ಲ್ಯಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯ ಬಳಿಕ ಆಹಾರ ನುಂಗುವಿಕೆ


Team Udayavani, Oct 4, 2020, 7:29 PM IST

edition-td-y2

ಸಾಂದರ್ಭಿಕ ಚಿತ್ರ

ಧ್ವನಿ ಪೆಟ್ಟಿಗೆ, ಓರೊಫಾರಿಂಕ್ಸ್‌, ಟಾನ್ಸಿಲ್‌ಗ‌ಳು ಮತ್ತು ಗಂಟಲು ಪ್ರದೇಶದ ಇತರ ಅಂಗಾಂಗಳಲ್ಲಿ ಉಂಟಾಗುವ ಕ್ಯಾನ್ಸರ್‌ಗಳನ್ನು ಗಂಟಲಿನ ಕ್ಯಾನ್ಸರ್‌ ಎಂದು ವರ್ಗೀಕರಿಸಲಾಗುತ್ತದೆ. ಕ್ಯಾನ್ಸರ್‌ ಗಡ್ಡೆಯ ಗಾತ್ರ, ಸ್ಥಾನ ಮತ್ತು ಪ್ರಸರಣವನ್ನು ಆಧರಿಸಿ ಅದಕ್ಕೆ ಶಸ್ತ್ರಕ್ರಿಯೆಯ ಮೂಲಕ ಹಾಗೂ ಕೀಮೋಥೆರಪಿ ಸಹಿತ ರೇಡಿಯೋಥೆರಪಿಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ. ಲ್ಯಾರಿಂಜೆಕ್ಟಮಿ ಅಂದರೆ ಗಂಟಲುಕುಹರವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು.

ಲ್ಯಾರಿಂಜೆಕ್ಟಮಿ ನಡೆಸಿದ ಬಳಿಕ ರೋಗಿಗೆ ಧ್ವನಿಪೆಟ್ಟಿಗೆಯು ಇರುವುದಿಲ್ಲ ಮತ್ತು ಮಾತನಾಡಲು ಸಾಧ್ಯವಾಗುವುದಿಲ್ಲ. ಅಂಥವರು ಟ್ರೇಕಿಯೋಸೊಯಲ್‌ ಮಾತು, ಈಸೊಫೇಜಿಯಲ್‌ ಮಾತು ಅಥವಾ ಕೃತಕ ಲ್ಯಾರಿಂಕ್ಸ್‌ನಂತಹ ಮಾತನಾಡುವ ಪರ್ಯಾಯ ವಿಧಾನಗಳನ್ನು ಅವಲಂಬಿಸಬೇಕಾಗುತ್ತದೆ. ಈ ಮೂರು ವಿಧಾನಗಳಲ್ಲಿ ಈಸೊಫೇಜಿಯಲ್‌ ಸ್ಪೀಕರ್‌ಗಳು ಮಾತು ಉತ್ಪತ್ತಿ ಮಾಡಲು ಸಿಲಿಕಾನ್‌ನಿಂದ ನಿರ್ಮಿಸಲಾದ ಧ್ವನಿ ಪ್ರಾಸ್ಥೆಸಿಸ್‌ ಗಳನ್ನು ಉಪಯೋಗಿಸುತ್ತವೆ. ಇಲ್ಲಿ ಶ್ವಾಸಕೋಶದಿಂದ ಬರುವ ಗಾಳಿಯನ್ನು ಈಸೋಫೇಗಸ್‌ ಅಥವಾ ಅನ್ನನಾಳಕ್ಕೆ ತಿರುಗಿಸಿ ಅನ್ನನಾಳದ ಮೇಲ್ಭಾಗ (ಪಿಇ ವಿಭಾಗ) ದಿಂದ ಮಾತು ಉತ್ಪತ್ತಿಯಾಗುತ್ತದೆ. ಲ್ಯಾರಿಂಜೆಕ್ಟಮಿ ಶಸ್ತ್ರಚಿಕಿತ್ಸೆಯು ಎಲ್ಲ ಪ್ರಕರಣಗಳಲ್ಲಿ ಅನ್ನನಾಳಕ್ಕೆ ವ್ಯತ್ಯಯ ಉಂಟುಮಾಡದಿದ್ದರೂ ಈ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ನುಂಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಬಾಯಿಯ ಮೂಲಕ ಆಹಾರ ಸೇವಿಸುವ ಕ್ರಿಯೆಯು ಕ್ಯಾನ್ಸರ್‌ ಚಿಕಿತ್ಸೆಯ ಪ್ರಕ್ರಿಯೆ ಮತ್ತು ಗುಣ ಹೊಂದುವ ಸಮಯದಲ್ಲಿ ಅನನುಕೂಲ, ವ್ಯತ್ಯಯ ಎದುರಿಸಬಹುದಾಗಿದೆ.

