ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ


Team Udayavani, Apr 23, 2023, 5:24 PM IST

ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ

ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರವು ಮನಶಾಸ್ತ್ರ ವಿಭಾಗದ ಒಂದು ಶಾಖೆಯಾಗಿದ್ದು, 18 ವರ್ಷಕ್ಕಿಂತ ಕೆಳಗಿನ ವಯೋಮಾನದವರ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತದೆ. ಮಕ್ಕಳು ಮತ್ತು ಹದಿಹರಯದವರು ಅನೇಕ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಅವರ ವಿಭಿನ್ನ ಸಮಸ್ಯೆಗಳು, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ.

ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ ಏನು ಎಂಬುದನ್ನು ತಿಳಿಯಲು ಮಕ್ಕಳ ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ವಿಶ್ಲೇಷಣೆ ನೆರವಾಗಬಲ್ಲುದು. ಇವುಗಳನ್ನು ಸ್ಥೂಲವಾಗಿ ಜೀವಶಾಸ್ತ್ರೀಯ (ಅಂದರೆ, ಮಿದುಳಿನಲ್ಲಿ ಆಗುವ ಬದಲಾವಣೆಗಳು), ಮನಶಾಸ್ತ್ರೀಯ (ಅಂದರೆ ಮಗುವಿನ ಸ್ವಭಾವ, ಹೊಂದಿಕೊಳ್ಳುವ ವ್ಯವಸ್ಥೆ, ಹೆತ್ತವರ ಜತೆಗಿನ ಸಂಬಂಧ) ಮತ್ತು ಸಾಮಾಜಿಕ (ಅಂದರೆ, ಮಕ್ಕಳು ಆಡುವ ಮತ್ತು ಬೆಳೆಯುವ ಶಾಲೆ/ಮನೆ/ನೆರೆಹೊರೆಯಲ್ಲಿ) ಎಂದು ವರ್ಗೀಕರಿಸಬಹುದು.

ಮಕ್ಕಳು ಸಾಮಾಜಿಕವಾಗಿ ಬಹು ಆಯಾಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೆಳವಣಿಗೆಗೆ ಸಾಮಾಜಿಕ ಅನುಭವ ಬಹಳ ಮುಖ್ಯವಾದುದು. ಆದರೆ ಮಕ್ಕಳು ಸಮಾಜದಲ್ಲಿ ಹಲವು ಬಗೆಯ ಒತ್ತಡ ಸನ್ನಿವೇಶಗಳನ್ನು ಎದುರಿಸಬಹುದಾಗಿದ್ದು, ಇದು ಅವರ ಮಾನಸಿಕ ಆರೋಗ್ಯಕ್ಕೆ ಮಾರಕವಾಗಬಹುದು.

ಉದಾಹರಣೆಗೆ, ನಿಂದನೆ, ವಿವಿಧ ರೂಪಗಳಲ್ಲಿ ಶೋಷಣೆ, ಮಾಧ್ಯಮಗಳಲ್ಲಿ ಬರುವ ತಪ್ಪು ಮಾಹಿತಿ, ಅನಗತ್ಯ ಶೈಕ್ಷಣಿಕ/ ಶಿಕ್ಷಣೇತರ ಸ್ಪರ್ಧೆ ಇತ್ಯಾದಿ. ಈ ಒತ್ತಡಗಳು ಯಾತನೆ ಮತ್ತು ಹತಾಶೆಯನ್ನು ಉಂಟು ಮಾಡಬಹುದು. ಮಕ್ಕಳ ಮತ್ತು ಹದಿಹರಯದವರ ಮನಶಾÏಸ್ತ್ರ ವಿಭಾಗವು ಈ ಸಮಸ್ಯೆಗಳನ್ನು ಶೀಘ್ರವಾಗಿ ಗುರುತಿಸಿ, ನಿರ್ವಹಿಸುವ ಮೂಲಕ ಗಂಭೀರ ಮಾನಸಿಕ ತೊಂದರೆಗಳು ಉಂಟಾಗುವುದನ್ನು ತಡೆಯಲು ಪ್ರಯತ್ನಿಸುತ್ತದೆ.

ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆಯು ಸಾಮಾನ್ಯವಾಗಿ ಸಮಗ್ರ ಮಗು ಕೇಂದ್ರಿತ ವಾಗಿದ್ದು, ಮನಶಾಸ್ತ್ರೀಯ ಮತ್ತು ಔಷಧ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಮನಶಾÏಸ್ತ್ರೀಯ ಚಿಕಿತ್ಸೆಯಲ್ಲಿ ಮಗು ಮತ್ತು ಹೆತ್ತವರಿಗೆ ಆಪ್ತ ಸಮಾಲೋಚನೆ, ಮಕ್ಕಳ ಕಲಿಕೆ ಮತ್ತು ಹೊಂದಾಣಿಕೆಯನ್ನು ಪ್ರೋತ್ಸಾಹಿಸಲು ಶಾಲೆಗಳ ಜತೆಗೆ ಸಮನ್ವಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನಿರ್ದಿಷ್ಟ ಚಿಕಿತ್ಸೆಗಳು ಸೇರಿರುತ್ತವೆ. ಮಗುವಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವ ಬೇಗುದಿಯನ್ನು ದೂರಮಾಡಲು ಔಷಧಗಳನ್ನು ನೀಡಲಾಗುತ್ತದೆ. ನಿರ್ದಿಷ್ಟ ಮಗುವಿನ ಸಮಸ್ಯೆಗಳನ್ನು ಆಧರಿಸಿ ಒಂದು ಅಥವಾ ಎರಡೂ ವಿಧಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ.

ಮಕ್ಕಳು ಮತ್ತು ಹದಿಹರಯದವರಲ್ಲಿ ಮಾನಸಿಕ ಅನಾರೋಗ್ಯ ಉಂಟಾಗುವುದನ್ನು ತಡೆಗಟ್ಟುವುದು ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ವಿಭಾಗವು ಗಮನಹರಿಸುವ ಇನ್ನೊಂದು ಕ್ಷàತ್ರ. ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಪ್ರತಿಕೂಲ ಸ್ಥಿತಿ (ಉದಾಹರಣೆಗೆ, ಬಡತನ, ಅನಾಥ ಸ್ಥಿತಿ, ಪುನರ್ವಸತಿ ಕೇಂದ್ರಗಳಲ್ಲಿರುವ ಮಕ್ಕಳು, ಕಾನೂನು ಬಿಕ್ಕಟ್ಟಿಗೀಡಾದ ಮಕ್ಕಳು) ಅಥವಾ ದೀರ್ಘ‌ಕಾಲೀನ ದೈಹಿಕ ಅನಾರೋಗ್ಯಗಳಿಂದಾಗಿ (ಉದಾಹರಣೆಗೆ, ಮಧುಮೇಹ, ಕ್ಯಾನ್ಸರ್‌, ಮೂಛೆìರೋಗ) ಅನೇಕ ಮಕ್ಕಳು ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮಕ್ಕಳ ಮನೋರೋಗ ಶಾಸ್ತ್ರವು, ಮಕ್ಕಳ ಆಂತರಿಕ ಸಮಸ್ಯೆಗಳನ್ನು ಹೋಗಲಾಡಿಸಿ, ಒತ್ತಡ ನಿವಾರಿಸುವ ಸಾಮರ್ಥ್ಯವನ್ನು ವರ್ಧಿಸುವತ್ತ ಗಮನ ಹರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಕ್ಕಳು ಮತ್ತು ಹದಿಹರಯದವರ ಮನಶಾÏಸ್ತ್ರ ವಿಭಾಗದ ಸೇವೆಗಳಲ್ಲಿ ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ, ಮಾನಸಿಕ ಆರೋಗ್ಯ ಹೆಚ್ಚಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸೇವೆಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗವು ಮಕ್ಕಳ ಹೆತ್ತವರು, ಮಕ್ಕಳ ತಜ್ಞರು/ ಸಹ ಆರೋಗ್ಯ ಸೇವಾದಾರರು, ಮಕ್ಕಳು ಮತ್ತು ಹದಿಹರಯದವರಿಗೆ ಅಗತ್ಯವಾದ ವಿವಿಧ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸುವ ಮೂಲಕ ಮಕ್ಕಳು ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತದೆ. ಮಕ್ಕಳು ಮತ್ತು ಹದಿಹರಯದವರು ತಾವು ಸಂತಸದಾಯಕ, ಆರೋಗ್ಯಯುತ ಮತ್ತು ಸುರಕ್ಷಿತವಾದ ಬಾಲ್ಯವನ್ನು ಅನುಭವಿಸುವ ಹಕ್ಕನ್ನು ಪಡೆಯುವಂತೆ ಮಾಡುವುದು ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗದ ಅಂತಿಮ ಗುರಿ ಮತ್ತು ಉದ್ದೇಶವಾಗಿದೆ.

ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರ ವಿಭಾಗದಲ್ಲಿ ನಿರ್ವಹಿಸಲಾಗುವ ಸಾಮಾನ್ಯ ಸಮಸ್ಯೆಗಳು ಈ ಕೆಳಗಿನಂತಿವೆ:
– ಬೆಳವಣಿಗೆಯ ಮೈಲಿಗಲ್ಲುಗಳನ್ನು ಮುಟ್ಟಲು ವಿಳಂಬವಾಗುವುದು: ಇದರಲ್ಲಿ ಮಗು ಮಾತನಾಡದಿರುವುದು, ಸಾಮಾಜಿಕವಾಗಿ ಒಳಗೊಳ್ಳುವುದಕ್ಕೆ ಕಷ್ಟ, ವಯಸ್ಸಿಗೆ ತಕ್ಕಂತೆ ಕಲಿಯದಿರುವುದು ಅಥವಾ ಒಟ್ಟಾರೆಯಾಗಿ ಸಮಾನ ವಯಸ್ಕರಿಗಿಂತ ಮಂದಗತಿಯಲ್ಲಿ ಇರುವುದು ಸೇರಿರಬಹುದು.
– ಆಟಿಸಂ: ಕುಟುಂಬದವರ ಜತೆಗೆ ಕೂಡ ಕಡಿಮೆ ಸಂವಹನ, ಸಮಾನ ವಯಸ್ಕರ ಜತೆಗೆ ಆಟವಾಡಲು ಅಥವಾ ಸಂವಹನದಲ್ಲಿ ನಿರಾಸಕ್ತಿ ಇತ್ಯಾದಿ ಲಕ್ಷಣಗಳಿರುವ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ.
– ಅಟೆನ್ಶನ್‌ ಡಿಫಿಸಿಟ್‌ ಹೈಪರ್‌ಆ್ಯಕ್ಟಿವ್‌ ಡಿಸಾರ್ಡರ್‌ (ಎಡಿಎಚ್‌ಡಿ): ಮಗು ಸತತವಾಗಿ ಅತ್ತಿಂದಿತ್ತ ಚಲಿಸುವ ಅಥವಾ ಅತಿಯಾದ ಚಟುವಟಿಕೆಯಿಂದಿರುವ, ಯಾವುದೇ ಕೆಲಸದಲ್ಲಿ ಏಕಾಗ್ರತೆಯ ಕೊರತೆ ಹೊಂದಿರುವ ಮತ್ತು ಬಹಳ ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ.
– ವರ್ತನೆಯ ಸಮಸ್ಯೆಗಳು: ಒಪೊಸಿಶನಲ್‌ ಡೀಫಿಯಂಟ್‌ ಡಿಸಾರ್ಡರ್‌ನಲ್ಲಿ ಇರುವಂತೆ ಪದೇಪದೆ ತಾಳ್ಮೆ ಕಳೆದುಕೊಳ್ಳುವುದು, ಹಿರಿಯರ ಜತೆಗೆ ಜಗಳವಾಡುವುದು, ಅವಿಧೇಯರಾಗಿರುವುದು. ಕಾಂಡಕ್ಟ್ ಡಿಸಾರ್ಡರ್‌ನಲ್ಲಿ ಕಂಡುಬರುವಂತೆ ಮನೆ ಅಥವಾ ಶಾಲೆಯಲ್ಲಿ ಪದೇಪದೆ ಸುಳ್ಳು ಹೇಳುವುದು, ಕದಿಯುವುದು ಅಥವಾ ನಿಯಮಗಳನ್ನು ಮುರಿಯುವುದು.
