ಜೀರ್ಣಾಂಗ ವ್ಯೂಹ ಮತ್ತು ಕಶ್ಮಲ ನೀರಿನಲ್ಲಿ ಕೋವಿಡ್ 19 ವೈರಸ್


Team Udayavani, Jul 26, 2020, 11:47 AM IST

ಜೀರ್ಣಾಂಗ ವ್ಯೂಹ ಮತ್ತು ಕಶ್ಮಲ ನೀರಿನಲ್ಲಿ  ಕೋವಿಡ್ 19 ವೈರಸ್

ಆಧುನಿಕ ಮನುಷ್ಯನ ಇತಿಹಾಸದಲ್ಲಿ ಜಾಗತಿಕವಾಗಿ ಸಾಂಕ್ರಾಮಿಕ ರೋಗಗಳು ಸಾರ್ವಜನಿಕ ಆರೋಗ್ಯಕ್ಕೆ ಭಾರೀ ಅಪಾಯವನ್ನು ಒಡ್ಡಿವೆ. ಮನುಷ್ಯನಲ್ಲಿ ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಸೋಂಕುಗಳಿಗೆ ಕಾರಣವಾಗುತ್ತಿರುವ ಕೋವಿಡ್ ವೈರಸ್‌ ಪ್ರಸ್ತುತ ಹಲವಾರು ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗಿದ್ದು, ಜಾಗತಿಕ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡಿದೆ. 2019ರ ಡಿಸೆಂಬರ್‌ ನಲ್ಲಿ ವೈರಲ್‌ ನ್ಯುಮೋನಿಯಾ ಹೊಂದಿದ್ದ ರೋಗಿಗಳ ಸಮೂಹವು ನೋವಲ್‌ ಕೋವಿಡ್ ವೈರಸ್‌ ಸೋಂಕು ಹೊಂದಿರುವುದು ಪತ್ತೆಯಾಗಿತ್ತು ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಈ ಕಾಯಿಲೆಯನ್ನು ಕೋವಿಡ್‌-19 ಎಂಬುದಾಗಿ ಹೆಸರಿಸಿದೆ. ಸದ್ಯ ಕೋವಿಡ್‌-19 ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿದೆ.

ಕೋವಿಡ್‌-19 ಸೋಂಕಿನ ಜ್ವರ, ಒಣ ಕೆಮ್ಮು, ಉಸಿರಾಟಕ್ಕೆ ತೊಡಕು ಉಂಟಾಗುವಂತಹ ಶ್ವಾಸಾಂಗ ಲಕ್ಷಣಗಳು ಬಹಳ ಸಾಮಾನ್ಯವಾಗಿದ್ದು, ಹನಿಬಿಂದುಗಳಿಂದ ಸೋಂಕು ಪ್ರಸರಣವನ್ನು ದೃಢಪಡಿಸುತ್ತಿವೆ. ಆದರೆ ಸಾಮಾನ್ಯವಾಗಿ ಕಂಡುಬರದ ಭೇದಿ, ಹೊಟ್ಟೆ ತೊಳೆಸುವಿಕೆ, ವಾಂತಿ, ಹೊಟ್ಟೆ ಸಮಸ್ಯೆಯಂಥ ಲಕ್ಷಣಗಳು ಕೂಡ ಕೆಲವೊಮ್ಮೆ ಕಂಡುಬರುತ್ತವೆ.

