ಸಂವಹನ ಮತ್ತು ಭಾಷೆಯ ಬೆಳವಣಿಗೆಯಲ್ಲಿ  ಕೋವಿಡ್‌ 19 ಲಾಕ್‌ ಡೌನ್‌ ಪರಿಣಾಮ


Team Udayavani, Jun 6, 2021, 2:34 PM IST

covid 19 Lockdown Effect

ಕೋವಿಡ್‌ -19 ಸಾಂಕ್ರಾಮಿಕವು ಸಮಾಜಕ್ಕೆ ಅನೇಕ ಅನಪೇಕ್ಷಿತ, ದೀರ್ಘ‌ಕಾಲೀನ ಪರಿಣಾಮಗಳಿಗೆ ಕಾರಣವಾಗಿದೆ. ಕೋವಿಡ್‌ 19 ಕಾರಣದಿಂದಾಗಿ ಈ ಅಭೂತಪೂರ್ವ ಲಾಕ್‌ಡೌನ್‌ ಸಮಯದಲ್ಲಿ ನಾವು ಬೇರೆ ಬೇರೆ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

ಕೋವಿಡ್‌ -19 ಸಾಂಕ್ರಾಮಿಕ ರೋಗದ ಪ್ರಾಸಂಗಿಕ ಲಕ್ಷಣಗಳು ಸಂವಹನ ಕೌಶಲಗಳ ಮತ್ತು ಭಾಷಾ ಬೆಳವಣಿಗೆಯ ಮೇಲೆ ದೀರ್ಘ‌ಕಾಲೀನ ಪರಿಣಾಮಗಳನ್ನು ಬೀರಿವೆ. ಕೋವಿಡ್‌ -19 ಸಾಂಕ್ರಾಮಿಕ ಸಮಯದಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈಗಳನ್ನು ತೊಳೆಯುವುದು ಮುಂತಾದ ತಡೆಗಟ್ಟುವ ವಿಧಾನಗಳು ಬಹಳ ಮುಖ್ಯವಾಗಿದೆ.  ಇದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ.

 

ಸಾಮಾಜಿಕ ಸಂವಹನ, ಭಾಷಾ  ಬೆಳವಣಿಗೆಯ ಮೇಲೆ ಪರಿಣಾಮ

ಸಾಮಾಜಿಕ ಸಂವಹನ ಭಾಷಾ ಬೆಳವಣಿಗೆಗೆ ಅತೀ ಆವಶ್ಯಕ. ಇಂದು ನಾವು ಸಾಮಾಜಿಕ ಅಂತರವನ್ನು ಕಾಪಾಡಲು ನಮ್ಮ ಮನೆಯಲ್ಲೇ ಉಳಿಯುವ ಪ್ರಸಂಗ ಬಂದಿದೆ. ಉದ್ಯಾನವನ ವಿಹಾರ, ನೆರೆಹೊರೆಯವರ/ಸ್ನೇಹಿತರ ಮನೆಗೆ ಹೋಗುವುದು ಇತ್ಯಾದಿ ಯಾವುದೇ ಸಾಮಾಜಿಕ ಸಂವಹನದಲ್ಲಿ ಇಂದು ನಾವು ಭಾಗವಹಿಸುವಂತಿಲ್ಲ. ಸಾಮಾಜಿಕ ಅಂತರ ಮತ್ತು ದೊಡ್ಡ ಗುಂಪು ಕೂಟಗಳ ಮೇಲಿನ ನಿರ್ಬಂಧಗಳಿಂದ ಶಾಲಾ ಮಕ್ಕಳು ಗೆಳೆಯರೊಂದಿಗೆ ಅರ್ಥಪೂರ್ಣವಾಗಿ, ವೈಯಕ್ತಿಕವಾಗಿ ಸಂವಹನ ನಡೆಸದಂತಾಗಿವೆ.

