ಮಗುವಿನ ಜತೆ ಸಂಭಾಷಣೆ ಶಿಕ್ಷಕರೇ,ಪೋಷಕರೇ ಗಮನಿಸಿ
Team Udayavani, Mar 18, 2018, 6:15 AM IST
“”ಈ ದಿನ ಹೇಗೆ ಕಳೀತು ರಾಘವ”?
“”ಇವತ್ತು ಶಾಲಿನಿ ಟೀಚರ್ ನನ್ನ ಬಯ್ದು ಬಿಟ್ರಾ”.
“”ಹೌದಾ, ಯಾಕೆ ಏನಾಯ್ತು?”
“”ನನ್ನನ್ನ ಜಾನ್ ದೂಡಿದ.”
“”ಹೌದಾ…….. ಯಾಕೆ?”
“”ನಾನು ವರಾಂಡದಲ್ಲಿ ನಡ್ಕೊಂಡ್ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ”
“”ಅಯ್ಯೋ ದೇವೆ! ಅದು ಒಳ್ಳೇದಲ್ಲ, ಹಾಗ್ ಮಾಡಾರ್ದು!, ಸರಿ ಆಮೇಲೇನಾಯ್ತು?”
“”ಶಾಲಿನಿ ಟೀಚರ್ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು.”
“”ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇìಕು ಆಯ್ತಾ” ಇದು ರಾಘವ ಮತ್ತು ಅವನ ಅಮ್ಮನ ನಡುವೆ ನಡೆದ ಸಂಭಾಷಣೆ. ಪಾರಿಭಾಷಿಕ ಉದ್ದೇಶಕ್ಕಾಗಿ ನಾನು ಇದನ್ನು “”ವೈಯಕ್ತಿಕ ವಿವರಣೆ” ಎಂಬುದಾಗಿ ಕರೆಯುತ್ತೇನೆ. ನಾವೆಲ್ಲರೂ ನಮ್ಮ ಮಕ್ಕಳ ಜೊತೆ ಮಾತುಕತೆ ನಡೆಸುತ್ತೇವೆ. ಆದರೆ ಈ ರೀತಿಯ ಮಾತುಕತೆಗಳಿಂದ ಮಗುವಿನ ಶೈಕ್ಷಣಿಕ ಕೌಶಲಕ್ಕೆ ಅಥವಾ ಬೆಳವಣಿಗೆಗೆ ಪ್ರಯೋಜನವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಅಥವಾ ಹಾಗೆ ಭಾವಿಸುವುದು ಕೇವಲ ಭ್ರಮೆ ಅಥವಾ ತಪ್ಪು$ ಕಲ್ಪನೆ ಎಂಬುದು ನಿಮ್ಮ ಭಾವನೆಯೇ? ಇಂತಹ ಪ್ರಶ್ನೆಗಳು ನಿಮ್ಮದಾಗಿದ್ದಲ್ಲಿ ಈ ಲೇಖನದಲ್ಲಿವೆ ಕೆಲವು ಉತ್ತರಗಳು.
ಖಂಡಿತವಾಗಿಯೂ ಅದೊಂದು ತಪ್ಪು ಕಲ್ಪನೆ ಅಲ್ಲ ಮತ್ತು ಒಂದು ಘಟನೆ ಅಥವಾ ವಿಷಯವನ್ನು ವಿವರಿಸುವುದು ಅಂದರೆ ಖಂಡಿತವಾಗಿಯೂ ಅದೊಂದು ಬಹುಮುಖ್ಯ ಕೌಶಲ. ವಿವರಿಸುವ ಕೌಶಲದ ಬಗ್ಗೆ ಸಂಶೋಧಕರು ಸಂಶೋಧನೆಯಲ್ಲಿ ತೊಡಗಿದ್ದು, ಮಕ್ಕಳ ಜೊತೆಗೆ ನಾವು ದಿನನಿತ್ಯ ನಡೆಸುವ ಸಂವಹನದಲ್ಲಿನ ವಿವರಣಾ ಕೌಶಲ ಮತ್ತು ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಕೆಲವು ಕುತೂಹಲಕಾರಿ ಉದಾಹರಣೆಗಳ ಸಹಿತ ವಿವರಿಸುತ್ತಾರೆ.ನಾವೀಗ ಈ ಹೇಳಿಕೆಯ ಜೊತೆಗೆ ಆರಂಭಿಸೋಣ!
