ನೋವಿನ ಕಾರ್ಖಾನೆ; ಉದ್ಯೋಗಕ್ಕೆ ಸಂಬಂಧಿಸಿದ ಮೂಳೆ-ಸ್ನಾಯು ಸಮಸ್ಯೆಗಳು
Team Udayavani, Apr 16, 2023, 3:10 PM IST
ಉದ್ಯೋಗ-ಸಂಬಂಧಿತ ಮೂಳೆ
ಮತ್ತು ಸ್ನಾಯುಗಳ ಅಸ್ವಸ್ಥತೆಗಳು
ತಮ್ಮ ಕೆಲಸದ ಸ್ವರೂಪ, ಮಾಡುವ ವಿಧಾನ ಮತ್ತು ಪರಿಸರದಲ್ಲಿನ ವ್ಯತ್ಯಾಸದಿಂದಾಗಿ ಬೇರೆ ಬೇರೆ ಉದ್ಯೋಗಗಳು ಭಿನ್ನತೆಯನ್ನು ಹೊಂದಿರುತ್ತವೆ. ಈ ಅಂಶಗಳನ್ನು ಮೂಳೆ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಅಸ್ವಸ್ಥತೆಗಳ ಆರಂಭಕ್ಕೆ ಔದ್ಯೋಗಿಕ ಮೂಲಗಳ ಮುಖ್ಯವಾದ ಕಾರಣಗಳು ಎಂದು ಪರಿಗಣಿಸಲಾಗಿದೆ. ಈ ಅಸ್ವಸ್ಥತೆಗಳನ್ನು ದಕ್ಷತಾಶಾಸ್ತ್ರದ ಗಾಯಗಳು ಅಥವಾ ಮಾನವ ದೇಹದ ಚಲನೆ ಹಾಗೂ ಮೂಳೆ ಮತ್ತು ಸ್ನಾಯುಗಳ ರಚನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಗಣನೀಯ ಪ್ರಮಾಣದ ಅಂಗವೈಕಲ್ಯದ ಹೊರೆಗೆ ಕಾರಣವಾಗುತ್ತದೆ. ಇವುಗಳನ್ನು “ನರ, ಸ್ನಾಯುರಜ್ಜು, ಸ್ನಾಯು ಮತ್ತು ಬೆನ್ನುಮೂಳೆಯ ಗಂಟುಗಳಂತಹ ಪೋಷಕ ರಚನೆಗಳನ್ನು ಒಳಗೊಂಡಿರುವ ಅಸ್ವಸ್ಥತೆಗಳ ಗುಂಪು” ಎಂದು ವ್ಯಾಖ್ಯಾನ ಮಾಡಬಹುದು. ಇದು ಚಿಕಿತ್ಸೆಗೆ ತಗಲುವ ಹೆಚ್ಚಿನ ವೆಚ್ಚ, ಹೆಚ್ಚು ಪ್ರಮಾಣದ ತೊಂದರೆ ಮತ್ತು ಘಟನೆಯ ಅನಂತರ ಕೆಲಸಕ್ಕೆ ಬರಲು ಆಗದಿರುವ ದಿನಗಳಿಗೆ ಸಂಬಂಧಿಸಿದೆ. ಅಪಾಯಕಾರಿ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಬರುವಂಥ ವಿವಿಧ ಔದ್ಯೋಗಿಕ ಕಾಯಿಲೆಗಳಿಗಿಂತ ಭಿನ್ನವಾಗಿ, ಈ ತೊಂದರೆಗಳನ್ನು ಉದ್ಯೋಗ-ಸಂಬಂಧಿತ ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳು ಎಂದು ಕರೆಯಬಹುದು. ಹೀಗೆ ಹೇಳಲು ಕಾರಣವೆಂದರೆ ಔದ್ಯೋಗಿಕ ಆರೋಗ್ಯದ ಅಪಾಯಗಳು ಮತ್ತು ಕೆಲಸಕ್ಕೆ ಸಂಬಂಧಿಸಿದ ಇತರೆ ಅಂಶಗಳು (ಉದಾಹರಣೆಗೆ ಕೆಲಸದ ಸ್ಥಿತಿ, ಸ್ಥಳ ಮತ್ತು ವೈಯುಕ್ತಿಕ ಕಾರ್ಯಕ್ಷಮತೆ) ಈ ಅಸ್ವಸ್ಥತೆಗಳ ಹುಟ್ಟಿಗೆ ಅಥವಾ ಉಲ್ಬಣಕ್ಕೆ ಪ್ರಮುಖವಾಗಿ ಕೊಡುಗೆ ನೀಡುತ್ತ ಬಂದಿವೆ. ಇದು ಸಾಮಾನ್ಯ ಆರೋಗ್ಯ ಸಮಸ್ಯೆಗಳ ಪಟ್ಟಿಯಲ್ಲಿಒಳಗೊಂಡಿದ್ದು, ಜನರನ್ನು ಮತ್ತು ಕಾರ್ಮಿಕರನ್ನು, ಅದರಲ್ಲಿಯೂ ವಿಶೇಷವಾಗಿ ಕೈಗಾರಿಕಾ ಉದ್ಯೋಗಿಗಳನ್ನು ಭಾದಿಸುತ್ತದೆ. ಇದು ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಗಂಭೀರವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಭಾವವನ್ನು ಉಂಟು ಮಾಡುವುದರಿಂದ ಇವುಗಳನ್ನು ವೈಯಕ್ತಿಕ ಮತ್ತು ಸಮುದಾಯದ ಉಲ್ಲೇಖದ ವಿಷಯದಲ್ಲಿ ಬಹು ಅಂಶಗಳಿಂದ ಕೇಂದ್ರಿತವಾದದ್ದು ಎಂದು ವಿವರಿಸಲಾಗಿದೆ.
ಆರೋಗ್ಯದ
ಅಪಾಯಗಳು
ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳು ಬಹು ಅಂಶೀಯ ಕಾರಣಗಳಿಂದ ಕೂಡಿದ್ದು, ವೈಯಕ್ತಿಕ, ದೈಹಿಕ, ಸಾಂಸ್ಥಿಕ, ಮಾನಸಿಕ, ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಿದೆ. ಕಾರ್ಮಿಕರು ಸಾಮಾನ್ಯವಾಗಿ ಹಲವಾರು ಅಪಾಯಕಾರಿ ಅಂಶಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ ಮತ್ತು ಇದು ದೀರ್ಘಕಾಲದ ತೊಂದರೆಗಳಿಂದ ಕೂಡಿದ, ವ್ಯತಿರಿಕ್ತ ಪರಿಣಾಮಗಳ ಉಲ್ಬಣಕ್ಕೆ ಕಾರಣವಾಗುತ್ತದೆ.
ವೈಯಕ್ತಿಕ ಅಪಾಯಗಳು:
ವಯಸ್ಸು, ಲಿಂಗ, ಜೀವನಶೈಲಿ, ಸ್ಥೂಲಕಾಯತೆ, ಬಿಡುವಿನ ವೇಳೆಯಲ್ಲಿನ ಚಟುವಟಿಕೆಗಳು, ನಿದ್ರೆಯ ಕೊರತೆ, ಆರೋಗ್ಯದ ಅಭ್ಯಾಸಗಳು, ಕೆಟ್ಟ ಹವ್ಯಾಸಗಳು, ವಿಶ್ರಾಂತಿ ಅವಧಿ, ಮನೋರಂಜನಾ ಸಮಯದ ಕೊರತೆ
ಭೌತಿಕ ಅಪಾಯಗಳು:
– ಹೆಚ್ಚಿನ ಆವರ್ತನದಲ್ಲಿ ಕೈಯಲ್ಲಿ ವಸ್ತು ಹಿಡಿಯುವುದು
– ವಿಚಲಿತ ಮತ್ತು ಸ್ಥಿರವಾಗಿ ಇರಬೇಕಾದ ಭಂಗಿಗಳು
