ಎರಡು ವರ್ಷ ವಯಸ್ಸಿನವರೆಗೆ ಮಕ್ಕಳ ಆಹಾರ
Team Udayavani, Oct 14, 2018, 6:00 AM IST
ಹಿಂದಿನ ವಾರದಿಂದ- 1. ಕಿವುಚಿದ ಬಾಳೆಹಣ್ಣು
ಬಾಳೆಹಣ್ಣು – ಸಣ್ಣದು, ಹಾಲು/ ನೀರು: 1 ಟೇಬಲ್ ಸ್ಪೂನ್ (15-20 ಮಿ. ಲೀ.
ವಿಧಾನ:
1. ಎಲ್ಲ ಸಾಮಗ್ರಿಗಳನ್ನು ಸಿದ್ಧವಾಗಿ ಇರಿಸಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆ ತೆಗೆದು ಎರಡೂ ಕೊನೆಗಳನ್ನು ಚಾಕುವಿನಿಂದ ಸ್ವಲ್ಪ ಕತ್ತರಿಸಿಕೊಳ್ಳಿ
2. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿ ಅಗಲವಾದ ಬೋಗುಣಿಯಲ್ಲಿ ಹಾಕಿಕೊಳ್ಳಿ. ಫೋರ್ಕ್ ಅಥವಾ ಮ್ಯಾಶರ್ ಉಪಯೋಗಿಸಿ ಚೆನ್ನಾಗಿ ಕಿವುಚಿಕೊಳ್ಳಿ.
3. ಹಾಲು ಅಥವಾ ನೀರು ಸೇರಿಸಿ. ನುಣ್ಣಗಾದ ದಪ್ಪನೆಯ ಹಿಟ್ಟಿನಂತಾಗುವ ತನಕ ಚೆನ್ನಾಗಿ ಮಿಶ್ರ ಮಾಡಿ. ಇನ್ನಷ್ಟು ಚೆನ್ನಾಗಿ ಮಣ್ಣಿಯಂತಾಗಬೇಕಾದರೆ ಮಿಕ್ಸರ್ ಗೆùಂಡರ್ ಅಥವಾ ಬ್ಲೆಂಡರ್ ಉಪಯೋಗಿಸಬಹುದು.
2. ತರಕಾರಿ ಖೀಚಡಿ
ಅಕ್ಕಿ: 35 ಗ್ರಾಂ ಹೆಸರು ಬೇಳೆ: 10 ಗ್ರಾಂ ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿದ ವಿವಿಧ ತರಕಾರಿಗಳು (ಕ್ಯಾರೆಟ್, ಬಟಾಟೆ, ಕೆಲವು ಬಟಾಣಿ ಕಾಳು, ಬೀನ್ಸ್ ಇತ್ಯಾದಿ) (ನೀವು ಎಷ್ಟು ತರಕಾರಿಗಳನ್ನು ಬೇಕಾದರೂ ಸೇರಿಸಿಕೊಳ್ಳಬಹುದು).ತುಪ್ಪ: 2 ಚಹಾ ಚಮಚ, ಜೀರಿಗೆ: ಅರ್ಧ ಚಹಾ ಚಮಚ ಚಿಟಿಕೆ ಅರಶಿನ ಪುಡಿ
ವಿಧಾನ:
1. ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅರ್ಧ ತಾಸು ಕಾಲ ನೀರಿನಲ್ಲಿ ನೆನೆಸಿಡಿ.
2. ತುಪ್ಪವನ್ನು ಪ್ರಶರ್ ಕುಕ್ಕರ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಜೀರಿಗೆ ಹಾಕಿ, ಸಿಡಿಯಲಿ.
3. ಅಕ್ಕಿ ಮತ್ತು ಬೇಳೆಯನ್ನು ಹಾಕಿ ಸ್ವಲ್ಪ ಹುರಿಯಿರಿ. ಚಿಟಿಕೆ ಅರಶಿನ ಪುಡಿ ಸೇರಿಸಿ.
4. ಅಗತ್ಯವಿದ್ದಷ್ಟು ನೀರು ಸೇರಿಸಿ, ಇದನ್ನು 3-4 ವಿಸಿಲ್ ಹಾಕಿಸಿ ಎಲ್ಲವೂ ಸರಿಯಾಗಿ ಬೇಯುವಷ್ಟು ಬೇಯಿಸಿ.
5. ಹಬೆ ಆರಿದ ಅನಂತರ ಚಮಚದಿಂದ ಸ್ವಲ್ಪ ಮಿಶ್ರ ಮಾಡಿ.
ಬೆಳವಣಿಗೆಯ ನಿಗಾ ಮತ್ತು ಪ್ರವರ್ಧನೆ
ಮಗುವಿನ ತೂಕವನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಾ ಆರೋಗ್ಯ ಕಾರ್ಡ್‌ನಲ್ಲಿ ದಾಖಲಿಸಿಕೊಳ್ಳುವುದು ಮಗುವಿನ ಬೆಳವಣಿಗೆಯ ಮೇಲೆ ನಿಗಾ ಇರಿಸಿಕೊಳ್ಳಲು ಬಹಳ ಉಪಯುಕ್ತ. ಶಿಶುಗಳು ಮತ್ತು ಎಳೆಯ ಮಕ್ಕಳನ್ನು ತಾಯಿಯ ಉಪಸ್ಥಿತಿಯಲ್ಲಿ ಪ್ರತೀ ತಿಂಗಳು ಕೂಡ ತೂಕ ಪರೀಕ್ಷಿಸಬೇಕು ಹಾಗೂ ಮಗುವಿನ ಬೆಳವಣಿಗೆಯ ಪ್ರಗತಿಯನ್ನು ತಾಯಿಗೆ ವಿವರಿಸಬೇಕು.
3. ಗೋಧಿ ಪಾಯಸ
ಗೋಧಿ: 30 ಗ್ರಾಂ, ಹುರಿದ ಬಿಳಿ ಕಡಲೆ ಹಿಟ್ಟು : 15 ಗ್ರಾಂ ಹುರಿದು ಪುಡಿ ಮಾಡಿದ ನೆಲಗಡಲೆ: 5 ಗ್ರಾಂ, ಬೆಲ್ಲ: 10 ಗ್ರಾಂ
ವಿಧಾನ:ಇಡೀ ಗೋಧಿಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಕಡಲೆ ಪುಡಿ, ನೆಲಗಡಲೆ ಚೂರುಗಳು ಮತ್ತು ಬೆಲ್ಲ ಸೇರಿಸಿಕೊಳ್ಳಿ. ಬೇಕಾದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
(ಮುಂದುವರಿಯುತ್ತದೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.