ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?


Team Udayavani, Aug 14, 2022, 2:33 PM IST

10

ಅಂಗವಿಕಲರನ್ನು ಅವರ ಎಲ್ಲ ದೈನಂದಿನ ಚಟುವಟಿಕೆಗಳಲ್ಲಿ ಸೇರಿಸುವುದು ಮತ್ತು ಅಂಗವೈಕಲ್ಯವನ್ನು ಹೊಂದಿರದ ಅವರ ಇತರ ಗೆಳೆಯರೊಂದಿಗೆ ಸಮಾನವಾದ ಪಾತ್ರಗಳನ್ನು ಹೊಂದಲು ಅವರನ್ನು ಪ್ರೋತ್ಸಾಹಿಸುವುದಕ್ಕೆ ಅಂಗವೈಕಲ್ಯ ಸೇರ್ಪಡೆ ಎಂದು ಕರೆಯುತ್ತಾರೆ. ಇದು ಕೇವಲ ಜನರನ್ನು ಪ್ರೋತ್ಸಾಹಿಸುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ. ಅಂಗವೈಕಲ್ಯ ಸೇರ್ಪಡೆಯು ಅಂಗವೈಕಲ್ಯವನ್ನು ಹೊಂದಿರದ ಜನರಿಗೆ ಹೋಲಿಸಿದರೆ ವಿಕಲಾಂಗರಿಗೆ ಆರೋಗ್ಯ ಪ್ರಚಾರ ಮತ್ತು ಆರೋಗ್ಯ ತಡೆಗಟ್ಟುವ ಚಟುವಟಿಕೆಗಳ ಪ್ರಯೋಜನಗಳನ್ನು ಪಡೆಯಲು ಅನುಮತಿಸುತ್ತದೆ. ಸಮಾಜದಲ್ಲಿ ಸೇರ್ಪಡುವಿಕೆ ವಿದ್ಯಾರ್ಥಿ, ಕೆಲಸಗಾರ, ಸ್ನೇಹಿತ, ಸಮುದಾಯದ ಸದಸ್ಯ, ರೋಗಿ, ಸಂಗಾತಿ, ಪಾಲುದಾರ ಅಥವಾ ಪೋಷಕರಂತಹ ಸಾಮಾಜಿಕವಾಗಿ ನಿರೀಕ್ಷಿತ ಜೀವನ ಪಾತ್ರಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆ, ಸಾರಿಗೆಯಂತಹ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸುವುದು, ಸಮುದಾಯಗಳ ಒಳಗೆ ಮತ್ತು ಹೊರಗೆ ಚಲಿಸುವುದು, ಸಾಕಷ್ಟು ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಪಡೆಯುವುದು, ಸಂಬಂಧಗಳನ್ನು ಹೊಂದುವುದು ಮತ್ತು ಇತರ ದಿನನಿತ್ಯದ ಚಟುವಟಿಕೆಗಳನ್ನು ಆನಂದಿಸುವಲ್ಲಿ ಕಾರಣವಾಗಬೇಕು. ಅಂಗವೈಕಲ್ಯ ಸೇರ್ಪಡೆಯು ಜನರು ಕಾರ್ಯನಿರ್ವಹಿಸುವ ವಿಧಾನ ಮತ್ತು ಸಮಾಜದಲ್ಲಿ ಅವರು ಹೇಗೆ ಭಾಗವಹಿಸುತ್ತಾರೆ ಎಂಬುದರ ನಡುವಿನ ಸಂಬಂಧವನ್ನು ನಮಗೆ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ ಮತ್ತು ಜೀವನದ ಪ್ರತಿಯೊಂದು ಅಂಶಗಳಲ್ಲಿ ಭಾಗವಹಿಸಲು ಎಲ್ಲರಿಗೂ ಒಂದೇ ರೀತಿಯ ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳುವುದು ಕೂಡ ಅಂಗವೈಕಲ್ಯ ಸೇರ್ಪಡೆಯ ಭಾಗವಾಗಿರುತ್ತದೆ.

