ಜನ್ಮಜಾತ ಹೈಪೊಥೈರಾಯ್ಡಿಸಂ; ಮೇಲುಗೈ ಸಾಧಿಸಬಾರದ ಬಾಲ್ಯಕಾಲದ ಕಾಯಿಲೆ


Team Udayavani, Oct 30, 2022, 3:11 PM IST

4

 

  1. ಥೈರಾಯ್ಡ ಗ್ರಂಥಿ ಎಂದರೇನು? ಕುತ್ತಿಗೆಯ ಎದುರು ಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿಯಿದು. ಇದು ಥೈರಾಯ್ಡ ಹಾರ್ಮೋನ್‌ – ಟಿ3 (ಟ್ರೈಅಯೊಡೊಥೈರೊನಿನ್‌) ಮತ್ತು ಟಿ4 (ಟೆಟ್ರಾಅಯೊಡೊಥೈರೊನಿನ್‌) ಗಳನ್ನು ಸ್ರವಿಸುತ್ತದೆ. ಈ ಹಾರ್ಮೋನ್‌ಗಳು ದೇಹದ ಪ್ರತೀ ಅಂಗದ ಚಯಾಪಚಯ ಕ್ರಿಯೆಗಳಿಗೆ ಅತ್ಯಗತ್ಯವಾಗಿವೆ. ಜಾಗತಿಕವಾಗಿ ಕಂಡುಬರುವ ಹಾರ್ಮೋನ್‌ ಸಂಬಂಧಿ ಅನಾರೋಗ್ಯಗಳಲ್ಲಿ ಥೈರಾಯ್ಡ ಅನಾರೋಗ್ಯಗಳು ಬಹಳ ಸಾಮಾನ್ಯವಾಗಿವೆ.
  2. ಥೈರಾಯ್ಡ ಹಾರ್ಮೋನ್‌ಗಳ ಕಾರ್ಯಚಟುವಟಿಕೆಗಳೇನು? „ ಸಹಜ ಬೆಳವಣಿಗೆ ಮತ್ತು ಪ್ರಗತಿ (ದೈಹಿಕ ಮತ್ತು ಬೌದ್ಧಿಕ)ಗೆ ಬಹಳ ಮುಖ್ಯ „ ಕ್ಯಾಲೊರಿಗಳು ವ್ಯಯವಾಗುವ ದರವನ್ನು ನಿಯಂತ್ರಿಸುತ್ತದೆ „ ಪೌಷ್ಟಿಕಾಂಶ (ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು, ಪ್ರೊಟೀನ್‌ಗಳು)ಗಳ ಸರಿಯಾದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ „ ಹೃದಯ ಬಡಿತದ ದರ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ „ ಸಹಜ ಲೈಂಗಿಕ ಬೆಳವಣಿಗೆ, ನಿದ್ದೆ ಮತ್ತು ಆಲೋಚನಾ ಕ್ರಮಗಳನ್ನು ನಿರ್ವಹಿಸುತ್ತದೆ
  3. ಜನ್ಮಜಾತ ಹೈಪೊಥೈರಾಯ್ಡಿಸಂ ಎಂದರೆ ಏನರ್ಥ? „ ಹುಟ್ಟಿದಾರಭ್ಯ (ಜನ್ಮಜಾತ) ಶಿಶುಗಳನ್ನು ಬಾಧಿಸುವ ಥೈರಾಯ್ಡ ಗ್ರಂಥಿಯ ಕಾರ್ಯಚಟುವಟಿಕೆಗಳ ಭಾಗಶಃ ಅಥವಾ ಸಂಪೂರ್ಣ ನಷ್ಟ (ಹೈಪೊಥೈರಾಯ್ಡಿಸಂ) ವನ್ನು ಜನ್ಮಜಾತ ಹೈಪೊಥೈರಾಯಿxಸಂ ಎನ್ನಲಾಗುತ್ತದೆ. „ ಥೈರಾಯ್ಡ ಗ್ರಂಥಿ ಬೆಳವಣಿಗೆ ಹೊಂದಲು ಅಥವಾ ಸರಿಯಾಗಿ ಕಾರ್ಯಾಚರಿಸಲು ವಿಫ‌ಲವಾದಾಗ ಜನ್ಮಜಾತ ಹೈಪೊಥೈರಾಯಿxಸಂ ಉಂಟಾಗುತ್ತದೆ. „ ಜನ್ಮಜಾತ ಹೈಪೊಥೈರಾಯಿxಸಂ ಹೊಂದಿರುವ ಶಿಶುಗಳಲ್ಲಿ ಶೇ. 