ಕಿವಿಗಳು ನಿಮ್ಮ ಮೆದುಳಿನ ಕಿಟಿಕಿಗಳು


Team Udayavani, Dec 20, 2020, 2:10 PM IST

ಕಿವಿಗಳು ನಿಮ್ಮ ಮೆದುಳಿನ ಕಿಟಿಕಿಗಳು

ಹೌದು, ಇದು ನಿಜ. ಮನುಷ್ಯನ ಕಿವಿಯ ಪ್ರಧಾನ ಕಾರ್ಯಗಳೆಂದರೆ, ಕೇಳಿಸಿಕೊಳ್ಳುವುದು ಮತ್ತು ಸಮತೋಲನ. ಕಿವಿಯು ಮೂರು ಭಾಗಗಳನ್ನು ಹೊಂದಿರುತ್ತದೆ – ಹೊರಗಿವಿ, ಮಧ್ಯಗಿವಿ ಮತ್ತು ಒಳಗಿವಿ. ಒಳಗಿವಿಯಲ್ಲಿ ಸದ್ದನ್ನು ಗ್ರಹಿಸಿ ಮೆದುಳಿಗೆ ಸಂದೇಶವನ್ನು ಕಳುಹಿಸುವ ಸೂಕ್ಷ್ಮ ಅಂಗಾಂಶಗಳಿರುತ್ತವೆ. ವ್ಯಕ್ತಿಗೆ ವಯಸ್ಸಾಗುತ್ತ ಹೋದಂತೆ, ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ, ಇದು ಕಿವಿಗೂ ಅನ್ವಯವಾಗುತ್ತದೆ. 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಹೊರಗಿವಿಯ ಅಂಗಾಂಶಗಳು ಶೇ. 30ರಿಂದ 40ರಷ್ಟು ಮತ್ತು ಒಳಗಿವಿಯ ಅಂಗಾಂಶಗಳು ಶೇ. 15ರಷ್ಟು ನಶಿಸುತ್ತವೆ ಎಂಬುದಾಗಿ ಡಾ| ಪಿ. ಝಡ್‌. ವು ಮತ್ತು ಅವರ ಸಹೋದ್ಯೋಗಿಗಳು ಸಂಶೋಧನೆ ನಡೆಸಿದ್ದಾರೆ.

ಈ ನಶಿಸುವಿಕೆಯು ನಿಧಾನವಾಗಿ ವಯೋಸಂಬಂಧಿಯಾದ ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದ ಪ್ರತೀ ಮೂವರಲ್ಲಿ ಒಬ್ಬರು ಎಆರ್‌ಎಚ್‌ಎಲ್‌ ಅಂದರೆ ವಯೋಸಂಬಂಧಿಯಾದ ಶ್ರವಣ ಶಕ್ತಿ ನಷ್ಟ ಹೊಂದಿರುತ್ತಾರೆ ಮತ್ತು ಜಾಗತಿಕವಾಗಿ ಜನರಿಗೆ ವಯಸ್ಸಾಗುತ್ತ ಹೋದಂತೆ ಇದು ವೃದ್ಧಿಸುತ್ತದೆ. ಎಆರ್‌ಎಚ್‌ಎಲ್‌ ಅನಿವಾರ್ಯ ಪ್ರಕ್ರಿಯೆಯಾಗಿದೆ ಮತ್ತು ನೈಸರ್ಗಿಕವಾದ ಮುಪ್ಪಾಗುವ ಪ್ರಕ್ರಿಯೆಯಾಗಿದೆ ಎಂದಿದ್ದರೂ ಕೂಡ, ಶ್ರವಣ ದೋಷ ಹೊಂದಿರುವ ವ್ಯಕ್ತಿಗಳಲ್ಲಿ ಇದಕ್ಕೆ ಕಾರಣವಾಗುವ ಅಂಶಗವಳ ವೇಗವರ್ಧನೆಯಾಗುತ್ತಿದೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಮೆದುಳಿನ ಸಂರಚನಾತ್ಮಕವಾದ ಈ ಬದಲಾವಣೆಗಳಲ್ಲಿ ಅಟ್ರೊಫಿ, ನರ ಸಂಬಂಧಿ ನಶಿಸುವಿಕೆ, ಮೆದುಳಿನ ಗ್ರೇ ಮ್ಯಾಟರ್‌ ನಷ್ಟ ಸೇರಿವೆ ಮತ್ತು ಇತರ ಅಂಶಗಳೂ ಮೆದುಳಿನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತವೆ.

