ಮಧುಮೇಹಕ್ಕೆ ಔಷಧ ಚಿಕಿತ್ಸೆ 


Team Udayavani, Dec 3, 2017, 6:00 AM IST

madhumeha-3.jpg

ಟೈಪ್‌ 2 ಮಧುಮೇಹ ಚಿಕಿತ್ಸೆಗೆ 
ಲಭ್ಯವಿರುವ ಔಷಧಗಳಾವುವು?

ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಗ್ಲೆ„ಸೇಮಿಯಾ ನಿರ್ವಹಣೆಯು ಔಷಧೀಯ ಚಿಕಿತ್ಸೆಯ ಗುರಿಗಳಾಗಿವೆ. ವಿವಿಧ ಗುಂಪಿನ ಈ ಔಷಧಿಗಳೆಂದರೆ:
(1) ಇನ್ಸುಲಿನ್‌ ಸೆನ್ಸಿಟೈಸರ್‌ಗಳು: (ಎ) ಬಿಗುವಾನೈಡ್ಸ್‌ (ಬಿ) ಥಿಯಾಝೊಲಿಡಿನೆಡಿಯೊನಸ್‌ (ಟಿಝಡ್‌ಡಿಗಳು)
(2) ಇನ್ಸುಲಿನ್‌ ಸೆಕ್ರೆಟಾಗಾಗಸ್‌: (ಎ) ಸಲೊನಿಲುರಿಯಾಸ್‌; (ಬಿ) ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌
(3) ಅಲ್ಫಾಗ್ಲುಕೋಸಿಡೇಸ್‌ ಇನ್‌ಹಿಬಿಟರ್
(4) ಗ್ಲುಕಾಗೊನ್‌ಲೈಕ್‌ ಪೆಪ್ಟೆ„ಡ್‌ – 1(ಜಿಎಲ್‌ಪಿ-1) ಅಗೊನಿಸ್ಟ್ಸ್
(5) ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ ಐV (ಡಿಪಿಪಿ-4) ಇನ್‌ಹಿಬಿಟರ್
(6) ಸೆಲೆಕ್ಟಿವ್‌ ಸೋಡಿಯಂ -ಗ್ಲುಕೊಸೆಟ್ರಾನ್ಸ್‌ ಪೋರ್ಟರ್‌-2 (ಎಸ್‌ಜಿಎಲ್‌ಟಿ-2) ಇನ್‌ಹಿಬಿಟರ್
(7) ಇನ್ಸುಲಿನ್‌
(8) ಅಮಿಲಿನೊಮೈಮೆಟಿಕ್ಸ್‌

ಇನ್ಸುಲಿನ್‌ ಸೆನ್ಸಿಟೈಸರ್‌ಗಳು
1. ಬಿಗುವಾನೈಡ್ಸ್‌

ಬಿಗುವಾನೈಡ್ಸ್‌ ಹೆಪಾಟಿಕ್‌ ಗ್ಲುಕೋಸ್‌ ಔಟ್‌ಪುಟ್‌ ಕಡಿಮೆ ಮಾಡುತ್ತದೆ. ಇದು ಗ್ಲುಕೋಸ್‌ ಕರುಳಿನಲ್ಲಿ ಹೀರಿಕೆಯಾಗುವುದನ್ನು ಕೂಡ ತಗ್ಗಿಸುತ್ತದೆ ಮತ್ತು ಬಾಹ್ಯ ಗ್ಲುಕೋಸ್‌ ಸ್ವೀಕರಣ ಹಾಗೂ ಬಳಕೆಯನ್ನು ಹೆಚ್ಚಿಸುವ ಮೂಲಕ ಇನ್ಸುಲಿನ್‌ ಸಂವೇದಕತೆಯನ್ನು ವೃದ್ಧಿಸುತ್ತದೆ. ಈ ಗುಂಪಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಔಷಧ ಮೆಟಮಾರ್ಫಿನ್‌. ಮೆಟಮಾರ್ಫಿನ್‌ನ ಪ್ರಮುಖ ಲಾಭಗಳೆಂದರೆ, ಏಕಔಷಧಿಯಾಗಿ ಬಳಸಿದಾಗ ಹೈಪೊಗ್ಲೆ„ಸೇಮಿಯಾ ಉಂಟು ಮಾಡುವುದಿಲ್ಲ. ಇದು ತೂಕ ನಷ್ಟಕ್ಕೆ ಕಾರಣವಾಗಬಹುದು ಮತ್ತು ಇದು ಪ್ಲಾಸ್ಮಾ ಟ್ರೈಗ್ಲಿಸರೈಡ್‌ಗಳ ಸಾಂದ್ರತೆಯನ್ನು ಶೇ.10-20ರಷ್ಟು ಕಡಿಮೆಗೊಳಿಸುವುದು ಕಂಡುಬಂದಿದೆ.

