ಕ್ಯಾನ್ಸರ್‌: ಹೆದರಿಕೆಗೆ ಅಲ್‌ವಿದಾ


Team Udayavani, Aug 13, 2017, 6:35 AM IST

588965.jpg

ಕ್ಯಾನ್ಸರ್‌ ಅಥವಾ ಅಬುìದ ಎಂಬ ಪದ ಎಷ್ಟು ಭಯಾನಕವಾಗಿಬಿಟ್ಟಿದೆ ಎಂದರೆ, ಕ್ಯಾನ್ಸರ್‌ ತಗಲಿರುವುದು ಪತ್ತೆಯಾದ ಜನರು ಬದುಕುವ ಆಸೆಯನ್ನೇ ಕಳೆದುಕೊಂಡು ಬಿಡುತ್ತಾರೆ ಮತ್ತು ತಾವು ಮೃತ್ಯುಪಾಶದಲ್ಲಿ ಸಿಲುಕಿಕೊಂಡಿರುವವರು ಎಂಬ ಭಾವನೆಯನ್ನು ತಳೆದುಬಿಡುತ್ತಾರೆ.ಹೀಗಾಗಿ, ಕ್ಯಾನ್ಸರ್‌ ಮತ್ತು ಓಂಕೋಲಜಿ ಕ್ಷೇತ್ರದಲ್ಲಿ ಈಚೆಗೆ ಆಗಿರುವ ಪ್ರಗತಿಯ ಬಗ್ಗೆ ನಾವು ಸ್ವಲ್ಪ ಹೆಚ್ಚಿನದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ ಮತ್ತು ಅನಿವಾರ್ಯ.

ಒಬ್ಬ ಪುಟ್ಟ ಬಾಲಕನ ಉದಾಹರಣೆಯೊಂದಿಗೆ ಈ ಲೇಖನವನ್ನು ಆರಂಭಿಸುತ್ತೇನೆ. ಈತ ಕುಂದಾಪುರದ ಇಸ್ಮಾಯಿಲ್‌ (ಹೆಸರು ಬದಲಾಯಿಸಲಾಗಿದೆ). ಈತ ಎಲ್‌ಕೆಜಿ ವಿದ್ಯಾರ್ಥಿ. ಪದೇಪದೇ ಜ್ವರಕ್ಕೆ ತುತ್ತಾಗುತ್ತಿದ್ದ ಈ ಬಾಲಕನನ್ನು ಪರೀಕ್ಷಿಸಿದ ಸ್ಥಳೀಯ ವೈದ್ಯರೊಬ್ಬರು ಅವನಿಗೆ ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆ ಇರುವುದನ್ನು ಪತ್ತೆ ಮಾಡಿದರು. ನಮ್ಮ ಕೇಂದ್ರದಲ್ಲಿ ಮುಂದುವರಿದ ತಪಾಸಣೆಗೊಳಪಟ್ಟಾಗ ಅವನಿಗೆ ಅಕ್ಯೂಟ್‌ ಲಿಂಫೊಬ್ಲಾಸ್ಟಿಕ್‌ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್‌) ಇರುವುದು ಪತ್ತೆಯಾಯಿತು. 

ಈ ವರ್ತಮಾನವನ್ನು ಕೇಳಿ ಬಾಲಕನ ಹೆತ್ತವರು ತತ್ತರಿಸಿಹೋದರು. ಮತ್ತೆ ಮತ್ತೆ ಆಪ್ತಸಮಾಲೋಚನೆಗೆ ಒಳಪಟ್ಟ ಬಳಿಕ ಅವರು ತಮ್ಮ ಮಗನಿಗೆ ತಗಲಿರುವ ಕಾಯಿಲೆಯ ಸ್ವರೂಪ ಹಾಗೂ ರಕ್ತದ ಕ್ಯಾನ್ಸರ್‌ ಒಂದು ಗುಣಪಡಿಸಬಹುದಾದ ಕಾಯಿಲೆ ಎಂಬುದನ್ನು ಅರ್ಥ ಮಾಡಿಕೊಂಡರು. 

