Arogyavani: ತಾಯಿಯರು ಮತ್ತು ಮಕ್ಕಳಲ್ಲಿ  ಹೆಪಟೈಟಿಸ್‌ ಬಿ ನಿರ್ಮೂಲನೆಯ ವೇಗವರ್ಧನೆ

ಪರಿಣತರ ಅಭಿಪ್ರಾಯ

Team Udayavani, Sep 10, 2023, 11:05 AM IST

6-health

ಹೆಪಟೈಟಿಸ್‌ ಬಿ ಬಹಳ ಗಂಭೀರವಾದ ವೈರಲ್‌ ಸೋಂಕಾಗಿದ್ದು ಪಿತ್ತಜನಕಾಂಗ (ಯಕೃತ್‌)ದ ಮೇಲೆ ಪರಿಣಾಮ ಬೀರುತ್ತದೆ. ಇದು ದೀರ್ಘ‌ಕಾಲದ ಪಿತ್ತಜನಕಾಂಗ ರೋಗ, ಸಿರಾಸಿಸ್‌, ಪಿತ್ತಜನಕಾಂಗದ ಕ್ಯಾನ್ಸರ್‌ ಮತ್ತು ಇತರೆ ಸಂಕೀರ್ಣ ತೊಂದರೆಗಳಿಗೆ ದಾರಿ ಮಾಡಿ ಕೊಡಬಹುದು. ಅದರಲ್ಲಿಯೂ ಇದು ವಿಶೇಷ ವಾಗಿ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಕಾಳಜಿಯ ವಿಷಯವಾಗಿದೆ. ಹೆರಿಗೆ ಅಥವಾ ಹತ್ತಿರದ ಸಂಪರ್ಕದಿಂದ ಸೋಂಕು ಹರಡುವುದು ಆತಂಕದ ವಿಷಯವಾಗಿರುತ್ತೆ. ಇತ್ತೀಚಿನ ವರ್ಷ ಗಳಲ್ಲಿ ಹೆಪಟೈಟಿಸ್‌ ಬಿ ಸೋಂಕಿಗೆ ಚಿಕಿತ್ಸೆ ಮತ್ತು ಅದನ್ನು ತಡೆಯುವ ವಿಷಯದಲ್ಲಿ ಬೃಹತ್‌ ದಾಪುಗಾಲುಗಳನ್ನು ಇಡಲಾಗಿದೆ. ತಾಯಂದಿರು ಮತ್ತು ಮಕ್ಕಳಲ್ಲಿ ಹೆಪಟೈಟಿಸ್‌ ಬಿ ನಿರ್ಮೂಲನೆಯ ವೇಗ ಹೆಚ್ಚಳ ಕುರಿತಂತೆ ಪರಿಣ ತರ ಅಭಿಪ್ರಾಯಗಳನ್ನು ಈ ಲೇಖನ ಪ್ರಸ್ತುತ ಪಡಿಸುತ್ತದೆ. ಜೊತೆಗೆ ರೋಗವನ್ನು ತಡೆಯುವ ಕ್ರಮಗಳು, ಶೀಘ್ರ ಪತ್ತೆ ಅಥವಾ ಆರಂಭದ ರೋಗನಿರ್ಣಯ ಮತ್ತು ಚಿಕಿತ್ಸೆಯ ಸಂಪರ್ಕ ಮುಂತಾದ ವಿಷಯಗಳಲ್ಲಿ ಗಮನ ಕೇಂದ್ರೀಕರಿಸುತ್ತದೆ.

