ಆಹಾರದಲ್ಲಿ ನಾರಿನಂಶ

Team Udayavani, Jul 14, 2019, 5:17 AM IST

Food

ಕಳೆದ ಸಂಚಿಕೆಯಿಂದ-ಆದರೆ, ಕೆಲವು ಮಂದಿಯಲ್ಲಿ ಮಲಬದ್ಧತೆ, ಭೇದಿ ಅಥವಾ ಇರಿಟೆಬಲ್‌ ಬವೆಲ್‌ ಸಿಂಡ್ರೋಮ್‌ನಂತಹ ನಿರ್ದಿಷ್ಟ ಆರೋಗ್ಯ ಸ್ಥಿತಿಗತಿಗಳಿಂದಾಗಿ ಆಹಾರ ಬದಲಾವಣೆಗಳಿಂದಲೂ ನಿರೀಕ್ಷಿತ ಪರಿಣಾಮಗಳು ಕಂಡುಬರದೆ ಇದ್ದಲ್ಲಿ ನಾರಿನಂಶ ಪೂರಕ ಆಹಾರಗಳನ್ನು ಒದಗಿಸಬೇಕಾಗಬಹುದು. ನಾರಿನಂಶ ಪೂರಕ ಆಹಾರಗಳನ್ನು ಸೇವಿಸುವುದಕ್ಕೆ ಮುನ್ನ ನಿಮ್ಮ ವೈದ್ಯರ ಜತೆಗೆ ಸಮಾಲೋಚಿಸಿಕೊಳ್ಳಿ.

ನಾರಿನಂಶ ಪೂರೈಕೆ ಹೆಚ್ಚಿಸಿಕೊಳ್ಳಲು
ಇಡೀ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ಮೊಳಕೆ ಕಾಳುಗಳು, ಬೀನ್ಸ್‌ ಮತ್ತು ಅಗಸೆ ಬೀಜದಂತಹ ಕೆಲವು ಬೀಜಗಳು ನಾರಿನಂಶದ ಸಮೃದ್ಧ ಮೂಲಗಳಾಗಿವೆ. ಸಜ್ಜೆ ಖೀಚಿx, ಮಿಶ್ರ ತರಕಾರಿ ಸಲಾಡ್‌, ಚಟ್‌ಪಟಿ ಸೌøಟ್ಸ್‌ ಫ್ರಾಂಕಿ, ಹೆಸರು ಕಾಳು ಅಥವಾ ಕಡಲೆ ಉಸ್ಲಿ ಮತ್ತು ಮಿಶ್ರ ತರಕಾರಿ ಕ್ಲಿಯರ್‌ ಸೂಪ್‌ನಂತಹ ತರಹೇವಾರಿ ಅಡುಗೆಗಳಲ್ಲಿ ಇವುಗಳನ್ನು ಉಪಯೋಗಿಸಿ ಸೇವಿಸುವ ಮೂಲಕ ನಾರಿನಂಶವನ್ನು ವೃದ್ಧಿಸಿಕೊಳ್ಳಬಹುದು. ಮಿಶ್ರ ತರಕಾರಿ ಸಬ್ಜಿ ಅಥವಾ ಪಲ್ಯಗಳು ಹೆಚ್ಚು ನಾರಿನಂಶ ಹೊಂದಿದ್ದು, ನಮ್ಮ ಹೊಟ್ಟೆ ಮತ್ತು ಕರುಳಿಗೆ ಉತ್ತಮವಾಗಿರುವುದರಿಂದ ಹೆಚ್ಚು ಉಪಯೋಗಿಸುವುದು ವಿಹಿತ.

