ಸಂದು ಪುನರ್‌ಜೋಡಣೆಯ ಬಳಿಕ ಕ್ಷಿಪ್ರವಾಗಿ ಗುಣ ಹೊಂದುವುದಕ್ಕೆ ಒತ್ತು
Team Udayavani, Mar 23, 2019, 1:57 PM IST
ಸಂಪೂರ್ಣ ಸಂದು ಪುನರ್‌ಜೋಡಣೆಗೆ ಅಗತ್ಯವಾದ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳು ಭಾರತದ ಬಹುತೇಕ ನಗರಗಳಲ್ಲಿ ಇಂದು ದೊರಕುತ್ತಿದ್ದು, ಈ ಚಿಕಿತ್ಸೆಯ ಲಭ್ಯತೆ ಇಂದು ಹೆಚ್ಚು ಹೆಚ್ಚಾಗಿ ಒದಗುತ್ತಿದೆ. ದೇಹದ ಯಾವುದೇ ಒಂದು ಸಂದಿನಲ್ಲಿ ಶಿಥಿಲವಾದ/ ಸವೆದುಹೋದ ಆಸುಪಾಸಿನ ಎಲುಬಿನ ಮೇಲ್ಮೆ„ಗಳನ್ನು ಪುನರ್‌ಜೋಡಿಸಿ ಚಲನೆಯನ್ನು ಮೃದು ಮತ್ತು ಸುಲಭಗೊಳಿಸುವುದನ್ನು ಈ ಚಿಕಿತ್ಸೆಯು ಒಳಗೊಳ್ಳುತ್ತದೆ. ಸವೆದ/ ಕತ್ತರಿಸಿ ಎಲುಬಿನ ಮೇಲ್ಮೆ„ಗಳಿಗೆ ಬದಲಿಯಾಗಿ ಮಿಶ್ರ ಲೋಹಗಳು, ಗಟ್ಟಿ ಪ್ಲಾಸ್ಟಿಕ್ ಅಥವಾ ಸಿರಾಮಿಕ್‌ನಿಂದ ಮಾಡಿದ ಪ್ರಾಸ್ಥೆಸಿಸ್‌ಗಳನ್ನು ಅಳವಡಿಸಲಾಗುತ್ತದೆ.
ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿಯು ಮೂತ್ರವಿಸರ್ಜನೆಗಾಗಿ ಶೌಚಾಲಯಕ್ಕೆ ತೆರಳಲು ಶಕ್ತನಾದರೆ ಅದಕ್ಕಾಗಿ ಕೃತಕವಾಗಿ ಕೊಳವೆ ಅಳವಡಿಸುವುದು (ಯೂರಿನರಿ ಕೆಥಟರೈಸೇಶನ್) ತಪ್ಪುತ್ತದೆ. ಒಂದೆರಡು ದಿನಗಳಲ್ಲಿ ರೋಗಿಯು ಮೆಟ್ಟಿಲುಗಳನ್ನು ಕೂಡ ಏರಿಳಿಯಬಹುದು. ಈ ಮೂಲಕ ಆಸ್ಪತ್ರೆ ವಾಸ ಹಾಗೂ ಸಂಭಾವ್ಯ ಸೋಂಕಿಗೀಡಾಗುವಿಕೆಯ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಅನುಸರಿಸುವ ಅತ್ಯಾಧುನಿಕ ಔಷಧಗಳು ಮತ್ತು ಅರಿವಳಿಕೆ ಹಾಗೂ ಉತ್ಕೃಷ್ಟ ಗುಣಮಟ್ಟದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳು ಕ್ಷಿಪ್ರವಾಗಿ ಗುಣ ಹೊಂದುವುದನ್ನು ಸಾಧ್ಯವಾಗಿಸುತ್ತವೆ. ಈ ಎಲ್ಲ ಪ್ರಕ್ರಿಯೆ, ಚಿಕಿತ್ಸೆಗಳನ್ನು ಪೂರ್ವಯೋಜಿತವಾಗಿ ನಡೆಸುವುದರಿಂದ ಶಸ್ತ್ರಚಿಕಿತ್ಸೆಗೆ ಮುನ್ನವೇ ನಾವು ರೋಗಿಯನ್ನು ಉತ್ತಮ ಸ್ಥಿತಿಯಲ್ಲಿರಿಸಲು ಸಾಧ್ಯವಾಗುತ್ತದೆ.
ತುರ್ತು ಅಥವಾ ಮೂಳೆ ಮುರಿತಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಮೂಳೆ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಐಚ್ಛಿಕ ಅಥವಾ ಆಯ್ಕೆಯ ಶಸ್ತ್ರಚಿಕಿತ್ಸೆ ಎನ್ನುವುದು ಬೇರೆಯದೇ ಆದ ವಿದ್ಯಮಾನವಾಗಿದೆ. ಅದು ವ್ಯಕ್ತಿಯೊಬ್ಬನ ದೈನಿಕ ಬದುಕಿನ ಗುಣಮಟ್ಟವನ್ನು ಬದಲಾಯಿಸಿ ಉತ್ತಮಪಡಿಸುವುದಕ್ಕೆ ಸಂಬಂಧಪಟ್ಟದ್ದು. ಹೀಗಾಗಿ ಸಂದು ಪುನರ್‌ಜೋಡಣೆಗೆ ಸಂಬಂಧಿಸಿ ಹೇಳುವುದಾದರೆ, ಶಸ್ತ್ರಚಿಕಿತ್ಸೆಯಲ್ಲಿ ಅನುಸರಿಸುವ ತಂತ್ರದ ಒಂದು ಸಣ್ಣ ಬದಲಾವಣೆಯೂ ರೋಗಿ ಬಯಸಿದ ಗುಣಮಟ್ಟದ ಜೀವನ ಚಟುವಟಿಕೆಯನ್ನು ಸಾಧಿಸುವಲ್ಲಿ ಮಹತ್ತರ ಧನಾತ್ಮಕ ಪರಿಣಾಮವನ್ನು ಬೀರಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಈ ಶಸ್ತ್ರಚಿಕಿತ್ಸೆಗಳು ನಡೆಯುವ ಪ್ರಮಾಣ ಹೆಚ್ಚುತ್ತಿದ್ದು, ಈ ಸೌಲಭ್ಯವನ್ನು ಒದಗಿಸುವ ಚಿಕಿತ್ಸಾ ಘಟಕಗಳು, ಆಸ್ಪತ್ರೆಗಳು ಇದಕ್ಕೆ ಸಂಬಂಧಿಸಿದ ಉತ್ಕೃಷ್ಟ ಗುಣಮಟ್ಟದ ಆರೈಕೆ ಮತ್ತು ಪುನಶ್ಚೇತನ ಕ್ರಮಗಳನ್ನು ಒಳಗೊಂಡಿರುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.
ಈ ಬಗೆಯ ಶಸ್ತ್ರಚಿಕಿತ್ಸೆಯು ದೇಹದ ಮೇಲೆ ನಡೆಯುವ ಬೃಹತ್ ಹಸ್ತಕ್ಷೇಪ ಹೌದಾದರೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ದಿನದಿಂದಲೇ ರೋಗಿಯು ಹಾಸಿಗೆ ಬಿಟ್ಟೆದ್ದು ನಡಿಗೆ, ಚಲನೆಗಳನ್ನು ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂಬುದಕ್ಕೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
– ಡಾ| ಯೋಗೀಶ್ ಡಿ. ಕಾಮತ್
ಕನ್ಸಲ್ಟಂಟ್ ನೀ ಮತ್ತು ಹಿಪ್ ಸರ್ಜನ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.