ಮದ್ಯಪಾನ ವ್ಯಸನದಿಂದ ದೈಹಿಕವಲ್ಲದೆ ಸಾಮಾಜಿಕ ಆರೋಗ್ಯಕ್ಕೂ ಕುತ್ತು


Team Udayavani, Dec 16, 2018, 6:00 AM IST

drinking-alcohol.jpg

ಮುಂದುವರಿದುದು

 ತಪ್ಪು: ಮದ್ಯಪಾನದಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.
 ಸರಿ:
ಮೇಲೆ ಹೇಳಿದ ಹಾಗೆ ಮದ್ಯಪಾನದಿಂದ ವ್ಯಕ್ತಿಯ ಇತಿ-ಮಿತಿಗಳ ಎಲ್ಲೆಯಲ್ಲಿರುವುದಿಲ್ಲ ಮತ್ತು ಭಾವನಾತ್ಮಕವಾಗಿ ವರ್ತಿಸತೊಡಗುತ್ತಾನೆ ಹಾಗೂ ಈ ಹಂತದಲ್ಲಿ ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಅನ್ನಿಸುತ್ತದೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಲಿಂಗ ನಿಮಿರುವುದಿಲ್ಲ, ಲಿಂಗದ ಗಡಸುತನ ಕಡಿಮೆಯಾಗುತ್ತದೆ, ಶೀಘ್ರ ಸ್ಖಲನವಾಗುತ್ತದೆ. ಸಮಯ ಕಳೆದ ಹಾಗೆ ಮದ್ಯಪಾನ ನಿಲ್ಲಿಸಿದ ಅನಂತರವೂ ವಿವಿಧ ಲೆ„ಂಗಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಉದಾ: ಲಿಂಗ 
ಉದ್ರೇಕಗೊಳ್ಳದಿರುವುದು/ನಿಮಿರುವುದಿಲ್ಲ, ಲಿಂಗದ ಗಡಸುತನ ಕಡಿಮೆಯಾಗುವುದು, ಶೀಘ್ರ ಸ್ಖಲನವಾಗುವುದು ಇತ್ಯಾದಿ.

ತಪ್ಪು:ಮದ್ಯಪಾನ ಮಾಡುವವರೆಲ್ಲ ಕೆಟ್ಟ ಜನ.
ಸರಿ:
ಮದ್ಯಪಾನದ ಅವಲಂಬನೆಯೆನ್ನುವುದು ಒಂದು ಕಾಯಿಲೆ. ಇದರ ಉಪಯೋಗದಲ್ಲಿ ಸರಿ ಅಥವಾ ಕೆಟ್ಟ ಜನರೆಂಬ ಭೇದವಿಲ್ಲ. ಎಲ್ಲ ಗುಂಪಿನ ಜನರು ಇದಕ್ಕೊಳಗಾದವರಿದ್ದಾರೆ.

ತಪ್ಪು: ಕಠಿನ (ಹಾರ್ಡ್‌) ಕೆಲಸ ಮಾಡುವವರಿಗೆ ಮೈ-ಕೈ ನೋವು ಕಡಿಮೆಯಾಗಲು ಮದ್ಯ ಬೇಕೇ ಬೇಕು. ಯಾಕೆಂದರೆ, ಅವುಗಳು ನೋವು ನಿವಾರಕವಾಗಿವೆ.
ಸರಿ: ಮದ್ಯಪಾನ ಮಾಡಿದಾಗ ವ್ಯಕ್ತಿಯ ಸಂವೇದನೆ ಕಡಿಮೆಯಾಗುತ್ತದೆ. ಹಾಗಾಗಿ ಮಾಂಸಖಂಡಗಳಲ್ಲಿ ಹಾನಿಯಾಗುತ್ತಿದ್ದರೂ ನೋವಿನ ಅನುಭವವಾಗುವುದಿಲ್ಲ. ಆದರೆ, ಇದೇ ರೀತಿ ಮುಂದುವರಿದಾಗ ದೇಹದ ಮಾಂಸಖಂಡಗಳು ಹಾನಿಗೀಡಾಗುತ್ತವೆ ಹಾಗೂ ಯಾವಾಗಲೂ ನೋವಿನ ಅನುಭವವಾಗತೊಡಗುತ್ತದೆ. ಮದ್ಯವು ಸಮಯ ಕಳೆದಂತೆ ಮಾಂಸಖಂಡಗಳಿಗೆ ಹಾನಿಮಾಡಿ ಯಾವಾಗಲೂ ಮೈ-ಕೈನೋವನ್ನುಂಟು ಮಾಡುತ್ತದೆ. ಇದನ್ನು ಅಲ್ಕೋಹಾಲಿಕ್‌ ಮಯೋಪತಿ ಅಂತಾ ಕೂಡ ಕರೆಯಲಾಗುತ್ತದೆ.

