ಕೋವಿಡ್-19 ನಿಯಂತ್ರಣ : ಲಸಿಕೆ ಮತ್ತು ಸಾಮಾಜಿಕ ಜವಾಬ್ದಾರಿ
Team Udayavani, Jan 10, 2021, 6:30 AM IST
ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಸರಕಾರವು ಎಲ್ಲ ರೀತಿಯ ಚಟುವಟಿಕೆ ನಡೆಸಲು ಕೆಲವು ನಿಯಮಗಳನ್ನು ರೂಪಿಸಿ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ವಿಶ್ವದ ಹಲವಾರು ದೇಶಗಳಲ್ಲಿ ಕೋವಿಡ್-19ರ ಎರಡನೇ ಅಲೆ ಪ್ರಾರಂಭವಾಗಿದೆ. ಇಂಗ್ಲೆಂಡ್‌ನಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡು ಹೊಸ ಸಮಸ್ಯೆ ಸೃಷ್ಟಿಸಿದ್ದು, ಭಾರತದಲ್ಲಿಯೂ ಕೋವಿಡ್-19 ಎರಡನೇ ಅಲೆ ಹಾಗೂ ರೂಪಾಂತರಗೊಂಡಿರುವ ಕೊರೊನಾ ವೈರಸ್‌ನ ಭೀತಿ ಇದೆ. ಹೀಗಾಗಿ ಸಾರ್ವಜನಿಕರು ಇನ್ನೂ ಹೆಚ್ಚಿನ ಮುಂಜಾಗ್ರತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ.
ಇದರೊಂದಿಗೆ ಕೋವಿಡ್ ವೈರಸ್ ವಿರುದ್ಧ ಹೋರಾಡಲು ಭಾರತದಲ್ಲಿಯೇ ತಯಾರಾದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು, ಕೋವಿಡ್ ಸೇನಾನಿಗಳು ಲಸಿಕೆ ಪಡೆಯಲಿದ್ದು, ಬಳಿಕ 50 ವರ್ಷ ಮೇಲ್ಪಟ್ಟವರು, 50 ವರ್ಷಕ್ಕಿಂತ ಕೆಳಗಿನ ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲಿದ್ದಾರೆ.
ಲಸಿಕೆಯ ಕುರಿತ ಸಂಶಯಗಳಿಗೆ ಉತ್ತರ: (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳು :
ಲಸಿಕೆ ಹೇಗೆ ನೀಡಲಾಗುತ್ತದೆ? :
ಎರಡು ಡೋಸ್‌ಗಳನ್ನು ಪ್ರತಿಯೊಬ್ಬರಿಗೆ ನೀಡಲಾಗುತ್ತದೆ. ಇವುಗಳ ನಡುವೆ 28 ದಿನಗಳ ಅಂತರ ಕಾಯ್ದುಕೊಳ್ಳಲಾಗುತ್ತದೆ.
ನಿರೋಧಕ ಶಕ್ತಿ ವೃದ್ಧಿಯಾಗುವುದು ಯಾವಾಗ? :
ಲಸಿಕೆಯ 2ನೇ ಡೋಸ್ ಪಡೆದ 2 ವಾರಗಳ ಅನಂತರ ದೇಹದಲ್ಲಿ ಕೋವಿಡ್ ನಿರೋಧಕ ಶಕ್ತಿ ವೃದ್ಧಿಗೊಳ್ಳಲು ಆರಂಭವಾಗುತ್ತದೆ.
ಲಸಿಕೆ ಪಡೆಯುವುದು ಕಡ್ಡಾಯವೇ? :
ಇಲ್ಲ. ಅದು ಜನರ ಇಚ್ಛೆ. ಸದ್ಯ ಕೋವಿಡ್ ಆತಂಕ ದೇಶದೆಲ್ಲೆಡೆ ಇರುವ ಕಾರಣ ನಮ್ಮನ್ನು ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಒಳ್ಳೆಯದು.