85ರಷ್ಟು ಶಿಶುಗಳಲ್ಲಿ ಸಾಮಾನ್ಯವಾಗಿ ಥೈರಾಯ್ಡ ಗ್ರಂಥಿ ಇರುವುದೇ ಇಲ್ಲ ಅಥವಾ ಇದ್ದರೂ ಹೈಪೊಪ್ಲಾಸ್ಟಿಕ್‌ (ಗಾತ್ರದಲ್ಲಿ ತೀರಾ ಸಣ್ಣದು) ಅಥವಾ ಎಕ್ಟೋಪಿಕ್‌ (ಸ್ಥಳಾಂತರಗೊಂಡ) ಆಗಿರುತ್ತದೆ. „ ಇನ್ನುಳಿದ ಪ್ರಕರಣಗಳಲ್ಲಿ ಥೈರಾಯ್ಡ ಗ್ರಂಥಿ ಸಹಜ ಗಾತ್ರದಲ್ಲಿರುತ್ತದೆ ಅಥವಾ ದೊಡ್ಡದಾಗಿರುತ್ತದೆ, ಆದರೆ ಥೈರಾಯ್ಡ ಹಾರ್ಮೋನ್‌ಗಳ ಉತ್ಪಾದನೆ ಕುಸಿದಿರುತ್ತದೆ ಅಥವಾ ಆಗುವುದಿಲ್ಲ.
  4. ಜನನದ ಬಳಿಕದ ಹೈಪೊಥೈರಾಯ್ಡಿಸಂನ ಲಕ್ಷಣಗಳೇನು? ಶಿಶುಗಳು ಹುಟ್ಟಿದಾಗ ಸಾಮಾನ್ಯವಾಗಿ ಯಾವುದೇ ಲಕ್ಷಣಗಳು ಇರುವುದಿಲ್ಲ, ಜನ್ಮಜಾತ ಹೈಪೊಥೈರಾಯ್ಡಿಸಂ ಹೊಂದಿರುವ ಶಿಶುಗಳಲ್ಲಿ ಇತರ ಶಿಶುಗಳಿಗೆ ಹೋಲಿಸಿದರೆ ಚಟುವಟಿಕೆ ಕಡಿಮೆ ಇರುತ್ತದೆ ಮತ್ತು ಹೆಚ್ಚು ಕಾಲ ನಿದ್ರಿಸುತ್ತವೆ. ಗುರುತಿಸಬಲ್ಲಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಹಲವು ತಿಂಗಳುಗಳೇ ಕಳೆಯಬಹುದು. ಇತರ ಲಕ್ಷಣಗಳು ಈ ಕೆಳಗಿನಂತಿವೆ: „ ಕಡಿಮೆ ಆಹಾರ ಸೇವನೆ „ ದಣಿವು „ ಮುಖ ಊದಿಕೊಂಡಂತಿರುವುದು „ ದೊರಗಾದ ಧ್ವನಿ „ ಹೊಟ್ಟೆ ಉಬ್ಬರಿಸಿಕೊಂಡಂತಿರುವುದು „ ಉದ್ದನೆಯ ನಾಲಗೆ „ ಹುಟ್ಟಿದ ಬಳಿಕ ಉಂಟಾಗುವ ಜಾಂಡಿಸ್‌ ದೀರ್ಘ‌ಕಾಲ (3 ವಾರಗಳಿಗಿಂತ ಹೆಚ್ಚು) ಇರುವುದು „ ನಿಧಾನಗತಿಯ ಬೆಳವಣಿಗೆ/ ಬೆಳವಣಿಗೆಯ ಮೈಲಿಗಲ್ಲುಗಳು ವಿಳಂಬವಾಗುವುದು „ ಬುದ್ಧಿಮತ್ತೆಗೆ ಸಂಬಂಧಿಸಿದ ವೈಕಲ್ಯಗಳು, ನಗು ಮತ್ತು ಸಂವಹನದ ಕೊರತೆ „ ಮಲಬದ್ಧತೆ
