ಸೆರೆಬ್ರಲ್‌ ಪಾಲ್ಸಿ; ನರವ್ಯವಸ್ಥೆಯನ್ನು ಬಾಧಿಸುವ ಅನಾರೋಗ್ಯ


Team Udayavani, Mar 13, 2022, 6:00 AM IST

ಸೆರೆಬ್ರಲ್‌ ಪಾಲ್ಸಿ; ನರವ್ಯವಸ್ಥೆಯನ್ನು ಬಾಧಿಸುವ ಅನಾರೋಗ್ಯ

ಸೆರೆಬ್ರಲ್‌ ಪಾಲ್ಸಿ ಎಂಬುದು ನರವ್ಯವಸ್ಥೆಯನ್ನು ಬಾಧಿಸುವ ಒಂದು ಅನಾರೋಗ್ಯ. ಚಲನೆ ಮತ್ತು ಸಂಯೋಜನೆಗಳಲ್ಲಿ ವೈಕಲ್ಯ ಇದರ ಲಕ್ಷಣ. ಪ್ರಸವ ಅಥವಾ ಶಿಶು ಜನನವಾದ ತತ್‌ಕ್ಷಣ ಉಂಟಾಗುವ ಯಾವುದೇ ಸಮಸ್ಯೆಯಿಂದ ಇದು ಉಂಟಾಗುತ್ತದೆ. ಇದು ಪ್ರಗತಿ ಹೊಂದದ, ಶಾಶ್ವತ ಸಮಸ್ಯೆಯಾಗಿದ್ದು, ಚಲನೆಯನ್ನು ಬಾಧಿಸುವುದರಿಂದ ರೋಗಿಯ ಚಟುವಟಿಕೆಗಳು ಸೀಮಿತವಾಗುತ್ತವೆ. ಬಾಲ್ಯದಲ್ಲಿ ಅಂಗವೈಕಲ್ಯಕ್ಕೆ ಇದು ಬಹು ಸಾಮಾನ್ಯವಾದ ಕಾರಣ. ಸಂಭಾವ್ಯ ಕಾರಣಗಳಲ್ಲಿ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಮೂತ್ರಾಂಗ ವ್ಯವಸ್ಥೆಯ ಸೋಂಕುಗಳು, ಅವಘಡದಿಂದ ಅಥವಾ ಇತರ ಕಾರಣಗಳಿಂದ ಉಂಟಾಗುವ ಗಾಯ/ ಆಘಾತಗಳು ಸೇರಿವೆ.

ಸೆರೆಬ್ರಲ್‌ ಪಾಲ್ಸಿ ಉಂಟಾಗುವುದಕ್ಕೆ ಕಾರಣವಾಗುವ ಗಮನಾರ್ಹ ಅಂಶ ಅವಧಿಪೂರ್ವ ಹೆರಿಗೆ. ಇಂಟ್ರಾವೆಂಟ್ರಿಕ್ಯುಲಾರ್‌ ಹೆಮರೇಜ್‌ ಎಂದು ಕರೆಯಲ್ಪಡುವ, ಮಿದುಳಿನ ಒಳಗೆ ಉಂಟಾಗುವ ರಕ್ತಸ್ರಾವ ಇದಕ್ಕೆ ಕಾರಣ. ಮಿದುಳಿಗೆ ಆಮ್ಲಜನಕ ಸರಬರಾಜು ಕುಂಠಿತವಾಗುವುದರಿಂದಲೂ ಉಂಟಾಗುತ್ತದೆ. ಮೆಕೋನಿಯಮ್‌ ಆಸ್ಪಿರೇಶನ್‌, ಗರ್ಭಕೋಶದ ಒಳಗೆ ಭ್ರೂಣದ ಬೆಳವಣಿಗೆಗೆ ಮಿತಿ ಉಂಟಾಗಿರುವುದು, ಪೆರಿನೇಟಲ್‌  ಇತರ ಅಪಾಯಾಂಶಗಳು.