ಮಕ್ಕಳ ಜತೆಗಿನ ಮಾತು/ಆಟ

ಪ್ರಾಯೋಗಿಕ ಭಾಷಾ ಬೆಳವಣಿಗೆಯ ಮಹತ್ವದ ನಿರ್ಣಾಯಕ ಅಂಶವಾಗಿದೆ. ಈಗ ನಾವು ಉಪಯೋಗಿಸುವ ಮಾಸ್ಕ್ ಮುಖದ ಭಾವನೆಗಳನ್ನು ಮತ್ತು ಸಾಮಾಜಿಕ ಸೂಚನೆಗಳನ್ನು ಅಸ್ಪಷ್ಟಗೊಳಿಸಬಹುದು. ಇನ್ನು ವರ್ಚುವಲ್‌) ಕ್ಲಾಸ್‌ ಗಳ ಹೊರಹೊಮ್ಮುವಿಕೆಯಿಂದ ಸಂಭಾಷಣೆ ಮತ್ತು ಸಾಮಾಜಿಕ ಸಂವಹನಗಳಿಗೆ ಸಿಗುವ ಅವಕಾಶಗಳು ಕಡಿಮೆಯಾಗಿವೆ. ಇದಲ್ಲದೆ ಸಂವಹನ ತೊಂದರೆ ಇರುವ ಮತ್ತು ಭಾಷಾ ಬೆಳವಣಿಗೆಯು ಕುಂಠಿತ ಇರುವ ಮಕ್ಕಳಲ್ಲಿ ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀ ರುತ್ತದೆ.

ಶ್ರವಣ ದೋಷ ಹೊಂದಿರುವ ಮಕ್ಕಳ ಸಂವಹನದ ಮೇಲೆ ಪರಿಣಾಮ

ಶ್ರವಣ ದೋಷ ಹೊಂದಿರುವ ಮಕ್ಕಳಲ್ಲಿ ಸಂವಹನದ ಮೇಲೆ ಈ ಕೋವಿಡ್‌-19 ಅಸಮರ್ಪಕ ಪರಿಣಾಮವನ್ನು ಬೀರಿದೆ. ಮಾಸ್ಕ್ ಧರಿಸಿದಾಗ ಮಾತಿನ ಮಟ್ಟ ಕಡಿಮೆಯಾಗುತ್ತದೆ. ಸರಳ ಅಥವಾ ಕಾಟನ್‌ ಮಾಸ್ಕ್ ಹಾಕಿದಾಗ ಮಾತಿನ ಮಟ್ಟ 3ರಿಂದ 4 ಡೆಸಿಬಲ್‌ ಮತ್ತು ಎನ್‌ 95 ಮಾಸ್ಕ್ಗಳಿಂದ 12 ಡೆಸಿಬಲ್‌ಗ‌ಳಷ್ಟು ಕಡಿಮೆಯಾಗುತ್ತದೆ. ಶ್ರವಣ ದೋಷವಿರುವ ಮಕ್ಕಳಿಗೆ ಈ ಸಣ್ಣ ಬದಲಾವಣೆಯು ಕೂಡ ಬೇರೆಯವರ ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಮಾತಿನ ಗ್ರಹಿಕೆಗೆ ಕೇಳುವ ಮತ್ತು ನೋಡುವ ಇಂದ್ರಿಯಗಳ ಏಕೀಕರಣವು ಅಗತ್ಯ. ಮಾಸ್ಕ್ ಧರಿಸುವುದರಿಂದ ಶ್ರವಣ ದೋಷವಿರುವ ಮಕ್ಕಳಿಗೆ ತುಟಿ, ನಾಲಗೆ, ಬಾಯಿ ಇತ್ಯಾದಿ ಉಚ್ಚರಣೆಯ ಅಂಗಾಂಗಗಳ ಚಲನೆಯು ಅಸ್ಪಷ್ಟವಾಗಬಹುದು. ಮಾಸ್ಕ್ ಧರಿಸುವುದರಿಂದ ತುಟಿಯ ಓದುವಿಕೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಶ್ರವಣ ದೋಷವಿರುವ ಮಕ್ಕಳು ಉಚ್ಚಾರಣೆಯ ಅಂಗಾಂಗಗಳ ಚಲನೆಯನ್ನು ಗಮನಿಸಲು ಅಶಕ್ತರಾಗಬಹುದು. ಅದಲ್ಲದೆ ಮಾಸ್ಕ್ ದೃಶ್ಯ ಸೂಚನೆಯ  ನಷ್ಟ, ಅಸ್ಪಷ್ಟ ಉಚ್ಚರಣೆಯ ಮತ್ತು ಗ್ರಹಣ ಶಕ್ತಿಯ ​​ಪರಿಣಾಮಗಳನ್ನು ಉಲ್ಬಣಗೊಳಿಸಬಹುದು. ದೃಶ್ಯ ಸೂಚನೆಯ ನಷ್ಟವು ಚಿಕ್ಕ ಮಕ್ಕಳಲ್ಲಿಯೂ ಭಾಷಾ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

