ಕ್ಯಾನ್ಸರ್‌ ಮತ್ತು ಕೋವಿಡ್‌-19; ಸದಾ ಉದ್ಭವಿಸುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು


Team Udayavani, Dec 12, 2021, 7:45 AM IST

ಕ್ಯಾನ್ಸರ್‌ ಮತ್ತು ಕೋವಿಡ್‌-19; ಸದಾ ಉದ್ಭವಿಸುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು

1. ಕ್ಯಾನ್ಸರ್‌ಪೀಡಿತರಲ್ಲಿ ಕೋವಿಡ್‌-19 ಸೋಂಕಿನ ಲಕ್ಷಣಗಳೇನು?
ಲಭ್ಯ ಮಾಹಿತಿಗಳ ಪ್ರಕಾರ ಇತರ ರೋಗಿಗಳಲ್ಲಿ ಕಂಡುಬರುವಂತಹವೇ ಲಕ್ಷಣಗಳು ಕ್ಯಾನ್ಸರ್‌ ರೋಗಿಗಳಲ್ಲಿ ಕೂಡ ಕಂಡುಬರುತ್ತವೆ. ಆದರೆ ಕ್ಯಾನ್ಸರ್‌ ರೋಗಿಗಳು ತಮ್ಮ ಈಗಾಗಲೇ ಇರುವ ಅನಾರೋಗ್ಯ ಸ್ಥಿತಿಯನ್ನು ಆಧರಿಸಿ ಕೆಲವೊಮ್ಮೆ ಹೆಚ್ಚು ತೀವ್ರತರಹದ ರೋಗಲಕ್ಷಣಗಳನ್ನು ಹೊಂದಬಹುದಾಗಿದೆ.

2. ಕ್ಯಾನ್ಸರ್‌ ಹೊಂದಿರುವ ರೋಗಿಗಳು ಕೋವಿಡ್‌-19 ನಿಂದಾಗಿ ಸಾವಿಗೀಡಾಗುವ ಸಾಧ್ಯತೆಗಳು ಹೆಚ್ಚಿವೆಯೇ?
ವಿಶೇಷವಾಗಿ ಶ್ವಾಸಕೋಶಗಳ ಕ್ಯಾನ್ಸರ್‌, ರಕ್ತದ ಕ್ಯಾನ್ಸರ್‌ ಮತ್ತು ಮುಂದುವರಿದ ಹಂತಗಳಲ್ಲಿರುವ ಕೆಲವು ಕ್ಯಾನ್ಸರ್‌ ಪೀಡಿತರ ಸಹಿತ ಕೆಲವು ವಿಧದ ಕ್ಯಾನ್ಸರ್‌ ರೋಗಿಗಳು ಕೋವಿಡ್‌-19ನಿಂದ ತೀವ್ರವಾದ ಸೋಂಕಿಗೆ ಒಳಗಾಗುವ ಮತ್ತು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಆದರೆ ಕ್ಯಾನ್ಸರ್‌ ರೋಗಿಗಳು ಮಾತ್ರವೇ ಕೋವಿಡ್‌-19ನಿಂದ ತೀವ್ರ ಸಮಸ್ಯೆಗಳಿಗೆ ತುತ್ತಾಗುವುದಿಲ್ಲ. ಕ್ಯಾನ್ಸರ್‌ ಮತ್ತು ಕೋವಿಡ್‌-19ನ ಸಂಕೀರ್ಣ ಸಮಸ್ಯೆಗಳು ಎರಡೂ ವಯಸ್ಕ ರೋಗಿಗಳಲ್ಲಿ ಹೆಚ್ಚು.