– ದೇಹದ ಭಾಗವು ದೀರ್ಘಕಾಲದವರೆಗೆ ಒಂದೇ ಸ್ಥಾನದಲ್ಲಿ ಇರುವುದು
– ವಿರಾಮವಿಲ್ಲದೆ ದೀರ್ಘಕಾಲ ನಿಲ್ಲುವುದು
– ಹೆಚ್ಚಿನ ಭಾರಗಳ ನಿರ್ವಹಣೆ
– ವೇಗದ ಕೆಲಸದೊಂದಿಗೆ ಹೆಚ್ಚಿನ ಸಮಯದ ಒತ್ತಡ
– ಅಧಿಕ ಅವಧಿಯ ಕರ್ತವ್ಯದ ಸಮಯ
– ಪುನರಾವರ್ತಿತ ಅಥವಾ ಏಕತಾನತೆಯ ಕೆಲಸ
– ಶ್ರಮದಾಯಕ ದೈಹಿಕ ಕೆಲಸ
– ತುಂಬಾ ಬಲ ಹಾಕುವಿಕೆ
ಸಾಂಸ್ಥಿಕ ಅಪಾಯಗಳು:
– ಅತಿಯಾದ ಕೆಲಸದ ಹೊರೆ
– ಅನುಚಿತ ಕೆಲಸದ ವೇಳಾಪಟ್ಟಿ
-ಸೀಮಿತ ವಿಶ್ರಾಂತಿ ಅವಧಿಗಳು
– ರಾಸಾಯನಿಕಗಳು, ಜೈವಿಕ ವಸ್ತುಗಳಿಗೆ ಒಡ್ಡಿಕೊಳ್ಳುವುದು
– ವಿಪರೀತ ಉಷ್ಣತೆ, ಪ್ರಕಾಶ, ಶಬ್ದ, ಕಂಪನ, ವಿಕಿರಣ, ವಾತಾವರಣದ ಒತ್ತಡಗಳಿಗೆ ಒಡ್ಡಿಕೊಳ್ಳುವುದು
– ಸೀಮಿತ ಸ್ಥಳ
– ಕಳಪೆಯಾಗಿ ವಿನ್ಯಾಸಗೊಳಿಸಲಾದ ಕೆಲಸದ ಪ್ರದೇಶ
– ಜಾರುವಂಥ ಮಹಡಿಗಳು ಮತ್ತು ಮೆಟ್ಟಿಲುಗಳು
-ಅಸಮರ್ಪಕ ಕೆಲಸದ ಸಮಯ
ಮನೋಸಾಮಾಜಿಕ ಅಪಾಯಗಳು:
– ಸಂಘರ್ಷದ ಬೇಡಿಕೆಗಳು ಮತ್ತು ಅನುಚಿತ ಪಾತ್ರ
-ಕಳಪೆ ನಿರ್ವಹಣೆ ಮತ್ತು ಸಾಂಸ್ಥಿಕ ಬದಲಾವಣೆ
-ಕೆಲಸದ ಅಭದ್ರತೆ
– ನಿರ್ವಹಣೆಗಾರರಿಂದ ಅಥವಾ ಸಹೋದ್ಯೋಗಿಗಳಿಂದ ಬೆಂಬಲ ಮತ್ತು ಸಂವಹನದ ಕೊರತೆ
– ಮಾನಸಿಕ ಮತ್ತು ಲೈಂಗಿಕ ಕಿರುಕುಳ, ಮೂರನೇ ವ್ಯಕ್ತಿಗಳಿಂದ ಹಿಂಸೆ
-ಉದ್ಯೋಗ ತೃಪ್ತಿಯ ಕೊರತೆ, ಪರಸ್ಪರ ಕಳಪೆ ಸಂಬಂಧಗಳು, ಕೆಲಸದ ಒತ್ತಡ, ಅಸ್ಪಷ್ಟತೆ
– ಮಾನಸಿಕ ಮತ್ತು ನಡವಳಿಕೆಯ ಬದಲಾವಣೆಗಳು
-ಹಗೆತನ, ಆಕ್ರಮಣಶೀಲತೆ, ಆತಂಕ, ಖಿನ್ನತೆ ಮದ್ಯಪಾನ, ಮಾದಕ ವ್ಯಸನ, ಅನಾರೋಗ್ಯ, ಗೈರುಹಾಜರಿ
ಮನೋದೈಹಿಕ
ಅಸ್ವಸ್ಥತೆಗಳು-
ಅಧಿಕ ರಕ್ತದೊತ್ತಡ, ತಲೆನೋವು, ದೇಹಬಾಧೆ, ಜಠರದ ಹುಣ್ಣುಗಳು, ಅಸ್ತಮಾ, ಮಧುಮೇಹ, ಹೃದಯದ ಕಾಯಿಲೆಗಳು
ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳು ಹೇಗೆ ಸಂಭವಿಸುತ್ತವೆ?
ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳು ಪುನರಾವರ್ತಿತ ಆಘಾತದಿಂದ ಪ್ರಾರಂಭಗೊಂಡು, ಜಾಸ್ತಿಯಾಗುತ್ತಾ ಹೋಗುತ್ತದೆ.ಇದು ಮುಂದಕ್ಕೆ ಸ್ನಾಯು ಮತ್ತು ಸ್ನಾಯುರಜ್ಜು ಅಥವಾ ನರಗಳ ಗಾಯಕ್ಕೆ ಕಾರಣವಾಗುತ್ತದೆ.
ಸ್ನಾಯು ಗಾಯ:
ಸತತವಾದ ಕೆಲಸದಿಂದಾಗಿ ಸ್ನಾಯುವಿನ ಸಂಕೋಚನವು ದೀರ್ಘಕಾಲದವರೆಗೆ ಆಗುತ್ತಿರುವುದರಿಂದ ಆ ಭಾಗದಲ್ಲಿ ರಕ್ತದ ಹರಿವು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಸ್ನಾಯುಗಳಿಂದ ಉತ್ಪತ್ತಿಯಾಗುವ ಉಪ-ಉತ್ಪನ್ನಗಳನ್ನು ತೆಗೆದುಹಾಕಲು ತೊಡಕುಂಟಾಗುವುದು ಮತ್ತು ಇದರ ಪರಿಣಾಮವಾಗಿ ಅವು ಸ್ನಾಯುಗಳಲ್ಲಿ ಸಂಗ್ರಹವಾಗುತ್ತವೆ, ಇದು ಸ್ನಾಯುಗಳನ್ನು ಕೆರಳಿಸುವಂತೆ ಮಾಡಿ ನೋವನ್ನು ತರಿಸುತ್ತದೆ. ಅತಿಯಾದ ಚಲನೆಯಿಂದ ಸ್ನಾಯುರಜ್ಜು ಕವಚದಲ್ಲಿರುವ ನಯಗೊಳಿಸುವ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರಬಹುದು ಅಥವಾ ಕಳಪೆ ನಯಗೊಳಿಸುವಿಕೆಗೆ ಕಾರಣವಾಗಬಹುದು. ಇದು ಸ್ನಾಯುರಜ್ಜು ಮತ್ತು ಅದರ ಪೊರೆಗಳ ನಡುವೆ ಘರ್ಷಣೆಯನ್ನು ಉಂಟುಮಾಡುತ್ತದೆ, ಹಾಗೂ ಸ್ನಾಯುರಜ್ಜು ಪ್ರದೇಶದಲ್ಲಿ ಊತ ಉಂಟು ಮಾಡುತ್ತದೆ
ಸ್ನಾಯುರಜ್ಜು ಗಾಯ:
ಪುನರಾವರ್ತಿತ ಕೈ ಕೆಲಸ ಅಥವಾ ಅತಿಯಾದ ಚಲನೆಯಿಂದಾಗಿ ಸ್ನಾಯುರಜ್ಜು ಕವಚದ ನಯಗೊಳಿಸುವ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ಅಥವಾ ಕಳಪೆ ನಯಗೊಳಿಸುವಿಕೆಗೆ ಕಾರಣವಾಗಬಹುದು. ಮುಂದಿನ ದಿನಗಳಲ್ಲಿ ಸ್ನಾಯುರಜ್ಜು ಮತ್ತು ಅದರ ಕವಚದ ನಡುವೆ ಘರ್ಷಣೆ ಉಂಟಾಗುತ್ತದೆ. ಇದು ಸ್ನಾಯುರಜ್ಜು ಪ್ರದೇಶದಲ್ಲಿ ಊತ (ಟೆನೊಸೈನೋವಿಟಿಸ್)ಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಸ್ನಾಯುರಜ್ಜು