ಲಕ್ಷಣಗಳು
ಮಿದುಳಿಗೆ ಆಗಿರುವ ಹಾನಿಯ ತೀವ್ರತೆಯನ್ನು ಆಧರಿಸಿ ಲಕ್ಷಣಗಳು ಬದಲಾಗುತ್ತವೆ. ಕೆಲವು ಮಕ್ಕಳಿಗೆ ನಡೆದಾಡಲು ಕಷ್ಟವಾಗಬಹುದು, ಇನ್ನು ಕೆಲವರಿಗೆ ತೀವ್ರ ವೈಕಲ್ಯವಿದ್ದು ಜೀವಮಾನಪರ್ಯಂತ ಆರೈಕೆ, ಸಹಾಯ ಬೇಕಾಗಬಹುದು. ಮಕ್ಕಳಿಗೆ ಸೆಳವು, ನಿಧಾನ ಬೆಳವಣಿಗೆ, ಸ್ಕೋಲಿಯೋಸಿಸ್‌ನಂತಹ ಸ್ನಾಯು-ಎಲುಬು ಸಮಸ್ಯೆಗಳು, ಅಂಧತ್ವ, ಕಿವುಡು, ಕಲಿಕೆಯಲ್ಲಿ ಸಮಸ್ಯೆಗಳು, ಮೂತ್ರ ಅಥವಾ ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲದಿರುವಂತಹ ಇತರ ಸಮಸ್ಯೆಗಳು ಕೂಡ ಇರಬಹುದು.

ಎಷ್ಟು ಪ್ರಮಾಣದಲ್ಲಿದೆ?
ಸೆರೆಬ್ರಲ್‌ ಪಾಲ್ಸಿ ಜನಸಂಖ್ಯೆಯ ಸುಮಾರು ಶೇ. 3.8ರಷ್ಟು ಮಂದಿಯಲ್ಲಿ ಕಂಡುಬರುತ್ತದೆ. ಭಾರತದಲ್ಲಿ ದೈಹಿಕ ವೈಕಲ್ಯ ಹೊಂದಿರುವವರಲ್ಲಿ ಶೇ. 15ರಿಂದ ಶೇ. 20ರಷ್ಟು ಮಂದಿ ಸೆರಬ್ರಲ್‌ ಪಾಲ್ಸಿಯಿಂದ ಬಾಧಿತರಾಗಿರುತ್ತಾರೆ. ಪ್ರತೀ 1,000 ಜೀವಂತ ಜನನಗಳಲ್ಲಿ 3 ಶಿಶುಗಳು ಸೆರಬ್ರಲ್‌ ಪಾಲ್ಸಿಯಿಂದ ಬಾಧಿತರಾಗುತ್ತಾರೆ.

ಸೆರಬ್ರಲ್‌ ಪಾಲ್ಸಿಯ ವಿಧಗಳು
– ಸ್ಪಾಸ್ಟಿಕ್‌: ಮಗು ಅಸಾಧಾರಣ ದೇಹದಾಡ್ಯìವನ್ನು ಹೊಂದಿದ್ದು, ಇದರಿಂದಾಗಿ ಕಾಲು ಮತ್ತು ತೋಳುಗಳಲ್ಲಿ ಪೆಡಸುತನ ಉಂಟಾಗುತ್ತದೆ. ಕಾಲುಗಳನ್ನೇ ಇದು ಹೆಚ್ಚು ಬಾಧಿಸುವುದಿದ್ದರೆ ಸ್ಪಾಸ್ಟಿಕ್‌ ಡಿಪ್ಲೆಜಿಯಾ ಎಂದು ಕರೆಯಲಾಗುತ್ತದೆ, ಎಲ್ಲ ಎರಡು ಕಾಲು ಮತ್ತು ಎರಡು ತೋಳುಗಳನ್ನು ಬಾಧಿಸುತ್ತಿದ್ದರೆ ಕ್ವಾಡ್ರಿಪ್ಲೆಜಿಯಾ ಎನ್ನಲಾಗುತ್ತದೆ, ದೇಹದ ಒಂದು ಪಾರ್ಶ್ವವನ್ನು ಬಾಧಿಸುತ್ತಿದ್ದರೆ ಹೆಮಿಪ್ಲೆಜಿಯಾ ಎನ್ನಲಾಗುತ್ತದೆ.
– ಡಿಸ್‌ಕೈನೆಟಿಕ್‌/ಕೊರಿಯೋಥೆಟಾಯ್ಡ: ಇದರಲ್ಲಿ ಅನೈಚ್ಛಿಕ ಚಲನೆಗಳಿದ್ದು, ಸ್ನಾಯುಗಳು ನರ್ತಿಸಿದಂತೆ ಸಂಕುಚನಗೊಳ್ಳುತ್ತವೆ.
– ಡಿಸ್ಟೋನಿಕ್‌: ಇದರಲ್ಲಿ ಸ್ನಾಯುಗಳು ಪದೇಪದೆ ಸಂಕುಚನಗೊಳ್ಳುವುದರಿಂದ ತಿರುಚಿದಂತಹ ಚಲನೆಗಳಿರುತ್ತವೆ.
– ಅಟಾಕ್ಸಿಕ್‌: ಇದರಲ್ಲಿ ಅಸ್ಥಿರತೆ ಮತ್ತು ಸಂಯೋಜನೆಯ ಕೊರತೆ ಇರುತ್ತವೆ.

