ಸ್ಮಾರ್ಟ್‌ಫೋನ್‌ ನಮ್ಮ ಮಕ್ಕಳನ್ನು ಸ್ಮಾರ್ಟ್‌ ಆಗಿಸುತ್ತಿವೆಯೇ?


Team Udayavani, Nov 25, 2018, 6:00 AM IST

kid-smartphone.jpg

ಮೊಬೈಲ್‌ ಫೋನು, ಲ್ಯಾಪ್‌ಟಾಪ್‌, ಐಪ್ಯಾಡ್‌ ಇತ್ಯಾದಿ ಡಿಜಿಟಲ್‌ ಡಿವೈಸ್‌ಗಳು ಇವತ್ತು ನಮ್ಮ ದೈನಿಕ ಬದುಕಿನ ಅವಿಭಾಜ್ಯ ಅಂಗವಾಗಿವೆ. ಮಕ್ಕಳು ಆಟವಾಡಲು ಅಥವಾ ಓಡಲು ಕಲಿಯುವುದಕ್ಕೆ ಮುನ್ನವೇ ಇಂಟರ್‌ನೆಟ್‌ ಉಪಯೋಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅವರು ಇವತ್ತು ಆಡುವ ಆಟ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಇಂಟರ್‌ನೆಟ್‌ಗೆ ಸೀಮಿತವಾಗಿದೆ. 

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳು ಆಟಿಕೆಗಳ ಸ್ಥಾನವನ್ನು ಆಕ್ರಮಿಸಿದ್ದು, ಮನೋರಂಜನೆಗಾಗಿ ಬಳಕೆಯಾಗುತ್ತಿವೆ. ಮಕ್ಕಳಿಗೆ ಈಗ ಹೊರಗೆ ಹೋಗಿ ಆಟವಾಡುವುದರಲ್ಲಿ ಆಸಕ್ತಿ ಉಳಿದಿಲ್ಲ; ಈ ಸ್ಮಾರ್ಟ್‌ ಡಿಜಿಟಲ್‌ ಡಿವೈಸ್‌ಗಳಿಗೆ ಅಂಟಿಕೊಂಡು ತಾಸುಗಟ್ಟಲೆ ಬೇಕಾದರೆ ಕಳೆಯುತ್ತಾರೆ. 

ತಮ್ಮ ಕೆಲಸಕಾರ್ಯ, ಕರ್ತವ್ಯಗಳನ್ನು ಮಕ್ಕಳ ರಗಳೆ ಇಲ್ಲದೆ ನಿಭಾಯಿಸುವುದಕ್ಕಾಗಿ ಬಾಲ್ಯದಲ್ಲಿಯೇ ಅವರ ಕೈಗೆ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳನ್ನು ನೀಡುವುದು ಹೆತ್ತವರು ಮಾಡುವ ಗಂಭೀರ ಪ್ರಮಾದಗಳಲ್ಲಿ ಒಂದು. ತಮ್ಮ ಆರೆಂಟು ತಿಂಗಳ ಶಿಶು ಸ್ಮಾರ್ಟ್‌ಫೋನ್‌ ಉಪಯೋಗಿಸುವುದಕ್ಕೆ ತಿಳಿದುಕೊಂಡಿದೆ ಎಂಬುದಾಗಿ ಅವರು ಹೆಮ್ಮೆ ಪಡುತ್ತಾರೆ. ಎಳೆಯ ಮಕ್ಕಳ ಪ್ರಗತಿ, ಬೆಳವಣಿಗೆಯ ಮೇಲೆ ಇದರಿಂದ ಎಂತಹ ದುಷ್ಪರಿಣಾಮ ಉಂಟಾಗುತ್ತದೆ   ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಒಂದು ಸ್ಪರ್ಶದ ಮೂಲಕ ಅಗಾಧ ಮಾಹಿತಿಯನ್ನು ತೆಗೆದುಕೊಡಬಲ್ಲ ಈ ಸ್ಮಾರ್ಟ್‌ ಡಿವೈಸ್‌ಗಳಿಂದ ಅಪಾರ ಪ್ರಯೋಜನ ಇದ್ದೇ ಇದೆ. ಶೈಕ್ಷಣಿಕ ಉದ್ದೇಶದ ಅಹಿಂಸಾತ್ಮಕ ವಿಷಯಗಳುಳ್ಳ ಕಾಟೂìನ್‌ಗಳು ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪ್ರಭಾವ ಬೀರುವುದಿಲ್ಲ ಎಂಬುದಾಗಿ ಅಧ್ಯಯನಗಳು ಹೇಳಿವೆ. ಆದರೆ ಯಾವುದೇ ಅಡೆತಡೆ, ನಿರ್ಬಂಧ ಇಲ್ಲದೆ ಸ್ಮಾರ್ಟ್‌ ಡಿವೈಸ್‌ಗಳು ಮಕ್ಕಳ ಕೈಗೆಟಕುವುದು ಅವರನ್ನು ನಿಜಕ್ಕೂ “ಸ್ಮಾರ್ಟ್‌’ ಆಗಿಸುತ್ತಿವೆಯೇ ಎಂಬುದು ಮೂಲ ಪ್ರಶ್ನೆ. 

