Health: ಮಾತನಾಡುವ ಕಲೆ ಮತ್ತು ಆಲಿಸುವ ಶಕ್ತಿ


Team Udayavani, Oct 20, 2024, 4:40 PM IST

7

ಪ್ರತೀ ವರ್ಷ ಅಕ್ಟೋಬರ್‌ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆಯ ಅರಿವು ದಿನ  (ಇಂಟರ್‌ನ್ಯಾಶನಲ್‌ ಸ್ಟಟರಿಂಗ್‌ ಅವೇರ್‌ನೆಸ್‌ ಡೇ)ವನ್ನು ಆಚರಿಸಲಾಗುತ್ತದೆ. ಈ ವರ್ಷ ಇದರ ಧ್ಯೇಯವಾಕ್ಯವು ‘ಆಲಿಸುವಿಕೆಯ ಶಕ್ತಿ’ ಆಗಿದೆ. ಇನ್ನೊಬ್ಬರು ಹೇಳುವುದನ್ನು ಗಮನವಿರಿಸಿ ಆಲಿಸುವುದು ಯಾಕೆ ಮತ್ತು ಎಷ್ಟು ಮುಖ್ಯ ಎನ್ನುವುದನ್ನು ಉಗ್ಗುವಿಕೆಯನ್ನು ಹೊಂದಿರುವ ವ್ಯಕ್ತಿಗಳ ಜತೆಗಿನ ಸಂಭಾಷಣೆಯಿಂದ ನಾವು ಅರಿತುಕೊಳ್ಳಬೇಕಿದೆ. ಈ ವರ್ಷದ ಧ್ಯೇಯವಾಕ್ಯ ಇದನ್ನೇ ಆಧರಿಸಿದೆ.

ಗಮನವಿರಿಸಿ ಕೇಳುವುದು ಎಷ್ಟು ಮೌಲ್ಯಯುತವಾದುದು, ಎಷ್ಟು ಮಹತ್ವದ್ದು ಎನ್ನುವುದನ್ನು ಜಗತ್ತಿಗೆ ಕಲಿಸಿಕೊಡುವ ಶಕ್ತಿಯನ್ನು ಉಗ್ಗುವಿಕೆಯ ತೊಂದರೆಯನ್ನು ಹೊಂದಿರುವ ವ್ಯಕ್ತಿಗಳು ಹೊಂದಿರುತ್ತಾರೆ. ಪರಿಣಾಮಕಾರಿ ಸಂವಹನವು ಗಮನವಿರಿಸಿ ಕೇಳುವುದನ್ನು ಬಹಳವಾಗಿ ಅಂದರೆ ಶೇ. 90ರಷ್ಟು ಅವಲಂಬಿಸಿದೆ. ಏಕಾಗ್ರತೆಯಿಂದ, ಗಮನ ಇರಿಸಿ ಕೇಳುವುದರ ಮೂಲಕ ಇನ್ನೊಬ್ಬರ ಅನುಭವ ಮತ್ತು ಭಾವನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಮತ್ತು ವಿಶ್ವಾಸವನ್ನು ಮೂಡಿಸಲು ಸಾಧ್ಯ. ಪ್ರತಿಯೊಬ್ಬರೂ ತಾನು ಹೇಳಿದ್ದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು, ಬೆಲೆ ಕೊಡಬೇಕು ಮತ್ತು ಗಮನಿಸಬೇಕು ಎಂದು ಭಾವಿಸುತ್ತಾರೆ. ಜತೆಗೆ ಉಗ್ಗುವಿಕೆಯ ಮಟ್ಟಿಗೆ ಹೇಳುವುದಾದರೆ, ಕೇಳುಗನು ಹೇಗೆ ವರ್ತಿಸುತ್ತಾನೆ ಎನ್ನುವುದು ಉಗ್ಗುವಿಕೆಯ ಅನುಭವದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರಬಲ್ಲುದಾಗಿದೆ.

