ಅದು ಶ್ರವಣ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡುತ್ತದೆಯೇ?

ಕೆಲವರಿಗೆ "ಸಂಗೀತ'; ಕೆಲವರಿಗದು "ಸದ್ದುಗದ್ದಲ'

Team Udayavani, Sep 6, 2020, 7:01 PM IST

ಅದು ಶ್ರವಣ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡುತ್ತದೆಯೇ?

ಸಮಾಜದಲ್ಲಿ ಎಲ್ಲ ವರ್ಗದ ಜನರು ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಸಂಗೀತನ್ನು ಸಂತೋಷದಿಂದ ಆಸ್ವಾದಿಸುತ್ತಾರೆ. ಯಾವ ಬಗೆಯ ಸಂಗೀತ ಇಷ್ಟ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವರಿಗೆ ಮೃದುವಾದ, ಆಹ್ಲಾದಕರ ಸಂಗೀತ ಇಷ್ಟವಾದರೆ ಇನ್ನು ಕೆಲವರಿಗೆ ರಾಕ್‌ ಮ್ಯೂಸಿಕ್‌ ಆಪ್ತವೆನಿಸಬಹುದು. ನಾವು ಕೇಳುತ್ತಿರುವ ಸಂಗೀತವನ್ನು ಗರಿಷ್ಠ ಪ್ರಮಾಣದಲ್ಲಿ ಆಸ್ವಾದಿಸುವುದಕ್ಕೆ ತಕ್ಕುದಾಗಿ ಅದರ ವ್ಯಾಲ್ಯೂಮ್‌ ಹೆಚ್ಚು ಕಮ್ಮಿ ಮಾಡಿಕೊಳ್ಳುತ್ತೇವೆ. ಬಹುತೇಕ ಮಂದಿ ಪೂರ್ಣ ಪ್ರಮಾಣದ ಶೇ. 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ, ಪ್ರಾಯಃ ಶೇ. 80 ಅಥವಾ ಅದಕ್ಕಿಂತ ಹೆಚ್ಚು ಗಟ್ಟಿಯಾಗಿ ಕೇಳಲು ಆದ್ಯತೆ ನೀಡುತ್ತಾರೆ.

ಸಂಗೀತ ರಸಮಂಜರಿಗಳು, ಶೋಗಳು, ಸಾಮಾಜಿಕ ಸಭೆ ಸಮಾರಂಭಗಳ ಸಂದರ್ಭದಲ್ಲಿ ಮೋಜಿನ ಹೆಸರಿನಲ್ಲಿ ವ್ಯಾಲ್ಯೂಮನ್ನು ತುಂಬಾ ಗಟ್ಟಿಯಾಗಿ ಇರಿಸುವ ಪರಿಪಾಠ ಇದೆ. ಇದು ಸಾರ್ವಜನಿಕವಾಗಿ ಧ್ವನಿವರ್ಧಕಗಳು ಅಥವಾ ಮ್ಯೂಸಿಕ್‌ ಸಿಸ್ಟಂಗಳಿಗೆ ಮಾತ್ರ ಸೀಮಿತವಲ್ಲ; ಪರ್ಸನಲ್‌ ಮ್ಯೂಸಿಕ್‌ ಸಿಸ್ಟಂಗಳಲ್ಲಿಯೂ ಕೆಲವರು ಇದನ್ನು ಅನುಸರಿಸುತ್ತಾರೆ. ಹೆಡ್‌ಫೋನ್‌ ಅಥವಾ ಇಯರ್‌ ಫೋನ್‌ ಉಪಯೋಗಿಸಿ ಸಂಗೀತ ಕೇಳುವಾಗ ಸಾಮಾನ್ಯವಾಗಿ ವ್ಯಾಲ್ಯೂಮನ್ನು ಅತೀ ಹೆಚ್ಚು ಮಟ್ಟಕ್ಕೆ ಇರಿಸುತ್ತಾರೆ. ವ್ಯಾಲ್ಯೂಮ್‌ ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಪಕ್ಕದಲ್ಲಿ ಕುಳಿತವರಿಗೂ ಕೇಳುವಂತಿರುತ್ತದೆ. ಪರ್ಸನಲ್‌ ಮ್ಯೂಸಿಕ್‌ ಸಿಸ್ಟಮನ್ನು ಸತತವಾಗಿ ದೀರ್ಘ‌ಕಾಲ ಉಪಯೋಗಿಸುವುದರಿಂದ ಕೇಳುವುದಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.

