ಗ್ಯಾಸ್ಟ್ರೊ ಈಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ
Team Udayavani, Aug 18, 2019, 5:00 AM IST
ಕಳೆದ ಸಂಚಿಕೆಯಿಂದ-ಜೀವನ ಶೈಲಿ ಅಂಶಗಳು: ಮುಂದುವರಿದ ದೇಶಗಳಲ್ಲಿ ಗ್ಯಾಸ್ಟ್ರೊ ಈಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಅಥವಾ ಗೆರ್ಡ್ ಹೆಚ್ಚಿರುವುದಕ್ಕೆ ಅಲ್ಲಿನ ಜನರ ಜೀವನಶೈಲಿಯೂ ಕಾರಣವಾಗಿರುವ ಸಾಧ್ಯತೆ ಇದೆ. ಧೂಮಪಾನ, ಮದ್ಯಪಾನ, ಕೊಬ್ಬು ಮತ್ತು ಮಸಾಲೆಯುಕ್ತ ಆಹಾರ ಇವುಗಳಲ್ಲಿ ಸೇರಿವೆ. ಇವು ಮುಖ್ಯವಾಗಿ ಎಲ್‌ಇಎಸ್ ಅನ್ನು ಸಡಿಲಗೊಳಿಸುವ ಮೂಲಕ ಆಗಾಗ ಎದೆಯುರಿ ಉಂಟಾಗಲು ಕಾರಣವಾಗುತ್ತವೆ.
ಗರ್ಭಧಾರಣೆ: ಗರ್ಭಿಣಿಯರಲ್ಲಿ ಶೇ.50ರಿಂದ 80 ಮಂದಿ ಎದೆಯುರಿ ಹೊಂದಿರುತ್ತಾರೆ. ಹೊಟ್ಟೆಯಲ್ಲಿ ಒತ್ತಡ ಹೆಚ್ಚಿ ಹೊಟ್ಟೆಯೊಳಗಣ ವಸ್ತುಗಳನ್ನು ಈಸೊಫೇಜಸ್‌ಗೆ ತಳ್ಳುವುದರಿಂದ ಇದು ಉಂಟಾಗುತ್ತದೆ. ಇದಲ್ಲದೆ ಎಲ್‌ಇಎಸ್ ಒತ್ತಡ ಕಡಿಮೆಯಾಗುತ್ತದೆ ಮತ್ತು ಜಠರದೊಳಗೆ ಆಹಾರಾಂಶಗಳು ಖಾಲಿಯಾಗುವುದು ನಿಧಾನವಾಗಿರುತ್ತದೆ.
ಬೊಜ್ಜು: ಸಹಜ ದೇಹತೂಕ ಹೊಂದಿರುವ ವ್ಯಕ್ತಿಗಳಿಗಿಂತ ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಈಸೊಫೇಜಿಯಲ್ ಹಾನಿ ಮತ್ತು ಗೆರ್ಡ್ ಚಿಹ್ನೆಗಳು 1.5ರಿಂದ 2 ಪಟ್ಟು ಹೆಚ್ಚಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೀಗಾಗಿ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದು ಎದೆಯುರಿ ಮತ್ತು ಅದರ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಬಹಳ ಮುಖ್ಯವಾಗಿರುತ್ತದೆ.
ಎಂಡೊಸ್ಕೊಪಿ: ಗೆರ್ಡ್ ರೋಗಪತ್ತೆಗಾಗಿ ಬಾಯಿಯ ಮೂಲಕ ಎಂಡೊಸ್ಕೊಪಿ ನಡೆಸುವುದು ಅತಿ ಸಾಮಾನ್ಯವಾದ ವಿಧಾನವಾಗಿದೆ. ಇದು ಗೆರ್ಡ್‌ನ ಸಂಕೀರ್ಣ ಸಮಸ್ಯೆಗಳ ಜತೆಗೆ ಇತರ ಕಾಯಿಲೆಗಳ ಪತ್ತೆ ಮತ್ತು ನಿರ್ವಹಣೆ ಎರಡಕ್ಕೂ ಅವಕಾಶ ಒದಗಿಸುತ್ತದೆ. ಎಂಡೊಸ್ಕೊಪಿಯ ಫಲಿತಾಂಶವು ಸಾಮಾನ್ಯವಾಗಿದ್ದರೆ ಈಸೊಫೇಜಿಯಲ್ ಬಯಾಪ್ಸಿಯಂತಹ ಇತರ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಆದರೆ ಗೆರ್ಡ್ ಪತ್ತೆಗಾಗಿ ಸಾಮಾನ್ಯವಾಗಿ ಎಂಡೊಸ್ಕೊಪಿ ನಡೆಸಲೇ ಬೇಕಾಗುತ್ತದೆ.