ರೋಗವನ್ನು ತಡೆಗಟ್ಟುವ ಕ್ರಮಗಳು

ಹೆಪಟೈಟಿಸ್‌ ಬಿ ಹರಡುವುದನ್ನು ತಡೆಯಲು ಲಸಿಕೆ ನೀಡಿಕೆ ಮೂಲ ಅಂಶವಾಗಿರುತ್ತದೆ. ಹೆಪಟೈಟಿಸ್‌ ಬಿ ಲಸಿಕೆ ಅಪಾಯ ಮುಕ್ತವಾಗಿದ್ದು , ನಂಬಿಕಾರ್ಹವಾಗಿರುವುದಲ್ಲದೆ, ಎಲ್ಲೆಡೆ ಲಭ್ಯ ವಿರುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ತಡೆಯುವಲ್ಲಿ ರಾಷ್ಟ್ರೀಯ ಲಸಿಕೆ ನೀಡಿಕೆ ವೇಳಾ ಪಟ್ಟಿಗೆ ತಕ್ಕಂತೆ ಮಕ್ಕಳು ಮತ್ತು ನವಜಾತ ಶಿಶು ಗಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿ ರುತ್ತದೆ. ಹೆಚ್ಚುವರಿಯಾಗಿ ಹೆಪಟೈಟಿಸ್‌ ಬಿ ಹೊಂದಿರುವ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದು ಅಗತ್ಯವಾಗಿರುತ್ತದೆ. ತಾಯಂದಿರಲ್ಲಿ ಆಂಟಿವೈರಲ್‌ ಥೆರಪಿ ಮತ್ತು ನವಜಾತ ಶಿಶುವಿನಲ್ಲಿ ಇಮ್ಯುನೊಗ್ಲಾಬ್ಯೂಲಿನ್‌ ನೀಡುವಂತಹ ಕ್ರಮಗಳು ಸೇರಿರುತ್ತವೆ. ಇವು ಹೆರಿಗೆಯ ಸಂದರ್ಭದಲ್ಲಿ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಶೀಘ್ರ ರೋಗನಿರ್ಣಯ

ಮಕ್ಕಳು ಮತ್ತು ತಾಯಂದಿರಲ್ಲಿ ಹೆಪಟೈಟಿಸ್‌ ಸವಾಲುಗಳನ್ನು ಎದುರಿಸಿ ಗೆಲ್ಲುವುದು, ಆಶಾಕಿರಣದ ಪುನರ್‌ಸ್ಥಾಪನೆ ಮತ್ತು ಸ್ವಾವಲಂಬನೆಯ ಸ್ಥಾಪನೆ ಬೆನ್ನುಹುರಿ ಗಾಯ (ಸ್ಪೈನಲ್‌ ಕಾರ್ಡ್‌ ಇಂಜುರಿ-ಎಸ್‌ಸಿಐ), ಲಕ್ವಾ, ಅಪಘಾತದಲ್ಲಿ ಮಿದುಳು ಹಾನಿ (ಟ್ರಾಮಾಟಿಕ್‌ ಬ್ರೈನ್‌ ಇಂಜುರಿ -ಟಿಬಿಐ) ಮತ್ತಿತರ ನರಶಾಸ್ತ್ರೀಯ ಸಮಸ್ಯೆಗಳು ವ್ಯಕ್ತಿಯೊಬ್ಬನ ಜೀವನವನ್ನು ನಾಟಕೀಯವಾಗಿ ಪರಿವರ್ತಿಸಿ ದೈಹಿಕ, ಗ್ರಹಣಾತ್ಮಕ ಮತ್ತು ಭಾವನಾತ್ಮಕವಾಗಿ ಅಪಾರ ಸವಾಲುಗಳನ್ನು ಒಡ್ಡಬಲ್ಲವು. ಆದರೆ ನರಶಾಸ್ತ್ರೀಯ ಪುನರ್ವಸತಿಯಲ್ಲಿ ಪ್ರಸ್ತುತ ಭಾರೀ ಪ್ರಗತಿ ಆಗಿದ್ದು, ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದವರು ತಮ್ಮ ಸ್ವಾವಲಂಬನೆಯನ್ನು ಮತ್ತೆ ಗಳಿಸಿಕೊಳ್ಳಲು, ಜೀವನ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಮತ್ತು ಸಮಾಜದಲ್ಲಿ ಮತ್ತೆ ಬೆರೆಯಲು ಸಹಾಯ ಮಾಡುತ್ತದೆ. ಪ್ರಸ್ತುತ ಈ ಲೇಖನದಲ್ಲಿ ನರಶಾಸ್ತ್ರೀಯ ಸಮಸ್ಯೆಯಿಂದ ಗುಣ ಹೊಂದುವುದು ಮತ್ತು ಸ್ವಾವಲಂಬನೆಯನ್ನು ಮರಳಿ ಗಳಿಸಿಕೊಳ್ಳುವ ನರಶಾಸ್ತ್ರೀಯ ಪುನರ್ವಸತಿಯ ಪರಿವರ್ತನಾತ್ಮಕ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಬಿ ನಿರ್ವಹಣೆಯಲ್ಲಿ ಶೀಘ್ರ ಅಥವಾ ಆರಂಭಿಕ ಹಂತ ದಲ್ಲಿಯೇ ರೋಗನಿರ್ಣಯ ಪ್ರಮುಖ ಪಾತ್ರ ವಹಿಸುತ್ತದೆ. ಶಿಶು ಜನ್ಮಕ್ಕೆ ಮುಂಚಿನ ಆರೈಕೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆಪಟೈಟಿಸ್‌ ಬಿ ಸಫೇìಸ್‌ ಆಂಟಿಜೆನ್‌ ಗಾಗಿ ಸಾಮಾನ್ಯ ಪರೀಕ್ಷೆ ನಡೆಸುವುದನ್ನು ಶಿಫಾರಸ್ಸು ಮಾಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸೋಂಕಿತ ತಾಯಂದಿರನ್ನು ಗುರುತಿಸುವುದರಿಂದ ಸೂಕ್ತ ರೀತಿಯ ರೋಗ ತಡೆಯುವ ಕ್ರಮಗಳನ್ನು ಜಾರಿಗೆ ತರಲು ಅವ ಕಾಶ ಲಭಿಸುತ್ತದೆ. ಇವುಗಳಲ್ಲಿ ಗರ್ಭಾವಸ್ಥೆಯ ಸಂದರ್ಭ ದಲ್ಲಿ ಆಂಟಿವೈರಲ್‌ ಥೆರಪಿ ನೀಡುವುದು ಸೇರಿರುತ್ತದೆ ಯಲ್ಲದೆ, ನವಜಾತ ಶಿಶುವಿಗೆ ಜನನವಾದ 12 ಗಂಟೆಗಳ ಒಳಗೆ ಲಸಿಕೆಯ ಮೊದಲ ಡೋಸ್‌ ನೀಡಬೇಕು.