ಮಗುವಿನ 0ಯಿಂದ 7ರ ತನಕದ ವಯೋಮಾನ ಅತ್ಯಂತ ನಿರ್ಣಾಯಕವಾದದ್ದು ಎಂಬುದಾಗಿ ಹೇಳಲಾಗುತ್ತದೆ. ಯಾಕೆಂದರೆ, ಮಗು ತನ್ನ ಬಹುತೇಕ ಭಾಷಿಕ, ಸಾಮಾಜಿಕ, ಗ್ರಹಣಾತ್ಮಕ, ಸಂವೇದನಾತ್ಮಕ, ದೈಹಿಕ ಮತ್ತು ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದು ಇದೇ ಅವಧಿಯಲ್ಲಿ. ಈ ಬೆಳವಣಿಗೆಗಳು ಪರಿಸರದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ನಡೆಯುತ್ತಾ ಹೋಗುತ್ತವೆ. ಮಕ್ಕಳು ಸ್ಮಾರ್ಟ್‌ ಡಿವೈಸ್‌ಗಳ ಪರದೆಗೆ ಅಂಟಿಕೊಂಡು ಹೆಚ್ಚು ಕಾಲ ಕಳೆಯುವುದು ಭವಿಷ್ಯದಲ್ಲಿ ಅವರಲ್ಲಿ ಏಕಾಗ್ರತೆಯ ಕೊರತೆ, ವರ್ತನಾತ್ಮಕ ಸಮಸ್ಯೆ, ಸಾಮಾಜಿಕ ಸಂವಹನ ಕೌಶಲದ ಕೊರತೆ, ಭಾಷೆ ಬೆಳವಣಿಗೆ ವಿಳಂಬವಾಗುವುದು ಹಾಗೂ ಆಟಿಸಂನಂತಹ ಲಕ್ಷಣಗಳು ಉಂಟಾಗಲು ಕಾರಣವಾಗಬಲ್ಲುದು ಎಂಬುದಾಗಿ ಅಧ್ಯಯನಗಳು ತೋರಿಸಿಕೊಟ್ಟಿವೆ. ಮಗು ಸ್ಮಾರ್ಟ್‌ ಡಿವೈಸ್‌ಗಳ ಪರದೆಯಲ್ಲಿ ಕಣ್ಣು ಕೀಲಿಸಿರುವ ಸಂದರ್ಭಗಳಲ್ಲಿ ಹೆತ್ತವರ ಜತೆಗಿನ ಸಂವಹನ ಸಂಪೂರ್ಣ ಶೂನ್ಯವಾಗಿರುವುದು ಮೇಲ್ಕಂಡ ಸನ್ನಿವೇಶಗಳು ತಲೆದೋರಲು ಕಾರಣವಾಗುತ್ತದೆ. ಸ್ಮಾರ್ಟ್‌ ಡಿವೈಸ್‌ಗಳಿಗೆ ಅಂಟಿದ್ದಾಗ ಮಕ್ಕಳು ಯಾವುದೇ ಸಕ್ರಿಯ ಸಂಭಾಷಣೆಗೆ ತೆರೆದುಕೊಳ್ಳುವುದಿಲ್ಲ; ಬದಲಾಗಿ ತಮ್ಮ ಇಷ್ಟದ ಕಾಟೂìನ್‌ ಪಾತ್ರಗಳು ಆಡುವ, ಯಾವತ್ತೋ ಬರೆಯಲಾದ ಸಂಭಾಷಣೆಗಳನ್ನು ಕೇಳುತ್ತಾರೆ.