ಬಾಲಕನಿಗೆ ಚಿಕಿತ್ಸೆ ಆರಂಭವಾಯಿತು. ಆರು ತಿಂಗಳುಗಳ ಕಿಮೊಥೆರಪಿ ಇಂಜೆಕ್ಷನ್‌, ಆ ಬಳಿಕ 2 ವರ್ಷಗಳ ಕಿಮೊಥೆರಪಿ ಟ್ಯಾಬ್ಲೆಟ್‌ಗಳನ್ನು ನೀಡಲಾಯಿತು. ಮೇಲೆ ಹೇಳಿದ ಚಿಕಿತ್ಸೆಯಿಂದ ಬಾಲಕ ಸಂಪೂರ್ಣ ಗುಣಹೊಂದಿದ್ದಾನೆ; ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ಮುಕ್ತನಾಗಿ ಬಾಳುತ್ತಿದ್ದಾನೆ. ಈಗ ಆತ ತನ್ನ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬ, ಸದಾ ಚಟುವಟಿಕೆಯಿಂದಿರುವ ಪುಟಾಣಿ. 

ಇದರೊಂದಿಗೆ “ಎಲ್ಲ ಕ್ಯಾನ್ಸರ್‌ಗಳೂ ಗುಣಪಡಿಸಬಲ್ಲಂಥವೇ?’ ಎಂಬ ಪ್ರಶ್ನೆಗೆ ನಾನು ಉತ್ತರಿಸಬೇಕಾಗಿದೆ. ಪೀಡಿಯಾಟ್ರಿಕ್‌ ಅಥವಾ ಎಳೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ಕ್ಯಾನ್ಸರ್‌ಗಳು ಹಾಗೂ ಪ್ರಾಥಮಿಕ ಹಂತದಲ್ಲಿಯೇ ಪತ್ತೆಯಾಗುವ ಬಹುತೇಕ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು ಎಂಬುದನ್ನು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಬಗ್ಗೆ ನಾನು ಹೆಚ್ಚು ಒತ್ತು ಕೊಡಬಯಸುತ್ತೇನೆ. ಇವುಗಳ ಬೆಳವಣಿಗೆ ಆಕ್ರಾಮಕವಾಗಿರುತ್ತವೆ. ಆದರೆ ಇದೇ ಸಮಯದಲ್ಲಿ ಅವು ಅತ್ಯಂತ ಸುಲಭವಾಗಿ ಗುಣಪಡಿಸ ಬಹುದಾದ ತೊಂದರೆಗಳೂ ಆಗಿವೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಖಂಡಿತ ಗುಣಪಡಿಸಬಹುದಾದ ಕಾರಣ ಕ್ಯಾನ್ಸರ್‌ ಇರುವ ಮಗುವನ್ನು ಕ್ಯಾನ್ಸರ್‌ ತಜ್ಞರ ಆರೈಕೆ – ಚಿಕಿತ್ಸೆಗೆ ಕರೆತರುವುದು ಹೆತ್ತವರ ಮತ್ತು ಸಮಾಜದ ಅತಿಪ್ರಾಮುಖ್ಯ ಜವಾಬ್ದಾರಿಯಾಗಿದೆ. 

ಹಾಗಿದ್ದರೆ, ಗುಣಪಡಿಸಲು ಸಾಧ್ಯವಾಗದ ಕ್ಯಾನ್ಸರ್‌ ಆಗಿರುವ ಸಂದರ್ಭಗಳಲ್ಲಿ ಕೂಡ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವೇ? 
– ಇದು ಈಗ ನಾನು ಉತ್ತರಿಸಬೇಕಾದ ಪ್ರಶ್ನೆ. 

ಹೌದು, ಖಂಡಿತಕ್ಕೂ 
ಅಡ್ವಾನ್ಸ್‌ಡ್‌ ಮೆಟಾಸ್ಟಾಟಿಕ್‌ ಮ್ಯಾಲಿಗ್ನನ್ಸಿ ಅಥವಾ ಕ್ಯಾನ್ಸರಿನ ಮುಂದುವರಿದ ಹಂತದಲ್ಲಿರುವ ರೋಗಿಗೂ ಚಿಕಿತ್ಸೆ ಒದಗಿಸಿ ಅವರ ಜೀವನ ಗುಣಮಟ್ಟ ವನ್ನು ಉತ್ತಮಪಡಿಸಲು ಸಾಧ್ಯವಿದೆ. 

