ಕಿಡ್ನಿ ಕಲ್ಲು ಮರುಕಳಿಸುವುದನ್ನು ತಡೆಯಲು ಆಹಾರಾಭ್ಯಾಸ ಮಾರ್ಗದರ್ಶಿ


Team Udayavani, Sep 10, 2017, 6:15 AM IST

kidney-stones–09.jpg

ಕಿಡ್ನಿಯ ಕಲ್ಲು ಮೂತ್ರದಲ್ಲಿನ ಹರಳುಗಳಿಂದ ರೂಪುಗೊಳ್ಳುವ ಗಟ್ಟಿಯಾದ ವಸ್ತು. ಸಾಮಾನ್ಯವಾಗಿ ಬಹುತೇಕರಲ್ಲಿ, ಮೂತ್ರದಲ್ಲಿರುವ ನೈಸರ್ಗಿಕ ರಾಸಾಯನಿಕಗಳು ಇಂತಹ ಕಲ್ಲುಗಳು ಉಂಟಾಗದಂತೆ ತಡೆಯುತ್ತವೆ.

ನಿಮಗೆ ಕಿಡ್ನಿ ಕಲ್ಲುಗಳು ಇದ್ದರೆ ನೀವು ವಿಶೇಷ ಪಥ್ಯಾಹಾರವನ್ನು ಅನುಸರಿಸುವುದು ಅಗತ್ಯವಾಗುತ್ತದೆ. ಪ್ರಾಥಮಿಕವಾಗಿ ನಿಮ್ಮ ವೈದ್ಯರು ನಿಮಗಿರುವ ಕಿಡ್ನಿ ಕಲ್ಲು ಯಾವ ವಿಧವಾದುದು ಎಂಬುದನ್ನು ತಿಳಿಯಲು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ಇದರ ಮೂಲಕ ನಿಮಗೆ ಸರಿಹೊಂದುವ ಪಥ್ಯಾಹಾರ ಯಾವುದು ಎಂಬುದನ್ನು ವೈದ್ಯರು ನಿರ್ಧರಿಸಬಹುದಾಗಿದೆ. ಬಹುಸಾಮಾನ್ಯವಾಗಿ ಕಿಡ್ನಿಯ ಕಲ್ಲುಗಳು ಕ್ಯಾಲ್ಸಿಯಂ ಮತ್ತು ಓಕ್ಸಲೇಟ್‌ನಿಂದ ರೂಪುಗೊಂಡಿ ರುತ್ತವೆ. ವ್ಯಕ್ತಿಗತ ಕಿಡ್ನಿ ಕಲ್ಲು ಚಿಕಿತ್ಸೆಯು ಅದು ಯಾವುದರಿಂದ ರೂಪುಗೊಂಡದ್ದು ಎಂಬುದನ್ನು ಆಧರಿಸಿದೆ.

ಕೆಲವೊಮ್ಮೆ  ಪಥ್ಯಾಹಾರವೇ ಇನ್ನಷ್ಟು ಕಿಡ್ನಿ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯುವುದಕ್ಕೆ ಸಾಕು. ಕೆಲವೊಮ್ಮೆ ಪಥ್ಯಾಹಾರದ ಜತೆಗೆ ಔಷಧಿಯೂ ಬೇಕಾಗುತ್ತದೆ. 