ಉಗ್ಗುವಿಕೆಯ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳ ಜತೆಗೆ ಮಾತುಕತೆಯ ಅನುಭವ ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಆಗಿಯೇ ಆಗಿರುತ್ತದೆ. ನಮ್ಮ ಗೆಳೆಯ-ಗೆಳತಿಗೇ ಆ ಸಮಸ್ಯೆ ಇರಬಹುದು, ಕುಟುಂಬದಲ್ಲಿ ಒಬ್ಬರು ಆಗಿರಬಹುದು ಅಥವಾ ಬಂಧುಗಳಲ್ಲಿ ಯಾರಾದರೂ ಇರಬಹುದು; ಉಗ್ಗುವಿಕೆಯ ತೊಂದರೆ ಇರುವ ಯಾರಾದರೊಬ್ಬರು ಅಪರಿಚಿತರು ನಮಗೆ ಎದುರಾಗಿರಬಹುದು. ಸಿನೆಮಾಗಳಲ್ಲಿ ಮತ್ತು ಸಾಮಾಜಿ ಮಾಧ್ಯಮಗಳಲ್ಲಿ ಕೂಡ ಉಗ್ಗುವಿಕೆಯ ತೊಂದರೆ ಹೊಂದಿರುವ ಪಾತ್ರಗಳು ಎದುರಾಗುತ್ತವೆ. ಉಗ್ಗುವಿಕೆಯ ತೊಂದರೆ ಹೊಂದಿರುವ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸುವಾಗ ನಮ್ಮ ಮೊತ್ತಮೊದಲ ಪ್ರತಿಕ್ರಿಯೆ ಏನು? ಅವರು ಮಾತನಾಡಲು ಆರಂಭಿಸಿದಾಗ ಮತ್ತು ವಾಕ್ಯವೊಂದನ್ನು ಪೂರ್ಣಗೊಳಿಸಲು ಅಸಮರ್ಥರಾದಾಗ ಅಥವಾ ಮಾತು ಮುಗಿಸಲು ದೀರ್ಘ‌ ಕಾಲ ತೆಗೆದುಕೊಂಡಾಗ ನಮಗೆ ಕಿರಿಕಿರಿ ಎನಿಸುತ್ತದೆ. ತಂತ್ರಜ್ಞಾನವು ಅನೂಹ್ಯ ವೇಗದಿಂದ ಮುನ್ನಡೆಯುತ್ತಿರುವ ಮತ್ತು ಯುಟ್ಯೂಬ್‌ ಶಾರ್ಟ್ಸ್ ಅಥವಾ ಇನ್‌ಸ್ಟಾಗ್ರಾಂ ರೀಲ್‌ಗ‌ಳಲ್ಲಿ 60 ಸೆಕೆಂಡುಗಳಲ್ಲಿ ಬಹಳಷ್ಟು ಮಾಹಿತಿಗಳನ್ನು ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ ನಮ್ಮ ತಾಳ್ಮೆ ಮಟ್ಟ ತೀರಾ ಸೀಮಿತವಾಗಿಬಿಟ್ಟಿದೆ ಮತ್ತು ಉಗ್ಗುವಿಕೆಯ ಸಮಸ್ಯೆ ಹೊಂದಿರುವ ವ್ಯಕ್ತಿ ಏನಾದರೂ ಹೇಳಲು ಹೊರಟಾಗ ನಮಗೆ ಸಿಟ್ಟೇ ಬಂದುಬಿಡುತ್ತದೆ. ಕೆಲವೊಮ್ಮೆ ಅಂತಹ ವ್ಯಕ್ತಿಗಳ ಬಗ್ಗೆ ನಮಗೆ ಕನಿಕರ ಉಂಟಾಗಿ ಅವರು ಹೇಳಲು ಹೊರಟಿರುವುದನ್ನು ನಾವೇ ಪೂರ್ತಿಗೊಳಿಸಿಬಿಡುವುದೂ ಇದೆ. ಹಾಗೆ ಮಾಡಿದರೆ ಅವರಿಗೆ ಸುಲಭವಾಗುತ್ತದೆ ಎಂಬ ಅಭಿಪ್ರಾಯ ನಮ್ಮದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಗ್ಗುವಿಕೆಯ ಅರಿವು ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯ ಮಹತ್ವ ಹೊಂದಿದೆ – ಅದು ಕೇಳುವಿಕೆಗೆ ಇರುವ ಶಕ್ತಿಗೆ ಒತ್ತು ನೀಡುತ್ತದೆ. ಆಲಿಸುವಿಕೆಗೆ ಇರುವ ಶಕ್ತಿ, ಮಹತ್ವವನ್ನು ನಾವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆ, ಕೀಳಂದಾಜು ಹೊಂದಿದ್ದೇವೆ ಎಂಬ ಸತ್ಯವನ್ನು ಈ ಧ್ಯೇಯವಾಕ್ಯ ಸರಳವಾಗಿ ನಿರೂಪಿಸುತ್ತದೆ.