ಕ್ಯಾನ್ಸರ್‌ ವಿಭಾಗದಲ್ಲಿ ಆಗಿರುವ ಇತ್ತೀಚೆಗಿನ ಪ್ರಗತಿಗಳ ಅನುಸಾರ, ಶ್ವಾಸಕೋಶದ ಕ್ಯಾನ್ಸರ್‌ , ಕ್ರಾನಿಕ್‌ ಮೈಲೋಯ್ಡ ಲ್ಯುಕೇಮಿಯಾದಂತಹ ರಕ್ತದ ಕ್ಯಾನ್ಸರ್‌ ಪ್ರಕರಣಗಳಲ್ಲಿ ಕೀಮೋಥೆರಪಿ ಮಾತ್ರೆಯ ರೂಪದಲ್ಲಿ ಕೊಡುವ ಗುರಿನಿರ್ದೇಶಿತ ಚಿಕಿತ್ಸೆಗಳ ಮೂಲಕ ಅತ್ಯಂತ ಕಡಿಮೆ ಅಡ್ಡಪರಿ ಣಾಮಗಳೊಂದಿಗೆ ರೋಗಿಗಳ ಜೀವಿತಾವಧಿಯನ್ನು ಹೆಚ್ಚಿಸುವುದು ಸಾಧ್ಯವಿದೆ. 

ಕ್ಯಾನ್ಸರ್‌ ಚಿಕಿತ್ಸೆಯ ಬಗ್ಗೆ ಪ್ರಚಲಿತದಲ್ಲಿರುವ ಇನ್ನೊಂದು ಸರ್ವೇಸಾಮಾನ್ಯ ಅಭಿಪ್ರಾಯವೆಂದರೆ, ಅದು ತುಂಬಾ ದುಬಾರಿ, ವೆಚ್ಚದಾಯಕ ಎಂಬುದು. ಪ್ರಸ್ತುತ, ಸಮಾಜದ ಎಲ್ಲ ವರ್ಗಗಳಿಗೂ ಸರಕಾರಿ ಆರೋಗ್ಯ ಯೋಜನೆಗಳಿವೆ, ಇವು ಕ್ಯಾನ್ಸರ್‌ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡುತ್ತವೆ. ಹಾಗಾದರೆ, ದೇಹದ ಒಳಗೆಲ್ಲೋ ಅವಿತಿರುವ ಕ್ಯಾನ್ಸರ್‌ ಅಥವಾ ಕ್ಯಾನ್ಸರನ್ನು ಅದರ ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದು ಹೇಗೆ?

– ಸರ್ವೇಸಾಮಾನ್ಯವಾದ ಕೆಲವು ಲಕ್ಷಣಗಳೆಂದರೆ, 
ಅನಿರೀಕ್ಷಿತ ತೂಕ ನಷ್ಟ, ಕಾರಣವಿಲ್ಲದ ಜ್ವರ, ಹಸಿವುನಷ್ಟ, ಸ್ಪರ್ಶಗ್ರಾಹ್ಯವಾದ ಯಾವುದೇ ಗಂಟು ಅಥವಾ ಊತ – ಇಂತಹ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ತಪಾಸಣೆಗೆ ಒಳಪಡಬೇಕು.  