ಚಲನೆಗೆ ತಡೆ ಉಂಟಾಗುತ್ತದೆ. ಸ್ನಾಯುರಜ್ಜು ಪದೇ ಪದೇ ಉದ್ವಿಗ್ನಗೊಂಡಾಗ, ಅದು ದಪ್ಪವಾಗಿ ಉರಿಯೂತವನ್ನು ಉಂಟುಮಾಡುತ್ತದೆ (ಟೆಂಡೊನೈಟಿಸ್). ಸ್ನಾಯುರಜ್ಜುಗಳು ಮತ್ತು ಮೂಳೆಗಳ ನಡುವಿನ ಚೀಲ (ಬರ್ಸಾ) ಬಹಳಷ್ಟು ಘರ್ಷಣೆಗೆ ಒಳಗಾಗುತ್ತದೆ ಮತ್ತು ಅಲ್ಲಿಯೂ ಉರಿಯೂತ ಉಂಟಾಗುತ್ತದೆ
ನರಗಳ ಗಾಯ:
ನರಗಳೆಲ್ಲವು ಸ್ನಾಯು, ಸ್ನಾಯುರಜ್ಜು ಮತ್ತು ಅಸ್ಥಿರಜ್ಜುಗಳಿಂದ ಆವೃತವಾಗಿವೆ. ಪುನರಾವರ್ತಿತ ಚಲನೆಗಳು ಮತ್ತು ಅಸಹಜವಾದ ಭಂಗಿಗಳಿಂದಾಗಿ, ನರಗಳ ಸುತ್ತಲಿನ ಅಂಗಾಂಶಗಳು ಊದಿಕೊಳ್ಳುತ್ತವೆ ಮತ್ತು ನರಗಳು ಸಂಕುಚಿತಗೊಳಲ್ಪಡುತ್ತದೆ. ಇದು ಮೆದುಳಿನಿಂದ ಸ್ನಾಯುಗಳ ಚಟುವಟಿಕೆಯನ್ನು ನಿಯಂತ್ರಿಸಲು ಬರುವ ಸಂದೇಶಗಳನ್ನು ಸಾಗಿಸುವುದರ ಮೇಲೆ ಪರಿಣಾಮ ಬೀರುತ್ತದೆ. ನರಗಳ ಸಂಕೋಚನವು ಸ್ನಾಯು ದೌರ್ಬಲ್ಯ, ಬದಲಾದ ಸಂವೇದನೆ ಮತ್ತು ಮರಗಟ್ಟುವಿಕೆಗೆ ಕಾರಣವಾಗುತ್ತದೆ.
ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳಿಗೆ ಕಾರಣ ಆಗುವಂಥ ಅಪಾಯಕಾರಿ ಅಂಶಗಳು:
ಆಗಾಗ್ಗೆ ಬಾಗುವುದು, ತಿರುಚು ವುದು, ಎತ್ತುವುದು, ತಳ್ಳುವುದು, ಎಳೆಯುವುದು, ಜಿಗಿಯುವುದು, ಭಾರವನ್ನು ಹಿಡಿದಿಟ್ಟುಕೊಳ್ಳುವುದು, ಬಿಗಿಗೊಳಿಸುವುದು, ಅಪಾಯಕಾರಿಯಾದಂತಹ ಕೆಲಸವನ್ನು ಮಾಡುವುದು, ನಿರಂತರ ಪುನರಾವರ್ತನೆ ಅಧಿಕ ಬಲ ಹಾಕಿ ಕೆಲಸ ಮಾಡುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಚಲನೆಗಳ ವೇಗ ಮತ್ತು ಅವುಗಳ ನಡುವೆ ಚೇತರಿಕೆಗೆ ಸಮಯದ ಕೊರತೆ.
ರೋಗ ಸೂಚನೆ
ಹಾಗೂ ಲಕ್ಷಣಗಳು:
-ನೋವು
-ಕೆಂಪಾಗುವುದು
-ಊತ
-ಬಿಗಿತ
-ಮರಗಟ್ಟುವಿಕೆ
-ಸುಡುವ ಸಂವೇದನೆ