ಮೇರಿಲ್ಯಾಂಡ್‌ನ‌ ಬಾಲ್ಟಿಮೋರ್‌ನಲ್ಲಿರುವ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾನಿಲಯದ ಡಾ| ಫ್ರಾಂಕ್‌ ಲಿನ್‌ ಮತ್ತು ಅವರ ಸಹೋದ್ಯೋಗಿಗಳು 2014ರಲ್ಲಿ 126 ಮಂದಿ 56ರಿಂದ 86 ವರ್ಷ ವಯೋಮಾನದವರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ನಿರ್ದಿಷ್ಟವಾಗಿ ಇಡೀ ಮೆದುಳಿನ ವೇಗವರ್ಧಿತ ಅಟ್ರೊಫಿಯು ಎಆರ್‌ಎಚ್‌ಎಲ್‌ ಹೊಂದಿರುವವರಲ್ಲಿ ಇದೇ ವಯೋಮಾನದ ಸಹಜ ಶ್ರವಣ ಶಕ್ತಿ ಹೊಂದಿರುವವರಿಗಿಂತ ಹೆಚ್ಚು ಮೆದುಳಿನ ಬಲ ಟೆಂಪೋರಲ್‌ ಲೋಬ್‌ನಲ್ಲಿ ಪ್ರಾದೇಶಿಕ ಪ್ರಮಾಣದಲ್ಲಿರುತ್ತದೆ. ಮೆದುಳಿನ ಅಟ್ರೊಫಿಗೆ ಕಾರಣವಾಗುವ ಎಆರ್‌ಎಚ್‌ಎಲ್‌, ಸ್ಮರಣಶಕ್ತಿ ನಷ್ಟವಾಗಿರುವ ಡಿಮೆನ್ಶಿಯಾ ಉಂಟುಮಾಡುವ ಸಂಭಾವ್ಯ ಕಾರಣಗಳಲ್ಲಿ ಒಂದು ಎಂಬುದಾಗಿ ಡಾ| ಫ್ರಾಂಕ್‌ ಲಿನ್‌ ಹೇಳುತ್ತಾರೆ.