  5. ಹುಟ್ಟಿದ ಬಳಿಕ ಹೈಪೊಥೈರಾಯ್ಡಿಸಂ ಉಂಟಾಗಲು ಪ್ರಧಾನ ಕಾರಣಗಳೇನು? „ ಹುಟ್ಟಿದ ಕೂಡಲೇ ಕಾಣಿಸಿಕೊಳ್ಳುವ ಹೈಪೊಥೈರಾಯ್ಡಿಸಂ ಪ್ರಕರಣಗಳಲ್ಲಿ ಶೇ. 15ರಿಂದ ಶೇ. 20 ಪ್ರಕರಣಗಳಿಗೆ ವಂಶವಾಹಿ ಕಾರಣಗಳಿರುತ್ತವೆ (ಜನ್ಮಜಾತ ಹೈಪೊಥೈರಾಯ್ಡಿಸಂ). ಜನ್ಮಜಾತ ಹೈಪೊಥೈರಾಯ್ಡಿಸಂಗಳಲ್ಲಿ ಥೈರಾಯ್ಡ ಗ್ರಂಥಿಯ ಡಿಸ್‌ಪ್ಲಾಸಿಯಾ ಮತ್ತು ಅಪ್ಲಾಸಿಯಾ, ಎಕ್ಟೋಪಿಕ್‌ ಗ್ರಂಥಿ ಮತ್ತು ಡಿಸ್‌ ಹಾರ್ಮೋನೋಜೆನೆಸಿಸ್‌ ಕೂಡ ಒಳಗೊಳ್ಳುತ್ತದೆ. „ ಶಿಶುಗಳಲ್ಲಿ ಹೈಪೊಥೈರಾಯ್ಡಿಸಂ ಕಾಣಿಸಿಕೊಳ್ಳಲು ಇತರ ಸಾಮಾನ್ಯ ಕಾರಣ ಎಂದರೆ ತಾಯಂದಿರ ಆಹಾರದಲ್ಲಿ ಅಯೋಡಿನ್‌ ಅಂಶದ ಕೊರತೆಯಿರುವುದು. (ತಾಯಂದಿರ ಆಹಾರದಲ್ಲಿ ಅಯೋಡಿನ್‌ ಅಂಶ ಕೊರತೆಯಿಂದ/ ಗರ್ಭಾವಸ್ಥೆಯಲ್ಲಿ ಆ್ಯಂಟಿ ಥೈರಾಯ್ಡ ಆ್ಯಂಟಿಬಾಡಿಗಳು ತಾಯಿಮಾಸುವಿನ ಮೂಲಕ ನಷ್ಟವಾಗುವುದು/ ಆ್ಯಂಟಿಥೈರಾಯ್ಡ ಔಷಧಗಳ ಪ್ರಯೋಗದಿಂದ ಅಲ್ಪಕಾಲಿಕ ಹೈಪೊಥೈರಾಯಿxಸಂ ಉಂಟಾಗುತ್ತದೆ) „ ಹುಟ್ಟಿದ ಬಳಿಕದ ಹೈಪೊಥೈರಾಯ್ಡಿಸಂ (ಅಲ್ಪಕಾಲಿಕ ಮತ್ತು ಜನ್ಮಜಾತ) ಪ್ರಕರಣಗಳು ಅಂದಾಜಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿವೆ.
  6. ಥೈರಾಯ್ಡ ಕಾರ್ಯಚಟುವಟಿಕೆಯನ್ನು ಪರೀಕ್ಷಿಸುವುದು ಹೇಗೆ? „ ಕೆಲವು ರಕ್ತಪರೀಕ್ಷೆಗಳ ಸಹಾಯದಿಂದ ಥೈರಾಯ್ಡ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಕಂಡುಕೊಳ್ಳಲಾಗುತ್ತದೆ. ಇವುಗಳಲ್ಲಿ ಟಿಎಸ್‌ ಎಚ್‌, ಟಿ3, ಟಿ4, ಟಿಎಸ್‌ಎಚ್‌ ಮತ್ತು ವಿಸ್ತೃತ ಥೈರಾಯ್ಡ ಪಂಕ್ಷನ್‌ ಪ್ಯಾನೆಲ್‌ನಲ್ಲಿ ಎಫ್ಟಿ3, ಎಫ್ಟಿ4 ಮತ್ತು ಆ್ಯಂಟಿ-ಥೈರೊಪೆರಾಕ್ಸಿಡೇಸ್‌, ಥೈರೊಗ್ಲಾಬ್ಯುಲಿನ್ಸ್‌ ಮತ್ತು ಆ್ಯಂಟಿ-ಥೈರೊಗ್ಲಾಬ್ಯುಲಿನ್‌ಗಳು ಸೇರಿವೆ. „ ಆದರೆ ಹುಟ್ಟಿದ ಸಂದರ್ಭದಲ್ಲಿಯೇ ಹುಟ್ಟಿದಾರಭ್ಯದ ಹೈಪೊಥೈರಾಯ್ಡಿಸಂ ಪತ್ತೆ ಹಚ್ಚಲು ಪರಿಚಲನೆಗೊಳ್ಳುವ ಟಿಎಸ್‌ಎಚ್‌ ಸಾಕಾಗುತ್ತದೆ; ಇದನ್ನು ಚಯಾಪಚಯ ಕ್ರಿಯೆಯ ಜನ್ಮದಾರಭ್ಯ ಪ್ರಮಾದಗಳಿಗಾಗಿ ಶಿಶುಗಳಿಗೆ ನಡೆಸಲಾಗುವ ರೂಢಿಗತ ತಪಾಸಣೆಯ ಭಾಗವಾಗಿ ನಡೆಸಲಾಗುತ್ತದೆ.