ಅಂಗವೈಕಲ್ಯರನ್ನು ಸಮಾಜದಲ್ಲಿ ಬೆರೆಸುವುದರಲ್ಲಿ ಕುಟುಂಬದ ಮತ್ತು ಸಮಾಜದ ಪ್ರಭಾವ ಮತ್ತು ಪಾತ್ರ

ಸಮಾಜದಲ್ಲಿ ಕುಟುಂಬವು ಅತ್ಯಂತ ಪ್ರಭಾವಶಾಲಿ ಸಾಮಾಜಿಕ ರಚನೆಗಳಲ್ಲಿ ಒಂದಾಗಿದೆ. ಅಂಗವಿಕಲ ಯುವಕರು ತಮ್ಮ ಅಂಗವಿಕಲರಲ್ಲದ ಗೆಳೆಯರು ಅಥವಾ ಒಡಹುಟ್ಟಿದವರಂತೆ ಸಾಮಾಜಿಕವಾಗಿರಬಾರದು, ಅಂಗವಿಕಲ ಮಕ್ಕಳಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಅನೇಕ ಕುಟುಂಬಗಳಿಗೆ ಖಚಿತತೆಯಿಲ್ಲದೆ, ಸಾಮಾಜಿಕೀಕರಣ ಮತ್ತು ಸಾಮಾಜಿಕ ಪ್ರಕ್ರಿಯೆಗಳ ಹಲವು ಪ್ರಮುಖ ಮಾದರಿಗಳಿಂದ ಅವರನ್ನು ಹೊರಗಿಡುತ್ತಾರೆ.

ಅಂಗವಿಕಲ ಮಕ್ಕಳ ಪಾಲಕರು ಸಾಮಾನ್ಯವಾಗಿ ತಮ್ಮ ಮಗುವಿನ ಆಯ್ಕೆಗಳನ್ನು ಪೂರೈಸಲು ಬೇಕಾಗುವ ರಚನೆಗಳನ್ನು ಸರಿಹೊಂದಿಸುವ ಬದಲು ಶಿಕ್ಷಣ ಅಥವಾ ಕಾರ್ಮಿಕ ಮಾರುಕಟ್ಟೆಯಂತಹ ಸಾಮಾಜಿಕ ರಚನೆಗಳಿಗೆ ತಮ್ಮ ಮಗುವನ್ನು ಹೇಗೆ ಹೊಂದಿಸುವುದು ಎಂಬುದರ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ. ಏಕೆಂದರೆ ಅವರ ಪ್ರಕಾರ ಸಮಸ್ಯೆಯು ಸಮಾಜಕ್ಕಿಂತ ಹೆಚ್ಚಾಗಿ ವ್ಯಕ್ತಿಯಲ್ಲಿದೆ ಎಂದು ನಂಬಲಾಗಿದೆ. ಕುಟುಂಬಸ್ಥರು ಇಂತಹ ನಂಬಿಕೆಗಳಿಂದ ಹೊರಬಂದು ಮಕ್ಕಳ್ಳನ್ನು ಪ್ರೋತ್ಸಾಹಿಸಿದರೆ ಅವರು ಸಮಾಜದಲ್ಲಿ ಏನಾದರೂ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಅವರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕುಟುಂಬದಲ್ಲಿ ಇರುವಂತಹ ಅಡೆತಡೆ ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ಯುವ ಅಂಗವಿಕಲರಿಗೆ ತಮ್ಮ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಲು ಮತ್ತು ಸಕಾರಾತ್ಮಕ ಸ್ವಯಂ ಅಭಿವೃದ್ಧಿಗೆ ಅವು ಅಡ್ಡಿಯಾಗಬಹುದು.