ಕ್ಯಾನ್ಸರ್‌ಪೀಡಿತರಾಗಿರುವ ಹಿರಿಯ ವಯೋಮಾನದವರು ಮಧುಮೇಹ, ಹೃದಯ/ ಶ್ವಾಸಕೋಶ ಕಾಯಿಲೆಗಳಂತಹ ಇತರ ಕಾಯಿಲೆಗಳನ್ನು ಕೂಡ ಹೊಂದಿರುವ ಸಾಧ್ಯತೆಗಳಿದ್ದು, ಇದರಿಂದಾಗಿಯೂ ಕೋವಿಡ್‌-19 ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗಲು ಕಾರಣವಾಗಬಹುದು.

3. ಕೋವಿಡ್‌-19 ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ ರೋಗಿಗಳು ಯಾವ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು?
ಕ್ಯಾನ್ಸರ್‌ ರೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸರಿಯಾದ ಮಾಸ್ಕ್/ ಫೇಸ್‌ ಶೀಲ್ಡ್‌ ಬಳಕೆ, ಕೈಗಳು ಮತ್ತು ಶ್ವಾಸಾಂಗ ನೈರ್ಮಲ್ಯಗಳನ್ನು ಕಾಪಾಡಿಕೊಳ್ಳುವಂತಹ ಕೋವಿಡ್‌-19 ತಡೆಗಟ್ಟುವ ಎಲ್ಲ ಪ್ರಕಾಶಿತ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರ ಜತೆಗೆ, ಕ್ಯಾನ್ಸರ್‌ ರೋಗಿಗಳು ಅನಗತ್ಯ ಪ್ರಯಾಣ, ಸಾರ್ವಜನಿಕ ಸಮಾರಂಭಗಳು/ ಜನದಟ್ಟಣೆಯಿರುವ ಸ್ಥಳಕ್ಕೆ ತೆರಳುವುದಕ್ಕೆ ನಿರ್ಬಂಧ ಹಾಕಿ ಕೊಳ್ಳಬೇಕು. ಅಗತ್ಯಬಿದ್ದರೆ ಪ್ರಯೋಗಾಲಯದಲ್ಲಿ ಇತರರ ಜತೆಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸು
ವುದಕ್ಕಾಗಿ ಅಪಾಯಿಂಟ್‌ಮೆಂಟ್‌ ಮೂಲಕವೇ ಪ್ರಯೋಗಾಲಯ ಭೇಟಿಯನ್ನು ಆಯೋಜಿಸಬೇಕು.ಲಸಿಕೆ ಹಾಕಿಸಿಕೊಂಡ ಬಳಿಕವೂ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಜತೆಗೆ, ಕ್ಯಾನ್ಸರ್‌ ಪೀಡಿತರ ಕುಟುಂಬ ಸದಸ್ಯರು ಕೂಡ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