ಸಾಮಾನ್ಯವಾಗಿ ದಿನಕ್ಕೆ ಎರಡು ಡೋಸ್‌ ಆಗಿರುತ್ತದೆ, ಆದರೆ ದಿನಕ್ಕೆ ಮೂರು ಡೋಸ್‌ ಕೂಡ ನೀಡಬಹುದಾಗಿದೆ, ನಿಧಾನ ಬಿಡುಗಡೆ ಸ್ವರೂಪದ (ಎಕ್ಸ್‌ಟೆಂಡೆಡ್‌ ರಿಲೀಸ್‌ ಫಾರ್ಮುಲೇಶನ್‌) ಈ ಔಷಧಿಯನ್ನು ದಿನಕ್ಕೆ ಒಮ್ಮೆ ನೀಡಲಾಗುತ್ತದೆ. ಮೆಟಮಾರ್ಫಿನ್‌ನ ಸರ್ವೇಸಾಮಾನ್ಯ ಆರಂಭಿಕ ಡೋಸ್‌ 500 ಎಂಜಿ/ದಿನ ಆಗಿದ್ದು, ಗರಿಷ್ಟ ಡೋಸ್‌ 2,500 ಎಂಜಿ/ದಿನ ಆಗಿರುತ್ತದೆ. ಮೆಟಮಾರ್ಫಿನ್‌ನ ನಿಧಾನಗತಿಯ ಟೈಟ್ರೇಶನ್‌ – ಬೆಳಗಿನ ಉಪಾಹಾರದ ಬಳಿಕ 500 ಎಂಜಿ ಮತ್ತು ಸಾಪ್ತಾಹಿಕ ಬಿಡುವುಗಳ ಜತೆಗೆ 500 ಎಂಜಿಗಳಷ್ಟು ಹೆಚ್ಚಿಸುತ್ತಾ ಬೆಳಗಿನ ಉಪಾಹಾರ ಮತ್ತು ರಾತ್ರಿಯೂಟದ ಬಳಿಕದ 1,000 ಎಂಜಿಯ ಡೋಸ್‌ಗೆ ವೃದ್ಧಿಸುವುದು ಜೀರ್ಣಾಂಗವ್ಯೂಹಕ್ಕೆ (ಗ್ಯಾಸ್ಟ್ರೊಇಂಟಸ್ಟೈನಲ್‌) ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕಂಜೆಸ್ಟಿವ್‌ ಹಾರ್ಟ್‌ ಫೈಲ್ಯೂರ್‌ (ಸಿಎಚ್‌ಎಫ್), ರೀನಲ್‌ ಅಥವಾ ಹೆಪಾಟಿಕ್‌ ಡಿಸ್‌ಫ‌ಂಕ್ಷನ್‌ ಅಥವಾ ಬಿಂಗ್‌ ಅಲ್ಕೊಹಾಲಿಸಂ ಉಳ್ಳ ರೋಗಿಗಳಲ್ಲಿ ಈ ಔಷಧಿಯನ್ನು ಬಳಸಲಾಗದು.

