ಬಾಲ್ಯದಲ್ಲೇ ಬೊಜ್ಜು
Team Udayavani, Aug 11, 2019, 5:00 AM IST
ಕಳೆದ ಸಂಚಿಕೆಯಿಂದ- ಕ್ಯಾಲೊರಿ ಸಮತೋಲನ: ಆರೋಗ್ಯಯುತ ಆಹಾರಾಭ್ಯಾಸ
ಬೆಳೆಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ ಕ್ಯಾಲೊರಿಗಳನ್ನು ಸಮತೋಲನ ಮಾಡಿಕೊಳ್ಳುವುದರ ಒಂದು ಭಾಗವೆಂದರೆ ಸರಿಯಾದ ಪ್ರಮಾಣದ ಪೌಷ್ಟಿಕಾಂಶ ಮತ್ತು ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ಒದಗಿಸುವ ಆಹಾರ ಸೇವನೆ. ಇಷ್ಟದ ಆಹಾರವಸ್ತುಗಳನ್ನು ಇನ್ನಷ್ಟು ಆರೋಗ್ಯಕರವಾಗಿಸಿಕೊಳ್ಳುವುದು ಮತ್ತು ಕ್ಯಾಲೊರಿ ಸಮೃದ್ಧವಾಗಿರುವ ನಾಲಿಗೆಗೆ ರುಚಿಕರವಾದ ಆಹಾರಗಳ ಆಮಿಷವನ್ನು ದೂರ ಮಾಡುವ ಮೂಲಕ ಆರೋಗ್ಯಕರ ಆಹಾರಾಭ್ಯಾಸಗಳನ್ನು ಬೆಳೆಸಿಕೊಳ್ಳುವುದರಲ್ಲಿ ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡಬಹುದು.
ಆರೋಗ್ಯಪೂರ್ಣ ಆಹಾರಾಭ್ಯಾಸಗಳನ್ನು ಪ್ರೋತ್ಸಾಹಿಸಿ
-ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ – ವರ್ಣರಂಜಿತವಾಗಿರುವ ವೈವಿಧ್ಯಮಯ ಹಣ್ಣು ಮತ್ತು ತರಕಾರಿಗಳನ್ನು ಮಕ್ಕಳಿಗೆ ಆಹಾರವಾಗಿ ಪ್ರತಿದಿನವೂ ಒದಗಿಸಬೇಕು. ಹಣ್ಣು ಮತ್ತು ತರಕಾರಿಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸಬೇಕು. ತರಕಾರಿಗಳನ್ನು ಸೇವಿಸಲು ಮಗು ನಿರಾಕರಿಸಿದರೆ ಅವುಗಳನ್ನು ಉಪಯೋಗಿಸುವ ವಿಧಾನಗಳನ್ನು ಸೃಜನಶೀಲವಾಗಿಸಬೇಕು. ವಿವಿಧ ಆಕಾರಗಳಲ್ಲಿ ಹಣ್ಣು ತರಕಾರಿಗಳನ್ನು ಕತ್ತರಿಸಿಕೊಟ್ಟು ಮನವೊಲಿಸಬಹುದು.
– ಆರೋಗ್ಯಯುತ ಉಪಾಹಾರಗಳನ್ನು ಕೊಡಿ – ಮಕ್ಕಳ ಆಹಾರಾಭ್ಯಾಸದಲ್ಲಿ ಉಪಾಹಾರ ಸೇವನೆ ಒಂದು ಮುಖ್ಯ ಭಾಗವಾಗಿದೆ; ಇದನ್ನು ನಿರುತ್ತೇಜನಗೊಳಿಸಬಾರದು. ಬದಲಾಗಿ, ಅವುಗಳು ಕಡಿಮೆ ಕಿಲೊಜೌಲ್ ಇದ್ದು, ಹೆಚ್ಚು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಿ. ಹಣ್ಣು ಮತ್ತು ತರಕಾರಿಗಳಿಂದ ಉತ್ಕೃಷ್ಟ ಉಪಾಹಾರಗಳನ್ನು ತಯಾರಿಸಿ ನೀಡಿ.
– ಆನಾರೋಗ್ಯಕರ ಪಾನೀಯಗಳನ್ನು ಕಡಿಮೆ ಮಾಡಿ – ಸಕ್ಕರೆ ಬೆರೆಸಿದ ಅನಾರೋಗ್ಯಕರ ಪಾನೀಯಗಳನ್ನು ಕಡಿಮೆ ಕೊಡಿ. ನೀರು ಮತ್ತು ಕಡಿಮೆ ಕೊಬ್ಬಿರುವ ಹಾಲಿನ ಬಳಕೆಯನ್ನು ಪ್ರೋತ್ಸಾಹಿಸಿ.
-ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.