ಜಗತ್ತು ಎದುರಿಸಿದ ಸರ್ವವ್ಯಾಪಿ ವ್ಯಾಧಿಗಳ ಸಂದರ್ಭದಲ್ಲಿ ಆರೋಗ್ಯ ಮತ್ತು ಸುರಕ್ಷೆ


Team Udayavani, Jul 26, 2020, 12:51 PM IST

ಜಗತ್ತು ಎದುರಿಸಿದ ಸರ್ವವ್ಯಾಪಿ ವ್ಯಾಧಿಗಳ ಸಂದರ್ಭದಲ್ಲಿ ಆರೋಗ್ಯ ಮತ್ತು ಸುರಕ್ಷೆ

ಆರೋಗ್ಯ ಶಿಕ್ಷಣ ಒದಗಿಸುವ ಸಂದೇಶಗಳನ್ನು ಸಮುದಾಯಕ್ಕೆ ನೀಡುವಲ್ಲಿ ರೇಡಿಯೋ, ಟೆಲಿವಿಶನ್‌ ಅಥವಾ ದಿನಪತ್ರಿಕೆಗಳಂತಹ ಮಾಧ್ಯಮ ವೇದಿಕೆಗಳನ್ನು ಶಕ್ತಿಶಾಲಿಯಾಗಿ ಉಪಯೋಗಿಸಿಕೊಳ್ಳಬೇಕು. ಸಮುದಾಯಗಳ ಸದಸ್ಯರು, ಅಧಿಕಾರಾರೂಢರು, ಧಾರ್ಮಿಕ ನಾಯಕರು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಭಿಯಾನಗಳನ್ನು ಬೆಂಬಲಿಸಬೇಕು. ರೋಗ ಪ್ರಕರಣಗಳ ಮೇಲೆ ಕಠಿನ ಮತ್ತು ನಿಯಮಿತವಾಗಿ ನಿಗಾ ಇರಿಸುವುದು, ಸಾಧ್ಯವಾದಷ್ಟು ಬೇಗನೆ ಪತ್ತೆ ಮಾಡುವುದು, ನಿಗಾವನ್ನು ಬಲಪಡಿಸುವುದು ರೋಗ ನಿಯಂತ್ರಣದ ಪ್ರಾಥಮಿಕ ಕ್ರಮಗಳು.

ಸಾರ್ಸ್‌ ಮತ್ತು ಮೆರ್ಸ್‌ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳು : ಸಾರ್ಸ್‌ ಮತ್ತು ಮೆರ್ಸ್‌ ಸರ್ವವ್ಯಾಪಿ ವ್ಯಾಧಿಯಾಗಿ ಹರಡಿದ್ದ ಸಂದರ್ಭಗಳಲ್ಲಿ ಇವುಗಳ ಹಾವಳಿಗೆ ತುತ್ತಾಗಿದ್ದ ದೇಶಗಳು ಅನುಸರಿಸಿದ ನಿಯಂತ್ರಣ ಕ್ರಮಗಳನ್ನು ಗಮನಿಸುವುದು ಪ್ರಸ್ತುತ ಹರಡಿರುವ ಕೋವಿಡ್‌-19 ತಡೆಗೂ ಸಹಾಯ ಮಾಡಬಹುದಾಗಿದೆ. ಇತರ ಸಾಂಕ್ರಾಮಿಕ ರೋಗಗಳಷ್ಟು ಪ್ರಮಾಣದಲ್ಲಿ ಮರಣಕ್ಕೆ ಕಾರಣವಾಗದಿದ್ದರೂ ಕೋವಿಡ್‌ -19 ತೀವ್ರ ಪ್ರಸರಣ ಗುಣವನ್ನು ಹೊಂದಿದ್ದು, ಪ್ರಪಂಚದಾದ್ಯಂತ ಭಾರೀ ವೇಗವಾಗಿ ಹರಡುತ್ತಿದೆ. ಸಿಂಗಾಪುರವು ಸಾರ್ಸ್‌ ಸಂದರ್ಭದಲ್ಲಿ ಮೂರು ಹಂತಗಳ ಆರೋಗ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಿತು. ಈ ಮೂರು ಹಂತಗಳಾದ, ವೈಯಕ್ತಿಕ, ಸಮುದಾಯ ಮತ್ತು ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮೂಗು, ಬಾಯಿ, ಗಂಟಲು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೋಂಕಾದ್ದರಿಂದ ಸಿಂಗಾಪುರದಲ್ಲಿ ಸೋಂಕುಪೀಡಿತರ ನಿರ್ವಹಣೆಗೆ ಪ್ರತ್ಯೇಕ ಆ್ಯಂಬುಲೆನ್ಸ್‌ ಸೇವೆ, ರೋಗಿಯನ್ನು ಪ್ರತ್ಯೇಕಿಸುವುದು ಮತ್ತು ರೋಗಿಯ ಚಲನವಲನಗಳನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ಸಂಪರ್ಕ ಪತ್ತೆ ಹಚ್ಚುವುದು ಮತ್ತು ಕ್ವಾರಂಟೈನ್‌ ಮಾಡುವುದು ಸಾರ್ಸ್‌ ಮತ್ತು ಮೆರ್ಸ್‌ ಎರಡೂ ಸಾಂಕ್ರಾಮಿಕ ವ್ಯಾಧಿಗಳ ಸಂದರ್ಭದಲ್ಲಿ ಅನುಸರಿಸಿದ ಅಗತ್ಯ ತಡೆ ಕ್ರಮಗಳಾಗಿದ್ದವು. ಕಾಯಿಲೆಯ ಹರಡುವಿಕೆಯ ಬಗ್ಗೆ ಸಮುದಾಯ ಹಂತದಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮುಂಜಾಗರೂಕರಾಗಿರುವಂತೆ ಮಾಡಲಾಯಿತು. ದೇಶದೊಳಕ್ಕೆ ಯಾರೇ ಆದರೂ ಪ್ರವೇಶಿಸುವ ಸಂದರ್ಭದಲ್ಲಿ ಸಾರ್ಸ್‌ ಕಾಯಿಲೆ ತಪಾಸಣೆಗೆ ಒಳಗಾಗುವಂತೆ ಮಾಡಲಾಯಿತು.

