ಮಧುಮೇಹ: ಪಾದಗಳ ಸ್ವಯಂ ಆರೈಕೆಗೆ ಸಲಹೆಗಳು

ಅಂತಾರಾಷ್ಟ್ರೀಯ ಪಾದ ರೋಗಗಳ ದಿನ- ಅಕ್ಟೋಬರ್‌ 8

Team Udayavani, Oct 9, 2022, 10:06 AM IST

4

ನಮ್ಮ ಪಾದಗಳು ದೇಹದ ಪ್ರಮುಖವಾದ ಒಂದು ಅಂಗ. ಒಂದು ಸ್ಥಳದಿಂದ ಇನ್ನೊಂದು ಕಡೆಗೆ ನಾವು ಚಲಿಸುವುದಕ್ಕೆ ಪಾದಗಳು ಸಹಾಯ ಮಾಡುತ್ತವೆ. ನಮ್ಮ ಪಾದಗಳು ಬಲಿಷ್ಠ ಮತ್ತು ಆರೋಗ್ಯವಾಗಿದ್ದಾಗ ಸ್ವತಂತ್ರವಾಗಿ ಬದುಕುವ ಅವಕಾಶ ನಮಗಿರುತ್ತದೆ. ಆದರೆ ಪಾದಗಳಲ್ಲಿ ಕಿಂಚಿತ್‌ ತೊಂದರೆಯಾದರೂ ಅದು ನಾವು ಎಷ್ಟು ಚಟುವಟಿಕೆಯುಕ್ತರಾಗಿ ಬದುಕುತ್ತೇವೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವು ಒಂದು ದೀರ್ಘ‌ಕಾಲಿಕ ಅನಾರೋಗ್ಯವಾಗಿದ್ದು, ನಮ್ಮ ಕಣ್ಣುಗಳು, ನರಗಳು, ಮೂತ್ರಪಿಂಡಗಳು, ಹೃದಯ, ಪಾದಗಳು ಎಲ್ಲವೂ ಅದರಿಂದ ಬಾಧಿತವಾಗುತ್ತವೆ. ಹೀಗಾಗಿಯೇ ಮಧುಮೇಹವು “ನಿಶ್ಶಬ್ದ ಕೊಲೆಗಾರ’ ಎಂಬ ಕುಖ್ಯಾತಿಯನ್ನು ಹೊಂದಿದೆ. ಇಂದು ವೈದ್ಯಕೀಯ ವೃತ್ತಿಪರರು ಮಧುಮೇಹಕ್ಕೆ ಕೈಗೆಟಕುವ ಮತ್ತು ಯಶಸ್ವಿಯಾದ ಚಿಕಿತ್ಸೆಯ ಆಯ್ಕೆಗಳ ಹುಡುಕಾಟದಲ್ಲಿದ್ದಾರೆ.

ನಾವು ನಡೆದಾಡುವಾಗ ಅಥವಾ ಚಲಿಸುವಾಗ ನಮ್ಮ ಇಡೀ ದೇಹದ ಭಾರವನ್ನು ಹೊರುವಂತೆ ಪಾದಗಳು ವಿನ್ಯಾಸಗೊಂಡಿವೆ. ಮಧುಮೇಹ ರೋಗಿಯು ತನ್ನ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅಶಕ್ತನಾದಾಗ ಅವರ ಪಾದಗಳಲ್ಲಿರುವ ನರಗಳಿಗೆ ಘಾಸಿಯಾಗುತ್ತದೆ. ಇದನ್ನು “ಡಯಾಬಿಟಿಕ್‌ ಪೆರಿಫ‌ರಲ್‌ ನ್ಯೂರೋಪತಿ’ ಎಂದು ಕರೆಯುತ್ತಾರೆ. ಮುಂದುವರಿದು, ಪಾದಗಳ ನರಗಳಿಗೆ ಉಂಟಾಗುವ ಈ ಹಾನಿ (ನ್ಯೂರೋಪತಿ)ಯನ್ನು ಸಂವೇದನ, ಚಲನ ಮತ್ತು ಆಟೊನಾಮಿಕ್‌ ನ್ಯೂರೋಪತಿ ಎಂದು ವರ್ಗೀಕರಿಸಲಾಗಿದೆ.

