ಆರೋಗ್ಯಕರ ಜೀವನಶೈಲಿ ಕ್ರಮಗಳು
Team Udayavani, Dec 27, 2020, 1:01 PM IST
ಸಾಮದರ್ಭಿಕ ಚಿತ್ರ
ಆರೋಗ್ಯ ಅನ್ನುವುದು ವ್ಯಕ್ತಿಗತ ಹೊಣೆಗಾರಿಕೆ. ಮನಸ್ಸು ಮತ್ತು ದೇಹ- ಎರಡರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರಾಭ್ಯಾಸ, ವ್ಯಾಯಾಮ ಮತ್ತು ಧನಾತ್ಮಕ ಚಿಂತನೆಗಳ ದಾರಿಯನ್ನು ಆರಿಸಿಕೊಳ್ಳುವುದು ಸದೃಢವಾಗಿ, ಆರೋಗ್ಯವಾಗಿ ಮತ್ತು ಸೌಖ್ಯವಾಗಿ ಬದುಕುವುದರ ಮೂಲ. ನಿಮ್ಮ ಜೀವನದಲ್ಲಿ ನೀವು ನಡೆಸಬಹುದಾದ ಅತಿದೊಡ್ಡ ಹೂಡಿಕೆ ಎಂದರೆ ಇದೇ.
- ಎಲೆಕ್ಟ್ರಾನಿಕ್-ಡಿಜಿಟಲ್ ತೆರೆ ವೀಕ್ಷಣೆ ಸಮಯವನ್ನು (ಟಿವಿ, ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ವಿಡಿಯೊಗೇಮ್) ಮಿತಗೊಳಿಸಿ. ಪುಸ್ತಕ ಓದುವುದು, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಪರಿಗಣಿಸಿ.
- ಹೊರಾಂಗಣ ವೀಕ್ಷಣೆಯನ್ನು ಆನಂದಿಸಿ. ಉದ್ಯಾನವನಕ್ಕೆ ತೆರಳಿ ಅಡ್ಡಾಡಿ, ಸೈಕಲ್ ಸವಾರಿ ಮಾಡಿ, ಈಜಾಡಿ, ವಾಕಿಂಗ್ ಮಾಡಿ ಅಥವಾ ನೆರೆಹೊರೆಯಲ್ಲಿ ಓಡಾಡಿ.
- ಹಿತ್ತಿಲಲ್ಲಿ ಕೆಲಸ ಮಾಡಿ.
- ಕಾರು ತೊಳೆಯಿರಿ.
- ನೆರೆಕರೆಯ ಮನೆಗಳಿಗೆ ತೆರಳಿ ಹರಟೆ ಹೊಡೆಯಿರಿ.
- ಟಿವಿ ಆರಿಸಿ, ಯಾವುದಾದರೂ ಸಂಗೀತ ಕೇಳುತ್ತಾ ನರ್ತಿಸಿ.
- ಉದ್ಯೋಗಕ್ಕೆ ಹೋಗುವಾಗ, ಶಾಲೆಗೆ ತೆರಳುವಾಗ ಅಥವಾ ಇತರ ಕೆಲಸಕಾರ್ಯಗಳಿಗೆ ನಡೆದುಹೋಗಿ ಅಥವಾ ಸೈಕಲ್ ಸವಾರಿ ಮಾಡಿ.
- ಮೆಟ್ಟಿಲು ಹತ್ತಿ, ಲಿಫ್ಟ್ ಬಳಕೆ ಕಡಿಮೆ ಮಾಡಿ.
- ಭೋಜನ ವಿರಾಮವನ್ನು ನಡಿಗೆಯ ಮೂಲಕ ಸದುಪಯೋಗಪಡಿಸಿ.
- ಕಚೇರಿಯಲ್ಲಿಯೂ ಕುಳಿತೇ ಇರಬೇಡಿ, ಆಗಾಗ ಎದ್ದು ನಡೆದಾಡಿ.
- ರಜೆಗಳನ್ನು ದೈಹಿಕವಾಗಿ ಸಕ್ರಿಯರಾಗಿದ್ದು ಕಳೆಯಿರಿ.
ಧನಾತ್ಮಕ ನಡವಳಿಕೆಯ ಮೂಲಕ ನಿಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವುದು :
ಧನಾತ್ಮಕವಾಗಿ ಬದುಕುವುದು ಮತ್ತು ಸತ್ಪ್ರೇರಣೆಯಿಂದ ಇರುವುದು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಯುತ ಆಹಾರಾಭ್ಯಾಸವನ್ನು ಆಯ್ದುಕೊಂಡು ಸಕ್ರಿಯರಾಗಿ ಇರಲು ಸಹಾಯ ಮಾಡುತ್ತದೆ. ಧನಾತ್ಮಕ ಜೀವನಕ್ಕೆ ಕೆಲವು ಸಲಹೆಗಳು:
- ನೀವು ಸಂತೋಷಪಡುವ ಏನನ್ನಾದರೂ ಮಾಡಿ. ಹಲವರಿಗೆ ನಡಿಗೆ ಇಷ್ಟ. ನೀವು ಹೊರಾಂಗಣದಲ್ಲಿ ನಡೆದಾಡಬಹುದು, ಮನೆಯಲ್ಲಿ ಟ್ರೆಡ್‌ಮಿಲ್ ನಡಿಗೆ ಮಾಡಬಹುದು; ಒಬ್ಬರೇ ಮಾಡಬಹುದು ಅಥವಾ ಗೆಳೆಯರನ್ನು ಅಥವಾ ಕುಟುಂಬ ಸದಸ್ಯರನ್ನು ಜತೆ ಸೇರಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.