ಒಂದು ವಿವರಣೆ ಅನ್ನುವುದು ಒಬ್ಬ ಮಗುವಿನಿಂದ ಬಂದುದಾಗಿದ್ದರೆ ಅದು ಅಸಲಿಯಾಗಿರುತ್ತದೆ – ಯಾಕೆಂದರೆ ಅದು ಆ ವಿಷಯಕ್ಕೆ ಆ ಮಗುವಿನ ಮನಸ್ಸು ಸ್ಪಂದಿಸಿದ ರೀತಿ ಆಗಿರುತ್ತದೆ
– ಚಾರ್ಲೊಟ್ ಮೇಸನ್.
1. ಕಾಲ್ಪನಿಕ ಕತೆಗಳನ್ನು ಹೇಳುವುದು ಮತ್ತು ಅವುಗಳನ್ನು ಮರು-ನಿರೂಪಿಸುವುದು.
2. ಘಟನೆಗಳನ್ನು ಕ್ರಮಬದ್ಧವಾಗಿ ವಿವರಿಸುವುದು
3. ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಘಟನೆಯನ್ನು ವಿವರಿಸುವುದು
ಇವು ವಿವಿಧ ರೀತಿಯ ವಿವರಣಾ ಕೌಶಲಗಳು. ಮಕ್ಕಳಲ್ಲಿ ಸಾಮಾನ್ಯ ವಿವರಣಾ ಕೌಶಲ ಆರಂಭವಾಗುವುದಕ್ಕೆ ಬಹಳ ಮೊದಲೆ ವೈಯಕ್ತಿಕ ವಿವರಣಾ ಕೌಶಲ ಬೆಳೆದಿರುತ್ತದೆ. ಒಂದು ಮಗುವಿನಲ್ಲಿರುವ ವಿವರಣಾ ಕೌಶಲ ಅಥವಾ ವಿವರಿಸುವ ಕಲೆಯು ಅದರ ಶಿಕ್ಷಣ, ಉತ್ತಮ ಸಾಮಾಜಿಕ ಸಂವಹನ ಮತ್ತು ತಾತ್ತಿಕ ಕಾರಣಗಳ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಕಾಲ್ಪನಿಕ ಕಥೆ ಹೇಳುವುದು ಮತ್ತು ಅದನ್ನು ಮರು-ನಿರೂಪಣೆ ಮಾಡುವುದು ಇಲ್ಲಿ ಮಗುವು ತಾನು ಕೇಳಿದ ಸಂಗತಿಗಳನ್ನು ಕಲ್ಪಿಸಿಕೊಳ್ಳುತ್ತದೆ ಅನ್ನುವುದು ಬಹಳ ಕುತೂಹಲಕಾರಿಯಾದ ಅಂಶ. ಒಂದು ಸಂಗತಿಯನ್ನು ಮಗುವು ಕಥೆಯಲ್ಲಿ ಕೇಳಿರಬಹುದು ಅಥವಾ ಕಾಟೂನ್, ಸಿನೆಮಾಗಳಲ್ಲಿ ನೋಡಿರಬಹುದು. ಕೆಲವು ಬಾರಿ ಮಕ್ಕಳು ಆ ಸಂಗತಿಗಳನ್ನು ತಮ್ಮದೇ ಅನುಭವ ಎನ್ನುವಂತೆ ಹೇಳುತ್ತಾರೆ. ಜಾನ್‌ನ ಒಂದು ಕಾಲ್ಪನಿಕ ಕಥೆ ಇಲ್ಲಿದೆ.