ತಪ್ಪು: ಒಂದು ಸಾರಿ ಚಿಕಿತ್ಸೆಗೊಳಗಾಗಿ ವ್ಯಕ್ತಿ ಸ್ವಲ್ಪ ಸಮಯದ ಅನಂತರ ಪುನಃ ಮದ್ಯಸೇವಿಸಲಾರಂಭಿಸಿದಾನೆ ಎಂದರೆ ಆತ ಇನ್ನು ಮುಂದೆ ಸುಧಾರಿಸಲು ಸಾಧ್ಯವೇ ಇಲ್ಲ.
ಸರಿ : 
ಹಲವಾರು ಸಲ ಮದ್ಯಪಾನ ಬಿಟ್ಟು ಪುನಃ ಕುಡಿಯಲು ಪ್ರಾರಂಭಿಸಿದ ವ್ಯಕ್ತಿ ಮತ್ತೆ ಮತ್ತೆ ಚಿಕಿತ್ಸೆಗೊಳಗಾಗಿ ಅದರ ಚಟದಿಂದ ಹೊರಬರಬಲ್ಲ.

ತಪ್ಪು: ಒಳ್ಳೆಯ ಗುಣಮಟ್ಟದ ಮದ್ಯ ಕುಡಿದರೆ ದೇಹಕ್ಕೇನೂ ಹಾನಿಯಾಗುವುದಿಲ್ಲ ಅಥವಾ ಒಳ್ಳೆಯ ಗುಣಮಟ್ಟದ ಮದ್ಯಸೇವಿಸಿದರೆ, ದೇಹ ಸುದೃಢಗೊಳ್ಳುತ್ತದೆ.
ಸರಿ :ಒಳ್ಳೆಯದಾಗಲಿ ಅಥವಾ ಕೀಳು ಗುಣಮಟ್ಟದ್ದಾಗಲಿ ಮದ್ಯಪಾನ ದೇಹಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ದೇಹ ಸುದೃಢಗೊಳ್ಳಲು ಮದ್ಯವೇನೂ ಪೌಷ್ಟಿಕ ಆಹಾರವಲ್ಲ.

ತಪ್ಪು: ಮದ್ಯ ಸೇವಿಸುವವರು ಅಧೋಗತಿಗಿಳಿದಾಗಲೇ/ಪೂರ್ತಿ ಹಾಳಾದಾಗಲೇ ಅವರಿಗೆ ಬುದ್ಧಿಬರುವುದು, ಅಲ್ಲಿಯವರೆಗೆ ಅವರನ್ನು ಸುಧಾರಿಸಲು ಸಾಧ್ಯವೇ ಇಲ್ಲ.
ಸರಿ :ಮದ್ಯಪಾನ ಮಾಡುವವರು ಯಾವುದೇ ಹಂತದಲ್ಲಿದ್ದರೂ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋದರೆ, ವ್ಯಕ್ತಿ ಗನುಗುಣವಾಗಿ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಈ ಪಿಡುಗಿನಿಂದ ಹೊರತರಬಹುದು.