ನುಂಗುವಿಕೆಯಲ್ಲಿ ವ್ಯತ್ಯಯವು ಕ್ಯಾನ್ಸರ್‌ನ ಪರಿಣಾಮವಾಗಿಯೇ ಆಗಿರಬಹುದು, ಶಸ್ತ್ರಚಿಕಿತ್ಸೆಯ ಪರಿಣಾಮದಿಂದ ಆಗಿರಬಹುದು ಮತ್ತು/ ಅಥವಾ ರೇಡಿಯೇಶನ್‌ ಮತ್ತು ಕಿಮೋಥೆರಪಿ ಚಿಕಿತ್ಸೆಗಳ ಪರಿಣಾಮವಾಗಿಯೂ ಉಂಟಾಗಬಹುದು. ಸಂಪೂರ್ಣ ಲ್ಯಾರಿಂಜೆಕ್ಟಮಿಗೆ ಒಳಗಾಗಿರುವ ರೋಗಿಗಳು ಮೂಗಿನ ಮೂಲಕ ಉಸಿರಾಟ ನಡೆಸುವುದಿಲ್ಲ, ಬದಲಾಗಿ ಕುತ್ತಿಗೆಯಲ್ಲಿ ಅಳವಡಿಸಲಾಗಿರುವ ಸ್ಟೋಮಾ ಎಂಬ ಕೊಳವೆಯ ಮೂಲಕ ಉಸಿರಾಡುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ಇಂತಹ ರೋಗಿಗಳಿಗೆ ಉಸಿರಾಡಲು ಶ್ವಾಸನಾಳ ಮತ್ತು ಆಹಾರ ಸೇವಿಸಲು ಅನ್ನನಾಳಗಳ ಎರಡು ಪ್ರತ್ಯೇಕ ವ್ಯವಸ್ಥೆಗಳಿರುತ್ತವೆ. ಶಸ್ತ್ರಚಿಕಿತ್ಸೆಯ ಬಳಿಕ ಬಾಯಿಯ ಮೂಲಕ ಆಹಾರ ಸೇವಿಸುವುದಕ್ಕೆ ಸಾಧ್ಯವಾಗುವಷ್ಟು ಗಾಯ ಗುಣವಾಗುವವರೆಗೆ ಫೀಡಿಂಗ್‌ ಟ್ಯೂಬ್‌ (ಆರ್‌ಟಿ) ಆಹಾರ ಸೇವಿಸುವುದಕ್ಕೆ ದಾರಿಯಾಗಿರುತ್ತದೆ.

ರೇಡಿಯೋಥೆರಪಿಯಿಂದಾಗಿ ಬಾಯಿ ಮತ್ತು ಗಂಟಲುಗಳಲ್ಲಿ ಹುಣ್ಣುಗಳಾಗಬಹುದು, ಇದರಿಂದಾಗಿ ಆಹಾರ ಸೇವಿಸುವುದು ತುಂಬಾ ಯಾತನಾಮಯವಾಗಬಹುದು ಮಾತ್ರವಲ್ಲದೆ, ಕೆಲವು ಪ್ರಕರಣಗಳಲ್ಲಿ ಅಸಾಧ್ಯವೂ ಆಗಬಹುದು. ಇಂತಹ ಸಂದರ್ಭಗಳಲ್ಲಿ  ಫೀಡಿಂಗ್‌ ಟ್ಯೂಬ್‌ ನ ಅಗತ್ಯ ಬೀಳಬಹುದು, ಅಲ್ಲದೆ ನೋವನ್ನು ಕಡಿಮೆ ಮಾಡುವುದಕ್ಕಾಗಿ ನೋವು ನಿವಾರಕಗಳು ಮತ್ತು ಬಾಯಿಯನ್ನು ಸ್ಥಳೀಯವಾಗಿ ಜೋಮುಗಟ್ಟಿಸುವ ಜೆಲ್‌ ಗಳನ್ನು ವೈದ್ಯರು ಶಿಫಾರಸು ಮಾಡಬಹುದು.