ಬೇರಿಯಂ ಸ್ವಾಲೊ: ಗೆರ್ಡ್ ಪತ್ತೆಗಾಗಿ ಪ್ರತಿಸ್ಪಂದನೇತರ ಪರೀಕ್ಷೆ ಇದಾಗಿದ್ದು, ಇದನ್ನು ಅಪರೂಪವಾಗಿ ನಡೆಸಲಾಗುತ್ತದೆ.
24 ಎಚ್ ಪಿಎಚ್-ಮೆಟ್ರಿ
ಈಸೊಫೇಜಿಯಲ್ ಆ್ಯಸಿಡ್ ಎಕ್ಸ್‌ಪೋಶರ್ ಅನ್ನು ವಿಶ್ಲೇಷಿಸಲು (ಪಿಎಚ್ ಮಾನದಂಡದಲ್ಲಿ ಅಳೆಯಲಾಗುತ್ತದೆ, ಇದು ಆಮ್ಲಿಯತೆ ಅಥವಾ ಹೈಡ್ರೋಜನ್ ಅಯಾನ್ ಸಾಂದ್ರತೆಯನ್ನು ಅಳೆಯುವ ಗಣಿತಾತ್ಮಕ ಮಾಪನ) ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ಗೆರ್ಡ್ ರೋಗಪತ್ತೆಗೆ “ಸುವರ್ಣ ಮಾನದಂಡ’ ಎಂಬುದಾಗಿ ಪರಿಗಣಿತವಾಗಿದೆ. ಈ ಪರೀಕ್ಷೆಗಾಗಿ ಒಂದು ಸಣ್ಣ ಕೊಳವೆ (ಕ್ಯಾಥೆಟರ್)ಯನ್ನು ಮೂಗಿನ ಮೂಲಕ ತೂರಿಸಿ ಈಸೊಫೇಜಿಯಸ್‌ನಲ್ಲಿ ಸ್ಥಿತಗೊಳಿಸಲಾಗುತ್ತದೆ. ಕ್ಯಾಥೆಟರ್‌ನ ತುದಿಯಲ್ಲಿ ಸೆನ್ಸರ್ ಇದ್ದು, ಅದು ಆ್ಯಸಿಡ್ (ಹೈಡ್ರೋಜನ್ ಅಯಾನ್ ಸಾಂದ್ರತೆ) ಅನ್ನು ತಿಳಿಯಪಡಿಸುತ್ತದೆ. ಕ್ಯಾಥೆಟರ್‌ನ ಇನ್ನೊಂದು ತುದಿ ಮೂಗಿನಿಂದ ಹೊರಬಂದು ಕಿವಿಯನ್ನು ಸುತ್ತಿ ಸೊಂಟದ ಮೂಲಕ ಕೆಳಗಿಳಿದು ರೆಕಾರ್ಡರ್‌ನ್ನು ಸಂಪರ್ಕಿಸುತ್ತದೆ. ಹೊಟ್ಟೆಯಿಂದ ಪ್ರತೀ ಬಾರಿ ಆಮ್ಲವು ಈಸೊಫೇಜಿಯಸ್‌ಗೆ ತಳ್ಳಲ್ಪಟ್ಟಾಗಲೂ ಅದನ್ನು ಸೆನ್ಸರ್ ಸಂವೇದಿಸುತ್ತದೆ ಮತ್ತು ರೆಕಾರ್ಡರ್ ಎದೆಯುರಿಯನ್ನು ದಾಖಲಿಸಿಕೊಳ್ಳುತ್ತದೆ. ಈ ಪರೀಕ್ಷೆಯ ಅವಧಿಯಲ್ಲಿ ರೋಗಿ ತನ್ನ ದೈನಿಕ ಚಟುವಟಿಕೆಗಳನ್ನು ಯಥಾವತ್ ನಡೆಸಬಹುದಾಗಿದೆ. 