 

ತಂತ್ರಜ್ಞಾನದ ಬಳಕೆಯಿಂದ ಭಾಷೆ, ಸಂವಹನದ ಮೇಲೆ ಪರಿಣಾಮಗಳು 

ತಂತ್ರಜ್ಞಾನವು ಎಲ್ಲೆಡೆ ಇದೆ ಮತ್ತು ಈ ಲಾಕ್‌ಡೌನ್‌ನಿಂದಾಗಿ ತಂತ್ರಜ್ಞಾನವನ್ನು ಎಲ್ಲರೂ ಹೆಚ್ಚಾಗಿ ಬಳಸುತ್ತಿದ್ದಾರೆ. ಮಕ್ಕಳೂ (ಕಿರಿಯ ಮತ್ತು ಅತ್ಯಂತ ಕಿರಿಯರು) ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಇಂದು ಹೆಚ್ಚಿನ ಮಕ್ಕಳು ಹುಟ್ಟಿನಿಂದಲೂ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ತಂತ್ರಜ್ಞಾನದ ಬಳಕೆಯನ್ನು ಇನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ, ಆದರೆ  ಮಾನವ ಸಂವಹನ, ಮಕ್ಕಳ ಮಾತು ಮತ್ತು ಭಾಷಾ ಬೆಳವಣಿಗೆಗೆ ಆವಶ್ಯಕ ಎಂದು ನಮಗೆ ತಿಳಿದಿದೆ.  ಮಕ್ಕಳ ಮೆದುಳುಗಳು ಮೊದಲ ವರ್ಷಗಳಲ್ಲಿ ವೇಗವಾಗಿ ಇರುತ್ತವೆ ಮತ್ತು ಮಕ್ಕಳು ಜನರೊಂದಿಗೆ ಸಂವಹನ ನಡೆಸುವ ಮೂಲಕ ಉತ್ತಮವಾಗಿ ಕಲಿಯುತ್ತಾರೆ. ಮಗು ಎರಡು ಅಥವಾ ಮೂರು ವರ್ಷ ತುಂಬುವ ತನಕ ಸಂಪೂರ್ಣವಾಗಿ ಪರದೆಗಳನ್ನು ತಪ್ಪಿಸಬೇಕೆಂದು ಅಮೆರಿಕನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕÕ…  ಸೂಚಿಸುತ್ತದೆ.