4. ಕೋವಿಡ್‌-19 ಕ್ಯಾನ್ಸರ್‌ ರೋಗಪತ್ತೆ / ಚಿಕಿತ್ಸೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಒಂದು ಪ್ರಮುಖವಾದ ಅಪಾಯ ಎಂದರೆ, ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಕ್ಯಾನ್ಸರ್‌ ರೋಗ ಪತ್ತೆ ಮತ್ತು ಪರೀಕ್ಷೆಗಳಲ್ಲಿ ವಿಳಂಬವಾಗುವುದು. ದುರದೃಷ್ಟವಶಾತ್‌ ಕೋವಿಡ್‌-19ನಂತೆಯೇ ಕ್ಯಾನ್ಸರ್‌ ಕೂಡ ಸಾವಿಗೆ ಕಾರಣವಾಗುತ್ತದೆ. ಜತೆಗೆ, ಕೋವಿಡ್‌-19 ಸಾಂಕ್ರಾಮಿಕ ಕಡಿಮೆಯಾಗಲಿ ಎಂದು ಕ್ಯಾನ್ಸರ್‌ ಕಾಯುವುದಿಲ್ಲ! ಹೀಗಾಗಿ ಕ್ಯಾನ್ಸರ್‌ ಇದೆ ಎಂಬ ಶಂಕೆ ಇರುವವರು ಕೋವಿಡ್‌-19 ಕಾಲಘಟ್ಟದಲ್ಲಿಯೂ ತಜ್ಞರ ಸಹಾಯವನ್ನು ಪಡೆಯುವುದಕ್ಕೆ ವಿಳಂಬ ಮಾಡಬಾರದು; ಇದರಿಂದ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ಆರಂಭಿಸಲು ಸಹಾಯವಾಗುತ್ತದೆ. ಕ್ಯಾನ್ಸರ್‌ ವಿಶ್ಲೇಷಣೆ, ಪರೀಕ್ಷೆಗಳನ್ನು ವಿಳಂಬಿಸುವುದರಿಂದ ಅದು ಹರಡಲು ಸಾಧ್ಯವಾಗುತ್ತದೆ, ಇದರಿಂದ ಗುಣಪಡಿಸಬಹುದಾದ ಅಥವಾ ಚಿಕಿತ್ಸೆ ನೀಡಬಹುದಾದ ಸಮಸ್ಯೆ ಗುಣಪಡಿಸಲಾಗದ್ದಾಗಿ ಪರಿವರ್ತನೆಯಾಗುತ್ತದೆ. ಕೋವಿಡ್‌-19 ಸೋಂಕಿನಿಂದ ಹೆಚ್ಚು ಅಪಾಯ ಚಿಕಿತ್ಸೆ ಪಡೆಯದ ಕ್ಯಾನ್ಸರ್‌ ಕಾಯಿಲೆಯಿಂದ ಇರುತ್ತದೆ ಎಂದರೆ ತಪ್ಪಲ್ಲ.

ಕೀಮೋಥೆರಪಿ ಅಥವಾ ಯಾವುದೇ ನಿಗದಿ ಯಾದ ಥೆರಪಿ ಇರುವ ರೋಗಿಗಳು ತಮ್ಮ ಓಂಕಾಲಜಿಸ್ಟ್‌ ಬಳಿ ಚಿಕಿತ್ಸೆಯನ್ನು ವಿಳಂಬಿಸುವ ಬಗ್ಗೆ ಸಮಾಲೋಚಿಸಬೇಕು. ಕ್ಯಾನ್ಸರ್‌ಪೀಡಿತ ಅಂಗಾಂಶಗಳು ನಿಯಮಿತ ಸಮಯದಲ್ಲಿ ನೀಡುವ ಚಿಕಿತ್ಸೆಗೆ ಹೆಚ್ಚು ಚೆನ್ನಾಗಿ ಪ್ರತಿಸ್ಪಂದಿಸುವುದ ರಿಂದ ಕಿಮೋಥೆರಪಿಯನ್ನು ನಿಗದಿಯಾದ ಸಮಯದಲ್ಲಿಯೇ ಮುಂದುವರಿಸುವುದು ಉತ್ತಮ. ಅಪರೂಪಕ್ಕೆ ಚಿಕಿತ್ಸೆಯನ್ನು ವಿಳಂಬಿಸ ಬಹುದು ಅಥವಾ ಮುಂದೂಡಬಹುದು.

ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಸ್ವಯಂಪ್ರೇರಿತ ರಕ್ತದಾನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಹೀಗಾಗಿ ಚಿಕಿತ್ಸೆಯಲ್ಲಿರುವ ರೋಗಿಗಳು ಅಗತ್ಯ ಬಿದ್ದಾಗ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತವರ್ಗವನ್ನು ರಕ್ತ ನಿಧಿಗಳಿಗೆ ರಕ್ತದಾನ ಮಾಡುವ ಬಗ್ಗೆ ಪ್ರೇರೇಪಿಸಬಹುದು.