ಮರ್ಸ್‌ನ ಮೊದಲ ಪ್ರಕರಣ ಪತ್ತೆಯಾದಾಗ ಮೊತ್ತಮೊದಲಾಗಿ ಆ ಕಾಯಿಲೆಯ ರೋಗಶಾಸ್ತ್ರೀಯ ಚಹರೆಯನ್ನು ಸಂಶೋಧಿಸಲಾಯಿತು. ಆದರೆ ರೋಗ ಪ್ರಕರಣಗಳ ಪತ್ತೆ ಮತ್ತು ನಿಗಾ ಸೌದಿ ಅರೇಬಿಯಾ  ಸರಕಾರಕ್ಕೆ ಒಂದು ಸವಾಲಾಗಿತ್ತು. ಸೌದಿ ಅರೇಬಿಯಾವು ಮೆರ್ಸ್‌ ಹರಡುವಿಕೆಯನ್ನು ತಡೆಯಲು ಯಾತ್ರಾಸ್ಥಳಗಳಿಗೆ ಜನರ ಭೇಟಿಯನ್ನು ನಿಷೇಧಿಸಿತು. ಒಂಟೆಗಳಿಂದ ಈ ಕಾಯಿಲೆ ಹರಡಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಒಂಟೆಯ ಹಾಲು ಮತ್ತು ಮಾಂಸ ಬಳಕೆಯನ್ನು ನಿಷೇಧಿಸಿತು. ವಿಶ್ವ ಆರೋಗ್ಯ ಸಂಸ್ಥೆಯು ಹೊರಡಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ವೈಯಕ್ತಿಕ ಸುರಕ್ಷಾ ಉಪಕರಣಗಳನ್ನು ಜನರು ಮತ್ತು ಆರೋಗ್ಯ ಸೇವಾ ಸಿಬಂದಿ ಧರಿಸುವುದು ಕಡ್ಡಾಯವಾಗಿತ್ತು.