ಅಮೆರಿಕದಲ್ಲಿ ವರದಿಯಾದ ಮೊತ್ತಮೊದಲ ಕೋವಿಡ್‌-19 ಪ್ರಕರಣದಲ್ಲಿ ರೋಗಿಯು ಎರಡು ದಿನಗಳ ಹೊಟ್ಟೆತೊಳೆಸುವಿಕೆ, ಆಸ್ಪತ್ರೆ ದಾಖಲಾತಿ ಸಮಯದಲ್ಲಿ ವಾಂತಿ ಮತ್ತು ಆ ಬಳಿಕ 2 ದಿನಗಳ ಕಾಲ ಭೇದಿಯನ್ನು ಹೊಂದಿದ್ದರು. ಈ ಪ್ರಕರಣದಲ್ಲಿ ವೈರಸ್‌ ಮೊದಲಾಗಿ ಮಲದಲ್ಲಿ ಪತ್ತೆಯಾಗಿದ್ದರೆ ಆ ಬಳಿಕ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿತ್ತು. ಇತ್ತೀಚೆಗೆ ಚೀನದ ಎರಡು ಪ್ರತ್ಯೇಕ ಪ್ರಯೋಗಾಲಯಗಳು ತಾವು ರೋಗಿಗಳ ಮಲದ ಮಾದರಿಗಳಿಂದ ಕೋವಿಡ್‌-19 ವೈರಸನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದಾಗಿ ಘೋಷಿಸಿಕೊಂಡಿವೆ (ಅಪ್ರಕಟಿತ). ಈ ಬಗ್ಗೆ ಕ್ಲಿನಿಕಲ್‌ ಸಾಕ್ಷ್ಯಗಳು ಹೆಚ್ಚು ಹೆಚ್ಚು ಲಭಿಸುತ್ತಿದ್ದು, ಸೋಂಕುಪೀಡಿತ ಪ್ರಾಣಿಗಳು, ಸೋಂಕು ಪೀಡಿತರು, ಲಕ್ಷಣ ರಹಿತ ರೋಗಪೀಡಿತರು ಅಥವಾ ಲಘು ಲಕ್ಷಣಗಳನ್ನು ಹೊಂದಿರುವವರ ಜತೆಗೆ ಆರೋಗ್ಯವಂತರು ಸಂಪರ್ಕ ಹೊಂದಿದಾಗ ಶ್ವಾಸಾಂಗವ್ಯೂಹದ ಜತೆಗೆ ಪಚನಾಂಗ ವ್ಯೂಹವೂ ಸೋಂಕು ಹರಡುವ ಪರ್ಯಾಯ ಮಾರ್ಗವಾಗಿರಬಲ್ಲುದು ಎಂಬುದನ್ನು ದೃಢಪಡಿಸುತ್ತದೆ.

ಕೋವಿಡ್‌ -19 ಮತ್ತು ಪಚನಾಂಗ ವ್ಯೂಹ :  ಕೋವಿಡ್ ರೋಗಿಗಳಲ್ಲಿ ಶೇ.3ರಷ್ಟು ಮಂದಿ ಪಚನಾಂಗ ವ್ಯೂಹಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ಮಾತ್ರವೇ ಹೊಂದಿರುತ್ತಾರೆ, ಶ್ವಾಸಾಂಗದ ಸಮಸ್ಯೆಗಳನ್ನು ಹೊಂದಿರುವುದಿಲ್ಲ ಎಂಬುದು ಕುತೂಹಲಕಾರಿ ಅಂಶ. ಈ ವೈರಸ್‌ನ ಸೋಂಕುಕಾರಕ ಸಾಮರ್ಥ್ಯಕ್ಕೆ ಹೋಲಿಸಿದರೆ ಪಚನಾಂಗ ವ್ಯೂಹಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಲಘುವಾಗಿರುತ್ತವೆ ಮತ್ತು ಸತತವಾಗಿರುವುದಿಲ್ಲ ಎಂಬಂತೆ ಕಂಡುಬರುತ್ತದೆ. ಕೋವಿಡ್ ರೋಗಿಗಳು ನುಂಗಿದಾಗ ಕಫ‌, ಗಂಟಲ ದ್ರವದಲ್ಲಿ ಇರುವ ವೈರಾಣುಗಳು ಪಚನಾಂಗ ವ್ಯೂಹಕ್ಕೆ ರವಾನೆಯಾಗುತ್ತವೆ. ಅಲ್ಲಿ ಜೀರ್ಣಕಾರಕ ಕಿಣ್ವಗಳು ವೈರಾಣುಗಳನ್ನು ದುರ್ಬಲಗೊಳಿಸಿ ಛಿದ್ರಗೊಳಿಸುತ್ತವೆ. ಇದರಿಂದಾಗಿ ಲಘು ರೋಗಲಕ್ಷಣಗಳು ಮಾತ್ರ ಕಂಡು ಬರುತ್ತಿದ್ದು, ಜೀರ್ಣಾಂಗ ವ್ಯೂಹಕ್ಕೆ ತೀವ್ರ ಹಾನಿಯಾಗುವುದಿಲ್ಲ ಎಂಬುದು ಇದಕ್ಕೆ ಒಂದು ಸಂಭಾವ್ಯ ವಿವರಣೆ.