5. ಗುಣ ಹೊಂದಿರುವ ಕ್ಯಾನ್ಸರ್‌ ರೋಗಿಗಳು ಫಾಲೊಅಪ್‌ ಆರೈಕೆಯ ವಿಚಾರದಲ್ಲಿ ಏನು ಮಾಡಬೇಕು?
ಸಕ್ರಿಯ ಚಿಕಿತ್ಸೆಯಲ್ಲಿಲ್ಲದೆ, ಫಾಲೊಅಪ್‌ ಮಾತ್ರ ಇರುವ ರೋಗಿಗಳು ತಮ್ಮ ಓಂಕಾಲಜಿಸ್ಟ್‌ ಬಳಿ ಸಮಾಲೋಚಿಸಿ ಫಾಲೊಅಪ್‌ ಭೇಟಿ/ ಪರೀಕ್ಷೆಯ ಅಗತ್ಯದ ಬಗ್ಗೆ ಚರ್ಚಿಸಬಹುದು. ಕೆಲವು ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆ (ಸ್ತನ ಕ್ಯಾನ್ಸರ್‌ನಂತಹ ಸಂದರ್ಭಗಳಲ್ಲಿ) ಅಗತ್ಯವಾಗಿರುತ್ತದೆ, ಇಂತಹ ಸಂದರ್ಭಗಳಲ್ಲಿ ಕುಟುಂಬ ವೈದ್ಯರು/ ಸರ್ಜನ್‌ ಚಿಕಿತ್ಸೆ ನೀಡುತ್ತಿರುವ ಓಂಕಾಲಜಿಸ್ಟ್‌ ಜತೆಗೆ ಸಮಾಲೋಚಿಸಿ ರೋಗಿಗೆ ಸಹಾಯ ಮಾಡಬಹುದು. ಆದರೆ ರೋಗಿಗೆ ಹೊಸ ಲಕ್ಷಣಗಳು ಅಥವಾ ಸಮಸ್ಯೆಗಳಿದ್ದಲ್ಲಿ ತತ್‌ಕ್ಷಣ ಹೆಚ್ಚುವರಿ ತಪಾಸಣೆ, ವಿಶ್ಲೇಷಣೆ ನಡೆಸುವುದಕ್ಕಾಗಿ ಚಿಕಿತ್ಸೆ ನೀಡುತ್ತಿರುವ ಓಂಕಾಲಜಿಸ್ಟ್‌ರನ್ನು ತತ್‌ಕ್ಷಣ ಭೇಟಿಯಾಗುವುದು ಉತ್ತಮ.

6. ಪ್ರಯಾಣ ನಿರ್ಬಂಧಗಳಿಂದಾಗಿ ಓಂಕಾಲಜಿ ಅಪಾಯಿಂಟ್‌ಮೆಂಟ್‌ಗಳನ್ನು ಕೋವಿಡ್‌-19 ಸಾಂಕ್ರಾಮಿಕ ಕಾಲಘಟ್ಟದಲ್ಲಿ ಮುಂದೂಡಬೇಕೇ?
ಪ್ರಯಾಣ ನಿರ್ಬಂಧಗಳು ಅಥವಾ ಕೋವಿಡ್‌-19 ಭಯ ಎರಡೂ ಕೂಡ ಓಂಕಾಲಜಿಸ್ಟ್‌ ಭೇಟಿ ಮಾಡದಿರಲು ಕಾರಣವಾಗಬಾರದು. ಕೆಲವು ಪ್ರಕರಣಗಳಲ್ಲಿ ರೋಗಿಗಳು ಮನೆಯ ಸಮೀಪ ಇರುವ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಂಡ ಬಳಿಕ ನಿರ್ದಿಷ್ಟ ವರದಿಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ದೂರವಾಣಿ ಮೂಲಕ ಸಮಾಲೋಚನೆಗಾಗಿ ಮನವಿ ಮಾಡಿಕೊಳ್ಳಬಹುದು. ಆದರೆ ನೈಜ ಕಾರಣಗಳಿಗಾಗಿ ಪ್ರಯಾಣ ಮಾಡುವುದಕ್ಕೆ ನಿರ್ಬಂಧಗಳಿಲ್ಲ, ಹೀಗಾಗಿ ಪ್ರಯಾಣ ಕಾಲದಲ್ಲಿ ಅಡಚಣೆಗಳು ಉಂಟಾಗದಂತಿರಲು ರೋಗಿಗಳು ಆಸ್ಪತ್ರೆಯ ಡಿಸಾcರ್ಜ್‌ ಸಮ್ಮರಿ/ ಅಪಾಯಿಂಟ್‌ಮೆಂಟ್‌ ಸ್ಲಿಪ್‌ಗ್ಳನ್ನು ತಮ್ಮ ಜತೆಗೆ ಇರಿಸಿಕೊಳ್ಳಬೇಕು.