ಸಂವೇದನ ಅಥವಾ ಸೆನ್ಸರಿ ನ್ಯೂರೋಪತಿಯಲ್ಲಿ ಪಾದಗಳಲ್ಲಿ ಪಾದಗಳು ಜುಮುಗುಟ್ಟುವುದು, ಉರಿ ಅಥವಾ ಚುಚ್ಚಿದಂತಹ ಅಸಹಜ ಸಂವೇದನೆಗಳು ಉಂಟಾಗುತ್ತವೆ. ಚಲನೆಯ ನ್ಯೂರೋಪತಿ ಅಥವಾ ಮೋಟರ್‌ ನ್ಯೂರೋಪತಿಯಲ್ಲಿ ಪಾದಗಳ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಬಹುತೇಕ ಬಾರಿ ರೋಗಿಗಳು ನಡೆಯುವಾಗ ಪಾದರಕ್ಷೆಗಳು ಜಾರುವುದು, ಪಾದಗಳನ್ನು ಭದ್ರವಾಗಿ ಊರುವುದು ಕಷ್ಟವಾಗುತ್ತದೆ ಮತ್ತು ಅಸ್ಥಿರತೆಯ ಅನುಭವವಾಗುತ್ತದೆ. ಪಾದಗಳಲ್ಲಿ ಉಂಟಾಗುವ ಈ ಬದಲಾವಣೆಯಿಂದ ಮಧುಮೇಹಿಗಳ ಪಾದಗಳ ಚರ್ಮದಲ್ಲಿ ಅಸಹಜ ಬದಲಾವಣೆಗಳು ಉಂಟಾಗುತ್ತವೆ. ಹೀಗಾಗಿ ಪಾದಗಳ ಚರ್ಮದ ಬದಲಾವಣೆಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ (ಆಟೊನಾಮಿಕ್‌ ನ್ಯೂರೋಪತಿ).

ಪಾದಗಳ ಕೆಳಭಾಗ ತೀರಾ ಶುಷ್ಕವಾಗುತ್ತದೆ ಮತ್ತು ಹುರುಪೆಗಳೇಳುತ್ತವೆ, ದಪ್ಪವಾಗಿ ಒರಟಾಗುತ್ತದೆ (ಕ್ಯಾಲಸ್‌ ಎನ್ನುತ್ತಾರೆ), ಪಾದಗಳ ಚರ್ಮದಲ್ಲಿ ಬಿರುಕುಗಳು/ ಗಾಯಗಳು ಉಂಟಾಗುತ್ತವೆ (ಫಿಶರ್ ಎನ್ನುತ್ತಾರೆ). ಬಹುತೇಕ ಬಾರಿ ಇದಕ್ಕೆ ಪ್ರಧಾನ ಕಾರಣ ಪಾದಗಳ ನಿರ್ಜಲೀಕರಣ ಮತ್ತು ಅಸಮರ್ಪಕ ಆದ್ರìತೆ ಆಗಿರುತ್ತದೆ. ಇವೆಲ್ಲವನ್ನೂ ಒಟ್ಟಾಗಿ “ಮಧುಮೇಹ ಪಾದ ಸಿಂಡ್ರೋಮ್‌’ ಅಥವಾ ಇಂಗ್ಲಿಷ್‌ನಲ್ಲಿ “ಡಯಾಬಿಟಿಕ್‌ ಫ‌ೂಟ್‌ ಸಿಂಡ್ರೋಮ್‌’ ಎಂದು ಕರೆಯಲಾಗುತ್ತದೆ. ಇಂತಹ ಸಮಸ್ಯೆಯುಳ್ಳವರಿಗೆ ಪಾದಗಳ ಆರೈಕೆಯನ್ನು ಈ ವಿಭಾಗದಲ್ಲಿ ತಜ್ಞರಾಗಿರುವ “ಪೋಡಿಯಾಟ್ರಿಸ್ಟ್‌’ ಅಥವಾ “ಮಧುಮೇಹ ಪಾದ ರೋಗ ತಜ್ಞ’ರು ಒದಗಿಸುತ್ತಾರೆ.