  7. ಥೈರಾಯ್ಡ ಕಾರ್ಯಚಟುವಟಿಕೆಗಳ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲು ಸೂಕ್ತವಾದ ಸಮಯ ಯಾವುದು? „ ಶಿಶು ಜನನದ ಬಳಿಕ 48 ಅಥವಾ 72 ತಾಸುಗಳ ಬಳಿಕ ಜನ್ಮಜಾತ ಹೈಪೊಥೈರಾಯ್ಡಿಸಂಗಾಗಿ ಹುಟ್ಟಿದ ಬಳಿಕದ ಪರೀಕ್ಷೆಗಳನ್ನು ನಡೆಸಬೇಕು. „ ಥೈರಾಯ್ಡ ಸ್ಟಿಮ್ಯುಲೇಟಿಂಗ್‌ ಹಾರ್ಮೋನ್‌ (ಟಿಎಸ್‌ಎಚ್‌) ದೈನಂದಿನ ಬದಲಾವಣೆಗಳನ್ನು ಹೊಂದುವುದರಿಂದ ಟಿಎಸ್‌ಎಚ್‌ ಪರೀಕ್ಷೆಗೆ ಮಾದರಿಗಳನ್ನು ಬೆಳಗಿನ ಜಾವದಲ್ಲಿಯೇ ಸಂಗ್ರಹಿಸುವುದನ್ನು ಶಿಫಾರಸು ಮಾಡಲಾಗುತ್ತದೆ.
  8. ಜನ್ಮಜಾತ ಹೈಪೊಥೈರಾಯ್ಡಿಸಂಗೆ ಚಿಕಿತ್ಸೆಯೇನು? „ ಹುಟ್ಟಿದ ಬಳಿಕ ಎರಡು ವಾರಗಳ ಒಳಗೆ ಲೆವೊಥೈರೊಕ್ಸಿನ್‌ ಸೋಡಿಯಂ ಮಾತ್ರೆಗಳನ್ನು ಆರಂಭಿಸುವುದು, ಸತತ ನಿಗಾ ಇರಿಸುವುದು ಮತ್ತು ಜೀವನಪರ್ಯಂತ ಚಿಕಿತ್ಸೆ. ಜನ್ಮಜಾತ ಹೈಪೊಥೈರಾಯ್ಡಿಸಂ ಹೊಂದಿರುವ ಮಕ್ಕಳಿಗೆ ಜೀವನಪರ್ಯಂತ ಥೈರಾಯ್ಡ ಹಾರ್ಮೋನ್‌ ಪೂರಣ ಅಗತ್ಯವಾಗಿರುತ್ತದೆ.