ಗಟ್ಟಿಯಾಗಿ ಕೇಳಿದರೇನೇ ಸಂಗೀತ ಆಸ್ವಾದನೆ… : ಗಟ್ಟಿಯಾಗಿಟ್ಟು ಕೇಳಿದಾಗ ಮಾತ್ರ ಸಂಗೀತವನ್ನು ಸರಿಯಾಗಿ ಆಸ್ವಾದಿಸುವುದಕ್ಕೆ ಸಾಧ್ಯವಾಗುವುದು ಎಂಬ ತಪ್ಪು ಭಾವನೆಯೊಂದು ಜನರಲ್ಲಿದೆ. ಇದರಿಂದಾಗಿಯೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅಥವಾ ರಸಮಂಜರಿಗಳಲ್ಲಿ ವ್ಯಾಲ್ಯೂಮನ್ನು ಅತೀ ಹೆಚ್ಚು ಮಟ್ಟದಲ್ಲಿ ಇರಿಸಲಾಗುತ್ತದೆ. ಸಂಗೀತವನ್ನು ಆಸ್ವಾದಿಸುವುದರಲ್ಲಿ ಯಾವುದೇ ತಪ್ಪಿಲ್ಲ; ಆದರೆ ವ್ಯಾಲ್ಯೂಮ್‌ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿದಾಗ ಸಮಸ್ಯೆ ಉಂಟು ಮಾಡುತ್ತದೆ, ಇದು ಶ್ರವಣ ಸಂಬಂಧಿ ಹಾನಿಯ ಅಪಾಯಾಂಶವೂ ಆಗಿದೆ. ಸಂಗೀತದ ವ್ಯಾಲ್ಯೂಮ್‌ 85 ಡಿಬಿಎಗಿಂತ ಹೆಚ್ಚಿದ್ದು, 8 ತಾಸುಗಳಿಗಿಂತಲೂ ಹೆಚ್ಚು ಕಾಲ ಇದ್ದರೆ ಅದು ಖಂಡಿತವಾಗಿಯೂ ವ್ಯಕ್ತಿಯ ಕೇಳುವಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಸಂಗೀತವು 100 ಡಿಬಿಎಗಿಂತ ಹೆಚ್ಚಿದ್ದಾಗ ಗರಿಷ್ಠ ಅವಧಿಯು 2 ತಾಸುಗಳಿಗೆ ಇಳಿಯುತ್ತದೆ.