ಚಿಕಿತ್ಸೆಯ ಲಭ್ಯತೆ

ಮಕ್ಕಳು ಮತ್ತು ತಾಯಂದಿರಲ್ಲಿ ಹೆಪಟೈಟಿಸ್‌ ಬಿ ನಿರ್ಮೂಲನ ಕೈಗೊಳ್ಳುವಲ್ಲಿ ಕೈಗೆಟಕುವ ಮತ್ತು ಉನ್ನತ ಗುಣಮಟ್ಟದ ಚಿಕಿತ್ಸೆಯ ಲಭ್ಯತೆ ಅತ್ಯಂತ ಮುಖ್ಯವಾಗಿರುತ್ತದೆ. ಓರಲ್‌ ನ್ಯೂಕ್ಲಿಯೋಸ್‌ಟೈಡ್‌ ಅನಲಾಗ್‌ನಂತಹ ಆಂಟಿವೈರಲ್‌ ಚಿಕಿತ್ಸೆ ವೈರಸ್‌ ಗಳ ಪುನರುತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬಲ್ಲದು. ಇದರೊಂದಿಗೆ ನವಜಾತ ಶಿಶುವಿಗೆ ತಾಯಿಯಿಂದ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಬಹುದು. ಹೆಪಟೈಟಿಸ್‌ ಬಿ ಯ ಹೊರೆ ಹೆಚ್ಚಾಗಿರುವ ಹಾಗೂ ಸಂಪನ್ಮೂಲ ನಿಯಮಿತವಾಗಿರುವಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಇಂತಹ ಚಿಕಿತ್ಸೆಗಳು ಲಭ್ಯವಾಗುವ ಖಾತ್ರಿ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.

