ಕೋವಿಡ್‌-19 ಮತ್ತು ಹೃದಯ ಆರೈಕೆ

ಪ್ರತೀ ರೋಗಿಯು ತಿಳಿದುಕೊಳ್ಳ ಬೇಕಾದ ವಿಷಯಗಳು

Team Udayavani, Oct 18, 2020, 1:24 PM IST

arogyavani-tdy-2

ಸಾಂದರ್ಭಿಕ ಚಿತ್ರ

ಈ ವರ್ಷದ ಜನವರಿಯಿಂದ, ಇಡೀ ಪ್ರಪಂಚ ಸಾಗುತ್ತಿದ್ದ ದಾರಿಯನ್ನೆ ಬದಲಿಸಿದ ವೈರಸ್‌! ಕಳೆದ ಕೆಲವು ತಿಂಗಳುಗಳಿಂದ ನಾವು ಕೋವಿಡ್‌-19 ವೈರಸ್‌ ಬಗ್ಗೆ ಹೆಚ್ಚು ಹೆಚ್ಚು ಕಲಿಯುತ್ತಿದ್ದು, ನಾವು ನಮ್ಮ ಮುಂದಿನ ಜೀವನವನ್ನು ಮುಂದುವರಿಸಲು ಮತ್ತು ನಿಭಾಯಿಸಲು ಹೊಸದಾದ ಸರಳ ಮಾರ್ಗಗಳನ್ನು ಹುಡುಕುತ್ತಿದ್ದೇವೆ.  ಈ ಲೇಖನದಲ್ಲಿ ನಾವು ಕೋವಿಡ್‌-19 ಮತ್ತು ಹೃದಯದ ಬಗ್ಗೆ ಕೆಲವು ಸಂಗತಿಗಳನ್ನು ವಿವರಿಸಿದ್ದೇವೆ ಮತ್ತು ಈ ಸಾಂಕ್ರಾಮಿಕ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯವನ್ನು ನೋಡಿಕೊಳ್ಳುವ ಮಾರ್ಗಗಳನ್ನು ಕೂಡ ಸೂಚಿಸಿದ್ದೇವೆ.

ಹೃದಯ ರೋಗಿಗಳು ಏಕೆ  ಹೆಚ್ಚಿನ ಅಪಾಯದಲ್ಲಿದ್ದಾರೆ? :  ಕೆಲವು ಸಂದರ್ಭಗಳಲ್ಲಿ ಕೋವಿಡ್‌-19 ವೈರಸ್‌ ನೇರವಾಗಿ ಹೃದಯವನ್ನು ಹಾನಿಗೊಳಿಸುತ್ತದೆ. ಆದರೆ ಹೆಚ್ಚಾಗಿ ಆಮ್ಲಜನಕದ ಅಭಾವವು ಶ್ವಾಸಕೋಶದ ಸೋಂಕಿನ ಮೇಲೆ ಪರಿಣಾಮ ಬೀರಿ ಮತ್ತು ಇದರೊಂದಿಗೆ ಜತೆಗೂಡಿದ ವ್ಯವಸ್ಥಿತ ಉರಿಯೂತವು ಈ ಮೊದಲೇ ಅಸ್ತಿತ್ವದಲ್ಲಿರುವ ಹೃದಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಸೋಂಕಿಗೆ ಒಳಗಾಗುವ ಅಪಾಯವು ಬೇರೆಯವರಂತೆಯೇ ನಮಗೂ ಇದೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ಎಲ್ಲ ಹೃದಯ ಕಾಯಿಲೆಗಳು ಒಂದೇ ರೀತಿಯ ಅಪಾಯವನ್ನುಂಟು ಮಾಡುವುದಿಲ್ಲ. ಮುಖ್ಯವಾಗಿ – ಹೃದಯ ವೈಫ‌ಲ್ಯ, ಪರಿಧಮನಿಯ (ಕರೋನರಿ ಆರ್ಟರಿ)ಕಾಯಿಲೆ, ಹೈಪರ್‌ಟ್ರೋಫಿಕ್‌ ಕಾರ್ಡಿಯೋಮಿಯೋಪತಿ- ಹೀಗೆ ಕೆಲವು ಆನುವಂಶಿಕ ಕಾಯಿಲೆಗಳು ಉಳ್ಳವರು ಹೆಚ್ಚು ಜಾಗರೂಕರಾಗಿರಬೇಕು. ಅಧ್ಯಯನಗಳ ಪ್ರಕಾರ ಅಧಿಕ ರಕ್ತದೊತ್ತಡ ಕೂಡ ಹದಗೆಡುವ ಅಪಾಯ ಸ್ವಲ್ಪ ಇದೆ.