24 ತಾಸುಗಳ ಅವಧಿಯ ಬಳಿಕ ಕ್ಯಾಥೆಟರನ್ನು ತೆಗೆಯಲಾಗುತ್ತದೆ ಮತ್ತು ರೆಕಾರ್ಡರ್ ದಾಖಲಿಸಿರುವ ದತ್ತಾಂಶಗಳ ಮೂಲಕ ಎದೆಯುರಿಯನ್ನು ವಿಶ್ಲೇಷಿಸಲಾಗುತ್ತದೆ. ಇತ್ತೀಚೆಗೆ ಗ್ಯಾಸ್ಟ್ರಿಕ್ ಮತ್ತು ಈಸೊಫೇಜಿಯಲ್ ಪಿಎಚ್ ಅನ್ನು ವಿಶ್ಲೇಷಿಸಲು ಅವಳಿ ಚಾನೆಲ್‌ಗಳ ಪಿಎಚ್ ಮೆಟ್ರಿಯನ್ನು ಉಪಯೋಗಿಸಲಾಗುತ್ತಿದೆ. ಈ ಪರೀಕ್ಷೆಯು ಗೆರ್ಡ್ ಪತ್ತೆಗೆ ಮಾತ್ರವಲ್ಲದೆ ಜಠರದ ಆಮ್ಲ ಸ್ರಾವ ನಿಯಂತ್ರಣಕ್ಕೆ ಉಪಯೋಗಿಸಲಾಗುವ ಔಷಧಗಳ ಪರಿಣಾಮಕಾರಿತ್ವವನ್ನು ನಿರ್ಧರಿಸುವುದಕ್ಕೂ ಉಪಯೋಗವಾಗುತ್ತದೆ.
ಗೆರ್ಡ್‌ನ ಯಾವೆಲ್ಲ ಸ್ಥಿತಿಗತಿಗಳಲ್ಲಿ 24ಎಚ್ ಪಿಎಚ್ – ಮೆಟ್ರಿ ಕೈಗೊಳ್ಳಬೇಕು?
– ಸಾಮಾನ್ಯವಲ್ಲದ ಚಿಹ್ನೆಗಳೊಂದಿಗೆ ಕಂಡುಬಂದಿರುವ ಗೆರ್ಡ್
– ವೈದ್ಯಕೀಯ ಅಥವಾ ಶಸ್ತ್ರಕ್ರಿಯಾತ್ಮಕ ಚಿಕಿತ್ಸೆಯಲ್ಲಿರುವಾಗ ಅಥವಾ ಆ ಬಳಿಕವೂ ಗೆರ್ಡ್‌ನ ಚಿಹ್ನೆಗಳು ಕಂಡುಬಂದಿದ್ದರೆ
– ನಿದ್ದೆ ಸರಿಯಾಗಿ ಬಾರದೆ ಇದ್ದು, ಅದು ಗೆರ್ಡ್‌ನಿಂದಾಗಿ ಎಂಬ ಶಂಕೆಯಿದ್ದರೆ
– ಗೆರ್ಡ್‌ಗೆ ಶಸ್ತ್ರಚಿಕಿತ್ಸೆ ನಡೆಸುವುದಕ್ಕಿಂತ ಮುನ್ನ
ಈಸೋಫೇಜಿಯಲ್ ಮಾನೊಮೆಟ್ರಿ
ಇದು ಈಸೊಫೇಜಿಯಲ್ ಸ್ನಾಯು ಚಟುವಟಿಕೆಯ ವಿಶ್ಲೇಷಣೆಯಾಗಿದೆ. ಲೋವರ್ ಈಸೊಫೇಜಿಯಲ್ ಸ್ಪಿಂಕ್ಟರ್ – ಎಲ್‌ಇಎಸ್‌ನ ಒತ್ತಡ ನಿಖರವಾಗಿ ಎಲ್ಲಿದೆ ಮತ್ತು ಎಷ್ಟಿದೆ ಎಂಬುದನ್ನು ತಿಳಿಯಲು ಹಾಗೂ ಈಸೊಫೇಜಿಯಲ್‌ನಲ್ಲಿ ಏನಾದರೂ ಅಸಹಜತೆಗಳು ಇವೆಯೇ ಎಂಬುದನ್ನು ತಿಳಿಯಲು ಈ ಪರೀಕ್ಷೆಯನ್ನು ನಡೆಸುತ್ತಾರೆ. ಮೊಟಿಲಿಟಿ ಪರೀಕ್ಷೆಗಾಗಿ ಮೂಗಿನ ಒಂದು ಹೊಳ್ಳೆಯ ಮೂಲಕ, ಗಂಟಲಿನಿಂದಾಗಿ ಈಸೊಫೇಜಿಯಸ್‌ನ ಒಳಕ್ಕೆ ಒಂದು ಸಪೂರವಾದ ನಳಿಕೆ (ಕ್ಯಾಥೆಟರ್) ಯನ್ನು ತೂರಿಸಲಾಗುತ್ತದೆ. ಕ್ಯಾಥೆಟರ್‌ನಲ್ಲಿ ಈಸೋಫೇಜಿಯಸ್‌ನ ಒಳಕ್ಕೆ ತೆರಳುವ ತುದಿಯಲ್ಲಿ ಒತ್ತಡವನ್ನು ಅಳೆಯುವ ಸೆನ್ಸರ್‌ಗಳಿರುತ್ತವೆ. ಅನ್ನನಾಳದ ಸ್ನಾಯುಗಳು ಸಂಕುಚಿಸಿ-ವಿಕಸಿಸುವ ಸಂದರ್ಭದಲ್ಲಿ ಈಸೋಫೇಜಿಯಸ್‌ನಲ್ಲಿ ಉಂಟಾಗುವ ಒತ್ತಡವನ್ನು ಈ ಸೆನ್ಸರ್‌ಗಳು ತಿಳಿಯುತ್ತವೆ. ಕ್ಯಾಥೆಟರ್‌ನ ಇನ್ನೊಂದು ತುದಿಯ ರೆಕಾರ್ಡರ್‌ಗೆ ಸಂಪರ್ಕಿಸಿದ್ದು, ಅದು ಒತ್ತಡವನ್ನು ದಾಖಲಿಸುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಏನೂ ಆಹಾರ ಸೇವಿಸದೆ ಇದ್ದಾಗ ಮತ್ತು ದ್ರವಾಹಾರ ಸೇವಿಸುವಾಗ ಲೋವರ್ ಈಸೋಫೇಜಿಯಸ್ ಸ್ಪಿಂಕ್ಟರ್‌ನಲ್ಲಿ ಉಂಟಾಗುವ ಒತ್ತಡವನ್ನು ವಿಶ್ಲೇಷಿಸಲಾಗುತ್ತದೆ.
ಗೆರ್ಡ್‌ಗೆ ಚಿಕಿತ್ಸೆ
ಪ್ರೊಟಾನ್ ಪಂಪ್ ಇನ್‌ಹಿಬಿಶನ್
ಆಹಾರ ಸೇವನೆಗೆ ಮುನ್ನ ಸೇವಿಸಿದಲ್ಲಿ ಪ್ರೊಟಾನ್ ಪಂಪ್ ಇನ್‌ಹಿಬಿಟರ್‌ಗಳು (ಪಿಪಿಐ) ಬಹಳ ಪ್ರಯೋಜನಕಾರಿಯಾಗುತ್ತವೆ. ಜಠರದಲ್ಲಿ ಆಮ್ಲ ಸ್ರಾವದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅನ್ನನಾಳವು ಆಮ್ಲಕ್ಕೆ ಒಡ್ಡಿಕೊಳ್ಳುವುದನ್ನು ಈ ಔಷಧಗಳು ಕಡಿಮೆ ಮಾಡುತ್ತವೆ. ಈ ಔಷಧಗಳನ್ನು ಕಿರು ಅವಧಿಗೆ ನೀಡಲಾಗುತ್ತದೆ ಮತ್ತು ರೋಗಿಯ ಅನಾರೋಗ್ಯವು ಚಿಕಿತ್ಸೆಗೆ ಪ್ರತಿಸ್ಪಂದಿಸುವುದನ್ನು ಗಮನಿಸಿ ವೈದ್ಯರು ಔಷಧ ಮುಂದುವರಿಸಬೇಕೇ ಅಥವಾ ನಿಲ್ಲಿಸಬೇಕೇ ಎಂದು ತೀರ್ಮಾನಿಸುತ್ತಾರೆ.