ಲಸಿಕೆ ಪಡೆಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು? :
ಎಲ್ಲ ರೀತಿಯ ಲಸಿಕೆಗಳಿಂದಲೂ ದೇಹದಲ್ಲಿ ಕೆಲವು ಸಣ್ಣ ಮಟ್ಟದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಅದೇ ರೀತಿ ಈ ಲಸಿಕೆ ಪಡೆದವರಲ್ಲಿ ಸಣ್ಣ ಪ್ರಮಾಣದ ಜ್ವರ, ಮೈ-ಕೈ ನೋವು, ಲಸಿಕೆ ಪಡೆದ ಜಾಗದಲ್ಲಿ ಬಾವು, ನೋವು ಇರುವ ಸಾಧ್ಯತೆ ಇದೆ. ಲಸಿಕೆ ಪಡೆದ ಬಳಿಕ ಕೇಂದ್ರದಲ್ಲಿಯೇ ಅರ್ಧ ಗಂಟೆ ವಿಶ್ರಾಂತಿ ಪಡೆದು ಅನಾನುಕೂಲತೆಗಳನ್ನು ಗಮನಿಸಿ ಮನೆಗೆ ತೆರಳಿದರೆ ಉತ್ತಮ.
ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡದೆ ಒಬ್ಬ ವ್ಯಕ್ತಿಯು ಕೋವಿಡ್-19 ಲಸಿಕೆ ಪಡೆಯಬಹುದೇ? ಲಸಿಕೆ ಪಡೆಯಲು ಅರ್ಹ ಎಂದು ತಿಳಿಯುವುದು ಹೇಗೆ? :
ಲಸಿಕೆ ಪಡೆಯಲು ನೋಂದಣಿ ಕಡ್ಡಾಯ. ಪ್ರಾಥಮಿಕ ಹಂತದಲ್ಲಿ ಲಸಿಕೆ ಆದ್ಯತೆ ಮೇರೆಗೆ ಹಂಚಿಕೆಯಾಗಲಿದೆ. ಸರಕಾರ ಸೂಚಿಸಿದ ದಾಖಲೆಗಳನ್ನು ನೀಡಿದ ಫಲಾನುಭವಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಪಡೆಯುವ ದಿನಾಂಕ, ಸ್ಥಳದ ಕುರಿತು ಸಂದೇಶ ರವಾನೆ ಯಾಗಲಿದೆ. ನೀವು ಲಸಿಕೆ ಪಡೆಯಲು ಅರ್ಹರಾಗಿದ್ದಲ್ಲಿ ಸರಕಾರಿ ಲಸಿಕೆ ವಿತರಣ ನಿಗಾ ತಂಡ ನಿಮ್ಮನ್ನು ಸಂಪರ್ಕಿಸಲಿದೆ. ಇದಕ್ಕಾಗಿ ಕೋ-ವಿನ್ ಆನ್‌ಲೈನ್‌ವೇದಿಕೆ ಸಿದ್ಧಗೊಂಡಿದೆ.
ಕೋವಿಡ್ ಸೋಂಕಿನಿಂದ ಗುಣಮುಖರಾದವರು ಕೂಡ ಲಸಿಕೆ ಪಡೆಯಬಹುದೆ? :
ಪಡೆಯಬಹುದು. ಉತ್ತಮ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಲಸಿಕೆ ಪಡೆಯುವುದು ಒಳ್ಳೆಯದು.
ಲಸಿಕೆ ನೀಡಲು ನಿರ್ದಿಷ್ಟ ದಿನವಿದೆಯಾ? :
ಲಸಿಕೆ ನೀಡುವ ಕಾರ್ಯಕ್ರಮದ ದಿನಾಂಕವನ್ನು ಆಯಾ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳೇ ನಿರ್ಧರಿಸಲಿವೆ. ಒಂದು ಅವಧಿಯಲ್ಲಿ 100 ಫಲಾನುಭವಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ಲಸಿಕೆಯನ್ನು ಕಡಿಮೆ ಸಮಯದಲ್ಲಿ ಪರೀಕ್ಷಿಸಿ ಪರಿಚಯಿ ಸಲಾಗುತ್ತಿರುವುದರಿಂದ ಅದು ಸುರಕ್ಷಿತವಾಗಿದೆಯೇ? :
ಲಸಿಕೆಯ ಸುರಕ್ಷೆ ಮತ್ತು ಪರಿಣಾಮಕತ್ವವನ್ನು ವಿವಿಧ ಹಂತದ ಪ್ರಯೋಗದ ಮೂಲಕ ಖಚಿತಪಡಿಸಿಕೊಂಡ ಬಳಿಕವಷ್ಟೆ ದೇಶದಲ್ಲಿ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗುತ್ತದೆ.