ಕೋವಿಡ್‌-19 ಸರ್ವವ್ಯಾಪಿ ಸಾಂಕ್ರಾಮಿಕ :  2019ರ ಕೋವಿಡ್ ವೈರಸ್‌ ಹಾವಳಿ ವೈದ್ಯಕೀಯ ಜಗತ್ತಿಗೆ ಒಂದು ಗಮನಾರ್ಹ ಸವಾಲಾಗಿ ಪರಿಣಮಿಸಿದೆ. ಈ ಕಾಯಿಲೆಯ ಸೋಂಕುಕಾರಕ ಸ್ವಭಾವದ ದತ್ತಾಂಶಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಅಲ್ಪ ಪ್ರಮಾಣದಲ್ಲಿವೆ ಹಾಗೂ ಇವುಗಳ ಪರಿಣಾಮಕಾರಿತ್ವ ಇನ್ನೂ ದೃಢಪಟ್ಟಿಲ್ಲ. ಸಾರ್ಸ್‌-ಕೊವ್‌1 ಮತ್ತು ಮರ್ಸ್‌-ಕೊವ್‌2 ಹಾವಳಿಯ ಸಂದರ್ಭದಲ್ಲಿ ಕಾರ್ಟಿಕೊಸ್ಟೀರಾಯ್ಡಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಕೋವಿಡ್‌-19ಗೆ ಲಸಿಕೆ ಇನ್ನೂ ಸಂಶೋಧನೆಯಾಗಿಲ್ಲ. ಹೀಗಾಗಿ ಸದ್ಯ ಸೋಂಕನ್ನು ತಡೆಯಲು ಸಾಮಾಜಿಕ ಅಂತರ, ಸೋಂಕು ಸಂಪರ್ಕ ಪತ್ತೆ, ಕ್ವಾರಂಟೈನ್‌, ಐಸೊಲೇಶನ್‌ ಮತ್ತು ಫೇಸ್‌ ಮಾಸ್ಕ್ ಬಳಕೆಯಂತಹ ವೈದ್ಯಕೀಯೇತರ ಕ್ರಮಗಳನ್ನು ಕಡ್ಡಾಯವಾಗಿಸಬೇಕಿದೆ. ಪ್ರತಿಬಂಧಕ, ನಿಯಂತ್ರಕ ಮತ್ತು ಚಿಕಿತ್ಸಾ ಕ್ರಮಗಳನ್ನು ಯೋಜಿಸುವ ಸಂದರ್ಭದಲ್ಲಿ ಇತರ ವಿವಿಧ ದೇಶಗಳು ಅನುಸರಿಸಿದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಗಮನಿಸುವುದು ಅವಶ್ಯವಾಗಿರುತ್ತದೆ.

ಸರ್ವವ್ಯಾಪಿ ವ್ಯಾಧಿ: ಸನ್ನದ್ಧತೆಗೆ ಸಮಯ ಅಗತ್ಯ :  ಯಾವುದೇ ದೇಶಕ್ಕೆ ಸರ್ವವ್ಯಾಪಿ ವ್ಯಾಧಿಯ ತಡೆ, ನಿಯಂತ್ರಣ, ಚಿಕಿತ್ಸೆ ಇತ್ಯಾದಿಗಳಿಗೆ ಪರಿಣಾಮಕಾರಿ ಮತ್ತು ಸಮಗ್ರ ಯೋಜನೆಯೊಂದನ್ನು ರೂಪಿಸಿ ಅಳವಡಿಸಿಕೊಳ್ಳುವುದಕ್ಕೆ ಹಲವು ತಿಂಗಳುಗಳೇ ಹಿಡಿಯುತ್ತವೆ. ನಿಯಂತ್ರಣ ಕಾರ್ಯತಂತ್ರಗಳನ್ನು ರೂಪಿಸುವಾಗ ವಿಸ್ತೃತ ಮತ್ತು ಬಹುಕ್ಷೇತ್ರೀಯ ವಿಧಾನವನ್ನು ಅನುಸರಿಸಬೇಕಾದ ಮತ್ತು ಇದರಲ್ಲಿ ಜನಸಮುದಾಯಗಳನ್ನು ಸೇರಿಸಿಕೊಳ್ಳಬೇಕಾದ ಅಗತ್ಯವಿದೆ. ಬಹುಕ್ಷೇತ್ರೀಯ ವಿಧಾನ ಎಂದರೆ ಸೋಂಕು ನಿಯಂತ್ರಣ ಕಾರ್ಯತಂತ್ರದಲ್ಲಿ ಸರಕಾರದ ವಿವಿಧ ಹಂತಗಳು, ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರಿಸಿಕೊಳ್ಳುವ ಮೂಲಕ ಸ್ಥಳೀಯ ಜ್ಞಾನ, ಗುಣಸ್ವಭಾವ, ತಜ್ಞತೆ, ಸಂಪನ್ಮೂಲಗಳು ಮತ್ತು ಜಾಲಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದು. ಆರೋಗ್ಯ ಪ್ರವರ್ಧನೆ ಮತ್ತು ವಿಕೋಪ ನಿರ್ವಹಣೆಯಲ್ಲಿ ನೀತಿ ರೂಪಣೆ, ಜನಪ್ರತಿನಿಧಿಗಳ ಮಟ್ಟದಲ್ಲಿ ವಿಶ್ಲೇಷಣೆ, ಪ್ರಾಣಿ ಆರೋಗ್ಯ ಮತ್ತು ಪಶುಪಾಲನೆ, ಆರೋಗ್ಯ ಸೇವಾಕರ್ತರು, ರೋಗಿ ಆರೈಕೆ, ಪ್ರಯೋಗಾಲಯ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಅಭಿವೃದ್ಧಿ ಮತ್ತು ಸಂವಹನ ಪರಿಣತಿ – ಇವೆಲ್ಲವೂ ಇದರಲ್ಲಿ ಒಳಗೊಂಡಿರುತ್ತದೆ. ನೀತಿ ರೂಪಣೆಗೆ ಅಗತ್ಯವಾಗಿರುವ ಬದ್ಧತೆಯನ್ನು ಸಾಧಿಸಲು ಮತ್ತು ಜನರನ್ನು ಜತೆ ಸೇರಿಸಿಕೊಳ್ಳಲು ಜನಸಮುದಾಯವನ್ನು ಸೇರ್ಪಡೆಗೊಳಿಸುವುದು ಅತ್ಯಂತ ಅಗತ್ಯವಾಗಿರುತ್ತದೆ.

