ಹಲ್ಲಿನ ಸೀಲೆಂಟ್‌ಗಳು; ದಂತಕುಳಿ ತಡೆಗಟ್ಟಲು ಸರಳವಾದ ನೋವುರಹಿತ ವಿಧಾನ
Team Udayavani, Oct 24, 2021, 5:55 AM IST
ಹಲ್ಲಿನ ಸೀಲೆಂಟ್‌ಗಳು (pit and fissure sealants) ಅತ್ಯಂತ ಪರಿಣಾಮಕಾರಿಯಾದ, ಇನ್ನೂ ಬಳಕೆಯಾಗದಿರುವ ಹಾಗೂ ವಿಶೇಷವಾಗಿ ಮಕ್ಕಳಲ್ಲಿ ದಂತಕ್ಷಯವನ್ನು ತಡೆಗಟ್ಟುವ ವಿಧಾನಗಳಲ್ಲಿ ಒಂದಾಗಿದೆ. ಹಲ್ಲಿನ ಸೀಲೆಂಟ್‌ಗಳನ್ನು ಸುಮಾರು ಐದು ದಶಕಗಳಿಂದ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲುಗಳ ದಂತಕ್ಷಯ ತಡೆಯಲು ಉಪಯೋಗಿಸಲಾಗುತ್ತಿದೆ. ಸೀಲೆಂಟ್ ತೆಳುವಾದ ಲೇಪನವಾಗಿದ್ದು, ಇದು ಸೂಕ್ಷ್ಮಜೀವಿಗಳನ್ನು ಮತ್ತು ಆಹಾರ ಕಣಗಳನ್ನು ಹಲ್ಲುಗಳ ಬಿರುಕುಗಳಿಂದ ದೂರವಿಡುತ್ತವೆ. ಹೀಗೆ ಹಲ್ಲಿನ ಮೇಲ್ಮೆ„ (occlusal surfaces)ಯನ್ನು ಕೀಟಾಣುವಿನ ದಾಳಿಯಿಂದ ರಕ್ಷಿಸುತ್ತದೆ. ಈ ಪ್ರಕ್ರಿಯೆಯು ಅಗ್ಗವಾಗಿದೆ, ಕಡಿಮೆ ಸಮಯ ಬೇಕಾಗುತ್ತದೆ ಮತ್ತು ವಿಧಾನ ಸುಲಭವಾಗಿದೆ. ಅಧಿಕವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇವುಗಳ ಉಪಯೋಗವನ್ನು ನೋಡುತ್ತೇವೆ. ಸಂಶೋಧನೆಗಳ ಪ್ರಕಾರ ಶಾಶ್ವತ ಹಲ್ಲುಗಳ ಮೇಲಿನ ಸೀಲಂಟ್‌ಗಳು ಕುಳಿಗಳ ಅಪಾಯವನ್ನು ಶೇ. 80ರಷ್ಟು ಕಡಿಮೆ ಮಾಡುತ್ತದೆ. ಇದರ ಬಗ್ಗೆ ಅರಿಯಲು ಮೊದಲಿಗೆ ಹಲ್ಲು ಹುಳುಕು ಹೇಗಾಗುತ್ತದೆ ಎಂದು ತಿಳಿದುಕೊಳ್ಳಬೇಕು.
ದಂತಕ್ಷಯ ಹೇಗೆ ಸಂಭವಿಸುತ್ತದೆ?
ಹಲ್ಲುಗಳ ಜಗಿಯುವ ಮೇಲ್ಮೈ ಯಲ್ಲಿ ಸಣ್ಣ ಬಿರುಕುಗಳು ಇರುತ್ತವೆ. ಇವು ಆಳವಾಗಿ, ಕಿರಿದಾಗಿದ್ದಾಗ ಸಿಕ್ಕಿಹಾಕಿಕೊಂಡಿರುವ ಆಹಾರ ವನ್ನು ಸ್ವಚ್ಛ ಗೊಳಿಸುವುದು ಕಷ್ಟವಾಗುತ್ತದೆ. ಇದು ಕೀಟಾಣುಗಳಿಗೆ ಆಹಾರವಾಗಿ ದಂತಕ್ಷಯವಾಗುತ್ತದೆ.
ಹಲ್ಲಿನ ಸೀಲೆಂಟ್‌ಗಳು
ಎಂದರೇನು?
ಸೀಲೆಂಟ್‌ಗಳು ಟೂತ್‌ಬ್ರಷ್ ಮತ್ತು ಫ್ಲೋಸ್ ತಲುಪದ ಹಲ್ಲಿನ ಚಡಿಗಳಿಗೆ ರಕ್ಷಣಾತ್ಮಕ ಲೇಪನಗಳಾಗಿವೆ. ಇಂತಹ ರೆಸಿನ್ ಲೇಪನವನ್ನು ಹಲ್ಲುಗಳ ಮೇಲ್ಮೈ ಯಲ್ಲಿ ಅಂದರೆ, ಆಳವಾದ ಬಿರುಕುಗಳಲ್ಲಿ ತುಂಬುವುದರಿಂದ ಅವುಗಳಿಗೆ ತಡೆಗೋಡೆ ಒದಗಿಸುತ್ತದೆ ಹಾಗೂ ಕುಳಿಯಾಗದಂತೆ ತಡೆಯುತ್ತದೆ.
ಇದನ್ನೂ ಓದಿ:ಟಿ20 ವಿಶ್ವಕಪ್ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
ಸೀಲೆಂಟ್‌ಗಳನ್ನು ಯಾವ
ಹಲ್ಲುಗಳಿಗೆ ಹಚ್ಚುತ್ತಾರೆ?