ತಪ್ಪು:  ಎಲ್ಲರೂ ಮದ್ಯಪಾನ ಮಾಡುತ್ತಾರೆ. ಅದಕ್ಕೆ ನಾನೂ ಕೂಡ ಮಾಡಲೇಬೇಕಾಗುತ್ತದೆ.
ಸರಿ :
ಎಲ್ಲರಿಗೆ ತಿಳಿದ ಹಾಗೆ ಸಮಾಜದ ಎಲ್ಲರೂ ಮದ್ಯಪಾನ ಮಾಡುವುದಿಲ್ಲ.ಇದು ತನ್ನ ಕುಡಿತವನ್ನು ಸಮರ್ಥಿಸಿಕೊಳ್ಳಲು ಕೇವಲ ಒಂದು ನೆಪ ಎಂದು ಹೇಳಬಹುದು. ನೆನಪಿಡಿ ವ್ಯಕ್ತಿಯ ಸಮ್ಮತಿಯಿಲ್ಲದೇ ಯಾರೂ ಮೂಗು ಹಿಡಿದು ದಿನಾ ಮದ್ಯ ಬಾಯಿಗೆ ಹಾಕುವುದಿಲ್ಲ. ವ್ಯಕ್ತಿಯು ಇದಕ್ಕೆ ತಾನೇ ಜವಾಬ್ದಾರನೆಂಬ ಭಾವನೆ ಬರಬೇಕು.

ತಪ್ಪು: ಹೆಣ್ಣುಮಕ್ಕಳು ಮದ್ಯಪಾನದ ಚಟಕ್ಕೊಳಗಾಗುವುದಿಲ್ಲ.
ಸರಿ : 
ಯಾವುದೇ ಲಿಂಗಭೇದವಿಲ್ಲದೇ ಎಲ್ಲರೂ ಚಟಕ್ಕೊಳಗಾಗುತ್ತಾರೆ.

ತಪ್ಪು: ಬಿಯರ್‌ ಎನ್ನುವುದು ಹಾರ್ಡ್‌ ಲಿಕ್ಕ‌ರ್‌ ಅಲ್ಲ, ಹಾಗಾಗಿ ಅದನ್ನು ಸುರಕ್ಷಿತವಾಗಿ ದಿನಾಲೂ ಬಳಸಬಹುದು.
ಸರಿ : 
ಬಿಯರ್‌ ಕೂಡ ಮದ್ಯವಾಗಿದ್ದು ಇದರಲ್ಲಿ ಇತರ ಮದ್ಯಗಳಿಗಿಂತ ಕಡಿಮೆ ಸಾಂದ್ರತೆಯಲ್ಲಿ ಮದ್ಯವಿರುತ್ತದೆ. ಹಾಗಾಗಿ ಇದೂ ಕೂಡ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಈ ಕಡಿಮೆ ಸಾಂದ್ರತೆಯಿಂದ ಹೆಚ್ಚಿನ ಮತ್ತೇರುವುದಿಲ್ಲವೆಂದು ಎರಡೋ ಮೂರೋ ಬಿಯರ್‌ ಕುಡಿದುಬಿಡುತ್ತಾರೆ. ಇದು ಅವರು ಕುಡಿಯುತ್ತಿದ್ದ  ಹಾರ್ಡ್‌ ಲಿಕ್ಕರಿಗೆ ಸಮವಾಗಿರುತ್ತದೆ. ಹಾಗಾಗಿ ಯಾವುದೇ ಸಾಂದ್ರತೆಯಲ್ಲಿದ್ದರೂ ಎಲ್ಲ ಮದ್ಯಗಳು ಹಾನಿಯನ್ನು ಉಂಟುಮಾಡುತ್ತವೆ.

ತಪ್ಪು: ಮದ್ಯ ಸೇವಿಸುವುದರಿಂದ ಸೇವನೆಯಿಂದ ಮೆದುಳಿನ ಚುರುಕುತನ/ರಚನಾತ್ಮಕ ಕ್ರಿಯೆ ಹೆಚ್ಚಾಗುತ್ತದೆ.
ಸರಿ 
:ಮದ್ಯಪಾನದಿಂದ ಗ್ರಹಣಶಕ್ತಿ, ಆಲೋಚನಾಶಕ್ತಿ, ಯೋಜನಾಶಕ್ತಿ ಏರುಪೇರಾಗುತ್ತವೆ. ಇದರಿಂದಾಗಿ ಎಲ್ಲ ಕೆಲಸಗಳು ಅಸ್ತವ್ಯಸ್ತವಾಗಿ ಬಿಡುತ್ತವೆ. ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ನಿಯಮಿತವಾಗಿ ಬಳಸುವುದರಿಂದ ಮಿದುಳು ಸವೆಯುತ್ತದೆ, ನೆನಪಿನ ಸಮಸ್ಯೆಗಳು ತಲೆದೋರುತ್ತವೆ ಹಾಗೂ ಮರೆಗುಳಿತನ / ಡಿಮೆನ್ಶಿಯಾ ಕಾಯಿಲೆ ಕಂಡುಬರುತ್ತದೆ.