ರೋಗಿಯು ಬಾಯಿಯ ಮೂಲಕ ಆಹಾರ ಸೇವಿಸಲು ಆರಂಭಿಸಿದಾಗ ಆರಂಭದಲ್ಲಿ ಕೆಲವು ನಿರ್ಬಂಧಗಳನ್ನು ಅನುಸರಿಸಬೇಕಾಗುತ್ತದೆ. ಹಾನಿಗೊಂಡ ಧ್ವನಿ ಪ್ರಾಸ್ಥೆಸಿಸ್‌ ಬಳಸುವುದರಿಂದ ಅಥವಾ ಶಸ್ತ್ರಚಿಕಿತ್ಸೆಯ ಬಳಿಕದ ಕೆಲವು

ಸಂರಚನಾತ್ಮಕ ಸಮಸ್ಯೆಗಳಿಂದಾಗಿ ಟ್ರೇಕಿಯೊ-ಈಸೊಫೇಜಿಯಲ್‌ ಪ್ರಾಸ್ಥೆಟಿಕ್‌ ಬಳಕೆದಾರರಲ್ಲಿ ತಿನ್ನುವಾಗ ಅಥವಾ ಕುಡಿಯುವಾಗ ಆಹಾರವು ಶ್ವಾಸಮಾರ್ಗಕ್ಕೆ ನುಗ್ಗುವ ಅಪಾಯ ಇರುತ್ತದೆ.

ಲ್ಯಾರಿಂಜೆಕ್ಟಮಿ ರೋಗಿಗಳು ಆಹಾರಾಭ್ಯಾಸದಲ್ಲಿ ಅನುಸರಿಸಬೇಕಾದ ಬದಲಾವಣೆಗಳೇನು? :  ಆಹಾರ ಸೇವಿಸುವಾಗ ಸದಾ ನೇರವಾಗಿ ಕುಳಿತಿರುವ ಭಂಗಿಯಲ್ಲಿರಬೇಕು. ಮಲಗಿಕೊಂಡು ಅಥವಾ ಬಿದ್ದುಕೊಂಡ ಸ್ಥಿತಿಯಲ್ಲಿ ಆಹಾರ ಸೇವಿಸಲೇಬಾರದು. ಹಾಗೆ ಮಾಡಿದರೆ ಶ್ವಾಸಮಾರ್ಗಕ್ಕೆ ಆಹಾರವು ನುಗ್ಗುವ ಅಪಾಯ ಇರುತ್ತದೆ, ಅದರಲ್ಲೂ ವಿಶೇಷವಾಗಿ ಟ್ರೆಕಿಯಾ ಈಸೊಫೇಜಿಯಲ್‌ ಪ್ರಾಸ್ಥೆಸಿಸ್‌ ಬಳಕೆದಾರರಲ್ಲಿ ಈ ಅಪಾಯ ಇನ್ನೂ ಹೆಚ್ಚು. ಆರಂಭದಲ್ಲಿ ಅರೆ ಘನ ಅಥವಾ ದ್ರವರೂಪದ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಅನ್ನನಾಳದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಬದಲಾವಣೆ ಮಾಡಿದ್ದಾಗ ಅಥವಾ ಧ್ವನಿ ಪ್ರಾಸ್ಥೆಸಿಸ್‌ ಬಳಕೆದಾರರಲ್ಲಿ ಅದು ಸರಿಯಾಗಿ ಕೆಲಸ ಮಾಡದೆ ಇರುವಾಗ ಘನ ಆಹಾರವನ್ನು ಸೇವಿಸುವುದು ಕಷ್ಟವಾಗುತ್ತದೆ ಅಥವಾ ಅಸುರಕ್ಷಿತವಾಗಿರುತ್ತದೆ. ಆಮ್ಲಿಯ ಮತ್ತು ಮಸಾಲೆಯುಕ್ತ, ಖಾರವಾದ ಆಹಾರವು ಉರಿ ಮತ್ತು ತೊಂದರೆಯನ್ನು ಉಂಟು ಮಾಡುವುದರಿಂದ ದೂರವಿಡುವುದು ಸೂಕ್ತ. ಘನ-ದ್ರವ ಮಿಶ್ರ ಆಹಾರವನ್ನು ವರ್ಜಿಸಿ, ಒಂದೇ ರೀತಿಯ ಆಹಾರವು ನುಂಗಲು ಸುಲಭ. ಬಾಯಿಯನ್ನು ಆರ್ದ್ರ ಮತ್ತು ಶುಚಿಯಾಗಿ ಇರಿಸಿಕೊಳ್ಳಲು ಆಗಾಗ ನೀರು ಗುಟುಕರಿಸುತ್ತಿರುವುದು ಸೂಕ್ತ.