ಪ್ರತೀ ವರ್ಷ “ಅಂತಾರಾಷ್ಟ್ರೀಯ ಮಧುಮೇಹ ಪಾದ ರೋಗಗಳ ದಿನ’ ಅಥವಾ “ಇಂಟರ್‌ನ್ಯಾಶನಲ್‌ ಪೋಡಿಯಾಟ್ರಿ ಡೇ’ಯನ್ನು ಅಕ್ಟೋಬರ್‌ 8ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾಹೆಯ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಂಟರ್‌ ಫಾರ್‌ ಡಯಾಬಿಟಿಕ್‌ ಫ‌ೂಟ್‌ ಕೇರ್‌ ಮತ್ತು ರಿಸರ್ಚ್‌ (ಸಿಡಿಎಫ್ಸಿಆರ್‌) ಭಾರತೀಯ ಪೋಡಿಯಾಟ್ರಿ ಅಸೋಸಿಯೇಶನ್‌ (ಐಪಿಎ)ನ ಕರ್ನಾಟಕ ಆವೃತ್ತಿಯ ಸಹಯೋಗದಲ್ಲಿ ಎಲ್ಲರಿಗೂ ಪಾದ ಆರೋಗ್ಯದ ಶುಭಾಶಯಗಳನ್ನು ಸೂಚಿಸುತ್ತಿದೆ. ಮಧುಮೇಹಿಗಳು ತಮ್ಮ ಪಾದಗಳ ಆರೋಗ್ಯದ ಬಗ್ಗೆ ಎಷ್ಟು ಕಳಕಳಿಯನ್ನು ಹೊಂದಿರುತ್ತಾರೆ ಎಂಬುದನ್ನು ನಾವು ಬಲ್ಲವರಾಗಿದ್ದೇವೆ. ಮಧುಮೇಹ ಪಾದ ಆರೈಕೆಯ ಬಗ್ಗೆ ಆಗಾಗ ಕೆಳಿಬರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಈ ವಿಚಾರದಲ್ಲಿ ಸಾರ್ವಜನಿಕ ಅರಿವನ್ನು ವಿಸ್ತರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