ಎಚ್2 ರಿಸೆಪ್ಟರ್ ಆ್ಯಂಟಗಾನಿಸ್ಟ್‌ಗಳು ಆಮ್ಲ ಸ್ರಾವವನ್ನು ಕಡಿಮೆ ಮಾಡುವ ಇನ್ನೊಂದು ಬಗೆಯ ಪರ್ಯಾಯ ಔಷಧಗಳಾಗಿವೆ. ಇವು ಕಡಿಮೆ ತೀವ್ರತೆಯ ಚಿಹ್ನೆಗಳಿದ್ದಾಗ ಸಹಾಯಕ್ಕೆ ಬರುತ್ತವೆ. ಚಿಹ್ನೆಗಳ ತಾತ್ಕಾಲಿಕ ಉಪಶಮನಕ್ಕಾಗಿ ಆ್ಯಂಟಾಸಿಡ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ.ಪ್ರೊಕೈನೆಟಿಕ್‌ಗಳು ಇನ್ನೊಂದು ವಿಧವಾದ ಔಷಧಗಳಾಗಿದ್ದು, ಹೆಚ್ಚು ಕಠಿನವಾದ ಚಿಹ್ನೆಗಳಿದ್ದಾಗ ಉಪಯೋಗಿಸಲಾಗುತ್ತದೆ. ಗೆರ್ಡ್ ತೀವ್ರವಾಗಿದ್ದಾಗ ಈ ಔಷಧಗಳನ್ನು ರೋಗಿಯು ವೈದ್ಯರ ಮೇಲ್ವಿಚಾರಣೆಯಲ್ಲಿ ಜೀವನಪರ್ಯಂತ ತೆಗೆದುಕೊಳ್ಳಬೇಕಾಗಬಹುದು ಅಥವಾ ಶಸ್ತ್ರಚಿಕಿತ್ಸೆಯ ಆಯ್ಕೆಯನ್ನೂ ಪರಿಗಣಿಸಬೇಕಾಗಬಹುದು.
ಮುನ್ನೆಚ್ಚರಿಕೆ ಮತ್ತು ಪ್ರತಿಬಂಧಕ ಕ್ರಮಗಳು
ಜೀವನ ಶೈಲಿ ಬದಲಾವಣೆ: ಎದೆಯುರಿಯ ಚಿಹ್ನೆಗಳನ್ನು ತಡೆಯಲು ಇದು ಅತ್ಯಂತ ಸರಳವಾದ ಕ್ರಮ.
1. ಮಂಚದ ಕಾಲುಗಳನ್ನು ಎತ್ತರಿಸುವ ಮೂಲಕ ದೇಹದ ತಲೆಯ ಭಾಗ ತುಸು ಎತ್ತರವಾಗಿರುವಂತೆ ಮಲಗುವುದು. ಅಲ್ಲದೆ, ರೋಗಿ ತನ್ನ ಎಡಕ್ಕೆ ಹೊರಳಿ ಮಲಗಿದಾಗ ಆಮ್ಲವು ಅನ್ನನಾಳಕ್ಕೆ ನುಗ್ಗುವುದು ಕೊಂಚ ಕಡಿಮೆಯಾಗುತ್ತದೆ.