2. ಥಿಯಾಝೊಲಿಡಿನೆಡಿಯೊನಸ್‌ 
(ಟಿಝಡ್‌ಡಿಗಳು)

ಥಿಯಾಝೊಲಿಡಿನೆಡಿಯೊನಸ್‌ ಪೆರೊಕ್ಸಿಸೋಮ್‌ ಪ್ರಾಲಿಫ‌ರೇಟರ್‌ ಆ್ಯಕ್ಟಿವೇಟೆಡ್‌ ರಿಸೆಪ್ಟರ್‌ (ಪಿಪಿಎಆರ್‌) ಗಾಮಾಗಳ ಜತೆಗೆ ಸಂಯೋಜನೆ ಹೊಂದುವ ಮೂಲಕ ಇನ್ಸುಲಿನ್‌ ಪ್ರತಿರೋಧವನ್ನು ಕುಗ್ಗಿಸುತ್ತದೆ. ಪಯೊಗ್ಲಿಟಾಝೋನ್‌, ಇದರ ಆರಂಭಿಕ ಡೋಸ್‌ 7.5 ಎಂಜಿ/ದಿನ ಮತ್ತು ಗರಿಷ್ಠ ಡೋಸ್‌ 45 ಎಂಜಿ/ದಿನ. ಏಕಔಷಧಿಯಾಗಿ ಬಳಸಿದಾಗ ಇವು ಹೈಪೊಗ್ಲೆ„ಸೇಮಿಯಾ ಉಂಟುಮಾಡುವುದಿಲ್ಲ. ಪಯೊಗ್ಲಿಟಾಝೋನ್‌ ಬಳಕೆ ಟ್ರೈಗ್ಲಿಸರೈಡ್‌ ಮಟ್ಟ ಕಡಿಮೆಯಾಗುವುದಕ್ಕೆ, ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಮತ್ತು ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ಡಿಎಲ್‌) ಪಾರ್ಟಿಕಲ್‌ ಗಾತ್ರ ವೃದ್ಧಿಗೆ ಕಾರಣವಾಗುತ್ತದೆ.

ಪ್ರಮುಖ ಅಡ್ಡ ಪರಿಣಾಮಗಳಲ್ಲಿ ಸಬ್‌ಕಟೇನಿಯಸ್‌ ಅಡಿಪೋಸಿಟಿ ಮತ್ತು ದ್ರವಾಂಶ ಉಳಿಕೆಯ ಸಹಿತ ತೂಕಗಳಿಕೆಯನ್ನು ಒಳಗೊಂಡಿದೆ, ಇದು ಸಾಮಾನ್ಯವಾಗಿ ಬಾಹ್ಯ ನೀರೂತವಾಗಿ  ಆಗಿ ಕಾಣಿಸಿಕೊಳ್ಳುತ್ತದೆ, ಆದರೆ ಹೃದಯವೈಫ‌ಲ್ಯ ಉಂಟಾಗುವುದು ಅಪರೂಪ. ಈ ಅಡ್ಡಪರಿಣಾಮಗಳು ಹೆಚ್ಚಿನ ಡೋಸ್‌ಗಳ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪಿತ್ತಕೋಶ ಕಾಯಿಲೆಗಳು ಅಥವಾ ಸಿಎಚ್‌ಎಫ್ (ಕ್ಲಾಸ್‌ ಐಐಐ ಅಥವಾ ಐV) ಉಳ್ಳ ರೋಗಿಗಳಿಗೆ ಈ ಔಷಧ ಶಿಫಾರಸು ಮಾಡಬಾರದು. ಟಿಝಡ್‌ಡಿಗಳು ವಿಶೇಷವಾಗಿ ಮಹಿಳೆಯರಲ್ಲಿ ಮೂಳೆಮುರಿತ ಅಪಾಯ ಹೆಚ್ಚಳದ ಜತೆಗೆ ಸಂಬಂಧ ಹೊಂದಿವೆ, ಅಪರೂಪವಾಗಿ ಡಯಾಬಿಟಿಕ್‌ ಮಾಕ್ಯುಲಾರ್‌ ಎಡೇಮಾ ಉಲ್ಬಣಕ್ಕೆ ಕಾರಣವಾಗುವುದೂ ಇದೆ. ಗರ್ಭಿಣಿಯರಲ್ಲಿ ಥಿಯಾಝೊಲಿಡಿನೆಡಿಯೊನಸ್‌ ಔಷಧಿ ಪ್ರಯೋಗ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. 