-ಆಯಾಸ
-ಸ್ನಾಯು ಸೆಳೆತ
-ನಿದ್ರಾ ಭಂಗ
ರೋಗನಿರ್ಣಯ:
ಉದ್ಯೋಗದ ಬಗ್ಗೆ ಮತ್ತು ನೋವಿನ ಗುಣಲಕ್ಷಣಗಳ ವಿವರವನ್ನು ತೆಗೆದುಕೊಂಡ ನಂತರ ಈ ಕೆಳಗಿನ ಪರೀಕ್ಷೆಯನ್ನು ಮಾಡಲಾಗುವುದು
-ರಕ್ತ ಪರೀಕ್ಷೆಗಳು
-ಕ್ಷ -ಕಿರಣಗಳು
-ಕಂಪ್ಯೂಟೆಡ್ ಟೊಮೊಗ್ರಫಿ(ಸಿಟಿ) ಸ್‌ಕ್ಯಾನ್‌ಗಳು
-ಮ್ಯಾಗ್ನೆಟಿಕ್ ರೆಸೋನೆ… ಇಮೇಜಿಂಗ್
ಚಿಕಿತ್ಸಾ ಸ್ಥಳ:
ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳಿಗೆ ಚಿಕಿತ್ಸೆಯನ್ನು ಹೆಚ್ಚಾಗಿ ಹೊರರೋಗಿ ಅಥವಾ ಕ್ಲಿನಿಕ್ ಆಧಾರಿತ ಸ್ಥಳಗಳಲ್ಲಿ ನೀಡಲಾಗುತ್ತದೆ; ಆದಾಗ್ಯೂ, ರೋಗಲಕ್ಷಣಗಳು ತೀವ್ರವಾಗಿದ್ದಾಗ ಇದನ್ನು ಸಾಮಾನ್ಯವಾಗಿ ತುರ್ತು ವಿಭಾಗದಲ್ಲೂ ನೀಡಬಹುದು. ವ್ಯಾಯಾಮ ಚಿಕಿತ್ಸೆಯನ್ನು ಸಾಮಾನ್ಯವಾಗಿ ಕೇಂದ್ರ, ಸಮುದಾಯ ಅಥವಾ ಸಮಗ್ರ ಆರೋಗ್ಯ ಕೇಂದ್ರಗಳಲ್ಲಿ ನೀಡುತ್ತಾರೆ. ಪುನರ್ವಸತಿಯನ್ನು ಹೊರರೋಗಿ ಆಧಾರದ ಮೇಲೆ ಅಥವಾ ಸಮುದಾಯ ಕೇಂದ್ರಗಳಲ್ಲಿ ಮುಂದುವರಿಸಬಹುದು.
ಮೂಳೆ ಮತ್ತು ಸ್ನಾಯುಗಳ ನೋವಿನ ಚಿಕಿತ್ಸೆ
ಮೂಳೆ, ಕೀಲು ಅಥವಾ ಸ್ನಾಯುಗಳಲ್ಲಿ ನಿರಂತರವಾಗಿ ಅಥವಾ ಪುನರಾವರ್ತಿತವಾಗಿ ಅನುಭವಿಸುವ ಮುಖ್ಯ ದೂರು ನೋವು ಆಗಿರುತ್ತದೆ. ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳಿಗೆ ಸಂಬಂಧಿಸಿದ ನೋವನ್ನು ನಿವಾರಿಸುವ ಕ್ರಮಗಳಲ್ಲಿ ಔಷಧಿಗಳು ಮತ್ತು ಔಷಧೀಯವಲ್ಲದ ಚಿಕಿತ್ಸೆಗಳು ಪ್ರಮುಖ ಅಂಶಗಳಾಗಿವೆ. ಔಷಧೀಯವಲ್ಲದ ಚಿಕಿತ್ಸೆಗಳಲ್ಲಿ ವಿಶ್ರಾಂತಿ, ವ್ಯಾಯಾಮ ಚಿಕಿತ್ಸೆ, ಬ್ಯಾಂಡೇಜ್ ಅಥವಾ ಪಟ್ಟಿ ಕಟ್ಟುವಂಥ ಚಿಕಿತ್ಸಾ ವಿಧಾನವು ನೋವನ್ನು ನಿವಾರಿಸುವಲ್ಲಿ ಮತ್ತು ಬಹು ಮೂಳೆ ಮತ್ತು ಸ್ನಾಯುಗಳ ಅಸ್ವಸ್ಥತೆಗಳಿಂದ ತೊಂದರೆ ಉಂಟಾದ ಕಾರ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಚಲನೆಯ ಮಾರ್ಪಾಡು ಅಥವಾ ನಿರ್ಬಂಧ