ತಪ್ಪು: ನಾವು ಸುಸಂಸ್ಕೃತ ಕುಟುಂಬದವರು ಮತ್ತು ತುಂಬಾ ಓದಿದವರು. ಹಾಗಾಗಿ ನಮ್ಮ ಮಕ್ಕಳಿಗೆ ಇವುಗಳ ಬಗ್ಗೆ ಎಲ್ಲ ಗೊತ್ತಿದೆ. ಇದರ ಬಗ್ಗೆ ಮಕ್ಕಳೊಂದಿಗೆ ಮಾತನಾಡುವ ಆವಶ್ಯಕತೆಯಿಲ್ಲ.
 ಸರಿ :ಮದ್ಯ ಮತ್ತಿತರ ಮಾದಕ ವಸ್ತುಗಳ ಉಪಯೋಗದ ತೊಂದರೆ, ಸಮಾಜದ ಎಲ್ಲ ಜಾತಿ, ಧರ್ಮ, ಹಣಕಾಸು ವರ್ಗದ ಕುಟುಂಬಗಳಲ್ಲಿ ಕಂಡುಬಂದಿದೆ ಮತ್ತು ಇದರ ಬಗ್ಗೆ ಮಕ್ಕಳಿಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡುವುದು ಸಹಕಾರಿಯಾಗಿದೆ.  

ತಪ್ಪು: ಎಲ್ಲ  ಮದ್ಯಪಾನ ಮಾಡುವವರಿಗೆ ಒಂದೇ ರೀತಿಯ ಚಿಕಿತ್ಸೆಯಿರುತ್ತದೆ.
ಸರಿ 
:ಬೇರೆಬೇರೆ ಜನರಿಗೆ ಅವರ ಮದ್ಯಪಾನದ ಪ್ರಮಾಣ, ಅವರ ತಿಳಿವಳಿಕೆ ಹಾಗೂ ಅವರಿಗೆ ಲಭ್ಯವಿರುವ ಸೌಲಭ್ಯಗಳಿಗೆ ತಕ್ಕಂತೆ ಬೇರೆಬೇರೆ ತರಹದ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
 
ತಪ್ಪು:ಗರ್ಭಿಣಿ ಸ್ತ್ರೀ ಮದ್ಯಪಾನ ಮಾಡುವುದರಿಂದ ಏನೂ ತೊಂದರೆಯಾಗುವುದಿಲ್ಲ.
ಸರಿ 
:ಗರ್ಭಿಣಿ ಸ್ತ್ರೀ ಮದ್ಯಪಾನ ಮಾಡಿದರೆ ಬೆಳೆಯುವ ಭ್ರೂಣ ಹಾಗೂ ಅದರ ಮಿದುಳಿಗೆ ತೊಂದರೆಯಾಗುತ್ತದೆ.

ತಪ್ಪು:ಮದ್ಯಪಾನ ಮಾಡಿದರೆ ನಿದ್ರೆಗೆ ಸಹಾಯವಾಗುತ್ತದೆ.
ಸರಿ :ಮದ್ಯಪಾನ ಮಾಡಿದಾಗ ಅಮಲಾಗುತ್ತದೆ ಹಾಗೂ ತತ್‌ಕ್ಷಣ ನಿದ್ರೆ ಬರಬಹುದು ಆದರೆ ಗಾಢ ನಿದ್ರೆ ಬರುವುದಿಲ್ಲ ಹಾಗೂ ಗುಣಮಟ್ಟದ ನಿದ್ರೆ ಕೂಡ ಬರುವುದಿಲ್ಲ. ಇದರಿಂದಾಗಿ ಬೆಳಗ್ಗೆ ಎದ್ದಾಗ ನಿದ್ರೆ ಪೂರ್ಣವಾಗಲಿಲ್ಲ ಎಂದೆನಿಸುತ್ತದೆ, ತಲೆ ಭಾರವೆನಿಸುತ್ತದೆ, ಮನಸ್ಸಿಗೆ ಕಿರಿ-ಕಿರಿಯಾಗುತ್ತದೆ. ಹಾಗಾಗಿ ನಿದ್ರೆಗಾಗಿ ಮದ್ಯಪಾನ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆಯೇ ಹೊರತು ಸಹಾಯವೇನಾಗುವುದಿಲ್ಲ.

