ಮಧುಮೇಹ: ನಾವು ತಿಳಿಯಬೇಕಾದದ್ದು ಏನು?


Team Udayavani, Oct 14, 2018, 6:00 AM IST

diabetes-13.jpg

ಹಿಂದಿನ ವಾರದಿಂದ- ವ್ಯಾಯಾಮ ಮತ್ತು ಸೇವಿಸುವ ಆಹಾರಗಳ ನಡುವೆ ಉತ್ತಮ ಸಮತೋಲನ ಹೊಂದಿರುವುದು ಕೂಡ ಆವಶ್ಯಕ. ಇದು ಸ್ನಾಯುಶಕ್ತಿ ಮತ್ತು ಸೂಕ್ತ ದೇಹತೂಕವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ನಡಿಗೆ, ಜಾಗಿಂಗ್‌ನಂತಹ ಮಧ್ಯಮ ತೀವ್ರತೆಯ ವ್ಯಾಯಾಮವನ್ನು 30 ನಿಮಿಷಗಳ ಕಾಲ ಮಾಡುವುದು ಯೋಗ್ಯವಾಗಿದೆ.

ಮಧುಮೇಹವನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸುವುದು ಕೂಡ ರೋಗ ನಿರ್ವಹಣೆಯಲ್ಲಿ ಅತ್ಯಂತ ಪ್ರಾಮುಖ್ಯವಾಗಿದೆ. ಇದರಿಂದ ಕಾಯಿಲೆಯ ಆರಂಭಿಕ ಹಂತದಿಂದಲೇ ಗ್ಲೆ„ಸೇಮಿಕ್‌ ನಿಯಂತ್ರಣವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಇದು “ಮೆಟಬಾಲಿಕ್‌ ಮೆಮರಿ’ ಎಂಬುದಾಗಿ ಕರೆಯಲ್ಪಡುವ ವಿದ್ಯಮಾನದ ಮೂಲಕ ಮಧುಮೇಹದ ಸಂಕೀರ್ಣ ಸಮಸ್ಯೆಗಳು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಹಾಗೂ ಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಉತ್ತಮಗೊಳಿಸುತ್ತದೆ. ಮಧುಮೇಹದ ವಿಧ ಮತ್ತು ರೋಗಿಯ ದೇಹಸ್ವಭಾವಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ವ್ಯಕ್ತಿ ನಿರ್ದಿಷ್ಟಗೊಳಿಸಬೇಕಾಗುತ್ತದೆ. 

ಮಧುಮೇಹಕ್ಕೆ ಒದಗಿಸಲಾಗುವ ಔಷಧ ಚಿಕಿತ್ಸೆಯು ಮಧುಮೇಹದಲ್ಲಿ ಅಡಕವಾಗಿರುವ ವಿವಿಧ ಚಯಾಪಚಯ ಸಮಸ್ಯೆಗಳನ್ನು ಉತ್ತರಿಸುವ ಹಲವು ವಿಧದ ಔಷಧಗಳು ಮತ್ತು ಇನ್ಸುಲಿನನ್ನು ಒಳಗೊಂಡಿರುತ್ತದೆ.

ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ತಡೆಯುವುದಕ್ಕಾಗಿ ಚಿಕಿತ್ಸೆಯ ಸಂದರ್ಭದಲ್ಲಿ ಹಾಕಿಕೊಳ್ಳಲಾಗಿರುವ ಗುರಿಗಳನ್ನು ಸಾಧಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ನಿಗದಿತ ಅವಧಿಗಳಲ್ಲಿ ತಪಾಸಣೆಯೂ ಮಧುಮೇಹದ ನಿಭಾವಣೆಯಲ್ಲಿ ಅತ್ಯಂತ ಮುಖ್ಯವಾಗಿದೆ. ಮಧುಮೇಹದ ಬಹುತೇಕ ಸಮಸ್ಯೆಗಳು ಆಂತರಿಕವಾಗಿ ಪ್ರಗತಿ ಹೊಂದುವಂಥವಾಗಿದ್ದು, ಯಾವುದೇ ಚಿಹ್ನೆಗಳನ್ನು ತೋರ್ಪಡಿಸದೆ ಇರುವುದರಿಂದ ಅವುಗಳನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದಕ್ಕಾಗಿ ನಿಗದಿತ ಅವಧಿಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಧುಮೇಹವು ಒಂದು ದೀರ್ಘ‌ಕಾಲಿಕ ಆರೋಗ್ಯ ಸಮಸ್ಯೆಯಾಗಿದ್ದು, ಮಧುಮೇಹದ ವಿವಿಧ ಅಂಶಗಳು ಮತ್ತು ವಿಚಾರಗಳ ಬಗ್ಗೆ ಮಧುಮೇಹ ಪೀಡಿತರಿಗೆ ಅರಿವು ಹಾಗೂ ಮಾಹಿತಿಯನ್ನು ಒದಗಿಸಬೇಕು. ಅಲ್ಲದೆ ಸ್ವಯಂ ನಿರ್ವಹಣೆಯ ನಿಟ್ಟಿನಲ್ಲಿ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಚಿಕಿತ್ಸೆಯ ಯೋಜನೆಯಲ್ಲಿ ಅವರನ್ನು ಸೇರಿಸಿಕೊಳ್ಳಬೇಕು. 

ಟೈಪ್‌ 2 ಮಧುಮೇಹವು ಅತ್ಯಂತ ಕಳವಳಕಾರಿ ವೇಗದಲ್ಲಿ ವೃದ್ಧಿಸುತ್ತಿರುವುದಕ್ಕೆ ಪ್ರಧಾನ ಕಾರಣ ಪ್ರಸ್ತುತ ಜೀವನಶೈಲಿಯೇ ಆಗಿದೆ. ಆರೋಗ್ಯಯುತ ಆಹಾರ ಶೈಲಿ, ಸಮರ್ಪಕ ವ್ಯಾಯಾಮಗಳನ್ನು ಎಳೆಯ ವಯಸ್ಸು ಮತ್ತು ಹದಿಹರೆಯದಲ್ಲಿ ರೂಢಿಸಿಕೊಳ್ಳುವುದು ಮಧುಮೇಹವೆಂಬ ಜಾಗತಿಕ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸಲು ಅತ್ಯಂತ ಮುಖ್ಯವಾಗಿದೆ. ರಕ್ತದಲ್ಲಿ ಗುÉಕೋಸ್‌ ಅಂಶದ ಮೇಲೆ ಆದಷ್ಟು ಬೇಗನೆ ಪರಿಣಾಮಕಾರಿಯಾಗಿ ನಿಯಂತ್ರಣ ಸಾಧಿಸುವುದು ಮಧುಮೇಹದ ಪ್ರಗತಿ ಹಾಗೂ ಸಂಕೀರ್ಣ ಸಮಸ್ಯೆಗಳ ತೀವ್ರತೆಯನ್ನು ಹದ್ದುಬಸ್ತಿನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಮಧುಮೇಹದ ವಿರುದ್ಧ ಈ ಕ್ಷಣದಿಂದಲೇ ಸಕ್ರಿಯರಾಗೋಣ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.