ಒಮ್ಮೆ ನಮ್ಮ ತೋಟಕ್ಕೆ ಒಂದು ನಾಗರಹಾವು ಬಂದಿತ್ತು. ಅದು ತುಂಬಾ ದೊಡ್ಡದಿತ್ತು ಮತ್ತು ಭಾರಿ ಉದ್ದ ಇತ್ತು. ನನ್ನ ಅಪ್ಪ ಆಫೀಸ್‌ಗೆ ಹೋಗಿದ್ರು, ನನ್ನ ಅಮ್ಮ ಮತ್ತು ಅಜ್ಜಿಗೆ ಆ ಹಾವನ್ನು ನೋಡಿ ತುಂಬಾ ಭಯ ಆಯ್ತು, ಅವ್ರು ಹೆದರಿಕೊಂಡು ಮನೆಯೊಳಗೆ ಓಡಿಬಿಟ್ರಾ. ನಾನು ಕೂಡ್ಲೆ ನಮ್ಮ ಅಡೆ ಕೋಣೆಗೆ ಹೋದೆ ಮತ್ತು ಚೋಟಾ ಭೀಮ್‌ನ ಹಾಗೆ ಒಂದು ಲಡ್ಡುವನ್ನು ತಿಂದೆ. ನಂಗೆ ಶಕ್ತಿ ಬಂತು. ನಾನು ಆ ಹಾವನ್ನು ಎತ್ತಿ ಆ ಕಡೆ ಬಿಸಾಡಿ ಬಿಟ್ಟೆ, ನಮ್ಮ ಮನೆಯವೆÅಲ್ಲಾ ನಂಗೆ ಒಳ್ಳೆ ಹುಡುಗ ಅಂತಂದ್ರುಕ್ರಮಬದ್ಧವಾಗಿ ಘಟನೆಯನ್ನು ವಿವರಿಸುವುದು ಅಂದರೆ ಮುಂದೆ ಜರಗಲಿರುವ ಸಂಗತಿಗಳನ್ನು ಅವುಗಳು ಜರಗುವ ಸರಣಿಯಲ್ಲಿಯೇ ಅಥವಾ ಅವು ಜರುಗಬೇಕಾಗಿರುವ ಯೋಜಿತ ರೀತಿಯಲ್ಲಿಯೇ ಆ ಘಟನೆಗಳನ್ನು ವಿವರಿಸುವುದು.
ಈ ಬೇಸಗೆ ರಜೆಯಲ್ಲಿ ನನ್ನ ಅಪ್ಪ, ನಮ್ಮ ಮನೆಯವರನ್ನೆಲ್ಲಾ ಟ್ರಿಪ್ ಕರ್ಕೊಂಡು ಹೋಗ್ಲಿಕ್ಕೆ ಯೋಜಿಸಿದ್ದಾರೆ. ಮೊದಲು ಊಟಿಗೆ, ನಂತರ ಕೊಡೈಕ್ಕೆನಾಲ್‌ಗೆ ಮತ್ತು ಕೊನೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ. ನನ್ನ ಅಪ್ಪ ನನಗಾಗಿ ತುಂಬಾ ಆಟಿಕೆ, ಕಾರ್ ಮತ್ತು ಐಸ್ ಕ್ರೀಂ ಅನ್ನು ತೆಗೆದುಕೊಡ್ತೇನೆ ಅಂತ ಹೇಳಿದ್ದಾರೆ. ರಜಾ ದಿನ ಬರೋವರೆಗೆ ಕಾಯೋದಿಕ್ಕೆ ನನೆ ಸಾಧ್ಯವೇ ಇಲ್ಲ.
ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಸಂಗತಿಯನ್ನು ವಿವರಿಸುವುದ ರೊಂದಿಗೆ ಈ ಲೇಖನ ಆರಂಭವಾಗಿತ್ತು. ಅಲ್ಲಿ ಆ ಮಗುವು ತನ್ನ ನಿತ್ಯ ಜೀವನದಲ್ಲಿ ಘಟಿಸಿದ ಅಥವಾ ತನಗೆ ಎದುರಾದ ಸನ್ನಿವೇಶವನ್ನು ವಿವರಿಸುತ್ತಿದ್ದ.
ಕಥನ ನಿರೂಪಣೆ: ಅಂದರೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಚೋದನೆ ಸಿಕ್ಕಾಗ ತನಗಾದ ಒಂದು ವೈಯಕ್ತಿಕ ಅನುಭವವನ್ನು ಭೂತಕಾಲ ಪ್ರಯೋಗದಲ್ಲಿ ವಿವರಿಸುವುದು. (ಹೆಡರ್ಗ್ ಹಾಗೂ ವೆಸ್ಟ್‌ಬೈ 1993).
ಅಮ್ಮ : “”ರಾಮ್, ನಿಂಗೆ ನೆನಪಿದೆಯಾ, ಕಳೆದ ಶುಕ್ರವಾರ ನಾವು ಸರ್ಕಸ್ ನೋಡ್ಲಿಕ್ಕೆ ಹೋಗಿದ್ದಾಗ ಏನಾಗಿತ್ತು ಅಂತ?
ರಾಮ್: ಹೌದಮ್ಮಾ, ಅಲ್ಲಿ ಆನೆಗಳು, ಕುದುರೆ, ನಾಯಿಗಳು ಇದುÌ. ಅವುಗಳು ಹಾರೋದು ಮತ್ತು ಆಟವಾಡೋದು ನೋಡೋದಿಕ್ಕೆ ಬಹಳ ಮಜವಾಗಿತ್ತು. ಆನೆಗಳು ಬೈಸಿಕಲ್ ಓಡಿಸ್ತಾ ಇದ್ವಲ್ಲ ನಂಗೆ ಅದು ಬಹಳ ಇಷ್ಟ ಆಯ್ತು. ಅಮ್ಮ ನನೆY ಆಟ ಆಡೋದಿಕ್ಕೆ ಒಂದು ಆನೇನ ನಾವು ಯಾವತ್ತು ತರೋದು?