7. ಕ್ಯಾನ್ಸರ್‌ ರೋಗಿಗಳು ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳಬಹುದೇ?
ಕೋವಿಡ್‌-19 ಲಸಿಕೆಗಳ ಬಹುತೇಕ ಪ್ರಯೋಗ ಸಂದರ್ಭಗಳಲ್ಲಿ ಪ್ರಯೋಗಕ್ಕೆ ಒಳಗಾಗಿರುವ ಜನರಲ್ಲಿ ಕ್ಯಾನ್ಸರ್‌ ರೋಗಿಗಳನ್ನು ಒಳಗೊಂಡಿರಲಿಲ್ಲ. ಆದರೆ ಇದುವರೆಗೆ ಕೋವಿಡ್‌-19 ಲಸಿಕೆ ಪಡೆದಿರುವ ಕ್ಯಾನ್ಸರ್‌ ರೋಗಿಗಳಲ್ಲಿ ಹೆಚ್ಚುವರಿ ಸುರಕ್ಷಾ ಸಮಸ್ಯೆಗಳು ವರದಿಯಾಗಿಲ್ಲ.

ಕೋವಿಡ್‌-19 ಲಸಿಕೆಗಳು ವಿಭಿನ್ನವಾಗಿವೆ. ಭಾರತದಲಿ ಸಾಮಾನ್ಯವಾಗಿ ಲಭ್ಯವಿರುವ ಎರಡು ಲಸಿಕೆಗಳೆಂದರೆ, ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌. ಕೊವಿಶೀಲ್ಡ್‌ ಒಂದು ಎಂಆರ್‌ಎನ್‌ಎ ವೈರಲ್‌ ವೆಕ್ಟರ್‌ ಲಸಿಕೆಯಾಗಿದ್ದರೆ ಕೊವ್ಯಾಕ್ಸಿನ್‌ ಒಂದು ದುರ್ಬಲಗೊಳಿಸಿದ ಲಸಿಕೆಯಾಗಿದೆ.

ಕ್ಯಾನ್ಸರ್‌ ರೋಗಿಗಳಲ್ಲಿ ಲಸಿಕೆಯ ಬಳಕೆಯ ಬಗ್ಗೆ ಸಾಕಷ್ಟು ಅಂಕಿಅಂಶಗಳು ಲಭ್ಯವಿಲ್ಲ, ಅಂದರೆ, ರೋಗ ನಿರೋಧಕ ಶಕ್ತಿಯ ಖಚಿತವಾದ ಅವಧಿ, ರೋಗನಿರೋಧಕ ಶಕ್ತಿಯ ಸಾಮರ್ಥ್ಯ ಮತ್ತು ಕ್ಯಾನ್ಸರ್‌ ರೋಗಿಗಳಲ್ಲಿ ಅದರ ದಕ್ಷತೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.