ವೈರಸ್‌ ವಿರುದ್ಧ ನಿಮ್ಮನ್ನು ನೀವು  ರಕ್ಷಿಸಿಕೊಳ್ಳುವುದು ಹೇಗೆ? :  ಪ್ರಬಲವಾದ ಲಸಿಕೆ ಸುಲಭವಾಗಿ ಲಭ್ಯವಾಗುವವರೆಗೆ, ವೈರಸ್‌ ವಿರುದ್ಧ ನಮ್ಮ ಅತ್ಯುತ್ತಮ ರಕ್ಷಣೆಗಳು ಯಾವುವೆಂದರೆ – ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಆಗಾಗ ಶುಚಿಗೊಳಿಸುತ್ತಿರುವುದು ಮತ್ತು ಮಾಸ್ಕ್ಗಳನ್ನು ಧರಿಸುವುದು. ಸಾರ್ವಜನಿಕ ಸಾರಿಗೆ, ಅಂಗಡಿಗಳು ಮತ್ತು ಇತರ ಜನದಟ್ಟಣೆಯ ವಾತಾವರಣವಿರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಫ್ಯಾಬ್ರಿಕ್‌ (ವೈದ್ಯಕೀಯೇತರ) ಮಾಸ್ಕ್ಗಳ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರೋತ್ಸಾಹಿಸುತ್ತದೆ. ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮತ್ತು ಹೃದಯ ಕಾಯಿಲೆಗಳು ಅಥವಾ ಇತರ ರೀತಿಯ ಕಾಯಿಲೆ ಇರುವವರು ವೈದ್ಯಕೀಯ ಮಾಸ್ಕ್ಗಳನ್ನು ಬಳಸಲು ಡಬ್ಲ್ಯುಎಚ್‌ಒ ಶಿಫಾರಸು ಮಾಡುತ್ತದೆ.

ಒಂದು ವೇಳೆ ನೀವು ಸೋಂಕಿಗೆ ಒಳಗಾಗಿದ್ದರೆ! :  ಈ ಸೋಂಕು ಹೃದಯ ರೋಗಿಗಳಲ್ಲಿ ಉಲ್ಬಣಗೊಳ್ಳುವ ಅಪಾಯ ಹೆಚ್ಚಿರುವುದರಿಂದ ಗಂಟಲಲ್ಲಿ ನೋವು ಅಥವಾ ಜ್ವರದ ಲಕ್ಷಣಗಳು ಕಂಡುಬಂದರೆ ತತ್‌ಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇದರ ಜತೆಗೆ ದೇಹದಲ್ಲಿ ನೋವು, ದಣಿವು, ಅತಿಸಾರವು ಕೂಡ ಕೋವಿಡ್‌-19ರ ಲಕ್ಷಣಗಳಾಗಿದ್ದು, ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಿ. ಅನೇಕ ರೋಗಿಗಳಲ್ಲಿ ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರೂ ಇದರ ಬಗ್ಗೆ ದೂರು ನೀಡುವುದಿಲ್ಲ. ಈ ರೀತಿಯ ಲಕ್ಷಣವನ್ನು ನಾವು “ಹ್ಯಾಪಿ ಹೈಪೋಕ್ಸಿಯಾ’ ಎನ್ನುತ್ತೇವೆ. ಇದನ್ನು ಕೂಡ ಗುರುತಿಸುವುದು ಬಹಳ ಮುಖ್ಯ. ಆದ್ದರಿಂದ ಸೋಂಕುಪೀಡಿತ ರೋಗಿಯು ನಾಡಿ-ಆಕ್ಸಿಮೀಟರ್‌ನೊಂದಿಗೆ ಶುದ್ಧತ್ವವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮೊದಲೇ ತನ್ನ ವೈದ್ಯರೊಂದಿಗೆ ಸಂಪರ್ಕ ಸಾಧಿಸುವುದು ಬಹಳ ಮುಖ್ಯ. ನಿಮ್ಮ ವೈದ್ಯರನ್ನು ಮೊದಲೇ ಭೇಟಿ ಮಾಡಲು ಕಾರಣ ನಿಮ್ಮ ಹೃದಯ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿಸುವುದಾಗಿದೆ. ಹದಗೆಡುತ್ತಿರುವುದರ ಆರಂಭಿಕ ಗುರುತಿಸುವಿಕೆ ಮತ್ತು ಆರಂಭಿಕ ಹಸ್ತಕ್ಷೇಪವು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ. ಮುಖ್ಯವಾಗಿ ನಿರಾಕರಣೆ ಮತ್ತು ವಿಳಂಬ ಹೃದಯ ರೋಗಿಗಳು ಮಾಡುವ ಎರಡು ದುಬಾರಿ ತಪ್ಪುಗಳು.