 

ಪರಿಹರಿಸಲು ಪೋಷಕರಿಗೆ ಸಲಹೆ

 

ನಿಮ್ಮ ಮಗುವಿನ ತಂತ್ರಜ್ಞಾನದ ಬಳಕೆಯನ್ನು  ಮಿತಿಗೊಳಿಸದ್ದಿದ್ದಲ್ಲಿ ಈ ತೊಂದರೆಗಳನ್ನು  ಮಗುವಿನಲ್ಲಿ ಕಾಣಬಹುದು:

  1. ತಂತ್ರಜ್ಞಾನದ ಬಳಕೆಯು ಶಬ್ದಕೋಶದ ಬೆಳವಣಿಗೆ, ನಿರ್ಣಾಯಕವಾದ ಸಂಭಾಷಣೆ ಮತ್ತು ಪರಸ್ಪರ ಸಂಭಾಷಿಸುವುದನ್ನು ಮಿತಿಗೊಳಿಸುತ್ತದೆ.
  2. ಸಾಕಷ್ಟು ಟಿ.ವಿ. ನೋಡುವುದರಿಂದ ಭಾಷಾ ಕೌಶಲ ದುರ್ಬಲಗೊಳ್ಳುತ್ತದೆ.
  3. ಪರದೆಯ ಸಮಯ (scrಛಿಛಿn ಠಿಜಿಞಛಿ), ವಿಶೇಷವಾಗಿ ಮಲಗುವ ಮುನ್ನ ನಿದ್ರೆಗೆ ಅಡ್ಡಿಯಾಗಬಹುದು.
  4. ಸೃಜನಶೀಲ ಆಟದ ಸಮಯವನ್ನು ಮಿತಿಗೊಳಿಸುತ್ತದೆ.
  5. ಸಂದಭೋìಚಿತವಾಗಿ ಮಾತನಾಡುವ ತೊಂದರೆ ಇರುತ್ತದೆ.
  6. ಪರದೆ (ಟಿ.ವಿ/ ಮೊಬೈಲ್‌)ಯಿಂದ ಕವಿತೆಗಳು ಮತ್ತು ವರ್ಣಮಾಲೆಗಳನ್ನು ಕಲಿಯಬಹುದು, ಆದರೆ ಸಾಮಾಜೀಕರಣಗೊಳ್ಳುವುದನ್ನು ಮಗು ಕಲಿಯುವುದಿಲ್ಲ.
  7. ಮಗುವಿನ ಸಾಮಾಜಿಕ ಮತ್ತು ಮಾತಿನ ಮೈಲಿಗಲ್ಲುಗಳಲ್ಲಿ ಹಿಂಜರಿಕೆಯನ್ನು ಕಾಣಬಹುದು.

 

ಮಕ್ಕಳಿಗೆ ಸಹಾಯ ಮಾಡುವ  ಕೆಲವು ಸಲಹೆಗಳು ಇಲ್ಲಿವೆ.

ಮಾತನಾಡಿ, ಮಾತನಾಡಿ, ಮಾತನಾಡಿ

ಮಕ್ಕಳು ತಂದೆತಾಯಿಯನ್ನು ನೋಡಿ ಕಲಿಯುತ್ತಾರೆ ಮತ್ತು ಪರಿಸರದಿಂದ ಕೇಳುವುದನ್ನು, ನೋಡಿದ್ದನ್ನು ಅನುಕರಿಸುವ ಮೂಲಕ ತಮ್ಮ ಶಬ್ದಕೋಶವನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಕುಟುಂಬದವರು ಎಲ್ಲ ಸಂದರ್ಭಗಳಲ್ಲಿ ಮಾತನಾಡುವುದನ್ನು ಹೆಚ್ಚು ಮಾಡಬೇಕು. ನೀವು ನೋಡುವುದನ್ನು/ ನೋಡಿರುವುದನ್ನು ಹೇಳಿ ಮತ್ತು ಅದರ ಬಗ್ಗೆ ಮಾತನಾಡಿ. ಮಲಗುವ ಮುಂಚೆ ಸಣ್ಣ ಸಣ್ಣ ಕಥೆಗಳನ್ನು ಹೇಳಿ.