ಇನ್ಸುಲಿನ್‌ ಸೆಕ್ರೆಟಾಗಾಗಸ್‌
ಈ ಔಷಧಗಳು ಬೇಟಾ ಜೀವಕೋಶಗಳ ಮೇಲಿನ ಎಟಿಪಿ -ಸಂವೇದನಾಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೆ ಸಂವಹಿಸಿ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ.

1. ಸಲೊನಿಲುರಿಯಾಸ್‌
ಈ ಔಷಧಿಗಳು ಖಾಲಿ ಹೊಟ್ಟೆಯ ಮತ್ತು ಆಹಾರ ಸೇವನೆಯ ಬಳಿಕದ (ಪೋಸ್ಟ್‌ ಪ್ರಾಂಡಿಯಲ್‌) ಗ್ಲುಕೋಸ್‌ ಮಟ್ಟವನ್ನು ತಗ್ಗಿಸುತ್ತವೆ ಹಾಗೂ ಇವುಗಳನ್ನು ಕಡಿಮೆ ಡೋಸ್‌ನಿಂದ ಆರಂಭಿಸಿ, 1ರಿಂದ 2 ವಾರಗಳ ಮಧ್ಯಂತರದಲ್ಲಿ ರಕ್ತದ ಗ್ಲುಕೋಸ್‌ ಮಟ್ಟ (ಎಸ್‌ಎಂಬಿಜಿ)ದ ಸ್ವಯಂ ನಿಗಾವನ್ನು ಆಧರಿಸಿ ಹೆಚ್ಚಿಸಬೇಕು. ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳೆಂದರೆ ಗ್ಲಿಬೆನ್‌ಕ್ಲಾಮೈಡ್‌ (ಡೋಸ್‌ ರೇಂಜ್‌: 5-20 ಎಂಜಿ), ಗ್ಲಿಮೆಪೆರೈಡ್‌ (ಡೋಸ್‌ ರೇಂಜ್‌: 1-8 ಎಂಜಿ), ಗ್ಲಿಕ್ಲಾಝೈಡ್‌ (ಡೋಸ್‌ ರೇಂಜ್‌: 40-240 ಎಂಜಿ) ಮತ್ತು ಗ್ಲಿಪಿಝೈಡ್‌ (ಡೋಸ್‌ ರೇಂಜ್‌: 5-20 ಎಂಜಿ).

2. ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌
ರೆಪಾಗ್ಲಿನೈಡ್‌ (ಡೋಸ್‌ ರೇಂಜ್‌: 0.5 -16 ಎಂಜಿ) ಮತ್ತು ನೆಟೆಗ್ಲಿನೈಡ್‌ (ಡೋಸ್‌ ರೇಂಜ್‌: 180-360 ಎಂಜಿ)ಗಳು ಸಲೊನೈಲೂರಿಯಾಸ್‌ ಅಲ್ಲವಾದರೂ ಎಟಿಪಿ-ಸಂವೇದನಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೂ ಸಂವಹಿಸುತ್ತವೆ. ಇವುಗಳ ಕಿರು ಅರ್ಧಾಯುಷ್ಯದ ಕಾರಣವಾಗಿ, ಈ ಔಷಧಿಗಳನ್ನು ಪ್ರತೀ ಊಟದ ಜತೆಗೆ ಅಥವಾ ಅದಕ್ಕೆ ಮುನ್ನ ಊಟ -ಉಪಾಹಾರ ಸಂಬಂಧಿ ಗ್ಲುಕೋಸ್‌ ಆಧಿಕ್ಯವನ್ನು ತಡೆಯಲು ನೀಡಲಾಗುತ್ತದೆ. 