ವಯಸ್ಸಾದವರನ್ನು ಸಾಮಾನ್ಯವಾಗಿ ಬಾಧಿಸುವ ಅನಾರೋಗ್ಯಗಳಲ್ಲಿ ಡಿಮೆನ್ಶಿಯಾವೂ ಒಂದಾಗಿದೆ. ಸ್ಮರಣಶಕ್ತಿ, ಭಾಷೆ, ಆಲೋಚನೆ ಮತ್ತು ದೈನಿಕ ಚಟು ವಟಿಕೆಗಳು ಕುಂದುವ ಹಲವು ಅನಾರೋಗ್ಯಗಳು ಸಮುಚ್ಚಯ ಡಿಮೆನ್ಶಿಯಾ. ಹಿರಿಯರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆಯಾದರೂ, ಇದು ನೈಸರ್ಗಿಕವಾದ ಮುಪ್ಪಾಗುವಿಕೆಯ ಒಂದು ಭಾಗವಲ್ಲ. ಪ್ರಸ್ತುತ ಜಾಗತಿಕವಾಗಿ ಸುಮಾರು 50 ಮಿಲಿಯ ಮಂದಿ ಡಿಮೆನ್ಶಿಯಾದಿಂದ ಬಳಲುತ್ತಿದ್ದು, ಇದು 2050ರ ಹೊತ್ತಿಗೆ 152 ಮಿಲಿಯಕ್ಕೇರುವ ನಿರೀಕ್ಷೆಗಳಿವೆ. ಡಿಮೆನ್ಶಿಯಾವು ಇದರಿಂದ ಬಳಲುವ ವ್ಯಕ್ತಿಗೆ ಮಾತ್ರವಲ್ಲದೆ ಅವರ ಕುಟುಂಬ ಮತ್ತು ಸಮಾಜಕ್ಕೂ ದೈಹಿಕ, ಮಾನಸಿಕ ಮತ್ತು ಸಾಮಾಜಿಕ- ಆರ್ಥಿಕವಾಗಿ ಹೊರೆಯನ್ನು ಉಂಟು ಮಾಡುತ್ತದೆ. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆನ್‌ ಏಜಿಂಗ್‌ನಿಂದ ಹೊರಬಿದ್ದಿರುವ ಅಧ್ಯಯನ ಫ‌ಲಿ ತಾಂಶಗಳ ಪ್ರಕಾರ, ಅಲಿlàಮರ್ ಸಂಬಂಧಿಯಾದ ಮೆದುಳಿನ ಬದಲಾವಣೆಗಳಲ್ಲಿ ತೌ ಪ್ರೊಟೀನ್‌ ಮತ್ತು ಅಮೈಲಾಯ್ಡ ಬೆಟಾಗಳು ಮೆದುಳಿನ ನಿರ್ದಿಷ್ಟ ಭಾಗಗಳಲ್ಲಿ ಅಸಹಜ ಪ್ರಮಾಣದಲ್ಲಿ ಶೇಖರಗೊಂಡಿರುವುದು ಕಂಡುಬಂದಿದೆ.

ವಯೋಸಂಬಂಧಿ ಶ್ರವಣ ದೋಷಗಳು :

  • ಪ್ರಸ್ತುತ ಜಾಗತಿಕವಾಗಿ 466 ಮಿಲಿಯ ಮಂದಿ ಎಆರ್‌ಎಚ್‌ಎಲ್‌ನಿಂದ ಬಳಲುತ್ತಿರುವವರು ಇದ್ದಾರೆ.
  • ಭಾರತದಲ್ಲಿರುವ ಹಿರಿಯರಲ್ಲಿ ಶೇ. 60 ಮಂದಿಗೆ ಎಆರ್‌ಎಚ್‌ಎಲ್‌ ಇರುತ್ತದೆ.
  • ವಾರ್ಷಿಕವಾಗಿ 750 ಬಿಲಿಯ ಅಮೆರಿಕನ್‌ ಡಾಲರ್‌ ಖರ್ಚಿಗೆ ಕಾರಣವಾಗುತ್ತದೆ.
  • 60 ವರ್ಷಕ್ಕಿಂತ ಮೇಲ್ಪಟ್ಟ ಪ್ರತೀ ಮೂವರಲ್ಲಿ ಒಬ್ಬರು ಎಆರ್‌ಎಚ್‌ಎಲ್‌ನಿಂದ ಬಳಲುತ್ತಿದ್ದಾರೆ.
  • ಅತೀ ಸಾಮಾನ್ಯವಾಗಿರುವ ಅಸಾಂಕ್ರಾಮಿಕ ರೋಗಗಳಲ್ಲಿ ಮೂರನೇ ಸ್ಥಾನದಲ್ಲಿದೆ.
  • ಕಿವಿಯ ಆಂತರಿಕ ಭಾಗ/ ಕೂದಲು ಅಂಗಾಂಶಗಳ ಹಾನಿಯಿಂದ ಉಂಟಾಗುತ್ತದೆ.