ಪದವನ್ನು ಪುನರಾವರ್ತಿಸಿ, ಪುನರಾವರ್ತಿಸಿ, ಪುನರಾವರ್ತಿಸಿ / ಒತ್ತಿ ಹೇಳಿ.  ಮಾತು ಸರಳ / ಸ್ಪಷ್ಟವಾಗಿರಲಿ. ನಿಮ್ಮ ಮಗುವಿನೊಂದಿಗೆ ಯಾವಾಗಲೂ ಮಾತನಾಡಿ. ನಿಮ್ಮ ಮಗು ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ನೋಡಿ.  ಆಲಿಸಿ. ಮಗು ಏನಾದರೂ ಪುನರುಚ್ಚರಿಸುವುದನ್ನು ನೋಡಿ ಆನಂದಪಡಿ. ಸಂಭಾಷಣೆಯನ್ನು ಮಾಡಿ. ನೀವು ಒಟ್ಟಿಗೆ ಏನು ಮಾಡುತ್ತೀರಿ ಎಂಬುದರ ಕುರಿತು ಮಾತನಾಡಿ. ಸ್ಪರ್ಶಿಸುವುದು, ಹೊಡೆಯುವುದು, ಜೋಡಿಸುವುದು, ಅಲುಗಾಡಿಸುವ ಮೂಲಕ ಆಟಿಕೆಗಳನ್ನು ವಿವಿಧ ರೀತಿಯಲ್ಲಿ ಅನ್ವೇಷಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ, ದೈನಂದಿನ ದಿನಚರಿಯನ್ನು ತಮಾಷೆಯ ಕಲಿಕೆಯ ಕ್ಷಣಗಳಾಗಿ ಪರಿವರ್ತಿಸಿ.

ಭಾಷಾ ಬೆಳವಣಿಗೆಗೆ ನೀವು ಮನೆಯಲ್ಲಿ ಮಾಡಬಹುದಾದ ಇನ್ನೂ ಕೆಲವು ತಂತ್ರಗಳು

ನೆಲದ ಮೇಲೆ ಕುಳಿತು ನಿಮ್ಮ ಮಗುವಿನೊಂದಿಗೆ ಆಟವಾಡಿ. ಟರ್ನ್ ತೆಗೆದುಕೊಳ್ಳುವುದು (ಠಿurn  ಠಿಚkಜಿnಜ), ಹಂಚಿಕೊಳ್ಳುವುದು, ಜಂಟಿ ಆಟದ ಚಟುವಟಿಕೆ ಮತ್ತು ಸಂಭಾಷಣೆಯಂತಹ ಪ್ರಮುಖ ಚಟುವಟಿಕೆಗಳನ್ನು ಮಾಡಿ. ಇವುಗಳಿಂದ ಮಕ್ಕಳು ಸಾಮಾಜಿಕ ಕೌಶಲಗಳನ್ನು  ಕಲಿಯುತ್ತಾರೆ. ಈ ಆಟದ ಸಂದರ್ಭದಲ್ಲಿ ನಿಮ್ಮ ಮಗುವಿನೊಂದಿಗೆ ಸಂವಹನ ನಡೆಸಲು ಮತ್ತು ಉತ್ತಮ ಭಾಷಾ ಕೌಶಲಗಳನ್ನು ರೂಪಿಸುವ ಅವಕಾಶ ನಿಮಗೆ ಸಿಗುತ್ತದೆ.