1. ಚಲನೆ ನಿರ್ಬಂಧ ಅಥವಾ ವಿಶ್ರಾಂತಿ:
ಗಂಟುಗಳಿಗೆ ಹೆಚ್ಚಿನ ಹಾನಿಯನ್ನು ತಪ್ಪಿಸಲು ಚಲನೆಗಳನ್ನು ಮಾರ್ಪಡಿಸುವುದು. ವಿಪರೀತ ಹೊರೆಯನ್ನು ತಪ್ಪಿಸಲು ಕೆಲಸ ಅಥವಾ ಕಾರ್ಯಕ್ಷಮತೆಯನ್ನು ಮರುವಿನ್ಯಾಸಗೊಳಿಸುವುದು, ಇನ್ನೊಂದು ಕೆಲಸದ ಸ್ಥಳಕ್ಕೆ ವರ್ಗಾಯಿಸುವುದು ಅಥವಾ ಬೇರೆ ಕೆಲಸವನ್ನು ಪರಿಗಣಿಸುವುದು. ಮುಂತಾದವುಗಳ ವ್ಯವಸ್ಥೆ ಮಾಡಬಹುದು. ತೀವ್ರ ಹಂತದಲ್ಲಿ, ಸಮಸ್ಯೆಗಳಿಗೆ ಕಾರಣವಾಗುವ ಚಲನೆಯನ್ನು ನಿಲ್ಲಿಸುವುದೇ ಚಿಕಿತ್ಸೆಯಾಗಿರುತ್ತದೆ. ದೇಹದ ಒಂದು ಭಾಗಕ್ಕೆ ಸಂಭವನೀಯ ಹಾನಿಯನ್ನು ತಡೆಗಟ್ಟಲು ಅಥವಾ ಗಂಟನ್ನು ಯಾಂತ್ರಿಕವಾಗಿ ಬೆಂಬಲಿಸಲು ಚಲನೆಯನ್ನು ನಿರ್ಬಂಧಿಸುವುದು ಅಥವಾ ಪಟ್ಟಿಯ ಸಹಾಯದಿಂದ ಗಂಟನ್ನು ನಿಶ್ಚಲಗೊಳಿಸುವುದರ ಮೂಲಕ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
2. ವಿದ್ಯುನ್ಮಾನ ವಿಧಾನಗಳು:
ವಿದ್ಯುನ್ಮಾನ ವಿಧಾನಗಳು ಅಥವಾ ಶಾಖ ಅಥವಾ ಮಂಜು ಚಿಕಿತ್ಸೆ ನೋವನ್ನು ನಿವಾರಿಸುತ್ತದೆ ಮತ್ತು ಅಂಗಾಂಶ ದುರಸ್ತಿಯನ್ನು ವೇಗಗೊಳಿಸುತ್ತದೆ. ನೋವಿನ ದೀರ್ಘಕಾಲದ ಮತ್ತು ರೋಗಲಕ್ಷಣಗಳ ಪ್ರಗತಿಯನ್ನು ಅವಲಂಬಿಸಿ ಗಾಯ ಮತ್ತು ಉರಿಯೂತವನ್ನು ಗಮನಿಸಿಕೊಂಡು ಚಿಕಿತ್ಸೆಯ ಪ್ರಕಾರವನ್ನು ಶಿಫಾರಸು ಮಾಡಲಾಗುತ್ತದೆ.
3. ವ್ಯಾಯಾಮ ಚಿಕಿತ್ಸೆ:
ಆರಂಭದಲ್ಲಿ ಕೆಲಸದ ಮತ್ತು ಪರಿಸರದ ಮೌಲ್ಯಮಾಪನವನ್ನು ಮಾಡುವುದರಲ್ಲಿ ಹೆಚ್ಚಿನ ಪ್ರಯೋಜನಗಳು ಇವೆ. ರೋಗಿಗಳಿಗೆ ಅನುಕೂಲವಾಗುವಂತ ವಿವಿಧ ವ್ಯಾಯಾಮಗಳನ್ನು ಚಿಕಿತ್ಸೆಯಲ್ಲಿ ಅಳವಡಿಸಿ ಜನರಿಗೆ ಹೇಳಿಕೊಡಲಾಗುತ್ತದೆ.