ಡಿಮೆನ್ಶಿಯಾ :

  • ಜಾಗತಿಕವಾಗಿ 50 ಮಿಲಿಯ ಮಂದಿ ಡಿಮೆನ್ಶಿಯಾ ಹೊಂದಿದ್ದಾರೆ.
  • ಭಾರತದಲ್ಲಿರುವ 60ರಿಂದ 69 ವರ್ಷ ವಯೋಮಾನದವರಲ್ಲಿ ಶೇ. 28.8 ಮಂದಿ ಡಿಮೆನ್ಶಿಯಾ ಹೊಂದಿರುತ್ತಾರೆ.
  • ವಾರ್ಷಿಕವಾಗಿ 818 ಅಮೆರಿಕನ್‌ ಡಾಲರ್‌ ಖರ್ಚಿಗೆ ಕಾರಣ.
  • 59 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 2ರಿಂದ ಶೇ. 8.5 ಮಂದಿ ಡಿಮೆನ್ಶಿಯಾ ಹೊಂದಿರುತ್ತಾರೆ.
  • ಮರಣಕ್ಕೆ ಕಾರಣವಾಗುವ ಪ್ರಮುಖ ಕಾಯಿಲೆಗಳಲ್ಲಿ ಐದನೆಯದು.
  • ಮೆದುಳಿನ ಅಂಗಾಂಶಗಳಿಗೆ ಆಗುವ ಹಾನಿಯಿಂದ ಉಂಟಾಗುತ್ತದೆ.

ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ ಡಿಮೆನ್ಶಿಯಾಗೆ ಪ್ರಧಾನ ಕಾರಣ :

 

ಹಿರಿಯ ನಾಗರಿಕರಲ್ಲಿ ಕಂಡುಬರುತ್ತದೆ ನೈಸರ್ಗಿಕ ಮುಪ್ಪಾಗುವಿಕೆಯ ಭಾಗವಾಗಿ ಕಾಣಲಾಗುತ್ತದೆ.ನೈಸರ್ಗಿಕ ಮುಪ್ಪಾಗುವಿಕೆಯ ಭಾಗವಲ್ಲ

ಮೆದುಳಿನ ಅಟ್ರೊಫಿ

  • ತೌನ ಸ್ಥಾನಪಲ್ಲಟ
  • ಗ್ರಹ್ಯ ಹೊರೆ
  • ಸಾಮಾಜಿಕವಾಗಿ ಪ್ರತ್ಯೇಕಗೊಳ್ಳುವಿಕೆ
  • ಫ‌ಲಿತಾಂಶವಾಗಿ

ಕುತೂಹಲದ ವಿಚಾರವೆಂದರೆ, ಎಆರ್‌ಎಚ್‌ಎಲ್‌ ಮನುಷ್ಯನ ಮೆದುಳಿನಲ್ಲಿ ತೌ ಪ್ರೊಟೀನ್‌ ಶೇಖರವಾಗುವುದಕ್ಕೂ ಕಾರಣವಾಗುತ್ತದೆ. 2019ರಲ್ಲಿ ಚೀನದ ಓಶನ್‌ ವಿ.ವಿ.ಯಲ್ಲಿ ವೈ ಕ್ಸು ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯ ಪ್ರಕಾರ, ಎಆರ್‌ಎಚ್‌ಎಲ್‌ ಹೊಂದಿರುವ ವ್ಯಕ್ತಿಗಳ ಬೆನ್ನುಹುರಿಯ ದ್ರವದಲ್ಲಿ ಮತ್ತು ಎಂಟ್ರೊಹಿನಲ್‌ ಕಾರ್ಟೆಕ್ಸ್‌ನ ಅಟ್ರೊಫಿಯಲ್ಲಿ ತೌ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಪ್ರಾಣಿಗಳ ಮೇಲೆ ನಡೆದ ಸಂಶೋಧನೆಯಲ್ಲಿಯೂ ಇದು ಕಂಡುಬಂದಿದೆ. ಎಆರ್‌ಎಚ್‌ಎಲ್‌ ಹೊಂದಿರುವ ಇಲಿಗಳ ಕಿವಿ ಮತ್ತು ಮೆದುಳಿನಲ್ಲಿ ತೌ ಪ್ರಮಾಣ ಹೆಚ್ಚಿರುವುದನ್ನು 2019ರಲ್ಲಿ ನಡೆದ ಶೆನ್‌ ಎತ್‌ ಅಲ್‌ ಅವರ ಸಂಶೋಧನೆ ತೋರಿಸಿಕೊಟ್ಟಿದೆ. ತೌ ಪ್ರಮಾಣ ಹೆಚ್ಚಿರುವುದಕ್ಕೂ ಮೆದುಳಿನ ಕ್ಷಯಿಸುವಿಕೆ ಬೆಳವಣಿಗೆ ಹೊಂದುವುದಕ್ಕೂ ಯಾಂತ್ರಿಕ ಸಂಬಂಧ ಇರುವುದನ್ನು ಇದು ಸಾಬೀತು ಪಡಿಸುತ್ತದೆ. ಎಡಿಯ ಮುಂದುವರಿಕೆಯ ಬಯೋಮಾರ್ಕರ್‌ ಆಗಿರುವ ತೌ ಪ್ರೊಟೀನ್‌, ಎಆರ್‌ಎಚ್‌ಎಲ್‌ ವ್ಯಕ್ತಿಗಳ ಕಿವಿ ಅಥವಾ ಸಿಎಸ್‌ಎಫ್ ಇದ್ದಾಗ, ಅವರ ಮೆದುಳಿನಲ್ಲೂ ಅದು ಹೆಚ್ಚು ಪ್ರಮಾಣದಲ್ಲಿ ಶೇಖರವಾಗಿರುವ ಸಾಧ್ಯತೆ ಇರುತ್ತದೆ; ಇದು ಮೆದುಳಿನ ನಿಧಾನ ಕ್ಷಯಿಸುವಿಕೆ ಮತ್ತು ಕ್ರಮೇಣ ಎಡಿ/ ಡಿಮೆನ್ಶಿಯಾಕ್ಕೆ ದಾರಿ ಮಾಡಿಕೊಡುತ್ತದೆ.