2. ಆಹಾರಾಭ್ಯಾಸ: ಗೆರ್ಡ್‌ಗೆ ಚಿಕಿತ್ಸೆ ನೀಡುವುದಕ್ಕೆ ಮತ್ತು ನಿಭಾಯಿಸುವುದಕ್ಕೆ ಆಹಾರಾಭ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಾಗ ಸುಲಭವಾಗುತ್ತದೆ. ರಾತ್ರಿಯೂಟವನ್ನು ಬೇಗನೆ ಮಾಡುವುದು ಮತ್ತು ಕಡಿಮೆ ಆಹಾರ ಸೇವಿಸುವುದು ಎರಡು ಕಾರಣಗಳಿಂದ ಎದೆಯುರಿ ಕಡಿಮೆಯಾಗಲು ಕಾರಣವಾಗುತ್ತದೆ. ಒಂದನೆಯದಾಗಿ, ಕಡಿಮೆ ಆಹಾರ ಸೇವಿಸಿದಾಗ ಹೊಟ್ಟೆ ತುಂಬಿಕೊಳ್ಳುವುದು ಕಡಿಮೆಯಾಗಿರುತ್ತದೆ. ಎರಡನೆಯದಾಗಿ, ಬೇಗನೆ ಊಟ ಮಾಡಿದಾಗ ಮತ್ತು ಕಡಿಮೆ ಸೇವಿಸಿದಾಗ ಮಲಗುವ ಹೊತ್ತಿಗೆ ಅದು ಜಠರದಿಂದ ಖಾಲಿಯಾಗಿರುತ್ತದೆ. ಇದರಿಂದಾಗಿ ಗೆರ್ಡ್ ರೋಗಿಗಳು ಮಲಗಿದ ಬಳಿಕ ಎದೆಯುರಿ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಮಲಗುವುದಕ್ಕೆ ಕನಿಷ್ಟ 2-3 ತಾಸು ಮುನ್ನ ರಾತ್ರಿಯೂಟ ಮುಗಿಸುವುದಕ್ಕೆ ಶಿಫಾರಸು ಮಾಡಲಾಗುತ್ತದೆ. ಕೆಲವು ಆಹಾರಗಳು ಲೋವರ್ ಈಸೋಫೇಜಿಯಲ್ ಸ್ಪಿಂಕ್ಟರ್‌ನಲ್ಲಿ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಎದೆಯುರಿ ಉಂಟಾಗಲು ಪೂರಕವಾಗುತ್ತವೆ. ಇಂಥ ಆಹಾರಗಳನ್ನು ವರ್ಜಿಸಬೇಕು. ಇಂತಹ ಆಹಾರಗಳೆಂದರೆ, ಚಾಕೊಲೇಟ್, ಪೆಪ್ಪರ್‌ಮಿಂಟ್, ಮದ್ಯ ಮತ್ತು ಕೆಫೀನ್‌ಯುಕ್ತ ಪಾನೀಯಗಳು. ಕೊಬ್ಬುಯುಕ್ತ ಆಹಾರಗಳು (ಸೇವನೆಯನ್ನು ಕಡಿಮೆ ಮಾಡಬೇಕು) ಮತ್ತು ಧೂಮಪಾನ (ನಿಲ್ಲಿಸಬೇಕು)ಗಳು ಕೂಡ ಸ್ಪಿಂಕ್ಟರ್‌ನಲ್ಲಿ ಒತ್ತಡವನ್ನು ಕಡಿಮೆ ಮಾಡಿ ಎದೆಯುರಿಗೆ ಪೂರಕ ಸನ್ನಿವೇಶ ನಿರ್ಮಿಸುತ್ತವೆ. ಇದಲ್ಲದೆ, ಗೆರ್ಡ್ ರೋಗಿಗಳಲ್ಲಿ ಕೆಲವು ಆಹಾರವಸ್ತುಗಳು ರೋಗ ಲಕ್ಷಣಗಳು ಉಲ್ಬಣಿಸುವುದಕ್ಕೆ ಕಾರಣವಾಗಬಹುದು. ಉದಾಹರಣೆಗೆ, ಮಸಾಲೆಯುಕ್ತ ಅಥವಾ ಆಮ್ಲಿàಯವಾಗಿರುವ ಆಹಾರಗಳು – ಸಿಟ್ರಸ್ ಹಣ್ಣುಗಳ ಜ್ಯೂಸ್‌ಗಳು, ನಿಂಬೆ ಶರಬತ್ತು, ಕಾಬೊìನೇಟೆಡ್ ಪಾನೀಯಗಳು ಮತ್ತು ಟೊಮ್ಯಾಟೊ ಜ್ಯೂಸ್. ಈ ಆಹಾರಗಳನ್ನು ಕೂಡ ಕಡಿಮೆ ಮಾಡಬೇಕು ಅಥವಾ ವರ್ಜಿಸಬೇಕು.