ಮಧುಮೇಹಿಗಳಲ್ಲಿ ಪಾದಗಳ ಆರೋಗ್ಯ: ಆಗಾಗ ಕೇಳಿಬರುವ ಪ್ರಶ್ನೆಗಳು

  1. ಎಲ್ಲ ಮಧುಮೇಹಿಗಳಿಗೂ ಪಾದಗಳ ಆರೈಕೆ ಅಗತ್ಯವೇ?  ಉತ್ತರ: ಪ್ರತೀ ಮಧುಮೇಹಿಯೂ ಪ್ರತೀ 3-6 ತಿಂಗಳುಗಳಿಗೆ ಒಮ್ಮೆ ತನ್ನ ಪಾದಗಳ ಆರೋಗ್ಯವನ್ನು ಮಧುಮೇಹ ಪಾದ ರೋಗಗಳ ಆರೈಕೆಯಲ್ಲಿ ತಜ್ಞರಾದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಪಾದಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೆ ಅವರು ಶಿಫಾರಸು ಮಾಡಲಾದ ಚಿಕಿತ್ಸೆಯನ್ನು ಪಡೆಯಬೇಕು.
  2.  ಮಧುಮೇಹ ಪಾದ ಸಿಂಡ್ರೋಮ್‌ನ ಚಿಹ್ನೆಗಳೇನು? ಉತ್ತರ: ಮಧುಮೇಹ ಪಾದ ಸಿಂಡ್ರೋಮ್‌ ಅನೇಕ ಸ್ವರೂಪಗಳಲ್ಲಿ ಇರಬಹುದು. ರೋಗಿಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ರೋಗಲಕ್ಷಣಗಳೆಂದರೆ, ಪಾದದ ಚರ್ಮ ಶುಷ್ಕವಾಗುವುದು/ ಬಣ್ಣ ಬದಲಾಗುವುದು/ ತುರಿಕೆ, ಪಾದಗಳಲ್ಲಿ ಸೂಜಿಯಿಂದ ಚುಚ್ಚಿದಂತಾಗುವುದು/ ಜುಮುಗುಡುವುದು/ ಉರಿ/ ಜೋಮು ಹಿಡಿದಂತಾಗುವುದು, ಮುಂಪಾದದ ಚಲನೆ ಕಷ್ಟವಾಗುವುದು, ಪಾದರಕ್ಷೆಗಳು ಜಾರುವುದು, ಪಾದಗಳಲ್ಲಿ ಅತಿಯಾದ ಬೆವರುವಿಕೆ, ಪಾದ ಮತ್ತು ಪಾದಗಂಟು ಸುತ್ತಮುತ್ತ ಊತ, ಪಾದದ ಚರ್ಮ ಬಿರುಸಾಗುವುದು, ಆಗಾಗ ಆಣಿ/ಗಾಯ/ ಚರ್ಮ ಒರಟಾಗುವುದು (ಕ್ಯಾಲಸ್‌)/ ಗಾಯ ಇತ್ಯಾದಿ ಕಾಣಿಸಿಕೊಳ್ಳುವುದು.
  3. ನನ್ನ ಮಧುಮೇಹ ಪಾದ ಸಿಂಡ್ರೋಮ್‌ ಪೂರ್ತಿಯಾಗಿ ಗುಣವಾಗುತ್ತದೆಯೇ? ಉತ್ತರ: ಮಧುಮೇಹವು ಬೆಳವಣಿಗೆ ಹೊಂದುವ ಒಂದು ಅನಾರೋಗ್ಯ ಸ್ಥಿತಿಯಾಗಿರುವುದರಿಂದ ಮಧುಮೇಹ ಪಾದ ಸಿಂಡ್ರೋಮ್‌ ಪೂರ್ಣವಾಗಿ ಗುಣ ಹೊಂದುವುದು ಸಂಭಾವ್ಯವಲ್ಲ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸುವುದರಿಂದ ಈ ಲಕ್ಷಣಗಳನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸುವಂತೆ ಮಾಡಬಹುದು.
  4. ನಾನು ನನ್ನ ಪಾದವನ್ನು ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಮುಳುಗಿಸಿ ಇಡಬಹುದೇ? ಉತ್ತರ: ಬೇಡ, ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ಪಾದವನ್ನು ಮುಳುಗಿಸಿ ಇರಿಸಬಾರದು.