ಇದೇ ರೀತಿ ಇನ್ನೂ ಹಲವಾರು ತಪ್ಪು ನಂಬಿಕೆಗಳು ಜಗತ್ತಿನಾದ್ಯಂತ ಪ್ರಚಲಿತವಾಗಿವೆ. ಮದ್ಯಪಾನದ ಉಪಯೋಗ ಒಂದು ಜಟಿಲವಾ¨ ಕಾಯಿಲೆಯಾಗಿದೆ. ಯಾಕೆಂದರೆ, ಇದರ ಉಗಮಕ್ಕೆ, ಉಳಿವಿಗೆ ಕೇವಲ ವ್ಯಕ್ತಿಯಲ್ಲದೇ ಆತನ ಕುಟುಂಬ, ಸಮಾಜವೂ ಕೂಡ ಕಾರಣೀಭೂತವಾಗಿದೆ ಹಾಗೂ ಇದು ನಡವಳಿಕೆಯ ಒಂದು ಭಾಗವಾಗಿದ್ದು ವ್ಯಕ್ತಿಯು ಇದನ್ನು ಕಾಯಿಲೆ ಎಂದು ಪರಿಗಣಿಸುವುದಿಲ್ಲ. ಇದರ ಮೇಲೆ ಸಮಾಜದಲ್ಲಿ ಹರಡಿರುವ ನಾನಾ ರೀತಿಯ ತಪ್ಪು ನಂಬಿಕೆಗಳಿಂದಾಗಿ ವ್ಯಕ್ತಿಯು ಚಿಕಿತ್ಸೆಗೆ ಬರಲು ವಿಳಂಬವಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆಗೆ ಬರುವುದೇ ಇಲ್ಲ.  ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆೆಯಲ್ಲದೆ, ಅದರ ದುಷ್ಪರಿಣಾಮ ವ್ಯಕ್ತಿಯ ಕುಟುಂಬ, ಸಮಾಜ, ಉದ್ಯೋಗ, ಹಣಕಾಸಿನ ಮೇಲೆಯೂ ಆಗುತ್ತದೆ. ಇದಕ್ಕೆ ಚಿಕಿತ್ಸೆಯಿದ್ದು, ಇದಕ್ಕಾಗಿ ವ್ಯಕ್ತಿ ಮಾತ್ರವಲ್ಲದೇ ಆತನ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಸಹಕಾರ ಅತ್ಯಗತ್ಯ.

ಬೇರೆ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದರೂ ಆತನಿಗೆ ಮತ್ತೇರದಿದ್ದರೆ/ ಕಿಕ್ಕು ಸಿಗದಿದ್ದರೆ ಆತ ತುಂಬಾ ಸ್ಟ್ರಾಂಗ್‌ ವ್ಯಕ್ತಿ ¤ಮತ್ತು ಆತನಿಗೆ ಮದ್ಯದಿಂದ ಯಾವುದೇ ತೊಂದರೆಯಾಗುವುದಿಲ್ಲ.

