ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -8


Team Udayavani, Jan 20, 2019, 12:30 AM IST

dia01.jpg

ಮುಂದುವರಿದುದು-  ಉತ್ತಮ ರೋಗನಿರೋಧಕ  ಶಕ್ತಿಯನ್ನು ಕಾಪಾಡಿಕೊಳ್ಳಲು 
ಮಧುಮೇಹದೊಂದಿಗೆ ಜೀವಿಸುವವರು ಯಾವ ಮುಂಜಾಗ್ರತಾ ಕ್ರಮವನ್ನು 
ತೆಗೆದುಕೊಳ್ಳಬೇಕು?

ಮಧುಮೇಹ ನಿಯಂತ್ರಣವೊಂದೇ ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಇರುವ ಪ್ರಮುಖ ಮಾರ್ಗ.

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಚರ್ಮ ಸಂಬಂಧಿತ ತೊಂದರೆಗಳನ್ನು  ಹೇಗೆ ವಿಂಗಡಿಸಲಾಗುವುದು?ಚರ್ಮ ದೇಹದ ಅತ್ಯಂತ ದೊಡ್ಡ ಅಂಗ. ಸುಮಾರು 70 ಶೇಕಡಾದಷ್ಟು ಮಧುಮೇಹದೊಂದಿಗೆ ಜೀವಿಸುವವರಿಗೆ ವಿವಿಧ ಚರ್ಮ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಚರ್ಮ ಸಂಬಂಧಿತ ತೊಂದರೆಗಳಿಂದ ಮಧುಮೇಹ ಪತ್ತೆಯಾದರೆ ಇನ್ನು ಹಲವರಲ್ಲಿ ಮಧುಮೇಹ ಪತ್ತೆಯಾದ ನಂತರ ಚರ್ಮಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳಬಹುದು. ಇವುಗಳಲ್ಲಿ ಕೆಲವು ಕಾಯಿಲೆಗಳಿಗೆ ನೇರವಾಗಿ ಮಧುಮೇಹವೇ  ಕಾರಣವಾಗಿದ್ದಲ್ಲಿ, ಮಧುಮೇಹದ ಚಿಕಿತ್ಸೆಯಿಂದ ಕೆಲವು, ಮತ್ತು ಇನ್ನೊಂದಿಷ್ಟು ಎಂಡೋಕ್ರೈನ್‌ ರೋಗಲಕ್ಷಣದಿಂದ ಉಂಟಾಗುತ್ತವೆ.

ಚರ್ಮರೋಗಕ್ಕೆ 
ಲಭ್ಯವಿರುವ ಚಿಕಿತ್ಸೆಗಳೇನು?

ಚರ್ಮರೋಗ ತಜ್ಞರು ದೈಹಿಕ ತಪಾಸಣೆ, ರಕ್ತ ಪರೀಕ್ಷೆ ಇತ್ಯಾದಿ ತಪಾಸಣೆ ಮಾಡಿ ರೋಗಕ್ಕನುಗುಣವಾಗಿ ಮಾತ್ರೆ, ಚರ್ಮಕ್ಕೆ ಬಾಹ್ಯವಾಗಿ ಹಚ್ಚಬಹುದಾದ ಮುಲಾಮು ಮತ್ತು ಔಷಧಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆಯ ಅನುಸರಣೆ ಉತ್ತಮವಾಗಿದ್ದು ರಕ್ತದಲ್ಲಿ ಗ್ಲುಕೋಸ್ ಅಂಶ ನಿಯಂತ್ರಣದಲ್ಲಿರಿಸಿದರೆ ಚರ್ಮರೋಗವನ್ನು ಗುಣಪಡಿಸಬಹುದು.
 
ಚರ್ಮರೋಗದ ನಿಯಂತ್ರಣ 
ಮತ್ತು ತಡೆಗಟ್ಟುವಲ್ಲಿ 
ಮಧುಮೇಹದೊಂದಿಗೆ 
ಜೀವಿಸುವವರ ಪಾತ್ರವೇನು?

– ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು
– ಚಿಕಿತ್ಸಾ ಬದ್ಧತೆ 
– ಚರ್ಮವನ್ನು ಶುಚಿಯಾಗಿರಿಸಿಕೊಳ್ಳುವುದು
– ಅತಿಬಿಸಿಯಾದ ನೀರಿನಲ್ಲಿ ಸ್ನಾನ ಮಾಡದೆ ಇರುವುದು
-ಚಳಿಗಾಲದಲ್ಲಿ ಪದೇ ಪದೇ ಸ್ನಾನ ಮಾಡದೇ ಇರುವುದು.
– ಕೈ ಕಾಲು ತೊಳೆದ ನಂತರ ಅಥವಾ ಸ್ನಾನದ ನಂತರ ಒಣ ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವುದು
-ಒಣ ಚರ್ಮವನ್ನು ತಡೆಗಟ್ಟಲು ಸ್ವಲ್ಪ ಪ್ರಮಾಣದ ಎಣ್ಣೆಯ ಲೇಪ (ವಿಶೇಷವಾಗಿ ಚಳಿಗಾಲದಲ್ಲಿ) ಮಾಡಿಕೊಳ್ಳುವುದು.
– ಚರ್ಮಕ್ಕೆ ಚರ್ಮ ತಾಗುವ ಸ್ಥಳಗಳಾದ ಕಂಕುಳು ಇತ್ಯಾದಿ ಪ್ರದೇಶದಲ್ಲಿ ಟಾಲ್ಕಂ ಪೌಡರ್‌ ಬಳಸುವುದು
-ಚರ್ಮದ ಬಿರುಕು ಅಥವಾ ಆಣಿ ಇತ್ಯಾದಿಗಳಿಗೆ ಶೀಘ್ರ ಚಿಕಿತ್ಸೆ ಪಡೆದುಕೊಳ್ಳುವುದು
-ಪ್ರತಿದಿನ ಪಾದದ ಪರೀಕ್ಷೆ ಮತ್ತು ಪಾದದ ಆರೈಕೆ ಮಾಡಿಕೊಳ್ಳುವುದು

ಮಧುಮೇಹದೊಂದಿಗೆ ಜೀವಿಸುವವರಲ್ಲಿ  ಕಂಡು ಬರುವ ಸ್ನಾಯು ಮತ್ತು 
ಎಲುಬುಗಳ ತೊಂದರೆಗಳಿಗೂ ಮಧುಮೇಹಕ್ಕೂ ಇರುವ ಸಂಬಂಧವೇನು ಮತ್ತು ಇದರಿಂದ ಕಂಡುಬರುವ 
ತೊಂದರೆಗಳೇನು?

ಸ್ನಾಯು ಮತ್ತು ಎಲುಬುಗಳು ಜೀವಂತ ಮತ್ತು ಚಲನಶೀಲ ಅಂಗ. ಮಧುಮೇಹದಿಂದ ದೇಹದ ಎಲ್ಲಾ ಭಾಗಗಳಲ್ಲೂ ತೊಂದರೆ ಬರುವ ಸಾಧ್ಯತೆಗಳಿವೆ ಅದರಂತೆ ಸ್ನಾಯು ಮತ್ತು ಎಲುಬುಗಳ ತೊಂದರೆಗಳೂ ಬರುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಈ ತೊಂದರೆಗಳು ಪ್ರಭೇದ 1 ಮಧುಮೇಹಿಗಳಲ್ಲಿ ಅಧಿಕವಾಗಿ ಕಂಡುಬಂದರೂ ಪ್ರಭೇದ 2 ಮಧುಮೇಹಿಗಳಲ್ಲೂ ಕಂಡುಬರುತ್ತದೆ. ಕೆಲವೊಂದು ತೊಂದರೆಗಳು ನೇರವಾಗಿ ಮಧುಮೇಹಕ್ಕೆ ಸಂಬಂಧಿಸಿದ್ದಾದರೆ ಕೆಲವೊಂದು ತೊಂದರೆಗಳಿಗೆ ಮಧುಮೇಹದ ಸಂಬಂಧದ ನಂಟು ಇನ್ನೂ ನಿಖರ‌ವಾಗಿ ತಿಳಿದಿಲ್ಲ.