ಕಾರಣ ವಿವರಣೆ: ಒಂದು ವೈಯಕ್ತಿಕ ಅನುಭವವನ್ನು ಯಾವ ಪ್ರಚೋದನೆಯೂ ಇಲ್ಲದೆ ವಿವರಿಸುತ್ತಾ ಸಾಗುವುದು. ಆ ಅನುಭವವು ಸಾಮಾನ್ಯವಾಗಿ ಕೇಳುಗನು ಹಂಚಿಕೊಂಡದ್ದಾಗಿರುವುದಿಲ್ಲ. (ಹೆಡºರ್ಗ್ ಹಾಗೂ ವೆಸ್ಟ್‌ಬೈ 1993)
ಈ ದಿನ ಹೇಗೆ ಕಳೀತು ರಾಘವ? ಇವತ್ತು ಶಾಲಿನಿ ಟೀಚರ್ ನನ್ನ ಬಯ್ದು ಬಿಟ್ರಾ. ಹೌದಾ, ಯಾಕೆ ಏನಾಯ್ತು? ನನ್ನನ್ನ ಜಾನ್ ದೂಡಿದ. ಹೌದಾ…….. ಯಾಕೆ?ನಾನು ವರಾಂಡದಲ್ಲಿ ನಡ್ಕೊಂಡ್ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ ಅಯ್ಯೋ ದೇವೆ! ಅದು ಒಳ್ಳೇದಲ್ಲ, ಹಾಗ್ ಮಾಡಾರ್ದು!, ಸರಿ ಆಮೇಲೇನಾಯ್ತು? ಶಾಲಿನಿ ಟೀಚರ್ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು. ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇಕು ಆಯ್ತಾ.
ವಿಲ್ಲಿಯ ಲ್ಯಾಬೋವ್ ಅನ್ನುವವರು ವೈಯಕ್ತಿಕ ವಿವರಣೆಯ ಪ್ರಪ್ರಥಮ ಮತ್ತು ಬಹುದೊಡ್ಡ ಸಂಶೋಧಕರು. ನಾಲ್ಕು ಅಂಶಗಳನ್ನು ಆಧರಿಸಿ ಅವರು ವಿವರಣಾ ಕೌಶಲದ ಬೆಳವಣಿಗೆಯ ಸರಣಿಯನ್ನು ಅಭಿವೃದ್ಧಿಪಡಿಸಿದರು.
1. ವಸ್ತುಸ್ಥಿತಿ (ವಸ್ತು ವಿಷಯದ ಬಗೆಗಿನ ವಿವರಣಾತ್ಮಕ ಮಾಹಿತಿ)
2. ಕ್ರಿಯೆ(ಭಿನ್ನವಾದ, ಸರಣಿ ಕ್ರಮದ ಭೂತಕಾಲದ ಘಟನೆಗಳು)
3. ವಿಶ್ಲೇಷಣೆ : ನಡೆದ ಘಟನೆಯ ಬಗ್ಗೆ ಹೇಗೆ, ಎಲ್ಲಿ, ಯಾಕೆ, ಏನು ಮತ್ತು ಯಾರು ಎಂಬ ಬಗ್ಗೆ ವಿವರಿಸುವಾತನ ಅನಿಸಿಕೆ
4. ನಿರ್ಣಯ ಮತ್ತು ಪರಿಸಮಾಪ್ತಿ .
ಮಕ್ಕಳಲ್ಲಿ ಕಾಲ್ಪನಿಕ ವಿವರಣೆಯ ಅಂಶ ಬೆಳೆಯುವ ಮೊದಲೆ ಅವರ ವೈಯಕ್ತಿಕ ವಿವರಣೆಯ ಬೆಳವಣಿಗೆಯು ರಚನಾತ್ಮಕ ಜಟಿಲತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುತ್ತಾರೆ ವಿಲಿಯಂ ಲ್ಯಾಬೋವ್.
ಡಾ| ವೆಂಕಟರಾಜ ಐತಾಳ್ ಯು.,
ಪ್ರೊಫೆಸರ್, ಸ್ಪೀಚ್ ಎಂಡ್ ಹಿಯರಿಂಗ್ ವಿಭಾಗ,
SOAHS ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.