  5. ನನ್ನ ಪಾದಕ್ಕೆ ಪೆಡಿಕ್ಯೂರ್‌ ಮಾಡಿಸಿಕೊಳ್ಳಬಹುದೇ? ಉತ್ತರ: ಬೇಡ, ಪಾರ್ಲರ್‌/ ಸೆಲೂನ್‌/ ಸ್ಪಾಗಳಲ್ಲಿ ಪಾದಕ್ಕೆ ಪೆಡಿಕ್ಯೂರ್‌ ಮಾಡಿಸಿಕೊಳ್ಳಬಾರದು.
  6. ನಾನು ಪಾದದ ಬೆರಳುಗಳ ಉಗುರು ಬೆಳೆಸಿಕೊಳ್ಳಬಹುದೇ? ಉತ್ತರ: ಬೇಡ, ಪಾದದ ಬೆರಳುಗಳ ಉಗುರುಗಳನ್ನು ತೀರಾ ಉದ್ದಕ್ಕೆ ಬೆಳೆಸಿಕೊಳ್ಳಬಾರದು. ಉಗುರುಗಳನ್ನು ನೈಲ್‌ಕಟ್ಟರ್‌ ಉಪಯೋಗಿಸಿ ಕತ್ತರಿಸಿಕೊಳ್ಳಬೇಕು, ಅಂಚುಗಳನ್ನು ಸರಿಪಡಿಸಿಕೊಳ್ಳಬೇಕು.
  7. ಪಾದದ ಬೆರಳುಗಳಲ್ಲಿ ಉಗುರುಗಳು ಬಿರುಸಾಗಿದ್ದರೆ/ ತಿರುಚಿಕೊಂಡಿದ್ದರೆ ಏನು ಮಾಡಬೇಕು? ಉತ್ತರ: ಚೂರಿ/ಬ್ಲೇಡ್‌/ ನೈಲ್‌ ಕಟ್ಟರ್‌ ಉಪಯೋಗಿಸಿ ಮನೆಯಲ್ಲಿಯೇ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬಾರದು. ಉಗುರುಗಳು ಉದ್ದಕ್ಕೆ ಬೆಳೆದಿದ್ದರೆ ಅಥವಾ ಬಿರುಸಾಗಿದ್ದು ತಿರುಚಿಕೊಂಡಿದ್ದರೆ ಪೊಡಿಯಾಟ್ರಿ ಆರೈಕೆಗಾಗಿ ವೈದ್ಯರನ್ನು ಭೇಟಿಯಾಗಬೇಕು.
  8. ಬರಿಗಾಲಿನಲ್ಲಿ ನಡೆಯಬಹುದೇ? ಉತ್ತರ: ಬೇಡ. ಮನೆಯೊಳಗೂ ಹೊರಗೂ ಬರಿಗಾಲಿನಲ್ಲಿ ನಡೆಯಬಾರದು. ನಿಮ್ಮ ವೈದ್ಯರು ಸೂಚಿಸಿರುವಂತೆ ಹಿತಕರವಾದ ಪಾದರಕ್ಷೆಗಳನ್ನು ಧರಿಸಿಯೇ ನಡೆದಾಡಬೇಕು. ಹೂದೋಟ/ಬೀಚ್‌/ ಧಾರ್ಮಿಕ ಸ್ಥಳಗಳಲ್ಲಿ ಕೂಡ ಬರಿಗಾಲಿನಲ್ಲಿ ನಡೆದಾಡುವುದು ಬೇಡ.
  9. ದಿನವೂ ಪಾದರಕ್ಷೆಗಳನ್ನು ಏಕೆ ತಪಾಸಣೆ ಮಾಡಿಕೊಳ್ಳಬೇಕು? ಉತ್ತರ: ಪಾದದ ಅಡಿಭಾಗದಲ್ಲಿ ಉಂಟಾಗುವ ಗಾಯ/ ಬಿರುಕುಗಳು ಅನೇಕ ಮಧುಮೇಹಿಗಳ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಿ ದಿನವೂ ಸಣ್ಣ ಕನ್ನಡಿ ಉಪಯೋಗಿಸಿ ಪಾದ, ಪಾದದ ಅಡಿಭಾಗವನ್ನು ದಿನವೂ ತಪಾಸಣೆ ಮಾಡಿಕೊಳ್ಳಬೇಕು.
  10. ನಿಮ್ಮ ಪಾದವನ್ನು ಸ್ವಯಂ ತಪಾಸಣೆ ಮಾಡಿಕೊಳ್ಳುವುದು ಹೇಗೆ? ಉತ್ತರ: ನಿಮ್ಮ ಪಾದವನ್ನು ನೀವೇ ತಪಾಸಣೆ ಮಾಡಿಕೊಳ್ಳಬಹುದು. ಕುರ್ಚಿ/ ಸೋಫಾದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಒಂದು ಕಾಲನ್ನು ಇನ್ನೊಂದರ ಮೇಲೆ ಎತ್ತಿಟ್ಟುಕೊಂಡು ಸಣ್ಣ ಕನ್ನಡಿ ಉಪಯೋಗಿಸಿ ಪಾದದ ಅಡಿಭಾಗದ ಚರ್ಮವನ್ನು ಪರೀಕ್ಷಿಸಿಕೊಳ್ಳಿ. ದೃಷ್ಟಿ ದೋಷ ಅಥವಾ ಚಲನೆಗೆ ಕಷ್ಟವಾಗಿದ್ದರೆ ಕುಟುಂಬ ಸದಸ್ಯರು/ ಆರೈಕೆದಾರರ ಸಹಾಯವನ್ನು ಪಡೆದು ನಿಯಮಿತವಾಗಿ ಪಾದದ ತಪಾಸಣೆಯನ್ನು ಮಾಡಿಕೊಳ್ಳಿ.