ಇದಲ್ಲದೆ ಪುಸ್ತಕದಲ್ಲಿ ಕಥೆಗಳನ್ನು ಓದುವುದು ಮತ್ತು ಕಥೆಗಳನ್ನು ಹೇಳುವುದು, ನಿಮ್ಮಕಥೆಗಳನ್ನು ಓದುವುದು ಅಥವಾ ಹೇಳುವುದು. ಇದನ್ನು ಕೇವಲ ಮಲಗುವ ಸಮಯದಲ್ಲಿ ಮಾತ್ರವಲ್ಲದೆ ಬೇರೆ ಸಮಯದಲ್ಲೂ ಮಾಡುವುದು ಒಳ್ಳೆಯ ಅಭ್ಯಾಸ.   ಮಗು ಕಥೆ ಅಥವಾ ಒಂದು ಸನ್ನಿವೇಶದ ಬಗ್ಗೆ ವಿವರಣೆಯನ್ನು ನೀಡಿದರೆ ಅದನ್ನು ವಿಸ್ತರಿಸಿ ಹೇಳುವುದು. ಓದಲು ಮತ್ತು ಬರೆಯಲು ಕೆಲವು ಚಟುವಟಿಕೆಗಳನ್ನು ಮಾಡಿಸುವುದು. ಸಣ್ಣ ಮಕ್ಕಳಿಗೆ ಗೀಚುವುದು, ಚಿತ್ರ ಮಾಡಲು ಹೇಳುವುದು, ದೊಡ್ಡ ಮಕ್ಕಳಿಗೆ ಕೆಲವು ಅಕ್ಷರಗಳನ್ನು ಅಥವಾ ಪದಗಳನ್ನು ಬರೆಯಲು ಹೇಳುವುದು. ಇವುಗಳು ಭಾಷಾ ಬೆಳವಣಿಗೆಯಲ್ಲಿ ಶಬ್ದಕೋಶ, ವ್ಯಾಕರಣ ಮತ್ತು ಸಾಕ್ಷರತೆಯ ಕೌಶಲಗಳನ್ನು ಹೆಚ್ಚು ಮಾಡುತ್ತವೆ.

 ಮಗುವಿನ ಅತ್ಯುತ್ತಮ ಮನಃಸ್ಥಿತಿಯನ್ನು ಗಮನಿಸಿ/ ಸೆರೆಹಿಡಿಯಿರಿ

ಹೆಚ್ಚಿನ ಮಕ್ಕಳು ನೀರನ್ನು ಪ್ರೀತಿಸುತ್ತಾರೆ ಮತ್ತು ಸ್ನಾನವನ್ನು ಆನಂದಿಸುತ್ತಾರೆ. ನಿಮ್ಮ ಮಗುವಿಗೆ ನೀರಿನಲ್ಲಿ ಆಟವಾಡುವಲ್ಲಿ ಇಷ್ಟ ಇದ್ದರೆ, ಅವನಿಗೆ ಮಾತನ್ನು  ಕಲಿಸಲು ಅಥವಾ ಕೆಲವು ಚಟುವಟಿಕೆಯನ್ನು ಮಾಡಲು ಈ ಸಮಯವನ್ನು ಬಳಸಿ. ಇನ್ನು ನಿಮ್ಮ ಒತ್ತಡದ ಸಮಯದಲ್ಲಿ ಕೆಲವು ವ್ಯಾಯಾಮಗಳನ್ನು, ಸಣ್ಣ ಸಣ್ಣ ಹಾಡುಗಳನ್ನು ಹಾಡುವುದನ್ನು ಮಾಡಬಹುದು.