ಲಸಿಕೆ ಪಡೆದ ಫಲಾನುಭವಿಗಳು ತಮ್ಮ ವ್ಯಾಕ್ಸಿನೇಶನ್ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬಹುದೆ? :
ಹೌದು. ಫಲಾನುಭವಿಯು ಕೋವಿಡ್- 19 ಲಸಿಕೆಯ ಸರಿಯಾದ ಪ್ರಮಾಣವನ್ನು ಪಡೆದ ಬಳಿಕ ನೊಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುವುದು. ಬಳಿಕ ಲಸಿಕೆಯ ಎಲ್ಲ ಪ್ರಮಾಣವನ್ನು ನೀಡಿದ ಅನಂತರ, ಕ್ಯುಆರ್ ಕೋಡ್ ಆಧಾರಿತ ಪ್ರಮಾಣಪತ್ರವನ್ನು ಸಹ ಕಳುಹಿಸಲಾಗುತ್ತದೆ.
ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ಒಬ್ಬರು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ಕೋವಿಡ್ 19 ಲಸಿಕೆ ತೆಗೆದುಕೊಳ್ಳಬಹುದೇ? :
ಹೌದು. ಅವರನ್ನು ಹೆಚ್ಚು ಅಪಾಯ ಹೊಂದಿದವರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅವರು ಲಸಿಕೆ ಪಡೆದುಕೊಳ್ಳಬೇಕು
ಲಸಿಕೆ ಪಡೆದರೂ ಸಹ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ.
ಸಾಮಾಜಿಕ ಅಂತರ ಪಾಲನೆ :
ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಸರ್ಕಾರವು ಒಂದಷ್ಟು ಸುರಕ್ಷ ನಿಯಮಗಳನ್ನು ರೂಪಿಸಿ ಸಾರ್ವಜನಿಕ ಸ್ಥಳಗಳಾದ ಪ್ರಾರ್ಥನಾ ಮಂದಿರ, ಚಿತ್ರಮಂದಿರ, ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮಾಲ್, ಫಿಟ್‌ನೆಸ್ ಸೆಂಟರ್, ರೆಸ್ಟೋರೆಂಟ್, ಶಾಲಾ-ಕಾಲೇಜು, ಕಛೇರಿಗಳನ್ನು ತೆರೆಯಲು ಅನುಮತಿ ನೀಡಿದೆ.
ಇಂತಹ ಸ್ಥಳ ಹಾಗೂ ಸಭೆ-ಸಮಾರಂಭಗಳಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಹೆಚ್ಚು ಸೇರುತ್ತಿದ್ದಾರೆ.
ಹೆಚ್ಚು ಜನ ಸೇರುವ ಇಂತಹ ಸ್ಥಳಗಳಲ್ಲಿ ಕನಿಷ್ಟ 1 ಮೀಟರ್ ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್ ಬಳಕೆ ಕಡ್ಡಾಯ.
ಈಗ ರಾಜ್ಯ ಸರಕಾರವು ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಶಾಲೆಗೆ ಹೋಗುವ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮಾಸ್ಕ್ನ ಬಳಕೆ, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಇವುಗಳ ಬಗ್ಗೆ ತಿಳಿ ಹೇಳುವುದು ಅವಶ್ಯಕ.
ಸಾರ್ವಜನಿಕರ ಜವಾಬ್ದಾರಿ :
ಮಾಸ್ಕ್ ಬಳಕೆ :
ಸಾರ್ವಜನಿಕರ ಜವಾಬ್ದಾರಿ
ಮಾಸ್ಕ್ ಬಳಕೆ :
- ಈಗಾಗಲೇ ಕೇಂದ್ರ ಸರಕಾರವು ಕೋವಿಡ್-19 ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಮಾಸ್ಕ್ ಬಳಕೆ ಕಡ್ಡಾಯ ಮಾಡಿದೆ.
- ಕೋವಿಡ್-19 ರೋಗ ಹರಡದಂತೆ ಸರಕಾರವು ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದ್ದು, ಮಾಸ್ಕ್ನ ಬಳಕೆ ಅಗತ್ಯವಾಗಿದೆ.
- ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಜನರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಕೋವಿಡ್-19ರ ಎರಡನೇ ಅಲೆ ಹಾಗೂ ರೂಪಾಂತರಗೊಂಡಿರುವ ಕೋವಿಡ್ ವೈರಸ್‌ನ ಭೀತಿ ಇರುವ ಕಾರಣ ತಪ್ಪದೇ ಪ್ರತೀಯೊಬ್ಬರು ಮಾಸ್ಕ್ ಧರಿಸಬೇಕಾಗಿದೆ.