– ಭಾವನಾತ್ಮಕ ಸಮಸ್ಯೆಗಳು: ದೈನಿಕ ಚಟುವಟಿಕೆಗಳಲ್ಲಿ ಅತಿಯಾದ ಆತಂಕ, ಚಿಂತೆ ಹೊಂದಿರುವ ಆ್ಯಂಕ್ಸೆಟಿ ಡಿಸಾರ್ಡರ್‌, ಆರೈಕೆದಾರರಿಗೆ ಅತಿಯಾಗಿ ಜೋತುಬೀಳುವುದು, ನಿರ್ದಿಷ್ಟ ಸನ್ನಿವೇಶ/ ವಸ್ತುವಿನ ಬಗ್ಗೆ ಅತಿಯಾದ ಭಯ. ಬಹುತೇಕ ಸಮಯ ದುಃಖದಿಂದ ಇರುವುದು, ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವುದು, ಇತರರ ಜತೆಗೆ ಸಂವಹನದಲ್ಲಿ ನಿರಾಸಕ್ತಿ, ಚಟುವಟಿಕೆಗಳಲ್ಲಿ ನಿರಾಸಕ್ತಿ ಇತ್ಯಾದಿ ಲಕ್ಷಣಗಳಿರುವ ಖನ್ನತೆ (ಡಿಪ್ರಶನ್‌).
– ಸಮಸ್ಯಾತ್ಮಕ ದೈನಿಕ ಚಟುವಟಿಕೆಗಳು: ಅತಿಯಾಗಿ ತಿನ್ನುವುದು/ ತಿನ್ನದೆ ಇರುವುದು ಮತ್ತು ಇದರಿಂದಾಗಿ ತೂಕ ಹೆಚ್ಚುವುದು ಅಥವಾ ಕಳೆದುಕೊಳ್ಳುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮತ್ತು ನಿದ್ದೆ ಬಾರದೆ ಇರುವುದು.
– ಮಾದಕ ದ್ರವ್ಯ ವ್ಯಸನ, ಆನ್‌ಲೈನ್‌ ಗೇಮಿಂಗ್‌ ಚಟ: ಇವು ಶಾಲೆಯ ಕಲಿಕಾ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲವು, ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲವು.

ಈ ಎಲ್ಲ ಸಮಸ್ಯೆಗಳು ಮಕ್ಕಳು ಮತ್ತು ಅವರ ಕುಟುಂಬಗಳಲ್ಲಿ ತೊಂದರೆಯನ್ನು ಸೃಷ್ಟಿಸಬಲ್ಲವಾಗಿದ್ದು, ಮಕ್ಕಳ ಕಲಿಕಾ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಮಗುವಿನ ಆರೋಗ್ಯಪೂರ್ಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತವೆ.

-ಮುಂದಿನ ವಾರಕ್ಕೆ

-ಡಾ| ಅಮೃತವರ್ಷಿಣಿ ಆರ್‌.
ಮಕ್ಕಳು ಮತ್ತು ಹದಿಹರಯದವರ ಮಾನಸಿಕ ರೋಗ ತಜ್ಞರು,
ಮಾನಸಿಕ ರೋಗ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.