ಸಾಮಾನ್ಯವಾಗಿ ಮಧುಮೇಹದೊಂದಿಗೆ ಜೀವಿಸುವವರಲ್ಲಿ ರಕ್ತದಲ್ಲಿ ಗ್ಲುಕೋಸ್  ಅಂಶ ಅಧಿಕವಾಗಿ ಸಂಯೋಜಕ ಅಂಗಾಂಶಗಳು ಹಾನಿಗೊಂಡು ಭುಜ ಮತ್ತು ಹಸ್ತದ ತೊಂದರೆಗಳಾದ ಮೊಳಗಂಟಿನ ಹೊರಭಾಗದ ತೊಂದರೆ, ಬೆರಳು ಮಡಚಿದಾಗ ನೇರ ಮಾಡಲಾಗದೆ ಇರುವ ತೊಂದರೆ, ಬೆರಳುಗಳ ವಕ್ರತೆ, ಭುಜದ ಚಲನೆ ಕುಂಟಿತವಾಗಿ ನಿರ್ಬಂಧಿತ ಚಲನೆ ಇತ್ಯಾದಿ ತೊಂದರೆಗಳು ಕಂಡುಬರುತ್ತವೆ. 

ಮಧುಮೇಹದಿಂದ ನರಗಳು ಕ್ಷೀಣವಾಗುವುದರಿಂದ ಮತ್ತು ರಕ್ತಸಂಚಾರಕ್ಕೆ ತೊಂದರೆಗಳಾಗಿ, ಕೀಲುಗಳಲ್ಲಿ ವ್ಯತ್ಯಾಸವಾಗಿ ಗಂಟುಗಳು ಅಸ್ತವ್ಯಸ್ತವಾಗಿ ಸುಲಲಿತವಾಗಿ  ಚಲಿಸುವ  ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ತೊಡೆ, ಪ‚ೃಷ್ಠಭಾಗ, ಸೊಂಟ ಮತ್ತು ಕಾಲಿನ ಕೆಳಭಾಗದಲ್ಲಿ ಡಯಾಬಿಟಿಕ್‌ ಅಮಿಯೊಟ್ರೋಪಿ ಬರುವ ಸಾಧ್ಯತೆಗಳಿರುತ್ತವೆ. 

ಇನ್ನು ಮಧುಮೇಹದೊಂದಿಗೆ ಜೀವಿಸುವವರಿಗೆ ಮೂಳೆಸವೆತ ಇತರರಿಗಿಂತ ಅಧಿಕವಾಗಿ ಕಂಡು ಬರುತ್ತದೆ, ಇದು ಅತಿಯಾದ ಪಥ್ಯಾಹಾರ ಮತ್ತು ದೀರ್ಘ‌ಕಾಲಿಕ ಔಷಧಗಳ ಪರಿಣಾಮವಾಗಿರಬಹುದು.
 
ಮಧುಮೇಹಿಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಗಂಟಲು, ಕಿವಿ, ಮತ್ತು ಹಲ್ಲು ಇತ್ಯಾದಿ ಸೋಂಕುಗಳಿಗೆ ತುತ್ತಾಗಿ ಅವುಗಳಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಎಲುಬುಗಳಿಗೆ ಪಸರಿಸಿ ಒಸ್ಟಿಯೋಮಯಲೈಟಿಸ್‌ ಎಂಬ ಎಲುಬಿನ ಸೋಂಕು ಬರುವ ಸಾಧ್ಯತೆ ಗಳಿರುತ್ತವೆ. ಕೆಲವೊಮ್ಮೆ ತೆರೆದ ಗಾಯಗಳಾಗಿ ಅದರಲ್ಲಿ  ಉತ್ಪಾದನೆಯಾಗುವ ಬ್ಯಾಕ್ಟೀರಿಯಾಗಳಿಂದಲೂ ಹಿಂದೆ ತಿಳಿಸಿರುವಂತೆ ಎಲುಬುಗಳ ಸೋಂಕಾದ ಓಸ್ಟಿಯೋಮಯಲೈಟಿಸ್‌ ಬರುವ ಸಾಧ್ಯತೆಗಳಿರುತ್ತವೆ. ಇನ್ನು ಮುಖ್ಯವಾಗಿ ಮಧುಮೇಹದೊಂದಿಗೆ ಜೀವಿಸುವ  ರೈತಾಪಿ ಬಂಧುಗಳು ಹೊಲದಲ್ಲಿ ಕೆಲಸ ಮಾಡುವಾಗ ಮಣ್ಣಿನಲ್ಲಿ ಕಂಡುಬರುವ ಮೆಲಿಯೋಡೋಸಿಸ್‌ ಎಂಬ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ಮೆಲಿಯೋಡೋಸಿಸ್‌ ಸೋಂಕು ಬರಬಹುದು ಮತ್ತು ಅದರ ಮೂಲಕ ಎಲುಬಿನ ಸೋಂಕು ಬರುವ ಸಾಧ್ಯತೆಗಳೂ ಇರುತ್ತವೆ.

ಸ್ನಾಯು ಮತ್ತು ಎಲುಬಿನ 
ತೊಂದರೆಗಳ 
ಲಕ್ಷಣಗಳೇನು? 

ಪ್ರಾರಂಭದಲ್ಲಿ ಸಾಮಾನ್ಯವಾಗಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ.É ನಿಧಾನವಾಗಿ ಗಂಟುಗಳಲ್ಲಿ ನೋವು,  ಕೈ ಕಾಲು ಎತ್ತಲು ಕಷ್ಟವಾಗುವುದು (ನಿರ್ಬಂಧಿತ ಚಲನೆ), ಹಸ್ತ ಮತ್ತು ಬೆರಳುಗಳಲ್ಲಿ ವಿರೂಪತೆ, ಪಾದದ ಕಣಕಾಲಿನಲ್ಲಿ ತೊಂದರೆ, ಹಿಮ್ಮಡಿಯಲ್ಲಿ ಅತಿಯಾದ ನೋವು, ಮೂಳೆ ಮುರಿತ, ನಡಿಗೆಯ ಶೈಲಿಯಲ್ಲಿ ಬದಲಾಗುವುದು ಇತ್ಯಾದಿಗಳು ಕಂಡುಬರುತ್ತವೆ. 

ಸ್ನಾಯು ಮತ್ತು ಎಲುಬಿನ 
ತೊಂದರೆಗಳನ್ನು ಪತ್ತೆ 
ಹಚ್ಚುವುದು ಹೇಗೆ?

ಮೂಳೆ ಶಸ್ತ್ರಚಿಕಿತ್ಸಕರು ದೈಹಿಕ ಪರೀಕ್ಷೆ, ಎಕ್ಸ ರೇ, ಮೂಳೆ ಸಾಂದ್ರತಾ ಪರೀಕ್ಷೆ, ರಕ್ತ ಪರೀಕ್ಷೆ ಇತ್ಯಾದಿಗಳ ಮೂಲಕ ನಿಖರವಾದ ತೊಂದರೆಯನ್ನು ಪತ್ತೆ ಹಚ್ಚುತ್ತಾರೆ.

ಸ್ನಾಯು ಮತ್ತು ಎಲುಬಿನ 
ತೊಂದರೆಗಳಿಗೆ ಲಭ್ಯವಿರುವ 
ಚಿಕಿತ್ಸೆ ಏನು?