ತಪಾಸಣೆ
ಆರೋಗ್ಯ ಚರಿತ್ರೆ ಮತ್ತು ದೈಹಿಕ ಪರೀಕ್ಷೆಗಳ ಜತೆಗೆ ರೇಡಿಯಾಲಜಿಕಲ್‌ ಪರೀಕ್ಷೆಗಳು ಸೆರಬ್ರಲ್‌ ಪಾಲ್ಸಿಯನ್ನು ಪತ್ತೆಹಚ್ಚಲು ನೆರವಾಗುತ್ತವೆ. ನವಜಾತ ಶಿಶು ಅವಧಿಯಲ್ಲಿ ಕ್ರೇನಿಯಲ್‌ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ನಡೆಸುವುದರಿಂದ ಇಂಟ್ರಾವೆಂಟ್ರಿಕ್ಯುಲಾರ್‌ ಹೆಮರೇಜ್‌ ಅಥವಾ ವೆಂಟ್ರಿಕ್ಯುಲೊಮೆಗಾಲಿಯನ್ನು ಪತ್ತೆಹಚ್ಚಬಹುದಾಗಿದೆ. ಮಿದುಳಿನ ಎಂಆರ್‌ಐ ಸ್ಕ್ಯಾನ್‌ ನಡೆಸುವುದರಿಂದ ಮಿದುಳಿನ ಮೋಟಾರ್‌ ಪ್ರದೇಶಕ್ಕೆ ಸಂಬಂಧಿಸಿದ ನ್ಯೂರೊಅನಾಟಮಿಯ ರೋಗಶಾಸ್ತ್ರೀಯ ನ್ಯೂನತೆಗಳನ್ನು ಪತ್ತೆಹಚ್ಚಬಹುದಾಗಿದೆ. ರೋಗಪತ್ತೆಯಲ್ಲಿ ವಿವಿಧ ವೈದ್ಯಕೀಯ ವಿಶ್ಲೇಷಣ ಮಾನದಂಡಗಳನ್ನು ಉಪಯೋಗಿಸಲಾಗುತ್ತದೆ. ರೋಗಿಗೆ ಸೆಳವು ಇದ್ದರೆ ಇಇಜಿ ನಡೆಸುವುದು ಅಗತ್ಯವಾಗುತ್ತದೆ. ಕೌಟುಂಬಿಕ ಇತಿಹಾಸ, ಡಿಸ್ಮಾರ್ಫಿಕ್‌ ಲಕ್ಷಣಗಳು, ಕೊನ್ಸಾಆಂಗ್ಯುನಿಟಿಯ ಇತಿಹಾಸ ಇದ್ದರೆ ವಂಶವಾಹಿ ಪರೀಕ್ಷೆ ಮತ್ತು ವಿಶ್ಲೇಷಣೆ ಅಗತ್ಯವಾಗುತ್ತದೆ.

