ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನ ಬ್ರಶ್‌ ಮೊರೆ ಹೋಗಿ

Team Udayavani, Dec 26, 2021, 11:00 AM IST

ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನ ಬ್ರಶ್‌ ಮೊರೆ ಹೋಗಿ

ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳು ಜೈವಿಕವಾಗಿ ವಿಘಟನೆ ಹೊಂದುತ್ತವೆ, ಇದರಿಂದಾಗಿ ಜನಸಮೂಹದಲ್ಲಿ ಸ್ವೀಕೃತಗೊಂಡಿವೆ. ಇವುಗಳ ಉಪಯೋಗಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಕಾರಿಯಾಗಿದೆ. ಹಲ್ಲುಜ್ಜುವ ಬ್ರಶ್‌ಗಳು ಮತ್ತು ಟೂತ್‌ಪೇಸ್ಟ್‌ ಗಳನ್ನು ಆವಿಷ್ಕರಿಸುವುದಕ್ಕೆ ಮುನ್ನ ಜನರು ಒರಟು ಬಟ್ಟೆಗಳು, ಉಪ್ಪು, ಗಿಡಗಂಟಿಗಳ ಕಡ್ಡಿಗಳು ಅಥವಾ ಇದ್ದಿಲನ್ನು ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಹಲ್ಲುಜ್ಜುವ ವ್ಯವಸ್ಥೆಗಳು, ಸಾಧನಗಳು ಮತ್ತು ಪೇಸ್ಟ್‌ಗಳು ಆವಿಷ್ಕಾರಗೊಂಡಿದ್ದು, ದಂತಗಳ ನೈರ್ಮಲ್ಯಕ್ಕೆ ಅನೇಕ ಬಗೆಯ ಪರ್ಯಾಯಗಳು ಲಭ್ಯವಿವೆ. ಜೈವಿಕವಾಗಿ ವಿಘಟನೆಗೊಳ್ಳುವ ಗುಣದಿಂದಾಗಿ ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳು ಜಾಗತಿಕವಾಗಿ ತುಂಬಾ ಜನಪ್ರಿಯವಾಗಿವೆ. ಹಲ್ಲುಜ್ಜುವ ಬಿದಿರಿನ ಬ್ರಶ್‌ ಬಿದಿರಿನ ಹಿಡಿಕೆ ಮತ್ತು ನೈಲಾನ್‌ ಫೈಬರ್‌ ಅಥವಾ ಕೆಲವು ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಷ್ಟೇ ಬಾಳಿಕೆ ಬರಬಲ್ಲ ಇತರ ನೈಸರ್ಗಿಕ ನಾರುಗಳನ್ನು ಒಳಗೊಂಡಿರುತ್ತವೆ.

ಹಲ್ಲುಜ್ಜುವ ಬಿದಿರಿನ ಬ್ರಶ್‌ಗಳ ಅತ್ಯಂತ ಪ್ರಮುಖವಾದ ಒಂದು ಉಪಯೋಗ ಎಂದರೆ ಅವು ಪ್ಲಾಸ್ಟಿಕ್‌ನ ಬ್ರಶ್‌ಗಳಷ್ಟೇ ಮಟ್ಟದಲ್ಲಿ ಹಲ್ಲುಗಳನ್ನು ಶುಚಿಗೊಳಿಸುತ್ತವೆ; ಆದರೆ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತವೆ. ಬಳಸಿ ಹಳೆಯದಾದ ಪ್ಲಾಸ್ಟಿಕ್‌ ಬ್ರಶ್‌ಗಳು ಮತ್ತು ಅವುಗಳ ಪ್ಯಾಕೆಟ್‌ಗಳನ್ನು ಪುನರ್ಬಳಸುವುದು, ರಿಸೈಕ್ಲಿಂಗ್‌ ಅಥವಾ ಕಾಂಪೋಸ್ಟ್‌ ಮಾಡುವುದು ನಿಜಕ್ಕೂ ಒಂದು ಬೃಹತ್‌ ಸಮಸ್ಯೆ.

ಉತ್ತಮ ನಿರ್ವಹಣೆ ಮತ್ತು ಶುಚಿತ್ವಕ್ಕಾಗಿ ನಿಮ್ಮ ಹಲ್ಲುಜ್ಜುವ ಬ್ರಶ್ಶನ್ನು ಪ್ರತೀ ಎರಡು ಅಥವಾ ಮೂರು ತಿಂಗಳುಗಳಿಗೆ ಒಮ್ಮೆ ಬದಲಾಯಿಸಿಕೊಳ್ಳಬೇಕು. ಪರಿಸರಸಹ್ಯವಾದ ವಸ್ತುವಿನಿಂದ ಮಾಡಿರುವ ಹೊಸ ಹಲ್ಲುಜ್ಜುವ ಬ್ರಶ್‌ ಹಿಡಿದು ಹಲ್ಲುಜ್ಜುವುದು ನಿಮಗೆ ಒಂದು ಆಹ್ಲಾದಕರ ಅನುಭವವೇ ಆಗಬಹುದು.

ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳ  ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

  • ಬಿದಿರಿನಲ್ಲಿ ಫ‌ಂಗಸ್‌ನಿರೋಧಕ ಗುಣವೂ ಇದೆ. ಬಿದಿರು ಮತ್ತು ಮರದಿಂದ ಕಟ್ಟಿಂಗ್‌ ಬೋರ್ಡ್‌ ಮತ್ತು ಪಾತ್ರೆಗಳನ್ನು ನಿರ್ಮಿಸುವುದಕ್ಕೆ ಒಂದು ಉದ್ದೇಶವಿರುತ್ತದೆ. ಬಿದಿರಿನ ಅಂತರ್ಗತ ಗುಣಗಳು ಅದರ ಮೇಲ್ಮೈಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವಂತಿವೆ. ಇದರಿಂದಾಗಿ ಸೂಕ್ಷ್ಮಜೀವಿಗಳಿಂದ ದೀರ್ಘಾವಧಿಯಲ್ಲಿ ರಕ್ಷಣೆ ಸಿಗುತ್ತದೆ.
  • ಬಿದಿರು ಒಂದು ಹುಲ್ಲಿನ ಜಾತಿಯ ಸಸ್ಯವಾದ್ದರಿಂದ ಇದನ್ನು ಎಲ್ಲಿ ಬೇಕಾದರಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡದೆಯೇ ಬೆಳೆಸಬಹುದಾಗಿದೆ. ಇದರ ಕಾಂಡಗಳು ಕ್ಷಿಪ್ರವಾಗಿ ಬೆಳೆಯುತ್ತವೆ ಮತ್ತು ಅವುಗಳಿಗೆ ಯಾವುದೇ ರಸಗೊಬ್ಬರ ಅಥವಾ ಕೀಟನಾಶಕ ಬೇಕಾಗಿಲ್ಲ.
  • ಬಿದಿರು ಸಂಪೂರ್ಣವಾಗಿ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತದದಾದ್ದರಿಂದ ಅದು ಬಳಕೆಗೆ ಸಂಪೂರ್ಣ ಸುರಕ್ಷಿತ. ಬಿದಿರನ ಕಾಂಡಗಳನ್ನು ಕತ್ತರಿಸುವಲ್ಲಿ ಅಥವಾ ಸಂಸ್ಕರಿಸುವಲ್ಲಿ ಯಾವುದೇ ವಿಷಕಾರಿ ಸಂಯುಕ್ತಗಳನ್ನು ಬಳಸುವುದಿಲ್ಲ. ಏಶ್ಯಾ ಮತ್ತು ಆಫ್ರಿಕಾದ ಹಲವು ಪ್ರದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಬಿದಿರಿನ ಮೊಳಕೆ ಅಥವಾ “ಕಣಿಲೆ’ ಖಾದ್ಯವಾಗಿ ಬಳಕೆಯಾಗುತ್ತದೆ.
  • ಬಿದಿರಿನಿಂದ ಮಾಡಿರುವ ಹಲ್ಲುಜ್ಜುವ ಬ್ರಶ್‌ಗಳು ಪ್ಲಾಸ್ಟಿಕ್‌ ಬ್ರಶ್‌ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆಯನ್ನು ಹೊಂದಿರಬಹುದು. ಆದರೆ ಅವುಗಳ ಬಳಕೆಯಿಂದ ಅಂತಿಮವಾಗಿ ನಮಗೆ ಮತ್ತು ಈ ಸುಂದರ ಜಗತ್ತಿಗೆ ಉಂಟಾಗುವ ಪ್ರಯೋಜನಗಳು ಬೆಲೆಕಟ್ಟಲಾಗದವುಗಳಾಗಿವೆ.

ಡಾ| ಆನಂದದೀಪ್‌ ಶುಕ್ಲಾ

ಅಸೋಸಿಯೇಟ್‌ ಪ್ರೊಫೆಸರ್‌, ಎಂಸಿಡಿಒಎಸ್‌, ಮಾಹೆ,

 ಮಣಿಪಾಲ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.