ಸಾಂಕ್ರಾಮಿಕ ಸಮಯದಲ್ಲಿ ಹೃದಯ  ಕಾಯಿಲೆಯನ್ನು ತಡೆಗಟ್ಟುವುದು :  ಈ 2020 ವರ್ಷವು ಆತ್ಮಾವಲೋಕನ ವರ್ಷವಾಗಿದೆ. ವೈರಸ್‌ ಮತ್ತು ಲಾಕ್‌ಡೌನ್‌ ಇವೆರಡೂ ನಮ್ಮ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಗಮನಹರಿಸಲೇಬೇಕಾದ ಸ್ಥಿತಿಯನ್ನು ತಂದೊಡಿವೆ. ಭವಿಷ್ಯದಲ್ಲಿ ಬರುವ ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ತಗ್ಗಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿಸಿಕೊಳ್ಳಲು ಜನರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಇದು ಬಹಳ ಮುಖ್ಯ.

ಆರೋಗ್ಯಕರವಾಗಿ ಆಹಾರ ಸೇವಿಸಿ ವಿಟಮಿನ್‌ಗಳನ್ನು ತಿನ್ನುವುದಕ್ಕಿಂತ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಆಹಾರ ಪದ್ಧತಿ ರೋಗಿಗಳಲ್ಲಿ ರಕ್ತದೊತ್ತಡ, ಸಕ್ಕರೆ ಮತ್ತು ಲಿಪಿಡ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಕ್ರಿಯವಾಗಿರಿ ವಾರದಲ್ಲಿ ಕನಿಷ್ಠ ಪಕ್ಷ 150 ನಿಮಿಷಗಳ ವ್ಯಾಯಾಮವನ್ನು ಶಿಫಾರಸು ಮಾಡಲಾಗುತ್ತದೆ. ಹೆಚ್ಚು ನಡೆಯುವುದು, ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಹಗ್ಗದಲ್ಲಿ ಸ್ಕಿಪಿಂಗ್‌ ಆಡುವುದು -ಹೀಗೆ ಮನೆಯಲ್ಲೆ ಸಕ್ರಿಯವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಸಾಕಷ್ಟು ನಿದ್ರೆ ಮಾಡಬೇಕು. ಧೂಮಪಾನವನ್ನು ಬಿಡುವುದು ಮತ್ತು ಕೊನೆಯದಾಗಿ ಧನಾತ್ಮಕವಾಗಿರಿ. ಕಳೆದ ಕೆಲವು ತಿಂಗಳುಗಳಿಂದ ನಮ್ಮನ್ನು ಭಯಭೀತರನ್ನಾಗಿ ಮಾಡಿರುವ ಕೋವಿಡ್‌-19 ಸೋಂಕುಪೀಡಿತರ ಪೈಕಿ ಶೇ.98ಕ್ಕಿಂತ ಹೆಚ್ಚು ಜನರು ಬದುಕುಳಿದಿದ್ದು, ಗುಣಮುಖರಾಗಿದ್ದಾರೆ ಎಂದು ಮರೆಯಬೇಡಿ! ಆದ್ದರಿಂದ ಸಕಾರಾತ್ಮಕವಾಗಿರಿ.

 

ಡಾ| ಮನೀಶ್‌ ರೈ,

 ಕಾರ್ಡಿಕ್‌ ಎಲೆಕ್ಟ್ರೋಫಿಸಿಯಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.