ನನ್ನ ಮಧುಮೇಹ ಪಾದಕ್ಕೆ ಎಲ್ಲಿ ಪೋಡಿಯಾಟ್ರಿ ಆರೈಕೆಯನ್ನು ಪಡೆದುಕೊಳ್ಳಬಹುದು? ಉತ್ತರ: ಮಾಹೆ – ಮಣಿಪಾಲದ ಕಸ್ತೂರ್‌ ಬಾ ಆಸ್ಪತ್ರೆಯಲ್ಲಿ ಇರುವ ಸೆಂಟರ್‌ ಫಾರ್‌ ಡಯಾಬಿಟಿಕ್‌ ಫ‌ೂಟ್‌ ಕೇರ್‌ ಆ್ಯಂಡ್‌ ರಿಸರ್ಚ್‌ (ಸಿಡಿಎಫ್ಸಿಆರ್‌) ಮಧುಮೇಹಿ ಪಾದ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಗೆ ಸಮಗ್ರ ನಿರ್ವಹಣ ಸೇವೆಗಳನ್ನು ಒದಗಿಸುತ್ತಿದೆ. ನಿಮ್ಮ ನಿಯಮಿತ ತಪಾಸಣೆ ಮತ್ತು ಸಮಯೋಚಿತ ಚಿಕಿತ್ಸೆಗಾಗಿ ನೀವು ಈ ವಿಭಾಗವನ್ನು ಸಂದರ್ಶಿಸಬಹುದು. 0820-29-23054 ಸಂಖ್ಯೆಯನ್ನು ಸಂಪರ್ಕಿಸಿ ಸಂದರ್ಶನವನ್ನು ಕಾಯ್ದಿರಿಸಿಕೊಳ್ಳಬಹುದು.

ಮೇಘಾ ನಟರಾಜ್‌, ಪಿಎಚ್‌ಡಿ ಸ್ಕಾಲರ್‌,

-ಡಾ| ಜಿ. ಅರುಣ್‌ ಮಯ್ಯ, ಮುಖ್ಯಸ್ಥರು, ಸೆಂಟರ್‌ ಫಾರ್‌ ಡಯಾಬಿಟಿಕ್‌ ಫ‌ೂಟ್‌ ಕೇರ್‌ ಮತ್ತು ರಿಸರ್ಚ್‌ (ಸಿಡಿಎಫ್ಸಿಆರ್‌) ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸರು, ಸೆಂಟರ್‌ ಫಾರ್‌ ಡಯಾಬಿಟಿಕ್‌ ಫ‌ೂಟ್‌ ಕೇರ್‌ ಆ್ಯಂಡ್‌ ರಿಸರ್ಚ್‌, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.