– ರಕ್ತದಲ್ಲಿನ ಗ್ಲುಕೋಸ್  ಅಂಶದ ನಿಯಂತ್ರಣ
– ಔಷಧಗಳು
– ಪ್ರತಿರೋಧ, ಬಲವರ್ಧನೆ ಮತ್ತು ಚಲನಶೀಲ ವ್ಯಾಯಾಮಗಳು
– ಫಿಸಿಯೋತೆರಪಿ ಚಿಕಿತ್ಸೆಗಳಾದ ಟೆನ್ಸ್‌, ವ್ಯತಿರಣ ತೆರಪಿ, ಜಲಚಿಕಿತ್ಸೆ
– ಕೈ ಮತ್ತು ಕಾಲಿನ ವಿಕಾರಗಳಿಗೆ ಶಸ್ತ್ರ ಚಿಕಿತ್ಸೆ
– ಅರಿವಳಿಕೆ ಕೊಟ್ಟು ಭುಜದ ಮಾರ್ಪಾಡು
– ಗಾಯಗಳಿದ್ದಲ್ಲಿ ಅವುಗಳ ಚಿಕಿತ್ಸೆ
– ನೋವಿಗೆ ಲೇಸರ್‌ ಚಿಕಿತ್ಸೆ ಇತ್ಯಾದಿ
ತೊಂದರೆಗನುಗುಣವಾಗಿ ಸೂಕ್ತ ಚಿಕಿತ್ಸೆಯನ್ನು ಮೂಳೆಶಸ್ತ್ರ ಚಿಕಿತ್ಸಾ ತಜ`ರು ಫಿಸಿಯೋತೆರಪಿಸ್ಟ್‌ ಹಾಗೂ ಇತರ ಚಿಕಿತ್ಸಾ ತಂಡದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತಾರೆ.

ಮಧುಮೇಹದೊಂದಿಗೆ ಜೀವಿಸುವವರು ಸ್ನಾಯು ಮತ್ತು ಎಲುಬಿನ 
ತೊಂದರೆಗಳನ್ನು ತಡೆಗಟ್ಟಲು ಅಥವಾ ಹಾನಿಯನ್ನು 
ಕಡಿಮೆಗೊಳಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು?

ಸುಮಾರು 30 ಶೇಕಡಾದಷ್ಟು ಮಧುಮೇಹದೊಂದಿಗೆ ಜೀವಿಸುವವರಲ್ಲಿ ತೋಳು ಮತ್ತು ಹಸ್ತದ ತೊಂದರೆ ಹಾಗೂ 35 ಶೇಕಡಾದಷ್ಟು ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಾಲಿನ ತೊಂದರೆಗಳು ಬರುವ ಸಾಧ್ಯತೆಗಳಿವೆ. ಮೂಳೆ ಸವೆತ ಮತ್ತು ಇನ್ನೂ ಅನೇಕ ಸ್ನಾಯು ಮತ್ತು ಮೂಳೆ ಸಂಬಂಧಿತ ತೊಂದರೆಗಳು ಮಧುಮೇಹದೊಂದಿಗೆ ಜೀವಿಸುವವರಲ್ಲಿ ಅಧಿಕವಾಗಿರುವುದರಿಂದ ಸ್ನಾಯು ಮತ್ತು ಎಲುಬಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ.