- ಮಾಸ್ಕ್ ಧರಿಸುವಾಗ ನಿಮ್ಮ ಮೂಗು ಹಾಗೂ ಬಾಯಿ ಸರಿಯಾಗಿ ಮುಚ್ಚಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
- ಯಾರೊಂದಿಗಾದರೂ ಮಾತನಾಡುವಾಗ ಧರಿಸಿರುವ ಮಾಸ್ಕನ್ನು ಗಲ್ಲಕ್ಕೆ ಜಾರಿಸಿ ಮಾತನಾಡಬೇಡಿ.
- ಮಾಸ್ಕ್ ಸ್ಪರ್ಶಿಸಿದ ಕೈಯಲ್ಲೇ ನಿಮ್ಮ ಕಣ್ಣು, ಕಿವಿ, ಮೂಗನ್ನು ಸ್ಪರ್ಶಿಸಿದಲ್ಲಿ ಮಾಸ್ಕ್ನ ಮೇಲ್ಭಾಗದಲ್ಲಿರುವ ವೈರಾಣುಗಳು ಈ ಅಂಗಗಳ ಮೂಲಕ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. ಆದ್ದರಿಂದ ಮಾಸ್ಕ್ ಸ್ಪರ್ಶಿಸಿದ ಕೈಯಲ್ಲಿ ಕಣ್ಣು, ಕಿವಿ, ಮೂಗನ್ನು ಸ್ಪರ್ಶಿಸಬಾರದು.
- ಮಾಸ್ಕ್ ತೆಗೆಯುವ ಮೊದಲು ಮತ್ತು ತೆಗೆದ ಅನಂತರ ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯಿರಿ.
- ಸರ್ಜಿಕಲ್ ಮತ್ತು ಎನ್95 ಮಾಸ್ಕ್ಗಳನ್ನು ಬಳಸಿದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ.
- ಬಳಸಿದ ಮಾಸ್ಕ್ಗಳನ್ನು ಲಿಫ್ಟ್ ಗಳು, ಉದ್ಯಾನವನಗಳು, ಕೆಲಸದ ಸ್ಥಳಗಳು, ಮನೆಗಳು, ತೆರೆದ ಧೂಳಿನ ತೊಟ್ಟಿಗಳಲ್ಲಿ ಎಸೆಯಬೇಡಿ.
- ಸಾಧ್ಯವಾದಷ್ಟು ಮರುಬಳಕೆ ಮಾಡಬಹುದಾದಂತಹ ಬಟ್ಟೆಯ ಮಾಸ್ಕ್ಗಳನ್ನೇ ಬಳಸಿ.
- ಮಾಸ್ಕ್ ಧರಿಸಿಕೊಂಡು ಹೊರಗೆ ಹೋಗಿ ಮನೆಗೆ ಬಂದ ಬಳಿಕ ಬಟ್ಟೆಯ ಮಾಸ್ಕ್ ಆದಲ್ಲಿ ಬಿಸಿ ನೀರು ಹಾಗೂ ಸೋಪಿನಿಂದ ತೊಳೆಯಿರಿ. ಒಂದು ಬಾರಿ ಬಳಸಿ ಬಿಸಾಡುವ ಮಾಸ್ಕ್ ಆದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ.
ನಿಮಗೆ ಅನಾರೋಗ್ಯ ಅನಿಸಿದರೆ ಏನು ಮಾಡಬೇಕು? :
- ಕೋವಿಡ್-19 ರೋಗಲಕ್ಷಣಗಳಾದ ಜ್ವರ, ಕೆಮ್ಮು, ದಣಿವು, ರುಚಿ ಅಥವಾ ವಾಸನೆ ಇಲ್ಲದಿರುವುದು, ತಲೆನೋವು, ಗಂಟಲು ನೋವಿನಂತಹ ಲಕ್ಷಣಗಳಿದ್ದರೆ ಮನೆಯ ಇತರ ಸದಸ್ಯರ ಸಂಪರ್ಕಕ್ಕೆ ಬಾರದೇ ಸ್ವಯಂ-ಪ್ರತ್ಯೇಕವಾಗಿರಿ, ಹಾಗೂ ಸಂಬಂಧಪಟ್ಟ ವೈದ್ಯರಿಗೆ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳಿ.