ಆದರೆ, ಒಟ್ಟಾರೆಯಾಗಿ ಬಹುತೇಕ ಕ್ಯಾನ್ಸರ್‌ ರೋಗಿಗಳಲ್ಲಿ ಈ ಎಂಎನ್‌ಆರ್‌ಎ ಲಸಿಕೆಗಳು ಮತ್ತು ದುರ್ಬಲಗೊಳಿಸಿದ ಲಸಿಕೆಗಳು ಸುರಕ್ಷಿತವಾಗಿವೆ. ಕ್ಯಾನ್ಸರ್‌ ಇರುವಾಗ ಲಸಿಕೆ ನೀಡುವುದಕ್ಕೆ ಈ ಕೆಳಗಿನವು ಸಾಮಾನ್ಯ ಮಾರ್ಗದರ್ಶಿ ಸೂತ್ರಗಳಾಗಿದ್ದು, ಕ್ಯಾನ್ಸರ್‌ ರೋಗಿಗಳಿಗೆ ಲಸಿಕೆ ನೀಡಿರುವ ಈ ಹಿಂದಿನ ಅನುಭವಗಳನ್ನು ಆಧರಿಸಿದೆ.

– ಸಕ್ರಿಯ ಕಿಮೋಥೆರಪಿಯಲ್ಲಿರುವ ಕ್ಯಾನ್ಸರ್‌ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವ ಸಮಯದ ಬಗ್ಗೆ ತಮ್ಮ ಓಂಕಾಲಜಿಸ್ಟ್‌ ಬಳಿ ಸಮಾಲೋಚಿಸಿಕೊಳ್ಳಬೇಕು. ಥೆರಪಿಯ ಆರಂಭಕ್ಕೆ ಮುನ್ನ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ. ಆದರೆ ಚಿಕಿತ್ಸೆ ಈಗಾಗಲೇ ಆರಂಭವಾಗಿದ್ದರೆ ಚಿಕಿತ್ಸೆ ನಡೆಯುತ್ತಿರುವಾಗಲೂ ಲಸಿಕೆ ಹಾಕಿಸಿಕೊಳ್ಳಬಹುದು.
– ಗುರಿನಿರ್ದೇಶಿತ/ ಹಾರ್ಮೋನಲ್‌ ಥೆರಪಿ ಅಥವಾ ರೇಡಿಯೋಥೆರಪಿಯಲ್ಲಿರುವ ರೋಗಿಗಳು ಲಸಿಕೆಯನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು.
– ಇಮ್ಯುನೊಥೆರಪಿ ಔಷಧಗಳು (ನಿವುಲೊ ಮಾಬ್‌ ಅಥವಾ ಪೆಂಬೊÅಲೈಝುಮಾಬ್‌) ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕಿತ್ಸಾ ವಿಧಾನಗಳಾಗಿದ್ದು, ಇಮ್ಯುನೋಥೆರಪಿಯಲ್ಲಿರುವ ರೋಗಿಗಳು ಕೂಡ ಲಸಿಕೆಯನ್ನು ಪಡೆಯಬಹುದು.

-ರಿತುಕ್ಸಿಮ್ಯಾಬ್‌ನಂತಹ ಔಷಧಗಳನ್ನು ಕಳೆದ ಆರು ತಿಂಗಳುಗಳ ಅವಧಿಯಲ್ಲಿ ತೆಗೆದುಕೊಂಡವರು (ಬಿ ಸೆಲ್‌ಗ‌ಳ ಮೇಲೆ ಪರಿಣಾಮ ಬೀರುವ ಮೂಲಕ ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ) ಕೋವಿಡ್‌-19 ಲಸಿಕೆಗೆ ಪ್ರತಿಸ್ಪಂದಿಸದೆ ಇರಬಹುದು.
– ರಕ್ತದ ಕ್ಯಾನ್ಸರ್‌ ಇರುವವರು ಅಥವಾ ಅಸ್ತಿಮಜ್ಜೆಯ ಕಸಿ ಚಿಕಿತ್ಸೆಗೆ ಒಳಗಾದವರು ಲಸಿಕೆ ಸ್ವೀಕರಿಸುವುದಕ್ಕೆ ಮುನ್ನ ತಮ್ಮ ಓಂಕಾಲಜಿಸ್ಟ್‌ ಬಳಿ ಸಮಾಲೋಚನೆ ನಡೆಸಬೇಕು.
– ಕ್ಯಾನ್ಸರ್‌ ಗುಣಹೊಂದಿ ಫಾಲೊ ಅಪ್‌ನಲ್ಲಷ್ಟೇ ಇರುವವರು ಲಸಿಕೆಯನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು.
– ಕ್ಯಾನ್ಸರ್‌ನ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆಯಲ್ಲಿದ್ದು, ಸಕ್ರಿಯ ಚಿಕಿತ್ಸೆ ಪಡೆಯದೆ ಇರುವವರು ಲಸಿಕೆಯನ್ನು ಪಡೆಯಬಹುದು.