ಒಟ್ಟಾರೆಯಾಗಿ ಹೇಳಬೇಕೆಂದರೆ, ನಾವು ಗಾಳಿಯ ದಿಕ್ಕನ್ನು ಬದಲಾಯಿಸಲಾರೆವು; ಆದರೆ ಹಾಯಿಯನ್ನು ತಿರುಗಿಸಿ ದೋಣಿಯನ್ನು ಮುನ್ನಡೆಸಬಹುದಲ್ಲ! ಹಾಗೆಯೇ, ಕ್ಯಾನ್ಸರ್‌ಗೆ ಹೆದರಿ ಅವಿತಿರಿಸಿಕೊಂಡು ಸೋಲುವ ಬದಲು ದಿಟ್ಟತನದಿಂದ ಅದನ್ನೆದುರಿಸಿ ಗೆಲ್ಲಬಹುದು.ಕ್ಯಾನ್ಸರ್‌ ವಿರುದ್ಧದ ಸಮರದಲ್ಲಿ ನಮ್ಮಲ್ಲಿರಬೇಕಾದ ಶಸ್ತ್ರವೆಂದರೆ ಔಷಧವಷ್ಟೇ ಅಲ್ಲ; ಅರಿವು ಮತ್ತು ಜ್ಞಾನ!

ಸ್ತನ ಕ್ಯಾನ್ಸರ್‌ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ 
ಮುಖ್ಯ ಸತ್ಯಾಂಶಗಳು ಮತ್ತು ಕಪೋಲಕಲ್ಪನೆಗಳು ಹೀಗಿವೆ

1. ಸ್ತನಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ಗಡ್ಡೆಗಳೂ ಉಗ್ರಸ್ವರೂಪದವಲ್ಲ, ಮಾರಣಾಂತಿಕವಲ್ಲ; ಹಾಗೆ ಹೇಳುವುದಾದರೆ ಬಹುತೇಕ ಗಡ್ಡೆಗಳು ಉಗ್ರವಲ್ಲ ಹಾಗೂ ಕ್ಯಾನ್ಸರ್‌ ಆಗಿರುವುದಿಲ್ಲ.
2. ಎಲ್ಲ ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಸಂಪೂರ್ಣ ಸ್ತನವನ್ನು ತೆಗೆದುಹಾಕಬೇಕಾಗಿ ಬರುವುದಿಲ್ಲ. ಅನೇಕ ಸ್ತನ ಕ್ಯಾನ್ಸರ್‌ ಪ್ರಕರಣಗಳನ್ನು ಸ್ತನಗಳನ್ನು ಉಳಿಸಿಕೊಂಡೇ ಗುಣಪಡಿಸಬಹುದಾಗಿದೆ, ಈ ಚಿಕಿತ್ಸಾ ವಿಧಾನದ ಗುಣಪ್ರಮಾಣವೂ ಅತ್ಯುತ್ತಮವಾಗಿದೆ.

ಖಚಿತವಾಗಿ ಗುಣಪಡಿಸಬಹುದಾದಂತಹ  ಕೆಲವು ಕ್ಯಾನ್ಸರ್‌ಗಳು
1. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಕ್ಯಾನ್ಸರ್‌ಗಳು
2. ಲಿಂಫೋಮಾ
3. ವೃಷಣಗಳು ಮತ್ತು ಅಂಡಾಶಯಗಳಲ್ಲಿ ಕಾಣಿಸಿಕೊಳ್ಳುವ ಜರ್ಮ್ ಸೆಲ್‌ ಟ್ಯೂಮರ್‌ 
4. ಅಕ್ಯೂಟ್‌ ಲ್ಯುಕೇಮಿಯಾ
5. ಕೊರಿಯೊ – ಕಾರ್ಸಿನೊಮಾ
ಸ್ತನ, ಅಂಡಾಶಯ, ಶ್ವಾಸಕೋಶಗಳಂತಹ ಸರ್ವೇಸಾಮಾನ್ಯ ಕ್ಯಾನ್ಸರ್‌ಗಳು ಪ್ರಾಥಮಿಕ ಹಂತದಲ್ಲಿ ಗುಣಕಾಣಬಲ್ಲಂಥವು.

– ಡಾ| ಕಾರ್ತಿಕ್‌ ಎಸ್‌. ಉಡುಪ,   
ಅಸೋಸಿಯೇಟ್‌ ಪ್ರೊಫೆಸರ್‌, 
ಮೆಡಿಕಲ್‌ ಓಂಕೋಲಜಿ ವಿಭಾಗ,
ಕೆ.ಎಂ.ಸಿ., ಮಣಿಪಾಲ.

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.