ಸೋಂಕು ರೋಗಗಳ ಪ್ರಸರಣ ವಿಧಾನಗಳು :

  1. ಗಾಳಿಯ ಮೂಲಕ ಹರಡುವ ಸಾಂಕ್ರಾಮಿಕಗಳು ಸೋಂಕು ಪೀಡಿತ ವ್ಯಕ್ತಿಯ ಕೆಮ್ಮು, ಸೀನುಗಳಿಂದ ಹರಡಬಹುದು. ಸೋಂಕುಪೀಡಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಆತನ ದೇಹದಿಂದ ಗಾಳಿಯನ್ನು ಸೇರುವ ಹನಿಬಿಂದು (ಡ್ರಾಪ್ಲೆಟ್‌)ಗಳು ಉಸಿರಾಟದ ಮೂಲಕ ಆರೋಗ್ಯವಂತರ ದೇಹ ಸೇರಿ ಸೋಂಕು ಹರಡುತ್ತದೆ.
  2. ಸೋಂಕು ಪೀಡಿತ ವ್ಯಕ್ತಿಯೊಂದಿಗೆ ನೇರ ದೈಹಿಕ – ಲೈಂಗಿಕ ಸಂಪರ್ಕ ಸಹಿತ – ನಡೆಸಿದಾಗ ಸೋಂಕು ಹರಡುತ್ತದೆ.
  3. ಪರೋಕ್ಷ ದೈಹಿಕ ಸಂಪರ್ಕದಲ್ಲಿ ಸೋಂಕು ಪೀಡಿತ ವ್ಯಕ್ತಿಯು ಸ್ಪರ್ಶಿಸಿದ ಸೂಕ್ಷ್ಮಾಣುಯುಕ್ತ ಮಣ್ಣು, ಲೋಹದ ಮೇಲ್ಮೆ„ಗಳಂತಹ ವಸ್ತುಗಳನ್ನು ಆರೋಗ್ಯವಂತರು ಸ್ಪರ್ಶಿಸುವುದು ಸೇರುತ್ತದೆ.
  4. ನೈರ್ಮಲ್ಯರಹಿತ ಸ್ಥಿತಿಯಲ್ಲಿ ಕಲ್ಮಷಯುಕ್ತ ನೀರು, ಆಹಾರ ಸೇವನೆಯಿಂದ, ಕೈಗಳನ್ನು ಸರಿಯಾಗಿ ತೊಳೆದುಕೊಳ್ಳದೆ ಇರುವುದರಿಂದ ಮಲ/ ಮೌಖೀಕ ಸೋಂಕು ಪ್ರಸರಣ ನಡೆಯುತ್ತದೆ. ಉದಾಹರಣೆಗೆ, ಕಾಲರಾ ಕಾಯಿಲೆಯು ಜಲಮೂಲದಿಂದ ಪ್ರಸರಣ ಹೊಂದುತ್ತದೆ: ಮನೆಗಳಲ್ಲಿ ಕಾಲರಾ ಹೇಗೆ ಹರಡುತ್ತದೆ ಎಂಬುದನ್ನು ದಾಖಲೀಕರಿಸಲಾಗಿದೆ. “ವಿ. ಕಾಲರಾ’ ರೋಗಾಣು ಮನುಷ್ಯನ ಮಲದಲ್ಲಿರುತ್ತದೆ. ಪರಿಸರಸಹಜ ನೀರಿನಲ್ಲಿ ಸೂಕ್ಷ್ಮಾಣುಗಳು 24 ತಾಸುಗಳ ಒಳಗೆ ಸುಶುಪ್ತಿಯನ್ನು ಪ್ರವೇಶಿಸುತ್ತವೆ. ಇವುಗಳು ಮತ್ತೆ ಮನುಷ್ಯನ ದೇಹವನ್ನು ಪ್ರವೇಶಿಸಿದಾಗ ಸೋಂಕುಕಾರಕಗಳಾಗಿ ಪರಿವರ್ತನೆ ಹೊಂದುತ್ತವೆ, ಆದರೆ ಅವುಗಳ ಈ ರೂಪದಲ್ಲಿ ಎಷ್ಟು ಪ್ರಮಾಣವು ಸೋಂಕುಕಾರಕ ಎಂಬುದು ಇನ್ನೂ ತಿಳಿದುಬಂದಿಲ್ಲ.

