗಿ ಸೇವಿಸಬೇಡಿ. ಇವು ಪೌಷ್ಟಿಕಾಂಶ ಸಮೃದ್ಧವಾಗಿರುವುದರಿಂದ ಮಿತ ಪ್ರಮಾಣದಲ್ಲಿ ಅವುಗಳನ್ನು ದಿನವೂ ಸೇವಿಸಿ.
6. ಮುಂಜಾನೆ ಬಹಳ ಬೇಗ ಉಪಾಹಾರ ಸೇವಿಸುವುದು ಮತ್ತು ರಾತ್ರಿ ತಡವಾಗಿ ಹಾಲು ಕುಡಿಯುವುದು ಬಹಳ ಮುಖ್ಯ; ಯಾಕೆಂದರೆ ನಿಮ್ಮ ಮಗು ರಾತ್ರಿಯೂ ಹಾಲು ಕುಡಿಯುತ್ತದೆ. ಯಾವುದೇ ಹೊತ್ತಿನಲ್ಲಿ ಎದೆಹಾಲನ್ನು ಒದಗಿಸುವುದಕ್ಕೆ ನಿಮ್ಮ ದೇಹ ಸನ್ನದ್ಧವಾಗಿರಬೇಕು.
7. ತೀರಾ ತಣ್ಣಗಾದ, ಫ್ರಿಜ್‌ನಲ್ಲಿರಿಸಿದ, ಮಸಾಲೆಯುಕ್ತ ಮತ್ತು ಜಂಕ್ ಆಹಾರಗಳನ್ನು ನೀವು ಖಂಡಿತ ವರ್ಜಿಸಬೇಕು; ಅವು ಅನಾರೋಗ್ಯಕರವಷ್ಟೇ ಅಲ್ಲ, ನಿಮ್ಮ ಮಗುವಿನ ಹೊಟ್ಟೆಯನ್ನೂ ಕೆಡಿಸಬಹುದು.
ಗಮನಿಸಿ:
1. ಮಾಂಸಾಹಾರಿಗಳು ಮೀನು ಸಾರು ಅಥವಾ ಮಾಂಸದ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಆದರೆ ಅತಿಯಾದ ಖಾರ ಅಥವಾ ಮಸಾಲೆ ಬೇಡ. ಮಾಂಸವನ್ನು ತಿನ್ನುವುದು ಬೇಡ, ಅದರ ಸಾರನ್ನು ಮಾತ್ರ ಪದಾರ್ಥವಾಗಿ ಉಪಯೋಗಿಸಿ. ಮಾಂಸವನ್ನು ದೀರ್ಘಕಾಲ ಬೇಯಿಸಿದರೆ ಉತ್ತಮ ಸಾರ ದೊರೆಯುತ್ತದೆ. ಉಪಾಹಾರದಲ್ಲಿ ಮೊಟ್ಟೆಯ ಬಿಳಿಭಾಗ ಉಪಯೋಗಿಸಿ.
2. ನೀವು ಸಾಕಷ್ಟು ನೀರು ಕುಡಿಯಬೇಕು. ನೀರು ಅಥವಾ ಯಾವುದೇ ಆರೋಗ್ಯಕರ ಪಾನೀಯವನ್ನು ಸೇವಿಸಬಹುದು. ಸಾಮಾನ್ಯವಾಗಿ ಎದೆಹಾಲೂಡುತ್ತಿರುವಾಗ ಬಾಯಾರುತ್ತದೆ. ಹೀಗಾಗಿ ಮಗುವಿಗೆ ಎದೆಹಾಲೂಡುವುದಕ್ಕೆ ಆರಂಭಿಸುವ ಮುನ್ನ ಒಂದು ಲೋಟ ನೀರು ಕುಡಿಯುವುದು ಉತ್ತಮ.
3. ಸಾಧ್ಯವಿದ್ದಾಗ ಸಕ್ಕರೆಯ ಬದಲಾಗಿ ಬೆಲ್ಲ ಉಪಯೋಗಿಸಿ. ಬೆಲ್ಲವು ಕಬ್ಬಿಣದಂಶದ ಉತ್ತಮ ಮೂಲವಾಗಿದೆ.
– ಮುಂದಿನ ವಾರಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.