ಇವುಗಳನ್ನು ಪ್ರಿಮೋಲಾರ್‌ಗಳು ಮತ್ತು ದವಡೆ ಹಲ್ಲುಗಳ ಮೇಲೆ ಹಚ್ಚುತ್ತಾರೆ. ದಂತವೈದ್ಯರು ಹಲ್ಲುಗಳ ಬಿರುಕುಗಳನ್ನು ತಪಾಸಣೆ ಮಾಡಿ ಅವು ಆಳವಾಗಿ, ಕಿರಿದಾಗಿದ್ದರೆ ಮಾತ್ರ ಸೀಲಂಟ್ ಹಚ್ಚಲು ಸಲಹೆ ನೀಡುತ್ತಾರೆ. ಆಳವಿಲ್ಲದ ಬಿರುಕುಗಳಿಗೆ ಸೀಲಂಟ್‌ಗಳ ಆವಶ್ಯಕತೆ ಇಲ್ಲ.
ಸೀಲೆಂಟ್‌ಗಳು ಯಾವ ವಯಸ್ಸಿನವರಿಗೆ ಬೇಕು?
ಸೀಲೆಂಟ್‌ಗಳನ್ನು ಮುಖ್ಯವಾಗಿ ದಂತಕುಳಿ ಅಪಾಯವಿರುವ ಮಕ್ಕಳಲ್ಲಿ ಮತ್ತು ಶಾಶ್ವತ ಪ್ರಿಮೋಲಾರ್ ಮತ್ತು ಮೋಲಾರ್ ಹಲ್ಲುಗಳು ಬಂದ ತತ್‌ಕ್ಷಣ ತುಂಬಲಾಗುತ್ತದೆ. ಶಾಶ್ವತ ಬಾಚಿಹಲ್ಲುಗಳು ಸೀಲೆಂಟ್‌ಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಮೊದಲ ಬಾಚಿಹಲ್ಲುಗಳು ಸಾಮಾನ್ಯವಾಗಿ 6 ವರ್ಷಗಳಲ್ಲಿ ಹಾಗೂ ಎರಡನೇ ಬಾಚಿಹಲ್ಲುಗಳು ಸುಮಾರು 12ನೇ ವಯಸ್ಸಿನಲ್ಲಿ ಬರುತ್ತವೆ. ಆಗ ಸೀಲೆಂಟ್‌ಗಳನ್ನು ಹಚ್ಚುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ, ಹಾಲು ಹಲ್ಲುಗಳು ಆಳವಾದ ಚಡಿಗಳನ್ನು ಹೊಂದಿದ್ದಲ್ಲಿ ಅವುಗಳಿಗೆ ಹಚ್ಚುವುದು ಉತ್ತಮ.
ತುಂಬುವ ವಿಧಾನವೇನು?
ಹಲ್ಲಿನ ಮೇಲ್ಭಾಗವನ್ನು ಸ್ವಚ್ಛಗೊಳಿಸಿ, ವಿಶೇಷ ದ್ರಾವಣದೊಂದಿಗೆ ಕಂಡೀಶನಿಂಗ್ ಮಾಡಲಾಗುತ್ತದೆ. ಅನಂತರ ಸೀಲೆಂಟ್ ಅನ್ನು ಲೇಪಿಸಿ ಕ್ಯೂರಿಂಗ್ ಮಾಡಲಾಗುತ್ತದೆ.
ಈ ವಿಧಾನ ನೋಯುವುದೇ?
ಇಲ್ಲ, ಇದು ಸಂಪೂರ್ಣವಾಗಿ ಗಾಯ ರಹಿತವಾಗಿದ್ದು, ನೋವು ರಹಿತವಾಗಿದೆ. ಸೀಲೆಂಟ್‌ಗಳ ಲೇಪನ ಹಲ್ಲಿನ ರಚನೆಯನ್ನು ಕೊರೆಯುವುದು ಅಥವಾ ತೆಗೆಯುವುದನ್ನು ಒಳಗೊಂಡಿರುವುದಿಲ್ಲ.
ಸೀಲೆಂಟ್‌ಗಳು ಶಾಶ್ವತವೇ?
ಹೌದು, ಆದರೆ ಹಲ್ಲುಗಳ ಕುಹರದ ಕತ್ತರಿಸುವಿಕೆ ಇಲ್ಲದೆ, ಹಲ್ಲಿನ ಮೇಲ್ಮೈ ಯಲ್ಲಿ ತುಂಬಿಸುವುದರಿಂದ ಸುಮಾರಾಗಿ 5ರಿಂದ 10 ವರ್ಷಗಳವರೆಗೆ ಬಾಳ್ವಿಕೆ ಬರುತ್ತದೆ. ಕ್ರಮೇಣ ಇವು ಸವೆದುಹೋಗಬಹುದು; ಅಂತಹ ಸಂದರ್ಭಗಳಲ್ಲಿ ದಂತವೈದ್ಯರು ಪುನಃ ತುಂಬಿಸಲು ಸಲಹೆ ನೀಡಬಹುದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವುಗಳಿಂದ ಹಲ್ಲುಗಳ ಮೇಲ್ಮೈ ನಲ್ಲಿರುವ ಬಿರುಕುಗಳಲ್ಲಿ ಆಗುವ ಕುಳಿಗಳನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಎಲ್ಲರಿಗೂ ಕಾಡುವ ಹುಳುಕು ಹಲ್ಲಿನ ಸಮಸ್ಯೆಗೆ ಸೀಲಂಟ್‌ಗಳು ಒಂದು ಉತ್ತಮ ಪರಿಹಾರವಾಗಿದೆ.
-ಡಾ| ಪ್ರಜ್ಞಾ ನವೀನ್
ರೀಡರ್, ಸಮುದಾಯ ದಂತ ಚಿಕಿತ್ಸಾ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.