ಹಾಗಾದರೆ ಸಂಗೀತವನ್ನು ಆಲಿಸುವ ಸುರಕ್ಷಿತ ವಿಧಾನವೆಂದರೆ ಸಣ್ಣ ಧ್ವನಿಯಲ್ಲಿ ಹೆಡ್‌ಫೋನ್‌ ಗಳ ಮೂಲಕ ಎಂದು ನಾವು ಹೇಳಬಹುದು, ಇದರಿಂದ ಕಿವಿಗಳಿಗೆ ಹಾನಿಯಾಗುವುದಿಲ್ಲ. ಹಿಂದೆ ಪರ್ಸನಲ್‌ ಮ್ಯೂಸಿಕ್‌ ಸಿಸ್ಟಮ್‌ ಗಳಾದ ಐಪಾಡ್‌, ಎಂಪಿ3/ ಎಂಪಿ4 ಪ್ಲೇಯರ್‌ ಇತ್ಯಾದಿಗಳನ್ನು ಸಂಗೀತ ಕೇಳಲು ಉಪಯೋಗಿಸಲಾಗುತ್ತಿತ್ತು. ಈಗ ಸ್ಮಾರ್ಟ್‌ ಫೋನ್‌ನಲ್ಲಿಯೇ ಇದೆಲ್ಲವೂ ಸಾಧ್ಯವಿದೆ. ತಂತ್ರಜ್ಞಾನ ಮುಂದುವರಿದಿದ್ದು, ಈಗ ವೈರ್‌ ಲೆಸ್‌ ಹೆಡ್‌ಫೋನ್‌ಗಳೂ ಬಂದಿವೆ. ಜನರು ಸಂಗೀತ, ಸಿನೆಮಾ ಮತ್ತು ಇನ್ನಿತರ ಹಲವಾರು ಮನೋರಂಜನ ಕಾರ್ಯಕ್ರಮಗಳನ್ನು ಹೆಡ್‌ಫೋನ್‌/ ಇಯರ್‌ ಫೋನ್‌ ಹಾಕಿಕೊಂಡುಕೇಳಿ ಆನಂದಿಸುತ್ತಿದ್ದಾರೆ. ಈ ಇಯರ್‌ಫೋನ್‌ ಗಳಲ್ಲಿ ಬಹಳ ಸುಧಾರಿತ ತಂತ್ರಜ್ಞಾನವಿದ್ದು, ಸುತ್ತಲಿನ ಸದ್ದು ಕಡಿಮೆಯಾಗಿ ಸಂಗೀತ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಹೆಚ್ಚು ಒತ್ತು ಸಿಗುತ್ತದೆ. ಹೆಡ್‌ಫೋನ್‌/ ಇಯರ್‌ಫೋನ್‌ ಧರಿಸಿ ಸಂಗೀತ ಆಲಿಸುವವರು ಸಂಗೀತದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಅಥವಾ ಆಸ್ವಾದಿಸುವ ಉದ್ದೇಶದಿಂದ ಪೂರ್ಣ ವ್ಯಾಲ್ಯೂಮ್‌ ನೀಡಿ ಸಂಗೀತ ಕೇಳುವುದು ಹೆಚ್ಚು. ಸದ್ದು ಎಷ್ಟು ದೊಡ್ಡದಾಗಿರುತ್ತದೆ ಎಂದರೆ ಹತ್ತಿರ ಕುಳಿತವರೂ ಅದನ್ನು ಕೇಳುವಂತಿರುತ್ತದೆ. ಹೆಡ್‌ಫೋನ್‌/ ಇಯರ್‌ಫೋನ್‌ಗಳಲ್ಲಿಯೂ ಸದ್ದುಗಳು 100 ಡಿಬಿಎಗಿಂತ ಹೆಚ್ಚಿರಬಹುದು ಎಂಬ ಅರಿವಿಲ್ಲದೆ ಜನರು ತಾಸುಗಟ್ಟಲೆ ಸಮಯ ಸಂಗೀತ ಆಲಿಸುತ್ತಿರುತ್ತಾರೆ. ನಿಜಕ್ಕಾದರೆ ಇಷ್ಟು ದೊಡ್ಡ ವ್ಯಾಲ್ಯೂಮ್‌ನಲ್ಲಿ ಸದ್ದನ್ನು 10 ನಿಮಿಷಗಳಿಗಿಂತ ಹೆಚ್ಚು ಸಮಯ ಆಲಿಸಬಾರದು.

ಹಾಗಾದರೆ ಸಂಗೀತವನ್ನು ಆಸ್ವಾದಿಸುವುದು ಹೇಗೆ? : ಸಾಮಾಜಿಕ ಸಮಾರಂಭಗಳು, ಸಂಗೀತ  ಸಮಂಜರಿಗಳು ಅಥವಾ ಸಿನೆಮಾ ಥಿಯೇಟರ್‌ಗಳಲ್ಲಿ ಕಿವಿಗಡಚಿಕ್ಕುವ ಸದ್ದಿನಿಂದ ಕಿವಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಇಯರ್‌ ಪ್ಲಗ್‌ನಂತಹ ರಕ್ಷಣಾತ್ಮಕ ಸಲಕರಣೆಗಳನ್ನು ಧರಿಸಿಕೊಳ್ಳುವುದು ಹಿತಕರ. ಸಂಗೀತವನ್ನು ಆಲಿಸಿಬೇಕಾದ ಸ್ಥಳದಲ್ಲಿ ಕಿವಿಗೆ ರಕ್ಷಣಾತ್ಮಕ ಸಲಕರಣೆ ಧರಿಸಿ ಸದ್ದನ್ನು ಕಡಿಮೆ ಮಾಡಿಕೊಳ್ಳುವುದು ತಮಾಷೆಯಾಗಿ ಕಾಣಬಹುದು. ದೊಡ್ಡ ವ್ಯಾಲ್ಯೂಮ್‌ನಲ್ಲಿ ಸಂಗೀತ ಇರಿಸಿ ಕೇಳಿಸುವುದು ಸಂಗೀತ ಆಸ್ವಾದಿಸುವ ವಿಧಾನ ಎಂದು ನಿಮಗೆ ಅನ್ನಿಸುತ್ತದೆಯಾದರೂ ನಿಜ ವಿಚಾರ ಹಾಗಲ್ಲ. ಅನುಮತಿಸಲ್ಪಟ್ಟ ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಸದ್ದನ್ನು ದೀರ್ಘ‌ಕಾಲ ಕೇಳಿಸಿಕೊಳ್ಳುವುದರಿಂದ ಶ್ರವಣ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಸಮಸ್ಯೆಗಳು ತಾತ್ಕಾಲಿಕ ಶ್ರವಣ ಸಾಮರ್ಥ್ಯ ನಷ್ಟದಿಂ¨ ತೊಡಗಿ ಖಾಯಂ ಕಿವುಡುತನದವರೆಗೂ ಇರುತ್ತವೆ.

ಶ್ರವಣ ಸಾಮರ್ಥ್ಯಕ್ಕಾದ ತೊಂದರೆಯು ಖಾಯಂ ಸ್ವರೂಪದ್ದಾಗಿದ್ದರೆ ಅದು ಮತ್ತೆ ಸರಿಪಡಿಸಲಾಗದ ಕಿವುಡುತನವಾಗಿ ಬೆಳೆಯಬಹುದು. ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ ಬರದಂತೆ ತಡೆಯುವುದು ಮೇಲು ಎಂಬ ಮಾತಿನಂತೆ, ಹೆಡ್‌ಫೋನ್‌/ ಇಯರ್‌ಫೋನ್‌ ಉಪಯೋಗಿಸುವ ಸಂದರ್ಭಗಳಲ್ಲಿ ವ್ಯಾಲ್ಯೂಮ್‌ ಮಟ್ಟವನ್ನು   ಶೇ.50ಕ್ಕಿಂತ ಕಡಿಮೆಯಲ್ಲಿ ಇರಿಸಿಕೊಳ್ಳಬೇಕು. ವ್ಯಾಲ್ಯೂಮ್‌ ಮಟ್ಟ ಶೇ. 50ಕ್ಕಿಂತ ಕಡಿಮೆ ಇರುವಾಗಲೂ ಅದನ್ನು ಹಲವು ತಾಸುಗಳಷ್ಟು ದೀರ್ಘ‌ಕಾಲ ಕೇಳಿಸಿಕೊಳ್ಳಬಾರದು. ಇಯರ್‌ ಫೋನ್‌/ ಹೆಡ್‌ಫೋನ್‌ ಉಪಯೋಗಿಸಿ ಸಂಗೀತ ಆಲಿಸುತ್ತಿರುವಾಗ ಹತ್ತಿರದಲ್ಲಿರುವ ವ್ಯಕ್ತಿಗೆ ಸಂಗೀತ ಕೇಳಿಸುತ್ತಿದೆಯೇ ಎಂದು ಯಾವಾಗಲೂ ಪರೀಕ್ಷಿಸಬೇಕು. ಅವರಿಗೂ ಕೇಳಿಸುತ್ತಿದ್ದರೆ ಅದರ ವ್ಯಾಲ್ಯೂಮ್‌ ಗರಿಷ್ಠ ಪ್ರಮಾಣದಲ್ಲಿದೆ ಎಂದೇ ಅರ್ಥ.