3. ಆಲ್ಫಾ- ಗ್ಲುಕೋಸಿಡೇಸ್‌ 
ಇನ್‌ಹಿಬಿಟರ್

ಆಲ್ಫಾ – ಗ್ಲುಕೋಸಿಡೇಸ್‌ ಇನ್‌ಹಿಬಿಟರ್ ಅಕಾಬೋìಸ್‌ (ಡೋಸೇಜ್‌ ರೇಂಜ್‌: 25-100 ಎಂಜಿ, ಪ್ರತೀ ಊಟದ ಜತೆಗೆ), ಮಿಗಿಟಾಲ್‌ (ಡೋಸ್‌ ರೇಂಜ್‌: 25-50 ಎಂಜಿ, ಪ್ರತೀ ಊಟದ ಜತೆಗೆ) ಮತ್ತು ವೊಗ್ಲಿಬೋಸ್‌ (ಡೋಸ್‌ ರೇಂಜ್‌: 0.1-0.3 ಎಂಜಿ, ಪ್ರತೀ ಊಟದ ಜತೆಗೆ) ಪೋಸ್ಟ್‌ ಪ್ರಾಂಡಿಯಲ್‌ ಹೈಪರ್‌ಗ್ಲೆ„ಸೇಮಿಯಾ ಉಂಟಾಗುವುದನ್ನು ಗ್ಲುಕೋಸ್‌ ಹೀರಿಕೆ ವಿಳಂಬಿಸುವುದರ ಮೂಲಕ ಕಡಿಮೆ ಮಾಡುತ್ತವೆ. ಈ ಔಷಧಿಗಳನ್ನು ಇನ್‌ಫ್ಲಮೇಟರಿ ಬವೆಲ್‌ ಕಾಯಿಲೆ, ಗ್ಯಾಸ್ಟ್ರೊಪರೇಸಿಸ್‌ ಅಥವಾ ಸೀರಮ್‌ ಕ್ರಿಯಾಟಿನಿನ್‌ ಮಟ್ಟ 2 ಎಂಜಿ/ಡಿಎಲ್‌ಕ್ಕಿಂತ ಹೆಚ್ಚು ಇರುವ ರೋಗಿಗಳಿಗೆ ಉಪಯೋಗಿಸಬಾರದು.