ಸದ್ಯ ಜನರು ಅನುಸರಿಸುತ್ತಿರುವ ಸುರಕ್ಷಾ ಕ್ರಮಗಳು :

  1. ಆಗಾಗ ಸಾಬೂನು ಉಪಯೋಗಿಸಿ ಕೈಗಳನ್ನು ತೊಳೆದುಕೊಳ್ಳುವುದು
  2. ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಫೇಸ್‌ ಮಾಸ್ಕ್ ಬಳಕೆ
  3. ರೋಗಪೀಡಿತರೊಂದಿಗೆ ಸಂಪರ್ಕದಿಂದ ದೂರ ಇರುವುದು
  4. ಕೆಮ್ಮುವಾಗ ಅಥವಾ ಸೀನುವಾಗ ಮುಖವನ್ನು ಮುಚ್ಚಿಕೊಳ್ಳುವುದು
  5. ಮಾರುಕಟ್ಟೆ, ಮಾಲ್‌, ಸಭೆ ಸಮಾರಂಭ ಇತ್ಯಾದಿ ಜನರು ಗುಂಪುಗೂಡುವ ಕಡೆಗೆ ಹೋಗದಿರುವುದು
  6. ಕೌಟುಂಬಿಕವಾಗಿ ಒಟ್ಟು ಸೇರುವ ಮದುವೆ, ಪೂಜೆ ಇತ್ಯಾದಿ ಕಾರ್ಯಕ್ರಮಗಳಿಂದ ದೂರ ಇರುವುದು ಅಥವಾ ನಡೆಸದೆ ಇರುವುದು

ಕೋವಿಡ್‌-19 ಲಕ್ಷಣಗಳು :

  1. ಒಣ ಕೆಮ್ಮು
  2. ತೀವ್ರ ಜ್ವರ
  3. ಗಂಟಲು ನೋವು
  4. ಉಸಿರಾಡಲು ಕಷ್ಟವಾಗುವುದು

ಕಾಯಿಲೆಯ ಹರಡುವಿಕೆ :

  1. ಕೆಮ್ಮು ಅಥವಾ ಸೀನಿದಾಗ ಗಾಳಿಯ ಮೂಲಕ
  2. ವೈಯಕ್ತಿಕ ಸಂಪರ್ಕ
  3. ಸೋಂಕುಕಾರಕಗಳು ಇರುವ ವಸ್ತುಗಳ ಸಂಪರ್ಕದಿಂದ
  4. ಜನಸಂದಣಿ ಸೇರಿದಾಗ

 

ಸಂಪನ್ಮೂಲಗಳು ಸೀಮಿತವಾಗಿರುವ ಸಂದರ್ಭಗಳಲ್ಲಿ ಸರ್ವವ್ಯಾಪಿ ಸೋಂಕು ತಡೆಗೆ ಶಿಫಾರಸುಗಳು :