ತಮ್ಮ ಮಕ್ಕಳು ಅವರ ಸಮಕಾಲೀನರು, ಗೆಳೆಯ ಗೆಳತಿಯರಿಗೆ ಹೋಲಿಸಿದಾಗ ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದರಲ್ಲಿ ಹಿಂದೆ ಇದ್ದಾರೆ ಎಂಬುದು ಎಷ್ಟೋ ಬಾರಿ ಹೆತ್ತವರ ಗಮನಕ್ಕೆ ಬರುವುದೇ ಇಲ್ಲ. ಮಾತನಾಡಲು ಆರಂಭಿಸುವಾಗ ಸ್ವಲ್ಪ ವಿಳಂಬವಾಗುವುದು ಸಹಜ, ಮಗು ದೊಡ್ಡದಾದಾಗ ಸರಿಹೋಗುತ್ತದೆ ಎಂಬುದಾಗಿ ಹೆತ್ತವರು ತಪ್ಪಾಗಿ ನಂಬಿಬಿಡುತ್ತಾರೆ. ಸ್ಮಾರ್ಟ್‌ ಡಿವೈಸ್‌ಗಳು, ಗ್ಯಾಜೆಟ್‌ಗಳನ್ನು ಸಣ್ಣ ವಯಸ್ಸಿನಲ್ಲೇ ಉಪಯೋಗಿಸಲು ತೊಡಗುವುದರಿಂದ ಭವಿಷ್ಯದಲ್ಲಿ ಅವರ ಮೇಲೆ ಎಂತಹ ದುಷ್ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ಹೆತ್ತವರಿಗೆ ಅರಿವು ಇಲ್ಲದೆ ಇರುವುದೇ ಇದಕ್ಕೆ ಪ್ರಧಾನವಾದ ಕಾರಣ. ಸ್ಮಾರ್ಟ್‌ ಡಿಜಿಟಲ್‌ ಡಿವೈಸ್‌ಗಳು ಕೆಟ್ಟವಲ್ಲ; ಆದರೆ ಅವುಗಳನ್ನು ಚಿಕ್ಕ ಮಕ್ಕಳು ಎಷ್ಟು ಕಾಲ, ಎಷ್ಟು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಎಂಬುದರ ಮೇಲೆ ಒಳಿತು-ಕೆಡುಕು ನಿಂತಿದೆ. 

ನಿಮ್ಮ ಮಗು ಈ ಕೆಳಗಿನ ಯಾವುದಾದರೂ ವರ್ತನೆ, ಲಕ್ಷಣಗಳನ್ನು ಹೊಂದಿದ್ದರೆ, ದಯವಿಟ್ಟು ಆದಷ್ಟು ಬೇಗನೆ ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿ ತಜ್ಞರನ್ನು ಸಂಪರ್ಕಿಸಿ.
1. ವಯಸ್ಸಿಗೆ ಸರಿಯಾಗಿ ಮಾತನಾಡದಿರುವುದು.
2.ಕೆಲವೇ ಕೆಲವು ಸದ್ದುಗಳನ್ನು  ಮಾಡುವುದು ಅಥವಾ ಹಾವಭಾವಗಳನ್ನು ಪ್ರದರ್ಶಿಸುವುದು.
3.ಸಾಮಾಜಿಕ ಚಟುವಟಿಕೆ ಕಡಿಮೆಯಾಗಿರುವುದು; ಉದಾಹರಣೆಗೆ, ಆಟವಾಡಲು ಕಷ್ಟವಾಗುವುದು, ಇತರರ ಜತೆಗೆ ಒಡಗೂಡುವುದರಲ್ಲಿ ತೊಂದರೆ.
4.ಯಾವುದೇ ವಸ್ತು/ ಚಟುವಟಿಕೆ/ ಶಿಕ್ಷಣದತ್ತ ಏಕಾಗ್ರತೆ ಸಾಧಿಸಲು ಕಷ್ಟಪಡುವುದು.
5.ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
6.ಹೆಸರು ಹೇಳಿ ಕರೆದರೆ ಅಥವಾ ಪರಿಸರದ ಇನ್ನಿತರ ಯಾವುದೇ ಸದ್ದುಗಳಿಗೆ ಮಗು ಪ್ರತಿಕ್ರಿಯಿಸದಿರುವಂತೆ ತೋರುವುದು.
7.ಓದುವ ಮತ್ತು ಬರೆಯುವ ಸಾಮರ್ಥ್ಯಗಳಲ್ಲಿ ತೊಡಕು.

– ಮೇಘಾ ಮೋಹನ್‌, 
ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಂಗಳೂರು.

ಟಾಪ್ ನ್ಯೂಸ್

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

Pro Kabaddi: ಒಂದಂಕದಿಂದ ಸೋತ ಬೆಂಗಳೂರು ಬುಲ್ಸ್‌

MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ

MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.