ಚಿಕಿತ್ಸಾ ವಿಧಾನಗಳು :
ಚಲನೆ ನಿರ್ಬಂಧ ಅಥವಾ ವಿಶ್ರಾಂತಿ
ವಿದ್ಯುನ್ಮಾನ ವಿಧಾನಗಳು
ವ್ಯಾಯಾಮ ಚಿಕಿತ್ಸೆ
ವ್ಯಾಯಾಮ ಚಿಕಿತ್ಸೆಯ ಪರಿಣಾಮಗಳು
1. ಚಲನೆ ಮತ್ತು ನಮ್ಯತೆಯ ವ್ಯಾಪ್ತಿಯನ್ನು ನಿರ್ವಹಿಸುವುದು ಮತ್ತು ಸುಧಾರಿಸುವುದು
2. ಸ್ನಾಯುವಿನ ಬಲವನ್ನು ಕಾಪಾಡಿಕೊಳ್ಳವುದು ಮತ್ತು ಹೆಚ್ಚಿಸುವುದು
3. ಸಮತೋಲನ ಮತ್ತು ಸಮನ್ವಯವನ್ನು ಕಾಪಾಡಿಕೊಳ್ಳುÛವುದು ಮತ್ತು ಸುಧಾರಿಸುವುದು
4. ಹೃದಯ ಶ್ವಾಶಕೊಶಗಳ ಸಾಮರ್ಥ್ಯವನ್ನು ಸುಧಾರಿಸುವುದು
5. ಸಕ್ರಿಯ ಜೀವನವನ್ನು ನಡೆಸಲು ಆತ್ಮವಿಶ್ವಾಸವನ್ನು ನೀಡುವುದು
6. ಮಾಡಲಾಗದಿರುವ ಕೆಲಸವನ್ನು ಮರುಸ್ಥಾಪಿಸಿಸುವುದು
7. ದುರ್ಬಲತೆಯನ್ನು ಕಡಿಮೆ ಮಾಡುವುದು
8. ಕ್ರಿಯಾತ್ಮಕ ಸಾಮರ್ಥ್ಯಗಳನ್ನು ಪ್ರೇರೇಪಿಸುವುದು
9. ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉನ್ನತೀಕರಿಸುವುದು
ವಿಶ್ರಾಂತಿ ನಡೆಗಳು
-ಚಲನೆಯ ವ್ಯಾಯಾಮಗಳು
-ಪ್ರತಿರೋಧ ವ್ಯಾಯಾಮಗಳು
-ಸಡಿಲ ಮಾಡುವ ವ್ಯಾಯಾಮಗಳು
-ಗಂಟುಗಳ ಸಜ್ಜುಗೊಳಿಸುವಿಕೆ
-ಸಮತೋಲನ ಮತ್ತು ಸಮನ್ವಯ ವ್ಯಾಯಾಮಗಳು
-ಸಾಮರ್ಥ್ಯ, ಶಕ್ತಿ ಮತ್ತು ಸಹಿಷ್ಣುತೆ ಕಾರ್ಯಕ್ರಮಗಳು
-ಗ್ರಹಿಕೆ ತರಬೇತಿ
-ಭಂಗಿಗಳ ಜಾಗೃತಿ ತರಬೇತಿ
-ಕಾರ್ಯ-ನಿರ್ದಿಷ್ಟ ಕ್ರಿಯಾತ್ಮಕ ತರಬೇತಿ
ವ್ಯಾಯಾಮ ಚಿಕಿತ್ಸಾ ಕಾರ್ಯಕ್ರಮಗಳನ್ನು ಭೌತಚಿಕಿತ್ಸಕರ ಮಾರ್ಗದರ್ಶನದಲ್ಲಿ ನಡೆಸಬೇಕು.
ಮನೆ ಮದ್ದು
-ವಿಶ್ರಾಂತಿ ಕೊಡುವುದು
-ತೊಂದರೆ ಗೊಳಗಾದ ಭಾಗವನ್ನು ಎತ್ತರದಲ್ಲಿ ಇರಿಸುವುದು
-ಮಂಜು ಅಥವಾ ಶಾಖ ಚಿಕಿತ್ಸೆಯನ್ನು ಸಲಹೆ ನೀಡಿದಂತೆ ಕೊಡುವುದು
-ವ್ಯಾಯಾಮದ ಪ್ರಕಾರಗಳನ್ನು ತೋರಿಸಿದಂತೆ ಮಾಡುವುದು
-ದೇಹ ಸ್ಥಿರಗೊಳಿಸಲು ಶಿಫಾರಸು ಮಾಡಿದ ವ್ಯಾಯಾಮಗಳು
-ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು
-ಒತ್ತಡ ಕಡಿತಗೊಳಿಸುವ ತಂತ್ರಗಳನ್ನು ತಿಳಿಸುವುದು
-ಡಾ| ರಾಜೇಶ್ ನಾವಡ ಜಿ.ವಿ.
ಅಸಿಸ್ಟೆಂಟ್ ಪ್ರೊಫೆಸರ್, ಫಿಸಿಯೋಥೆರಪಿ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.