ಮಲದ ಮೂಲಕ ವೈರಾಣು ಪ್ರಸರಣ ಸುರಕ್ಷತೆಯ ಕ್ರಮಗಳು :  ಸೋಂಕುಪೀಡಿತ ವ್ಯಕ್ತಿಗಳಿಂದ ಶ್ವಾಸಾಂಗ ದ್ರವಗಳ ಜತೆಗೆ ಮಲದಲ್ಲಿಯೂ ವೈರಾಣುಗಳು ವಿಸರ್ಜಿಸಲ್ಪಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿವೆ. ಹೀಗೆ ಮಲದಲ್ಲಿ ವೈರಾಣು ವಿಸರ್ಜನೆಯು ಆ ರೋಗಿಯು ಗುಣ ಹೊಂದಿದ ಬಳಿಕವೂ ಐದು ವಾರಗಳಷ್ಟು ದೀರ್ಘ‌ಕಾಲದ ತನಕ ಮುಂದುವರಿಯುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೆಮ್ಮು ಮತ್ತು ಸೀನು ಬಂದಾಗ ಮುಖ ಮುಚ್ಚಿಕೊಳ್ಳುವುದು ಹಾಗೂ ಪಿಪಿಇ ಕಿಟ್‌ ಧರಿಸುವುದರ ಜತೆಗೆ ಮಲ ವಿಸರ್ಜನೆಯ ಬಳಿಕ ಸರಿಯಾಗಿ ಕೈತೊಳೆದುಕೊಳ್ಳುವುದು ಕೂಡ ಬಹಳ ಮುಖ್ಯ. ಮಲವಿಸರ್ಜಿಸಿದ ಬಳಿಕ ಶೌಚಾಲಯದಲ್ಲಿ ಫ್ಲಶ್‌ ಮಾಡಿದಾಗ ದೊಡ್ಡ ಗಾತ್ರದ ಹನಿಬಿಂದುಗಳು ವಾತಾವರಣಕ್ಕೆ ಹರಡುತ್ತವೆ. ಇದಾಗುವುದನ್ನು ತಡೆಯಲು ಕಮೋಡ್‌ನ‌ ಮುಚ್ಚಳ ಮುಚ್ಚಿಯೇ ಫ್ಲಶ್‌ ಮಾಡಬೇಕು. ಇದಲ್ಲದೆ, ಒಬ್ಬರು ಶೌಚಾಲಯ ಬಳಸಿದ ಅನಂತರ ಇನ್ನೊಬ್ಬರು ಉಪಯೋಗಿಸುವ ನಡುವೆ ಸಾಕಷ್ಟು ಸಮಯದ ಅಂತರ ಕಾಪಾಡಿಕೊಳ್ಳಬೇಕು. ಇದರಿಂದ ಹನಿಬಿಂದುಗಳು ನಾಶವಾಗಲು ಸಮಯ ದೊರೆಯುತ್ತದೆ.

(ಮುಂದಿನ ವಾರಕ್ಕೆ)

 

ಡಾ| ಮಮತಾ ಬಲ್ಲಾಳ್‌

ಮೈಕ್ರೊಬಯಾಲಜಿ ಪ್ರೊಫೆಸರ್‌,

ಎಂಟರಿಕ್‌ ಡಿಸೀಸಸ್‌ ವಿಭಾಗ ಮುಖ್ಯಸ್ಥರು,

ಮಾಹೆ, ಮಣಿಪಾಲ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.