ತಂತ್ರಜ್ಞಾನದ ಬಳಕೆಗೆ ಪರ್ಯಾಯವಾಗಿ ನಿಮ್ಮ ಮಗುವಿನ ನಿರ್ವಹಣೆಗೆ ಸಲಹೆಗಳು

ತಂತ್ರಜ್ಞಾನವನ್ನು ಬಳಸಬೇಡಿ/ಟೆಕ್‌ ಸಂಪರ್ಕ ಕಡಿತಗೊಳಿಸಿ. ಪರದೆಯ ಸಮಯವನ್ನು (ಸ್ಕ್ರೀನ್‌ಟೈಮ್‌) ಮಗುವಿನ ಸಮಯವನ್ನು ಕಳೆಯುವ ಮಾರ್ಗವಾಗಿ ಬಳಸಬೇಡಿ.  ಪರದೆಯ ಸಮಯಕ್ಕೆ ಬದಲಾಗಿ ಅರ್ಥಪೂರ್ಣ ಚಟುವಟಿಕೆಗಳನ್ನು  ಮಾಡಿಸಿ. ಸೃಜನಶೀಲತೆಯನ್ನು ಪ್ರೇರೇಪಿಸುವ ಆಟಗಳನ್ನು ಆರಿಸಿ. ನಿಮ್ಮ ಮಗುವನ್ನು ದೈನಂದಿನ ಕೆಲಸಗಳಲ್ಲಿ ಸೇರಿಸಿ. ಚಿಕ್ಕ ಮಕ್ಕಳು ದೊಡ್ಡವರನ್ನು ಸುಲಭವಾಗಿ ಅನುಕರಿಸುತ್ತಾರೆ. ನಿಮ್ಮ ಮಗುವಿಗೆ ಬಟ್ಟೆಗಳನ್ನು ವಿಂಗಡಿಸುವುದು, ಪೀಠೊಪಕರಣಗಳ ಧೂಳು ತೆಗೆಯುವುದು ಅಥವಾ ಗಿಡಗಳಿಗೆ ನೀರುಹಾಕುವುದು ಮುಂತಾದ ದೈನಂದಿನ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸಬೇಕು.

ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ನಿಮ್ಮ ಮಗುವಿನೊಂದಿಗೆ ಮಾತನಾಡಲು ನಿಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ವೀಡಿಯೊ ಕರೆಗಳನ್ನು ಮಾಡಿ. ಕರೆಗಳಿಗೆ ನಿಗದಿತ ಸಮಯ ಇರಿಸಿ ಮತ್ತು ದಿನವಿಡೀ ಅನೇಕ ಬಾರಿ ಮಾಡಿ. ಟಿ.ವಿ. ಮತ್ತು ಇತರ ತಾಂತ್ರಿಕ ಸಾಧನಗಳನ್ನು (ಮೊಬೈಲ್‌, ಟ್ಯಾಬ್‌) ಆಫ್‌ ಮಾಡಿ. ಅನೇಕ ಮನೆಗಳಲ್ಲಿ ಟಿ.ವಿ. ದಿನವಿಡೀ ಚಾಲನೆಯಲ್ಲಿ ಇರುತ್ತದೆ. ಹಿನ್ನೆಲೆ ಟಿ.ವಿ. ಶಬ್ದವು ಮಗುವಿನ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ತಂತ್ರಜ್ಞಾನವನ್ನು ಕುಟುಂಬದ ಒಂದು ಚಟುವಟಿಕೆಯನ್ನಾಗಿ ಮಾಡಿ. ನಿಮ್ಮ ಮಗುವಿಗೆ ಉತ್ತಮ ತಂತ್ರಜ್ಞಾನದ ಅಭ್ಯಾಸವನ್ನು ರೂಪಿಸಿ.

ಮಕ್ಕಳು ತಮ್ಮ ಸುತ್ತಲಿನ ದೊಡ್ಡವರನ್ನು ನೋಡುವುದರಿಂದ ಕಲಿಯುತ್ತಾರೆ. ಮಕ್ಕಳು ನಿಮ್ಮನ್ನೇ ನೋಡಿ ಕಲಿಯುವುದರಿಂದ ನಿಮ್ಮ ಮೊಬೈಲ್‌ ಬಳಕೆಯನ್ನು ಮಿತವಾಗಿಸಿ. ಇದರಿಂದ ಕುಟುಂಬ ಸದಸ್ಯರಿಗೆ ಪರಸ್ಪರ ಮಾತನಾಡಲು ಅವಕಾಶಗಳು ದೊರೆಯುತ್ತವೆ.