ಕಿಡ್ನಿ ಕಲ್ಲುಗಳು ರೂಪುಗೊಳ್ಳುವುದನ್ನು  ತಡೆಯುವ 
ಕೆಲವು ಕಿವಿಮಾತುಗಳು ಇಲ್ಲಿವೆ

ನಿಮ್ಮ ಬೆವರನ್ನು ತಪ್ಪು ಅಂದಾಜಿಸಬೇಡಿ: ಯೋಗ ಮತ್ತು ಕಠಿನ ವ್ಯಾಯಾಮ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅದು ಕಿಡ್ನಿಯ ಕಲ್ಲುಗಳು ರೂಪುಗೊಳ್ಳುವುದಕ್ಕೂ ಕಾರಣವಾಗಬಹುದು. ಹೇಗೆ? ಈ ವ್ಯಾಯಾಮಗಳ ಮೂಲಕ ಅಥವಾ ಕೇವಲ ಬೇಸಿಗೆಯ ಬಿರುಬಿಸಿಲಿನಿಂದಾಗಿ ಬೆವರಿನ ಮೂಲಕ ದೇಹದಿಂದ ದ್ರವಾಂಶ ನಷ್ಟವಾದಾಗ ಮೂತ್ರೋತ್ಪನ್ನ ಕಡಿಮೆಯಾಗುತ್ತದೆ. ನೀವು ಬೆವರುವುದು ಹೆಚ್ಚಾದಷ್ಟು ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ. ಇದರಿಂದ ಕಲ್ಲು ಉಂಟು ಮಾಡುವ ಖನಿಜಾಂಶಗಳು ಮೂತ್ರಪಿಂಡ ಹಾಗೂ ಮೂತ್ರಾಂಗ ವ್ಯೂಹದಲ್ಲಿ ಶೇಖರಗೊಂಡು ಬೆಸೆದುಕೊಳ್ಳುವುದಕ್ಕೆ ಅನುಕೂಲಕರ ಸ್ಥಿತಿ ಉಂಟಾಗುತ್ತದೆ. ಕಿಡ್ನಿ ಕಲ್ಲುಗಳು ಉಂಟಾಗುವುದನ್ನು ತಡೆಯಲು ನೀವು ಅನುಸರಿಸಬಹುದಾದ ಅತ್ಯುತ್ತಮ ಕ್ರಮಗಳಲ್ಲಿ ಒಂದು ಸಾಕಷ್ಟು ನೀರು ಕುಡಿಯುವ ಮೂಲಕ ಅನೇಕ ಬಾರಿ ಮೂತ್ರ ವಿಸರ್ಜನೆ ಆಗುವಂತೆ ಮಾಡುವುದು. ಯಾವಾಗಲೂ, ವಿಶೇಷತಃ ಸಾಕಷ್ಟು ಬೆವರು ಹರಿಸುವ ಕೆಲಸಕಾರ್ಯಗಳು ಅಥವಾ ವ್ಯಾಯಾಮಗಳಲ್ಲಿ ತೊಡಗುವ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ದ್ರವಾಂಶ ಇರುವಂತೆ ನೋಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರು ಕುಡಿಯಿರಿ, ರಾತ್ರಿ ಮೂತ್ರ ವಿಸರ್ಜನೆಗಾಗಿ ಎಚ್ಚರವಾದರೆ ಆಗ ಇನ್ನೊಂದು ಲೋಟ ನೀರು ಕುಡಿದು ಮಲಗಿ. 