4. ಗ್ಲುಕೊಗೋನ್‌ ಲೈಕ್‌ ಪೆಪ್ಟೆ„ಡ್‌-1 (ಜಿಎಲ್‌ಪಿ-1)  ಅಗನಿಸ್ಟ್‌
ಜಿಎಲ್‌ಪಿ-1 ಸಣ್ಣ ಕರುಳಿನ ಎಲ್‌ ಜೀವಕೋಶಗಳಲ್ಲಿ ಉತ್ಪಾದನೆಯಾಗುತ್ತವೆ ಹಾಗೂ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ ಮತ್ತು ಗ್ಲುಕೋಸ್‌ ಅವಲಂಬಿ ವಿಧಾನದಲ್ಲಿ ಗ್ಲುಕಗೋನ್‌ ಸ್ರಾವವನ್ನು ಮತ್ತು ಹೆಪಾಟಿಕ್‌ ಗ್ಲುಕೋಸ್‌ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ದಿನಕ್ಕೆ ಎರಡು ಬಾರಿ ಚರ್ಮದ ಕೆಳಗಿನ ಇಂಜೆಕ್ಷನ್‌ ಮೂಲಕ ನೀಡಲಾಗುತ್ತದೆ. ಎಕ್ಸನಾಟೈಡ್‌ನ‌ ಆರಂಭಿಕ ಡೋಸ್‌ 5ಫಿಜಿ. ಈ ಡೋಸೇಜ್‌ ಸ್ವೀಕೃತವಾದರೆ 1 ತಿಂಗಳ ಬಳಿಕ 10ಫಿಜಿಗೆ ಟೈಟ್ರೇಟ್‌ ಮಾಡಬೇಕು. ಗ್ಯಾಸ್ಟ್ರಿಕ್‌ ಎಂಪ್ಟಿಯಿಂಗ್‌ ಮೇಲೆ ತನ್ನ ವಿಳಂಬಿಸುವ ಪರಿಣಾಮದಿಂದಾಗಿ ಹೊಟ್ಟೆತೊಳೆಸುವಿಕೆ, ವಾಂತಿ ಮತ್ತು ಬೇಧಿಯಂತಹ ಅಡ್ಡಪರಿಣಾಮಗಳನ್ನು ಜಿಐ ಉಂಟು ಮಾಡುತ್ತದೆ.

ಲಿರಾಗುಟೈಡ್‌ ಜಿಎಲ್‌ಪಿ-1 ಅನಲಾಗ್‌ ಆಗಿದ್ದು, ಮನುಷ್ಯ ಜಿಎಲ್‌ಪಿ-1ರಿಂದ ಪಡೆಯಲಾಗುತ್ತದೆ. ಅದರ ಪೆನ್‌ ಮೂಲಕ ಚರ್ಮದಡಿಗೆ ಇಂಜೆಕ್ಷನ್‌ ಆಗಿ ದಿನಕ್ಕೆ ಒಮ್ಮೆ ಇದನ್ನು ನೀಡಲಾಗುತ್ತದೆ. ಸಮಯವು ಊಟ-ಉಪಾಹಾರದ ಸಮಯವನ್ನು ಆಧರಿಸಿರುತ್ತದೆ. ಇದರ ಅರ್ಧಾಯುಷ್ಯವು ಸುಮಾರು 13 ತಾಸುಗಳು. ಇದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಎಕ್ಸೆನಾಟೈಡ್‌ನ‌ಂತೆಯೇ ಇವೆ, ಆದರೆ ಇದು ತನ್ನ ಪರಿಣಾಮಗಳಲ್ಲಿ ತುಸು ಹೆಚ್ಚು ಶಕ್ತಿಯುತವಾಗಿದೆ. ಇದರ ಆರಂಭಿಕ ಡೋಸೇಜ್‌ ಒಂದು ವಾರ ಕಾಲ 0.6 ಎಂಜಿ/ದಿನ ಆಗಿರುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದಲ್ಲಿ, 1.2ಎಂಜಿ/ದಿನಕ್ಕೆ ಹೆಚ್ಚಿಸಲಾಗುತ್ತದೆ (ಈ ಡೋಸೇಜ್‌ನಲ್ಲಿ ಇದರ ಬಹುತೇಕ ವೈದ್ಯಕೀಯ ಪ್ರಯೋಜನಗಳು ಕಾಣಿಸಿಕೊಳ್ಳುತ್ತವೆ). ಬಹುತೇಕ ರೋಗಿಗಳಿಗೆ, ಇನ್ನೊಂದು ವಾರದ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೆ ಡೋಸನ್ನು 1.8 /ದಿನಕ್ಕೆ ಹೆಚ್ಚಿಸಲಾಗುತ್ತದೆ. 

– ಮುಂದಿನ ವಾರಕ್ಕೆ  

– ಡಾ| ಶಿವಶಂಕರ ಎಂ.ಡಿ. 
ಪ್ರೊಫೆಸರ್‌ ಆಫ್ ಮೆಡಿಸಿನ್‌
ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.