ವ್ಯಕ್ತಿಗೆ ಸಮಯ ಕಳೆದಂತೆ ಮತ್ತೇರಲು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಬೇಕಾಗಿದೆಯೆಂದರೆ, ಮದ್ಯಕ್ಕೆ ಆತನ ದೇಹ ಮತ್ತು ಮನಸ್ಸಿನ ಸಹನಾ ಶಕ್ತಿ ಹೆಚ್ಚಾಗಿದೆ ಅಂದರೆ; ಆ ವ್ಯಕ್ತಿಯು ನಿಜವಾಗಿಯೂ ಮದ್ಯಪಾನದ ಚಟಕ್ಕೆ ಒಳಗಾದವನೂ ಮತ್ತವನಿಗೆ ಇದರಿಂದ ಹೊರಬರಲು ಸಹಾಯ ತುಂಬಾ ಅಗತ್ಯವಿದೆ ಎಂದರ್ಥ. ಮದ್ಯಪಾನ ಹೆಚ್ಚಿಗೆ ಅಥವಾ ಕಡಿಮೆ ಕುಡಿಯುವ ವ್ಯಕ್ತಿಯು ಸ್ಟ್ರಾಂಗ್‌ ಅಥವಾ ವೀಕ್‌ ಎನ್ನುವ ಯಾವುದೇ ಸಂಬಂಧವಿಲ್ಲ.

ತಪ್ಪು: ಮದ್ಯಪಾನದ ಜತೆಗೆ ಅಥವಾ ಕುಡಿದ ಅನಂತರ ಹೊಟ್ಟೆ ತುಂಬ ಊಟ ಮಾಡಿದರೆ, ಮದ್ಯವು ದೇಹಕ್ಕೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.
 ಸರಿ :ಇದೊಂದು ಎಲ್ಲೆಡೆ ಪ್ರಚಲಿತವಾಗಿರುವ ಅತೀ ಗಂಭೀರ ಅಪನಂಬಿಕೆ ಅಥವಾ ಮೂಢನಂಬಿಕೆ ಎಂದೂ ಹೇಳಬಹುದು. ಇದನ್ನು ನಂಬಿಕೊಂಡು ಹಲವಾರು ಜನ ಪ್ರತಿನಿತ್ಯ ಮದ್ಯಪಾನ ಮಾಡುತ್ತಾರೆ ಹಾಗೂ ಆತನ ಮನೆಯವರು ಕೂಡ ಆತ ಹೊಟ್ಟೆ ತುಂಬ ಊಟ ಮಾಡುತ್ತಿದ್ದಾನೆ ಹಾಗಾಗಿ ಏನೂ ತೊಂದರೆಯಾಗುವುದಿಲ್ಲವೆಂದು ಆತನನ್ನು ಕುಡಿತ ನಿಲ್ಲಿಸಲು ಹೇಳುವುದಿಲ್ಲ ಮತ್ತು ಚಿಕಿತ್ಸೆಗೂ ಕರೆದುಕೊಂಡು ಹೋಗುವುದಿಲ್ಲ. ಊಟ ಮಾಡಿದರೂ ಬಿಟ್ಟರೂ ಮದ್ಯಪಾನ ದೇಹಕ್ಕೆ ಹಾನಿ ಮಾಡಿಯೇ ಮಾಡುತ್ತದೆ.

ತಪ್ಪು:  ಮದ್ಯದಂತಹ ಮಾದಕ ವಸ್ತುಗಳು ಚಳಿಗಾಲದಲ್ಲಿ ದೇಹಕ್ಕೆ ಬಿಸಿ ನೀಡುತ್ತವೆ.
 ಸರಿ : ಈ ನಂಬಿಕೆಗೆ ವ್ಯತಿರಿಕ್ತವಾಗಿ ಮದ್ಯವು ದೇಹದ ಉಷ್ಣತೆಯನ್ನು ಹೊರಹಾಕುವುದರಿಂದ, ಚಳಿಗಾಲದಲ್ಲಿ ಇದರ ಉಪಯೋಗ ಕೆಲವೊಮ್ಮೆ ದೇಹದ ಉಷ್ಣಾಂಶ ಕಡಿಮೆಯಾಗಿ ಗಂಭೀರ ಸಮಸ್ಯೆಗಳುಂಟಾಗಬಹುದು.

ಮದ್ಯ ವ್ಯಸನಮುಕ್ತರಾಗಲು ಆಹ್ವಾನ 
ಮದ್ಯ ಮತ್ತಿತರ ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧವಾರ ಮತ್ತು ಶನಿವಾರ (ಮೂರನೆ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಒ.ಪಿ.ಡಿ.ಯಲ್ಲಿ  ನುರಿತ ತಜ್ಞ ಮನೋ ವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.