8. ಕ್ಯಾನ್ಸರ್‌ ಹೊಂದಿರುವ ರೋಗಿಗಳು ಲಸಿಕೆ ಪಡೆಯುವುದಕ್ಕೆ
ಮುನ್ನ ಯಾವುದೇ ನಿರ್ದಿಷ್ಟ ಮುಂಜಾಗ್ರತೆಗಳನ್ನು
ಅನುಸರಿಸಬೇಕೇ?
– ರೋಗಿಗಳು ಲಸಿಕೆ ಪಡೆಯುವ ಬಗ್ಗೆ ತಮ್ಮ ಓಂಕಾಲಜಿಸ್ಟ್‌ಗೆ ಮಾಹಿತಿ ನೀಡಬೇಕು. ಯಾಕೆಂದರೆ ಕೋವಿಡ್‌-19 ಲಸಿಕೆಯು ಕೆಲವೊಮ್ಮೆ ದುಗ್ಧರಸ ಗ್ರಂಥಿಗಳ ಊತವನ್ನು ಉಂಟು ಮಾಡಬಹುದಾಗಿದ್ದು, ಇದು ಕ್ಯಾನ್ಸರ್‌ ಕಾಯಿಲೆ ಉಲ್ಬಣಿಸಿದಂತೆ ಭಾಸವಾಗಬಹುದು.
-ಸ್ತನದ ಕ್ಯಾನ್ಸರ್‌ ಹೊಂದಿರುವ ರೋಗಿಗಳು ಕ್ಯಾನ್ಸರ್‌ ಇರುವ ಸ್ಥಳದ ವಿರುದ್ಧ ಭಾಗದ ತೋಳಿಗೆ ಲಸಿಕೆ ಪಡೆಯಬೇಕು.
– ಕೋವಿಡ್‌-19 ಲಸಿಕೆಯನ್ನು ಸಾಮಾನ್ಯವಾಗಿ ಶಿಫಾರಸು ಮಾಡುವ 4-6 ವಾರಗಳ ಬದಲಿಗೆ 3 ವಾರಗಳ ಅನಂತರ ನೀಡಿದರೆ ಕೆಲವು ಕ್ಯಾನ್ಸರ್‌ ರೋಗಿಗಳಲ್ಲಿ ಉತ್ತಮ ರೋಗನಿರೋಧಕ ಶಕ್ತಿ ಉಂಟಾಗುತ್ತದೆ ಎಂಬುದಾಗಿ ಕೆಲವು ಅಂಕಿಅಂಶಗಳು ಮಾಹಿತಿ ಒದಗಿಸುತ್ತವೆ.
– ಹೊಸ ಅಂಕಿ ಅಂಶಗಳಿಂದ ದೊರೆತ ಮಾಹಿತಿಯಲ್ಲಿ ಕಾನ್ಸರ್‌ ರೋಗಿಗಳು ಮೂರು ಡೋಸ್‌ ಕೋವಿಡ್‌ ವ್ಯಾಕ್ಸಿನ್‌ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂಬ ಸೂಚನೆಗಳಿವೆ.

-ಡಾ| ಶಾರದಾ ಎಂ.
ಸಹಪ್ರಾಧ್ಯಾಪಕಿ, ವೈದ್ಯಕೀಯ ಕ್ಯಾನ್ಸರ್‌ ವಿಭಾಗ
ಮಣಿಪಾಲ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರ
ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.