  1. ಸರ್ವವ್ಯಾಪಿ ವ್ಯಾಧಿ ಹಾವಳಿ ಅಪಾಯ ಪತ್ತೆ ಹಚ್ಚಲು ಮತ್ತು ಪ್ರತಿಸ್ಪಂದಿಸುವ ಸಾಮರ್ಥ್ಯ ರೂಪಿಸಿಕೊಳ್ಳುವುದಕ್ಕಾಗಿ ಕ್ಷಿಪ್ರ ಕಾರ್ಯವಿಧಾನ.
  2. ಅಪಾಯಗಳ ಗಂಭೀರತೆ ಮತ್ತು ಕಾಡುವ ಅಪಾಯ ಸಾಧ್ಯತೆಯ ಆಧಾರದಲ್ಲಿ ಆದ್ಯತೆ ನೀಡುವುದು.
  3. ಅಧಿಕಾರಶಾಹಿ, ಸಾರ್ವಜನಿಕರು ಮತ್ತು ಖಾಸಗಿ ರಂಗಗಳ ನಡುವೆ ಸಮನ್ವಯ, ಸೋಂಕುಶಾಸ್ತ್ರ, ವೈದ್ಯಕೀಯ ಚಿಕಿತ್ಸೆ, ಉಪಕರಣ, ಸಲಕರಣೆ ಇತ್ಯಾದಿಗಳು, ವಿಕೋಪ ಪ್ರತಿಸ್ಪಂದನೆಯ ವಿವಿಧ ಶಿಸ್ತುಗಳಲ್ಲಿ ತರಬೇತಿ.
  4. ವೈದ್ಯರು, ದಾದಿಯರು, ಸೋಂಕುಶಾಸ್ತ್ರಜ್ಞರು, ಪಶುವೈದ್ಯರು, ಪ್ರಯೋಗಾಲಯ ತಂತ್ರಜ್ಞರು ಮತ್ತಿತರ ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ತರಬೇತಿಯುಕ್ತ ಸಿಬಂದಿಯನ್ನು ಹೆಚ್ಚಿಸುವುದು.
  5. ಸಾಕಿದ ಪಶುಗಳು ಅಥವಾ ವನ್ಯಜೀವಿಗಳು ಮನುಷ್ಯರಿಗೆ ಹರಡಬಲ್ಲ ಸೋಂಕುಗಳಿಂದ ಬಳಲುತ್ತಿವೆಯೇ ಎಂಬುದನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸುವುದು.
  6. ಇವೆಲ್ಲಕ್ಕಿಂತ ಮುಖ್ಯವಾಗಿ, ಕೆಳ ಆದಾಯ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಕಡಿಮೆ ಇರುವ ಸರ್ವವ್ಯಾಪಿ ಸೋಂಕು ಪ್ರತಿಸ್ಪಂದನೆಯ ಸನ್ನದ್ಧತೆ ಹಾಗೂ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಏರಿಸಲು ಅಡ್ಡಿಯಾಗುತ್ತಿರುವ ಜ್ಞಾನದ ಕೊರತೆಗಳನ್ನು ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ನಿವಾರಿಸುವುದು ಅತ್ಯಂತ ಅಗತ್ಯ. ಕಡಿಮೆ ಆದಾಯದ ದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳು, ಮಾನವ ಸಂಪನ್ಮೂಲ ಹಾಗೂ ಕ್ವಾರಂಟೈನ್‌ನಂತಹ ಸರ್ವವ್ಯಾಪಿ ವ್ಯಾಧಿ ಪ್ರತಿಸ್ಪಂದನಾತ್ಮಕ ಚಟುವಟಿಕೆಗಳಿಗೆ ಮಾಡುವ ವೆಚ್ಚ ಕಡಿಮೆಯಿರುತ್ತದೆ.
  1. ಯಾವುದೇ ಸರ್ವವ್ಯಾಪಿ ವ್ಯಾಧಿ ಕಾಣಿಸಿಕೊಂಡ ಸಂದರ್ಭದಲ್ಲಿ ಅದಕ್ಕೆ ಲಸಿಕೆಗಳು ಲಭ್ಯವಿದ್ದರೆ ಸಾವುನೋವು ಕೂಡ ಕಡಿಮೆಯಾಗುತ್ತದೆ. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಮಾಣ ಹೆಚ್ಚಳಕ್ಕಾಗಿ ಗಮನಾರ್ಹ ಪ್ರಯತ್ನಗಳು ನಡೆಯುತ್ತಿವೆ.

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

11

Health: ರೋಗಿ ಸುರಕ್ಷೆಗೆ ಒಂದು ನಮನ

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.