ನಿರ್ವಹಣೆ
ಸೆರಬ್ರಲ್‌ ಪಾಲ್ಸಿಗೆ ಚಿಕಿತ್ಸೆಯು ವೈದ್ಯಕೀಯದ ವಿವಿಧ ವಿಭಾಗಗಳನ್ನು ಒಳಗೊಂಡು ನಡೆಯುತ್ತದೆ. ನರಶಾಸ್ತ್ರಜ್ಞರು, ಪ್ರಾಥಮಿಕ ಆರೈಕೆಯ ಮಕ್ಕಳ ವೈದ್ಯರು, ಮೂಳೆತಜ್ಞರು ಮತ್ತು ದೈಹಿಕ ಚಿಕಿತ್ಸಕರನ್ನು ಒಳಗೊಂಡು ಚಿಕಿತ್ಸೆ ನೀಡಲಾಗುತ್ತದೆ. ರೋಗಿಯ ಜೀವನ ಗುಣಮಟ್ಟ ಸುಧಾರಣೆ ಮತ್ತು ಆರೈಕೆ ಒದಗಿಸುವವರ ಹೊರೆಯನ್ನು ತಗ್ಗಿಸುವುದು ಗುರಿಯಾಗಿರುತ್ತದೆ. ಫಿಸಿಯೋಥೆರಪಿ, ವಾಕ್‌ ಚಿಕಿತ್ಸೆ, ಆಕ್ಯುಪೇಶನಲ್‌ ಥೆರಪಿ ಮತ್ತು ಔಷಧಗಳನ್ನು ಸ್ನಾಯುಗಳ ಪೆಡಸುತನ ಮತ್ತು ಹಿಡಿದುಕೊಳ್ಳುವುದನ್ನು ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ.

ಡಿಸ್ಟೋನಿಯಾ ಮತ್ತು ಕೊರಿಫಾರ್ಮ್ ಚಲನೆಗಳಿಗೆ ಚಿಕಿತ್ಸೆ ನೀಡಲು ಔಷಧಗಳನ್ನು ನೀಡಲಾಗುತ್ತದೆ. ಸೆಳವು ಹೊಂದಿರುವ ರೋಗಿಗಳಿಗೆ ಆ್ಯಂಟಿಪೈಲೆಪ್ಟಿಕ್‌ಗಳನ್ನು ನೀಡಲಾಗುತ್ತದೆ. ಮಲಬದ್ಧತೆಗೆ ಮಲವನ್ನು ಮೃದುಗೊಳಿಸುವ ಔಷಧ ಕೊಡಲಾಗುತ್ತದೆ. ಸೊಂಟದ ಡಿಸ್‌ಲೊಕೇಶನ್‌/ ಸಬ್‌ಲಕ್ಸೇಶನ್‌, ಸ್ಕೋಲಿಯೋಸಿಸ್‌, ಈಕ್ವಿನೊವೇರಸ್‌ ವೈಕಲ್ಯ ಇರುವ ಪ್ರಕರಣಗಳಲ್ಲಿ ಆಥೊìಪೆಡಿಕ್‌ ತಪಾಸಣೆ ಅಗತ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆಗಳಲ್ಲಿ ಟೆಂಡನ್‌ ರಿಲೀಸಸ್‌, ಸೊಂಟದ ಡಿರೊಟೇಶನ್‌/ ರೊಟೇಶನ್‌ ಶಸ್ತ್ರಚಿಕಿತ್ಸೆ ಸೇರಿರುತ್ತವೆ. ಸ್ಪಾಸ್ಟಿಸಿಟಿಯನ್ನು ಕಡಿಮೆ ಮಾಡಲು ನಡೆಸಲಾಗುವ ಶಸ್ತ್ರಚಿಕಿತ್ಸೆಗಳಲ್ಲಿ ಬಾಲ್ಸೊಫೆನ್‌ ಪಂಪ್‌, ಡೊರ್ಸಲ್‌ ರಿಜೊಟೊಮಿ ಸೇರಿರುತ್ತವೆ. ಸ್ಪಾಸ್ಟಿಸಿಟಿಗೆ ಚಿಕಿತ್ಸೆ ನೀಡಲು ಬೊಟೊಕ್ಸ್‌ ಇಂಜೆಕ್ಷನ್‌ ನೀಡಲಾಗುತ್ತದೆ.