ಈ ಕೆಳಗಿನ ಕೆಲವು ಅಂಶಗಳು ಮಧುಮೇಹದೊಂದಿಗೆ ಜೀವಿಸುವವರಿಗೆ ಸ್ನಾಯು ಮತ್ತು ಎಲುಬಿನ ಆರೋಗ್ಯದ ಬಗ್ಗೆ ಮಾರ್ಗಸೂಚಿ:
– ರಕ್ತದಲ್ಲಿನ ಗ್ಲುಕೋಸ್  ಅಂಶದ ನಿಯಂತ್ರಣ
– ನಿಯಮಿತವಾಗಿ ಪ್ರತಿರೋಧಕ, ಬಲವರ್ಧನೆ ಮತ್ತು ಚಲನಶೀಲ ವ್ಯಾಯಾಮ
– ಉತ್ತಮ ಸಮತೋಲಿತ ಆಹಾರಾಭ್ಯಾಸ: ಪ್ರೋಟಿನ್‌, ವಿಟಮಿನ್‌ ಡಿ, ಕ್ಯಾಲ್ಸಿಯಂ, ವಿಟಮಿನ್‌ ಸಿ, ವಿಟಮಿನ್‌ ಕೆ2 ಪೂರಿತ ಆಹಾರದ ಸೇವನೆ.
– ವೈದ್ಯರು ಸೂಚಿಸಿದಂತಹ ನೋವು ನಿವಾರಕ ಮತ್ತು ಇತರ ಔಷಧೋಪಚಾರಗಳ ಶಿಸ್ತಬದ್ಧ ಸೇವನೆ.
– ಎಡವಿ ಬೀಳದಂತೆ ಸ್ವಯಂ-ರಕ್ಷಣೆ ಮತ್ತು ಪರಿಸರದಲ್ಲಿ ಮಾರ್ಪಾಡು ಮಾಡಿಕೊಳ್ಳುವುದು
– ನಿಯಮಿತ ವೈದ್ಯರ ಭೇಟಿ ಮತ್ತು ಚಿಕಿತ್ಸಾ ಅನುಸರಣೆ
– ತೂಕ ಅಧಿಕವಿದ್ದಲ್ಲಿ ತೂಕದ ನಿರ್ವಹಣೆ
– ಧೂಮಪಾನಿಗಳಾಗಿದ್ದಲ್ಲಿ ಧೂಮಪಾನವನ್ನು ನಿಲ್ಲಿಸುವುದು

ಮಧುಮೇಹದೊಂದಿಗೆ ಜೀವಿಸುವವರಲ್ಲಿ 
ಕಂಡುಬರುವ ಸಾಮಾನ್ಯ ಚರ್ಮ ಸಂಬಂಧಿ 
ತೊಂದರೆಗಳು ಮತ್ತು ಲಕ್ಷಣಗಳೇನು?

