ಬಾಲ್ಯದಲ್ಲೇ ಬೊಜ್ಜು
Team Udayavani, Aug 4, 2019, 5:00 AM IST
ಸಾಂದರ್ಭಿಕ ಚಿತ್ರ
ಕಳೆದ ಸಂಚಿಕೆಯಿಂದ- ಕೊಬ್ಬು
ಆಹಾರದ ನಾರಿನಂಶವು ಶಕ್ತಿಯ ಒಂದು ಪ್ರಮುಖ ಮೂಲವಾಗಿದೆ. ಮಾತ್ರವಲ್ಲದೆ ಅದು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ಸರಬರಾಜಿಗೆ ಸಹಾಯ ಮಾಡುತ್ತದೆ. ಅಲ್ಲದೆ ಆಲ್ಫಾ-ಲಿನೊಲೆನಿಕ್ ಆ್ಯಸಿಡ್ (ಎಎಲ್‌ಎ, ಒಮೆಗಾ -3 ಗುಂಪು) ಮತ್ತು ಲಿನೊಲೆಯಿಕ್ ಆ್ಯಸಿಡ್ (ಎಲ್‌ಎ, ಒಮೆಗಾ -6 ಗುಂಪು) ಎಂಬ ಎರಡು ಅಗತ್ಯ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುತ್ತದೆ. ನಾಲ್ಕರಿಂದ 18 ವರ್ಷ ವಯೋಮಾನದ ಮಕ್ಕಳಲ್ಲಿ ಒಟ್ಟು ಕೊಬ್ಬು ಪೂರೈಕೆಯು ಶಕ್ತಿ ಸೇವನೆಯ ಶೇ.25ರಿಂದ 35ರಷ್ಟಿರಬೇಕು.
ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್: ಸ್ಯಾಚುರೇಟೆಡ್ ಫ್ಯಾಟ್ ಸೇವನೆಯನ್ನು ಕಡಿಮೆ ಮಾಡಬೇಕು – ಕೆಂಪು ಮಾಂಸ, ಕೋಳಿಮಾಂಸ ಮತ್ತು ಪೂರ್ಣ ಕೊಬ್ಬಿನ ಹೈನು ಉತ್ಪನ್ನಗಳಂತಹ ಪ್ರಾಣಿಜನ್ಯ ಆಹಾರ ಮೂಲಗಳಿಂದ ಇವು ದೊರೆಯುತ್ತವೆ. ಹೀಗಾಗಿ ಸ್ಯಾಚುರೇಟೆಡ್ ಫ್ಯಾಟ್ ಬದಲಾಗಿ ತರಕಾರಿ ಮತ್ತು ಎಣ್ಣೆಕಾಳುಗಳ ಎಣ್ಣೆಗಳನ್ನು ಉಪಯೋಗಿಸಬಹುದು. ಇವುಗಳು ಅಗತ್ಯವಾದ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುವುದಲ್ಲದೆ ವಿಟಮಿನ್ ಇ ಕೂಡ ನೀಡುತ್ತವೆ. ಆಲಿವ್, ಬೀಜಗಳು, ಬೆಣ್ಣೆಹಣ್ಣು ಸಮುದ್ರ ಆಹಾರಗಳಲ್ಲಿ ಇರುತ್ತದೆ. ಭಾಗಶಃ ಹೈಡ್ರೊಜನೀಕೃತ ಎಣ್ಣೆಗಳ ಉಪಯೋಗವನ್ನು ವರ್ಜಿಸುವ ಮೂಲಕ ಟ್ರಾನ್ಸ್ ಫ್ಯಾಟ್ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ.
ಸೇರ್ಪಡೆ ಸಕ್ಕರೆ: ಹೆಚ್ಚುವರಿ ಸಕ್ಕರೆ ಸೇರ್ಪಡೆ ಮಾಡಿ ಸೇವಿಸುವುದನ್ನು ಕಡಿಮೆ ಮಾಡಿರಿ. ಹಣ್ಣು ಮತ್ತು ಹಾಲುಗಳಲ್ಲಿ ನೈಸರ್ಗಿಕವಾಗಿ ಇರುವ ಸಕ್ಕರೆಯಂಶದ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆ ಸೇರಿಸುವುದನ್ನು ವರ್ಜಿಸಿ. ಬ್ರೌನ್ ಶುಗರ್, ಕಾರ್ನ್ ಸ್ವೀಟನರ್, ಕಾರ್ನ್ ಸಿರಪ್, ಜೇನು ಇತ್ಯಾದಿಗಳು ಹೆಚ್ಚುವರಿ ಸಕ್ಕರೆಗಳಿಗೆ ಉದಾಹರಣೆ.
ಬಾಲ್ಯದಲ್ಲಿಯೇ ಬೊಜ್ಜು ಅಧಿಕ ದೇಹತೂಕ
ಉಂಟಾಗುವುದನ್ನು ತಡೆಯಲು ಪೋಷಕರಾಗಿ
ನಾವೇನು ಮಾಡಬಹುದು?
ನಿಮ್ಮ ಮಗು ಆರೋಗ್ಯಯುತ ದೇಹತೂಕವನ್ನು ಹೊಂದಿರುವುದಕ್ಕಾಗಿ ನಿಮ್ಮ ಮಗು ಸೇವಿಸುವ ಆಹಾರ ಮತ್ತು ಪಾನೀಯಗಳಿಂದ ಒದಗುವ ಕ್ಯಾಲೊರಿಗಳು ಹಾಗೂ ಮಗುವಿನ ದೈಹಿಕ ಚಟುವಟಿಕೆ ಮತ್ತು ಬೆಳವಣಿಗೆಯ ನಡುವೆ ಸಮತೋಲನವನ್ನು ಸಾಧಿಸಿ. ಆರೋಗ್ಯಯುತ ಆಹಾರ ಆಯ್ಕೆಗಳು ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಇಡೀ ಕುಟುಂಬಕ್ಕೆ ಆರೋಗ್ಯವನ್ನು ಒದಗಿಸುತ್ತದೆ; ಆದ್ದರಿಂದ ಈ ಕ್ರಿಯೆಯಲ್ಲಿ ಎಲ್ಲರೂ ಸೇರಿಕೊಳ್ಳಬೇಕು. ಇಡೀ ಕುಟುಂಬ ಆರೋಗ್ಯಯುತ ಜೀವನ ಮತ್ತು ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಅದರಿಂದ ಅಧಿಕ ದೇಹತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳು ಸುಲಭವಾಗಿ ಪ್ರಯೋಜನ ಪಡೆಯುತ್ತಾರೆ.
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.