ಚಿಕಿತ್ಸೆಯ ಬಳಿಕ
ಬಹುತೇಕ ಮಕ್ಕಳು ಚಿಕಿತ್ಸೆಯ ಬಳಿಕ ಸಹಜ, ದೀರ್ಘ‌ ಮತ್ತು ಸಂತೋಷದ ಜೀವನ ನಡೆಸುತ್ತಾರೆ. ಲಘು ಸ್ವರೂಪದ ಸೆರೆಬ್ರಲ್‌ ಪಾಲ್ಸಿ ಹೊಂದಿರುವ ಮಕ್ಕಳು ಸಹಜ ಜೀವನ ಮಟ್ಟ ಹೊಂದಿರುತ್ತಾರೆ. ಎಪಿಲೆಪ್ಸಿ, ಕ್ವಾಡ್ರಿಪ್ಲೆಜಿಯಾ, ತೀವ್ರ ಸ್ವರೂಪದ ಬುದ್ಧಿಮಾಂದ್ಯ ಇತ್ಯಾದಿ ತೀವ್ರ ಸ್ವರೂಪದ ಸೆರಬ್ರಲ್‌ ಪಾಲ್ಸಿ ಹೊಂದಿರುವ ಮಕ್ಕಳ ಸ್ಥಿತಿ ಚಿಂತಾಜನಕ ವಾಗಿರುತ್ತದೆ. ಶ್ವಾಸಾಂಗ ವೈಫ‌ಲ್ಯ ಇಂತಹ ಮಕ್ಕಳಲ್ಲಿ ಸಾವಿಗೆ ಪ್ರಧಾನ ಕಾರಣ ವಾಗಿರುತ್ತದೆ. ಚಿಕಿತ್ಸೆಯ ಬಳಿಕ ಉತ್ತಮ ಫ‌ಲಿತಾಂಶದ ಅಂಶಗಳಲ್ಲಿ 24 ತಿಂಗಳುಗಳಲ್ಲಿ ಕುಳಿತುಕೊಳ್ಳುವುದು ಮತ್ತು 30 ತಿಂಗಳು ವಯಸ್ಸಿಗೆ ಮುಂದಕ್ಕೆ ತೆವಳಲಾರಂಭಿಸುವುದು ಸೇರಿವೆ. ಚಿಕಿತ್ಸೆಯ ಬಳಿಕದ ಕಳಪೆ ಫ‌ಲಿತಾಂಶಗಳಲ್ಲಿ 20 ತಿಂಗಳುಗಳ ಬಳಿಕವೂ ತಲೆಯ ಸಮತೋಲನ ಸಾಧಿಸಲಾಗದಿರುವುದು ಮತ್ತು 5 ವರ್ಷದ ಒಳಗೆ ತೆವಳಲಾಗದಿರುವುದು ಸೇರಿವೆ.

ಉತ್ತಮವಾಗುವ ಫ‌ಲಿತಾಂಶ
ಶಿಶುಗಳಲ್ಲಿ ಸೆರಬ್ರಲ್‌ ಪಾಲ್ಸಿಯ ಗುಣಲಕ್ಷಣಗಳನ್ನು ಆದಷ್ಟು ಬೇಗನೆ ಪತ್ತೆ ಮಾಡುವುದು ವೈದ್ಯರ ನಿರ್ಣಾಯಕ ಕರ್ತವ್ಯವಾಗಿದೆ. ಆದಷ್ಟು ಬೇಗನೆ ಚಿಕಿತ್ಸೆ ನೀಡುವುದರಿಂದ ನರಸಮೂಹಗಳ ನಮನೀಯತೆ ಇರುವುದರಿಂದ ಇದಷ್ಟು ಬೇಗನೆ ಚಿಕಿತ್ಸೆ ನೀಡುವುದು ಉತ್ತಮ ಫ‌ಲಿತಾಂಶಕ್ಕೆ ಕಾರಣವಾಗುತ್ತದೆ. ಇಂತಹ ಮಕ್ಕಳ ಆರೈಕೆ ಮಾಡುತ್ತಿರುವವರಿಗೆ ಶಿಕ್ಷಣ ನೀಡುವುದು ಮತ್ತು ತರಬೇತಿ ನೀಡುವುದರಿಂದ ದೈಹಿಕ ಮತ್ತು ಮಾನಸಿಕ ಹೊರೆ
ಯನ್ನು ತಗ್ಗಿಸಲು ಸಾಧ್ಯವಾಗುತ್ತದೆ.

-ಡಾ| ರೋಹಿತ್‌ ಪೈ
ಕನ್ಸಲ್ಟಂಟ್‌ ನ್ಯೂರಾಲಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.