ಉಗ್ಗುವಿಕೆ ಅಥವಾ ‘ಸ್ಟಟರಿಂಗ್‌’ ಶೀಘ್ರವಾಗಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ಒದಗಿಸಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾದ ಒಂದು ಸಮಸ್ಯೆಯಾಗಿದೆ. ಇದಕ್ಕಾಗಿ ನೆರವು ಪಡೆಯಬೇಕಾದ ವೃತ್ತಿಪರ ವ್ಯಕ್ತಿ ಎಂದರೆ ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌. ಉಗ್ಗುವಿಕೆಯ ಸಮಸ್ಯೆಯನ್ನು ನಿವಾರಿಸಲು ಸ್ಪೀಚ್‌ ಥೆರಪಿಯ ಮೂಲಕ ಅನೇಕ ತಂತ್ರಗಳು ಮತ್ತು ಕಾರ್ಯವಿಧಾನಗಳು ಇವೆ. ಸ್ಪೀಚ್‌ ಥೆರಪಿಯ ಅವಧಿಗಳಿಗೆ ಶಿಫಾರಸು ಮಾಡಿರುವಂತೆ ತಪ್ಪದೆ ಹಾಜರಾಗುವುದು ಅತ್ಯವಶ್ಯಕವಾಗಿರುತ್ತದೆ.

ಯಾವುದೇ ವೈದ್ಯಕೀಯ ಚಿಕಿತ್ಸೆಯಲ್ಲಿ ಅನಾರೋಗ್ಯವನ್ನು ಗುಣಪಡಿಸಲು ಔಷಧಗಳನ್ನು ನೀಡಲಾಗುತ್ತದೆ. ಆದರೆ ಸ್ಪೀಚ್‌ ಥೆರಪಿ ಅಥವಾ ಭಾಷಿಕ-ಮಾತಿನ ಚಿಕಿತ್ಸೆಯು ಹಾಗಲ್ಲ. ಇದೊಂದು ವರ್ತನಾತ್ಮಕ ಚಿಕಿತ್ಸೆಯಾಗಿದ್ದು, ರೋಗಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿರುತ್ತದೆ. ಹೀಗೆ ಸಕ್ರಿಯ ಪಾಲ್ಗೊಳ್ಳುವಿಕೆ, ಚಿಕಿತ್ಸೆಯನ್ನು ಶಿಫಾರಸು ಮಾಡಿರುವಂತೆ ಸರಿಯಾಗಿ ಅನುಸರಿಸುವ ಮೂಲಕ ಉಗ್ಗುವಿಕೆಯ ತೊಂದರೆ ಹೊಂದಿರುವವರು ತಮ್ಮ ಸ್ಪಷ್ಟವಾಗಿ ಮಾತನಾಡುವ ಸಾಮರ್ಥ್ಯದಲ್ಲಿ ಪ್ರಗತಿ ಉಂಟಾಗುವುದನ್ನು ಸ್ವತಃ ಕಾಣಬಹುದು ಮತ್ತು ಆತ್ವವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು.

ಡಾ| ಐಶ್ವರ್ಯಾ ಲಿಝ್ ವರ್ಗೀಸ್‌, ಅಸೋಸಿಯೇಟ್‌ ಪ್ರೊಫೆಸರ್‌, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.