- 60 ವರ್ಷ ಮೇಲ್ಪಟ್ಟವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು (ಅಧಿಕ ರಕ್ತದ ಒತ್ತಡ, ಹೃದಯದ ಕಾಯಿಲೆ, ಮೂತ್ರಪಿಂಡ ಖಾಯಿಲೆ, ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್ ಅಥವಾ ಮಧುಮೇಹದಂತಹ) ಹಾಗೂ ಗರ್ಭಿಣಿಯರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು ಉತ್ತಮ.
- ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಅಪಾಯ ತಪ್ಪಿದ್ದಲ್ಲ. ಒಮ್ಮೆ ಕೋವಿಡ್ ಭಾಧಿಸಿ ಗುಣಮುಖರಾದರು ಮತ್ತೆ ಈ ವೈರಸ್‌ಗೆ ತುತ್ತಾಗುವ ಸಂಭವ ಇರಬಹುದು.
- ಲಸಿಕೆ ಬರುವವರೆಗೂ ಕಾಯಿಲೆ ಹರಡದಂತೆ ತಡೆಗಟ್ಟಲು ಆರೋಗ್ಯ ಸುರಕ್ಷಾ ನಿಯಮಗಳನ್ನು ಪಾಲಿಸುವುದು ಅವಶ್ಯ. ಇಲ್ಲವಾದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಈ ಕಾಯಲೆಯ 2ನೇ ಅಲೆ ಪ್ರಾರಂಭವಾಗಿ ಹೊಸ ಭೀತಿ ಸೃಷ್ಟಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೂ ಈ ಭೀತಿ ಪ್ರಾರಂಭವಾಗುವುದರಲ್ಲಿ ಸಂಶಯವಿಲ್ಲ.
ನೈರ್ಮಲ್ಯ ಪಾಲನೆ :
- ನಿಯಮಿತವಾಗಿ ಮತ್ತು ಸಂಪೂರ್ಣವಾಗಿ ನಿಮ್ಮ ಕೈಗಳನ್ನು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಅಥವಾ ಸೋಪ್ ಮತ್ತು ನೀರಿನಿಂದ ತೊಳೆಯಿರಿ.
- ಇದು ನಿಮ್ಮ ಕೈಯಲ್ಲಿರಬಹುದಾದ ವೈರಸ್‌ಗಳು ಸೇರಿದಂತೆ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ.
- ಕೆಮ್ಮು ಅಥವಾ ಸೀನುವ ವೇಳೆ, ಮುಖ/ಮೂಗನ್ನು ಟಿಶ್ಯು ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳುವ ಅಭ್ಯಾಸ ಮಾಡಬೇಕು. ಅಲ್ಲದೆ ಬಳಸಿದ ಟಿಶ್ಯುವನ್ನು ಸೂಕ್ತರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. \
- ಏಕೆಂದರೆ ಸೀನುವ ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಹೋಗುತ್ತವೆ. ಇವುಗಳಲ್ಲಿ ಸೋಂಕು ಹರಡುವ ವೈರಾಣುಗಳಿರುವ ಸಾಧ್ಯತೆಗಳಿರುತ್ತದೆ.
- ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಕೈಗಳು ಅನೇಕ ವಸ್ತುಗಳ ಮೇಲ್ಮೆ„ಗಳನ್ನು ಸ್ಪರ್ಶಿಸಿ ವೈರಸ್‌ಗಳನ್ನು ಹೊಂದಿರುವುದರಿಂದ ಕಲುಷಿತಗೊಂಡ ಕೈಗಳು ನಿಮ್ಮ ಕಣ್ಣು, ಮೂಗು ಅಥವಾ ಬಾಯಿಗೆ ವೈರಸ್ ಅನ್ನು ವರ್ಗಾಯಿಸಬಹುದು.
- ಅಲ್ಲಿಂದ, ವೈರಸ್ ನಿಮ್ಮ ದೇಹವನ್ನು ಪ್ರವೇಶಿಸಬಹುದು ಮತ್ತು ನೀವು ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು.
ಡಾ| ಚೈತ್ರಾ ಆರ್. ರಾವ್
ಸಹ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ–ಆರ್ಡಿನೇಟರ್, ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆಎಂಸಿ, ಮಣಿಪಾಲ.
ರಾಘವೇಂದ್ರ ಭಟ್ ಎಂ.
ಆರೋಗ್ಯ ಸಹಾಯಕರು, ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Liver cancer: ಯಕೃತ್ತಿನ ಕ್ಯಾನ್ಸರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.