ಕಿವುಡು ಮಕ್ಕಳ ಭಾಷೆಯನ್ನು ಉತ್ತಮಗೊಳಿಸಲು ಸಲಹೆಗಳು

ಕಿವುಡು ಮಕ್ಕಳ ಭಾಷೆಯನ್ನು ಅಭಿವೃದ್ಧಿಪಡಿಸಲು ಮೇಲೆ ಹೇಳಿದ ತಂತ್ರ ಮಾತ್ರವಲ್ಲದೆ ಅವುಗಳ ಜತೆಗೆ ಪಾರದರ್ಶಕ ಮಾಸ್ಕನ್ನು ಬಳಕೆ ಮಾಡುವುದು ಉತ್ತಮ. ಇದರಿಂದ  ಕಿವುಡು ಮಕ್ಕಳು ಮುಖದ ಭಾವವನ್ನು, ತುಟಿ ಹಾಗೂ ನಾಲಗೆಗಳ ಚಲನೆಗಳನ್ನು ಸರಿಯಾಗಿ ಗಮನಿಸಬಹುದು. ಇನ್ನು ಆನ್‌ಲೈನ್‌ ತರಗತಿಯಲ್ಲಿ ಟೀಚರ್‌ ಅನ್ನು ನೋಡುವ ಅವಕಾಶ (ವೀಡಿಯೋ)ವನ್ನು  ಮತ್ತು ಶಬ್ದವನ್ನು ಜಾಸ್ತಿ ಮಾಡುವ (ಸ್ಪೀಕರ್‌) ಉಪಕರಣಗಳನ್ನು ಉಪಯೋಗಿಸುವುದು, ಚಾಟ್‌ಬಾಕÕ…ನಲ್ಲಿ ಬರೆಯು ವುದು, ಕೈ ಮೇಲೆತ್ತುವ ಚಿಹ್ನೆಗಳ ಬಳಕೆ  ಇವುಗಳು ಕಿವುಡು ಮಕ್ಕಳಿಗೆ ತರಗತಿ ನಿಭಾಯಿಸಲು ಸಹಾಯಕವಾಗುತ್ತದೆ.ಇಲ್ಲಿ ತಿಳಿಸಿದ ಈ  ಚಟುವಟಿಕೆಗಳನ್ನು ಭಾಷೆಯಲ್ಲಿ ವಿಳಂಬವಿರುವ ಮಕ್ಕಳು ಮತ್ತು  ಭಾಷೆಯನ್ನು ಕಲಿಯುತ್ತಿರುವ ಸಾಮಾನ್ಯ ಮಕ್ಕಳಲ್ಲೂ ಮಾಡಬಹುದು. ನೀವು ಮಕ್ಕಳನ್ನು  ಉತ್ತೇಜಿಸದಿದ್ದಲ್ಲಿ ಮಾತು ಮತ್ತು ಭಾಷೆಯ  ಬೆಳವಣಿಗೆಯು ಕುಂಠಿತವಾಗುವ ಸಾಧ್ಯತೆಗಳು ಬಹಳವಾಗಿರುತ್ತವೆ. ಮಗುವಿನ ಮಾತು ಮತ್ತು ಭಾಷೆಯ ಬೆಳವಣಿಗೆಯಲ್ಲಿ ವಿಳಂಬ ಇದೆಯೇ ಇಲ್ಲವೇ ಎಂದು ವಾಕ್‌ ಶ್ರವಣ ತಜ್ಞರಲ್ಲಿ ಪರೀಕ್ಷಿಸಿಕೊಳ್ಳಬಹುದು. ಮಕ್ಕಳನ್ನು ಪ್ರೋತ್ಸಾಹಿಸಿ, ಕಲಿಕೆಯನ್ನು ಮೋಜು ಮಾಡಿ, ಮಾತನಾಡಿ, ಆಲಿಸಿ ಮತ್ತು ಮಕ್ಕಳೊಂದಿಗೆ ಭಾಗವಹಿಸಿ. ಇಂದಿನ ಮಕ್ಕಳೇ ಮುಂದಿನ ಜನಾಂಗ.

ಡಾ| ವೀಣಾ ಕೆ.ಡಿ.

ಅಸೋಸಿಯೇಟ್ಪ್ರೊಫೆಸರ್‌,

ಸ್ಪೀಚ್ಮತ್ತು ಹಿಯರಿಂಗ್ವಿಭಾಗ

ಎಂಸಿಎಚ್ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.