  9. ಮಕ್ಕಳಲ್ಲಿ ಜನ್ಮಜಾತ ಹೈಪೊಥೈರಾಯ್ಡಿಸಂ ಬೇಗನೆ ಗುರುತಿಸದಿದ್ದರೆ ಅಥವಾ ಬೇಗನೆ ಚಿಕಿತ್ಸೆ ನೀಡದಿದ್ದರೆ ಏನಾಗುತ್ತದೆ?/ ಚಿಕಿತ್ಸೆಗೊಳಪಡದ ಜನ್ಮಜಾತ ಹೈಪೊಥೈರಾಯ್ಡಿಸಂನ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳೇನು? * ಶಿಶುವಿನ ಮಿದುಳು ಬೆಳವಣಿಗೆಯ ಸಹಿತ ಒಟ್ಟಾರೆ ಬೆಳವಣಿಗೆ ಮತ್ತು ಪ್ರಗತಿಗೆ ಥೈರಾಯ್ಡ ಹಾರ್ಮೋನ್‌ಗಳು ಅತ್ಯಗತ್ಯ. ಆದ್ದರಿಂದ ಜನ್ಮಜಾತ ಹೈಪೊಥೈರಾಯ್ಡಿಸಂ ಚಿಕಿತ್ಸೆಗೊಳಪಡದೆ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. „ ಚಿಕಿತ್ಸೆಗೊಳಪಡದ ಜನ್ಮಜಾತ ಹೈಪೊಥೈರಾಯ್ಡಿಸಂನಿಂದ ತೀವ್ರತರಹದ ಬೌದ್ಧಿಕ ವೈಕಲ್ಯಗಳು ಮತ್ತು ಮನೋವೈಕಲ್ಯ ಉಂಟಾಗಬಹುದು. „ ಆರೋಗ್ಯದ ಮೇಲಣ ಇತರ ಪ್ರತಿಕೂಲ ಪರಿಣಾಮಗಳಲ್ಲಿ ಬೆಳವಣಿಗೆಯ ಮೈಲಿಗಲ್ಲುಗಳು ವಿಳಂಬವಾಗುವುದು ಮತ್ತು ರಕ್ತಹೀನತೆ ಸೇರಿವೆ. „ ಜನ್ಮಜಾತ ಹೈಪೊಥೈರಾಯ್ಡಿಸಂ ಹೊಂದಿರುವ ಮಕ್ಕಳಲ್ಲಿರುವ ಈ ತೊಂದರೆಯನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ಎರಡು ವಾರಗಳ ಒಳಗೆ ಚಿಕಿತ್ಸೆಯನ್ನು ಆರಂಭಿಸಿದರೆ ಮಾತ್ರವೇ ಅಂತಹ ಮಕ್ಕಳು ಸಹಜವಾಗಿ ಬೆಳೆಯಲು ಮತ್ತು ಉತ್ತಮ ಫ‌ಲಿತಾಂಶಗಳನ್ನು ಪ್ರದರ್ಶಿಸಲು ಸಾಧ್ಯ.
  10. ಜನ್ಮಜಾತ ಹೈಪೊಥೈರಾಯ್ಡಿಸಂಗೆ ಚಿಕಿತ್ಸೆ ನೀಡಿದ ಬಳಿಕ ಏನಾಗುತ್ತದೆ? „ ಜನ್ಮಜಾತ ಹೈಪೊಥೈರಾಯ್ಡಿಸಂ ಹೊಂದಿರುವ ಶಿಶುಗಳ ತೊಂದರೆಯನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಸಹಜ ಬೆಳವಣಿಗೆ ಮತ್ತು ಪ್ರಗತಿ ಕಂಡುಬರುತ್ತದೆ. ಸೆಪ್ಟಂಬರ್‌ ತಿಂಗಳು ನವಜಾತ ಶಿಶುಗಳ ತಪಾಸಣೆಯ ಅರಿವು ಮಾಸ ಆಗಿದ್ದು, ನವಜಾತ ಶಿಶುಗಳ ಏಕರೂಪಿ ತಪಾಸಣೆಯು ಸಾಕಾರಗೊಳ್ಳಲು ವೈದ್ಯಕೀಯ, ಪ್ರಯೋಗಾಲಯ ಮತ್ತು ಚಿಕಿತ್ಸಾತ್ಮಕ ಬೆಂಬಲವನ್ನು ಒದಗಿಸುವ ವಿಶ್ವಾಸವನ್ನು ನಾವು ಹೊಂದಿದ್ದೇವೆ.                      ಡಾ| ಲೆಸ್ಲಿ ಎಡ್ವರ್ಡ್‌ ಲೂಯಿಸ್‌ ಪ್ರೊಫೆಸರ್‌ ಮತ್ತು ಹೆಡ್‌; ಕೊಆರ್ಡಿನೇಟರ್‌, ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಇನ್‌ಬಾರ್ನ್ ಎರರ್ ಆಫ್ ಮೆಟಬಾಲಿಸಂ ಪೀಡಿಯಾಟ್ರಿಕ್ಸ್‌ ವಿಭಾಗ ಡಾ| ರೇವತಿ ಪಿ. ಶೆಣೈ ಅಸೋಸಿಯೇಟ್‌ ಪ್ರೊಫೆಸರ್‌, ಬಯೋಕೆಮೆಸ್ಟ್ರಿ ವಿಭಾಗ ಕೆ.ಎಂ.ಸಿ., ಮಾಹೆ, ಮಣಿಪಾಲ

    (ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.