ಅಂಗವೈಕಲ್ಯ ಸಮುದಾಯವು ಇನ್ನೂ ಕೆಲಸದ ವಿಚಾರದಲ್ಲಿ ತಾರತಮ್ಯವನ್ನು ಹೊಂದಿದೆ. ಆರಂಭದಲ್ಲಿಯೇ ಅವರು ಉದ್ಯೋಗದಲ್ಲಿ ಭಾಗವಹಿಸುವುದನ್ನು ನಿರಾಕರಿಸುವುದು ಅಥವಾ ಅಂತಿಮ ಸಂದರ್ಶನದ ಸಮಯದಲ್ಲಿ ನಿರಾಕರಿಸಿದ ಘಟನೆಗಳನ್ನು ನಾವು ನೋಡಬಹುದು. ಆದರೆ ಉದ್ಯೋಗದಾತರು ಒಬ್ಬ ವ್ಯಕ್ತಿಯನ್ನು, ಅವನ/ಅವಳ ಅಂಗವೈಕಲ್ಯವನ್ನು ಆಸ್ತಿಯಾಗಿ ನೋಡಬೇಕು ಮತ್ತು ಸಂಭಾವ್ಯ ಹೊಣೆಗಾರರನ್ನಾಗಿಯಲ್ಲ. ಶಾಲೆಗಳಲ್ಲಿ ವಿಕಲಾಂಗತೆ ಇರುವ ಮತ್ತು ಇಲ್ಲದ ಮಕ್ಕಳು ಅಕ್ಕಪಕ್ಕದಲ್ಲಿ ಕಲಿಯುವುದರಿಂದ ಎಲ್ಲ ಮಕ್ಕಳು ತಮ್ಮೊಂದಿಗೆ ತರುವ ಪ್ರತಿಭೆ ಮತ್ತು ಉಡುಗೊರೆಗಳನ್ನು ಪ್ರತಿಯೊಬ್ಬರೂ ಪ್ರಶಂಸಿಸಲು ಸಹಾಯ ಮಾಡುತ್ತದೆ.

ಆಕ್ಯುಪೇಷನಲ್‌ ಥೆರಪಿಯ ಪಾತ್ರ

ಆಕ್ಯುಪೇಷನಲ್‌ ಥೆರಪಿ (ಒಟಿ)ಯು ದೈನಂದಿನ ಕಾರ್ಯಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಬಳಸಿಕೊಂಡು ವ್ಯಕ್ತಿಯ ಸ್ವಾತಂತ್ರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಟಿ ತಜ್ಞರು ಎಲ್ಲ ವಯಸ್ಸಿನ ಜನರ ವರೆಗೂ ತಮ್ಮ ಸೇವೆಯನ್ನು ವಿಸ್ತಾರ ಮಾಡಿದ್ದಾರೆ. ರೋಗಿಯ ಸಮಸ್ಯೆಯ ಪ್ರಕಾರ ಆಕ್ಯುಪೇಷನಲ್‌ ಥೆರಪಿಸ್ಟ್‌ಗಳು ಈ ಕೆಳಗಿನ ಚಿಕಿತ್ಸಾ ಆಯ್ಕೆಗಳನ್ನು ಒದಗಿಸಬಹುದು: ದೈನಂದಿನ ಜೀವನ ತರಬೇತಿ, ಪರಿಸರ ಮಾರ್ಪಾಡು, ಸಮತೋಲನ ಮತ್ತು ಸಮನ್ವಯ ತರಬೇತಿ, ಭಾವನಾತ್ಮಕ ಬೆಂಬಲ, ಮಾನಸಿಕ ಸಮಾಲೋಚನೆ, ದೈಹಿಕ ಸ್ಥಿತಿಗಳಿಗೆ ವ್ಯಾಯಾಮ ಮತ್ತು ಅರಿವಿನ ಮರುತರಬೇತಿ ಇತ್ಯಾದಿ.

ಆಕ್ಯುಪೇಷನಲ್‌ ಥೆರಪಿಸ್ಟ್‌ಗಳು

ಅನಾರೋಗ್ಯ, ಗಾಯ, ಅಂಗವೈಕಲ್ಯ ಅಥವಾ ಸವಾಲಿನ ಜೀವನ ಘಟನೆಗಳು ಅವರಿಗೆ ಮುಖ್ಯವಾದ ದಿನನಿತ್ಯದ ಕೆಲಸಗಳನ್ನು ಮಾಡುವ ಜನರ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರ ಗರಿಷ್ಠ ಮಟ್ಟದ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯನ್ನು ತಲುಪಲು ಅವರನ್ನು ಹೇಗೆ ಬೆಂಬಲಿಸಬೇಕು ಎಂದು ತಿಳಿಸುತ್ತಾರೆ.