ಓಕ್ಸಲೇಟ್‌ ಮಾತ್ರ ಅಲ್ಲ: ಹಣ್ಣು, ತರಕಾರಿಗಳು, ಬೀಜಗಳು, ಕಾಳುಗಳು, ಬೇಳೆಗಳು ಹಾಗೂ ಚಾಕಲೇಟು, ಚಹಾದಲ್ಲಿಯೂ ಇರುವ ನೈಸರ್ಗಿಕ ಖನಿಜಾಂಶ ಓಕ್ಸಲೇಟ್‌. ಓಕ್ಸಲೇಟ್‌ ಸಮೃದ್ಧ ಪ್ರಮಾಣದಲ್ಲಿ ಇರುವ ಕೆಲವು ಆಹಾರ ವಸ್ತುಗಳನ್ನು ಉದಾಹರಿಸುವುದಾದರೆ: ನೆಲಗಡಲೆ, ಪಾಲಾಕ್‌, ಗಡ್ಡೆ ತರಕಾರಿಗಳು, ಚಾಕಲೇಟುಗಳು, ಸಿಹಿಗೆಣಸು. ಕಿಡ್ನಿ ಕಲ್ಲುಗಳಲ್ಲಿ ಪ್ರಮುಖ ವಿಧವಾಗಿರುವ ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲುಗಳು ಉಂಟಾಗಬಹುದಾದವರು ಇಂತಹ ಆಹಾರವಸ್ತುಗಳ ಸೇವನೆಯನ್ನು ಮಿತಗೊಳಿಸುವುದು ಉಪಯುಕ್ತವಾಗಬಹುದು. ಓಕ್ಸಲೇಟ್‌ ಸಮೃದ್ಧ ಆಹಾರವಸ್ತುಗಳ ಸೇವನೆಯನ್ನು ಮಿತಗೊಳಿಸಿದರೆ ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲುಗಳು ಉಂಟಾಗುವ ಅಪಾಯವನ್ನು ದೂರ ಮಾಡಬಹುದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಸೈದ್ಧಾಂತಿಕವಾಗಿ ಇದು ಸತ್ಯವಾದರೂ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಇದು ಸ್ವೀಕರಾರ್ಹ ನಿಲುವಲ್ಲ. ಮೂತ್ರಪಿಂಡಗಳಲ್ಲಿ ಮೂತ್ರ ಉತ್ಪತ್ತಿಯಾಗುವ ಸಂದರ್ಭದಲ್ಲಿ ಓಕ್ಸಲೇಟ್‌, ಕ್ಯಾಲ್ಸಿಯಂ ಜತೆಗೆ ಸಂಯೋಗಗೊಂಡು ಬಹುತೇಕ ಕಿಡ್ನಿ ಕಲ್ಲುಗಳು ರೂಪುಗೊಳ್ಳುತ್ತವೆ. ಊಟ ಉಪಾಹಾರದ ಸಂದರ್ಭದಲ್ಲಿ ಕ್ಯಾಲ್ಸಿಯಂ ಮತ್ತು ಓಕ್ಸಲೇಟ್‌ ಸಮೃದ್ಧ ಆಹಾರ ವಸ್ತುಗಳನ್ನು ಜತೆಯಾಗಿ ಸೇವಿಸಿದರೆ, ಮೂತ್ರಪಿಂಡಗಳು ತಮ್ಮ ಕಾರ್ಯಾರಂಭಿಸುವ ಮುನ್ನವೇ ಹೊಟ್ಟೆ ಮತ್ತು ಕರುಳಿನಲ್ಲಿ ಕ್ಯಾಲ್ಸಿಯಂ ಮತ್ತು ಓಕ್ಸಲೇಟ್‌ ಸಂಯೋಗ ಹೊಂದುವುದರಿಂದಾಗಿ ಕಿಡ್ನಿ ಕಲ್ಲುಗಳು ರೂಪುಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. 

ಕ್ಯಾಲ್ಸಿಯಂ ಶತ್ರುವಲ್ಲ
ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲು ರೂಪುಗೊಳ್ಳುವುದಕ್ಕೆ ಕ್ಯಾಲ್ಸಿಯಂ ಪ್ರಧಾನ ಕಾರಣ ಎಂಬುದಾಗಿ ಅನೇಕರು ಭಾವಿಸುತ್ತಾರೆ. ಪ್ರಾಯಃ ಅದರ ಹೆಸರು ಈ ತಪ್ಪು ಕಲ್ಪನೆಗೆ ಕಾರಣವಿರಬಹುದು. ನಿಜವಾಗಿ ನೋಡಿದರೆ ಕ್ಯಾಲ್ಸಿಯಂ ಕಡಿಮೆ ಪ್ರಮಾಣದಲ್ಲಿರುವ ಆಹಾರಾಭ್ಯಾಸವು ಕಿಡ್ನಿ ಕಲ್ಲುಗಳು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಡಿ. ಇದಕ್ಕೆ ಬದಲಾಗಿ, ನಿಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ಕುಗ್ಗಿಸಿ, ಜತೆಗೆ ಕ್ಯಾಲ್ಸಿಯಂ ಸಮೃದ್ಧ ಆಹಾರಗಳು ಹಾಗೂ ಓಕ್ಸಲೇಟ್‌ ಸಮೃದ್ಧ ಆಹಾರಗಳನ್ನು ಜತೆಯಾಗಿ ಸೇವಿಸಿ. ಈ ವರ್ಗದಲ್ಲಿರುವ ಉತ್ತಮ ಆಹಾರ ಆಯ್ಕೆಗಳೆಂದರೆ ಹಸಿರು ಸೊಪ್ಪು ತರಕಾರಿಗಳು, ಬೀಜಗಳು, ಕಾಳುಗಳು, ಹಾಲು ಮತ್ತು ಬೆಣ್ಣೆ.

ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲು ಹೊಂದಿರುವವರು ತಮ್ಮ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿತಗೊಳಿಸಬೇಕು. ಹೆಚ್ಚು ಪ್ರಮಾಣದಲ್ಲಿ ಸೋಡಿಯಂ ಸೇವನೆಯು ಮೂತ್ರಕ್ಕೆ ಕ್ಯಾಲ್ಸಿಯಂ ಬಿಡುಗಡೆಗೊಳ್ಳುವುದನ್ನು ಹೆಚ್ಚಿಸುತ್ತದೆ ಮತ್ತು ಕಲ್ಲು ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ದಿನಕ್ಕೆ ಸೋಡಿಯಂ ಸೇವನೆಯ ಪ್ರಮಾಣವನ್ನು 2500 ಮಿಲಿಗ್ರಾಂಗಳಿಗೆ ಮಿತಗೊಳಿಸುವುದು ವಿಹಿತ. ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲು ಇರುವವರು ಚಿಕಿತ್ಸೆಯ ಅವಧಿಯಲ್ಲಿ ಸೋಡಿಯಂ ಸೇವನೆಯನ್ನು ಕಡ್ಡಾಯವಾಗಿ ಮಿತಗೊಳಿಸಬೇಕು.

ಯಾವುದೇ ಆಹಾರೋತ್ಪನ್ನವನ್ನು ಖರೀದಿಸುವುದಕ್ಕೆ ಮುನ್ನ ಅವುಗಳ ಲೇಬಲ್‌ಗ‌ಳನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಫ‌ುಡ್‌ ಲೇಬಲ್‌ ಒಂದು ಶಕ್ತಿಯುತ ಮಾಧ್ಯಮವಾಗಿದ್ದು, ಅದರಲ್ಲಿ ಅಡಕವಾಗಿರುವ ಅಂಶಗಳು ಮತ್ತು ಪ್ರಮಾಣವನ್ನು ತಿಳಿಸುತ್ತವೆ. ಕ್ಯಾಲ್ಸಿಯಂ ಓಕ್ಸಲೇಟ್‌ ಕಿಡ್ನಿ ಕಲ್ಲು ಹೊಂದಿರುವವರಿಗೆ ಫ‌ುಡ್‌ ಲೇಬಲ್‌ ಓದುವುದು ತುಂಬಾ ಸಹಾಯಕಾರಿ, ಆಹಾರ ವಸ್ತುವಿನಲ್ಲಿ ಇರುವ ಸೋಡಿಯಂ ಪ್ರಮಾಣ ಎಷ್ಟೆಂಬುದನ್ನು ತಿಳಿದುಕೊಂಡು ಖರೀದಿಸಲು ಇದು ನೆರವಾಗುತ್ತದೆ. ಫ‌ುಡ್‌ ಲೇಬಲ್‌ನಲ್ಲಿ “ಸಾಲ್ಟ್’ ಅಥವಾ “ಉಪ್ಪು’ ಎಂಬ ಪದ ಇರಲೇ ಬೇಕಾಗಿಲ್ಲ. “ಸೋಡಿಯಂ’ ಎಂಬ ಪೂರ್ವಪದ ಇರುವ ಅಂಶಗಳನ್ನು ಗಮನಿಸಿ: 
– ಸೋಡಿಯಂ ಕ್ಲೋರೈಡ್‌
– ಸೋಡಿಯಂ ಬೆಂಜೊಯೇಟ್‌
– ಸೋಡಿಯಂ ಹೈಡ್ರಾಕ್ಸೆ„ಡ್‌
– ಸೋಡಿಯಂ ಬೈಕಾಬೊìನೇಟ್‌ ಇತ್ಯಾದಿ 

(ಮುಂದುವರಿಯುವುದು)

– ದಕ್ಷಾ ಕುಮಾರಿ,   
ಡಯಟೀಶನ್‌, 
ನ್ಯೂಟ್ರಿಶನ್‌ ಮತ್ತು ಡಯಟಿಕ್ಸ್‌ ವಿಭಾಗ
ಕೆ.ಎಂ.ಸಿ., ಮಣಿಪಾಲ.

 

ಟಾಪ್ ನ್ಯೂಸ್

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.