ನನ್ನ ಶ್ರವಣ ಸಾಮರ್ಥ್ಯ : ದೀರ್ಘ‌ಕಾಲ ಇಯರ್‌ಫೋನ್‌/ ಹೆಡ್‌ ಫೋನ್‌ ಉಪಯೋಗಿಸಿ ಸಂಗೀತ ಕೇಳಿದ ಬಳಿಕ ಅಥವಾ ಸಂಗೀತ ರಸಮಂಜರಿಗೆ ಹೋಗಿ ಬಂದ ಬಳಿಕ ಕಿವಿಗಳಲ್ಲಿ ನೋವು, ಗುಂಯ್‌ಗಾಡುವ ಸದ್ದು ಅಥವಾ ಕೇಳಿಸುವಿಕೆ ಕಡಿಮೆಯಾಗಿರುವುದು ಅನುಭವಕ್ಕೆ ಬಂದರೆ ಅದು ಶ್ರವಣ ಶಕ್ತಿಗೆ ಆಗಿರುವ ಸಂಭಾವ್ಯ ಹಾನಿಯ ಲಕ್ಷಣ.  ಅಂಥ ಸಂದರ್ಭಗಳಲ್ಲಿ ಪ್ರಮಾಣೀಕೃತ ಆಡಿಯೋಲಜಿಸ್ಟ್‌ ರಲ್ಲಿ ಶ್ರವಣ ಸಾಮರ್ಥ್ಯದ ವಿಶ್ಲೇಷಣೆ ಅಥವಾ ಇಎನ್‌ಟಿ ತಜ್ಞರಿಂದ ಕಿವಿಗಳ ಚೆಕ್‌ ಅಪ್‌ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಪ್ರಮಾಣೀಕೃತ ಆಡಿಯೋಲಜಿಸ್ಟ್‌ ಬಳಿಕ ಶ್ರವಣ ಸಾಮರ್ಥ್ಯದ ವಿಶ್ಲೇಷಣೆ ಮಾಡಿಸಿಕೊಳ್ಳುವುದರಿಂದ ವೈಯಕ್ತಿಕ ಶ್ರವಣ ಸಾಮರ್ಥ್ಯದ ಸ್ಥಿತಿಗತಿ ವಿವರಗಳನ್ನು ಪಡೆಯಬಹುದು. ಭಾರೀ ಪ್ರಮಾಣದ ಸದ್ದಿನಿಂದ ಉಂಟಾಗಿರುವ ಹಾನಿಯು ತಾತ್ಕಾಲಿಕವಾಗಿದ್ದರೆ ಅದರಿಂದ ಉಂಟಾಗಿರುವ ಶ್ರವಣ ಸಾಮರ್ಥ್ಯ ನಷ್ಟವು ಸ್ವಲ್ಪ ಸಮಯದಲ್ಲಿ ಸರಿಹೋಗಬಹುದು. ಹಾನಿಯು ಗಂಭೀರ ಮಟ್ಟದಲ್ಲಿದ್ದರೆ ಶ್ರವಣ ಸಾಮರ್ಥ್ಯ ನಷ್ಟವು ಖಾಯಂ ಆಗಿ ಉಳಿಯಬಹುದು. ಭಾರೀ ಸದ್ದು ಅಥವಾ ಹೆಡ್‌ಫೋನ್‌/ ಇಯರ್‌ ಫೋನ್‌ ಧರಿಸಿಕೊಂಡು ದೀರ್ಘ‌ಕಾಲ ಸಂಗೀತ ಕೇಳಿಸಿಕೊಳ್ಳುತ್ತಿದ್ದು, ಕಿವಿಗಳಲ್ಲಿ ಗುಂಯ್‌ಗಾಡುವ ಸದ್ದು, ನೋವು ಅಥವಾ ಕೇಳಿಸುವುದು ಕಡಿಮೆಯಾಗಿದ್ದರೆ ನಿಯಮಿತವಾಗಿ ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ನೆನಪಿಟ್ಟುಕೊಳ್ಳಬೇಕಾದ ಅಂಶಗಳು :