– ಮಧುಮೇಹದಿಂದ ಜೀವಿಸುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬ್ಯಾಕ್ಟೀರಿಯಾ, ಶಿಲೀಂಧ್ರಿàಯ ಮತ್ತು ವೈರಾಣುಗಳ ಸೋಂಕಿನಿಂದಾಗುವ ಚರ್ಮದ ಸೋಂಕುಗಳು ಸಾಮಾನ್ಯವಾಗಿರುತ್ತವೆ.
– ಪುರುಷರಲ್ಲಿ ವಿಶೇಷವಾಗಿ ಬಲೆನೋಪೋಸ್ತಿಸ್‌ ಎಂಬ ತೊಂದರೆ ಕಾಣಿಸಿಕೊಳ್ಳುವುದು. ಇದು ಸುಮಾರು 70ರಿಂದ 80 ಶೇಕಡಾ ಮಧುಮೇಹಿಗಳಲ್ಲೇ ಕಂಡುಬರುತ್ತದೆ. ಇದರಲ್ಲಿ ಶಿಶ°ದ ಹೊರ ಚರ್ಮದಲ್ಲಿ ಉರಿಯೂತ ಉಂಟಾಗುವುದು.
– ಇತರ ಚರ್ಮದ ತೊಂದರೆಗಳೆಂದರೆ ಕಾರ್ಬಂಕಲ್‌ ಎಂಬ ಬ್ಯಾಕ್ಟೀರಿಯಾದಿಂದ ಬರಬಹುದಾದ ಬೆನ್ನಿನ ಚರ್ಮದ ಸೋಂಕು ಮತ್ತು ಮ್ಯೂಕೊರೈಕೋಸಿಸ್‌ ಎಂಬ ಮುಖದಲ್ಲಿ ಕಂಡುಬರುವ ತೊಂದರೆ.
– ಜೆನೈಟಾ ಪ್ರುರೈಟಿಸ್‌ ಎಂಬ ತೊಂದರೆಯಿಂದ ಜನನೇಂದ್ರಿಯದ ತುರಿಕೆಯುಂಟಾಗುವುದು ಇದರಲ್ಲಿ ನರದೌರ್ಬಲ್ಯದಿಂದ ತೇವಾಂಶ ಕಡಿಮೆಯಾಗಿ ತುರಿಕೆ ಕಂಡುಬರುವುದು.
– ಇವುಗಳ ಜತೆಗೆ ತೊನ್ನು ರೋಗ (ಚರ್ಮದಲ್ಲಿನ ಬಿರುಕುಗಳು), ಸೋರಿಯಾಸಿಸ್‌ (ಚರ್ಮದ ಉರಿ, ಕೆಂಪು ಬಿಳಿ ಅಥವಾ ಬೆಳ್ಳಿ ಬಣ್ಣದ ಕಲೆ) ಅಲೋಪೇಶಿಯಾ ಎರಿಯೇಟ (ಕೆಲವೊಂದು ಭಾಗದಲ್ಲಿ ಕೂದಲು ಉದುರುವುದು) ಸಹ ಬರುವುದು.
– ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡುಬರುವ ಚರ್ಮದ ತೊಂದರೆಗಳೆಂದರೆ ನೆಕ್ರೊಟೈಸಿಂಗ್‌ ಲಿಪೊಡಿಕಾ (ಚರ್ಮ ಮೃದುವಾಗುವುದು), ಶಿನ್‌ ಸ್ಪಾಟ್ಸ್‌ (ಕಂದು ಅಥವಾ ಕೆಂಪು ಬಣ್ಣದ  ವೃತ್ತಾಕಾರದ ಅಥವಾ ಅಂಡಾಕಾರದ ಚರ್ಮದ ಮಚ್ಚೆ) ಸ್ಲಿàರೇಡಿಮ (ಬೆನ್ನು ಮತ್ತು ಕೈ ದಪ್ಪವಾಗುವುದು) ಇತ್ಯಾದಿ.
– ಮಧುಮೇಹದ ಅಧಿಕ ಬೊಜ್ಜುತನದಿಂದ ಅಕಾಂತೋಸಿಸ್‌ ನಿಗ್ರಿಕನ್ಸ್‌ (ತೊಡೆಸಂದಿ, ಮೊಣಕೈ ಭಾಗದಲ್ಲಿ ಒರಟು ಮತ್ತು ಕಪ್ಪು ಬಣ್ಣ), ಕೊಲೆಸ್ಟ್ರಾಲ್‌ ಪ್ರಮಾಣ ಅಧಿಕವಾಗಿ ಝಾಂತೋಮ (ಚರ್ಮದಲ್ಲಿ ಗುಳ್ಳೆಗಳಾಗುವುದು, ಮೂತ್ರಪಿಂಡದ ತೊಂದರೆಯಿಂದಾಗಿ ಪರಫೋರೇಟಿಂಗ್‌ ತೊಂದರೆ (ಮೈಯಲ್ಲಿ ತುರಿಕೆ), ಮಧುಮೇಹದ ತೊಂದರೆಗಳಿಂದ ಕಂಡುಬರುವ ಚರ್ಮದ ತೊಂದರೆಗಳು ಸಾಮಾನ್ಯವಾಗಿರುತ್ತವೆ.

ಹೀಗೆ ಹಲವಾರು ರೀತಿಯ ಚರ್ಮ ತೊಂದರೆಗಳು ಬಾಹ್ಯ ಸೌಂದರ್ಯ ಮತ್ತು ದಿನನಿತ್ಯದ ಕೆಲಸದಲ್ಲಿ ಕಿರಿಕಿರಿ ಉಂಟುಮಾಡುತ್ತವೆ.

ಟಾಪ್ ನ್ಯೂಸ್

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

2-kadaba

Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.