ಹಾಗಾದರೆ, ಈಗಿರುವ ಪ್ರಶ್ನೆ ಎಂದರೆ, ಎಆರ್‌ಎಚ್‌ಎಲ್‌ ಎಂಬುದು ಡಿಮೆನ್ಶಿಯಾಕ್ಕೆ ದಾರಿ ಮಾಡಿಕೊಡುತ್ತದೆಯೇ ಅಥವಾ ಅದು ಗ್ರಹಣಾತ್ಮಕ ಸಾಮರ್ಥ್ಯದ ಕ್ಷಯಿಸುವಿಕೆಯನ್ನು ಪ್ರಚೋದಿಸುವುದು ಮಾತ್ರವೇ? ಶ್ರವಣ ಸಾಮರ್ಥ್ಯ ನಷ್ಟ ಮತ್ತು ಡಿಮೆನ್ಶಿಯಾಗಳಿಗೆ ಸಂಬಂಧ ಇರುವುಕ್ಕೆ ಪ್ರಾಥಮಿಕ ಸಾಕ್ಷ್ಯಗಳನ್ನು 1989ರಲ್ಲಿ ಸಿಯಾಟ್ಲನ ಯುನಿವರ್ಸಿಟಿ ಆಫ್ ವಾಶಿಂಗ್ಟನ್‌ನ ಡಾ| ರಿಚರ್ಡ್‌ ಉಲ್ಮನ್‌ ಮತ್ತವರ ತಂಡದವರು ಪ್ರಕಟಿಸಿದರು. ಅವರು 100 ಮಂದಿ ಅಲ್ಝೀಮರ್ಸ್‌ ರೋಗಿಗಳನ್ನು ಜನಾಂಗೀಯವಾಗಿ ಸಮಾನ ಗುಣಲಕ್ಷಣಗಳ ಸಹಜ ಆರೋಗ್ಯದ 100 ಮಂದಿಯೊಂದಿಗೆ ಹೋಲಿಸಿದರು. ಡಿಮೆನ್ಶಿಯಾ ಹೊಂದಿರುವವರಲ್ಲಿ ಶ್ರವಣ ಶಕ್ತಿ ನಷ್ಟವೂ ನಿಯಂತ್ರಿತ ಗುಂಪಿಗೆ ಹೋಲಿಸಿದರೆ ಹೆಚ್ಚು ಇರುವುದು ಇದರಿಂದ ತಿಳಿದುಬಂತು. ಶ್ರವಣ ಶಕ್ತಿ ನಷ್ಟದ ಪ್ರಮಾಣವು ಗ್ರಹಣಾತ್ಮಕ ವೈಕಲ್ಯದ ಪ್ರಮಾಣದ ಜತೆಗೆ ಹೋಲಿಕೆಯಾಗುವುದು ಕಂಡುಬಂತು. ಎಆರ್‌ಎಚ್‌ಎಲ್‌ ಮತ್ತು ಡಿಮೆನ್ಶಿಯಾ ನಡುವಣ ಸಂಬಂಧದ ಬಗ್ಗೆ ಕೆಲವು ಅಧ್ಯಯನಗಳು ನಡೆದಿವೆಯಾದರೂ, 2011ರ ವರೆಗೆ ಈ ಬಗ್ಗೆ ಆಳವಾದ ಸಂಶೋಧನೆಗಳು ನಡೆದಿರಲಿಲ್ಲ. 2011ರಲ್ಲಿ ಜಾನ್‌ ಹಾಪ್‌ಕಿನ್ಸ್‌ ಸ್ಕೂಲ್‌ ಆಫ್ ಮೆಡಿಸಿನ್‌ನ ಡಾ| ಫ್ರಾಂಕ್‌ ಲಿನ್‌ ಮತ್ತು ಸಹೋದ್ಯೋಗಿಗಳು 639 ಡಿಮೆನ್ಶಿಯಾ ರಹಿತ ಹಿರಿಯರ ಸಮಾಂತರ ಅಧ್ಯಯನವನ್ನು ನಡೆಸಿದರು. ಎಲ್ಲರಿಗೂ ಬೇಸ್‌ಲೈನ್‌ ಶ್ರವಣ ತಪಾಸಣೆಯನ್ನು ನಡೆಸಲಾಯಿತು ಮತ್ತು 12 ವರ್ಷಗಳ ಕಾಲ ಅನುಸರಣೆ ನಡೆಸಲಾಯಿತು. ಅನುಸರಣೆಯ ಅವಧಿಯಲ್ಲಿ ಸುಮಾರು 58 ಮಂದಿ ಅಲ್ಝೀಮರ್ಸ್‌ ಅಥವಾ ಇತರ ಗ್ರಹಣಾತ್ಮಕ ಸಾಮರ್ಥ್ಯ ಕ್ಷಯವನ್ನು ಬೆಳೆಸಿಕೊಂಡಿರುವುದು ಕಂಡುಬಂತು. ಶ್ರವಣ ಶಕ್ತಿ ನಷ್ಟದ ಪ್ರಮಾಣ ಹಾಗೂ ಅಲ್ಝೀಮರ್ಸ್‌ ಮತ್ತು ಇತರ ಗ್ರಹಣಾತ್ಮಕ ಸಾಮರ್ಥ್ಯ ನಷ್ಟ ಉಂಟಾಗುವ ಅಪಾಯಗಳ ನಡುವೆ ಲೀನಿಯರ್‌ ಸಂಬಂಧ ಇರುವುದು ಕೂಡ ಕಂಡುಬಂತು. “ಸಹಜ ವ್ಯಕ್ತಿಗಳಿಗೆ ಹೋಲಿಸಿದರೆ, ಲಘು, ಮಧ್ಯಮ ಮತ್ತು ತೀವ್ರ ಶ್ರವಣ ಶಕ್ತಿ ದೋಷ ಹೊಂದಿರುವ ವ್ಯಕ್ತಿಗಳು ಡಿಮೆನ್ಶಿಯಾ ಬೆಳೆಸಿಕೊಳ್ಳುವ ಅಪಾಯವು 2, 3 ಮತ್ತು 5 ಪಟ್ಟು ಹೆಚ್ಚು ಇರುತ್ತದೆ’ ಎಂಬುದಾಗಿ ಡಾ| ಲಿನ್‌ ಹೇಳುತ್ತಾರೆ.

(ಮುಂದುವರೆಯುತ್ತದೆ.)

ಸಂಕಲ್ಪ ಎಂ.

ಪಿಎಚ್‌ಡಿ ಸ್ಕಾಲರ್‌

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.