  • ದೊಡ್ಡ ಪ್ರಮಾಣದ ಸದ್ದು ಕೇಳಿಸಿಕೊಳ್ಳುವ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡಬಹುದಾಗಿದ್ದು, ಶ್ರವಣ ಸಾಮರ್ಥ್ಯ ನಷ್ಟವನ್ನು ಉಂಟು ಮಾಡಬಹುದು. ಇದು ಖಾಯಂ ಕೂಡ ಆಗಿರಬಹುದು.
  • ಇಯರ್‌ಫೋನ್‌/ಹೆಡ್‌ಫೋನ್‌ ಉಪಯೋಗಿಸಿ ಸಂಗೀತ ಕೇಳುವಾಗ ಹತ್ತಿರದಲ್ಲಿರುವ ವ್ಯಕ್ತಿಗೂ ಅದು ಕೇಳಿಸುತ್ತಿದೆ ಎಂದಾದರೆ ಅದರರ್ಥ ವ್ಯಾಲ್ಯೂಮ್‌ ಗರಿಷ್ಠ ಪ್ರಮಾಣದಲ್ಲಿದೆ ಎಂದು.
  • ಹೆಡ್‌ಫೋನ್‌ ಇರಿಸಿ ಸಂಗೀತ ಕೇಳುವ ಸಂದರ್ಭದಲ್ಲಿ ಗರಿಷ್ಠ ವ್ಯಾಲ್ಯೂಮ್‌ನ ಅರ್ಧಕ್ಕೆ ಇರಿಸಿಕೊಳ್ಳಬೇಕು.
  • ಹೆಡ್‌ಫೋನ್‌/ ಇಯರ್‌ಫೋನ್‌ಗಳಲ್ಲಿ ಗರಿಷ್ಠ ವ್ಯಾಲ್ಯೂಮ್‌ ಇರಿಸಿ ಸಂಗೀತ ಕೇಳುವುದು ಶ್ರವಣ ಸಾಮರ್ಥ್ಯಕ್ಕೆ ಹಾನಿ ಉಂಟು ಮಾಡುವಷ್ಟು ಶಕ್ತವಾಗಿರುತ್ತದೆ.
  • ದೀರ್ಘ‌ ಕಾಲದ ವರೆಗೆ ಭಾರೀ ಪ್ರಮಾಣದ ಸದ್ದುಗದ್ದಲಕ್ಕೆ ಒಡ್ಡಿಕೊಳ್ಳುವ ಸಂದರ್ಭದಲ್ಲಿ ಕಿವಿಗಳನ್ನು ರಕ್ಷಿಸುವ ಇಯರ್‌ಪ್ಲಗ್‌ ಇತ್ಯಾದಿ ಸಲಕರಣೆ ಧರಿಸುವುದು ಒಳ್ಳೆಯದು.

 

 

ಭಾರ್ಗವಿ ಪಿ.ಜಿ.

ಅಸಿಸ್ಟೆಂಟ್‌ ಲೆಕ್ಚರರ್‌ – ಹಿರಿಯ ಶ್ರೇಣಿ

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.