ವಿಕಲಾಂಗ ಜನರ ಸಮಾಜದಲ್ಲಿ ಕಾರ್ಯನಿರ್ವಹಣೆ, ಆರೋಗ್ಯ, ಸ್ವಾತಂತ್ರ್ಯ ಮತ್ತು ತೊಡಗಿಸಿಕೊಳ್ಳುವಿಕೆಯು ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಅವುಗಳು ಈ ಕೆಳಗಿನಂತಿವೆ:

„ ದುರ್ಬಲತೆಯ ತೀವ್ರತೆ

„ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವಗಳು ಮತ್ತು ನಿರೀಕ್ಷೆಗಳು

„ ನೈಸರ್ಗಿಕ ಮತ್ತು ನಿರ್ಮಿತ ಸುತ್ತಮುತ್ತಲಿನ ಅಂಶಗಳು

„ ಸಹಾಯಕ ತಂತ್ರಜ್ಞಾನ ಮತ್ತು ಸಾಧನಗಳ ಲಭ್ಯತೆ

„ ಕುಟುಂಬ ಮತ್ತು ಸಮುದಾಯ ಬೆಂಬಲ ಮತ್ತು ಸಹಕಾರ

ಆಕ್ಯುಪೇಷನಲ್‌ ಥೆರಪಿಸ್ಟ್‌ಗಳು ದೈನಂದಿನ ಕಾರ್ಯಚಟುವಟಿಕೆಗೆ ಸಹಾಯ ಮಾಡಲು ವ್ಯಾಪಕ ಶ್ರೇಣಿಯ ತಂತ್ರಗಳು ಮತ್ತು ಉಪಕರಣಗಳನ್ನು ನೀಡುತ್ತಾರೆ. ಆಕ್ಯುಪೇಷನಲ್‌ ಥೆರಪಿಸ್ಟ್‌ ಗಳು ಒದಗಿಸಬಹುದಾದ ಕೆಲವು ಸೇವೆಗಳೆಂದರೆ:

„ ಕೈಬರಹ, ಹಲ್ಲುಜ್ಜುವುದು, ಡ್ರೆಸ್ಸಿಂಗ್‌ ಮತ್ತು ಆಹಾರ ಸೇವನೆ ಸಾಮರ್ಥ್ಯಗಳನ್ನು ಸುಧಾರಿಸಲು ದೈಹಿಕ ಕೌಶಲ ಅಭಿವೃದ್ಧಿ ಅಥವಾ ಹಿಡಿತದ ಬೆಂಬಲದೊಂದಿಗೆ ಸಹಾಯ ಮಾಡುವುದು.

„ ಸಾಮಾಜಿಕ ಭಾಗವಹಿಸುವಿಕೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡು‌ವ ಸಲಹೆ

„ ಶಾಲೆ, ಕೆಲಸ ಮತ್ತು ಮನೆಯ ನಿರ್ವಹಣೆಯ ಜವಾಬ್ದಾರಿಗಳಿಗೆ ಅಗತ್ಯವಾದ ಚಟುವಟಿಕೆಗಳನ್ನು ನಿರ್ವಹಿಸಲು ಬೆಂಬಲ

„ ಜ್ಞಾಪಕ ಶಕ್ತಿ ನಷ್ಟದೊಂದಿಗೆ ಹೋರಾಡುತ್ತಿರುವವರಿಗೆ ಮೆಮೊರಿ ಸಹಾಯಗಳು ಮತ್ತು ತಂತ್ರಗಳು

„ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಬೇಕಾದ ರೋಗಿಯ ಸಾಮರ್ಥ್ಯವನ್ನು ಸುಧಾರಿಸಲು ಗಾಲಿಕುರ್ಚಿಗಳು, ಸ್ಪ್ಲಿಂಟ್‌ಗಳು, ಸ್ನಾನದ ಉಪಕರಣಗಳು, ಡ್ರೆಸ್ಸಿಂಗ್‌ ಸಾಧನಗಳು ಮತ್ತು ಸಂವಹನ ಸಾಧನಗಳಂತಹ ವಿಶೇಷ ಉಪಕರಣಗಳು.

ರಮ್ಯಾ, ಪಾರ್ವತಿ ಪಿ., ದಸ್ತೀನಾ ಜೆ., ಟ್ವಿಂಕಲ್‌ ಎಸ್‌., ಬಿ.ಒ.ಟಿ. ಇಂಟರ್ನ್ ಗಳು

ಡಾ| ಪ್ರಮೋದ್‌ ಡಿ. ಲಂಬೊರ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಕ್ಯುಪೇಶನಲ್‌ ಥೆರಪಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.