3. ಅಧಿಕ ದೇಹತೂಕ – ಬೊಜ್ಜುಳ್ಳ ರೋಗಿಗಳು ತೂಕ ಇಳಿಸಿಕೊಳ್ಳುವುದು ಕೂಡ ಎದೆಯುರಿಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ವಾಲ್ ಮೆಕ್ಯಾನಿಸಮ್ ಉತ್ತಮವಾಗುವುದರಿಂದ ಇದು ಸಾಧ್ಯವಾಗುತ್ತದೆ.
ಶಸ್ತ್ರಚಿಕಿತ್ಸೆ
ತೀವ್ರ ತರಹದ ಚಿಹ್ನೆಗಳಿರುವರು, ಔಷಧಗಳಿಗೆ ಪ್ರತಿಸ್ಪಂದಿಸದಿದ್ದರೆ ಅಥವಾ ಹೆಚ್ಚು ತೀವ್ರ ಔಷಧ ಡೋಸ್ ನಿಲ್ಲಿಸಲು ಸಾಧ್ಯವಾಗದೆ ಇದ್ದರೆ ಹಾಗೂ ಹಯಾಟಸ್ ಹರ್ನಿಯಾ ಇದ್ದಲ್ಲಿ ಆಗ ವಾಲ್ ಮೆಕ್ಯಾನಿಸ್ ಉತ್ತಮಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
ಎದೆಯುರಿ: ಪತ್ತೆ ಹಚ್ಚಲು ಯಾವೆಲ್ಲ ಪರೀಕ್ಷೆಗಳು?
ಎದೆಯುರಿ ಮತ್ತು ಹುಳಿತೇಗಿನಂತಹ ಸರ್ವೇಸಾಮಾನ್ಯ ಗೆರ್ಡ್ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಜತೆಗೆ ಸಮಾಲೋಚಿಸಿ, ರೋಗಿಯ ಚರಿತ್ರೆಯನ್ನು ತಿಳಿದುಕೊಳ್ಳುವ ಮೂಲಕ ವೈದ್ಯರು ರೋಗಪತ್ತೆ ಮಾಡಬಹುದು. ಸಾಮಾನ್ಯವಲ್ಲದ ಲಕ್ಷಣಗಳು, ತೀವ್ರ ತರಹದ ಲಕ್ಷಣಗಳು, ಸಂಕೀರ್ಣ ಲಕ್ಷಣಗಳು ಇದ್ದಲ್ಲಿ, ಕಾಯಿಲೆಯು ಔಷಧ ಚಿಕಿತ್ಸೆಗೆ ಸ್ಪಂದಿಸದೆ ಇದ್ದಲ್ಲಿ ಅಥವಾ ಭಾಗಶಃ ಸ್ಪಂದಿಸುತ್ತಿದ್ದಲ್ಲಿ ಹಾಗೂ ಶಸ್ತ್ರಚಿಕಿತ್ಸೆ ನಡೆಸಬೇಕಾದ ಪ್ರಕರಣಗಳಾಗಿದ್ದಲ್ಲಿ ಅಂತಹ ರೋಗಿಗಳಿಗೆ ವೈದ್ಯರು ಕೆಳಕಂಡ ಪರೀಕ್ಷೆ ಮತ್ತು ತಪಾಸಣೆಗಳನ್ನು ನಡೆಸಲು ಸೂಚಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.