ಸಾರ್ವಜನಿಕ ಆರೋಗ್ಯ ಕಾರ್ಯತಂತ್ರಗಳು

ಹೆಪಟೈಟಿಸ್‌ ಬಿ ನಿರ್ಮೂಲನೆಗಾಗಿ ಸಮಗ್ರ ಸಾರ್ವಜನಿಕ ಆರೋಗ್ಯ ಕಾರ್ಯತಂತ್ರಗಳ ಅಗತ್ಯಕ್ಕೆ ಪರಿಣತರು ಒತ್ತು ನೀಡುತ್ತಾರೆ. ಸೋಂಕು ಕುರಿತು ಜಾಗೃತಿ ಹೆಚ್ಚಿಸುವುದು, ಪರೀಕ್ಷೆ ಮತ್ತು ಲಸಿಕೆ ಅಭಿಯಾನಗಳನ್ನು ಪ್ರೋತ್ಸಾಹಿಸುವುದು ಮುಂತಾದ ಕ್ರಮಗಳು ಇವುಗಳಲ್ಲಿ ಸೇರಿವೆ. ಜೊತೆಗೆ ಪ್ರಸ್ತುತ ಇರುವ ತಾಯಂದಿರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಹೆಪಟೈಟಿಸ್‌ ಬಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ಸೇರ್ಪಡೆಗೊಳಿಸುವುದು ಕೂಡ ಇದರಲ್ಲಿ ಸೇರಿರುತ್ತದೆ. ಆರೋಗ್ಯ ಸೇವಾ ಪೂರೈಕೆದಾರರು, ನೀತಿ ರೂಪಿಸುವವರು, ಸಮುದಾಯ ಸಂಘಟನೆಗಳ ನಡುವಿನ ಸಹಭಾಗಿತ್ವ ಹೆಪಟೈಟಿಸ್‌ ಬಿ ನ ನಿರ್ವಹಣೆ ಮತ್ತು ಆರೋಗ್ಯವನ್ನು ತಡೆಯುವಲ್ಲಿ ವಿಸ್ತಾರವಾದ ಯಶಸ್ಸು ಸಾಧಿಸಲು ಅತ್ಯಂತ ಮುಖ್ಯವಾಗಿರುತ್ತದೆ.

ಮಕ್ಕಳು ಮತ್ತು ತಾಯಂದಿರಲ್ಲಿ ಹೆಪಟೈಟಿಸ್‌ ಬಿ ನಿರ್ಮೂಲನದ ವೇಗವರ್ಧನೆ ಎಂಬುದು ಜಾಗತಿಕ ಆರೋಗ್ಯ ಆದ್ಯತೆಯ ವಿಷಯವಾಗಿದೆ. ಸಾರ್ವಜನಿಕ ಲಸಿಕೆ ನೀಡಿಕೆ, ಸಾಮಾನ್ಯ ಪರೀಕ್ಷೆಗಳು ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆಯಂತಹ ರೋಗವನ್ನು ತಡೆಯುವ ಕ್ರಮಗಳನ್ನು ಜಾರಿಗೆ ತರುವುದರೊಂದಿಗೆ ಹೆಪಟೈಟಿಸ್‌ ಬಿ ಹರಡುವುದನ್ನು ಮತ್ತು ಅದರ ಪರಿಣಾಮವನ್ನು ಗಮನಾರ್ಹವಾಗಿ ನಾವು ಕಡಿಮೆ ಮಾಡಬಹುದು. ಜಾಗೃತಿ ಹೆಚ್ಚಿಸುವುದು, ಆರೋಗ್ಯ ಸೇವಾ ಮೂಲಸೌಕರ್ಯ ಸುಧಾರಿಸುವುದು ಮತ್ತು ಪೀಡಿತ ಜನರಿಗೆ ಸಂಪನ್ಮೂಲಗಳನ್ನು ತಲುಪಿಸುವ ಆದ್ಯತೆ ನೀಡಲು ಪ್ರಯತ್ನಗಳನ್ನು ಮುಂದುವರಿಸುವುದು ಹೆಪಯೈಟಿಸ್‌ ಬಿ ನಿರ್ಮೂಲನೆಯ ಗುರಿ ತಲುಪಲು ಆವಶ್ಯಕವಾಗಿರುತ್ತದೆ.

ನಾವೆಲ್ಲರೂ ಒಂದಾಗಿ ವಿಶ್ವವ್ಯಾಪಿ ಮಕ್ಕಳು ಮತ್ತು ತಾಯಂದಿರ ಆರೋಗ್ಯ ಮತ್ತು ಕ್ಷೇಮವನ್ನು ಸಂರಕ್ಷಿಸುವಲ್ಲಿ ಪರಿಣಾಮ ಉಂಟು ಮಾಡಬಹುದಾಗಿದೆ.

-ಡಾ| ಅನುರಾಗ್‌ ಶೆಟ್ಟಿ,

ವೈದ್ಯಕೀಯ ಪಚನಾಂಗ ರೋಗಶಾಸ್ತ್ರ ವಿಭಾಗ,

ಕೆಎಂಸಿ ಆಸ್ಪತ್ರೆ , ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ವೈದ್ಯಕೀಯ ಪಚನಾಂಗ ರೋಗಶಾಸ್ತ್ರ ವಿಭಾಗ, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.