ದಿನಕ್ಕೆ ಮೂರು ಬಾರಿ ಸೇವಿಸುವ ಆಹಾರವನ್ನು ರೋಗಿಯು ನಾಲ್ಕೈದು ಬಾರಿ ಸಣ್ಣ ಸಣ್ಣ ಪ್ರಮಾಣಗಳಲ್ಲಿ ಸೇವಿಸುವಂತೆ ವಿಭಜಿಸಿ ಸೇವಿಸಬೇಕು. ಆಹಾರದ ಪ್ರಮಾಣವನ್ನು ಕಿರಿದುಗೊಳಿಸಿ ಸೇವಿಸುವ ಸರದಿಗಳನ್ನು ಹೆಚ್ಚಿಸುವುದರಿಂದ ದೇಹಕ್ಕೆ ಪೂರೈಕೆಯಾಗುವಪೌಷ್ಟಿಕಾಂಶ ಕಡಿಮೆಯಾಗುವುದಿಲ್ಲ. ಅಲ್ಲದೆ ಇದು ರೋಗಿಗೆ ಹೊರೆಯೂ ಆಗುವುದಿಲ್ಲ. ರೋಗಿಯು ಘನ ಆಹಾರಗಳನ್ನು ನುಂಗಲು ಶಕ್ತನಾಗಿದ್ದರೆ ನುಂಗುವುದಕ್ಕೆ ಸುಲಭವಾಗುವಂತೆ ಆಹಾರ ಸೇವನೆಯ ಜತೆಗೆ ಆಗಾಗ ನೀರು ಗುಟುಕರಿಸಬೇಕು.

ಆಹಾರಾಭ್ಯಾಸವು ಸಮತೋಲಿತವಾಗಿರಬೇಕು, ಪೌಷ್ಟಿಕಾಂಶ ಸಮೃದ್ಧವಾಗಿರಬೇಕು. ಇದರಿಂದ ಗುಣವಾಗುವ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆಯಲ್ಲದೆ ದಣಿವು ಮತ್ತು ತೂಕ ನಷ್ಟ ಆಗುವುದಿಲ್ಲ. ಅನ್ನ, ಗೋಧಿ,ರಾಗಿ, ಕಿರುಧಾನ್ಯಗಳು, ಬೇಳೆಕಾಳುಗಳು, ಧಾನ್ಯಗಳು (ಹೆಸರುಕಾಳು, ಕಡಲೆ, ಮಸೂರ್‌ ದಾಲ್‌, ತೊಗರಿಬೇಳೆ, ರಾಜ್ಮಾ, ತುಪ್ಪ, ಬಟಾಣಿ ಇತ್ಯಾದಿ) ಕಾಬೊìಹೈಡ್ರೇಟ್‌ನ ಉತ್ತಮ ಮೂಲಗಳಾಗಿವೆ. ಪ್ರೊಟೀನ್‌ ಅಂಶಹೆಚ್ಚಿರುವ ಆಹಾರ ಸೇವಿಸುವುದು ಸೂಕ್ತ. ಪನೀರ್‌, ಸೋಯಾ ಚಂಕ್‌ಗಳು, ಬೇಳೆಕಾಳು ಮತ್ತು ಬಾದಾಮಿ, ವಾಲ್ನಟ್‌, ನೆಲಗಡಲೆ, ಪಿಸ್ತಾ ಮುಂತಾದವುಗಳು ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಮಾಂಸಾಹಾರಿಗಳಿಗೆ ಮೀನು ಮತ್ತು ಮೊಟ್ಟೆ ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಪ್ರತೀದಿನ ಎರಡು ಸಲ ಮೊಸರು ಅಥವಾ ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತವಾಗಿದೆ. ಈ ಪ್ರೊಬಯೋಟಿಕ್‌ಗಳ ಸೇವನೆಯು ಧ್ವನಿ ಪ್ರಾಸ್ಥೆಸಿಸ್‌ (ಲ್ಯಾರಿಂಜೆಕ್ಟೊಮಿ ಚಿಕಿತ್ಸೆಯ ಬಳಿಕ ಟ್ರೇಕಿಯೊಫೇಜಿಯಲ್‌ ಮೂಲಕ ಮಾತನಾಡುವವರು ಉಪಯೋಗಿಸುವ ಸಾಧನ)ನಲ್ಲಿ ಫ‌ಂಗಸ್‌ ಬೆಳವಣಿಗೆಯನ್ನು ತಡೆಯುತ್ತದೆ. (ಮುಂದಿನ ವಾರಕ್ಕೆ)

 

ಡಾ| ವೆಂಕಟ್ರಾಜ ಐತಾಳ ಯು.

ಪ್ರೊಫೆಸರ್‌, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌

ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.