ನಿಮ್ಮ ಮಕ್ಕಳಿಗೆ ಸಂಸ್ಕರಿತ ಆಹಾರದ ಬದಲಾಗಿ
ನಾರಿನಂಶ ಸಹಿತ ಆಹಾರ ಕೊಡಿ
ನಿಮ್ಮ ಮಕ್ಕಳಿಗೆ ನಾರಿನಂಶ ಹೆಚ್ಚಿರುವ ತಿಂಡಿ ತಿನಿಸುಗಳನ್ನು ನೀಡುವುದರ ಮೂಲಕ ಅವರು ದೀರ್ಘ‌ಕಾಲ ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳಿ. ಮಿಶ್ರ ಹಿಟ್ಟಿನ ದೋಸೆ, ದೋಸೆ ಮಾಡಿ ಅದರ ಮೇಲೆ ಮಿಶ್ರ ತರಕಾರಿಯಿಂದ ಅಲಂಕರಿಸುವುದು ಇತ್ಯಾದಿಗಳು ಸಿದ್ಧ – ಸಂಸ್ಕರಿತ ತಿಂಡಿ ತಿನಿಸುಗಳಿಗಿಂತ ಸಾವಿರ ಪಾಲು ಆರೋಗ್ಯಕರ.

ನವಣೆಯು ಅತಿ ಹೆಚ್ಚು ನಾರಿನಂಶವನ್ನು ಮತ್ತು ಸಂಕೀರ್ಣ ಪಿಷ್ಠವನ್ನು ಹೊಂದಿರುತ್ತದೆ. ಸಿರಿಧಾನ್ಯ ಉಪ್ಪಿಟ್ಟು ಬೆಳಗಿನ ಉಪಾಹಾರವಾಗಿ ಸೇವಿಸುವುದಕ್ಕೆ ಒಂದು ಉತ್ತಮ ಸಮೃದ್ಧ ನಾರಿನಂಶವುಳ್ಳ ಆಹಾರ. ರವಾದಿಂದ ತಯಾರಿಸಿದ ಉಪ್ಪಿಟ್ಟಿಗಿಂತ ಇದು ಹೆಚ್ಚು ಆರೋಗ್ಯಕರ.

ದೈನಿಕ ಊಟ- ಉಪಾಹಾರದಲ್ಲಿ
ಹೆಚ್ಚು ಸಲಾಡ್‌ಗಳನ್ನು ಬಳಸಿ – ಅತಿ ಹೆಚ್ಚು ನಾರಿನಂಶ ಗಳಿಸಿ
ನಾರಿನಂಶ, ಪ್ರೊಟೀನ್‌, ಸಂಕೀರ್ಣ ಪಿಷ್ಠಗಳಿದ್ದು ಆ್ಯಂಟಿ ಓಕ್ಸಿಡೆಂಟ್‌ಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕಿಣ್ವಗಳನ್ನು ಒದಗಿಸುವ ಸಲಾಡ್‌ಗಳನ್ನು ಆಯ್ದುಕೊಳ್ಳಿ.
ಒಂದು ಬೌಲ್‌ನಲ್ಲಿ ಮೊಳಕೆ ಬರಿಸಿದ ಇಡೀ ಹೆಸರು ಕಾಳು ಅಥವಾ ಕಡಲೆಯ ಜತೆಗೆ ಸೌತೆಕಾಯಿ, ಟೊಮ್ಯಾಟೊ, ಕ್ಯಾರೆಟ್‌, ಬೀಟ್‌ರೂಟ್‌, ನೀರುಳ್ಳಿ, ಕ್ಯಾಬೇಜ್‌ ತುರಿ, ಜೋಳ ಮತ್ತು ದಾಳಿಂಬೆಯಂತಹ ತರಕಾರಿಗಳನ್ನು ತೆಗೆದುಕೊಳ್ಳಿ. ನಿಂಬೆರಸ, ಕಾಳುಮೆಣಸಿನ ಪುಡಿ ಅಥವಾ ಚಾಟ್‌ಮಸಾಲಾ ಬೆರೆಸಿ ರುಚಿ ಹೆಚ್ಚಿಸಿಕೊಳ್ಳಿ. ಬೇಕಿದ್ದರೆ ಉಪ್ಪು ಹಾಕಿಕೊಳ್ಳಬಹುದು. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ.

-ಮುಂದುವರಿಯುವುದು

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.